Tag: ನೋಟಾ

  • `ನಮೋ’ಗೆ ಜೈ ಎಂದ ಗುಜರಾತ್ ಜನ – ನೋಟಾ ಮತ ಶೇ.9ರಷ್ಟು ಇಳಿಕೆ

    `ನಮೋ’ಗೆ ಜೈ ಎಂದ ಗುಜರಾತ್ ಜನ – ನೋಟಾ ಮತ ಶೇ.9ರಷ್ಟು ಇಳಿಕೆ

    ಗಾಂಧಿನಗರ: ಗುಜರಾತಿನಲ್ಲಿ 2017ರ ವಿಧಾನಸಭಾ ಚುನಾವಣೆಗೆ (Gujarat Elections) ಹೋಲಿಸಿದ್ರೆ ಈ ಬಾರಿ ನೋಟಾ (NOTA) ಮತದಾನ (Votes) ಶೇ.9 ರಷ್ಟು ಇಳಿಕೆಯಾಗಿದೆ.

    ಚುನಾವಣಾ ಆಯೋಗದ (Election Commission) ಅಂಕಿ-ಅಂಶಗಳ ಪ್ರಕಾರ, 2022ರ ವಿಧಾನಸಭಾ ಚುನಾವಣೆಯಲ್ಲಿ 5,01,202 (ಶೇ.1.5) ನೋಟಾ ಮತಗಳು ದಾಖಲಾಗಿದ್ದು, 2017ರ ವಿಧಾನಸಭಾ ಚುನಾವಣೆಯಲ್ಲಿ ಚಲಾವಣೆಯಾದ ಮತಕ್ಕಿಂತಲೂ ಕಡಿಮೆಯಾಗಿದೆ. 2017ರ ಚುನಾವಣೆಯಲ್ಲಿ 5,51,594 ನೋಟಾ ಮತಗಳು ಚಲಾವಣೆಯಾಗಿದ್ದವು. ಇದನ್ನೂ ಓದಿ: ಬಿಜೆಪಿ ಸೇರಿದ್ದ ಪಟೀದಾರ್ ಚಳುವಳಿಯ ನಾಯಕ ಹಾರ್ದಿಕ್ ಪಟೇಲ್‍ಗೆ ಗೆಲುವು

    ಖೇದ್‌ಬ್ರಹ್ಮ ಕ್ಷೇತ್ರದಲ್ಲಿ ಅತಿ ಹೆಚ್ಚು 7,331 ನೋಟಾ ಮತಗಳು (NOTA Votes) ಚಲಾವಣೆಯಾಗಿದ್ದು, ದಾಂಟಾದಲ್ಲಿ 5,213 ಮತ್ತು ಛೋಟಾ ಉದಯ್‌ಪುರದಲ್ಲಿ 5,093 ಮತಗಳು ಚಲಾವಣೆಗೊಂಡಿವೆ. ದೇವಗಡಬಾರಿಯಾ ಕ್ಷೇತ್ರದಲ್ಲಿ 4,821 ನೋಟಾ ಮತಗಳು, ಶೆಹ್ರಾ 4,708, ನಿಜಾರ್ 4,465, ಬಾರ್ಡೋಲಿ 4,211, ದಸ್ಕ್ರೋಯ್‌ 4,189, ಧರಂಪುರ್ 4,189, ಚೋರಿಯಾಸಿ 4,169, ಸಂಖೇದಾ 4,143, ವಡೋದರಾ ನಗರದಲ್ಲಿ 4,143 ಹಾಗೂ ಕಪ್ರದಾದಲ್ಲಿ 4,022 ನೋಟಾ ಮತಗಳು ಚಲಾವಣೆಗೊಂಡಿವೆ. ಇದನ್ನೂ ಓದಿ: ಡಿ.12ರಂದು ಮೋದಿ ಸ್ಟೇಡಿಯಂನಲ್ಲಿ ಪ್ರಮಾಣವಚನ – ಮೋದಿ, ಶಾ ಭಾಗಿ

    ಎಲ್ಲಾ ದಾಖಲೆಗಳೂ ಉಡೀಸ್:
    182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ (BJP) 156 ಸ್ಥಾನಗಳನ್ನು ಗಳಿಸಿ ಈ ಹಿಂದಿನ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡಿದೆ. ಕಾಂಗ್ರೆಸ್ 1985ರಲ್ಲಿ 149 ಸ್ಥಾನಗಳನ್ನು ಗಳಿಸಿದ್ದು, ಈ ವರೆಗಿನ ದಾಖಲೆಯಾಗಿತ್ತು. 2002ರಲ್ಲಿ ನರೇಂದ್ರ ಮೋದಿ (Narendra Modi) ಅವರು ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದಾಗ 127 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಈ ಬಾರಿ 27 ವರ್ಷಗಳ ಬಳಿಕ 156 ಸ್ಥಾನಗಳನ್ನು ಗೆದ್ದಿದ್ದು, ಎಲ್ಲ ದಾಖಲೆಗಳನ್ನು ಉಡೀಸ್ ಮಾಡಿದೆ. ಇದರೊಂದಿಗೆ ಗುಜರಾತ್‌ನಲ್ಲಿ ಬಿಜೆಪಿ ಸತತ 7ನೇ ಗೆಲುವು ದಾಖಲಿಸಿದೆ.

    Live Tv
    [brid partner=56869869 player=32851 video=960834 autoplay=true]

  • ನೋಟಾ ವದಂತಿಗಳನ್ನು ನಂಬಬೇಡಿ – ಮತದಾರರಿಗೆ ತೇಜಸ್ವಿನಿ ಅನಂತ್‍ಕುಮಾರ್ ಸ್ಪಷ್ಟನೆ

    ನೋಟಾ ವದಂತಿಗಳನ್ನು ನಂಬಬೇಡಿ – ಮತದಾರರಿಗೆ ತೇಜಸ್ವಿನಿ ಅನಂತ್‍ಕುಮಾರ್ ಸ್ಪಷ್ಟನೆ

    ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು ನೋಟಾಗೆ ಮತ ಹಾಕಿ ಎಂದು ಜನರಲ್ಲಿ ಕೇಳಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿಗೆ ಸ್ವತ: ಅವರೇ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ನೋಟಾಗೆ ಮತ ಹಾಕಿ ಎಂದು ನಾನು ಜನರಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದು ಕೆಲವರು ವದಂತಿಗಳನ್ನು ಹರಡುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಇದು ಆಧಾರ ರಹಿತವಾಗಿದೆ ಮತ್ತು ದುರುದ್ದೇಶಪೂರಿತವಾಗಿದೆ. ಬಿಜೆಪಿಗೆ ಮತ ನೀಡಿ, ಮೋದಿ ಮತ್ತೊಮ್ಮೆ, ದೇಶ ಮೊದಲು ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ರಾಜ್ಯ ಬಿಜೆಪಿಯ ಉಪಾಧ್ಯಕ್ಷೆಯಾಗಿರುವ ತೇಜಸ್ವಿನಿ ಅನಂತ್ ಕುಮಾರ್ ಅವರು ಭಾನುವಾರ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಡಿವಿ ಸದಾನಂದ ಗೌಡರ ಪರವಾಗಿ ಮತಯಾಚನೆ ಮಾಡಿದ್ದಾರೆ.

  • ನೋಟಾ ಪರ ಅಭಿಯಾನ ಮಾಡಿದ್ರೆ ಬೀಳುತ್ತೆ ಕೇಸ್

    ನೋಟಾ ಪರ ಅಭಿಯಾನ ಮಾಡಿದ್ರೆ ಬೀಳುತ್ತೆ ಕೇಸ್

    ಉಡುಪಿ: ನೋಟಾಕ್ಕೆ ಮತ ಹಾಕುವಂತೆ ಪ್ರಭಾವ ಬೀರುವುದು ಅಪರಾಧ. ಆದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪಕ್ಷ ಅಥವಾ ವ್ಯಕ್ತಿ ವಿರುದ್ಧ ನೋಟಾ ಅಭಿಯಾನ ಮಾಡಿದರೆ ಅವರ ಮೇಲೆ ಕೇಸ್ ದಾಖಲಾಗುತ್ತದೆ ಎಂದು ಉಡುಪಿ ಡಿಸಿ ಹೆಪ್ಸಿಬಾ ರಾಣಿ ಕೊರ್ಲಾಪಾಟಿ ಎಚ್ಚರಿಕೆ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೋಟಾ ಬಗ್ಗೆ ಮಾಹಿತಿ ನೀಡುವುದು ತಪ್ಪಲ್ಲ. ಆದ್ರೆ ನೋಟಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಕೊಡುವಂತಿಲ್ಲ. ನೋಟಾ ಒಂದು ಆಯ್ಕೆ ಮಾತ್ರ. ಇದು ದೇಶದ ಮತದಾರರ ವೈಯಕ್ತಿಕ ಹಕ್ಕು. ಹೀಗಾಗಿ ನೋಟಾಕ್ಕೆ ಮತಹಾಕಿ ಎಂದು ಪ್ರಚಾರ ಮಾಡುವುದು ಕಾನೂನು ಬಾಹಿರ. ಸಾಮಾಜಿಕ ಜಾಲತಾಣದಲ್ಲಿ ನೋಟಾ ಅಭಿಯಾನ ಮಾಡುವಂತಿಲ್ಲ. ನೋಟಾ ಬಗ್ಗೆ ಯಾರೂ ಎಲ್ಲೂ ಪ್ರಚಾರ ಕೊಡಬಾರದು. ನೋಟಾ ಬಗ್ಗೆ ಮಾಹಿತಿ ನೀಡುವ ಅವಕಾಶ ಇದೆ. ಆದ್ರೆ ಅದನ್ನೇ ರಾಜಕೀಯಕ್ಕೆ ಬಳಸುವಂತಿಲ್ಲ. ಹೀಗೆ ಮಾಡಿ ಕಾನೂನು ಉಲ್ಲಂಘಿಸಿದರೆ ಅವರ ಮೇಲೆ ಪ್ರಕರಣ ದಾಖಲಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಲೋಕಸಭಾ ಚುನಾವಣೆಗೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕಣಕ್ಕಿಳಿದಿದ್ದಾರೆ. ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ವ್ಯಕ್ತಿಗಳು ನೋಟಾ ಒತ್ತುವಂತೆ ಪ್ರಚಾರ ಮಾಡುತ್ತಿದ್ದಾರೆ.

    ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಅವರು ಜೆಡಿಎಸ್ ಅಡಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದಕ್ಕೆ ಕಾಂಗ್ರೆಸ್ಸಿನಲ್ಲೇ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಕೆಲ ಕಾಂಗ್ರೆಸ್ ನಾಯಕರು ನೋಟಾ ಒತ್ತುವಂತೆ ಪ್ರಚಾರ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೋಟಾದ ಬಗ್ಗೆ ಭಾರೀ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಈ ಎಚ್ಚರಿಕೆ ನೀಡಿದ್ದಾರೆ.

  • ಬೀದರ್‌ನಲ್ಲಿ ಕಾಂಗ್ರೆಸ್‍ಗಿಲ್ಲ ಮುಸ್ಲಿಂ ಸಮುದಾಯದ ವೋಟ್!

    ಬೀದರ್‌ನಲ್ಲಿ ಕಾಂಗ್ರೆಸ್‍ಗಿಲ್ಲ ಮುಸ್ಲಿಂ ಸಮುದಾಯದ ವೋಟ್!

    – ನೋಟಾ ಆಂದೋಲನಕ್ಕೆ ಅಲ್ಪಸಂಖ್ಯಾತರ ನಿರ್ಧಾರ!

    ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರಿಗೆ ಅಲ್ಪಸಂಖ್ಯಾತ ವೋಟ್ ಬೀಳುವುದಿಲ್ಲ ಎನ್ನುವುದು ಭಾರೀ ಚರ್ಚೆಯಾಗುತ್ತಿದೆ.

    ಹೌದು. ಬೀದರ್ ಲೋಕಸಭಾ ಕ್ಷೇತ್ರದಿಂದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಬೇಕೆಂದು ಜಿಲ್ಲೆಯ ಮುಸ್ಲಿಂ ಸಮುದಾಯದವರು ಕಾಂಗ್ರೆಸ್ ನಾಯಕರಿಗೆ ಒತ್ತಾಯಿಸಿದ್ದರು. ಆದರೆ ಲಿಂಗಾಯತ ಸಮುದಾಯದ ಈಶ್ವರ್ ಖಂಡ್ರೆ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಬೀದರ್ ಜಿಲ್ಲೆಯ 3 ಲಕ್ಷಕ್ಕೂ ಅಧಿಕ ಮುಸ್ಲಿಮರು ಕಾಂಗ್ರೆಸ್‍ಗೆ ಮತ ಹಾಕದಿರಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಅಲ್ಪಸಂಖ್ಯಾತ ಕೋಟಾದಲ್ಲಿ ಮನ್ನಾನ್ ಸೇಠ್, ಅಯಾಜ್ ಖಾನ್, ಸಿಎಂ ಇಬ್ರಾಹಿಂ ಸೇರಿದಂತೆ ಹಲವು ಮುಸ್ಲಿಂ ನಾಯಕರ ಹೆಸರುಗಳು ಕೇಳಿ ಬಂದಿದ್ದವು. ಆದರೆ ಅವರನ್ನು ಕಡೆಗಣಿಸಿ ಈಶ್ವರ್ ಖಂಡ್ರೆ ಅವರ ಹೆಸರನ್ನು ಈಗಾಗಲೇ ಫೈನಲ್ ಮಾಡಲಾಗಿದೆ. ಇದರಿಂದಾಗಿ ಅಲ್ಪಸಂಖ್ಯಾತ ಮುಖಂಡರು ಸಭೆ ನಡೆಸಿ ಕಾಂಗ್ರೆಸ್ ಪಕ್ಷ ಸೇರಿದಂತೆ ಯಾವುದೇ ಪಕ್ಷಕ್ಕೂ ಮತ ಹಾಕದಿರಲು ತೀರ್ಮಾನಿಸಿದ್ದು, ನೋಟಾ ಅಭಿಯಾನ ಆರಂಭಿಸಿದ್ದಾರೆ.

    ಬೀದರ್ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿವಂತೆ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡುರಾವ್, ಸಚಿವರಾದ ಬಂಡೆಪ್ಪ ಖಾಶೆಂಪೂರ್, ಜಮ್ಮಿರ್ ಅಹಮ್ಮದ್ ಸೇರಿದಂತೆ ಅನೇಕರಿಗೆ ಮನವಿ ಸಲ್ಲಿಸಿದ್ದೇವು. ಆದರೆ ಯಾವುದೇ ನಾಯಕರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ ಎಂದು ಮುಸ್ಲಿಂ ಮುಖಂಡರು ಮಿರ್ಜಾ ಶೆಫಿ ಬೇಸರ ವ್ಯಕ್ತಪಡಿಸಿದರು.

    ಬೀದರ್ ಕ್ಷೇತ್ರದಲ್ಲಿ ಪ್ರಚಾರಕ್ಕೆ ಸಿಎಂ ಕುಮಾರಸ್ವಾಮಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾವುದೇ ನಾಯಕರು ಬಂದರೂ ನಾವು ಬೆಂಬಲ ನೀಡುವುದಿಲ್ಲ. ಪ್ರಚಾರವನ್ನು ನಿಲ್ಲಿಸುತ್ತೇವೆ. ಬಿಜೆಪಿ ಸೇರಿದಂತೆ ಯಾವುದೇ ಪಕ್ಷ, ಅಭ್ಯರ್ಥಿಗೆ ಬೆಂಬಲ ನೀಡುವುದಿಲ್ಲ ಎಂದು ಮಿರ್ಜಾ ಶೆಫಿ ಅಸಮಾಧಾನ ಹೊರ ಹಾಕಿದರು.

    ಕಾಂಗ್ರೆಸ್‍ಗೆ ನಮ್ಮ ವೋಟ್ ಬೇಕು. ಆದರೆ ನಮ್ಮ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಲ್ಲ. ಇದು ಯಾವ ಪ್ರಜಾಪ್ರಭುತ್ವ? ಹೆಚ್ಚು ಅಲ್ಪಸಂಖ್ಯಾತರು ಇರುವುದು ಬೀದರ್ ನಲ್ಲಿ. ಆದರೆ ಕಾಂಗ್ರೆಸ್ ಇದನ್ನು ಪರಿಗಣಿಸಲಿಲ್ಲ ಎಂದು ನಗರಸಭೆ ಸದಸ್ಯ ಅಬ್ದುಲ್ ಅಜೀಜ್ ಕಿಡಿಕಾರಿದ್ದಾರೆ.

  • ಮಂಡ್ಯದಲ್ಲಿ ಶುರುವಾಯಿತು ನೋಟಾ ಅಭಿಯಾನ!

    ಮಂಡ್ಯದಲ್ಲಿ ಶುರುವಾಯಿತು ನೋಟಾ ಅಭಿಯಾನ!

    ಮಂಡ್ಯ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಬಿಜೆಪಿಗೆ ಉಪಚುನಾವಣೆ ಪ್ರತಿಷ್ಠೆಯ ವಿಚಾರವಾಗಿದೆ. ಆದರೆ ಮಂಡ್ಯದಲ್ಲಿ ಮಾತ್ರ ಮತದಾರರಿಂದ ತೀವ್ರ ನಿರಾಸಕ್ತಿ ಉಂಟಾಗಿದ್ದು, ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ನೋಟಾ ಅಭಿಯಾನದ ಮೊರೆ ಹೋಗುತ್ತಿದ್ದಾರೆ.

    ಲೋಕಸಭಾ ಚುನಾವಣೆಗೆ ಐದು ತಿಂಗಳು ಬಾಕಿ ಇರುವಾಗ ಉಪಚುನಾವಣೆ ಅನಿವಾರ್ಯವಿತ್ತೇ ಎನ್ನುವುದು ಕ್ಷೇತ್ರದ ಕೆಲ ಮತದಾರರ ವಾದ. ಮಾಜಿ ಸಂಸದೆ ರಮ್ಯಾ ಅವರಿಗೆ ಟಿಕೆಟ್ ನೀಡಿಲ್ಲ ಅಂತಾ ಅವರ ಅಭಿಮಾನಿಗಳು ನೋಟಾ ಅಭಿಯಾನಕ್ಕೆ ಮುಂದಾಗಿದ್ದಾರಂತೆ. ಅಷ್ಟೇ ಅಲ್ಲದೆ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಸೋಲಲು ಎಲ್.ಆರ್.ಶಿವರಾಮೇಗೌಡ ಅವರೇ ಕಾರಣ. ಆದರೂ ಮೈತ್ರಿ ಸರ್ಕಾರವು ಅವರಿಗೆ ಟಿಕೆಟ್ ನೀಡಿದ್ದಕ್ಕೆ ರಮ್ಯಾ ಅಭಿಮಾನಿಗಳು ಕಿಡಿಕಾರಿದ್ದಾರೆ.

    ಸಮ್ಮಿಶ್ರ ಸರ್ಕಾರ ಅಥವಾ ಕೇಂದ್ರದ ಬಿಜೆಪಿ ಸರ್ಕಾರ ರೈತರ ಸಾಲಮನ್ನಾ ಬಗ್ಗೆ ಗಮನಹರಿಸುತ್ತಿಲ್ಲ. ಹೀಗಾಗಿ ಗ್ರಾಮಕ್ಕೆ ಯಾವುದೇ ಅಭ್ಯರ್ಥಿ ಮತ ಕೇಳಲು ಬಂದರೂ, ಮೊದಲು ಸಾಲಮನ್ನಾ ಮಾಡಿ. ಆ ನಂತರ ಮತ ಕೇಳಲು ಬನ್ನಿ ಅಂತಾ ಮತದಾರರು ಪಟ್ಟು ಹಿಡಿದಿದ್ದಾರೆ. ಸಾಲ ಮನ್ನಾ ವಿಚಾರವಾಗಿ ಪ್ರಶ್ನೆ ಮಾಡುವಂತೆ ಎಲ್ಲ ರೈತರಿಗೂ ಹೇಳಿದ್ದೇವೆ ಎಂದು ರೈತ ಮುಂಖಡರು ಹೇಳಿದ್ದಾರೆ.

    ಇತ್ತ ಸಾಮಾನ್ಯ ಮತದಾರರು ಕೂಡ, ಇಷ್ಟು ಕಡಿಮೆ ಅವಧಿಗೆ ಚುನಾವಣೆ ನಡೆಸುತ್ತಿರುವುದಕ್ಕೆ ನಮಗೆ ಬೇಸರವಿದ್ದು, ನಾವು ನೋಟಾ ಆಯ್ಕೆ ಮಾಡುವ ಮೂಲಕ ನಮ್ಮ ಪ್ರತಿಭಟನೆ ಸಂದೇಶ ತಲುಪಿಸುತ್ತೇವೆ ಎನ್ನುತ್ತಿದ್ದಾರೆ. ಬಿಸಿಲು, ಮಳೆ ಲೆಕ್ಕಿಸದೆ ಮಂಡ್ಯದಾದ್ಯಂತ ಸಂಚರಿಸಿ ಮತ ಕೇಳುತ್ತಿರುವ ಅಭ್ಯರ್ಥಿಗಳಿಗೆ ಮತದಾರರ ನೋಟಾ ನಿರ್ಧಾರ ತಲೆನೋವಾಗಿ ಪರಿಣಮಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಶ್ಮಿಕಾ, ರಕ್ಷಿತ್ ಬ್ರೇಕಪ್ ಬಗ್ಗೆ ವಿಜಯ್ ದೇವರಕೊಂಡ ಹೇಳಿದ್ದೇನು?

    ರಶ್ಮಿಕಾ, ರಕ್ಷಿತ್ ಬ್ರೇಕಪ್ ಬಗ್ಗೆ ವಿಜಯ್ ದೇವರಕೊಂಡ ಹೇಳಿದ್ದೇನು?

    ಬೆಂಗಳೂರು: ಟಾಲಿವುಡ್ ನಟ ವಿಜಯ್ ದೇವರಕೊಂಡ ತಮ್ಮ `ಗೀತಾ ಗೋವಿಂದಂ’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರೊಂದಗಿನ ಕಿಸ್ಸಿಂಗ್ ಸೀನ್ ಹಾಗೂ ರಕ್ಷಿತ್ ಬ್ರೇಕಪ್ ಬಗ್ಗೆ ಮಾತನಾಡಿದ್ದು, ರಕ್ಷಿತ್ ಹಾಗೂ ರಶ್ಮಿಕಾ ಅವರ ಲವ್ ಬ್ರೇಕಪ್ ಆಗಿದ್ದಾರೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.

    ವಿಜಯ್ ದೇವರಕೊಂಡ ಅವರ ಅಪ್ ಕಮಿಂಗ್ ಸಿನಿಮಾ `ನೋಟಾ’ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ರಶ್ಮಿಕಾ ಅವರ ಕುರಿತ ಪ್ರಶ್ನೆಗೆ ಉತ್ತರಿಸಿದ ವಿಜಯ್, ಮಂದಣ್ಣ ಅವರ ಜೊತೆ ಅಭಿನಯಿಸಿರುವುದು ಖುಷಿ ತಂದಿದೆ. ಆದರೆ ಬೇರೆ ಒಬ್ಬರಿಗೆ ನೋವುಂಟು ಮಾಡುವ ವಿಚಾರಗಳಿಂದ ಮನರಂಜನೆ ಪಡೆದು ಉತ್ತಮ ಎನಿಸುವುದಿಲ್ಲ. ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ತಿಳಿದಿದ್ದು, ಇಂತಹ ಎಷ್ಟು ನೋವು ಅನುಭವಿಸಿದ್ದಾರೆ ಎಂದು ನನಗೆ ತಿಳಿದಿದೆ. ಈ ಕುರಿತು ನಿರ್ಣಯ ಮಾಡಿಕೊಳ್ಳಲು ಅವರಿಗೆ ಮೊದಲು ಸಮಯ ನೀಡಬೇಕು ಎಂದು ತಿಳಿಸಿದರು.

    ಇದೇ ವೇಳೆ ರಕ್ಷಿತ್ ಅವರ `ಅವನೇ ಶ್ರೀಮನ್ನಾರಾಯಣ’ ಸಿನಿಮಾ ಕುರಿತು ಕುತೂಹಲ ವ್ಯಕ್ತಪಡಿಸಿದ ವಿಜಯ್, ರಕ್ಷಿತ್ ವರ್ಕ್ ಅನ್ನು ನಾನು ಬಹಳ ಇಷ್ಟಪಡುತ್ತೇನೆ. ಅಲ್ಲದೇ ರಶ್ಮಿಕಾ ಹಾಗೂ ರಕ್ಷಿತ್ ಇಬ್ಬರಿಗೂ ನಾನು ತುಂಬಾ ಗೌರವ ನೀಡುತ್ತೇನೆ. ಆದರೆ ಈ ವಿಚಾರದ ಕುರಿತು ಅವರೇ ಮಾತನಾಡಿದರೆ ಉತ್ತಮ ಎಂದು ತಿಳಿಸಿದರು.

    ಇದಕ್ಕೂ ಮುನ್ನ ಸುದ್ದಿಗೋಷ್ಠಿಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಕನ್ನಡದಲ್ಲೇ ಶುಭಕೋರಿದ ವಿಜಯ್, `ನೋಟಾ’ ಚಿತ್ರ ಇದೇ ಶುಕ್ರವಾರ ತೆರೆ ಕಾಣಲಿದೆ. ಎಲ್ಲರೂ ಸಿನಿಮಾ ವೀಕ್ಷಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಮತ್ತು ಜ್ಞಾನವೇಲು ರಾಜು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರುಣಾದಲ್ಲಿ ಎಷ್ಟು ನೋಟಾ ವೋಟು ಬಿದ್ದಿದೆ?

    ವರುಣಾದಲ್ಲಿ ಎಷ್ಟು ನೋಟಾ ವೋಟು ಬಿದ್ದಿದೆ?

    ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಕೇಂದ್ರ ಮತಕ್ಷೇತ್ರ ಹೊರತುಪಡೆಸಿ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಆದರೆ, ಈ ಫಲಿತಾಂಶವು ಅತಂತ್ರ ವಾತಾವರಣ ಉಂಟು ಮಾಡಿದೆ. ಈ ಸಂಬಂಧ ಅನೇಕ ಕಾರಣಗಳು ಕೇಳಿಬರುತ್ತಿದ್ದು, ಅದರಲ್ಲಿ ನೋಟಾ ಕೂಡಾ ಒಂದು ಎಂದು ಹೇಳಬಹುದು.

    ತಮ್ಮ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿ ಯಾರು ಇಲ್ಲವೆಂದು ಮತದಾರರು ನೋಟಾ ಆಯ್ಕೆ ಮಾಡಿರಬಹುದು. ಇಲ್ಲವೇ, ತಮ್ಮ ಅಭ್ಯರ್ಥಿಗೆ ಟಿಕೇಟ್ ಸಿಗದಿರುವುದಕ್ಕೆ ಅಥವಾ ಅಭ್ಯರ್ಥಿಗಳನ್ನು ಬದಲಾಯಿಸಿದಕ್ಕೆ ಅಭಿಮಾನಿಗಳು ನೋಟಾ ಮೊರೆ ಹೋಗಿದ್ದಾರೆ. ಈ ಬಾರಿ ಒಟ್ಟು 3,08,743 ನೋಟಾ ಮತಗಳು ಚಲಾವಣೆಯಾಗಿದೆ. ಇದರ ಪರಿಣಾಮ ಕೆಲವು ಕ್ಷೇತ್ರಗಳ ಫಲಿತಾಂಶದಲ್ಲಿ ವ್ಯತ್ಯಾಸ ಕಂಡುಬಂದಿದೆ.

     

    ಶೇ 0.9ರಷ್ಟು ಜನರು ನೋಟಾ ಮೊರೆ ಹೋಗಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಅಭ್ಯರ್ಥಿಗಳ ನಂತರದ ಸ್ಥಾನವನ್ನು ಇದು ತುಂಬುತ್ತದೆ. ವಿಜಯೇಂದ್ರಗೆ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ನೋಟಾ ಅಭಿಯಾನ ಆರಂಭವಾಗಿದೆ ಎನ್ನುವ ಮೆಸೇಜ್‍ಗಳು ಹರಿದಾಡಿತ್ತು. ಆದರೆ ಇಲ್ಲಿ ಬಿಜೆಪಿ ಅಭ್ಯರ್ಥಿ 37,819 ಮತಗಳನ್ನು ಪಡೆದರೆ, 1,497 ನೋಟಾ ಮತಗಳು ಬಿದ್ದಿದೆ. ಸಿಎಂ ಪುತ್ರ ಯತೀಂದ್ರ ಅವರು ಇಲ್ಲಿ 96,435 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದರು.

  • ವಿಜಯೇಂದ್ರಗೆ ಟಿಕೆಟ್ ತಪ್ಪಿದ ಎಫೆಕ್ಟ್-ನೋಟಾ ಚಲಾವಣೆ ಅಭಿಯಾನದ ಕರಪತ್ರ ಫುಲ್ ವೈರಲ್

    ವಿಜಯೇಂದ್ರಗೆ ಟಿಕೆಟ್ ತಪ್ಪಿದ ಎಫೆಕ್ಟ್-ನೋಟಾ ಚಲಾವಣೆ ಅಭಿಯಾನದ ಕರಪತ್ರ ಫುಲ್ ವೈರಲ್

    ಮೈಸೂರು: ವರುಣಾದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಮಗ ವಿಜಯೇಂದ್ರಗೆ ಟಿಕೆಟ್ ತಪ್ಪಿಸಿದ್ರಿಂದ ಬಿಜೆಪಿ ಕಾರ್ಯಕರ್ತರಲ್ಲಿ ಭುಗಿಲೆದ್ದಿರೋ ಸಿಟ್ಟು ಶಮನವಾಗಿಲ್ಲ. ಪ್ರತೀಕಾರವಾಗಿ ಪಕ್ಷದ ಅಧಿಕೃತ ಅಭ್ಯರ್ಥಿ ಬಸವರಾಜ್‍ರನ್ನೇ ಸೋಲಿಸಿ ಮರು ಚುನಾವಣೆ ನಡೆಸೋ ಸಲುವಾಗಿ ನೋಟಾ ಚಲಾಯಿಸಬೇಕೆಂಬ ಅಭಿಯಾನ ಶುರುವಾಗಿದೆ. ಇದನ್ನೂ ಓದಿ: ಇದೊಂದು ಧರ್ಮಯುದ್ದ ಇದ್ದಂತೆ, ಪಕ್ಷಾತೀತವಾಗಿ ವಿಜಯೇಂದ್ರ ಬೆಂಬಲಿಸಿ:ಜಿಟಿ ದೇವೇಗೌಡ

    ವಿಜಯೇಂದ್ರ ಅವರು ನಾಮಪತ್ರ ಸಲ್ಲಿಸುವಾಗ 40 ರಿಂದ 50 ಸಾವಿರ ಜನರಿದ್ದರು. ಆದ್ರೆ ಅನಂತ್‍ಕುಮಾರ್, ಸಂತೋಷ್ ಕಡೆಯ ಅಭ್ಯರ್ಥಿ ಉಮೇದುವಾರಿಕೆ ಸಲ್ಲಿಸುವಾಗ ಕೇವಲ 6 ಜನರಿದ್ದರು. ಇವರಿಬ್ಬರ ಗರ್ವಭಂಗ ಆಗ್ಬೇಕು. ವೀರಶೈವ-ಲಿಂಗಾಯತರ ಸ್ವಾಭಿಮಾನವನ್ನ ನೋಟಾ ಮೂಲಕ ತೋರಿಸಬೇಕಿದ್ದು, ಅವರ ಸ್ವಾಭಿಮಾನಕ್ಕೆ ಪೆಟ್ಟು ಕೊಡ್ಬೇಕಾದ್ರೆ ಬಿಜೆಪಿ ನೂರು ಸಲ ಯೋಚಿಸಬೇಕು. ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್ ತಪ್ಪಿಸೋದ್ರಿಂದ ಚಾಮರಾಜನಗರ ಮತ್ತು ಮೈಸೂರಿನ 9 ಕ್ಷೇತ್ರಗಳಲ್ಲಿ ಗೆಲುವಿಗೆ ಭಂಗ ಆಗುತ್ತದೆ ಅಂತ ಅನಂತ್‍ಕುಮಾರ್, ಸಂತೋಷ್ ನಿಮಗೆ ಗೊತ್ತಿಲ್ವೆ ಎಂದು ಪ್ರಶ್ನಿಸಿರೋ ಕರಪತ್ರ ವೈರಲ್ ಆಗಿದೆ. ಇದನ್ನೂ ಓದಿ: ಟಿಕೆಟ್ ಮಿಸ್ ಬೆನ್ನಲ್ಲೇ ವಾಪಸ್ ಬರ್ತೀನಿ ಅಂತ ಮೈಸೂರಿಗೆ ಬಾಯ್.. ಬಾಯ್.. ಅಂದ್ರು ಬಿಎಸ್‍ವೈ ಪುತ್ರ ವಿಜಯೇಂದ್ರ!

    ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧವೇ 25 ಸಾವಿರಕ್ಕಿಂತ ಹೆಚ್ಚು ನೋಟಾ ವೋಟ್ ಚಲಾಯಿಸುವಂತೆ ಪಕ್ಷದ ಕಾರ್ಯಕರ್ತರೇ ವಾಟ್ಸಾಪ್‍ನಲ್ಲಿ ಪ್ರಚಾರ ಮಾಡ್ತಿದ್ದಾರೆ. ಆದ್ರೆ, ಒಟ್ಟು ಮತಗಳ ಅರ್ಧಕ್ಕಿಂತಲೂ ಹೆಚ್ಚು ನೋಟಾ ಚಲಾಯಿಸಿದ್ರೂ ಮರು ಚುನಾವಣೆ ನಡೆಯಲ್ಲ. ಇದನ್ನೂ ಓದಿ:  ವಿಜಯೇಂದ್ರ ಕ್ಷೇತ್ರಕ್ಕೆ ಬಂದು 20 ದಿನ ಆಯ್ತು, ನಾನು 37 ವರ್ಷಗಳಿಂದ ಬಿಜೆಪಿಗೆ ದುಡಿದಿದ್ದೇನೆ: ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು