Tag: ನೈಸ್

  • ನೈಸ್‌ಗೆ ಕೊಟ್ಟಿರುವ ಹೆಚ್ಚುವರಿ 554 ಎಕ್ರೆ ಜಾಗ ವಾಪಸ್‌

    ನೈಸ್‌ಗೆ ಕೊಟ್ಟಿರುವ ಹೆಚ್ಚುವರಿ 554 ಎಕ್ರೆ ಜಾಗ ವಾಪಸ್‌

    ಬೆಳಗಾವಿ: ನೈಸ್ (NICE) ಸಂಸ್ಥೆಗೆ ಕೊಟ್ಟರುವ ಹೆಚ್ಚುವರಿ ಭೂಮಿಯನ್ನು ಸರ್ಕಾರ (Karnataka Government) ವಾಪಸ್ ಪಡೆಯಲಿದೆ ಎಂದು ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ (Sharanabasappa Darshanapur) ತಿಳಿಸಿದ್ದಾರೆ.

    ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ತುಳಸಿ ಮುನಿರಾಜುಗೌಡ (Tulasi Muniraju Gowda) ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು 554 ಎಕರೆ ನೈಸ್ ಕೊಟ್ಟ ಜಾಗವನ್ನು ನಾವು ವಾಪಸ್ ಪಡೆಯುತ್ತೇವೆ. ಆದಷ್ಟು ಬೇಗ ಜಾಗ ಹಿಂಪಡೆದುಕೊಳ್ಳುತ್ತೇವೆ. 554 ಎಕರೆ ಜಾಗದ ಪರಿಶೀಲನೆ ಮಾಡಲು ಸೂಚನೆ ನೀಡಲಾಗಿದೆ. ಜಮೀನಿನ ಸರ್ವೆ ಕಾರ್ಯ ನಡೆಯುತ್ತಿದೆ‌. ಸರ್ವೆ ಕಾರ್ಯ ಮುಗಿದ ಕೂಡಲೇ ಜಮೀನು ವಶಪಡಿಸಿಕೊಳ್ಳುತ್ತೇವೆ ಎಂದು ಭರವಸೆ ‌ಕೊಟ್ಟರು.  ಇದನ್ನೂ ಓದಿ: ಅರ್ಜುನನ ಅಂತ್ಯಸಂಸ್ಕಾರಕ್ಕೆ ಅಡ್ಡಿ – ಪೊಲೀಸರಿಂದ ಲಾಠಿ ಪ್ರಹಾರ, ದಿಕ್ಕಾಪಾಲಾಗಿ ಓಡಿದ ಜನ

    ಮುನಿರಾಜುಗೌಡ ಹೇಳಿದ್ದೇನು?
    ಕೆಐಎಡಿಬಿ (KIADB) ನೈಸ್ ಸಂಸ್ಥೆಗೆ ಕೊಟ್ಟಿರುವ ಹೆಚ್ಚುವರಿ 554 ಎಕರೆ ಜಮೀನು ಹಸ್ತಾಂತರ ಮಾಡಿದೆ. ಹೆಚ್ಚುವರಿ ಭೂಮಿ ಕೊಟ್ಟಿರುವ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ (Supreme Court) ನಲ್ಲಿ ಸರ್ಕಾರ ಪ್ರಮಾಣ ಪತ್ರ ನೀಡಿದೆ. ಕೂಡಲೇ ಸರ್ಕಾರ ನೈಸ್‌ಗೆ ಕೊಟ್ಟಿರಿವ 554 ಎಕರೆ ಜಮೀನು ವಾಪಸ್ ಪಡೆಯಬೇಕು.

    ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನಿಂದ ಛೀಮಾರಿ ಹಾಕಿದ್ದರೂ ಭೂಮಿ ವಶಪಡಿಸಿಕೊಂಡಿಲ್ಲ. ದಪ್ಪ ಚರ್ಮದ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳು ಜಾಗ ವಶಪಡಿಸಿಕೊಳ್ಳುವ ಕೆಲಸ ಮಾಡಿಲ್ಲ. ಎಇ ಯತೀರಾಜ್ ಅವರನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ.

    ಜಮೀನು ಕೊಟ್ಟವರಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಸತ್ತರೆ ಪಾಪ ಜಮೀನು ಕೊಟ್ಟವರಿಗೆ ಹೂಳಲು ಜಾಗ ಕೊಡುತ್ತಿಲ್ಲ. ರೈತರಿಗೆ ಪರ್ಯಾಯ ಜಮೀನು ಕೊಡುವ ಭರವಸೆ ಕೊಟ್ಟಿದ್ದರು. ಆದರೆ ಅದನ್ನು ಕೊಡುತ್ತಿಲ್ಲ. ಕೂಡಲೇ ನೈಸ್‌ಗೆ ಕೊಟ್ಟಿರುವ ಹೆಚ್ಚುವರಿ ಭೂಮಿ ವಾಪಸ್ ಪಡೆಯಬೇಕು ಅಂತ ಆಗ್ರಹ ಮಾಡಿದರು.

     

  • ಅಶೋಕ್ ಖೇಣಿಯನ್ನ ಜನರು ಮನೆಯಲ್ಲಿ ಕೂರಿಸಿದ್ದು ಯಾಕೆ: ಎಚ್‍ಡಿಕೆ ಮಾತಲ್ಲಿ ಕೇಳಿ

    ಅಶೋಕ್ ಖೇಣಿಯನ್ನ ಜನರು ಮನೆಯಲ್ಲಿ ಕೂರಿಸಿದ್ದು ಯಾಕೆ: ಎಚ್‍ಡಿಕೆ ಮಾತಲ್ಲಿ ಕೇಳಿ

    ಬೆಂಗಳೂರು: ಮಾಜಿ ಶಾಸಕ ಅಶೋಕ್ ಖೇಣಿ ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಬೆಂಬಲ ನೀಡಬಾರದು ಎಂದು ಜನಗಳೇ ಅವರನ್ನೇ ಮನೆಯಲ್ಲಿ ಕೂರಿಸಿದ್ದಾರೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಸಿಎಂ ವಿರೋಧ ಪಕ್ಷದ ವಿರೋಧ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡುತ್ತಿದ್ದರು. ಚುನಾವಣೆ ಸಂದರ್ಭದಲ್ಲಿ ತಮ್ಮ ಪ್ರತಿ ಸ್ಪರ್ಧಿಗಳ ವಿರುದ್ಧ ಮಾತನಾಡಿದ್ದಾರೆ. ಅಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೆಡಿಎಸ್ ವಿರುದ್ಧ ಮಾತನಾಡಿದರು. ರಾಜಕಾರಣದಲ್ಲಿ ಯಾರು ಶತ್ರುಗಳಲ್ಲಿ, ಮಿತ್ರರೂ ಅಲ್ಲ. ಬದಲಾದ ಪರಿಸ್ಥಿತಿ ಮತ್ತು ಸನ್ನಿವೇಶದಲ್ಲಿ ಇಂದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಎಂದು ತಿಳಿಸಿದರು.

    ಈ ಹಿಂದೆ ನೈಸ್ ಕಂಪೆನಿಯ ಒಪ್ಪಂದವನ್ನು ರದ್ದುಗೊಳಿಸಲು ಸಂಪುಟ ಸಭೆಯನ್ನು ಕರೆದರೆ, ಬಿಜೆಪಿಯವರು 6 ಗಂಟೆಗಳ ಕಾಲ ಸಭೆಯಿಂದ ಹೊರ ನಡೆದಿದ್ದರು ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಾಜಿ ಸಚಿವ ಎಸ್.ಆರ್.ಬೊಮ್ಮಾಯಿ ಈಗ ಖೇಣಿ ನಿಮ್ಮ ಬಳಿಯಲ್ಲಿದ್ದಾರೆ. ಇವಾಗ ನೀವೇ ಮುಖ್ಯಮಂತ್ರಿಯಾಗಿದ್ದು, ನೈಸ್ ಪ್ರಸ್ತಾಪವನ್ನು ಸಂಪುಟದಲ್ಲಿಟ್ಟು ಚರ್ಚಿಸಿ. ಈಗಲೂ ನಮ್ಮ ಮುಂದೆ ಜಯಚಂದ್ರ ವರದಿ ಇದೆ. ಆದ್ರೆ ನೈಸ್ ಪ್ರಸ್ತಾಪವನ್ನು ಸಂಪುಟದಲ್ಲಿಡಲು ನಿಮ್ಮಿಂದ ಸಾಧ್ಯವಾಗಲ್ಲ. ಅಶೋಕ್ ಖೇಣಿಗೆ ಕಾಂಗ್ರೆಸ್‍ನಿಂದ ದೊಡ್ಡ ಬೆಂಬಲವಿದೆ ಎಂದು ಟೀಕಿಸಿದರು.

    ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಇನ್ನು ಕಾಲಾವಕಾಶವಿದ್ದು, ನೈಸ್ ಕಂಪೆನಿ ಪ್ರಸ್ತಾಪವನ್ನು ಸಂಪುಟದಲ್ಲಿ ಇಡುತ್ತೇವೆಯೋ ಇಲ್ಲವೋ ಎಂಬುವುದನ್ನು ಮುಂದಿನ ದಿನಗಳಲ್ಲಿ ತಿಳಿಯಲಿದೆ ಅಂತಾ ಉತ್ತರಿಸಿದರು.

  • ವಾರದೊಳಗೆ ಟೋಲ್ ದರ ಇಳಿಸದಿದ್ರೆ ಕಠಿಣ ಕ್ರಮ- ನೈಸ್ ಸಂಸ್ಥೆಗೆ ರಾಜ್ಯ ಸರ್ಕಾರದಿಂದ ನೊಟೀಸ್

    ವಾರದೊಳಗೆ ಟೋಲ್ ದರ ಇಳಿಸದಿದ್ರೆ ಕಠಿಣ ಕ್ರಮ- ನೈಸ್ ಸಂಸ್ಥೆಗೆ ರಾಜ್ಯ ಸರ್ಕಾರದಿಂದ ನೊಟೀಸ್

    ಬೆಂಗಳೂರು: ಏಳು ದಿನದೊಳಗೆ ಟೋಲ್ ದರ ಏರಿಕೆ ಹಿಂತೆಗೆದುಕೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ನಂದಿ ಇನ್‍ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‍ಪ್ರೈಸಸ್ (ನೈಸ್)ಗೆ ಲೋಕೋಪಯೋಗಿ ಇಲಾಖೆ ನೋಟಿಸ್ ಜಾರಿ ಮಾಡಿದೆ.

    ನೈಸ್ ಕಂಪೆನಿ ಜುಲೈ 1 ರಿಂದ ಶೇ 33 ರಷ್ಟು ಟೋಲ್ ದರ ಹೆಚ್ಚಳ ಮಾಡಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವುದರಿಂದ ಈ ಕಂಪೆನಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

    ಕ್ರಿಯಾ ಒಪ್ಪಂದ (ಫ್ರೇಮ್ ವರ್ಕ್ ಅಗ್ರಿಮೆಂಟ್) ಜಾರಿಗೊಳಿಸದೇ ಕರ್ತವ್ಯ ಲೋಪ ಎಸಗಿರುವ ಸಂಬಂಧ ಹೈಕೋರ್ಟ್‍ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿ ಇನ್ನೂ ಇತ್ಯರ್ಥ ಆಗಿಲ್ಲ. ಅಷ್ಟರಲ್ಲೇ ಟೋಲ್ ದರ ಹೆಚ್ಚಿಸಿರುವುದು ಅಕ್ರಮ. ಕೂಡಲೇ ಈ ತೀರ್ಮಾನ ಹಿಂದಕ್ಕೆ ಪಡೆಯಬೇಕು ಎಂದು ನೋಟಿಸ್‍ನಲ್ಲಿ ಹೇಳಲಾಗಿದೆ.