Tag: ನೈಸರ್ಗಿಕ ವಿಕೋಪ

  • ಅಮರನಾಥ ಯಾತ್ರೆ: ನೈಸರ್ಗಿಕ ವಿಕೋಪದಿಂದ 8 ಯಾತ್ರಾರ್ಥಿಗಳು ಸಾವು

    ಅಮರನಾಥ ಯಾತ್ರೆ: ನೈಸರ್ಗಿಕ ವಿಕೋಪದಿಂದ 8 ಯಾತ್ರಾರ್ಥಿಗಳು ಸಾವು

    ಶ್ರೀನಗರ: ಕಳೆದ 36 ಗಂಟೆಗಳಲ್ಲಿ ಅಮರನಾಥ ಯಾತ್ರೆಯಲ್ಲಿ ಎಂಟು ಯಾತ್ರಾರ್ಥಿಗಳು ನೈಸರ್ಗಿಕ ವಿಕೋಪಗಳಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಯಾತ್ರಿಕರ ಸಾವಿನ ಸಂಖ್ಯೆ 41ಕ್ಕೆ ತಲುಪಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

    ನೈಸರ್ಗಿಕ ವಿಕೋಪದಿಂದ ಎಂಟು ಯಾತ್ರಾರ್ಥಿಗಳು ಮೃತಪಟ್ಟಿದ್ದು, ಅವರನ್ನು ರಾಜಸ್ಥಾನದ ಮೊಂಗಿಲಾಲ್(52), ಗುಜರಾತ್‍ನ ವ್ರಿಯಾಗ್ ಲಾಲ್ ಹೀರಾ ಚಂದ್ ವ್ಯಾಸ್(57), ಕರ್ನಾಟಕದ ಬಸವರಾಜ(68), ಸಿಂಗಾಪುರದ ಪೂನಿಯಾಮೂರ್ತಿ(63), ಮಹಾರಾಷ್ಟ್ರದ ಕಿರಣ್ ಚತುರ್ವೇದಿ, ಕಲವಲ ಸುಬ್ರಮಣ್ಯಂ(63), ಉತ್ತರ ಪ್ರದೇಶದ ಗೋವಿಂದ್ ಶರಣ್(34) ಮತ್ತು ಹರಿಯಾಣದ ಸತ್ವೀರ್ ಸಿಂಗ್(70) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮೇಘಸ್ಫೋಟದಿಂದ ತಾತ್ಕಾಲಿಕ ಬಂದ್ ಆಗಿದ್ದ ಅಮರನಾಥ ಯಾತ್ರೆ ಪುನಾರಂಭ

    ಕಳೆದ ವಾರ ದಕ್ಷಿಣ ಕಾಶ್ಮೀರ ಹಿಮಾಲಯದ ಗುಹೆ ದೇಗುಲದ ಬಳಿ ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಲ್ಲಿ 15 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು.

    ಕಳೆದ 2 ವರ್ಷಗಳಿಂದ ಕೋವಿಡ್ ಹಿನ್ನೆಲೆ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಆದರೆ ಈ ವರ್ಷ ಎಲ್ಲ ರೀತಿಯ ಭದ್ರತೆಯೊಂದಿಗೆ ಅಮರನಾಥ ಯಾತ್ರೆಯು ಜೂನ್ 30 ರಂದು ಪ್ರಾರಂಭವಾಯಿತು. ಆದರೆ ಜುಲೈ 8 ರಂದು ಹಠಾತ್ ಪ್ರವಾಹದ ನಂತರ ಯಾತ್ರೆಯನ್ನು ಸ್ಥಗಿತಗೊಳಿಸಲಾಯಿತು. ಮತ್ತೆ ಜುಲೈ 11 ರಂದು ಯಾತ್ರೆಯನ್ನು ಯಾತ್ರಾರ್ಥಿಗಳು ಪುನರಾರಂಭ ಮಾಡಿದರು. ಇದನ್ನೂ ಓದಿ: ಇಂದಿನಿಂದ ಅಮರನಾಥ ಯಾತ್ರೆ ಪ್ರಾರಂಭ- ಯಾತ್ರೆ ಹೊರಟ 2,750 ಮಂದಿ

    Live Tv
    [brid partner=56869869 player=32851 video=960834 autoplay=true]

  • ನೈಸರ್ಗಿಕ ವಿಕೋಪ – 5 ರಾಜ್ಯಗಳಿಗೆ ಕೇಂದ್ರದಿಂದ ನೆರವು

    ನೈಸರ್ಗಿಕ ವಿಕೋಪ – 5 ರಾಜ್ಯಗಳಿಗೆ ಕೇಂದ್ರದಿಂದ ನೆರವು

    ದೆಹಲಿ: 2020ರ ಅವಧಿಯಲ್ಲಿ ಉಂಟಾದ ನೈಸರ್ಗಿಕ ವಿಕೋಪ ಮತ್ತು ಕೀಟಗಳ ದಾಳಿಯಿಂದ ತತ್ತರಿಸಿದ್ದ 5 ರಾಜ್ಯಗಳಿಗೆ ಕೆಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಸಮಿತಿ ಸಭೆಯಲ್ಲಿ ಸುಮಾರು 3,113 ಕೋಟಿ ಅನುಮೋದನೆ ನೀಡುವುದಾಗಿ ಶನಿವಾರ ಗೃಹ ಸಚಿವಾಲಯ ಪ್ರಕಟಿಸಿದೆ.

    ಕೇಂದ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ(ಎನ್‍ಡಿಆರ್‍ಎಂಎಫ್) ಆಂಧ್ರಪ್ರದೇಶ, ಬಿಹಾರ, ತಮಿಳುನಾಡು, ಪುದುಚೇರಿ ಮತ್ತು ಮಧ್ಯಪ್ರದೇಶಕ್ಕೆ ಹೆಚ್ಚುವರಿ ನೆರವು ನೀಡಲಾಗುತ್ತಿದೆ.

    ನೈಋತ್ಯ ಮಾನ್ಸೂನ್‍ನಿಂದ ಆಂಧ್ರಪ್ರದೇಶದಲ್ಲಿ ಉಂಟಾದ ಪ್ರವಾಹಕ್ಕೆ 280.78 ಕೋಟಿ ಮತ್ತು ಬಿಹಾರಕ್ಕೆ 1,255.27 ಕೋಟಿ ರೂ. ನೆರವು ನೀಡಲಾಗುತ್ತಿದೆ. ತಮಿಳುನಾಡಿನಲ್ಲಿ ಉಂಟಾದ ನಿವಾರ್ ಚಂಡಮಾರುತಕ್ಕೆ 63.14 ಕೋಟಿ ಮತ್ತು ಬುರೆವಿ ಚಂಡಮಾರುತಕ್ಕೆ 3,22,377 ಕೋಟಿ ನೆರವು ನೀಡಲಾಗುತ್ತಿದೆ. ನಿವಾರ್ ಚಂಡಮಾರುತದ ಪರಿಣಾಮ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೆ 9.91 ಕೋಟಿ ರೂ. ದೊರೆತಿದೆ.

    ಜೊತೆಗೆ ಮಿಡತೆ ದಾಳಿಯಿಂದ ಕೃಷಿ ನಷ್ಟಕ್ಕೆ ತುತ್ತಾಗಿದ್ದ ಮಧ್ಯ ಪ್ರದೇಶದಲ್ಲಿ 1,280.18 ಕೋಟಿ ಹಣ ನೆರವು ನೀಡಲಾಗುತ್ತಿದೆ.