Tag: ನೈರುತ್ಯ ರೈಲ್ವೆ

  • ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ್ ಸೌಂಡ್ ಜಾಸ್ತಿ ಮಾಡಿದ್ರೆ, ಜೋರಾಗಿ ಮಾತಾಡಿದ್ರೆ ಬೀಳುತ್ತೆ ಕೇಸ್

    ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ್ ಸೌಂಡ್ ಜಾಸ್ತಿ ಮಾಡಿದ್ರೆ, ಜೋರಾಗಿ ಮಾತಾಡಿದ್ರೆ ಬೀಳುತ್ತೆ ಕೇಸ್

    – ಮತ್ತಷ್ಟು ಜನಸ್ನೇಹಿಯಾದ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗ
    – ‘ರೈಲು ಮದದ್’ ಸೇವೆ ಮೂಲಕ ಸಹಾಯ

    ಬೆಂಗಳೂರು: ರೈಲಿನಲ್ಲಿ ರಾತ್ರಿ ಪ್ರಯಾಣ ಮಾಡುವವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ರೈಲ್ವೆ ಇಲಾಖೆ ಹಲವಾರು ಜನಸ್ನೇಹಿ ಕ್ರಮಗಳನ್ನು ಕೈಗೊಂಡಿದೆ. ರಾತ್ರಿ 10 ಗಂಟೆಯ ನಂತರ ಪ್ರಯಾಣಿಕರ ಮೊಬೈಲ್ ಸೌಂಡ್ ಜಾಸ್ತಿ ಮಾಡಿದರೆ, ಅನಾವಶ್ಯಕವಾಗಿ ರೈಲಿನಲ್ಲಿ ಲೈಟ್ಸ್ ಆನ್ ಮಾಡಿದರೆ, ಜೋರಾಗಿ ಮಾತನಾಡಿದರೆ.. ಅಂಥವರ ವಿರುದ್ಧ ರೈಲ್ವೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಸುರಕ್ಷಿತ ಹಾಗೂ ನೆಮ್ಮದಿಯ ಪ್ರಯಾಣಕ್ಕೆ ನೈರುತ್ಯ ರೈಲ್ವೆ ವಲಯ ಬೆಂಗಳೂರು ವಿಭಾಗವು ಹಲವು ಕ್ರಮ ಕೈಗೊಂಡಿದೆ.

    ಇನ್ಮುಂದೆ ರೈಲಿನಲ್ಲಿ ರಾತ್ರಿ ವೇಳೆ ಪ್ರಯಾಣ ಮಾಡೋರು ರಾತ್ರಿ 10 ಗಂಟೆಯ ನಂತರ ಫೋನ್ ಸೌಂಡ್ ಜಾಸ್ತಿ ಮಾಡಿದ್ರೆ, ಲೈಟ್ಸ್ ಆನ್ ಮಾಡಿದ್ರೆ, ಫೋನಲ್ಲಿ ಮಾತನಾಡ್ತಿದ್ರೆ, ಹರಟೆ ಹೊಡಿತಿದ್ರೆ, ಪ್ರಯಾಣಿಕರಿಗೆ ಕಿರಿಕಿರಿ ಮಾಡಿದ್ರೆ, ರೈಲ್ವೆ ಅಧಿಕಾರಿಗಳು ಅಂಥವರ ವಿರುದ್ಧ ಕೇಸ್ ಹಾಕಲಿದ್ದಾರೆ. ಸುರಕ್ಷತೆಯ ಪ್ರಯಾಣಕ್ಕೆ ಭಂಗ ಉಂಟು ಮಾಡುವವರನ್ನ ಪತ್ತೆ ಹಚ್ಚೋಕೆ ಸೌತ್ ವೆಸ್ಟರ್ನ್ ರೈಲ್ವೆ ಅಧಿಕಾರಿಗಳು ರೈಲ್ವೆ ಪ್ರಯಾಣದುದ್ದಕ್ಕೂ ರಿಸರ್ವೇಶನ್ ಬೋಗಿಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ರೈಲ್ವೆ ಮದದ್ ಎಂಬ ಸೇವೆಯ ಮೂಲಕ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗ್ತಿದೆ. ಇದನ್ನೂ ಓದಿ: ವಿರೋಧ ಪಕ್ಷದಲ್ಲಿ ಕುಳಿತು ದೇಶ ಒಡೆಯುವ ಹುನ್ನಾರ: ಡಿಕೆಸು ವಿರುದ್ಧ ಜೋಶಿ ಆಕ್ರೋಶ

    ಸುರಕ್ಷತೆಗೆ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಹೆಚ್ಚಿನವರು ರೈಲು ಪ್ರಯಾಣ ಆಯ್ಕೆ ಮಾಡಿಕೊಳ್ತಾರೆ. ಇದೀಗಾ ನೈರುತ್ಯ ರೈಲ್ವೆ ವಲಯ ಬೆಂಗಳೂರು ವಿಭಾಗದ ಅಧಿಕಾರಿಗಳು ಮತ್ತಷ್ಟು ಜನಸ್ನೇಹಿಯಾಗಿದ್ದಾರೆ. ಭಾರತೀಯ ರೈಲ್ವೆ ಇಲಾಖೆಯ “ರೈಲು ಮದದ್” ಸೇವೆಯ ಮೂಲಕ ಪ್ರಯಾಣಿಕ ಸಮಸ್ಯೆಗಳಿಗೆ ಕ್ವಿಕ್ ರೆಸ್ಪಾನ್ಸ್ ಮಾಡ್ತಿದ್ದಾರೆ. ರಿಸರ್ವೆಶನ್ ಕೋಚ್‌ನಲ್ಲಿ ಪ್ರಯಾಣ ಮಾಡುವ ರೋಗಿಗಳ ಮೇಲೆ, ರೈಲ್ವೆ ಅಧಿಕಾರಿಗಳು ನಿಗಾವಹಿಸಿ, ರೋಗಿಗಳಿಗೆ ಔಷಧಿ, ಪ್ರಾಥಮಿಕ ಚಿಕಿತ್ಸೆ ಹಾಗೂ ವಿಕಲಚೇತನರಿಗೆ ವ್ಹೀಲ್‌ಚೇರ್ ಸೇರಿದಂತೆ ಇತರೆ ಆರೋಗ್ಯ ಸೇವೆಯನ್ನ ನೀಡ್ತಿದ್ದಾರೆ. ರೋಗಿಗಳಿಗೆ ಆರೋಗ್ಯ ಸೇವೆಯನ್ನ ನೀಡಿ, ಅವರು ಇಳಿಯುವ ನಿಲ್ದಾಣದ ವರೆಗೂ ಫಾಲೋಆಪ್‌ನಲ್ಲಿರುತ್ತಾರೆ. ಹೀಗೆ ರಿಸರ್ವೆಶನ್ ಕೋಚ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷತೆ, ಭದ್ರತೆಗಾಗಿ ಪ್ರತಿ ಬೋಗಿಗಳಲ್ಲಿ ಆರ್‌ಪಿಎಫ್ ತಂಡ, ಟಿಟಿಗಳು, ಸೂಪರಿಡೆಂಟ್‌ಗಳು ರೌಂಡ್ಸ್ ಮಾಡುತ್ತಿರುತ್ತಾರೆ.

    ರೈಲ್ವೆ ಮದಾದ್ ಎಂಬುದು, ರೈಲ್ವೆ ಪ್ರಯಾಣಿಕರ ಕುಂದುಕೊರತೆ ಹಾಗೂ ದೂರುಗಳನ್ನ ಸಲ್ಲಿಸಲು ಇರುವ ಒಂದು ವೆಬ್ ಅಥವಾ ಆ್ಯಪ್. ಇಲ್ಲಿ ತಾವು ಪ್ರಯಾಣಿಸುವ ರೈಲಿನಲ್ಲಿ ಯಾವುದೇ ಸಮಸ್ಯೆಗಳಿದ್ದರೂ, ಈ ವೆಬ್ ಪೇಜ್‌ನಲ್ಲಿ ದೂರು ಸಲ್ಲಿಸಿದರೆ ತಕ್ಷಣಕ್ಕೆ ಪ್ರಯಾಣಿಕನಿರುವ ಬೋಗಿಗೆ ರೈಲ್ವೆ ಅಧಿಕಾರಿಗಳು ಬರ್ತಾರೆ. ಹೀಗೆ ಸೌತ್ ವೆಸ್ಟರ್ನ್ ರೈಲ್ವೆಗೆ ಪ್ರತಿ ತಿಂಗಳು 7 ರಿಂದ 8 ಸಾವಿರ ದೂರುಗಳು ಬರುತ್ತಿವೆ. ಬಂದ ದೂರುಗಳನ್ನ ಖುದ್ದು ಆರ್‌ಪಿಎಫ್ ಟೀಂ ಹಾಗೂ ಟಿಕೆಟ್ ಇನ್ಸ್ಪೆಕ್ಟರ್‌ಗಳೇ ಪರಿಶೀಲಿಸಿ, ಪರಿಹರಿಸುತ್ತಿದ್ದಾರೆ. ಇದನ್ನೂ ಓದಿ: ಬಂಡೀಪುರದಲ್ಲಿ ರೈಲ್ವೇ ಯೋಜನೆಗೆ ವಿರೋಧ – #SaveBandipur ಅಭಿಯಾನ ಆರಂಭ

  • ಸ್ವಚ್ಛತೆಯಲ್ಲಿ ದೇಶದಲ್ಲೇ ನಂಬರ್ ಒನ್ ನೈರುತ್ಯ ರೈಲ್ವೆ ವಿಭಾಗ

    ಸ್ವಚ್ಛತೆಯಲ್ಲಿ ದೇಶದಲ್ಲೇ ನಂಬರ್ ಒನ್ ನೈರುತ್ಯ ರೈಲ್ವೆ ವಿಭಾಗ

    – ದೇಶದ 17 ವಿಭಾಗಗಳನ್ನು ಹಿಂದಿಕ್ಕಿ ಸತತ 2ನೇ ಬಾರಿ ಪ್ರಶಸ್ತಿ ಗೆದ್ದ ನೈರುತ್ಯ ರೈಲ್ವೆ

    ಹುಬ್ಬಳ್ಳಿ: ವಿಶ್ವದಲ್ಲೇ ಉದ್ದದ ಪ್ಲಾಟ್‌ಫಾರ್ಮ್ ಹೊಂದಿರುವ ನೈರುತ್ಯ ರೈಲ್ವೆ ಇಲಾಖೆಗೆ ಈಗ ಮತ್ತೊಂದು ಗರಿ ಲಭಿಸಿದೆ. ನಿತ್ಯ ಕೋಟ್ಯಂತರ ಜನರಿಗೆ ಸುಖಕರ ಪ್ರಯಾಣ ಒದಗಿಸುವ ನೈರುತ್ಯ ವಿಭಾಗದ ಈಗ ದೇಶದ ಅತೀ‌ ಸ್ವಚ್ಛ ವಿಭಾಗದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಸತತವಾಗಿ ಎರಡನೇ ಬಾರಿ ಈ ಕೀರ್ತಿಗೆ ನೈರುತ್ಯ ರೈಲ್ವೆ ಇಲಾಖೆ ಭಾಜನವಾಗುತ್ತಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನಕ್ಕೆ ತನ್ನ ಕೊಡುಗೆ ನೀಡಿದೆ.

    ನೈರುತ್ಯ ರೈಲ್ವೆ ಇಲಾಖೆ ರೈಲ್ವೆ ಸಂಪರ್ಕದಲ್ಲಿ ತನ್ನ ವಿಭಿನ್ನತೆಯಿಂದ ಅತ್ಯುತ್ತಮ ಸೇವೆ ನೀಡುತ್ತಿದೆ. ದೇಶದ ಇತರೇ ವಿಭಾಗಗಳ ಪೈಕಿ ಜನರಿಗೆ ವಿಶೇಷ ಅನುಭೂತಿ ನೀಡುವಲ್ಲಿ ನೈರುತ್ಯ ಇಲಾಖೆ ಸದಾ ಮುಂಚೂಣಿಯಲ್ಲಿರುತ್ತದೆ. ಇಂತಹ ವಿಭಾಗಕ್ಕೆ ಮತ್ತೊಂದು ಗರಿ ಲಭ್ಯವಾಗಿದೆ. ಗಾಂಧಿ ಜಯಂತಿ ಅಂಗವಾಗಿ ಕೇಂದ್ರ ಸರ್ಕಾರ ಮತ್ತು ಭಾರತೀಯ ರೈಲ್ವೆ ಇಲಾಖೆ ನಡೆಸುವ ಸ್ವಚ್ಛತಾ ಪಾಕ್ಷಿಕ 2023 ರಲ್ಲಿ ನೈಋತ್ಯ ರೈಲ್ವೆ ಮೊದಲ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷವೂ ನೈಋತ್ಯ ರೈಲ್ವೆ ವಲಯ ಮೊದಲ ಸ್ಥಾನ ಪಡೆದುಕೊಂಡಿತ್ತು. ಈಗ ಸತತ ಎರಡನೇ ಬಾರಿಗೆ ಆಯ್ಕೆಯಾಗಿ ದಾಖಲೆ ಸೃಷ್ಟಿ ಮಾಡಿದೆ. ಇನ್ನೂ ಈಶ್ಯಾನ ಹಾಗೂ ದಕ್ಷಿಣ ಸೆಂಟ್ರಲ್ ರೈಲ್ವೆ ಎರಡು ಹಾಗೂ ಮೂರನೇ ಸ್ಥಾನ ಗಳಿಸಿವೆ. ಇದನ್ನೂ ಓದಿ: ದೇಶದ ವ್ಯವಸ್ಥೆಯಲ್ಲಿ ಕಳ್ಳರು ಒಂದೇ, ಸುಳ್ಳರು ಒಂದೇ.. ಭಗವಂತ ಇದ್ದಾನೆ: ಹೆಚ್‌ಡಿಕೆ

    ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಸ್ವಚ್ಛತಾ ಪಾಡಾ 2023 ಅಭಿಯಾನ ಆರಂಭವಾಗಿತ್ತು. ಈ ಅಭಿಯಾನದಲ್ಲಿ ರೈಲ್ವೆ ಇಲಾಖೆಯ ರೈಲ್ವೆ ನಿಲ್ದಾಣ, ರೈಲ್ವೆ ಹಳಿಗಳು, ಕಚೇರಿಗಳು ಸ್ವಚ್ಛವಾಗಿಡುವುದು, ಪ್ರಯಾಣಿಕರ ಹಾಗೂ ರೈಲ್ವೆ ಸಿಬ್ಬಂದಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ದಿನನಿತ್ಯದ ವರದಿಗಳ ಮೌಲ್ಯಮಾಪನದ ಆಧಾರದ ಮೇಲೆ ನೈಋತ್ಯ ರೈಲ್ವೆಯು ಎಲ್ಲಾ ವಲಯ ರೈಲ್ವೆಗಳಲ್ಲಿ ಅತ್ಯುತ್ತಮವೆಂದು ಗುರುತಿಸಲ್ಪಟ್ಟಿದೆ. ಗಾಂಧಿ ಜಯಂತಿ ಹಿನ್ನೆಲೆ ಒಂದು ತಿಂಗಳ ಕಾಲ ಸ್ವಚ್ಛತಾ ಪಾಕ್ಷಿಕ ಅಭಿಯಾನವನ್ನು ಹಮ್ಮಿಕೊಳ್ಳಲಾಗತ್ತೆ. ಪ್ರತಿ ವರ್ಷ ಭಾರತ ಸರ್ಕಾರ ಸ್ವಚ್ಛತೆಯೇ ಸೇವೆ ಅಡಿಯಲ್ಲಿ ಸ್ವಚ್ಛತಾ ಪಾಕ್ಷಿಕ ಆಚರಣೆ ಮಾಡಲಾಗತ್ತೆ. ಒಂದು ತಿಂಗಳ ಕಾಲ ಜಾಗೃತಿ ಅಭಿಯಾನ ಮೂಡಿಸೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗತ್ತೆ.

    ಈ ಬಾರಿ ವಿನೂತನವಾಗಿ ಪ್ಲಾಸ್ಟಿಕ್ ಅಸುರ ಅನ್ನೋ ಅಭಿಯಾನ ಹಮ್ಮಿಕೊಂಡಿತ್ತು. ಪ್ಲಾಸ್ಟಿಕ್ ಅಸುರ ಅಂದ್ರೆ ಬೆಂಗಳೂರ ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್‌ನಲ್ಲಿಯೇ ರಾವಣನ ವೇಷ ಹಾಕಿ ಜಾಗೃತಿ ಮೂಡಿಸಿದ್ದು, ಇನ್ನೊಂದು ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳಿಂದಲೇ ಪ್ರಯಾಣಿಕರು ಎಸೆಯಲ್ಪಟ್ಟ ನೀರಿನ ಬಾಟಲ್ ಕಲೆಕ್ಟ್ ಮಾಡಿ ಭೂಮಿಯ ಆಕೃತಿ ರಚಿಸಲಾಗಿತ್ತು. ಈ ಮೂಲಕ ಪ್ಲಾಸ್ಟಿಕ್ ಭೂಮಿಗೆ ಹೇಗೆ ಕಂಟಕವಾಗತ್ತೆ ಅನ್ನೋದನ್ನ ತೋರಿಸಲಾಗಿತ್ತು. ಈ ಎರಡು ಅಭಿಯಾನಗಳು ವಿಶೇಷ ಅನಿಸಿದ ಹಿನ್ನೆಲೆ ಮೊದಲ ಪ್ರಶಸ್ತಿ ಸಿಕ್ಕಿದೆ. ಇದನ್ನೂ ಓದಿ: ಪುತ್ರನ ಚುನಾವಣೆಗೆ ಸಿಎಂ ಇಬ್ರಾಹಿಂ ನನ್ನಿಂದ ಹಣ ಪಡೆದಿದ್ದಾರೆ: ಟಿಎ ಶರವಣ

    ಸೆಪ್ಟೆಂಬರ್ 16 ರಂದು ಬೆಂಗಳೂರಿನ ಕೆಎಸ್‌ಆರ್‌ ರೈಲ್ವೆ ನಿಲ್ದಾಣದಲ್ಲಿ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ, ಸ್ವಚ್ಛತಾ ಪಾಕ್ಷಿಕ -2023 ಗೆ ಚಾಲನೆ ನೀಡಿದ್ದರು. ರೈಲ್ವೆ ನಿಲ್ದಾಣಗಳು ಮತ್ತು ಇತರ ಆವರಣಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಹೆಚ್ಚಿಸಲು ಸಕ್ರಿಯವಾಗಿ ಭಾಗವಹಿಸಿದವು. ನೈಋತ್ಯ ರೈಲ್ವೆ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು 915 ಕಾರ್ಯಕ್ರಮ ಹಮ್ಮಿಕೊಂಡಿದ್ದರು.

    ಈ ಅಭಿಯಾನದಲ್ಲಿ 23,744 ಜನರು ಭಾಗವಹಿಸಿದ್ದು, ಬರೋಬ್ಬರಿ 5.27 ಕೋಟಿ ಚ.ಕಿಮೀ ಪ್ರದೇಶ ಸ್ವಚ್ಛಗೊಳಿಸಿದ್ದಾರೆ. ಈ ಸ್ವಚ್ಛತಾ ಅಭಿಯಾನದಲ್ಲಿ 252 ಸಸಿಗಳನ್ನ ನೆಟ್ಟು, 17 ಟನ್ ಪ್ಲಾಸ್ಟಿಕ್ ತೆಗೆಯಲಾಗಿದೆ. 22 ಟನ್ ತ್ಯಾಜ್ಯ ಸಂಗ್ರಹಿಸಲಾಗಿದೆ. ಸ್ವಚ್ಛತೆ ಕುರಿತು ರೈಲ್ವೆ ನಿಲ್ದಾಣಗಳಲ್ಲಿ ನಾಟಕ ಮಾಡುವ ಮೂಲಕ ಜಾಗೃತಿ ಮೂಡಿಸಲಾಗಿದೆ. ಪ್ರಯಾಣಿಕರಿಗೆ ಬಿತ್ತಿ ಪತ್ರ ಹಾಗೂ ಕರಪತ್ರ ಹಂಚಲಾಗಿದೆ. ಒಟ್ಟಿನಲ್ಲಿ ಸತತ ಎರಡು ವರ್ಷಗಳ ಕಾಲ ನೈಋತ್ಯ ರೈಲ್ವೆ ವಲಯ ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು ಸಂತಸದ‌ ಸಂಗತಿ.

  • ಪ್ಯಾಸೆಂಜರ್ ಆದಾಯದಲ್ಲಿ ನೈರುತ್ಯ ರೈಲ್ವೆ 2,755 ಕೋಟಿ ರೂ. ದಾಖಲೆ

    ಪ್ಯಾಸೆಂಜರ್ ಆದಾಯದಲ್ಲಿ ನೈರುತ್ಯ ರೈಲ್ವೆ 2,755 ಕೋಟಿ ರೂ. ದಾಖಲೆ

    ಹುಬ್ಬಳ್ಳಿ: ಭಾರತೀಯ ರೈಲ್ವೆಯ (Railway) ಎಲ್ಲಾ ವಲಯಗಳ ಪೈಕಿ ನೈರುತ್ಯ ರೈಲ್ವೆ (South Western Railway) ಸಮಯಪಾಲನೆಯಲ್ಲಿ ಶೇ. 93.12ರಷ್ಟು ಪಡೆದು 3ನೇ ಸ್ಥಾನದಲ್ಲಿದೆ. 2022-23ರ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆ 150.34 ಮಿಲಿಯನ್‌ಗೂ ಹೆಚ್ಚು ಪ್ರಯಾಣಿಕರನ್ನು (Passengers) ಸಾಗಿಸುವ ಮೂಲಕ 2,755.35 ಕೋಟಿ ರೂ. ಆದಾಯ ಗಳಿಸಿದೆ. ನೈರುತ್ಯ ರೈಲ್ವೆ ವಲಯದ ಇತಿಹಾಸದಲ್ಲಿ ಇದು ಸಾರ್ವಕಾಲಿಕ ಹಾಗೂ ಅತ್ಯಧಿಕ ಪ್ರಯಾಣಿಕರ ಆದಾಯವಾಗಿರುತ್ತದೆ.

    2022-23ನೇ ಹಣಕಾಸು ವರ್ಷದಲ್ಲಿ ನೈರುತ್ಯ ರೈಲ್ವೆ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ರೈಲು ಸೇವೆ ಒದಗಿಸುವ ಉದ್ದೇಶದಿಂದ ಹಾಗೂ ಸಮಯಪಾಲನೆಯ ಸುಧಾರಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪ್ರಯಾಣಿಕರ ಮೂಲಸೌಕರ್ಯಗಳ ಉನ್ನತೀಕರಣ ಕಾರ್ಯಗಳನ್ನು ಕೈಗೊಂಡ ಹೊರತಾಗಿಯೂ ಸಮಯ ಪಾಲನೆಯಲ್ಲಿ ಅತ್ಯುತ್ತಮ ಸಾಧನೆ ಗೈದಿದೆ. ಇದನ್ನೂ ಓದಿ: Amul Vs Nandini: ಅಮುಲ್‌ಗೆ KMF ಸೆಡ್ಡು – ಆನ್‌ಲೈನ್‌ನಲ್ಲೂ ನಂದಿನಿ ಉತ್ಪನ್ನ ಸೇಲ್ 

    2022-23ರ ಆರ್ಥಿಕ ವರ್ಷದ ಅವಧಿಯಲ್ಲಿ 116 ರೈಲುಗಳ ವೇಗವನ್ನು ಹೆಚ್ಚಿಸಲಾಗಿದ್ದು, 2,816 ನಿಮಿಷಗಳ ಸಮಯ ಉಳಿಸಿದಂತಾಗಿದೆ. ವಿದ್ಯುದ್ದೀಕರಣ ವೇಗಪಡೆದುಕೊಂಡಿರುವುದರಿಂದ ಮಾಲಿನ್ಯ ಕಡಿಮೆಗೊಳಿಸಲು ಮತ್ತು ಡೀಸೆಲ್ ಉಳಿಸಲು 24 ರೈಲುಗಳನ್ನು ವಿದ್ಯುತ್‌ಗೆ ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ: ಏ.18ವರೆಗೆ ಹೊಸ ಮೀಸಲಾತಿ ಅನ್ವಯ ನೇಮಕಾತಿ, ಪ್ರವೇಶಾತಿ ನೀಡುವಂತಿಲ್ಲ: ಮುಸ್ಲಿಮರು, ಒಕ್ಕಲಿಗ & ಲಿಂಗಾಯತರ ಪರ ವಾದ ಏನಿತ್ತು?

    ರಜೆ ಮತ್ತು ಹಬ್ಬದ ಸಮಯದಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ 291 ವಿಶೇಷ ರೈಲುಗಳನ್ನು (ಒಟ್ಟು 3,028 ಟ್ರಿಪ್‌ಗಳು) ವಿವಿಧ ಸ್ಥಳಗಳಿಗೆ ಓಡಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 253 ಬೋಗಿಗಳನ್ನು ಶಾಶ್ವತವಾಗಿ ಮತ್ತು 224 ಬೋಗಿಗಳನ್ನು ತಾತ್ಕಾಲಿಕವಾಗಿ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಬಿಜೆಪಿಯಿಂದ ಟಿಕೆಟ್‌ ಸಿಗ್ಲಿಲ್ಲ ಅಂತಾ ಬೆಂಬಲಿಗರ ಸಭೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಟಿಕೆಟ್‌ ವಂಚಿತೆ ನಾಗಶ್ರೀ

    ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ನೈರುತ್ಯ ರೈಲ್ವೆ ಸದಾ ಬದ್ಧವಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಅನೇಕ ಮಾರ್ಗಗಳಲ್ಲಿ ಹಲವಾರು ವಿಶೇಷ ರೈಲುಗಳ ಹೆಚ್ಚುವರಿ ಸೇವೆಗಳನ್ನು ಒದಗಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ 2,330ಕ್ಕೂ ಹೆಚ್ಚು ಬೋಗಿಗಳನ್ನು ಹೆಚ್ಚುವರಿಯಾಗಿ ಜೋಡಿಸಲಾಗಿದೆ ಎಂದು ಪ್ರಧಾನ ಮುಖ್ಯ ಕಾರ್ಯಾಚರಣೆ ವ್ಯವಸ್ಥಾಪಕ ಹರಿಶಂಕರ್ ವರ್ಮಾ ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೊಂದು ಬಿಜೆಪಿ ವಿಕೆಟ್ ಪತನ 

    ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್, ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಯೋಜನೆ ಮತ್ತು ರೈಲುಗಳನ್ನು ಓಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಈ ಸಾಧನೆಗೆ ಸಹಕರಿಸಿದ ವಿಭಾಗವನ್ನು ಶ್ಲಾಘಿಸಿದ್ದಾರೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ವರುಣಾ, ಚಾಮರಾಜನಗರ ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ: ಪುಟ್ಟರಂಗಶೆಟ್ಟಿ

  • Union Budget 2023ː ಕರ್ನಾಟಕಕ್ಕೆ ಬಂಪರ್ ಕೊಡುಗೆ – ರೈಲ್ವೆಗೆ ದಾಖಲೆಯ 7,561 ಕೋಟಿ ಅನುದಾನ

    Union Budget 2023ː ಕರ್ನಾಟಕಕ್ಕೆ ಬಂಪರ್ ಕೊಡುಗೆ – ರೈಲ್ವೆಗೆ ದಾಖಲೆಯ 7,561 ಕೋಟಿ ಅನುದಾನ

    ನವದೆಹಲಿ: ಈ ಬಾರಿ ಕೇಂದ್ರ ಬಜೆಟ್‌ನಲ್ಲಿ (Union Budget 2023) ಕರ್ನಾಟಕದ ರೈಲ್ವೆ ಇಲಾಖೆಗೆ (Karnataka Railway Department) ಬಂಪರ್ ಕೊಡುಗೆ ಸಿಕ್ಕಿದೆ. ಈ ಬಾರಿ ರಾಜ್ಯದ ರೈಲ್ವೇ ಯೋಜನೆಗಳಿಗೆ (Railway Projects) ಒಟ್ಟು 7,561 ಕೋಟಿ ಅನುದಾನ ಬಜೆಟ್‌ನಲ್ಲಿ ಘೋಷಿಸಲಾಗಿದೆ.

    2009 ರಿಂದ 2014ರ ಅವಧಿಯಲ್ಲಿ ನೀಡಿದಕ್ಕೆ ಹೋಲಿಸಿದರೆ, ಈ ಬಾರಿ ಶೇ.9 ರಷ್ಟು ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಅಲ್ಲದೇ ನೈರುತ್ಯ ರೈಲ್ವೆ ವಲಯಕ್ಕೆ 9,200 ಕೋಟಿ ರೂ. ನೆರವು ನೀಡಿದ್ದು, ಅದರಲ್ಲಿ ಕರ್ನಾಟಕ ರಾಜ್ಯವೊಂದಕ್ಕೆ 7,561 ಕೋಟಿ ರೂ. ದೊರೆತಿದೆ. ಇನ್ನುಳಿದ ಮೊತ್ತ ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ಸಿಕ್ಕಿದೆ.

    ಬಹುಬೇಡಿಕೆಯ 10 ಮಾರ್ಗಗಳ ಕಾಮಗಾರಿ, ವಿದ್ಯುದೀಕರಣ, ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವುದು ಹಾಗೂ ಜೋಡಿ ಮಾರ್ಗ (ಡಬ್ಲಿಂಗ್) ಯೋಜನೆಗಳ ನಿರ್ಮಾಣಕ್ಕೆ ಅನುದಾನ ಬಳಸಿಕೊಳ್ಳಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: 

    ಹೊಸ ರೈಲ್ವೆ ಮಾರ್ಗ: ನೈರುತ್ಯ ರೈಲ್ವೆ ವಲಯಕ್ಕೆ ಈಗಾಗಲೇ ಘೋಷಣೆಯಾದ ಹೊಸ ಮಾರ್ಗಗಳಿಗೆ ಒಟ್ಟಾರೆ 2,423 ಕೋಟಿ ಅನುದಾನ ಮಂಜೂರಾಗಿದ್ದು, ಅದರಲ್ಲಿ ಕರ್ನಾಟಕಕ್ಕೆ 1,408 ಕೋಟಿ ರೂ. ದೊರೆತಿದೆ. 865 ಕೋಟಿ ರೂ.ಗಳನ್ನು ಮುಂದೆ ಘೋಷಣೆಯಾಗುವ ಹೊಸ ಮಾರ್ಗಕ್ಕೆ ಮೀಸಲಿಡಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ (Sanjeev Kishore) ತಿಳಿಸಿದ್ದಾರೆ.

    ಮುಖ್ಯವಾಗಿ ಈ ಬಾರಿ ಅಮೃತ್ ಭಾರತ ಯೋಜನೆ ಅಡಿಯಲ್ಲಿ ರಾಜ್ಯದ ಹುಬ್ಬಳ್ಳಿ, ಧಾರವಾಡ, ಚಾಮರಾಜನಗರ, ಹರಿಹರ, ಹಾಸನ, ಶಿವಮೊಗ್ಗ ಸೇರಿ 52 ರೈಲ್ವೆ ನಿಲಾಣಗಳನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

    ರೈಲ್ವೇ ಮಾರ್ಗಗಳ ವಿದ್ಯುದೀಕರಣ: ಈ ಬಾರಿ ಅನುದಾನದಲ್ಲಿ ಗದಗ – ಹೊಟಗಿ, ಚಿಕ್ಕಬಾಣಾವರ – ಹುಬ್ಬಳ್ಳಿ, ಬಿರೂರು – ತಾಳಗುಪ್ಪ, ಹಾಸನ – ಮಂಗಳೂರು, ಮೀರಜ್ – ಲೋಂಡ, ಹೊಸಪೇಟೆ – ಹುಬ್ಬಳ್ಳಿ – ವಾಸ್ಕೋಡಗಾಮ, ಚಿಕ್ಕಬಾಣಾವರ – ಹಾಸನ ಜಿಲ್ಲೆಗಳ ನಡುವೆ ರೈಲ್ವೆ ಮಾರ್ಗಗಳ ವಿದ್ಯುದೀಕರಣ ಯೋಜನೆ ಕೈಗೊಳ್ಳಲಾಗುತ್ತದೆ.

    ರಾಜ್ಯಕ್ಕೆ 10 ಹೊಸ ರೈಲ್ವೇ ಮಾರ್ಗ: ಈ ಬಾರಿ 10 ಹೊಸ ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ. 350 ಕೋಟಿ ರೂ.ಗಳಲ್ಲಿ ಗದಗ (ತಳಕಲ್) – ವಾಡಿ, 300 ಕೋಟಿ ರೂ.ಗಳಲ್ಲಿ ಗಿಣಿಗೇರಾ – ರಾಯಚೂರು, 420.85 ಕೋಟಿ ರೂ.ಗಳಲ್ಲಿ ತುಮಕೂರು – ದಾವಣಗೆರೆ (ಚಿತ್ರದುರ್ಗ ಮಾರ್ಗ), 350 ಕೋಟಿ ರೂ.ಗಳಲ್ಲಿ ತುಮಕೂರು – ರಾಯದುರ್ಗ (ಕಲ್ಯಾಣ ದುರ್ಗ ಮಾರ್ಗ), 360 ಕೋಟಿ ರೂ.ಗಳಲ್ಲಿ ಬಾಗಲಕೋಟೆ – ಕುಡಚಿ, 150 ಕೋಟಿ ರೂ.ಗಳಲ್ಲಿ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು, 10 ಕೋಟಿ ರೂ.ಗಳಲ್ಲಿ ಬೆಳಗಾವಿ – ಧಾರವಾಡ, 200 ಕೋಟಿ ರೂ.ಗಳಲ್ಲಿ ಮಾರಿಕುಪ್ಪಂ – ಕುಪ್ಪಂ, 145 ಕೋಟಿ ರೂ.ಗಳಲ್ಲಿ ಕಡೂರು – ಚಿಕ್ಕಮಗಳೂರು – ಹಾಸನ ಹಾಗೂ 20 ಕೋಟಿ ರೂ.ಗಳಲ್ಲಿ ಮಲಗೂರು – ಪಾಲಸಮುದ್ರಂ ಹೊಸ ಮಾರ್ಗಗಳನ್ನು ನಿರ್ಮಿಸಲಾಗುತ್ತದೆ.

    7 ಮಾರ್ಗಗಳಲ್ಲಿ ಡಬ್ಲಿಂಗ್: ಇನ್ನುಳಿದಂತೆ ಗದಗ – ಹೊಟಗಿ ಬಯ್ಯಪ್ಪನಹಳ್ಳಿ – ಹೊಸೂರು, ಯಶವಂತಪುರ – ಚನ್ನಸಂದ್ರ, ಲೋಂಡಾ – ಮೀರಜ್, ಹುಬ್ಬಳ್ಳಿ – ಚಿಕ್ಕಜಾಜೂರು, ಬೆಂಗಳೂರು ದಂಡು – ವೈಟ್‌ಫೀಲ್ಡ್, ಹೊಸಪೇಟೆ – ತಿನೈಘಾಟ್ – ವಾಸ್ಕೋಡಗಾಮ ನಡುವೆ ಜೋಡಿ ಮಾರ್ಗಗಳನ್ನು ನಿರ್ಮಿಸಲಾಗುತ್ತದೆ ಎಂದು ಸಂಜೀವ್ ಕಿಶೋರ್ ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೈಋತ್ಯ ರೈಲ್ವೆ ಸಾಧನೆ- ಪ್ಯಾಸೆಂಜರ್ ರೈಲಿನಿಂದ ದಾಖಲೆ ಆದಾಯ ಗಳಿಕೆ

    ನೈಋತ್ಯ ರೈಲ್ವೆ ಸಾಧನೆ- ಪ್ಯಾಸೆಂಜರ್ ರೈಲಿನಿಂದ ದಾಖಲೆ ಆದಾಯ ಗಳಿಕೆ

    ಹುಬ್ಬಳ್ಳಿ: ವಿಶ್ವದ ಅತಿದೊಡ್ಡ ರೈಲ್ವೆ ಫ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೈಋತ್ಯ ರೈಲ್ವೆ ವಲಯ, ಈಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ದಾಖಲೆಯ ಮಟ್ಟದಲ್ಲಿ ಆದಾಯವನ್ನು ಗಳಿಸಿದೆ.

    ಇಷ್ಟು ದಿನ ರೈಲ್ವೆ ಇಲಾಖೆ ಆದಾಯದ ಮೂಲ ಸರಕು ಸಾಗಾಣಿಕೆಯಾಗಿತ್ತು. ಆದರೆ ಈ ಮಾತನ್ನು ನೈಋತ್ಯ ರೈಲ್ವೆ ವಿಭಾಗ ಸುಳ್ಳಾಗಿಸಿದೆ. ಕೇವಲ ಪ್ಯಾಸೆಂಜರ್ ರೈಲು(Passenger Train) ಓಡಿಸಿಯೇ ಸಾವಿರಾರು ಕೋಟಿ ರೂ. ಲಾಭ ಮಾಡಿದ್ದು, ಈ ಮೂಲಕ ನೂತನ ದಾಖಲೆಯನ್ನು ನಿರ್ಮಾಣವಾಗಿದೆ.

    ಈ ವರ್ಷದ ಏಪ್ರಿಲ್‍ನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ಪ್ಯಾಸೆಂಜರ್ ರೈಲು(Train) ಸಂಚಾರದಿಂದ ರೈಲ್ವೆಗೆ ಬರೊಬ್ಬರಿ 1,048 ಕೋಟಿ ರೂ. ಲಾಭವಾಗಿದೆ. ಇದು ನೈಋತ್ಯ ರೈಲ್ವೆ ವಿಭಾಗದ ಇತಿಹಾಸದಲ್ಲಿ ಮೊದಲ ದಾಖಲೆಯಾಗಿದೆ. ಕಳೆದ ವರ್ಷ ಏಪ್ರಿಲ್‍ನಿಂದ ಆಗಸ್ಟ್‌ವರೆಗೆ ಬರೀ 450 ಕೋಟಿ ರೂ. ಆದಾಯ ಬಂದಿತ್ತು. ಇದನ್ನೂ ಓದಿ: ಟೋಲ್ ಪಾವತಿ ವಿಚಾರದಲ್ಲಿ ಕಿರಿಕ್ – ಜುಟ್ಟು ಹಿಡಿದು ಕಿತ್ತಾಡಿದ ಮಹಿಳೆಯರು

    ಕೋವಿಡ್(Covid) ಸಂದರ್ಭದಲ್ಲಿ ಬಹುತೇಕ ಪ್ಯಾಸೆಂಜರ್ ರೈಲುಗಳ ಸೇವೆ ಬಂದ್ ಮಾಡಲಾಗಿತ್ತು. ಇದು ಇಲಾಖೆಗೆ ಸಾಕಷ್ಟು ಹೊಡೆತ ನೀಡಿದ್ದು ಸುಳ್ಳಲ್ಲ. ಇದನ್ನೆ ಸವಾಲಾಗಿ ಸ್ವೀಕರಿಸಿದ ಆಡಳಿತ ವಿಭಾಗ ಕೋವಿಡ್ ನಂತರ ಚೇತರಿಕೆಗೆ ಹಲವಾರು ಮಾರ್ಗಗಳನ್ನು ಕಂಡುಕೊಂಡ ಪರಿಣಾಮ ಈ ಸಾಧನೆಯಾಗಿದೆ. ಇದನ್ನೂ ಓದಿ:  ಮೇಲ್ಜಾತಿಯ ಜನರಿಗೆ ಸೇರಿದ ಮಡಿಕೆಯಿಂದ ನೀರು ಕುಡಿದ ದಲಿತನ ಮೇಲೆ ಹಲ್ಲೆ

    Live Tv
    [brid partner=56869869 player=32851 video=960834 autoplay=true]

  • ಕೇಂದ್ರದಿಂದ ರಾಜ್ಯದ ರೈಲ್ವೆಗೆ ಬಂಪರ್ ಕೊಡುಗೆ: ಸಿ.ಸಿ. ಪಾಟೀಲ್ ಅಭಿನಂದನೆ

    ಕೇಂದ್ರದಿಂದ ರಾಜ್ಯದ ರೈಲ್ವೆಗೆ ಬಂಪರ್ ಕೊಡುಗೆ: ಸಿ.ಸಿ. ಪಾಟೀಲ್ ಅಭಿನಂದನೆ

    ಬೆಂಗಳೂರು: ನೈರುತ್ಯ ರೈಲ್ವೆ ವಲಯಕ್ಕೆ ಪ್ರಸಕ್ತ ಮುಂಗಡ ಪತ್ರದಲ್ಲಿ ಕೇಂದ್ರ ಸರ್ಕಾರವು ಅತೀ ಹೆಚ್ಚು ಅಂದರೆ 6,900 ಕೋಟಿ ರೂ.ಗಳ ಅನುದಾನವನ್ನು ಘೋಷಿಸಿ ಕರ್ನಾಟಕಕ್ಕೆ ಸಿಂಹಪಾಲು ನೀಡಿರುವುದರಿಂದ ನಮ್ಮ ರಾಜ್ಯದ ರೈಲ್ವೆ ಕ್ಷೇತ್ರಕ್ಕೆ ಕೇಂದ್ರ ಸರ್ಕಾರವು ಬಹುದೊಡ್ಡ ಉಡುಗೊರೆ ನೀಡಿದಂತಾಗಿದೆ ಎಂದು ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.

    ಇಷ್ಟು ದೊಡ್ಡ ಪ್ರಮಾಣದ ಅನುದಾನ ದೊರೆತಿರುವುದು ನೈರುತ್ಯ ರೈಲ್ವೆಯ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇಕಡ 43ರಷ್ಟು ಹೆಚ್ಚಿನ ಅನುದಾನ ಘೋಷಣೆಯಾಗಿದ್ದು, ಈ ಬಗ್ಗೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವರು ಹಾಗೂ ವಿಶೇಷ ಪರಿಶ್ರಮ ವಹಿಸಿರುವ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದಿಸಿದ್ದಾರೆ. ಇದನ್ನೂ ಓದಿ: ನಕ್ಸಲ್ ನಿಗ್ರಹ ದಳ ಸಿಬ್ಬಂದಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿದ ಸರ್ಕಾರ

    ಈ ಹೆಚ್ಚಿನ ಅನುದಾನದಿಂದಾಗಿ ನೂತನ ರೈಲ್ವೆ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ, ರೈಲ್ವೆ ಮಾರ್ಗಗಳ ಸಾಮರ್ಥ್ಯ ವೃದ್ಧಿಗೆ, ಹೊಸ ರೈಲುಗಳ ಸಂಚಾರಕ್ಕೆ ಮತ್ತು ಮಾರ್ಗಗಳ ವಿದ್ಯುದೀಕರಣಕ್ಕೆ ಅನುಕೂಲವಾಗಲಿದೆ. ಉತ್ತರ ಕರ್ನಾಟಕಕ್ಕೆ ಸೂಪರ್ ಕೊಡುಗೆ ಈ ಬಾರಿ ಉತ್ತರ ಕರ್ನಾಟಕ ಭಾಗದ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಆದ್ಯತೆ ನೀಡಿರುವುದು ವಿಶೇಷವಾಗಿದೆ ಎಂದು ಪ್ರಶಂಸಿಸಿದ್ದಾರೆ.

    ಧಾರವಾಡ ಕಿತ್ತೂರು ಬೆಳಗಾವಿ ಹೊಸ ಮಾರ್ಗಕ್ಕೆ ರೂ. 20 ಕೋಟಿ, ಗದಗ – ವಾಡಿ ಹೊಸ ಮಾರ್ಗಕ್ಕೆ ರೂ.187 ಕೋಟಿ, ಬಾಗಲಕೋಟೆ – ಕುಡಚಿ, ತುಮಕೂರು-ದಾವಣಗೆರೆ, ಶಿವಮೊಗ್ಗ-ರಾಣೆಬೆನ್ನೂರು ಈ 3 ಹೊಸ ಮಾರ್ಗಗಳಿಗೆ ತಲಾ 50 ಕೋಟಿ ರೂ.ಗಳನ್ನು ಹಂಚಿಕೆ ಮಾಡಿರುವುದು, ಗದಗ್ – ಹೂಟಗಿ ಡಬ್ಲಿಂಗ್ ಲೈನ್‍ಗಾಗಿ 200 ಕೋಟಿ ರೂ. ಹಾಗೂ ಹುಬ್ಬಳ್ಳಿ- ಚಿಕ್ಕಜಾಜೂರು ಡಬ್ಲಿಂಗ್ ಲೈನ್‍ಗಾಗಿ 210 ಕೋಟಿ ರೂಪಾಯಿ ಅನುದಾನ ದೊರೆತಿರುವುದು ಸೇರಿದಂತೆ ಅನೇಕ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಕೇಂದ್ರ ಸರ್ಕಾರವು ಕರ್ನಾಟಕದ ಮೇಲಿನ ತನ್ನ ಮಮತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಶ್ಲಾಘಿಸಿದ್ದಾರೆ.

    train

    ಇದಲ್ಲದೇ ದೇಶಾದ್ಯಂತ 400 ವಂದೇ ಭಾರತ ರೈಲುಗಳ ಸಂಚಾರ ಪ್ರಾರಂಭವಾಗಲಿದ್ದು, ಇವುಗಳಲ್ಲಿ ಒಂದು ರೈಲನ್ನು ಧಾರವಾಡ ಮತ್ತು ಬೆಂಗಳೂರು ನಡುವೆ ಸಂಚರಿಸಲು ಅವಕಾಶ ಮಾಡಿಕೊಡಬೇಕೆಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಈಗಾಗಲೇ ಮನವಿ ಮಾಡಿಕೊಂಡಿದ್ದು, ಇದಕ್ಕೆ ಕೇಂದ್ರವು ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ಇದು ನಮ್ಮ ರಾಜ್ಯಕ್ಕೆ ದೊಡ್ಡ ವರದಾನವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

  • ಪ್ರಕೃತಿ ಸೌಂದರ್ಯ ಸವಿಯಿರಿ: ಬೆಂಗಳೂರು-ಶಿವಮೊಗ್ಗ ರೈಲಿಗೆ ವಿಸ್ಟಾಡೋಮ್ ಕೋಚ್

    ಪ್ರಕೃತಿ ಸೌಂದರ್ಯ ಸವಿಯಿರಿ: ಬೆಂಗಳೂರು-ಶಿವಮೊಗ್ಗ ರೈಲಿಗೆ ವಿಸ್ಟಾಡೋಮ್ ಕೋಚ್

    ಬೆಂಗಳೂರು: ವಿಸ್ಟಾಡೋಮ್ ಕೋಚ್ ಅನ್ನು ಬೆಂಗಳೂರು-ಶಿವಮೊಗ್ಗ ನಡುವೆ ಸಂಚರಿಸುವ ರೈಲಿಗೆ ಪ್ರಾಯೋಗಿಕವಾಗಿ ಅಳವಡಿಸಲು ನೈಋತ್ಯ ರೈಲ್ವೆ ಮೊದಲ ಬಾರಿಗೆ ಮುಂದಾಗಿದೆ. ಈ ಮೂಲಕ ಮಲೆನಾಡಿನ ಪ್ರಕೃತಿ ಸೌಂದರ್ಯ ಸವಿಯಲು ಪ್ರಯಾಣಿಕರಿಗೆ ಅವಕಾಶ ದೊರೆಯಲಿದೆ.

    ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲಿಗೆ ಅಳವಡಿಸಲಾಗಿರುವ ಗಾಜಿನ ಛಾವಣಿಯನ್ನು ಹೊಂದಿರುವ ವಿಸ್ಟಾಡೋಮ್ ಕೋಚ್ ಅನ್ನು ಈ ಮಾರ್ಗದಲ್ಲೂ ಅಳವಡಿಸುವ ಮೂಲಕ ಪ್ರಯಾಣಿಕರು ನಿಸರ್ಗದ ಸೌಂದರ್ಯ ಸವಿಯುವ ಅವಕಾಶ ಕಲ್ಪಿಸಲಾಗುವುದು ಎಂದು ನೈಋತ್ಯ ರೈಲ್ವೆಯು ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಪೀಣ್ಯ ಫ್ಲೈಓವರ್ ಸಂಚಾರ ಬಂದ್ – ಬದಲಿ ಮಾರ್ಗ ಇಲ್ಲಿದೆ

    ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲು ಸಂಖ್ಯೆ 16579/ 16580 ಯಶವಂತಪುರ- ಶಿವಮೊಗ್ಗ ಟೌನ್ – ಯಶವಂತಪುರ ಇಂಟರ್‍ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ವಿಸ್ಟಾಡೋಮ್ ಕೋಚ್ ಆಳವಡಿಕೆ ಮಾಡಲಾಗುತ್ತದೆ.

    ಪ್ರತಿದಿನ ಸಂಚಾರ ನಡೆಸುವ ರೈಲುಗಳಿಗೆ ಹವಾನಿಯಂತ್ರಿತ ವಿಸ್ಟಾಡೋಮ್ ಬೋಗಿಗಳನ್ನು ತಾತ್ಕಾಲಿಕವಾಗಿ ಅಳವಡಿಸಲಾಗುವುದು. ಇದು ಯಶಸ್ವಿಯಾದರೆ ಇದನ್ನು ಕಾಯಂ ಆಗಿ ಉಳಿಸಿಕೊಳ್ಳುವ ಬಗ್ಗೆ ಗಮನ ಹರಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಇದನ್ನೂ ಓದಿ: ಕ್ರಿಸ್‍ಮಸ್ ಮೂಡ್ ನಲ್ಲಿ ಸ್ಯಾಂಡಲ್‍ವುಡ್ ಸಿಂಡ್ರೆಲಾ ಕಿಡ್ಸ್

    ಶಿವಮೊಗ್ಗ ಮತ್ತು ಯಶವಂತಪುರ ರೈಲಿಗೆ ಅಳವಡಿಸಲಾಗುವ ವಿಸ್ಟಾಡೋಮ್ ಬೋಗಿಯ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಹೆಚ್ಚಾಗಿರುತ್ತದೆ. ಇದಕ್ಕೆ ಕಾರಣ ಈ ಬೋಗಿಯಲ್ಲಿ ಕೇವಲ 44 ಆಸನಗಳು ಇರುತ್ತವೆ. ಅಲ್ಲದೇ ಸೀಟುಗಳು 180 ಡಿಗ್ರೀ ತಿರುಗಲಿದ್ದು, ಸಂಪೂರ್ಣ ಹವಾ ನಿಯಂತ್ರಿತವಾಗಿರುತ್ತವೆ.

  • ಸಾರ್ವಜನಿಕ ಸೇವೆಗೆ ನೈರುತ್ಯ ರೈಲ್ವೆ ಸನ್ನದ್ಧ- ಮುಂಜಾಗ್ರತಾ ಕ್ರಮ ಹೇಗಿದೆ ಗೊತ್ತಾ?

    ಸಾರ್ವಜನಿಕ ಸೇವೆಗೆ ನೈರುತ್ಯ ರೈಲ್ವೆ ಸನ್ನದ್ಧ- ಮುಂಜಾಗ್ರತಾ ಕ್ರಮ ಹೇಗಿದೆ ಗೊತ್ತಾ?

    – ಶೇ.33 ಸಿಬ್ಬಂದಿಯೊಂದಿಗೆ ಕಾರ್ಯಾರಂಭ

    ಹುಬ್ಬಳ್ಳಿ: ಕೊರೊನಾ ಲಾಕ್‍ಡೌನ್‍ನಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಡಿಲಿಕೆ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆಯ ಆಡಳಿತ ಕಚೇರಿ, ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಗ್ಯಾರೇಜ್ ಮತ್ತು ವರ್ಕ್‌ಶಾಪ್ ಮೇ 4ರಿಂದ ಶೇ.33 ಸಿಬ್ಬಂದಿಯೊಂದಿಗೆ ಕೆಲಸ ಆರಂಭಿಸಿವೆ.

    ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತೆ ಕೆಲಸಕ್ಕೆ ಹಾಜರಾಗುತ್ತಿರುವುದರಿಂದ ಕೋವಿಡ್-19 ವೈರಸ್ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹುಬ್ಬಳ್ಳಿಯಲ್ಲಿನ ಗ್ಯಾರೇಜ್ ಮತ್ತು ವರ್ಕ್‌ಶಾಪ್ ಪ್ರವೇಶದ್ವಾರದಲ್ಲಿ ದೇಹ ತಾಪಮಾನ ಸ್ಕ್ರೀನಿಂಗ್ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಾರ್ಯಾಗಾರಕ್ಕೆ ಪ್ರವೇಶಿಸುವ ಎಲ್ಲ ಸಿಬ್ಬಂದಿಯನ್ನು ಪರೀಕ್ಷಿಸಲಾಗುತ್ತಿದೆ. ಇನ್‍ಫ್ರಾರೆಡ್ ಸ್ಮಾರ್ಟ್ ಕ್ಯಾಮೆರಾದೊಂದಿಗೆ ದೇಹದ ಉಷ್ಣಾಂಶ ಅಳೆಯುವ ಥರ್ಮಲ್ ಸ್ಕ್ರೀನಿಂಗ್ ಬಳಸಲಾಗುತ್ತಿದೆ. ಈ ಮೂಲಕ ದಕ್ಷತೆಯೊಂದಿಗೆ ಸುರಕ್ಷಿತ ಸ್ಥಳಗಳಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ.

    ಇನ್‍ಫ್ರಾರೆಡ್ ಸ್ಮಾರ್ಟ್ ಕ್ಯಾಮೆರಾಗಳು ಒಂದೇ ಬಾರಿಗೆ 20 ಜನರ ದೇಹದ ಉಷ್ಣಾಂಶ ಅಳೆಯುವ ಸಾಮರ್ಥ್ಯ ಹೊಂದಿದೆ. ಯಾವುದೇ ಸಿಬ್ಬಂದಿಯ ದೇಹದ ಉಷ್ಣಾಂಶ ಹೆಚ್ಚಾಗಿದ್ದರೆ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿಕೊಡಲಾಗುತ್ತಿದೆ. ನೌಕರನ ದೇಹದ ಉಷ್ಣತೆಯು 37.5 ಸೆಲ್ಸಿಯಸ್ ದಾಟಿದರೆ ಥರ್ಮಲ್ ಸ್ಕ್ರೀನಿಂಗ್ ಕೆಂಪು ಬಣ್ಣ ತೋರಿಸಿ, ಬಜರ್ ಧ್ವನಿಯೊಂದಿಗೆ ಎಚ್ಚರಿಕೆ ನೀಡುತ್ತದೆ. ಹೀಗಾಗಿ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಾಗುತ್ತಿದೆ.

    ಪ್ರವೇಶದ್ವಾರದಲ್ಲಿ ಅಳವಡಿರುವ ಸಿಸ್ಟಮ್ ಹೆಚ್ಚಿನ ಉಷ್ಣಾಂಶ ಸಂವೇದನೆಯೊಂದಿಗೆ ಇಮೇಜ್ ಸೆನ್ಸರ್ ಅನ್ನು ಹೊಂದಿದೆ. ಕ್ಯಾಮೆರಾಗಳು ಹೆಚ್ಚು ನಿಖರವಾದ ಚಿತ್ರ ಮತ್ತು ತಾಪಮಾನ ವ್ಯತ್ಯಾಸದ ಮಾಹಿತಿಯನ್ನು ಸೆರೆಹಿಡಿಯಲು ಅನುಕೂಲವಾಗಿವೆ.