Tag: ನೈನಿತಾಲ್

  • ಕುಮಾವೂನ್ ವಿವಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮೂರ್ಛೆ ಹೋದ ಜಗದೀಪ್ ಧನಕರ್

    ಕುಮಾವೂನ್ ವಿವಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮೂರ್ಛೆ ಹೋದ ಜಗದೀಪ್ ಧನಕರ್

    ಡೆಹ್ರಾಡೂನ್: ಉತ್ತರಾಖಂಡದ (Uttarakhand) ನೈನಿತಾಲ್‌ನ ಕುಮಾವೂನ್ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದ ವೇಳೆ ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar) ಮೂರ್ಛೆ ಹೋಗಿದ್ದಾರೆ.

    ನೈನಿತಾಲ್‌ನ ಕುಮಾವೂನ್ ವಿಶ್ವವಿದ್ಯಾಲಯದಲ್ಲಿ (Nainital Kumaon University) ನಡೆದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ, ಉಪರಾಷ್ಟ್ರಪತಿ ಧನಕರ್ ಮುಖ್ಯ ಅತಿಥಿಯಾಗಿ 45 ನಿಮಿಷಗಳ ಭಾಷಣ ಮಾಡಿದರು. ಭಾಷಣದ ನಂತರ, ಉಪರಾಷ್ಟ್ರಪತಿ ವೇದಿಕೆಯಿಂದ ಇಳಿದ ತಕ್ಷಣ ಅವರ ಆರೋಗ್ಯ ಏರುಪೇರಾಗಿದ್ದು, ಅವರ ಜೊತೆ ಇದ್ದ ಮಾಜಿ ಸಂಸದ ಡಾ. ಮಹೇಂದ್ರ ಸಿಂಗ್ ಪಾಲ್ ಅವರ ಮೇಲೆಯೇ ಕುಸಿದು ಬಿದ್ದರು. ಕೂಡಲೇ ಸ್ಥಳದಲ್ಲೇ ಇದ್ದ ವೈದ್ಯರ ತಂಡ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದೆ. ಇದನ್ನೂ ಓದಿ: ಮಂಗಳೂರಲ್ಲಿ ‘ನೋಂದಣಿ’ ಗೋಲ್ಮಾಲ್ – ಕೋಟಿ ಬೆಲೆಯ ಕಾರಿಗೆ ಲಕ್ಷ ಬೆಲೆಯ ಕಾರಿನ ಮಾಡೆಲ್ ನಂಬರ್

    ನಂತರ ಅವರನ್ನು ರಾಜ್ಯಪಾಲ ಗುರ್ಮಿತ್ ಸಿಂಗ್ ಅವರೊಂದಿಗೆ ರಾಜಭವನಕ್ಕೆ ಕರೆದೊಯ್ಯಲಾಯಿತು. ನಂತರ ವೈದ್ಯರು ಉಪರಾಷ್ಟ್ರಪತಿಯವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ದೃಢಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ದೇಶ ಮೊದಲು, ಕೆಲವರಿಗೆ ಮೋದಿ ಮೊದಲು: ಶಶಿ ತರೂರ್‌ಗೆ ಖರ್ಗೆ ಟಾಂಗ್

  • ಪ್ರಕೃತಿಯಿಂದಲೇ ಕೈಬೀಸಿ ಕರೆಯೋ ನೈನಿತಾಲ್‌ಗೆ ಬರೋ ಪ್ರವಾಸಿಗರ ಸಂಖ್ಯೆ ಕುಸಿತ – ಯಾಕೆ?

    ಪ್ರಕೃತಿಯಿಂದಲೇ ಕೈಬೀಸಿ ಕರೆಯೋ ನೈನಿತಾಲ್‌ಗೆ ಬರೋ ಪ್ರವಾಸಿಗರ ಸಂಖ್ಯೆ ಕುಸಿತ – ಯಾಕೆ?

    ಭಾರತದಲ್ಲಿರುವ ಪ್ರತಿಯೊಂದು ಪ್ರವಾಸಿ ತಾಣವು ಒಂದಕ್ಕೊಂದು ಭಿನ್ನವಾಗಿದೆ. ದಕ್ಷಿಣ ಭಾರತವು ಸಮುದ್ರ, ದ್ವೀಪಗಳು, ಪರ್ವತ ಶಿಖರಗಳು, ಪಶ್ಚಿಮ ಹಾಗೂ ಪೂರ್ವ ಘಟ್ಟಗಳಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇದೇ ರೀತಿ ಉತ್ತರ ಭಾರತವು ನೈಸರ್ಗಿಕ ತಾಣಗಳು, ಹಿಮಾಲಯ ಪರ್ವತ ಶ್ರೇಣಿಗಳು, ಪ್ರಮುಖ ದೇವಾಲಯಗಳು ಹಾಗೂ ವಿಭಿನ್ನ ಸರೋವರಗಳನ್ನು ತನ್ನಲ್ಲಿ ಸೃಷ್ಟಿಸಿಕೊಂಡಿದೆ. ಈ ಪೈಕಿ ಉತ್ತರ ಭಾರತದ ಪ್ರಸಿದ್ಧ ಪ್ರವಾಸಿ ತಾಣವಾದ ನೈನಿತಾಲ್  (Nainital) ಪ್ರವಾಸಿಗರನ್ನು ಪ್ರಕೃತಿ ಸೌಂದರ್ಯದ ಮೂಲಕ ತನ್ನೆಡೆಗೆ ಸೆಳೆಯುತ್ತಿದೆ.

    ಇತ್ತೀಚಿನ ದಿನಗಳಲ್ಲಿ ಅಲ್ಲ…. ಮೊದಲಿನಿಂದಲೂ ನೈನಿತಾಲ್‌ಗೆ ಪ್ರವಾಸಕ್ಕೆಂದು ಹೊರಡುವ ಜನರ ಸಂಖ್ಯೆ ಹೆಚ್ಚು. ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ನೈನಿತಾಲ್ ಸೇರಿದಂತೆ ಉತ್ತರ ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಪ್ರವಾಸಿಗರನ್ನು ನಂಬಿಕೊಂಡ ಅಲ್ಲಿನ ಜನರ ಆರ್ಥಿಕ ಸ್ಥಿತಿ ಸಮಸ್ಯೆಗೀಡಾಗುತ್ತಿದೆ.

    ನೈನಿತಾಲ್:
    ಉತ್ತರಾಖಂಡದ (Uttarakhand) ಕುಮಾವುನ್ ಪ್ರದೇಶದಲ್ಲಿ ಕಂಡುಬರುವ ಒಂದು ಪ್ರವಾಸಿ ತಾಣವೆಂದರೆ ಅದು ನೈನಿತಾಲ್. ಇದನ್ನು ಸರೋವರಗಳ ನಗರ ಎಂದು ಕರೆಯಲಾಗುತ್ತದೆ. ಜೊತೆಗೆ ಸುಂದರವಾದ ಗಿರಿಧಾಮವನ್ನು ಇದು ಒಳಗೊಂಡಿದೆ. ಇಲ್ಲಿರುವ ಹಿಮಪರ್ವತಗಳು ಈ ಪ್ರದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ನೈನಾದೇವಿ ದೇವಾಲಯ ದೇವಿಯ ಶಕ್ತಿಪೀಠಗಳಲ್ಲಿ ಒಂದು. ಇನ್ನೂ ನವವಿವಾಹಿತರಿಗೆ ಇದು ಹನಿಮೂನ್‌ಗೆ ಒಂದು ಬೆಸ್ಟ್ ಆಯ್ಕೆ ಅಂತಾನೆ ಹೇಳಬಹುದು. ನೈನಿತಾಲ್ ಸರೋವರ ಸಿಹಿ ನೀರಿನ ಸರೋವರವಾಗಿದ್ದು, ಈ ಸರೋವರದಲ್ಲಿ ದೋಣಿ ವಿಹಾರ ಒಳ್ಳೆಯ ಅನುಭವವನ್ನು ನೀಡುತ್ತದೆ. ಈ ಸರೋವರ ಹಚ್ಚಹಸಿರಿನ ಪರ್ವತ ಶ್ರೇಣಿಗಳಿಂದ ಆವೃತ್ತವಾಗಿದ್ದು, ಅರ್ಧಚಂದ್ರನಂತೆ ಹರಿದು ಹೋಗುತ್ತದೆ. ನೈನಿತಾಲ್‌ನಲ್ಲಿ ಔಲಿ ಎಂಬ ತಾಣ, ನಂದಾದೇವಿ ರಾಷ್ಟ್ರೀಯ ಉದ್ಯಾನವನ, ಕೌಸನಿ, ಬಿನ್ಸರ್ ವನ್ಯಜೀವಿಧಾಮ, ಅಲ್ಮೋರಾ ಹೀಗೆ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಬಹುದು.

    ನೈನಿತಾಲ್‌ಗೆ ಹೋಗುವುದಾದರೆ ಉತ್ತರಾಖಂಡದ ಪಂತನಗರದ ವಿಮಾನ ನಿಲ್ದಾಣಕ್ಕೆ ತಲುಪಿ, ಅಲ್ಲಿಂದ ಟ್ಯಾಕ್ಸಿಗಳ ಮೂಲಕ ತಲುಪಬಹುದು. ಇನ್ನೂ ರೈಲಿನ ಮೂಲಕ ಹೋಗುವುದಾದರೆ ಕತ್ಗೊಡಮ್ ರೈಲ್ವೆ ನಿಲ್ದಾಣಕ್ಕಿಳಿದು ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದು. ಇನ್ನೂ ದೆಹಲಿಯಿಂದ 6-7 ಗಂಟೆಗಳಲ್ಲಿ ಕಾರು ಅಥವಾ ಇನ್ನಿತರ ವಾಹನಗಳ ಮೂಲಕ ತಲುಪಬಹುದು. ಇಂತಹ ಅದ್ಭುತ ತಾಣಗಳನ್ನು ಒಳಗೊಂಡಿರುವ ನೈನಿತಾಲ್‌ಗೆ ಬೇಸಿಗೆ ತಿಂಗಳಲ್ಲಿ (ಮೇ-ಜೂನ್) ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡಿದ್ದು, ಪ್ರಶ್ನೆಯನ್ನು ಹುಟ್ಟು ಹಾಕಿದೆ.

    ಈ ಕುರಿತು ನೈನಿತಾಲ್ ಅಸೋಸಿಯೇಷನ್‌ನ ಅಧ್ಯಕ್ಷ ದಿಗ್ವಿಜಯ ಸಿಂಗ್ ಮಿಷ್ತ ಮಾತನಾಡಿ, ಈ ಬಾರಿ ಇಲ್ಲಿನ ಹೋಟೆಲ್ ಮತ್ತು ರೆಸಾರ್ಟ್ ಬುಕ್ಕಿಂಗ್‌ಗಳಲ್ಲಿ ಭಾರಿ ಕುಸಿತ ಕಂಡಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಶೇಕಡ 90ರಷ್ಟು ಕುಸಿತ ಕಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಅಡ್ವಾನ್ಸ್ ಬುಕಿಂಗ್ ಮಾಡಿದ್ದ ಪ್ರವಾಸಿಗರು ತಮ್ಮ ಬುಕಿಂಗ್‌ಗಳನ್ನು ರದ್ದುಗೊಳಿಸಿದ್ದಾರೆ. ಈ ಬಾರಿ ಕುಸಿತ ಕಂಡ ಹಾಗೆ ಈತನಕ ನೈನಿತಾಲ್‌ನಲ್ಲಿ ಯಾವತ್ತೂ ಆಗಿರಲಿಲ್ಲ ಎಂದು ತಿಳಿಸಿದ್ದಾರೆ.

    ಹೌದು, ಇದಕ್ಕೆಲ್ಲ ಒಂದು ಭೀಕರ ಕಾರಣವಿದೆ. ಈ ಬಾರಿ ಏ.22 ರಂದು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕರು ನಡೆಸಿದ ಹಿಂದೂಗಳ ನರಮೇಧದಲ್ಲಿ 26 ನಾಗರಿಕರು ಸಾವನ್ನಪ್ಪಿದರು. ಇದು ದೇಶಾದ್ಯಂತ ಭಯದ ವಾತಾವರಣ ಸೃಷ್ಟಿಸಿತ್ತು. ಜೊತೆಗೆ ಈ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು. ಹೀಗಾಗಿ ಪ್ರಾಣ ಭಯದಿಂದಾಗಿ ಈ ಕುಸಿತ ಉಂಟಾಗಿದೆ. ಇದೇ ಮೇ 1ರಂದು ನೈನಿತಾಲ್‌ನಲ್ಲಿ 12 ವರ್ಷದ ಬಾಲಕಿ ಮೇಲೆ 60 ವರ್ಷದ ವೃದ್ಧರೊಬ್ಬರು ಹಲ್ಲೆ ನಡೆಸಿದ್ದರು. ಈ ಕಾರಣದಿಂದಾಗಿ ಅಲ್ಲಿ ಕೋಮುಗಲಭೆ ಉಂಟಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ಪ್ರತಿಭಟನೆಗಳು ಹಾಗೂ ಕೃತ್ಯಗಳಿಗೆ ಕಾರಣವಾಯಿತು. ಈ ಪ್ರತಿಭಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ, ಭಯ ಸೃಷ್ಟಿಸಿತ್ತು. ಹೀಗಾಗಿ ಈ ಕುಸಿತ ಕಂಡು ಬಂದಿದೆ.

    ಆದರೆ ಸದ್ಯದ ಪರಿಸ್ಥಿತಿಯಲ್ಲಿ ನೈನಿತಾಲ್ ಸಂಪೂರ್ಣವಾಗಿ ಸುರಕ್ಷಿತವಾಗಿದ್ದರೂ, ಕೆಲವು  ಕಾರಣಗಳಿಂದ ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ನೈನಿತಾಲ್‌ಗೆ ತೆರಳಲು ಸುಮಾರು 10 ಕಿ.ಮೀ ದೂರದಲ್ಲಿ ವಾಹನ ನಿಲುಗಡೆ ಮಾಡಲು ಅವಕಾಶವಿದೆ. ಹೀಗಾಗಿ ಅನೇಕರಿಗೆ ಇದು ಅನಾನುಕೂಲತೆ ಉಂಟು ಮಾಡಿದೆ. ಸರ್ಕಾರಿ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕಿಂಗ್ ಶುಲ್ಕ ದಿನಕ್ಕೆ 130 ರೂ.ಯಿಂದ 500 ರೂ.ಗೆ ಏರಿಕೆಯಾಗಿದೆ. ಜೊತೆಗೆ ಟೋಲ್‌ಗಳನ್ನು ಹೆಚ್ಚಿಸಲಾಗಿದೆ. ಹೀಗಾಗಿ ನೈನಿತಾಲ್ ಪ್ರಯಾಣ ಹಲವು ಸಮಸ್ಯೆಗಳಿಂದ ಕೂಡಿದೆ. ಇದೆಲ್ಲಾ ಕಾರಣಗಳಿಂದಾಗಿ ಪ್ರವಾಸಿಗರು ಕಾಶ್ಮೀರದ ಹಲವು ಪ್ರವಾಸಿ ತಾಣಗಳು ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಿಗೆ ಪ್ರವಾಸಕ್ಕೆ ಭೇಟಿ ನೀಡಲು ಹಿಂಜರಿಯುತ್ತಿದ್ದಾರೆ.

  • ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್ – 7 ಮಂದಿ ಸಾವು

    ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್ – 7 ಮಂದಿ ಸಾವು

    ಡೆಹ್ರಾಡೂನ್: ಹರಿಯಾಣದಿಂದ (Haryana) ಬರುತ್ತಿದ್ದ ಬಸ್ (Bus) ನೈನಿತಾಲ್ (Nainital) ಜಿಲ್ಲೆಯಲ್ಲಿ ಕಂದಕಕ್ಕೆ ಉರುಳಿದ ಪರಿಣಾಮ ಐವರು ಮಹಿಳೆಯರು, ಒಬ್ಬ ಪುರುಷ ಮತ್ತು ಒಂದು ಮಗು ಸೇರಿದಂತೆ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 26 ಜನರನ್ನು ರಕ್ಷಿಸಲಾಗಿದ್ದು, ಹೆಚ್ಚಿನ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ಸಿವಿಲ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಡ್ಯಾನ್ಸ್ ವಿಚಾರಕ್ಕೆ ಗಲಾಟೆ- ಓರ್ವ ಸಾವು, ಮೃತನ ತಾಯಿಗೂ ಚಾಕು ಇರಿತ

    ಅಧಿಕಾರಿಗಳ ಪ್ರಕಾರ, ನೈನಿತಾಲ್‌ನ ವಿಪತ್ತು ನಿಯಂತ್ರಣಾ ಕೊಠಡಿ ಭಾನುವಾರ 30 ರಿಂದ 33 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಕಾಲಾಧುಂಗಿ ರಸ್ತೆಯ ನಲ್ನಿಯಲ್ಲಿ ಕಂದಕಕ್ಕೆ ಉರುಳಿದೆ ಎಂದು ಎಸ್‌ಡಿಆರ್‌ಎಫ್‌ಗೆ ಮಾಹಿತಿ ನೀಡಿದೆ. ಈ ಮಾಹಿತಿಯ ಮೇರೆಗೆ ಕಮಾಂಡೆಂಟ್ ಎಸ್‌ಡಿಆರ್‌ಎಫ್ ಮಣಿಕಾಂತ್ ಮಿಶ್ರಾ ಅವರ ಸೂಚನೆಯಂತೆ ಪೋಸ್ಟ್ ರುದ್ರಪುರ, ನೈನಿತಾಲ್ ಮತ್ತು ಖೈರ್ನಾದಿಂದ ಎಸ್‌ಡಿಆರ್‌ಎಫ್ ರಕ್ಷಣಾ ತಂಡಗಳು ರಕ್ಷಣೆಗಾಗಿ ಸ್ಥಳಕ್ಕೆ ತೆರಳಿದೆ. ಇದನ್ನೂ ಓದಿ: ನನ್ನನ್ನು ಸಾಯಿಸ್ಬೇಡಿ- ಬೇಡಿಕೊಂಡ್ರೂ ಬಿಡದೆ ಯುವತಿ ಅಪಹರಿಸಿದ ಹಮಾಸ್ ಉಗ್ರರು

    ಬಸ್ ನಿಯಂತ್ರಣ ತಪ್ಪಿ ಸುಮಾರು 200 ಮೀಟರ್ ಆಳದ ಕಂದಕಕ್ಕೆ ಉರುಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಸ್‌ಡಿಆರ್‌ಎಫ್ ರಕ್ಷಣಾ ತಂಡವು ಸ್ಥಳಕ್ಕೆ ಆಗಮಿಸಿ ಎನ್‌ಡಿಆರ್‌ಎಫ್, ಸ್ಥಳೀಯ ಪೊಲೀಸರು ಮತ್ತು ಇತರ ರಕ್ಷಣಾ ಘಟಕಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಬಸ್ಸಿನಲ್ಲಿದ್ದ 26 ಮಂದಿ ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದನ್ನೂ ಓದಿ: ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಅಪ್ರಾಪ್ತ ಸಹೋದರಿಯರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇವಭೂಮಿ ಉತ್ತರಾಖಂಡ್‍ನಲ್ಲಿ ಮೇಘಸ್ಫೋಟ – 12 ಮಂದಿ ಸಾವು, 20 ಮಂದಿ ನಾಪತ್ತೆ

    ದೇವಭೂಮಿ ಉತ್ತರಾಖಂಡ್‍ನಲ್ಲಿ ಮೇಘಸ್ಫೋಟ – 12 ಮಂದಿ ಸಾವು, 20 ಮಂದಿ ನಾಪತ್ತೆ

    ಡೆಹ್ರಾಡೂನ್: ಕೇರಳದಲ್ಲಿ ಇದೀಗ ಮಳೆ ಕಡಿಮೆಯಾಗುತ್ತಿದ್ದಂತೆಯೇ, ಇತ್ತ ದೇವಭೂಮಿ ಉತ್ತರಾಖಂಡ್‍ನಲ್ಲಿ ಪ್ರವಾಹ ಸೃಷ್ಟಿ ಆಗಿದೆ.

    Nainital

    ನೈನಿತಾಲ್ ಜಿಲ್ಲೆಯ ರಾಮಘರ್‍ನಲ್ಲಿ ಮೇಘಸ್ಫೋಟ ಸಂಭವಿಸಿದ್ದು 12 ಮಂದಿ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಕಳೆದ 40 ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಂದಾಗಿ ನೈನಿತಾಲ್ ನದಿಯ ನೀರಿನ ಮಟ್ಟ ತುಂಬಿ ಹುಕ್ಕಿ ಹರಿಯುತ್ತಿದ್ದು, ನೈನಿತಾಲ್ ಜಿಲ್ಲೆಯ ರಸ್ತೆಗಳು ಜಲಾವೃತಗೊಂಡಿದೆ. ಈ ಪ್ರದೇಶದಲ್ಲಿರುವ ಕಟ್ಟಡ ಹಾಗೂ ಮನೆಯೆಲ್ಲವೂ ನೀರಿನಲ್ಲಿ ಮುಳುಗಿಹೋಗಿದೆ. ಇದನ್ನೂ ಓದಿ: ಮರ್ಯಾದಾ ಹತ್ಯೆ – ಮಗಳು ಪ್ರೀತಿಸಿ ವಿವಾಹವಾಗಿದ್ದಕ್ಕೆ ಇಡೀ ಕುಟುಂಬವನ್ನೇ ಜೀವಂತ ಸುಟ್ಟ ತಂದೆ

    Nainital

    ಕೋಸಿ, ದೌಲಾ ನದಿ ಉಕ್ಕಿ ಹರಿಯುತ್ತಿದೆ. ಮೇಘಸ್ಫೋಟದಿಂದ ಉಂಟಾಗಿರುವ ಪ್ರವಾಹಕ್ಕೆ 12 ಮನೆಗಳು ಕೊಚ್ಚಿಕೊಂಡು ಹೋಗಿವೆ. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ರಸ್ತೆಯಲ್ಲಿರುವ ಹೋಟೆಲ್ ಗಳಿಗೆ ನೀರು ನುಗ್ಗಿದ್ದು ಪ್ರವಾಸಿಗಳು ಪರದಾಡುತ್ತಿದ್ದಾರೆ. ರೆಸಾರ್ಟ್‍ನಲ್ಲಿ 100ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿದ್ದು ವಾಹನಗಳು ಮುಳುಗಡೆ ಆಗಿವೆ. ನಿರ್ಮಾಣ ಹಂತದ ಸೇತುವೆಯೊಂದು ಕೊಚ್ಚಿಕೊಂಡು ಹೋಗಿದೆ. ಗೋಲ್ಪಾರ್‍ ನಲ್ಲಿ ಸೇತುವೆ ಬದಿ ಕೊಚ್ಚಿ ಹೋಗಿದ್ದು ಸಂಚಾರ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಕಾಲಿನಿಂದ ತಲೆವರೆಗೂ ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ರಣದೀಪ್ ಸಿಂಗ್ ಸುರ್ಜೇವಾಲಾ

    Nainital

    ನದಿಯ ನಾಲ್ಕು ಗೇಟ್‍ಗಳಿಂದ ನೀರನ್ನು ಹೊರಬಿಟ್ಟಿದ್ದರೂ, ನೀರಿನ ಮಟ್ಟ ನಿರಂತರವಾಗಿ ಹೆಚ್ಚುತ್ತಲೆ ಇದೆ ಮತ್ತು ನದಿಯ ನೀರು ಮಾಲ್ ರಸ್ತೆ, ತಾಲಿಟಾಲ್ ಬಸ್ ನಿಲ್ದಾಣದ ಮೂಲಕ ಭೋವಾಲಿ ಮತ್ತು ಹಲ್ದ್ವಾನಿ ರಸ್ತೆಯ ಕಡೆಗೆ ಹಾದು ಹೋಗುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಉತ್ತರಾಖಂಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಉತ್ತರಾಖಂಡದಲ್ಲಿ ರೆಡ್ ಅಲರ್ಟ್ ಘೋಷಿಸಿದೆ.