Tag: ನೈತಿಕ ಸಂಬಂಧ

  • ರಾಯಚೂರಿನಲ್ಲಿ ಪತ್ಯೇಕ ಎರಡು ಕೊಲೆ – ಬನ್ನಿ ಕೊಡುವ ನೆಪದಲ್ಲಿ ಪಿಡಿಓ ಹತ್ಯೆ

    ರಾಯಚೂರಿನಲ್ಲಿ ಪತ್ಯೇಕ ಎರಡು ಕೊಲೆ – ಬನ್ನಿ ಕೊಡುವ ನೆಪದಲ್ಲಿ ಪಿಡಿಓ ಹತ್ಯೆ

    ರಾಯಚೂರು: ಜಿಲ್ಲೆಯಲ್ಲಿ ಇಂದು ಎರಡು ಪ್ರತ್ಯೇಕ ಕೊಲೆ ಪ್ರಕರಣಗಳು ನಡೆದಿವೆ. ಜಿಲ್ಲೆಯ ಲಿಂಗಸುಗೂರಿನ ಹೊರವಲಯದ ಸೀಮೆ ಈರಣ್ಣ ದೇವಸ್ಥಾನದ ಬಳಿ ಬೆಳ್ಳಂಬೆಳಿಗ್ಗೆ ಬನ್ನಿ ಕೊಡುವ ನೆಪದಲ್ಲಿ ಬಂದು ಪಿಡಿಓ ಗಜದಂಡಯ್ಯ ಸ್ವಾಮಿಯನ್ನು ಕೊಲೆ ಮಾಡಲಾಗಿದೆ.

    ದಾರಿ ಮಧ್ಯದಲ್ಲಿ ಬೈಕ್ ನಿಲ್ಲಿಸಿ ಅದರ ಮೇಲೆ ಹೆಲ್ಮೆಟ್ ಇಟ್ಟು ಚಪ್ಪಲಿ ಬಿಟ್ಟಿರುವ ಪಿಡಿಓ ಶವ ದೂರದಲ್ಲಿ ಪತ್ತೆಯಾಗಿದೆ. ಕೋಠಾ ಗ್ರಾಮ ಪಂಚಾಯತಿ ಪಿಡಿಓ ಗಜದಂಡಯ್ಯ ಸ್ವಾಮಿ ಕೊಲೆಯಾಗಿದ್ದು, ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಲಿಂಗಸುಗೂರು ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಥಾಯ್ಲೆಂಡ್‌ ಡೇ ಕೇರ್‌ ಸೆಂಟರ್‌ನಲ್ಲಿ ಮಕ್ಕಳ ಮಾರಣಹೋಮ – 34 ಮಂದಿಯನ್ನು ಹತ್ಯೆಗೈದ ಪಾಪಿ

    CRIME 2

    ಮತ್ತೊಂದೆಡೆ ಸಿರವಾರ (Sirwar) ತಾಲೂಕಿನ ಮಲ್ಲಟ ಗ್ರಾಮದಲ್ಲಿ ರಾತ್ರಿ ಮಲಗಿದ್ದ ವೇಳೆ ವ್ಯಕ್ತಿಯೊಬ್ಬರ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತ ವ್ಯಕ್ತಿಯನ್ನು ಬಸವರಾಜ್ (34) ಎಂದು ಗುರುತಿಸಲಾಗಿದೆ. ಬಸವರಾಜ್‍ನ ಕುತ್ತಿಗೆ ಭಾಗಕ್ಕೆ ಚಾಕು ಇರಿದು ಕೊಲೆ ಮಾಡಲಾಗಿದೆ. ಪತ್ನಿಯ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

    ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿರವಾರ ಪೊಲೀಸರು ಕೊಲೆಯಾದ ಬಸವರಾಜ್‍ನ ಪತ್ನಿ ಲಕ್ಷ್ಮಿ ಹಾಗೂ ಸಂಬಂಧಿ ಶಿವರಾಜ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಣ್ಣನ ಜೊತೆಗೆ ಗಾಳಿಪಟ ಹಾರಿಸುವಾಗ ಬಿಲ್ಡಿಂಗ್ ಮೇಲಿಂದ ಬಿದ್ದು ತಮ್ಮ ಸಾವು

    Live Tv
    [brid partner=56869869 player=32851 video=960834 autoplay=true]