Tag: ನೈಟ್ ಕರ್ಫ್ಯೂ

  • ಸಾರ್ವಜನಿಕರ ವ್ಯಾಪಕ ವಿರೋಧಕ್ಕೆ ಮಣಿದ ಜಿಲ್ಲಾಡಳಿತ – ದ್ವಿಚಕ್ರ ವಾಹನ ಹಿಂಬದಿ ಸವಾರ ನಿಯಮ ರದ್ದು

    ಸಾರ್ವಜನಿಕರ ವ್ಯಾಪಕ ವಿರೋಧಕ್ಕೆ ಮಣಿದ ಜಿಲ್ಲಾಡಳಿತ – ದ್ವಿಚಕ್ರ ವಾಹನ ಹಿಂಬದಿ ಸವಾರ ನಿಯಮ ರದ್ದು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಪುರುಷ ಸವಾರರಿಗೆ ಅವಕಾಶ ಇಲ್ಲ ಎಂದು ಜಾರಿಗೆ ಮುಂದಾಗಿದ್ದ ಆದೇಶವನ್ನು ಜಿಲ್ಲಾಡಳಿತ ಹಿಂತೆಗೆದುಕೊಂಡಿದೆ.

    ನಗರದಲ್ಲಿ ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್ ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಪುರುಷ ಸವಾರರಿಗೆ ಅವಕಾಶ ಇಲ್ಲ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ ಎಂದು ತಿಳಿಸಿದ್ದರು. ಆ ಬಳಿಕ ಸಾರ್ವಜನಿಕ ವಲಯದಲ್ಲಿ ಈ ನಿಯಮದ ವಿರುದ್ಧ ತೀವ್ರ ಆಕ್ರೋಶ ಕೇಳಿ ಬಂದಿತ್ತು. ಆ ಬಳಿಕ ಇದೀಗ ಜಿಲ್ಲಾಡಳಿತ ಆದೇಶ ರದ್ದು ಮಾಡಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಾಳೆಯಿಂದ ನ್ಯೂ ರೂಲ್ಸ್ – ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗಿಲ್ಲ ಅವಕಾಶ

    ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶ ಇಲ್ಲ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. 18 ವರ್ಷದ ಕೆಳಗಿನ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಓಡಾಡಬಹುದು. ಇಬ್ಬರು ಪುರುಷ ಸವಾರರಿಗೆ ಈ ರೂಲ್ಸ್ ಇದ್ದು, ಕೆಲವು ಬಾರಿ ಹಿಂಬದಿ ಸವಾರರು ದುಷ್ಕೃತ್ಯ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಈ ನಿಯಮ ಜಾರಿಯಾಗಲಿದೆ ಎಂದು ಇಂದು ಬೆಳಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಇದನ್ನೂ ಓದಿ: ತೈವಾನ್ ಮೇಲೆ ಚೀನಾದಿಂದ ಕ್ಷಿಪಣಿ ದಾಳಿ

    ಇದೀಗ ಈ ನಿಯಮವನ್ನು ರದ್ದು ಮಾಡಲಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಅವಧಿ ಇಳಿಕೆ ಮಾಡಿ ಜಿಲ್ಲಾಡಳಿತ ಅದೇಶಿಸಿದೆ. ಸಂಜೆ 6 ಬದಲು ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆ ವರೆಗೆ ನೈಟ್ ಕರ್ಫ್ಯೂ ಮುಂದುವರಿಕೆಯಾಗಲಿದೆ. ಮಂಗಳೂರಿನಲ್ಲಿ ಸರಣಿ ಕೊಲೆಯ ಬಳಿಕ ಈ ನಿಯಮ ಜಾರಿಗೆ ಬಂದಿತ್ತು.

    Live Tv
    [brid partner=56869869 player=32851 video=960834 autoplay=true]

  • ದಕ್ಷಿಣ ಕನ್ನಡದಲ್ಲಿ ನಿರ್ಬಂಧ ಇನ್ನೆರಡು ದಿನ ವಿಸ್ತರಣೆ

    ದಕ್ಷಿಣ ಕನ್ನಡದಲ್ಲಿ ನಿರ್ಬಂಧ ಇನ್ನೆರಡು ದಿನ ವಿಸ್ತರಣೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ದಿನಗಳ ಅವಧಿಯಲ್ಲಿ 3 ಕೊಲೆಯಾಗಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನೈಟ್‌ ಕರ್ಫ್ಯೂ ಜಾರಿಗೊಳಿಸಿದ್ದು, ಅದನ್ನು ಇನ್ನೆರಡು ದಿನಗಳ ಕಾಲ ಮುಂದುವರಿಸಿ ಆದೇಶ ಹೊರಡಿಸಲಾಗಿದೆ.

    ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ನೈಟ್‌ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಈ ನಿರ್ಬಂಧವನ್ನು ಮತ್ತೆ ಎರಡು ದಿನಗಳ ಕಾಲ ಮುಂದುವರಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಫಾಜಿಲ್ ಹತ್ಯೆ ಪ್ರಕರಣ – ಪತ್ತೆಯಾದ ಕಾರಿನಲ್ಲಿ ರಕ್ತದ ಕಲೆ!

    ಸಂಜೆ 6ರಿಂದ ಬೆಳಗ್ಗೆ 6 ಗಂಟೆ ಅವಧಿಯಲ್ಲಿ ಯಾವುದೇ ವ್ಯಾಪಾರ ವಹಿವಾಟು ಹಾಗೂ ಅನಗತ್ಯ ವಾಹನಗಳ ಸಂಚಾರಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ.

    ಜಿಲ್ಲೆಯಲ್ಲಿ ಮದ್ಯದ ಅಂಗಡಿ ಮುಚ್ಚುವ ಆದೇಶವನ್ನೂ ಮುಂದುವರಿಸಲಾಗಿದೆ. ಹೀಗಾಗಿ ಮತ್ತೆರಡು ದಿನಗಳ ಕಾಲ ಮದ್ಯದಂಗಡಿಗಳು ಸಂಪೂರ್ಣ ಬಂದ್ ಆಗಿರಲಿವೆ. ಅಲ್ಲದೇ ಆ.6 ರವರೆಗೆ ಜಿಲ್ಲೆಯಲ್ಲಿ 144 ಸೆಕ್ಷನ್ ಮುಂದುವರಿಕೆ ಮಾಡಿ ಆದೇಶಿಸಲಾಗಿದೆ. ಇದನ್ನೂ ಓದಿ: ಕಾಳಿ ಸ್ವಾಮಿ ವಿರುದ್ಧ ಕಾನೂನು ಕ್ರಮ: ಎಡಿಜಿಪಿ ಅಲೋಕ್‌ ಕುಮಾರ್‌

    ಜಿಲ್ಲೆಯಲ್ಲಿ ಮಸೂದ್‌, ಪ್ರವೀಣ್‌ ನೆಟ್ಟಾರು, ಫಾಝಿಲ್‌ ಎಂಬವರನ್ನು ಒಬ್ಬರಾದ ಮೇಲೊಬ್ಬರಂತೆ 10 ದಿನಗಳ ಅವಧಿಯಲ್ಲಿ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಸರಣಿ ಕೊಲೆಗಳ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಇದರಿಂದ ಎಚ್ಚೆತ್ತ ಪೊಲೀಸ್‌ ಇಲಾಖೆ ಧಾರ್ಮಿಕ ಮುಖಂಡರೊಂದಿಗೆ ಶಾಂತಿ ಸಭೆ ಕೂಡ ನಡೆಸಿತು. ಮುನ್ನೆಚ್ಚರಿಕೆ ಕ್ರಮವಾಗಿ ವಿಧಿಸಲಾಗಿದ್ದ ಕರ್ಫ್ಯೂ ಹಾಗೂ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • `ನೈಟ್ ಕರ್ಫ್ಯೂ’ ಮೂಲಕ ನಟನೆಗೆ ಮರಳಿದ ಮಾಲಾಶ್ರೀ

    `ನೈಟ್ ಕರ್ಫ್ಯೂ’ ಮೂಲಕ ನಟನೆಗೆ ಮರಳಿದ ಮಾಲಾಶ್ರೀ

    ನ್ನಡ ಚಿತ್ರರಂಗ ಕನಸಿನ ರಾಣಿಯಾಗಿ ರಾರಾಜಿಸಿದ ನಟಿ ಮಾಲಾಶ್ರೀ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಆಗಿದ್ದಾರೆ. ಈ ಬಾರಿ `ನೈಟ್ ಕರ್ಫ್ಯೂ’ ಕಥೆ ಹೇಳುವ ಮೂಲಕ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ನಟನೆಗೆ ಮರಳಿದ್ದಾರೆ.

    ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸಿದ ನಟಿ ಮಾಲಾಶ್ರೀ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಕೊರೋನಾ ವೇಳೆಯಲ್ಲಿ ಪತಿ ಕೋಟಿ ರಾಮು ಅಗಲಿದ್ದರು. ಚಿತ್ರರಂಗದಿಂದ ದೂರ ಸರಿದಿದ್ದರು ಈಗ ಬಿಗ್ ಬ್ರೇಕ್‌ನ ನಂತ್ರ ಮತ್ತೆ ವಾಪಾಸ್ ಆಗಿದ್ದಾರೆ.

    ರವೀಂದ್ರ ವಂಶಿ ನಿರ್ದೇಶನದ `ನೈಟ್ ಕರ್ಫ್ಯೂ’ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಕೊರೋನಾ ವೇಳೆಯಲ್ಲಿ ನಡೆದ ಅಂಶಗಳನ್ನೇ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಇದೊಂದು ಆ್ಯಕ್ಷನ್ ಥ್ರಿಲರ್ ಕತೆಯಾಗಿದ್ದು, ಮೆಡಿಕಲ್ ಮಾಫಿಯಾ ಕಥೆಯಲ್ಲಿ ಮಾಲಾಶ್ರೀ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಜತೆ ಕಿರುತೆರೆ ನಟಿ ರಂಜನಿ ರಾಘವನ್ ಡಾಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ:‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ನೋಡಿ ಪತ್ನಿಗೆ ‘ಚಲಿಯೇ ಹುಕುಂ’ ಎಂದ ಅಮಿತಾ ಶಾ

    ಇನ್ನು ಚಿತ್ರದಲ್ಲಿ ಮಾಲಾಶ್ರೀ ಜತೆ ಪ್ರಮೋದ್ ಶೆಟ್ಟಿ, ವರ್ಧನ್, ಸಾದುಕೋಕಿಲ, ರಂಗಾಯಣ ರಘು ಅಶ್ವಿನಿ ನಟಿಸಿದ್ದಾರೆ. ಸ್ವರ್ಣಗಂಗಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ನೈಟ್ ಕರ್ಫ್ಯೂ ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ.

  • ಚೇತರಿಕೆ ಹಾದಿಯಲ್ಲಿ ಕೊಡಗಿನ ಪ್ರವಾಸೋದ್ಯಮ

    ಚೇತರಿಕೆ ಹಾದಿಯಲ್ಲಿ ಕೊಡಗಿನ ಪ್ರವಾಸೋದ್ಯಮ

    ಮಡಿಕೇರಿ: ಕೋವಿಡ್ ಮೂರನೇ ಅಲೆಯಲ್ಲಿ ನಷ್ಟ ಕಂಡಿದ್ದ ಕೊಡಗಿನ ಪ್ರವಾಸೋದ್ಯಮ ಈಗ ಚೇತರಿಕೆ ಹಾದಿಗೆ ಮರಳಿದೆ.

    ಡಿಸೆಂಬರ್ ತಿಂಗಳಿನಲ್ಲಿ ಒಂದಷ್ಟು ಆಶಾದಾಯಕ ಬೆಳವಣಿಗೆ ಕಂಡಿದ್ದ ಕೊಡಗಿನ ಪ್ರವಾಸೋದ್ಯಮ ನೈಟ್ ಕರ್ಫ್ಯೂ ಮತ್ತು ವಿಕೇಂಡ್ ಕರ್ಫ್ಯೂ ನಿಂದಾಗಿ ಸಂಪೂರ್ಣ ನೆಲಕಚ್ಚಿತ್ತು. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ತೆರವು ಮಾಡಿದ 2 ವಾರಗಳ ಕಾಲವೂ ಕೊಡಗಿನತ್ತ ಪ್ರವಾಸಿಗರು ಮುಖ ಮಾಡಲೇ ಇಲ್ಲ. ಇದನ್ನೂ ಓದಿ: 2011ರ ವಿಶ್ವಕಪ್ ಫೈನಲ್‍ನಲ್ಲಿ ಯುವಿಗಿಂತ ಧೋನಿ ಕೀರ್ತಿ ಹೆಚ್ಚಿದ್ದು ಹೇಗೆ?

    3ನೇವಾರದಲ್ಲಾದರೂ ಪ್ರವಾಸಿಗರು ಬರಬಹುದೆಂಬ ನಿರೀಕ್ಷೆಯಲ್ಲಿ ಕೊಡಗಿನ ಪ್ರವಾಸೋದ್ಯಮಿಗಳಿದ್ದರು. ಈ ವಾರವೂ ಪ್ರವಾಸಿಗರು ಭಾರೀ ಸಂಖ್ಯೆಯಲ್ಲೇನು ಬಂದಿಲ್ಲ. ಆದರೆ ಕಳೆದ ಎರಡು ವಾರಗಳಿಗೆ ಹೋಲಿಸಿದರೆ ಒಂದಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿಗೆ ಆಗಮಿಸಿದ್ದು ಪ್ರವಾಸಿತಾಣಗಳು ಒಂದಷ್ಟು ಕಳೆ ಪಡೆದುಕೊಂಡಿವೆ.

    ಮಡಿಕೇರಿ ಸಮೀಪದ ಅಬ್ಬಿಜಲಪಾತ, ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಒಂದಷ್ಟು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಕೊಡಗಿಗೆ ಬರುತ್ತಿದ್ದ ಪ್ರವಾಸಿಗರಷ್ಟು ಪ್ರಮಾಣದಲ್ಲಿ ಈ ಬಾರಿ ಇಲ್ಲ. ಹೀಗಾಗಿ ವೀಕೆಂಡ್ ಕರ್ಫ್ಯೂ, ನೈಟ್ಕರ್ಫ್ಯೂಗಳಿಂದ ನಷ್ಟ ಅನುಭವಿಸಿದ್ದ ಪ್ರವಾಸಿಗರ ಅವಲಂಬಿತ ವ್ಯಾಪಾರೋದ್ಯಮಿಗಳು ನಿರೀಕ್ಷಿತ ಪ್ರಮಾಣದಲ್ಲಿ ಲಾಭಗಳಿಸಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್

    ಮತ್ತೊಂದೆಡೆ 3ನೇ ಅಲೆಯಲ್ಲಿ ಕೋವಿಡ್ ಸೋಂಕಿನಿಂದ ಅಷ್ಟೊಂದು ಅಪಾಯವಿಲ್ಲ ಎನ್ನುವ ಕಾರಣದಿಂದ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವ ಬಹುತೇಕ ಪ್ರವಾಸಿಗರು, ಕೊಡಗಿನ ಪ್ರವಾಸಿ ತಾಣಗಳಲ್ಲಿ ಮಾಸ್ಕ್ ಧರಿಸದೆ ತಮ್ಮ ಪಾಡಿಗೆ ತಾವು ಎಂಜಾಯ್ ಮಾಡುತ್ತಿದ್ದಾರೆ.

    ಇದು ಮಾಸ್ಕ್ ಧರಿಸಿ ಓಡಾಡುವ ಪ್ರವಾಸಿಗರಲ್ಲಿ ಒಂದಷ್ಟು ಆತಂಕಕ್ಕೂ ಕಾರಣವಾಗಿದೆ. ಒಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ ತೆರವಾದ 3 ವಾರಗಳ ಬಳಿಕ ಕೊಡಗಿನ ಪ್ರವಾಸೋದ್ಯಮ ಈಗಷ್ಟೇ ಚೇತರಿಕೆ ಕಾಣುತ್ತಿದೆ.

  • ನೈಟ್ ಕರ್ಫ್ಯೂ ರದ್ದು – ಸಿನಿಮಾಗೆ ಶೇ.50 ರಷ್ಟು ನಿರ್ಬಂಧ ಮುಂದುವರಿಕೆ

    ನೈಟ್ ಕರ್ಫ್ಯೂ ರದ್ದು – ಸಿನಿಮಾಗೆ ಶೇ.50 ರಷ್ಟು ನಿರ್ಬಂಧ ಮುಂದುವರಿಕೆ

    ಬೆಂಗಳೂರು: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹೇರಿದ್ದ ನೈಟ್ ಕರ್ಫ್ಯೂವನ್ನು ರದ್ದುಗೊಳಿಸಿದೆ.

    ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೋವಿಡ್ ಸಭೆಯ ಬಳಿಕ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ರಾಜ್ಯದಲ್ಲಿ ಜಾರಿಯಾಗಿದ್ದ ನೈಟ್ ಕರ್ಫ್ಯೂ ರದ್ದುಗೊಳಿಸಲಾಗಿದೆ. ಜನವರಿ 31ರಿಂದ ನೈಟ್ ಕರ್ಫ್ಯೂ ಇರುವುದಿಲ್ಲ. ರಾಜ್ಯದಲ್ಲಿ ಒಟ್ಟು 4,28,570 ಕೇಸ್ ಇದೆ. 146 ಜನ ಮಕ್ಕಳು ಕೊರೊನಾದಿಂದ ಮೃತಪಟ್ಟಿದ್ದಾರೆ. ಕರ್ನಾಟಕದ ಕೋವಿಡ್ ಪಾಸಿಟಿವಿಟಿ ರೇಟ್ 18.8 ದಾಖಲಾಗಿದೆ. ಈ ಹಿಂದೆ ಶೇ.33 ಏರಿಕೆ ಕಂಡಿತ್ತು. ಈಗ ಶೇ.21.2ಕ್ಕೆ ಬಂದು ನಿಂತಿದೆ ಹಾಗಾಗಿ ಕೋವಿಡ್ ನಿಯಮಗಳಲ್ಲಿ ಕೆಲ ಸಡಿಲಿಕೆಗಳನ್ನು ರಾಜ್ಯದಲ್ಲಿ ಮಾಡುತ್ತಿದ್ದೇವೆ ಎಂದರು.

    ಪಬ್, ಬಾರ್, ರೆಸ್ಟೋರೆಂಟ್ ಹೋಟೆಲ್‍ನಲ್ಲಿ 100% ಅವಕಾಶ ಕಲ್ಪಿಸಿ ಕೊಡುತ್ತಿದ್ದೇವೆ. ಆದರೆ ಸಿನಿಮಾ ಮಂದಿರಕ್ಕೆ ಶೇ.50 ರಷ್ಟು ನಿರ್ಬಂಧ ಮುಂದುವರಿಕೆ ಮಾಡುತ್ತಿದ್ದೇವೆ. ಉಳಿದಂತೆ ಮದುವೆ ಹೊರಾಂಗಣದಲ್ಲಿ 300 ಮತ್ತು ಒಳಾಂಗಣದಲ್ಲಿ 200 ಜನರಿಗೆ ಅವಕಾಶ ಕಲ್ಪಿಸಿಕೊಡುತ್ತಿದ್ದೇವೆ. ಕಚೇರಿಗಳಲ್ಲಿ ಶೇ.100 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ಕೋಡುತ್ತಿದ್ದೇವೆ. ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆಗಳು ಮತ್ತೆ ಆರಂಭವಾಗುತ್ತಿದ್ದು, ಎಲ್ಲಾ ರೀತಿ ಸೇವೆಗಳಿಗೆ ಅವಕಾಶ ಕೊಡಲಾಗಿದೆ. ಆದರೆ ದೇವಾಲಯಗಳಲ್ಲಿ ಒಮ್ಮೆಲೆ 50 ಜನ ಮಾತ್ರ ಪ್ರವೇಶ ನಿಯಮ ಮುಂದುವರಿಸುತ್ತಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು.

    ಸಭೆಯ ಮುಖ್ಯಾಂಶಗಳು:
    ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ. 2ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ತಜ್ಞರ ಸಭೆಯಲ್ಲಿ ತೀರ್ಮಾನಿಸಲಾಯಿತು. ಮೆಟ್ರೋ ರೈಲು ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ತಮ್ಮ ಆಸನ ಸಾಮರ್ಥ್ಯದಷ್ಟೇ ಪ್ರಯಾಣಿಕರೊಂದಿಗೆ ಕಾರ್ಯಾಚರಣೆ ನಡೆಸಬಹುದು. ಸಿನೆಮಾ, ಮಲ್ಟಿಪ್ಲೆಕ್ಸ್, ಥಿಯೇಟರ್ ಗಳು, ರಂಗಮಂದಿರಗಳು, ಆಡಿಟೋರಿಯಂ ಗಳು ಮತ್ತು ಇಂತರ ಸ್ಥಳಗಳಲ್ಲಿ ಶೇ. 50 ರ ಆಸನ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲಿವೆ. ಎಲ್ಲ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ರ್ಯಾಲಿ, ಧರಣಿ, ಸಮಾವೇಶ, ಪ್ರತಿಭಟನೆಗಳಿಗೆ ಅವಕಾಶವಿಲ್ಲ. ಸ್ವಿಮ್ಮಿಂಗ್ ಪೂಲ್, ಜಿಮ್ ಗಳು ಶೇ.50 ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವುದು. ಸ್ಪೋಟ್ಸ್ ಕಾಂಪ್ಲೆಕ್ಸ್ ಮತ್ತು ಕ್ರೀಡಾಂಗಣಗಳಲ್ಲಿ ಶೇ.50 ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುವುದು. ಕೇರಳ, ಮಹಾರಾಷ್ಟ್ರ, ಗೋವಾ ಗಡಿಗಳಲ್ಲಿ ತೀವ್ರ ನಿಗಾ ವಹಿಸುವುದು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಶೇ.25 ರಷ್ಟು ಹಾಸಿಗೆಗಳನ್ನು ನಿಗದಿಪಡಿಸಲು ನಿರ್ಧರಿಸಲಾಯಿಗಿದ್ದು, ಕೋವಿಡ್ ಹೊರತು ಪಡಿಸಿ, ಇತರ ಚಿಕಿತ್ಸೆಗಳನ್ನು ಸಮರ್ಪಕವಾಗಿ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

    ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಆರ್ ಅಶೋಕ್, ಬಿ.ಸಿ ನಾಗೇಶ್, ಬಿ.ಸಿ ಪಾಟೀಲ್, ಆನಂದ್ ಸಿಂಗ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಡಾ.ಸುದರ್ಶನ್ ಸೇರಿ ಪ್ರಮುಖರು ಭಾಗಿಯಾಗಿದ್ದರು.

  • ನೈಟ್ ಕರ್ಫ್ಯೂ ನಡುವೆ ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ

    ನೈಟ್ ಕರ್ಫ್ಯೂ ನಡುವೆ ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚಾಗಿರುವ ಕಾರಣ ಸರ್ಕಾರ ಈಗಾಗಲೇ ನೈಟ್ ಕರ್ಫ್ಯೂ ವಿಧಿಸಿದೆ. ಈ ನಡುವೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ನೋವಾ ಕ್ರಿಸ್ಟಾ ಕಾರೊಂದು ಡಿವೈಡರ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿರುವ ಘಟನೆ ಮಂತ್ರಿ ಮಾಲ್ ಬಳಿ ನಡೆದಿದೆ.

    ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಓವರ್ ಸ್ಪೀಡ್ ಆಗಿ ಬಂದ ಚಾಲಕ ಡಿವೈಡರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರ್ ನಲ್ಲಿದ್ದ ಎರಡು ಏರ್ ಬ್ಯಾಗ್‍ಗಳು ಓಪನ್ ಆಗಿದೆ. ಅಲ್ಲದೇ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಸೇರಿ ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿ ಮನೆಯ ಹೊರಗೆ ಎಸೆದ – ಆರೋಪಿ ಅರೆಸ್ಟ್

    ಇದೀಗ ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಘಟನಾ ಸ್ಥಳಕ್ಕೆ ಹೈಗ್ರೌಂಡ್ಸ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ಈ ಸಂಬಂಧ ಹೈ ಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ವೇಳೆ ಕಾರಿನಲ್ಲಿ ಮದ್ಯ ಬಾಟಲಿ ಪತ್ತೆಯಾಗಿದ್ದು, ಮದ್ಯ ಸೇವಿಸಿ ಕಾರು ಚಾಲನೆ ಮಾಡಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

    ಸದ್ಯ ಇಬ್ಬರನ್ನೂ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಮೆಡಿಕಲ್ ಟೆಸ್ಟ್ ಮಾಡಿಸುತ್ತಿದ್ದಾರೆ. ಈ ವೇಳೆ ಮದ್ಯ ಸೇವನೆ ಮಾಡಿರುವುದು ಕಂಡು ಬಂದರೆ ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ಅಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ:  ಸಿದ್ದರಾಮಯ್ಯಗೆ ಮೂಲ ಕಾಂಗ್ರೆಸ್ಸಿಗರ ಟಕ್ಕರ್‌

  • ಕಾಂಗ್ರೆಸ್‌ನಲ್ಲೇ ದ್ವಂದ್ವ – ನೈಟ್ ಕರ್ಫ್ಯೂ ಬಗ್ಗೆ ಡಿಕೆಶಿ, ಸಿದ್ದು ಭಿನ್ನ ಅಭಿಪ್ರಾಯ

    ಕಾಂಗ್ರೆಸ್‌ನಲ್ಲೇ ದ್ವಂದ್ವ – ನೈಟ್ ಕರ್ಫ್ಯೂ ಬಗ್ಗೆ ಡಿಕೆಶಿ, ಸಿದ್ದು ಭಿನ್ನ ಅಭಿಪ್ರಾಯ

    ಬೆಂಗಳೂರು: ಜನರ ಒತ್ತಡಕ್ಕೆ ತಲೆಬಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ರದ್ದು ಮಾಡಿದೆ. ಆದರೆ ನೈಟ್‌ ಕರ್ಫ್ಯೂ ವಿಚಾರದಲ್ಲಿ ಕಾಂಗ್ರೆಸ್‌ನಲ್ಲೇ ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ.

    ಹೌದು. ವಿರೋಧ ಮಾಡಲೆಂದೇ ವಿರೋಧ ಪಕ್ಷ ಇದೆ ಎಂಬ ಬಿಜೆಪಿ ಆರೋಪಕ್ಕೆ ಪೂರಕ ಎಂಬಂತೆ ಈಗ ಇರುವ ಸಣ್ಣ ಪುಟ್ಟ ಕೋವಿಡ್ ರೂಲ್ಸ್‌ಗೂ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ತಗಾದೆ ತೆಗೆದಿದ್ದಾರೆ.

    ಸರ್ಕಾರ ಪ್ರಾಕ್ಟಿಕಲ್ ಆಗಿಲ್ಲ. ಅವೈಜ್ಞಾನಿಕವಾಗಿ ರೂಲ್ಸ್ ಜಾರಿ ಮಾಡುತ್ತಿದೆ. ಲಂಡನ್‍ನಲ್ಲಿ ರೂಲ್ಸ್ ರಿಲೀಫ್ ನೀಡಲಾಗಿದೆ. ಆಂಧ್ರ, ತೆಲಂಗಾಣದಲ್ಲಿ ಕರ್ಫ್ಯೂ ಇಲ್ಲ. ನಮ್ಮಲ್ಲಿ ಮಾತ್ರ ಕರ್ಫ್ಯೂ ಹಾಕಿದ್ದಾರೆ. 50-50 ರೂಲ್ಸ್‌ನಿಂದ ಜನಕ್ಕೆ ತೊಂದರೆ ಆಗುತ್ತಿದೆ. ಬಸ್ಸು, ಮೆಟ್ರೋ, ರೈಲು, ವಿಮಾನದಲ್ಲೆಲ್ಲೂ 50-50 ರೂಲ್ಸ್ ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಕೊರೊನಾ ಇಳಿಕೆ 17,266 ಕೇಸ್ – ಒಟ್ಟು 42,470 ಪಾಸಿಟಿವ್‌, 26 ಸಾವು 

    ದೊಡ್ಡವರಿಗೆ ಒಂದು ಬಡವರಿಗೆ ಒಂದು ರೂಲ್ಸ್‌ ಇದೆ. ಮೊದಲು ಇದನ್ನು ತೆಗೆಯಬೇಕು. ಪಾದಯಾತ್ರೆ ಕಾರಣಕ್ಕೆ ಕರ್ಫ್ಯೂ ಜಾರಿ ಮಾಡಿದ್ದು ಇದರಿಂದ ಜನರಿಗೆ ಬಹಳ ನಷ್ಟ ಉಂಟು ಮಾಡಿದ್ದಾರೆ ಎಂದು ಡಿಕೆಶಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ: ಡಿಕೆಶಿ

    ನೈಟ್ ಕರ್ಫ್ಯೂ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವದಲ್ಲಿದ್ದಂತೆ ಕಂಡು ಬರುತ್ತಿದೆ. ನಿನ್ನೆಯಷ್ಟೇ ಮಾತನಾಡಿದ್ದ ಸಿದ್ದರಾಮಯ್ಯ, ವೀಕೆಂಡ್ ಕರ್ಫ್ಯೂ ಬೇಡ. ಬೇಕಿದ್ದರೆ ನೈಟ್ ಕರ್ಫ್ಯೂ ಇರಲಿ ಎಂದಿದ್ದರು. ಇವತ್ತು ಡಿಕೆಶಿ ನೀಡಿದ ಹೇಳಿಕೆ ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದೆ. ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿದ್ದಾರೆ. ಆದರೆ ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ನೈಟ್ ಕರ್ಫ್ಯೂ ಮತ್ತು 50-50 ರೂಲ್ಸ್ ಬಗ್ಗೆ ಪರಾಮರ್ಶೆ ನಡೆಸಲು ಸರ್ಕಾರ ಮುಂದಾಗಿದೆ.

  • ನೈಟ್ ಕರ್ಫ್ಯೂ ಅಗತ್ಯ ಇಲ್ಲ: ರಘುಪತಿ ಭಟ್

    ನೈಟ್ ಕರ್ಫ್ಯೂ ಅಗತ್ಯ ಇಲ್ಲ: ರಘುಪತಿ ಭಟ್

    ಉಡುಪಿ: ನೈಟ್ ಕರ್ಫ್ಯೂವಿನಿಂದ ಕೊರೊನಾ ನಿಯಂತ್ರಣವಾಗುತ್ತದೆ ಎನ್ನಲು ಸಾಧ್ಯವಿಲ್ಲ. ನ್ಯೂ ಇಯರ್ ಆಚರಣೆ ವೇಳೆ ನಿಯಮ ವಿಧಿಸಲಾಗಿತ್ತು. ಆದರೆ ನೈಟ್ ಕರ್ಫ್ಯೂ ಮುಂದುವರಿಸುವ ಅವಶ್ಯಕತೆ ಇಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ತಮ್ಮ ಅಭಿಪ್ರಾಯ ಹೇಳಿದ್ದಾರೆ.

    ನೈಟ್ ಕರ್ಫ್ಯೂ ಮಾಡದಿದ್ದರೆ ಜನ ಅನಗತ್ಯವಾಗಿ ಓಡಾಡುತ್ತಿದ್ದರು. ಇದರಿಂದ ಕೊರೊನಾ ಇನ್ನೂ ಇದೆ ಎನ್ನುವುದು ಜನರ ಅರಿವಿಗೆ ಬರುತ್ತದೆ. ಕೊರೊನಾ ಬಗ್ಗೆ ಎಚ್ಚರಿಕೆ ಇರಲಿ ಎಂದು ತಜ್ಞರು ನೈಟ್ ಕರ್ಫ್ಯೂ ವಿಧಿಸಲು ಸಲಹೆ ನೀಡಿದ್ದಾರೆ. ನೈಟ್ ಕರ್ಫ್ಯೂ ವಿಸ್ತರಣೆ ಆಗಬಹುದು ಅನ್ನಿಸುವುದಿಲ್ಲ. ಕೊರೊನಾ ಪೀಡಿತರ ಸಂಖ್ಯೆ ಜಾಸ್ತಿಯಾದರೆ ವಿಸ್ತರಣೆ ಮಾಡಬಹುದು ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದ ಮರ್ಯಾದೆಯನ್ನು ಮಣ್ಣುಪಾಲು ಮಾಡುವ ನಾಯಕರನ್ನು ಕಾಂಗ್ರೆಸ್ ಬೆಳೆಸುತ್ತಿದೆ : ಬಿಜೆಪಿ

    ಕೊರೊನಾ ಪೀಡಿತರ ಸಂಖ್ಯೆ ಜಾಸ್ತಿಯಾದರೂ ಅದರ ತೀವ್ರತೆ ಇಲ್ಲ. ಎಲ್ಲರಿಗೂ ಆಸ್ಪತ್ರೆ, ಆಕ್ಸಿಜನ್ ಬೇಕಾದರೆ ಸಮಸ್ಯೆಯಾಗುತ್ತದೆ. ಕೇವಲ ಕೊರೊನಾದಿಂದ ಯಾವುದೇ ಅಪಾಯ ಇಲ್ಲ. ಸರ್ಕಾರ ಹಾಗೂ ತಜ್ಞರ ಮೇಲೆ ವಿಶ್ವಾಸ ಇರಿಸಬೇಕು. ಅವರು ನಮ್ಮ ಒಳ್ಳೆಯದಕ್ಕೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು. ಇದನ್ನೂ ಓದಿ: ನಾವು ಜನರ ಧ್ವನಿಯಾಗಿ ಕೆಲಸ ಮಾಡ್ತೀವಿ, ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ: ಡಿಕೆಶಿ

  • ನೈಟ್ ಕರ್ಫ್ಯೂ ವಿಸ್ತರಣೆ ಬಗ್ಗೆ ನಾಳೆ, ನಾಡಿದ್ದು ತೀರ್ಮಾನ: ಬೊಮ್ಮಾಯಿ

    ನೈಟ್ ಕರ್ಫ್ಯೂ ವಿಸ್ತರಣೆ ಬಗ್ಗೆ ನಾಳೆ, ನಾಡಿದ್ದು ತೀರ್ಮಾನ: ಬೊಮ್ಮಾಯಿ

    ಬೆಳಗಾವಿ: ರಾಜ್ಯದಲ್ಲಿ ನೈಟ್ ಕರ್ಫ್ಯೂ ವಿಸ್ತರಣೆ ಬಗ್ಗೆ ನಾಳೆ, ನಾಡಿದ್ದು ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ವಾರದಲ್ಲಿ ಇಡೀ ದೇಶದಲ್ಲಿ ಕೊರೊನಾ ಕೇಸ್ ಹೆಚ್ಚಳವಾಗಿದೆ. ಅದೇ ರೀತಿ ಓಮಿಕ್ರಾನ್ ಕೇಸ್ ಕೂಡ ಹೆಚ್ಚಳವಾಗಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದರಿಂದ ಬೆಳಗಾವಿ ಸೇರಿ ಅಕ್ಕಪಕ್ಕದ ಚೆಕ್ ಪೋಸ್ಟ್‌ಗಳನ್ನು ಬೀಗಿ ಮಾಡಲು ಸೂಚನೆ ನೀಡಲಾಗಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯಲ್ಲಿ ಸುಮಾರು 11 ಚೆಕ್ ಪೋಸ್ಟ್‌ ಮಾಡಲಾಗಿದೆ. ಅದೇ ರೀತಿ ಬೆಳಗಾವಿಯಲ್ಲಿಯೂ ಆಗಬೇಕು. ಇದರಿಂದ ಕೆಲವು ಪ್ರಯಾಣಿಕರಿಗೆ ಸ್ವಲ್ಪ ತೊಂದರೆ ಆಗಬಹುದು. ರಾಜ್ಯದ ಹಾಗೂ ಬೆಳಗಾವಿ ಜಿಲ್ಲೆಯ ಜನರ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದರು. ಇದನ್ನೂ ಓದಿ: ಕೊರೊನಾ 3ನೇ ಅಲೆ ಭೀತಿ – ಪಶ್ಚಿಮ ಬಂಗಾಳದಲ್ಲಿ ನಾಳೆಯಿಂದ ಶಾಲಾ, ಕಾಲೇಜ್ ಬಂದ್

    ಕೊರೊನಾಕ್ಕೆ ನಿರ್ಬಂಧ ಅಷ್ಟೇ ಅಲ್ಲದೇ ತಯಾರಿಯನ್ನು ಸಹ ಮಾಡಿದ್ದಾರೆ. ಆಕ್ಸಿಜನ್ ಕೊರತೆ ನಿಗಿಸಲು ಕ್ರಮ ವಹಿಸಲಾಗಿದೆ. ಐಸಿಯು, ಬೆಡ್ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಇಡೀ ರಾಜ್ಯದಲ್ಲಿ 4 ಸಾವಿರಕ್ಕೂ ಹೆಚ್ಚು ಐಸಿಯು ಬೆಡ್‍ಗಳನ್ನು ಮಾಡಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಔಷಧಿ ಸಿದ್ಧವಾಗಿ ಇಟ್ಟುಕೊಳ್ಳಲು ಸೂಚನೆ ನೀಡಲಾಗಿದೆ. ನಾಳೆಯಿಂದ ಮಕ್ಕಳಿಗೆ ವ್ಯಾಕ್ಸಿನ್ ನೀಡಲು ಪ್ರಧಾನಿ ನಿರ್ಣಯ ಕೈಗೊಂಡಿದ್ದಾರೆ. ರಾಜ್ಯ ಮಟ್ಟದಲ್ಲಿಯೂ ಶಿಸ್ತುಬದ್ಧವಾಗಿ ವ್ಯಾಕ್ಸಿನ್ ನೀಡಲು ಸಿದ್ಧತೆ ಮಾಡಲಾಗಿದೆ. ನೈಟ್ ಕರ್ಫ್ಯೂ ಮುಂದುವರಿಕೆ ಬಗ್ಗೆ ಬೆಳವಣಿಗೆ ನೋಡಿಕೊಂಡು ನಾಳೆ, ನಾಡಿದ್ದು ತೀರ್ಮಾನ ಮಾಡುತ್ತೇವೆ. ಇದನ್ನೂ ಓದಿ: ಓಮಿಕ್ರಾನ್‌ ಸ್ಫೋಟ – ಬೆಂಗಳೂರಿನಲ್ಲಿ ಲಾಕ್‌ಡೌನ್‌ ಸುಳಿವು ನೀಡಿದ ಸಚಿವ ಆರ್‌.ಅಶೋಕ್‌

    ಲಾಕ್‍ಡೌನ್ ಬಗ್ಗೆ ಸಚಿವ ಆರ್.ಅಶೋಕ್ ಹೇಳಿಕೆ ವಿಚಾರಕ್ಕೆ ಇದೇ ವೇಳೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ನಮ್ಮ ನಿಲುವು ಬಹಳ ಸ್ಪಷ್ಟವಾಗಿ ಇದೆ. ಹಿಂದೆಲ್ಲ ಲಾಕ್‍ಡೌನ್ ಆಗಿತ್ತು, ಮತ್ತೆ ಹಾಗೆ ಆಗಬಾರದು ಎಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಜನ ಸಹಕಾರ ಕೊಡಬೇಕು ಎನ್ನುವ ನಿಟ್ಟಿನಲ್ಲಿ ಆರ್.ಅಶೋಕ್ ಹೇಳಿದ್ದಾರೆ ಎಂದರು.

  • ಪಾರ್ಟಿ ಮಾಡ್ತಿದ್ದವರಿಂದ ಪೊಲೀಸರ ಮೇಲೆ ಹಲ್ಲೆ ಪ್ರಕರಣ – ಆರೋಪಿಗಳಿಗೆ ಷರತ್ತು ಬದ್ದ ಜಾಮೀನು ಮಂಜೂರು

    ಪಾರ್ಟಿ ಮಾಡ್ತಿದ್ದವರಿಂದ ಪೊಲೀಸರ ಮೇಲೆ ಹಲ್ಲೆ ಪ್ರಕರಣ – ಆರೋಪಿಗಳಿಗೆ ಷರತ್ತು ಬದ್ದ ಜಾಮೀನು ಮಂಜೂರು

    ಚಿಕ್ಕಬಳ್ಳಾಪುರ: ನೈಟ್ ಕರ್ಫ್ಯೂ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದ ಹೋಂ ಸ್ಟೇ ಮೇಲೆ ದಾಳಿ ಮಾಡಿದ್ದ ಪೊಲೀಸರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಬಂಧಿತರಾಗಿದ್ದ 8 ಮಂದಿ ಆರೋಪಿಗಳಿಗೂ ಚಿಕ್ಕಬಳ್ಳಾಪುರ ನ್ಯಾಯಾಲಯದಿಂದ ಷರತ್ತು ಬದ್ದ ಜಾಮೀನು ಮಂಜೂರಾಗಿದೆ.

    ಕಳೆದ ರಾತ್ರಿ ನೈಟ್ ಕರ್ಫ್ಯೂ ಉಲ್ಲಂಘಿಸಿ ಚಿಕ್ಕಬಳ್ಳಾಪುರ ತಾಲೂಕು ಅಗಲಗುರ್ಕಿ ಗ್ರಾಮದ ಬಳಿಯ ವೈಟ್ ನಿರ್ವಾಣ್ ಜೇಡ್ ಹೋಂ ಸ್ಟೇನಲ್ಲಿ ತಡರಾತ್ರಿ ಬೆಂಗಳೂರು ಮೂಲದ ಪ್ರತಿಷ್ಠಿತರ ಮಕ್ಕಳು ಪಾರ್ಟಿ ಮಾಡಿ ಮೋಜು ಮಸ್ತಿ ಮಾಡುತ್ತಿದ್ದರು. ಈ ವೇಳೆ ಚಿಕ್ಕಬಳ್ಳಾಪುರ ಸಿಪಿಐ ಹಾಗೂ ಸಿಬ್ಬಂದಿ ದಾಳಿ ಮಾಡಿ ಪಾರ್ಟಿ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಸಮಯದಲ್ಲಿ ಪಾನಮತ್ತರಾಗಿದ್ದ ಆರೋಪಿತರು ಪೊಲೀಸರ ಮೇಲೆಯೇ ದಬ್ಬಾಳಿಕೆ ನಡೆಸಿ ಹಲ್ಲೆ ನಡೆಸಿದ್ದರು. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು

    ಪರಸ್ಪರರು ತಳ್ಳಾಟ, ನೂಕಾಟ ನಡೆಸಿ ಪೊಲೀಸರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಬೆಂಗಳೂರು ಮೂಲದ ರಘು ವಂಶ್ ಕನೂಜ್, ಅಕ್ಷಯ್ ಬಜಾಜ್, ತೇಜಸ್, ಆಕಾಶ್, ಆದಿತ್ಯ, ಚಿರಾಗ್, ಸೂರಜ್, ಅರ್ಜುನ್ ಆರೋಪಿತರಾಗಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷೆನ್ 353, 323, 504 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ-188, 269, 272 ಅಡಿ ಪ್ರಕರಣ ದಾಖಲಿಸಿದ್ದರು. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಕಳೆದ ವರ್ಷದಂತೆ ಈ ಬಾರಿಯೂ ಸರಳವಾಗಿಯೇ ಹೊಸ ವರ್ಷ ಆಚರಣೆ