Tag: ನೈಟ್ ಕಫ್ರ್ಯೂ

  • ಜನತೆಯ ಹಿತದೃಷ್ಟಿಯಿಂದ ಕಠಿಣ ಕ್ರಮ: ಸುಧಾಕರ್ ಸಮರ್ಥನೆ

    ಜನತೆಯ ಹಿತದೃಷ್ಟಿಯಿಂದ ಕಠಿಣ ಕ್ರಮ: ಸುಧಾಕರ್ ಸಮರ್ಥನೆ

    ಬೆಂಗಳೂರು: ಜನತೆಯ ಹಿತದೃಷ್ಟಿಯಿಂದ ಕೆಲವು ಸಂದರ್ಭದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ನೈಟ್ ಕಫ್ರ್ಯೂ ಬಗ್ಗೆ ಜನರಿಗೆ ಅಸಮಾಧಾನವಾಗುತ್ತಿರುವ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೈಟ್ ಕಫ್ರ್ಯೂ ಕೇವಲ ಹತ್ತು ದಿನಗಳ ಕಾಲ ಮಾತ್ರ. ಈ ರೀತಿ ಕ್ರಮಗಳನ್ನು ತೆಗೆದುಕೊಳ್ಳಲು ನಮಗೇನು ಖುಷಿ ಇಲ್ಲ. ಜನತೆಯ ಹಿತದೃಷ್ಟಿಯಿಂದ ಕೆಲವು ಸಂದರ್ಭದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತೆ. ತಾಂತ್ರಿಕ ಸಲಹಾ ಸಮಿತಿ ಕೊಟ್ಟ ಸಲಹೆಗಳ ಪ್ರಕಾರ ಕ್ರಮ ತೆಗೆದುಕೊಂಡಿದ್ದೇವೆ. ಜನತೆ ದಯಮಾಡಿ ಸಹಕಾರ ಮಾಡಬೇಕು. ಹದಿನಾಲ್ಕು ದಿನಗಳ ಕಾಲ ಆದ ನಂತರ ಪರಿಸ್ಥಿತಿ ನೋಡಿ ಕ್ರಮ ಕೈಗೊಳ್ತೀವಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಓಮಿಕ್ರಾನ್ ವೈರಸ್‍ಗೆ ಬೆಚ್ಚಿಬಿದ್ದ ಜನ – ಡಿಸೆಂಬರ್‌ನಲ್ಲಿ ಹೆಚ್ಚು ವ್ಯಾಕ್ಸಿನೇಷನ್

    night curfew

    ಬಳ್ಳಾರಿ, ವಿಜಯನಗರ ಜಿಲ್ಲೆಯಲ್ಲಿ ಶಿಶುಗಳ ಮರಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಳ್ಳಾರಿ ಜಿಲ್ಲೆಯ ಡಿಎಚ್‍ಓ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ. ಈ ಕುರಿತು ಮಾಹಿತಿಯನ್ನು ತಿಳಿದುಕೊಂಡಿದ್ದೇನೆ. ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿಸಿದರು.

    ಸಂಕ್ರಾಂತಿ ನಂತರ ರಾಜಕೀಯದಲ್ಲಿ ಕೆಲ ಬದಲಾವಣೆ ವಿಚಾರವಾಗಿ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಎಲ್ಲ ಕೆಲಸಗಳು ಆಗ್ತಿವೆ. ಸರ್ಕಾರ ಉತ್ತಮವಾಗಿ ನಡೆಯುತ್ತಿದೆ. ಇದು ಇನ್ನಷ್ಟು ಗಟ್ಟಿ ಆಗುತ್ತದೆ. ವಿರೋಧ ಪಕ್ಷಗಳು ಕೂಡಾ ನಮ್ಮ ಅಭಿವೃದ್ಧಿ ಕೆಲಸಗಳನ್ನು ನೋಡಿ ಹತಾಶರಾಗ್ತಾರೆ. ಸಚಿವರ ಬದಲಾವಣೆ ವಿಚಾರ ಸಿಎಂ ವಿವೇಚನೆಗೆ ಬಿಟ್ಟದ್ದು. ಯಾರು ತಂಡದಲ್ಲಿ ಇರಬೇಕು, ಯಾರು ಇರಬಾರದು ಅನ್ನೋದನ್ನು ಸಿಎಂ ನಿರ್ಧಾರ ಮಾಡ್ತಾರೆ ಎಂದರು. ಇದನ್ನೂ ಓದಿ: ಕ್ರಿಸ್‍ಮಸ್ ದಿನ ಬಡ ಮಕ್ಕಳೊಂದಿಗೆ ಕಾಲಕಳೆದ ಶ್ವೇತಾ ಶ್ರೀವಾತ್ಸವ್

  • ಒಂದು ದಿನದ ಬಂದ್ ಮಾಡಿದ್ರೆ ತಪ್ಪೇನು ಆಗಲ್ಲ: ಎಚ್‍ಕೆ ಕುಮಾರಸ್ವಾಮಿ

    ಒಂದು ದಿನದ ಬಂದ್ ಮಾಡಿದ್ರೆ ತಪ್ಪೇನು ಆಗಲ್ಲ: ಎಚ್‍ಕೆ ಕುಮಾರಸ್ವಾಮಿ

    – ಬಂದ್‍ನಿಂದ ಕನ್ನಡಿಗರಿಗೆ ಕಷ್ಟ ಆಗುತ್ತದೆ ಎಂದಿದ್ದ ಎಚ್‍ಡಿಕೆ
    – ಮಹಾರಾಷ್ಟ್ರಕ್ಕೆ ಎಚ್ಚರಿಕೆ ಕೊಡುವ ದೃಷ್ಟಿಯಿಂದ ಬಂದ್ ಅಗತ್ಯವಿದೆ

    ಹಾಸನ: ಮಾಜಿ ಸಿಎಂ ಕುಮಾರಸ್ವಾಮಿ ಬಂದ್‍ನಿಂದ ಕನ್ನಡಿಗರಿಗೆ ಕಷ್ಟ ಆಗುತ್ತದೆ ಎಂದು ಹೇಳಿದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಒಂದು ದಿನ ತೀವ್ರ ತರವಾದ ಬಂದ್ ಮಾಡಿದರೆ ತಪ್ಪೇನು ಆಗಲ್ಲ ಎಂದು ಹೇಳುವ ಮೂಲಕ ಕರ್ನಾಟಕ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಡಿ.31 ಕರ್ನಾಟಕ ಬಂದ್ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಕನ್ನಡಪರ ಚಳುವಳಿಗಾರರು ಬಂದ್‍ಗೆ ಕರೆ ಕೊಟ್ಟಿದ್ದಾರೆ. ಅದು ಒಂದು ದಿನ ತೀವ್ರ ತರವಾದ ಬಂದ್ ಮಾಡಿದರೆ ತಪ್ಪೇನು ಆಗಲ್ಲ. ಏಕೆಂದರೆ ನಾವು ಪ್ರತಿದಿನ ಏನು ಬಂದ್ ಮಾಡಲ್ಲ ಎಂದು ಉತ್ತರಿಸಿದ ಅವರು, ಎಂಇಎಸ್, ಮಹಾರಾಷ್ಟ್ರಕ್ಕೆ ಎಚ್ಚರಿಕೆ ಕೊಡುವ ದೃಷ್ಟಿಯಿಂದ ಬಂದ್ ಅಗತ್ಯವಿದೆ. ಬಂದ್‍ಗೆ ಜೆಡಿಎಸ್ ಬೆಂಬಲವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಸೆಂಬರ್ 31ರ ಕರ್ನಾಟಕ ಬಂದ್ ಗೆ ಬೆಳಗಾವಿಯಲ್ಲೇ ಬೆಂಬಲ ಇಲ್ಲ: ಅಶೋಕ್ ಚಂದರಗಿ

    ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಎಚ್‍ಡಿಕೆ, ಡಿ. 31ಕ್ಕೆ ಕರ್ನಾಟಕ ಬಂದ್ ಮಾಡುವುದಕ್ಕೆ ವಿವಿಧ ಸಂಘಟನೆಗಳು ಕರೆ ನೀಡಿದೆ. ಈ ಬಂದ್ ಕರೆಯಿಂದ ಮಹಾರಾಷ್ಟ್ರಕ್ಕೆ ತೊಂದರೆ ಇಲ್ಲ. ರಾಜ್ಯದ ಜನರಿಗೆ ತೊಂದರೆ ಆಗುತ್ತದೆ. ಸಣ್ಣಪುಟ್ಟ ವ್ಯಾಪಾರಿಗಳಿಗೆ, ಕೂಲಿ ಕೆಲಸದವರಿಗೆ ಆಗುವ ಕಷ್ಟದ ಬಗ್ಗೆ ಚಿಂತಿಸಬೇಕು. ಬಂದ್‍ಗೆ ಕರೆ ನೀಡಿದವರು ಕೂಡ ಈ ಬಗ್ಗೆ ಯೋಚಿಸಬೇಕು ಎಂದಿದ್ದರು.

    ಡಿ.28 ರಿಂದ ಹತ್ತು ದಿನಗಳ ಕಾಲ ರಾಜ್ಯದಲ್ಲಿ ನೈಟ್ ಕಫ್ರ್ಯೂ ಜಾರಿ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಕೆ ಕುಮಾರಸ್ವಾಮಿ, ಜನರು ಇನ್ನೂ ಕೂಡ ಜಾಗೃತರಾಗಿಲ್ಲ. ಕೊರೊನಾ ಅನೇಕ ರೂಪಾಂತರಿಗಳನ್ನು ಹೊಂದಿದೆ. ಈಗ ಓಮಿಕ್ರಾನ್ ಬಂದಿದ್ದು, ಹೆಚ್ಚಾಗುತ್ತಿದೆ. ಸರ್ಕಾರದ ಕಾನೂನುಗಳನ್ನು ಜನರು ಪಾಲಿಸಬೇಕು. ಒಂದಿಷ್ಟು ಜನ ಸೇರಬಹುದು ಎಂದು ಮಾಡಿರುವುದು ತಪ್ಪು. ಮೊದಲಿನಂತೆ ಬಿಗಿಯಾಗಬೇಕು. ಜನರ ದಿನಚರಿಗೆ ತೊಂದರೆಯಾಗದಂತೆ ನಿಯಮಗಳನ್ನು ತರಬೇಕು ಎಂದರು. ಇದನ್ನೂ ಓದಿ: ಕರ್ನಾಟಕ ಬಂದ್‌ನಿಂದ ಕನ್ನಡಿಗರಿಗೆ ಕಷ್ಟ: ಎಚ್‌ಡಿಕೆ

    ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಅವರು, ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧ ಮಾಡಿದ್ದೇವೆ. ದೇಶದಲ್ಲಿ ಎಲ್ಲರೂ ಕೂಡ ಒಂದೇ, ಯಾವುದೇ ಧರ್ಮ ಅನುಸರಿಸಲಿ ಎಲ್ಲ ಕೂಡ ಒಂದೇ. ಮಹಾತ್ಮ, ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಮತಾಂತರವಾಗಿದ್ರು. ಅದು ಅವರವರ ಇಚ್ಛೇ. ಆದರೆ ಬಲವಂತದ ಮತಾಂತರಕ್ಕೆ ನಮ್ಮ ವಿರೋಧವಿದೆ. ಈಗಾಗಲೇ ಸಂವಿಧಾನದಲ್ಲಿ ಅವಕಾಶವಿದೆ, ಆದ್ದರಿಂದ ಇವೆಲ್ಲವನ್ನೂ ತರುವ ಅಗತ್ಯವಿಲ್ಲ. ಭಾವನಾತ್ಮಕ ವಿಚಾರಗಳನ್ನು ತಂದು ಪಕ್ಷಕ್ಕೆ ಅನೂಕೂಲ ಮಾಡಿಕೊಳ್ಳುವ ದೃಷ್ಟಿಯಿಂದ ಬಿಜೆಪಿ ಸರ್ಕಾರ ಈ ರೀತಿ ಮಾಡಿದೆ. ನಾವು ವಿರೋಧ ಮಾಡಿದ್ದೀವಿ, ಕಾಂಗ್ರೆಸ್ ವಿರೋಧ ಮಾಡಿದೆ, ಜನಸಾಮಾನ್ಯರು ವಿರೋಧ ಮಾಡಿದ್ದಾರೆ ಎಂದು ಹೇಳಿದರು.

  • ವರಮಹಾಲಕ್ಷ್ಮಿ ಹಬ್ಬಕ್ಕೆ ಶಾಪಿಂಗ್ – ಕೊರೊನಾ ನಿಯಮಗಳಿಗೆ ಕ್ಯಾರೇ ಅನ್ನುತ್ತಿಲ್ಲ ಜನ

    ವರಮಹಾಲಕ್ಷ್ಮಿ ಹಬ್ಬಕ್ಕೆ ಶಾಪಿಂಗ್ – ಕೊರೊನಾ ನಿಯಮಗಳಿಗೆ ಕ್ಯಾರೇ ಅನ್ನುತ್ತಿಲ್ಲ ಜನ

    ಬೆಂಗಳೂರು: ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವಾಗಿದ್ದು, ಹಬ್ಬದ ಸಂಭ್ರಮಕ್ಕೆ ಸಿಲಿಕಾನ್ ಸಿಟಿ ಜನ ಸಜ್ಜಾಗಿದ್ದಾರೆ. ಈ ಮಧ್ಯೆ ನಗರದ ಮ್ಲಲೇಶ್ವರಂನಲ್ಲಿ ಕೊರೊನಾ ಕಟ್ಟುನಿಟ್ಟನ ನಿಯಮಗಳನ್ನು ಜಾರಿಗೊಳಿಸಿದ್ದು, ಜನರು ಮಾತ್ರ ಕ್ಯಾರೆ ಅನ್ನುತ್ತಿಲ್ಲ.

    ಹೌದು, ಕೊರೊನಾ ಸಂಪೂರ್ಣವಾಗಿ ಮುಗಿದೇ ಹೋಗಿದೆ ಎನ್ನುವ ಹಾಗೇ ಬೆಂಗಳೂರಿನ ಜನ ಹಬ್ಬದ ಖರೀದಿಯಲ್ಲಿ ತೊಡಗಿದ್ದಾರೆ. ಅದರಲ್ಲೂ ಮಲ್ಲೇಶ್ವರಂನಲ್ಲಿ ಜನ ನೈಟ್ ಕರ್ಫ್ಯೂ ಶುರುವಾದರೂ ಕೊಂಚವೂ ಫಾಲೋ ಮಾಡದೇ ಹಬ್ಬಕ್ಕಾಗಿ ಹೂ, ಹಣ್ಣು, ಬಟ್ಟೆ, ದೇವರ ಅಲಂಕಾರದ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಇದನ್ನೂ ಓದಿ:1,250 ಕೋಟಿ ರೂ. ಜೊತೆ ಘನಿ ಪರಾರಿ – ಈಗ ಯುಎಇಯಲ್ಲಿ ಆಶ್ರಯ

    ಇದು ಹಬ್ಬದ ಖರೀದಿ ಮಾತ್ರವಲ್ಲ ಕೊರೊನಾ ಮೂರನೇ ಅಲೆಯ ಆರಂಭಕ್ಕೂ ನಾಂದಿಯಾಗುವ ಲಕ್ಷಣಗಳು ಹೆಚ್ಚಾಗಿ ಕಾಣುತ್ತಿದೆ. ಕಾರಣ ಜನ ಕೊರೊನಾ ನಿಯಮಗಳನ್ನು ಸಂಪೂರ್ಣವಾಗಿ ಬ್ರೇಕ್ ಮಾಡಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಇದೇ ವ್ಯಾಪಾರಕ್ಕೆ ಸರಿಯಾದ ಸಮಯ ಅಂತ ವ್ಯಾಪಾರಿಗಳು ಸಹ ನೈಟ್ ಕರ್ಫ್ಯೂ ಇದ್ದರೂ ಅಂಗಡಿಗಳನ್ನು ಓಪನ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಬಾಲ್ಯ ವಿವಾಹ ತಪ್ಪಿಸಿ, ಶಿಕ್ಷಣ ಕೊಡಿಸಿ- ಅಧಿಕಾರಿಗಳಿಗೆ ಬಾಲಕಿ ಪತ್ರ

  • ಖಾಲಿ ರೋಡಿನ ಮಧ್ಯೆ ಕುದುರೆ ಏರಿ ಹೊರಟ ವರ

    ಖಾಲಿ ರೋಡಿನ ಮಧ್ಯೆ ಕುದುರೆ ಏರಿ ಹೊರಟ ವರ

    ಪ್ರತಿಯೊಬ್ಬರು ತಮ್ಮ ಕುಟುಂಬ ಹಾಗೂ ಪ್ರೀತಿಪಾತ್ರದವರ ಸಮ್ಮುಖದಲ್ಲಿ ಮದುವೆಯಾಗಬೇಕೆಂಬ ಕನಸು ಹೊಂದಿರುತ್ತಾರೆ. ಆದರೆ ಕೊರೊನಾ ವೈರಸ್ ಗ್ರಾಂಡ್ ಆಗಿ ಮದುವೆ ಆಗಬೇಕೆಂದುಕೊಂಡಿದ್ದ ಅದೆಷ್ಟೂ ಜೋಡಿಗಳ ಆಸೆಗೆ ತಣ್ಣಿರೆರಚಿದೆ ಎಂದೇ ಹೇಳಬಹುದು.

    ಅದರಲ್ಲಿಯೂ ಕೋವಿಡ್-19 ಎರಡನೇ ಅಲೆಯಿಂದ ಸರ್ಕಾರವು ಹಲವಾರು ಹೊಸ ನಿರ್ಬಂಧಗಳನ್ನು ಜಾರಿಗೆ ತಂದಿದೆ. ಮದುವೆಗೆ ನಿರ್ದಿಷ್ಟ ಸಂಖ್ಯೆಯಲ್ಲಿ ಮಂದಿ ಮಾತ್ರ ಪಾಲ್ಗೊಳ್ಳಬೇಕೆಂದು ಸೂಚಿಸಿದೆ. ಕೊರೊನಾ ವೈರಸ್‍ನಿಂದಾಗಿ ಅದ್ದೂರಿಯಾಗಿ ಮದುವೆಯಾಗಬೇಕೆಂದುಕೊಂಡಿದ್ದ ಹಲವು ಜೋಡಿಗಳು ಆಸೆ ಇದೀಗ ನುಚ್ಚುನೂರಾಗಿದೆ. ಆದರೂ ನೈಟ್ ಕಫ್ರ್ಯೂ ಲಾಕ್‍ಡೌನ್ ನಿರ್ಬಂಧಗಳ ಮಧ್ಯೆ ಬ್ಯಾಂಡ್ ಬಾಜಾ ಬರಾತ್ ಜೊತೆಗೆ ಮದುವೆಯನ್ನು ಅತ್ಯಂತ ದುಃಖಕರವಾಗಿ ಕೆಲವರು ಆಚರಿಸಿಕೊಂಡಿದ್ದಾರೆ.

    ಹೌದು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು, 27 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ನೈಟ್ ಕಫ್ರ್ಯೂನಿಂದಾಗಿ ರಸ್ತೆ ಪೂರ್ತಿ ಖಾಲಿಯಾಗಿರುತ್ತದೆ. ಈ ವೇಳೆ ವರನು ಕುದುರೆ ಮೇಲೆ ಕುಳಿತುಕೊಂಡು ಬರುತ್ತಿದ್ದರೆ, ಕೇವಲ 3 ಮಂದಿ ಬ್ಯಾಂಡ್ ಬಾರಿಸುತ್ತಾ ವರನ ಜೊತೆಗೆ ಹೋಗುತ್ತಿರುವುದನ್ನು ಕಾಣಬಹುದಾಗಿದೆ.

    ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದು ಎಲ್ಲಿಯದ್ದು ಎನ್ನುವುದು ದೃಢಪಟ್ಟಿಲ್ಲ.

  • ತೆಲಂಗಾಣದಲ್ಲಿ ಮೇ 1ರವರೆಗೂ ನೈಟ್ ಕರ್ಫ್ಯೂ ಘೋಷಿಸಿದ ಸರ್ಕಾರ

    ತೆಲಂಗಾಣದಲ್ಲಿ ಮೇ 1ರವರೆಗೂ ನೈಟ್ ಕರ್ಫ್ಯೂ ಘೋಷಿಸಿದ ಸರ್ಕಾರ

    ಹೈದರಾಬಾದ್: ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆ ಇಂದಿನಿಂದ ಮೇ 1ರವರೆಗೂ ತೆಲಂಗಾಣ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದೆ.

    ತೆಲಂಗಾಣ ಸರ್ಕಾರದ ಆದೇಶದಂತೆ ರಾತ್ರಿ 9 ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ವಿಧಿಸಲಾಗಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಕೊರೊನಾ ವೈರಸ್ ನಿಯಂತ್ರಿಸಲು ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.

    ಈ ಹಿಂದೆ ತೆಲಂಗಾಣ ಹೈಕೋರ್ಟ್ ಕೂಡ ಕೋವಿಡ್-19 ಸೋಂಕನ್ನು ತಡೆಗಟ್ಟಲು ರಾತ್ರಿ ಹಾಗೂ ವಾರಾಂತ್ಯದಲ್ಲಿ ನೈಟ್ ಕರ್ಫ್ಯೂ ವಿಧಿಸುವಂತೆ ಸರ್ಕಾರಕ್ಕೆ ತಿಳಿಸಿತ್ತು. ಸೋಮವಾರ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್‍ಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

  • ಇನ್ಮುಂದೆ ರಾಜಸ್ಥಾನದಲ್ಲಿ ವಾರಾಂತ್ಯಕ್ಕೆ ನೈಟ್ ಕರ್ಫ್ಯೂ ಜಾರಿ

    ಇನ್ಮುಂದೆ ರಾಜಸ್ಥಾನದಲ್ಲಿ ವಾರಾಂತ್ಯಕ್ಕೆ ನೈಟ್ ಕರ್ಫ್ಯೂ ಜಾರಿ

    ಜೈಪುರ: ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಗುರುವಾರ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಏಪ್ರಿಲ್ 16ರಿಂದ, 19ರವರೆಗೂ ಸಂಜೆ 6ರಿಂದ ಬೆಳಗ್ಗೆ 5ರವರೆಗೂ ವಾರಾಂತ್ಯದಲ್ಲಿ ನೈಟ್ ಕರ್ಫ್ಯೂ ಘೋಷಿಸಿದ್ದಾರೆ.

    ಈ ಕುರಿತಂತೆ ಸಿಎಂ ಅಶೋಕ್ ಗೆಹ್ಲೋಟ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಕೋವಿಡ್-19 ಹೊಸ ನಿರ್ಬಂಧನೆಗಳನ್ನು ಪಾಲಿಸುವಂತೆ ಹಾಗೂ ಅವುಗಳನ್ನು ಅನುಸರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.

    ರಾಜಸ್ಥಾನದಲ್ಲಿ ಕೊರೊನಾಗೆ ನಿನ್ನೆ 33 ಮಂದಿ ಸಾವನ್ನಪ್ಪಿದ್ದು, 6,658 ಹೊಸ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆ, ನೈಟ್ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ. ಅಲ್ಲದೆ ನೈಟ್ ಕರ್ಫ್ಯೂ ವೇಳೆ ಬ್ಯಾಂಕಿಂಗ್, ಎಲ್‍ಪಿಜಿ ಸೇವೆಗಳು, ಹಣ್ಣು, ತರಕಾರಿ ಮತ್ತು ಹಾಲು ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

    ಈ ಸಮಯದಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳದಿದ್ದರೆ, ಸೋಂಕಿನ ಪ್ರಮಾಣ ಹೆಚ್ಚಾಗಲಿದ್ದು, ಇತರ ರಾಜ್ಯಗಳಂತೆ ಇಲ್ಲಿನ ಪರಿಸ್ಥಿತಿ ಕೂಡ ಹದಗೆಡಬಹುದು ಎಂದು ಸಿಎಂ ಅಶೋಕ್ ಗೆಹ್ಲೋಟ್ ಎಚ್ಚರಿಸಿದ್ದಾರೆ.

  • ಪುಣೆಯಲ್ಲಿ 7 ದಿನಗಳ ಕಾಲ ನೈಟ್ ಕರ್ಫ್ಯೂ – ಬಾರ್, ಹೋಟೆಲ್, ಧಾರ್ಮಿಕ ಸ್ಥಳಗಳು ಬಂದ್

    ಪುಣೆಯಲ್ಲಿ 7 ದಿನಗಳ ಕಾಲ ನೈಟ್ ಕರ್ಫ್ಯೂ – ಬಾರ್, ಹೋಟೆಲ್, ಧಾರ್ಮಿಕ ಸ್ಥಳಗಳು ಬಂದ್

    ಮುಂಬೈ: ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆ ಪುಣೆಯ ಬಾರ್‌ಗಳು, ಹೋಟೆಲ್‍ಗಳು ಹಾಗೂ ರೆಸ್ಟೋರೆಂಟ್‍ಗಳನ್ನು 7 ದಿನಗಳವರೆಗೂ ಮುಚ್ಚುವುದರ ಜೊತೆಗೆ ಕೆಲವು ನಿರ್ಬಂಧಗಳನ್ನು ಜಾರಿಗೆ ತರಲು ಜಿಲ್ಲಾಡಳಿತ ನಿರ್ಧರಿಸಿದೆ.

    ಇದಲ್ಲದೆ ಕೋವಿಡ್-19 ಹರಡುವುದನ್ನು ತಡೆಗಟ್ಟಲು ಏಪ್ರಿಲ್ 3 ರಿಂದ ಪುಣೆಯಲ್ಲಿ ಸಂಜೆ 6ರಿಂದ ಬೆಳಗ್ಗೆ 6ರವರೆಗೆ 12 ಗಂಟೆಗಳ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಜಿಲ್ಲೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಬಾರ್‍ಗಳು, ಹೋಟೆಲ್‍ಗಳನ್ನು 7 ದಿನಗಳ ಕಾಲ ಮುಚ್ಚಲಾಗಿದ್ದು, ಕೇವಲ ಹೋಂ ಡೆಲಿವರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

    ಅಂತ್ಯಕ್ರಿಯೆ ಮತ್ತು ವಿವಾಹ ಸಮಾರಂಭಗಳನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದಿಲ್ಲ. ಅಲ್ಲದೆ ಒಂದು ವಾರ ಧಾರ್ಮಿಕ ಸ್ಥಳಗಳನ್ನು ಕೂಡ ಸಂಪೂರ್ಣವಾಗಿ ಮುಚ್ಚಬೇಕು ಪುಣೆಯ ವಿಭಾಗೀಯ ಆಯುಕ್ತರು ತಿಳಿಸಿದ್ದಾರೆ.

  • ಮಹಾರಾಷ್ಟ್ರದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿ

    ಮಹಾರಾಷ್ಟ್ರದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿ

    ಮುಂಬೈ: ಇಂದಿನಿಂದ ಮಹಾರಾಷ್ಟ್ರದಲ್ಲಿ ರಾತ್ರಿ 8 ರಿಂದ ಬೆಳಗ್ಗೆ 7ರವರೆಗೆ ನೈಟ್ ಕರ್ಫ್ಯೂ ಜಾರಿಯಾಗಲಿದೆ. ನಿಯಮ ಮೀರಿದರೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಸರ್ಕಾರ ಸೂಚನೆಯನ್ನು ನೀಡಿದೆ.

    ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಮಾರಕ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಇಂದಿನಿಂದ (ಮಾರ್ಚ್ 28) ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ವಿಧಿಸಿದೆ. ಮುಂದಿನ ಆದೇಶದವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇರುತ್ತದೆ ಎಂದು ಮುಖ್ಯಮಂತ್ರಿ ಕಚೇರಿಯಿಂದ ಸೂಚನೆಯನ್ನು ನೀಡಲಾಗಿದೆ.

    ಭಾರತದಲ್ಲಿ ಶನಿವಾರ 62,714 ಹೊಸ ಕೊರೊನವೈರಸ್ ಸೋಂಕಿನ ಪ್ರಕರಣಗಳನ್ನು ವರದಿ ಆಗಿವೆ. ಭಾರತವು ಶನಿವಾರ ದಾಖಲಿಸಿದ ಒಟ್ಟು ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲಿ ಮಾತ್ರ 35,726 ಹೊಸ ಪ್ರಕರಣಗಳು ದಾಖಲಾಗಿವೆ. 3,162 ಪ್ರಕರಣ, ಛತ್ತೀಸ್‍ಗಢದಲ್ಲಿ ಪಂಜಾಬ್‍ಗಿಂತ ಹೆಚ್ಚಿನ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಸಕ್ರಿಯ ಪ್ರಕರಣಗಳು 4.86 ಲಕ್ಷಕ್ಕಿಂತ ಹೆಚ್ಚಾಗಿದೆ. ಶನಿವಾರ 312 ಜನರು ವೈರಸ್‍ಗೆ ತುತ್ತಾಗಿದ್ದಾರೆ.

    ಕೊವೀಡ್-19 ಕಾರಣದಿಂದಾಗಿ ಮಹಾರಾಷ್ಟ್ರದಲ್ಲಿ ಶನಿವಾರ 166 ಸಾವನ್ನಪ್ಪಿದ್ದಾರೆ. ಇದು 2020 ರ ಅಕ್ಟೋಬರ್ ನಿಂದೀಚೆಗೆ ರಾಜ್ಯದಲ್ಲಿ 35,726 ಹೊಸ ಕೊರೊನ ವೈರಸ್ ಪ್ರಕರಣಗಳು ವರದಿಯಾಗಿವೆ. ಮಾರ್ಚ್ 27 ರಿಂದ ಧಾರ್ಮಿಕ ಮತ್ತು ರಾಜಕೀಯ ಸೇರಿದಂತೆ ರಾಜ್ಯದಲ್ಲಿ ಎಲ್ಲಾ ರೀತಿಯ ಸಾಮಾಜಿಕ ಕೂಟಗಳನ್ನು ಮಹಾರಾಷ್ಟ್ರ ಸರ್ಕಾರ ನಿಷೇಧಿಸಿದೆ. ಮಾಲ್‍ಗಳು, ರೆಸ್ಟೋರೆಂಟ್‍ಗಳು ಮತ್ತು ಉದ್ಯಾನಗಳು ರಾಜ್ಯದಲ್ಲಿ ರಾತ್ರಿ 8 ರಿಂದ ಬೆಳಗ್ಗೆ 7 ರವರೆಗೆ ಮುಚ್ಚಲ್ಪಡುತ್ತವೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. ಆದರೆ, ರಾತ್ರಿ ವೇಳೆಯಲ್ಲಿ ಆಹಾರವನ್ನು ಹೋಮ್ ಡೆಲವರಿ ಮಾಡುವುದಕ್ಕೆ ಮಾತ್ರ ವಿನಾಯಿತಿ ನೀಡಿದೆ.

    ಕೋವಿಡ್-19 ಹರಡುವಿಕೆ ತಡೆಯುವ ಸಲುವಾಗಿ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಖ್ಯಮಂತ್ರಿ ಠಾಕ್ರೆ ಅವರು ಎಲ್ಲ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಮಹಾರಾಷ್ಟ್ರ ಸರ್ಕಾರ ಕೊರೊನಾ ತಡೆ ಅಭಿಯಾನವನ್ನು ಮತ್ತೆ ಪ್ರಾರಂಭಿಸಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸರ್ಕಾರದ ಈ ನಿಯಮಗಳನ್ನು ಯಾರಾದರೂ ಮೀರಿದರೆ ಸಾರ್ವಜನಿಕರಿಗೆ ದಂಡ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

    ಮಾರ್ಗ ಸೂಚಿಗಳು:

    * ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ, ಪಾನ್, ಗುಟ್ಕಾ, ತಂಬಾಕು ಸೇವನೆಯನ್ನು ನಿಷೇಧಿಸಲಾಗಿದೆ
    * ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳದಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ  ಮಾಸ್ಕ್ಗಳನ್ನು ಕಡ್ಡಾಯವಾಗಿ ಬಳಸಲೇಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.
    * ರಾತ್ರಿ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ ಹಾಗೂ ಮಾಸ್ಕ್ ಧರಿಸದಿದ್ದರೆ 500 ರೂ. ದಂಡ ವಿಧಿಸಲಾಗುತ್ತದೆ.

    * ಎಲ್ಲಾ ಖಾಸಗಿ ಕಚೇರಿಗಳಲ್ಲಿ ಶೇ. 50ರಷ್ಟು ಸಾಮರ್ಥ್ಯದಲ್ಲಿ ನೌಕರರಿಂದ ಕಾರ್ಯನಿರ್ವಹಿಸಬೇಕು. ಉಳಿದಂತೆ ವರ್ಕ್ ಫ್ರಂ ಹೋಂಗೆ ಆದ್ಯತೆ ನೀಡಬೇಕು.
    * ಕೊರೊನಾ ನಿಯಮಗಳ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೂ ದಂಡ ವಿಧಿಸಬಹುದಾಗಿದೆ.

  • ಕೊರೊನಾ ಪ್ರಕರಣ ಹೆಚ್ಚಳ – ಜಲಂಧರ್‌‌ನಲ್ಲಿ ನೈಟ್ ಕರ್ಫ್ಯೂ

    ಕೊರೊನಾ ಪ್ರಕರಣ ಹೆಚ್ಚಳ – ಜಲಂಧರ್‌‌ನಲ್ಲಿ ನೈಟ್ ಕರ್ಫ್ಯೂ

    ಚಂಡೀಗಢ: ಪಂಜಾಬ್‍ನಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಇಂದಿನಿಂದ ಜಲಂಧರ್ ಜಿಲ್ಲೆಯಲ್ಲಿ ರಾತ್ರಿ 11 ರಿಂದ ಮುಂಜಾನೆ 5ರವರೆಗೂ ನೈಟ್ ಕರ್ಫ್ಯೂ ಮಾಡಲು ನಿರ್ಧರಿಸಿರುವುದಾಗಿ ಜಿಲ್ಲಾಧಿಕಾರಿ ಘನಾಶ್ಯಾಮ್ ಥೋರಿ ತಿಳಿಸಿದ್ದಾರೆ.

    ಶುಕ್ರವಾರ ಜಿಲ್ಲೆಯಲ್ಲಿ ಸುಮಾರು 134 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಪ್ರಸ್ತುತ 856 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಕಳೆದ ತಿಂಗಳು ಪಂಜಾಬ್ ಸರ್ಕಾರ ಕೊರೊನಾ ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ನೈಟ್ ಕರ್ಫ್ಯೂ ನಡೆಸಲು ಆದೇಶಿಸಿತ್ತು. ಪಂಜಾಬ್‍ನಲ್ಲಿ ಶುಕ್ರವಾರ 818ಕ್ಕೂ ಹೊಸ ಪ್ರಕರಣಗಳು ದಾಖಲಾಗಿದ್ದು, 1,86,189ಕ್ಕೆ ಕೊರೊನಾ ಸಂಖ್ಯೆ ಏರಿಕೆಯಾಗಿದೆ. ಅಲ್ಲದೆ 11 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 5,898ಕ್ಕೆ ಏರಿಕೆಯಾಗಿದೆ.

    ಮಹಾರಾಷ್ಟ್ರದ ನಂತರ ನಾಲ್ಕು ವಾರಗಳಲ್ಲಿ ಪಂಜಾಬ್‍ನಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗಿದ್ದು, 6,264 ಇದ್ದ ಕೊರೊನಾ ಸಕ್ರಿಯ ಪ್ರಕರಣಗಳು ಇದೀಗ 6661ಕ್ಕೆ ಏರಿಕೆಯಾಗಿದೆ. ಜಲಂಧರ್ ಬಳಿಕ ಲುಧಿನಾದಲ್ಲಿ 105 ಪ್ರಕರಣಗಳು, ಪಟಿಯಾಲದಲ್ಲಿ 104 ಪ್ರಕರಣಗಳು ವರದಿಯಾಗಿದೆ. ಸೋಂಕಿನಿಂದ ಚೇತರಿಸಿಕೊಂಡು 400 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ ಒಟ್ಟಾರೆ ಈವರೆಗೂ 1,73,630 ಸೋಂಕಿನಿಂದ ಗುಣಮುಕ್ತರಾಗಿದ್ದಾರೆ.

    ಇನ್ನೂ ಚಂಡೀಗಢದಲ್ಲಿ 76 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇದೀಗ 22,116ಕ್ಕೆ ಕೊರೊನಾ ಸಂಖ್ಯೆ ಏರಿಕೆಯಾಗಿದೆ.

  • ಅನಗತ್ಯವಾಗಿ ಸಂಚರಿಸದೆ ಕೋವಿಡ್-19 ನಿಯಮ ಪಾಲಿಸಿ: ಸಿಎಂ

    ಅನಗತ್ಯವಾಗಿ ಸಂಚರಿಸದೆ ಕೋವಿಡ್-19 ನಿಯಮ ಪಾಲಿಸಿ: ಸಿಎಂ

    ಬೆಂಗಳೂರು: ಸಾರ್ವಜನಿಕರ ಅಭಿಪ್ರಾಯದ ಹಿನ್ನೆಲೆ ರಾತ್ರಿ ಕರ್ಫ್ಯೂ ಆದೇಶವನ್ನು ಹಿಂಪಡೆಯಲಾಗಿದ್ದು, ಅನಗತ್ಯವಾಗಿ ಸಂಚರಿಸದೆ ಸರ್ಕಾರ ವಿಧಿಸಿರುವ ಕೋವಿಡ್-19 ನಿಯಮಗಳನ್ನು ಪಾಲಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಬ್ರಿಟನ್ ಮುಂತಾದ ದೇಶಗಳಲ್ಲಿ ಪತ್ತೆಯಾದ ಕೋವಿಡ್ ರೂಪಾಂತರ ವೈರಾಣು ಹರಡುವಿಕೆ ನಿಯಂತ್ರಿಸಲು ತಜ್ಞರ ಸಲಹೆಯಂತೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು. ಸಾರ್ವಜನಿಕ ವಲಯದ ಅಭಿಪ್ರಾಯಗಳನ್ನು ಪರಿಗಣಿಸಿ, ಸಚಿವರುಗಳ ಮತ್ತು ಹಿರಿಯ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ರಾತ್ರಿ ಕರ್ಫ್ಯೂ ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಕ್ರಿಸ್‍ಮಸ್ ಮತ್ತು ಹೊಸ ವರ್ಷಾಚರಣೆಯನ್ನು ಸರಳವಾಗಿ ಆಚರಿಸಿ, ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಗುಂಪುಗೂಡದಂತೆ ಎಚ್ಚರ ವಹಿಸಬೇಕು. ಸಾರ್ವಜನಿಕರು ಸ್ವಯಂ ನಿರ್ಬಂಧ ವಿಧಿಸಿಕೊಂಡು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

    ಅನಗತ್ಯವಾಗಿ ಸಂಚರಿಸದೆ ಹಾಗೂ ಸರ್ಕಾರ ವಿಧಿಸಿರುವ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕೋವಿಡ್ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಯಬೇಕೆಂದು ಮನವಿ ಮಾಡಿದ್ದಾರೆ.