ಹೊರಗಡೆ ಚಪ್ಪಲಿ ಸ್ಟ್ಯಾಂಡ್‌ನಲ್ಲಿದ್ದ ಬೆಲೆ ಬಾಳುವ ಶೂಗಳನ್ನ ಕದ್ದು ಕಳ್ಳ ಪರಾರಿಯಾಗಿದ್ದಾನೆ. ಬೆಂಗಳೂರು ಪೊಲೀಸರಿಗೆ (Bengaluru Police) ಟ್ಯಾಗ್ ಮಾಡಿ ಆರೋಪಿಯನ್ನು ಪತ್ತೆ ಮಾಡುವಂತೆ ದೂರುದಾರರು ಮನವಿ ಮಾಡಿದ್ದಾರೆ.
ಮದುವೆಯಾಗಿ (Marriage) ಹನಿಮೂನ್ ಹೊರಟಿದ್ದರೆ ಅಥವಾ ನಿಮ್ಮ ಮೊದಲ ರಾತ್ರಿಯನ್ನು ಇನ್ನಷ್ಟು ವಿಶೇಷವಾಗಿಸಲು ಬಯಸಿದ್ದರೆ ಅದಕ್ಕೆಂದೇ ವಿಶೇಷ ರೀತಿಯ ಡ್ರೆಸ್‌ಗಳು (Dress) ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಮೊದಲ ರಾತ್ರಿಯ ವಿಶೇಷ ಸಂದರ್ಭಗಳು, ಹನಿಮೂನ್, ವಾರ್ಷಿಕೋತ್ಸವ ಅಥವಾ ನಿಮ್ಮ ಪತಿಯನ್ನು ಆಕರ್ಷಿಸಲು ಮಹಿಳೆಯರಿಗೆ ಈ ಹಾಟ್ ಡ್ರೆಸ್ (Hot Dress) ಧರಿಸುವ ಮೂಲಕ ನೀವು ಮಾದಕ ನೋಟ ಬೀರಬಹುದು. ಈ ಎಲ್ಲಾ ರಾತ್ರಿ ಉಡುಪುಗಳನ್ನು ಮೃದು ಗುಣಮಟ್ಟದ ಬಟ್ಟೆಯಿಂದ ತಯಾರಿಸಲಾಗುತ್ತದೆ. ಅದನ್ನು ಧರಿಸಿದರೆ ನಿಮಗೂ ಆರಾಮದಾಯಕವಾಗಿರುತ್ತದೆ. ವಿವಿಧ ಕಂಪೆನಿಗಳೂ ಸಹ ಅದಕ್ಕೆಂದೇ ತರಹೇವಾರಿ ಬ್ರಾಂಡೆಡ್ ಬಟ್ಟೆಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಟ್ಟಿವೆ. ಇದನ್ನೂ ಓದಿ: ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್
ಬ್ಲಾಕ್ ಬೇಬಿ ಡಾಲ್:
ಹೊಸದಾಗಿ ಮದುವೆಯಾದ ಮಹಿಳೆಯರಿಗೆ ಈ ನೈಟಿ (Nighty) ರೀತಿಯ ಡ್ರೆಸ್ ಅತ್ಯುತ್ತಮವಾಗಿರುತ್ತದೆ. ಇದು ತುಂಬಾ ಮೃದು (Light Weight) ಹಾಗೂ ಹಗುರವಾಗಿರುತ್ತದೆ. ಇದನ್ನು ಧರಿಸುವುದರಿಂದ ನೀವು ಆರಾಮದಾಯಕ ನಿದ್ರೆ ಮಾಡಲು ಮತ್ತು ಮಾದಕ ನೋಟ ಬೀರಲು ಸಾಧ್ಯವಾಗುತ್ತದೆ.
ಪಿಂಕ್ ಬ್ಯಾಕ್ ಲೆಸ್ ನೈಟಿ:
ಇದು ಹೆಚ್ಚಾಗಿ ಪಿಂಕ್ ಹಾಗೂ ಕಪ್ಪು ಬಣ್ಣದಲ್ಲಿ ಇರುತ್ತದೆ. ಇದನ್ನು ಧರಿಸಿದರೆ ನೀವು ಸೆಕ್ಸಿ ಮತ್ತು ಬೋಲ್ಡ್ ಲುಕ್ ನಲ್ಲಿ ಕಾಣುತ್ತೀರಿ. ನೀವು ಈ ಮೊಣಕಾಲಿನ ನೈಟಿಯನ್ನು ಮೊದಲ ರಾತ್ರಿ, ಹನಿಮೂನ್ ಅಥವಾ ಯಾವುದೇ ವಿಶೇಷ ರಾತ್ರಿ ವೇಳೆ ಧರಿಸಬಹುದು.
ರಿಬ್ಬನ್ ಬಾರ್ಡರ್ ನೈಟಿ:
ಬೆಡ್‌ರೂಂನಲ್ಲಿ ನಿಮ್ಮ ಸಂಗಾತಿಯನ್ನು ಆಕರ್ಷಿಸಲು ಈ ಹಾಟ್ ನೈಟ್ ಡ್ರೆಸ್ ಅತ್ಯುತ್ತಮವಾಗಿರುತ್ತದೆ. ಹಾಟ್‌ನೈಟ್‌ನಲ್ಲಿ ರಿಬ್ಬನ್ ಬಾರ್ಡರ್ ವಿನ್ಯಾಸ ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ನಿಮ್ಮ ಗಂಡನ ಚಿತ್ತಾಕರ್ಷಕ ನೋಟವು ನಿಮ್ಮಿಂದ ದೂರ ಸರಿಯದಂತೆ ನೋಡಿಕೊಳ್ಳಲೂಬಹುದು.
ಬ್ಯಾಕ್ ಲೆಸ್ ನೈಟಿ:
ಆರಾಮದಾಯಕ ನಿದ್ರೆ ಮಾಡಲು ಬಯಸುವ ಮಹಿಳೆಯರು ಈ ರೀತಿಯ ನೈಟ್ ಡ್ರೆಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದು ಬೆನ್ನು ಕಡಿತ, ಬೆನ್ನುನೋವು ಮೊದಲಾದ ತೊಂದರೆಗಳನ್ನು ದೂರ ಮಾಡಿ, ಆರಾಮಯದಾಯಕ ನಿದ್ರೆ ಬರಿಸುತ್ತದೆ.
ವಿ-ಶೇಪ್ ಸ್ಟ್ರಚಬಲ್ ನೈಟಿ:
ಕೆಂಪು, ಕಪ್ಪು, ನೇರಳೆ ಹಾಗೂ ಗುಲಾಬಿ ಬಣ್ಣದ ಆಯ್ಕೆಗಳನ್ನು ಹೊಂದಿರುವ ಈ ವಿ-ಶೇಪ್ ಸ್ಟ್ರಚಬಲ್ ನೈಟಿ ಮೃದು ಸ್ವಭಾವದಿಂದ ಕೂಡಿರುತ್ತದೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಿದ ನಂತರವೂ ಕೋಟ್ ಮಾದರಿಯಲ್ಲಿ ಇದನ್ನು ಬಳಸಬಹುದು. ಜೊತೆಗೆ ಪತಿಯನ್ನು ಹೆಚ್ಚು ಆಕರ್ಷಿಸುವ ಮಾದಕ ನೋಟ ಬೀರಬಹುದು.
Live Tv
[brid partner=56869869 player=32851 video=960834 autoplay=true]
ಅಮರಾವತಿ: ಹಗಲಿನಲ್ಲಿ ಮಹಿಳೆಯರು ನೈಟಿಯನ್ನು ಧರಿಸಿದರೇ, 2,000 ರೂ ದಂಡ ವಿಧಿಸುವ ವಿಚಿತ್ರ ಕಾನೂನನ್ನು ಗ್ರಾಮದ ಮುಖಂಡರು ಜಾರಿಗೆ ತಂದಿರುವ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋಧಾವರಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಹೌದು, ಕಳೆದ ಒಂಭತ್ತು ತಿಂಗಳುಗಳಿಂದ ಪಶ್ಚಿಮ ಗೋಧಾವರಿ ಜಿಲ್ಲೆಯ ಟೋಕ್ಲಾಪಲ್ಲಿ ಗ್ರಾಮದಲ್ಲಿ ಮಹಿಳೆಯರು ಹಗಲಿನಲ್ಲಿ ನೈಟಿ ಧರಿಸುವಂತಿಲ್ಲವೆಂಬ ಕಟ್ಟುನಿಟ್ಟಿನ ಆದೇಶವನ್ನು ಊರ ಹಿರಿಯರು ಜಾರಿಗೆ ತಂದಿದ್ದಾರೆ. ಅಲ್ಲದೇ ಮಹಿಳೆಯರು ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ನೈಟಿಯನ್ನು ಧರಿಸಿದರೇ, ಅವರಿಗೆ 2,000 ರೂಪಾಯಿ ದಂಡ ಇಲ್ಲವೇ ಗ್ರಾಮದಿಂದ ಬಹಿಷ್ಕರಿಸುವ ಬಗ್ಗೆ ತೀರ್ಮಾನವನ್ನು ಕೈಗೊಂಡಿದ್ದಾರೆ.
ಗ್ರಾಮದಲ್ಲಿರುವ ಮಹಿಳೆಯರು ಹಗಲಿನಲ್ಲಿ ಯಾವುದೇ ಕಾರಣಕ್ಕೂ ನೈಟಿಗಳನ್ನು ಧರಿಸುವಂತಿಲ್ಲ. ಕೇವಲ ರಾತ್ರಿ ವೇಳೆ ನೈಟಿಗಳನ್ನು ಧರಿಸಬೇಕು. ಮಹಿಳೆಯರು ಹಗಲಿನಲ್ಲಿ ನೈಟಿ ಧರಿಸಿರುವ ಬಗ್ಗೆ ಮಾಹಿತಿ ನೀಡಿದವರಿಗೆ 1 ಸಾವಿರ ರೂಪಾಯಿ ಬಹುಮಾನವನ್ನು ಕೊಡಲಾಗುತ್ತದೆ ಎಂದು ತೀರ್ಮಾನಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಪೊಲೀಸ್ ಹಾಗೂ ಸರ್ಕಾರಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಒಂದು ವೇಳೆ ಯಾರಾದರೂ ಆಜ್ಞೆ ಮೀರಿ ನೈಟಿ ಧರಿಸಿದ್ದಲ್ಲಿ, ಅಂತಹ ಮಹಿಳೆಯನ್ನು ದೋಷಿ ಎಂದು ಸಾಬೀತಿ ಪಡಿಸಿ ಸಾಮಾಜಿಕವಾಗಿ ಬಹಿಷ್ಕಕರಿಸಲಾಗುತ್ತದೆ. ಅಲ್ಲದೇ ಈ ಬಗ್ಗೆ ಯಾರೂ ಸಹ ಅಧಿಕಾರಿಗಳಿಗೆ ಮಾಹಿತಿ ನೀಡಬಾರದೆಂದು ಎಚ್ಚರಿಕೆಯ ಸಂಗತಿಯನ್ನು ಊರ ಗ್ರಾಮಸ್ಥರು ವರದಿಗೆ ತೆರಳಿದ್ದ ಮಾಧ್ಯಮಗಳಿಗೆ ಹೇಳಿದ್ದಾರೆ.