Tag: ನೈಜೀರಿಯಾ

  • ಕಾಲ್ತುಳಿತಕ್ಕೆ ಗರ್ಭಿಣಿ, ಮಕ್ಕಳು ಸೇರಿ 31 ಜನ ಸಾವು

    ಕಾಲ್ತುಳಿತಕ್ಕೆ ಗರ್ಭಿಣಿ, ಮಕ್ಕಳು ಸೇರಿ 31 ಜನ ಸಾವು

    ಅಬುಜಾ: ಕಾಲ್ತುಳಿತದಲ್ಲಿ 31 ಜನರು ಸಾವನ್ನಪ್ಪಿರುವ ಘಟನೆ ದಕ್ಷಿಣ ನೈಜೀರಿಯಾದ ಚರ್ಚ್ ಚಾರಿಟಿ ಕಾರ್ಯಕ್ರಮವೊಂದರಲ್ಲಿ ನಡೆದಿದೆ.

    ರಿವರ್ಸ್ ಸ್ಟೇಟ್‍ನಲ್ಲಿರುವ ಕಿಂಗ್ಸ್ ಅಸೆಂಬ್ಲಿ ಪೆಂಟೆಕೋಸ್ಟಲ್ ಚರ್ಚ್ ಆಯೋಜಿಸಿದ್ದ ವಾರ್ಷಿಕ ಶಾಪ್ ಫಾರ್ ಫ್ರೀ ಚಾರಿಟಿ ಕಾರ್ಯಕ್ರಮಕ್ಕೆ ಜನರು ಬಂದಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಇದರಿಂದಾಗಿ ಗರ್ಭಿಣಿ ಹಾಗೂ ಹಲವು ಮಕ್ಕಳು ಸೇರಿದಂತೆ 31 ಜನರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ ಅನೇಕರಿಗೆ ಗಂಭೀರ ಗಾಯಗಳಾಗಿವೆ.

    crime

    ದತ್ತಿ ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ ಸರತಿ ಸಾಲಿನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಜನರು ಬೆಳಗ್ಗೆ 5 ಗಂಟೆಗೆ ಜನರು ಆಗಮಿಸಿದ್ದರು. ಇದಾದ ಬಳಿಕ ಗೇಟ್‍ಗೆ ಬೀಗ ಹಾಕಿದ್ದನ್ನು ಒಡೆದು ನೂಕುನುಗ್ಗಲು ಉಂಟಾಯಿತು. ಇದರಿಂದಾಗಿ ಕಾಲ್ತುಳಿತವಾಗಿದೆ. ಇದನ್ನೂ ಓದಿ: ನಾಲ್ಕೈದು ದಿನ ತಿರುಪತಿ ಭೇಟಿಯನ್ನು ಮುಂದೂಡಿ: ಟಿಟಿಡಿ ಮನವಿ

    ಸರ್ಕಾರದ ಅಂಕಿಅಂಶಗಳ ಪ್ರಕಾರ 80 ಮಿಲಿಯನ್‍ಗಿಂತಲೂ ಹೆಚ್ಚು ಜನರು ಬಡತನದಲ್ಲಿ ವಾಸಿಸುವ ಆಫ್ರಿಕಾದ ಅತಿದೊಡ್ಡ ಆರ್ಥಿಕತೆಯಾದ ನೈಜೀರಿಯಾದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದೆ. ಇದನ್ನೂ ಓದಿ: ವಿದೇಶದಿಂದ 3,500 ರೂ.ಗೆ ಯೂರಿಯಾ ಖರೀದಿಸಿ ರೈತರಿಗೆ 350 ರೂ.ಗೆ ವಿತರಣೆ : ಮೋದಿ

    ಕಾಲ್ತುಳಿತದ ನಂತರ ಸಂತ್ರಸ್ತರ ಸಂಬಂಧಿಕರು ಕೆಲವು ಚರ್ಚ್ ಸದಸ್ಯರ ಮೇಲೆ ದಾಳಿ ಮಾಡಿದ್ದಾರೆ. ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಲು ಚರ್ಚ್ ನಿರಾಕರಿಸಿದೆ. ಘಟನೆ ಸಂಬಂಧಿಸಿ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ನೈಜೀರಿಯಾ ಪ್ರಜೆ ಅರೆಸ್ಟ್ – 70 ಲಕ್ಷರೂ. ಮೌಲ್ಯದ ಡ್ರಗ್ಸ್ ವಶ

    ನೈಜೀರಿಯಾ ಪ್ರಜೆ ಅರೆಸ್ಟ್ – 70 ಲಕ್ಷರೂ. ಮೌಲ್ಯದ ಡ್ರಗ್ಸ್ ವಶ

    ಬೆಂಗಳೂರು: ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯಿಂದ 70 ಲಕ್ಷ ಬೆಲೆ ಬಾಳುವ ಡ್ರಗ್ಸ್ ಮತ್ತು 800 ಗ್ರಾಂ ತೂಕದ ಎಂಡಿಎಂಎ, ಕ್ರಿಸ್ಟಲ್ ವಶಪಡಿಸಿಕೊಳ್ಳಲಾಗಿದೆ. ಪ್ರತಿ 5 ಸಾವಿರದಿಂದ 8 ಸಾವಿರಕ್ಕೆ ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದನು.

    ಆರೋಪಿಯು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದನು. ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಆನ್‍ಲೈನ್‍ನಲ್ಲಿ ವಂಚನೆ- ನೈಜೀರಿಯಾ ಪ್ರಜೆಯ ಬಂಧನ

    ಆನ್‍ಲೈನ್‍ನಲ್ಲಿ ವಂಚನೆ- ನೈಜೀರಿಯಾ ಪ್ರಜೆಯ ಬಂಧನ

    ವಿಜಯಪುರ: ಆನ್‍ಲೈನ್ ಮೂಲಕ ಲಕ್ಷಾಂತರ ರೂ. ವಂಚನೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿಜಯಪುರದ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ನೈಜೀರಿಯಾ ದೇಶದ ಆಪ್ರೋಚ್ಚಿ ಆಂಥೋನಿ ಬಂಧಿತ ಆರೋಪಿ. ಬಂಧಿತ ಆರೋಪಿ ಆಂಥೋನಿ ಕೋಲ್ಹಾರ ಪಟ್ಟಣದ ನಿವಾಸಿ ಕಿರಣ್ ಕಲ್ಲಪ್ಪ ದೇಸಾಯಿಗೆ ಆನ್‍ಲೈನ್ ಮುಖಾಂತರ ವಂಚಿಸಿದ್ದ. ಆರೋಪಿಯು ಕಿರಣ್‍ಗೆ ಆನ್‍ಲೈನ್ ಮೂಲಕ ಬರೋಬ್ಬರಿ 16 ಲಕ್ಷ ರೂ. ಮೋಸ ಮಾಡಿದ್ದನು. ಇದನ್ನೂ ಓದಿ:  ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್‍ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಈತ ನಕಲಿ ಔಷಧ ಹೆಸರಿನಲ್ಲಿ ವಂಚಿಸಿದ್ದನು. ಈ ಸಂಬಂಧ ಕಿರಣ್ ದೂರು ದಾಖಲಿಸಿದ್ದಾನೆ. ದೂರಿನ ಅನ್ವಯ ಆರೋಪಿ ಆಂಥೋನಿಯನ್ನು ವಿಜಯಪುರ ನಗರದಲ್ಲಿ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು: ಗೋಪಾಲ್ ರೈ

  • ಮೂವರು ನೈಜೀರಿಯನ್ ವ್ಯಕ್ತಿಗಳಿಂದ 22 ಲಕ್ಷ ಮೌಲ್ಯದ ಕೊಕೇನ್ ವಶ

    ಮೂವರು ನೈಜೀರಿಯನ್ ವ್ಯಕ್ತಿಗಳಿಂದ 22 ಲಕ್ಷ ಮೌಲ್ಯದ ಕೊಕೇನ್ ವಶ

    ಮುಂಬೈ: ಮೂವರು ನೈಜಿರಿಯನ್ ವ್ಯಕ್ತಿಗಳಿಂದ 22 ಲಕ್ಷ ಮೌಲ್ಯದ ಕೊಕೇನ್ (ಡ್ರಗ್ಸ್)ನ್ನು ಪೊಲೀಸರು ವಶಪಡಿಸಿಕೊಂಡು ಅವರನ್ನು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಕೊಕೇನ್ ಸಾಗಾಟ ಮಾಡುತ್ತಿದ್ದ ಮೂವರು ನೈಜೀರಿಯಾ ಮೂಲದ ವ್ಯಕ್ತಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮುಂಬೈನ ಬಂಗೂರ್ ಪೊಲೀಸ್ ವಲಯದ ವಿಶೇಷ ಆಯುಕ್ತರು ಈ ಮೂವರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಇವರಿಂದ ಕಳೆದ 24 ಗಂಟೆಗಳಲ್ಲಿ 22 ಲಕ್ಷ ರೂ.ಗಳ ಮೌಲ್ಯದ ಸುಮಾರು 220 ಗ್ರಾಂ ಕೊಕೇನ್‍ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಉಚೆ ಜೇಮ್ಸ್ (38) ಮಲಾಡ್‍ದ ಲಿಂಕ್ ರಸ್ತೆಯಲ್ಲಿ ಮಾದಕವಸ್ತುಗಳನ್ನು ತಲುಪಿಸಲು ಬರುತ್ತಿದ್ದಾನೆ ಎಂದು ಮೊದಲೇ ನಮಗೆ ಮಾಹಿತಿ ಸಿಕ್ಕಿತ್ತು. ನಾವು ಸ್ಥಳಕ್ಕೆ ಹೋದಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಜೇಮ್ಸ್ ನೀಡಿದ ಮಾಹಿತಿಯ ಆಧಾರದ ಮೇಲೆ ಇತರ ಇಬ್ಬರು ಆರೋಪಿಗಳಾದ ಎಮೆಕಾ ಸಿಪ್ರಿಯನ್ ಮತ್ತು ಚುಕ್ವು ಜೋಸೆಫ್‍ನನ್ನು ಗೋರೆಗಾಂವ್‍ನ ಕಾಲೋನಿಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‍ಡಿಪಿಎಸ್) ಕಾಯ್ದೆಯ ಅಡಿಯಲ್ಲಿ ಈ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಮೂವರಲ್ಲಿ 22 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ 200 ಗ್ರಾಂ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದೇವೆ. ಈ ಪ್ರಕರಣದ ಕುರಿತಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಏಕಕಾಲದಲ್ಲಿ 6 ಪತ್ನಿಯರು ಗರ್ಭಿಣಿ – ಮತ್ತೆ ಸುದ್ದಿಯಾದ ಪ್ಲೇಬಾಯ್  ಸ್ಟಾರ್

    ಏಕಕಾಲದಲ್ಲಿ 6 ಪತ್ನಿಯರು ಗರ್ಭಿಣಿ – ಮತ್ತೆ ಸುದ್ದಿಯಾದ ಪ್ಲೇಬಾಯ್ ಸ್ಟಾರ್

    ಲಾಗೋಸ್: ನೈಜೀರಿಯಾದ ವ್ಯಕ್ತಿಯೊಬ್ಬ ತನ್ನ ಆರು ಪತ್ನಿಯರನ್ನು ಏಕಕಾಲದಲ್ಲಿ ಗರ್ಭಿಣಿಯರನ್ನಾಗಿ ಮಾಡುವ ಮೂಲಕವಾಗಿ ಸುದ್ದಿಯಲ್ಲಿದ್ದಾನೆ.

    ನೈಜೀರಿಯಾದ ಪ್ಲೇಬಾಯ್ ಎಂದೇ ಪ್ರಸಿದ್ಧವಾಗಿರುವ ಪ್ರೆಟ್ಟಿ ಮೈಕ್ ಸದಾ ಸುದ್ಧಿಯಲ್ಲಿರುತ್ತಾನೆ.. ಇದೀಗ ಈತನ 6 ಪತ್ನಿಯರು ಒಟ್ಟಿಗೆ ಗರ್ಭಧರಿಸಿದ್ದಾರೆ.

    ಮೈಕ್ ಈ ರೀತಿಯ ವಿಚಿತ್ರ ರೀತಿಯಿಂದ ಸುದ್ದಿಯಾಗುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಯುವತಿಯರನ್ನು ಕುದುರೆಗಳಂತೆ ಕಟ್ಟಿ, ತಾನು ಸಾರಥಿಯಂತೆ ನಿಂತು ಫೋಸ್ ಕೊಟ್ಟ ಫೋಟೋ ಹಂಚಿಕೊಂಡಿದ್ದನು. ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ನೋಡಿದ್ದಾನೆ ಎಂದು ಈತನ ಮೇಲೆ ಪೊಲೀಸ್ ಪ್ರಕರಣವೂ ದಾಖಲಾಗಿತ್ತು.

    ಇದೀಗ ಪ್ರೆಟ್ಟಿ ಮೈಕ್ ಇತ್ತೀಚೆಗೆ ತನ್ನ 6 ಹೆಂಡತಿಯರನ್ನು ಕರೆದುಕೊಂಡು ಸ್ನೇಹಿತನೊಬ್ಬನ ಮದುವೆಗೆ ಹೋಗಿದ್ದನು. ಮದುವೆಗೆ ಹೋಗುವಾಗ ಈತನ 6 ಪತ್ನಿಯರು ಒಂದೇ ತೆರನಾದ ಬಟ್ಟೆಯನ್ನು ಹಾಕಿಕೊಂಡಿದ್ದರು. ಮತ್ತೊಂದು ವಿಶೇಷವೆಂದರೆ ಇವನ ಆರು ಪತ್ನಿಯರು ಗರ್ಭಿಣಿಯರಾಗಿದ್ದರು.

    ಮದುವೆ ಮನೆಯಲ್ಲಿ ತನ್ನ 6 ಪತ್ನಿಯರನ್ನು ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದಾನೆ. ಜೊತೆಯಲ್ಲಿ ಅವರ ಹೊಟ್ಟೆಯಲ್ಲಿರುವ ಮಗುವಿಗೆ ನಾನೇ ಅಪ್ಪ ಎಂದು ಹೇಳಿಕೊಂಡಿದ್ದಾನೆ. ಮದುವೆ ಮನೆಗೆ ಬಂದಿದ್ದ ಜನರು ವಧು-ವರರನ್ನು ನೋಡುವುದು ಬಿಟ್ಟು ಮೈಕ್‍ನ ಕುಟುಂಬವನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ.

  • ವಿಲಾಸಿ ಜೀವನದ ಗೀಳಿಗಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟ: ವಿದೇಶಿ ಪ್ರಜೆ ಅರೆಸ್ಟ್

    ವಿಲಾಸಿ ಜೀವನದ ಗೀಳಿಗಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟ: ವಿದೇಶಿ ಪ್ರಜೆ ಅರೆಸ್ಟ್

    ಬೆಂಗಳೂರು: ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಮಾದಕವಸ್ತುಗಳನ್ನ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಇಜಾಕ್ ನ್ಯೂಜಿಗೂವ್ (40) ಬಂಧಿತ ವಿದೇಶಿ ಪ್ರಜೆ. ಆರೋಪಿಯು ನೈಜೀರಿಯಾ ಮೂಲದವನಾಗಿದ್ದು, ವಿದ್ಯಾರ್ಥಿ ವೀಸಾದ ಅಡಿ ಬೆಂಗಳೂರಿಗೆ ಬಂದಿದ್ದಾನೆ. ಪೊಲೀಸರು ಬಂಧಿತ ಆರೋಪಿಯಿಂದ ಒಂದು ಕೆಜಿ ಗಾಂಜಾ, 19 ಗ್ರಾಂ ಕೊಕೇನ್ ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಎಟಿಎಂ ದೋಚಿ ಐಶಾರಾಮಿ ಜೀವನ ನಡೆಸುತ್ತಿದ್ದ 3 ವಿದೇಶಿಯರು ಸೇರಿ ಐವರು ಅರೆಸ್ಟ್

    ವಿಲಾಸಿ ಜೀವನದ ಗೀಳು ಹೊಂದಿದ್ದ ಇಜಾಕ್ ನ್ಯೂಜಿಗೂವ್ ಕಡಿಮೆ ಬೆಲೆಗೆ ಗಾಂಜಾ, ಕೊಕೇನ್ ತಂದು ಪ್ರತಿಷ್ಠಿತ ಕಾಲೇಜು ಹಾಗೂ ಶಾಲೆಗಳ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಇಜಾಕ್ ಬೆಂಗಳೂರು ಹೊರವಲಯದ ಬಾಗಲೂರು ಸುತ್ತಮುತ್ತ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ತಕ್ಷಣವೇ ಇಜಾಕ್ ನ್ಯೂಜಿಗೂವ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಭರ್ಜರಿ ಕಾರ್ಯಾಚರಣೆ ಮೂಲಕ ಶುಕ್ರವಾರ ಆರೋಪಿಯನ್ನು ಬಂಧಿಸಿದ್ದಾರೆ.

    ಇಜಾಕ್ ನ್ಯೂಜಿಗೂವ್ ವಿರುದ್ಧ ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಮೂತ್ರ ವಿಸರ್ಜನೆಗೆ ಬ್ಯಾಟನ್ನು ಬಿಟ್ಟು ಮೈದಾನ ತೊರೆದು ಓಡಿದ ಆಟಗಾರ – ವಿಡಿಯೋ

    ಮೂತ್ರ ವಿಸರ್ಜನೆಗೆ ಬ್ಯಾಟನ್ನು ಬಿಟ್ಟು ಮೈದಾನ ತೊರೆದು ಓಡಿದ ಆಟಗಾರ – ವಿಡಿಯೋ

    ಅಬುಧಾಬಿ: ಟಿ20 ವಿಶ್ವಕಪ್ ಕ್ರಿಕೆಟ್ ಅರ್ಹತಾ ಪಂದ್ಯದಲ್ಲಿ ಆಟಗಾರನೊಬ್ಬ ಮೂತ್ರ ವಿಸರ್ಜನೆ ಮಾಡಲು ಬ್ಯಾಟನ್ನು ಬಿಟ್ಟು ಮೈದಾನದಿಂದಲೇ  ಓಡಿದ ಪ್ರಸಂಗ ನಡೆದಿದೆ.

    ಅಬುಧಾಬಿಯ ಶೇಖ್ ಝಾಯದ್ ಕ್ರೀಡಾಂಗಣದಲ್ಲಿ ಕೆನಡಾ ಮತ್ತು ನೈಜೀರಿಯಾ ನಡುವೆ ಟಿ20 ಕ್ರಿಕೆಟ್ ಪಂದ್ಯ ನಡೆಯುತಿತ್ತು. ಕೆನಡಾ ನೀಡಿದ 160 ರನ್ ಗಳ ಗುರಿಯನ್ನು ಬೆನ್ನತ್ತಿದ ನೈಜೀರಿಯಾ 7 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿತ್ತು. ಈ ಸಂದರ್ಭದಲ್ಲಿ ಕ್ರೀಸ್ ನಲ್ಲಿದ್ದ ಸುಲೇಮಾನ್ ರನ್ಸೀವಿ ಇದ್ದಕ್ಕಿದ್ದಂತೆ ಬ್ಯಾಟನ್ನು ಬಿಟ್ಟು ಓಡಿಕೊಂಡು ಮೈದಾನವನ್ನು ತೊರೆದಿದ್ದಾರೆ.

    ಇದ್ದಕ್ಕಿದ್ದಂತೆ ಯಾರಿಗೂ ಹೇಳದೇ ರನ್ಸೀವಿ ಓಡಿದ್ದನ್ನು ನೋಡಿ ಅಂಪೈರ್ ಮತ್ತು ಆಟಗಾರರು ಆ ಕ್ಷಣ ದಂಗಾಗಿ ಬಿಟ್ಟಿದ್ದಾರೆ. ಓಡಿದ್ದು ಯಾಕೆ ಎನ್ನುವುದು ತಿಳಿಯದ ಪರಿಣಾಮ ಕೊನೆಗೆ ಆಟ ಮುಂದುವರಿಸಲು ಮೊತ್ತೊಬ್ಬ ಆಟಗಾರ ಮೈದಾನಕ್ಕೆ ಇಳಿಯಲು ಮುಂದಾಗುತ್ತಾನೆ. ಈ ಸಮಯದಲ್ಲಿ ರನ್ಸೀವಿ ಟಿವಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡು ತೊಡೆಯ ಗಾರ್ಡ್ ಗಳನ್ನು ಸರಿ ಮಾಡಿಕೊಂಡು ಓಡಿಕೊಂಡು ಮೈದಾನವನ್ನು ಪ್ರವೇಶಿಸುತ್ತಾರೆ.

    ರನ್ಸೀವಿ ಓಡಿಕೊಂಡು ಮೈದಾನವನ್ನು ಪ್ರವೇಶಿಸುವುದನ್ನು ನೋಡಿ ಇತರೇ ನೈಜೀರಿಯಾ ಆಟಗಾರರು ಬಿದ್ದು ಬಿದ್ದು ನಕ್ಕಿದ್ದಾರೆ. ವಿಷಯ ತಿಳಿದು ಅಂಪೈರ್ ಸಹ ನಗೆ ಬೀರಿದ್ದಾರೆ. ಈ ಅರ್ಹತಾ ಪಂದ್ಯವನ್ನು ಕೆನಡಾ 50 ರನ್ ಗಳಿಂದ ಗೆದ್ದುಕೊಂಡಿದೆ.

  • ದಿಢೀರ್ ಎಂಟ್ರಿ ಕೊಟ್ಟು ಗೌರವ ದಂಡವನ್ನು ಎತ್ತಿಕೊಂಡು ಹೋದ: ಸಂಸತ್ ಕಲಾಪದಲ್ಲಿ ಅಲ್ಲೋಲ ಕಲ್ಲೋಲ

    ದಿಢೀರ್ ಎಂಟ್ರಿ ಕೊಟ್ಟು ಗೌರವ ದಂಡವನ್ನು ಎತ್ತಿಕೊಂಡು ಹೋದ: ಸಂಸತ್ ಕಲಾಪದಲ್ಲಿ ಅಲ್ಲೋಲ ಕಲ್ಲೋಲ

    ಲಾಗೋಸ್: ನೈಜೀರಿಯಾದ ಸಂಸತ್ ಕಲಾಪದ ವೇಳೆ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಒಳಪ್ರವೇಶಿಸಿ ಸದನದ ಸ್ಪೀಕರ್ ಮುಂದುಗಡೆ ಇದ್ದ ಗೌರವ ದಂಡವನ್ನು ಎತ್ತಿಕೊಂಡು ಪರಾರಿಯಾಗಲು ಯತ್ನಿಸಿರುವ ಘಟನೆ ಬುಧವಾರ ನಡೆದಿದೆ.

    ಸಂಸತ್ ಭವನದಲ್ಲಿ ಭದ್ರತಾ ಸಿಬ್ಬಂದಿಗಳ ಮುಂದೆಯೇ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ವೇಳೆ ವ್ಯಕ್ತಿಯನ್ನು ತಡೆಯಲು ಅಧಿಕಾರಿಗಳು ಯತ್ನಿಸಿದರೂ ಆತ ಅದನ್ನು ತೆಗೆದುಕೊಂಡು ಪರಾರಿಯಾಗಿದ್ದ. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿ ಗೌರವ ದಂಡವನ್ನು ಮರಳಿ ಪಡೆದಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಸತ್ ವಕ್ತಾರರೊಬ್ಬರು, ಸಂಸತ್ ನಿಂದ ಅಮಾನತುಗೊಂಡಿದ್ದ ಸದಸ್ಯರ ಬೆಂಬಲದೊಂದಿಗೆ ಈ ವ್ಯಕ್ತಿ ಕೃತ್ಯ ನಡೆಸಿದ್ದಾನೆ. ಸರ್ಕಾರವನ್ನು ಉರುಳಿಸುವ ತಂತ್ರವಾಗಿ ಆತ ಈ ಕೆಲಸ ಮಾಡಿದ್ದಾನೆ. ಇದೊಂದು ದೇಶದ್ರೋಹದ ಕೃತ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.

    ಈ ಗೌರವ ದಂಡ ಇಲ್ಲದೇ ನೈಜೀರಿಯಾ ಸಂಸತ್ ನಲ್ಲಿ ಯಾವುದೇ ಕಾನೂನು ಪಾಸ್ ಮಾಡಬಾರದು ಎನ್ನುವ ನಿಯಮವಿದೆ. ಈ ಘಟನೆಯ ಬಳಿಕ ಸಂಸತ್ ಕಲಾಪವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ 109 ಸದಸ್ಯರು ಕಲಾಪ ಮುಂದುವರಿಸುವಂತೆ ಪಟ್ಟುಹಿಡಿದಿದ್ದರು. ಹೀಗಾಗಿ ಮತ್ತೊಂದು ಗೌರವ ದಂಡವನ್ನು ಇಡುವ ಮೂಲಕ ಸದನದ ಕಲಾಪ ಮುಂದುವರಿಯಿತು.

    https://www.youtube.com/watch?v=OStFIHPD42w&feature=youtu.be&t=70&has_verified=1&utm_source=inshorts&utm_medium=referral&utm_campaign=fullarticle

  • ಬೆಂಗ್ಳೂರಲ್ಲಿ ವಿದೇಶಿ ಪ್ರಜೆಯಿಂದ ಕಿಡ್ನಿ ಮಾರಾಟ ಜಾಲ

    ಬೆಂಗ್ಳೂರಲ್ಲಿ ವಿದೇಶಿ ಪ್ರಜೆಯಿಂದ ಕಿಡ್ನಿ ಮಾರಾಟ ಜಾಲ

    ಬೆಂಗಳೂರು: ವಿದೇಶಿ ಪ್ರಜೆಯೊಬ್ಬ ಬೆಂಗಳೂರಲ್ಲಿ ಕಿಡ್ನಿ ಮಾರಾಟ ಮಾಡಿ ಮೂರು ಕೋಟಿ ರೂ. ದುಡ್ಡು ಮಾಡಿರೋ ಬಗ್ಗೆ ಬೆಳಕಿಗೆ ಬಂದಿದೆ.

    ನೈಜೀರಿಯಾ ಪ್ರಜೆ ಡೇವಿಡ್ ಉಜ್ಮಾ ಉಭಾ ಬೆಂಗಳೂರಲ್ಲಿ ಕಿಡ್ನಿ ಕೊಡಿಸುತ್ತಾನಂತೆ. ಕೊತ್ತನೂರಿನ ನಾಗೇನಹಳ್ಳಿಯಲ್ಲಿ ವಾಸ ಮಾಡುತ್ತಿರೋ ಇವನು ಕಿಡ್ನಿ ಮಾರಾಟ ಜಾಲ ನಡೆಸುತ್ತಿದ್ದ ಅನ್ನೋ ಮಾಹಿತಿಯ ಆಧಾರದ ಮೇಲೆ ಕೊತ್ತನೂರು ಪೊಲೀಸರು ಈತನನ್ನ ವಶಕ್ಕೆ ಪಡೆದಿದ್ದಾರೆ.

    ಖಚಿತ ಮಾಹಿತಿ ಆಧಾರದ ಮೇಲೆ ಈತ ಬಾಡಿಗೆಗೆ ಇದ್ದ ಮನೆ ಮೇಲೆ ರೇಡ್ ಮಾಡಿದ ಪೊಲೀಸರು, ಕಿಡ್ನಿ ಮಾರಾಟ ಜಾಲದ ಹಲವಾರು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ. ಅಲ್ಲದೇ ಈ ರಾಕೆಟ್‍ನಲ್ಲಿ ಹಲವಾರು ಮಂದಿಯಿದ್ದು ವಿಚಾರಣೆಗಾಗಿ ಈತನನ್ನು ಪೊಲೀಸ್ ಕಸ್ಟಡಿಗೆ ಕೂಡ ಪಡೆಯಲಾಗಿದೆ.

    ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕಿಡ್ನಿಯನ್ನು ಕಸಿ ಮಾಡೋದಾಗಿ ಹಲವಾರು ಮಂದಿಯಿಂದ ಹಣ ಪಡೆದಿದ್ದಾನೆ. ಅಲ್ಲದೇ ಪ್ರತಿಷ್ಠಿತ ಆಸ್ಪತ್ರೆಗಳ ರೆಕಾಡ್ರ್ಸ್ ಕೂಡ ಈತನ ಮನೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ವೀಸಾ ಮುಗಿದ್ರೂ ಭಾರತದಲ್ಲೇ ನೆಲೆಸಿ ಮಾದಕವಸ್ತು ಮಾರಾಟ: ಪೊಲೀಸ್ರ ಕಣ್ತಪ್ಪಿಸಲು ಹೋಗಿ ನೈಜೀರಿಯಾ ಪ್ರಜೆ ಸಾವು

    ವೀಸಾ ಮುಗಿದ್ರೂ ಭಾರತದಲ್ಲೇ ನೆಲೆಸಿ ಮಾದಕವಸ್ತು ಮಾರಾಟ: ಪೊಲೀಸ್ರ ಕಣ್ತಪ್ಪಿಸಲು ಹೋಗಿ ನೈಜೀರಿಯಾ ಪ್ರಜೆ ಸಾವು

    ಬೆಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ನೈಜೀರಿಯಾ ಮೂಲದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.

    ಇನ್ಯಾಂಪ್ಟಿ ಕ್ರಿಸ್ಟಾನಿಯನ್ ಮೃತ ನೈಜೀರಿಯಾ ಪ್ರಜೆ. ಈತ 2012ರಲ್ಲಿ ಬಿಜಿನೆಸ್ ವೀಸಾ ಮೇಲೆ ಭಾರತಕ್ಕೆ ಬಂದಿದ್ದನು. ಐದು ವರ್ಷದ ಹಿಂದೆಯೇ ಈತನ ವೀಸಾ ಕಾಲಾವಧಿ ಮುಕ್ತಾಯವಾಗಿದ್ದು, 2015 ರಲ್ಲಿ ಪಾಸ್ ಪೋರ್ಟ್ ನ ಕಾಲಾವಧಿಯೂ ಮುಕ್ತಾಯವಾಗಿತ್ತು. ಆದ್ರೂ ಈತ ಭಾರತದಲ್ಲಿಯೇ ನೆಲಸಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದನು.

    ಹೀಗಾಗಿ ಕಳೆದ ವಾರ ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ಮಾಡಲು ತೆರಳಿದ್ರು. ಇತ್ತ ಪೊಲೀಸರ ದಾಳಿ ವಿಚಾರ ತಿಳಿದ ಇನ್ಯಾಂಪ್ಟಿ ಕ್ರಿಸ್ಟಾನಿಯನ್ ಅವರಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ ನಿಂದ ಬಿದ್ದು ಸಾವನ್ನಪ್ಪಿದ್ದಾನೆ.