Tag: ನೈಜೀರಿಯಾ ಪ್ರಜೆ

  • ಚಿಕನ್ ಖರೀದಿಗೆ ಬಂದಿದ್ದ ದೈತ್ಯ ವಿದೇಶಿ ಪ್ರಜೆ ಕೊಲೆ – ಅನುಮಾನಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!

    ಬೆಂಗಳೂರು: ಚಿಕನ್ ಅಂಗಡಿ (chicken stall )ಮುಂದೆ ಒಬ್ಬ ದೈತ್ಯ ವ್ಯಕ್ತಿ ಬಂದು ನಿಂತಿದ್ದ.. ಏಕಾಏಕಿ ಅಲ್ಲಿ ಗಲಾಟೆ ಶುರುವಾಗಿತ್ತು. ಜಗಳ ಶುರುವಾದ ಸ್ವಲ್ಪ ಹೊತ್ತಿನಲ್ಲೇ ಆ ದೈತ್ಯವಕ್ತಿ ಹೆಣವಾಗಿ ಬಿದ್ದಿದ್ದ.

    ಹೌದು. ಚಿಕನ್‌ ಖರೀದಿಗೆ ಬಂದಿದ್ದ ನೈಜೀರಿಯಾ ಮೂಲದ ವಿದೇಶಿ ಪ್ರಜೆಯೊಬ್ಬನನ್ನ ಕೊಲೆ ಮಾಡಿರೋ ಘಟನೆ ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆಯಲ್ಲಿ 40 ವರ್ಷ ವಯಸ್ಸಿನ ಅಡಿಯಾಕೋ ಮಸಾಲಿಯೋ ಎಂಬಾತನನ್ನ ಕೊಲೆ‌ ಮಾಡಿರೋ ಘಟನೆ ವರದಿಯಾಗಿದೆ.

    ಅಂದಹಾಗೆ ಬುಧವಾರ (ಫೆ.20) ಬಾಗಲೂರು ಠಾಣಾ ವ್ಯಾಪ್ತಿಯ ಬೆಳ್ಳಹಳ್ಳಿಗೆ ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ಬಂದಿದ್ದ ನೈಜೀರಿಯಾ ಪ್ರಜೆ ಅಡಿಯಾಕೋ ಮಸಾಲಿಯೋ ಚಿಕನ್ ಸೆಂಟರ್ ವೊಂದರಲ್ಲಿ ಚಿಕನ್ ಖರೀದಿಗೆ ಹೋಗಿದ್ದ. ಈ ವೇಳೆ ಆತನ ದೈತ್ಯ ದೇಹ, ಆತನ ಓಡಾಟ ನೋಡಿ ಸ್ಥಳೀಯರು ಅನುಮಾಸ್ಪದವಾಗಿ ಓಡಾಡ್ತಿದ್ದಾನೆ ಅಂತಾ ತಡೆದು ಪ್ರಶ್ನೆ ಮಾಡಿದ್ದಾರೆ.

    ನಗರದಲ್ಲಿ ಆಗಾಗ್ಗೆ ನೈಜೀರಿಯಾ ಮೂಲದವ್ರು ಡ್ರಗ್, ಗಾಂಜಾ ಪೆಡ್ಲಿಂಗ್ ನಲ್ಲಿ ತೊಡಗಿಸಿಕೊಳ್ಳೋದು ಕಂಡುಬರುತ್ತಿರೋದ್ರಿಂದ ಈತನನ್ನೂ ಕೂಡ ಪೆಡ್ಲರ್ ಅಂತಾ ಅಂದ್ಕೊಂಡು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸ್ಥಳೀಯರಿಗೂ ದೈತ್ಯ ಪ್ರಜೆಗೂ ಗಲಾಟೆ ಶುರುವಾಗಿದೆ. ಗಲಾಟೆ ನಡುವೆ ಯಾಸೀನ್ ಖಾನ್ ಎಂಬಾತನಿಗೆ ಅಡಿಯಾಕೋ ಮಸಾಲಿಯೋ ಒಂದೆರಡೇಟು ಹೊಡೆದಿದ್ದ ಅದಕ್ಕೆ ಕೋಪಗೊಂಡಿದ್ದ ಯಾಸೀನ್ ಖಾನ್ ಅಲ್ಲಿಯೇ ಇದ್ದ ಮರದ ತುಂಡು ಒಂದನ್ನ ಕೈಗೆತ್ತಿಕೊಂಡವನೇ ಸೀದಾ ಅಡಿಯಾಕೋ ತಲೆಗೆ ಬಿಟ್ಟಿದ್ದಾನೆ. ನಂತರ ಗಲಾಟೆ ಜೋರಾಗಿದೆ, ಗಲಾಟೆ ನಡುವೆ ಬೆಳ್ಳಹಳ್ಳಿ ಬಂಡೆ ಬಳಿ ಹೋಗಿದ್ದ ಅಡಿಯಾಕೋ ಸುಸ್ಥಾಗಿ ಬಿದ್ದು ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಇನ್ನು ಅಡಿಯಾಕೋ ಶವ ನೋಡಿದ್ದ ಸ್ಥಳೀಯರು ಕೂಡಲೇ ಬಾಗಲೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪ್ರಕರಣ ದಾಖಲಿಸಿದ್ದ ಪೊಲೀಸ್ರು ಆರೋಪಿ ಯಾಸೀನ್ ಖಾನ್‌ನನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಕೊಲೆಯಾದ ನೈಜೀರಿಯಾ ಮೂಲದ ವ್ಯಕ್ತಿಯ ಹಿನ್ನೆಲೆ ಏನು..? ವಿಸಾ ಮುಗಿದಿತ್ತಾ..? ಅಸಲಿಗೆ ಯಾಕೆ ಅಲ್ಲಿಗೆ ಬಂದಿದ್ದ ಅನ್ನೋದು ತನಿಖೆ ನಂತರವೇ ಗೊತ್ತಾಗಬೇಕು.

  • ಅಡುಗೆ ಮಾಡುವ ಕುಕ್ಕರ್‌ನಲ್ಲೇ ಡ್ರಗ್ಸ್ ತಯಾರಿ – ಬೆಂಗಳೂರಲ್ಲಿ ಪೆಡ್ಲರ್ ಅರೆಸ್ಟ್

    ಅಡುಗೆ ಮಾಡುವ ಕುಕ್ಕರ್‌ನಲ್ಲೇ ಡ್ರಗ್ಸ್ ತಯಾರಿ – ಬೆಂಗಳೂರಲ್ಲಿ ಪೆಡ್ಲರ್ ಅರೆಸ್ಟ್

    ಬೆಂಗಳೂರು: ಅಡುಗೆ ಮನೆಯನ್ನೇ ಡ್ರಗ್ಸ್ (Drugs) ತಯಾರಿಸುವ ಕಾರ್ಖಾನೆಯನ್ನಾಗಿ ಮಾಡಿಕೊಂಡಿದ್ದ ನೈಜೀರಿಯಾದ ಪ್ರಜೆಯನ್ನು ಸಿಸಿಬಿಯ (CCB) ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

    ನೈಜೀರಿಯಾ ಪ್ರಜೆ ಬೆಂಜಮಿನ್ ಅವಲಹಳ್ಳಿಯ ತನ್ನ ಮನೆಯ ಕಿಚನ್‌ನಲ್ಲಿ ಕಚ್ಚಾ ಪದಾರ್ಥ ಬಳಸಿಕೊಂಡು ಸ್ಟೌ ಮೇಲಿಟ್ಟು ಬೆಂಕಿ ಹೊತ್ತಿಸಿ, ದೋಸೆಯ ರೀತಿ ಮಾಡಿಕೊಳ್ತಿದ್ದ. ಆ ಬಳಿಕ ಪ್ರೆಶರ್ ಕುಕ್ಕರ್‌ಗೆ (Pressure Cooker) ಪೈಪ್ ಅಳವಡಿಸಿ ಆವಿಯಿಂದ ಕ್ರಿಸ್ಟಲ್ ಬರುವಂತೆ ಮಾಡಿ ಎಂಡಿಎಂಎ (MDMA) ತಯಾರು ಮಾಡುತ್ತಿದ್ದ.

    ಸಿಸಿಬಿಯ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ರಾಮಮೂರ್ತಿ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರಂಭದಲ್ಲಿ ಆರೋಪಿ ಬಳಿ 100 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಆರೋಪಿ ಎಲ್ಲಿಂದ ಎಂಡಿಎಂಎ ತರಿಸುತ್ತಿದ್ದಾನೆ ಎಂದು ಪರಿಶೀಲನೆ ನಡೆಸಿದ ವೇಳೆ ಬೆಂಜಮಿನ್ ವಾಸವಿದ್ದ ಮನೆಯಲ್ಲೇ ಎಂಡಿಎಂಎ ಕ್ರಿಸ್ಟಲ್ ತಯಾರಿಸುತಿದ್ದ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಾತ್ರೆ, ಒಳ ಉಡುಪಿನಲ್ಲಿ ಚಿನ್ನ ಕಳ್ಳಸಾಗಣೆ – ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ಐವರ ಬಂಧನ

    ಎಂಡಿಎಂಎ ತಯಾರು ಮಾಡಲು ಬೇಕಿದ್ದ ಕಚ್ಚಾವಸ್ತುಗಳನ್ನು ಖರೀದಿ ಮಾಡುತ್ತಿದ್ದ ಆರೋಪಿ ನಂತರ ಹಂತ ಹಂತವಾಗಿ ಎಂಡಿಎಂಎ ತಯಾರು ಮಾಡುತ್ತಿದ್ದ. ಡ್ರಗ್ಸ್ ಡಿಮಾಂಡ್ ಎಷ್ಟು ಇದೆ, ಅಷ್ಟನ್ನು ತಯಾರು ಮಾಡಿ, ನಂತರ ಅದನ್ನು ಕೇವಲ ನೈಜೀರಿಯಾ ಮತ್ತು ಆಫ್ರಿಕಾ ಮೂಲದವರಿಗೆ ಮಾರಾಟ ಮಾಡುತ್ತಿದ್ದ ಎಂಬುದು ತಿಳಿದು ಬಂದಿದೆ. ತಯಾರು ಮಾಡಿಟ್ಟಿದ್ದ ಸುಮಾರು 10 ಕೋಟಿ ರೂ. ಮೌಲ್ಯದ 5 ಕೆಜಿ ಎಂಡಿಎಂಎ ಮತ್ತು ಅದನ್ನು ತಯಾರು ಮಾಡಲು ಬೇಕಾಗಿದ್ದ 5 ಕೆಜಿ ಕಚ್ಚಾವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್!

  • ಆಸ್ಪತ್ರೆಯಲ್ಲಿ ಮಾರಕಾಸ್ತ್ರ ಹಿಡಿದು ನೈಜೀರಿಯಾ ಪ್ರಜೆಗಳ ಗ್ಯಾಂಗ್‍ವಾರ್- ಟಾಯ್ಲೆಟ್‍ನಲ್ಲಿ ಅವಿತುಕುಳಿತ ಸಿಬ್ಬಂದಿ

    ಆಸ್ಪತ್ರೆಯಲ್ಲಿ ಮಾರಕಾಸ್ತ್ರ ಹಿಡಿದು ನೈಜೀರಿಯಾ ಪ್ರಜೆಗಳ ಗ್ಯಾಂಗ್‍ವಾರ್- ಟಾಯ್ಲೆಟ್‍ನಲ್ಲಿ ಅವಿತುಕುಳಿತ ಸಿಬ್ಬಂದಿ

    ನವದೆಹಲಿ: ಮಾರಕಾಸ್ತ್ರಗಳನ್ನು ಹಿಡಿದು ಸುಮಾರು 10ಕ್ಕೂ ಹೆಚ್ಚು ನೈಜೀರಿಯಾ ಪ್ರಜೆಗಳು ದೆಹಲಿಯ ಆಸ್ಪತ್ರೆಯೊಂದರಲ್ಲಿ ಗ್ಯಾಂಗ್‍ವಾರ್ ನಡೆಸಿರೋ ಘಟನೆ ನಡೆದಿದೆ.

    ಶನಿವಾರದಂದು ಈ ಘಟನೆ ನಡೆದಿದ್ದು, ನೈಜೀರಿಯಾ ಪ್ರಜೆಗಳ ಗಲಾಟೆಗೆ ಹೆದರಿ ಆಸ್ಪತ್ರೆ ಸಿಬ್ಬಂದಿ ಟಾಯ್ಲೆಟ್ ಹಾಗೂ ಮೇಲ್ಮಹಡಿಗಳಲ್ಲಿ ಅವಿತು ಕುಳಿತಿದ್ದರು ಎಂದು ವರದಿಯಾಗಿದೆ. ಘಟನೆಯಲ್ಲಿ ಮೂವರು ನೈಜೀರಿಯನ್‍ಗಳಿಗೆ ಗಾಯವಾಗಿದ್ದು, ಸಾಕೇತ್‍ನ ಆಸ್ಪತ್ರೆಗೆ ಅವರು ಚಿಕಿತ್ಸೆಗೆಂದು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

    ನೈಜೀರಿಯಾ ಪ್ರಜೆಗಳು ಮಾರಾಮಾರಿ ನಡೆಸುತ್ತಿರುವ ದೃಶ್ಯಗಳು ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂರ್ನಾಲ್ಕು ಜನ ಮಾರಕಾಸ್ತ್ರ ಹಿಡಿದು ಹೊಡೆದಾಡುತ್ತಿದ್ದು ಬಾಗಿಲು ಮುರಿದು ನೆಲದ ಮೇಲೆ ಬಿದ್ದಿರೋದನ್ನ ವಿಡಿಯೋದಲ್ಲಿ ಕಾಣಬಹುದು.

    ಎರಡು ಗುಂಪುಗಳು ಆಸ್ಪತ್ರೆಯ ರಿಸೆಪ್ಷನ್ ಬಳಿ ಸುಮಾರು 1 ಗಂಟೆ ಕಾಲ ಹೊಡೆದಾಡಿಕೊಂಡಿದ್ದಾರೆ. ಇವರನ್ನು ತಡೆಯಲು ಬಂದ ಸೆಕ್ಯುರಿಟಿ ಗಾರ್ಡ್ ಮೇಲೂ ಹಲ್ಲೆ ನಡೆದಿದ್ದು, ಗಾಯಗೊಂಡಿದ್ದಾರೆ. ಕ್ಲಿನಿಕ್‍ನ ನರ್ಸ್‍ಗಳು ಮತ್ತು ಇತರೆ ಸಿಬ್ಬಂದಿ ರೋಗಿಗಳಿದ್ದ ಮೇಲ್ಮಡಿಗೆ ಹೋಗಿ ಎಲ್ಲಾ ಬಾಗಿಲುಗಳ ಬೋಲ್ಟ್ ಹಾಕಿ ಬಂದ್ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ.

    ಎರಡೂ ಗುಂಪು ಆಸ್ಪತ್ರೆಯನ್ನು ಜಖಂಗೊಳಿಸಿ ಪೊಲೀಸರು ಬರುವ ಮುಂಚೆಯೇ ಅಲ್ಲಿಂದ ಪರಾರಿಯಾಗಿದ್ದಾರೆ.

  • ರಾತ್ರಿ ಕಳ್ಳತನಕ್ಕೆ ಇಳಿದಿದ್ದ ನೈಜೀರಿಯಾ ಪ್ರಜೆಗೆ ಬಿತ್ತು ಗೂಸಾ: ವಿಡಿಯೋ ನೋಡಿ

    ರಾತ್ರಿ ಕಳ್ಳತನಕ್ಕೆ ಇಳಿದಿದ್ದ ನೈಜೀರಿಯಾ ಪ್ರಜೆಗೆ ಬಿತ್ತು ಗೂಸಾ: ವಿಡಿಯೋ ನೋಡಿ

    ಬೆಂಗಳೂರು: ನಗರದಲ್ಲಿ ನೈಜೀರಿಯಾ ಪ್ರಜೆಗಳ ಪುಂಡಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾತ್ರಿ ಆಯ್ತು ಅಂದ್ರೆ ಸಾಕು ಫೀಲ್ಡಿಗಿಳಿದು ಸಿಕ್ಕ ಸಿಕ್ಕ ಮನೆಗಳನ್ನೆಲ್ಲಾ ದೋಚುತ್ತಿದ್ದ ಪ್ರಜೆಯೊಬ್ಬ ಈಗ ಸಿಕ್ಕಿಬಿದಿದ್ದಾನೆ.

    ಹೀಗೆಯೇ ಮನೆ ದೋಚಲು ಹೋದ ಒಬ್ಬನನ್ನು ಸಾರ್ವಜನಿಕರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲ, ಕಂಬಕ್ಕೆ ಕಟ್ಟಿ ಹೊಡೆದು ಕಳ್ಳರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನೈಜೀರಿಯಾ ಪ್ರಜೆಗಳ ಪುಂಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ಈ ಸಂಬಂಧ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಗ್ರೇಟರ್ ನೋಯ್ಡಾದಲ್ಲಿ ನೈಜೀರಿಯಾ ಪ್ರಜೆಗಳ ಮೇಲೆ ದಾಳಿ: ಸಿಎಂ ಆದಿತ್ಯನಾಥ್‍ಗೆ ಕರೆ ಮಾಡಿ ವರದಿ ಕೇಳಿದ ಸುಷ್ಮಾ ಸ್ವರಾಜ್

    ಗ್ರೇಟರ್ ನೋಯ್ಡಾದಲ್ಲಿ ನೈಜೀರಿಯಾ ಪ್ರಜೆಗಳ ಮೇಲೆ ದಾಳಿ: ಸಿಎಂ ಆದಿತ್ಯನಾಥ್‍ಗೆ ಕರೆ ಮಾಡಿ ವರದಿ ಕೇಳಿದ ಸುಷ್ಮಾ ಸ್ವರಾಜ್

    ನವದೆಹಲಿ: 12ನೇ ತರಗತಿಯ ಯುವಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರೇಟರ್ ನೋಯ್ಡಾದಲ್ಲಿ ಸೋಮವಾರದಂದು ಆಫ್ರಿಕಾ ಪ್ರಜೆಗಳ ಮೇಲೆ ದಾಳಿ ನಡೆದಿದ್ದು ಈ ಬಗ್ಗೆ ವರದಿ ನೀಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಕೇಳಿದ್ದಾರೆ.

    ಶನಿವಾರದಂದು ಗ್ರೇಟರ್ ನೋಯ್ಡಾದಲ್ಲಿ 19 ವರ್ಷದ ಮನಿಷ್ ಖರಿ ಮೃತಪಟ್ಟಿದ್ದು, ಈತ ಮಾದಕ ದ್ರವ್ಯದ ಓವರ್‍ಡೋಸ್‍ನಿಂದ ಸಾವನ್ನಪ್ಪಿದ್ದಾನೆಂದು ಸ್ಥಳಿಯರು ಆರೋಪಿಸಿದ್ರು. ಮನಿಷ್ ಕೊನೆಯ ಬಾರಿಗೆ ನೈಜೀರಿಯಾ ಪ್ರಜೆಗಳ ಗುಂಪಿನ ಜೊತೆಯಲ್ಲಿದ್ದಿದ್ದು ನೋಡಿದ್ದೆವು ಎಂದು ಸ್ಥಳೀಯರು ಹೇಳಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 5 ನೈಜೀರಿಯಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದರು.

    ಯುವಕನ ಸಾವಿನ ಹಿನ್ನೆಲೆಯಲ್ಲಿ ಸೋಮವಾರದಂದು ನೂರಾರು ಜನ ಸ್ಥಳೀಯರು ಪ್ರತಿಭಟನೆ ನಡೆಸಿದ್ರು. ಈ ವೇಳೆ ಗ್ರೇಟರ್ ನೊಯ್ಡಾದ ಪರಿ ಚೌಕ್ ಬಳಿ 4 ನೈಜೀರಿಯಾ ಪ್ರಜೆಗಳ ಮೇಲೆ ದಾಳಿ ನಡೆದಿದೆ. ಘಟನೆಯಲ್ಲಿ ನೈಜೀರಿಯ ಪ್ರಜೆಗಳು ಗಾಯಗೊಂಡಿದ್ದಾರೆ. ಈ ಬಗ್ಗೆ ನೈಜೀರಿಯಾದ ಯುವಕನೊಬ್ಬ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದು, ಇದಕ್ಕೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರೊಂದಿಗೆ ನಾನು ಮಾತನಾಡಿದ್ದೇನೆ. ಈ ಬಗ್ಗೆ ಸೂಕ್ತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.