Tag: ನೈಜೀರಿಯಾ

  • ಬಾಗಲಕೋಟೆಯ ಮಹಿಳೆಗೆ ಮದುವೆಯಾಗೋದಾಗಿ ಹೇಳಿ 5.50 ಲಕ್ಷ ವಂಚನೆ – ನೈಜೀರಿಯನ್‌ ಪ್ರಜೆ ಅರೆಸ್ಟ್‌

    ಬಾಗಲಕೋಟೆಯ ಮಹಿಳೆಗೆ ಮದುವೆಯಾಗೋದಾಗಿ ಹೇಳಿ 5.50 ಲಕ್ಷ ವಂಚನೆ – ನೈಜೀರಿಯನ್‌ ಪ್ರಜೆ ಅರೆಸ್ಟ್‌

    – ಲಂಡನ್‌ ನಿವಾಸಿ ಎಂದು ನಂಬಿಸಿ ಹಣ ಪಡೆದಿದ್ದ ವಂಚಕ

    ಬಾಗಲಕೋಟೆ: ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಮೋಸಮಾಡಿದ ನೈಜಿರಿಯಾ (Nigeria) ಮೂಲದ ವ್ಯಕ್ತಿ‌ಯನ್ನು ಬಾಗಲಕೋಟೆ ಸಿಇಎನ್ ಪೊಲೀಸರು (Bagalkote CEN Police) ಬಂಧಿಸಿದ್ದಾರೆ.

    ಅಲಿವರ್ ವುಗುವೊ ಒಕಿಚಿಕು ಎಂಬ ವ್ಯಕ್ತಿ ಬಂಧಿತ ಆರೋಪಿ. ಈ ಬಂಧಿತನಿಂದ 4 ಮೊಬೈಲ್, 1 ಲ್ಯಾಪ್‌ಟಾಪ್, ಪಾಸ್‌ಪೋರ್ಟ್‌,  ಅಮೆರಿಕ ಡಾಲರ್ ಇರುವ ಬಂಡಲ್‌ಗಳನ್ನು ಜಪ್ತಿ ಮಾಡಲಾಗಿದೆ.

    ಅಲಿವರ್ ಇಳಕಲ್ ಮೂಲದ ಮಹಿಳೆಗೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿ 5.50 ಲಕ್ಷ ರೂ. ಪಡೆದು ಮೋಸಮಾಡಿದ್ದ. ಹೀಗಾಗಿ ಮೋಸಹೋದ ಮಹಿಳೆ ಇಳಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹಿಳೆಯ ದೂರಿನ ಅನ್ವಯ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬಾಗಲಕೋಟೆ ಸಿಇಎನ್ ಪೊಲೀಸರು, ಈತನ ಜಾಡು ಹಿಡಿದು ಮುಂಬೈನಲ್ಲಿ (Mumbai) ನೆಲೆಸಿದ್ದ ಆರೋಪಿಯನ್ನ ವಶಕ್ಕೆ ಪಡೆದು, ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಮೋಸ ಹೇಗೆ?
    ಅಲಿವರ್ ವುಗುವೊ ಒಕಿಚಿಕು ಮೆಟ್ರೋಮೋನಿ ಮೂಲಕ ಇಳಕಲ್ ಮೂಲದ ಡಿವೋರ್ಸ್ ಆಗಿದ್ದ ಸ್ನೇಹಾ(ಹೆಸರು ಬದಲಾಯಿಸಲಾಗಿದೆ) ಅವರನ್ನು ಅಮಿತ್ ದಾಸ್ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದ. ಲಂಡನ್‌ನಲ್ಲಿ ನಾನು ನೆಲೆಸಿದ್ದೇನೆ. ನನ್ನ ಬಳಿ ಲಕ್ಷಾಂತರ ರೂ. ದುಡ್ಡಿದೆ. ನಿಮ್ಮ ಪ್ರೊಫೈಲ್‌ ನನಗೆ ಇಷ್ಟವಾಯಿತು ಎಂದು ಹೇಳಿ ನಂಬಿಸಿದ್ದ.  ಪ್ರೊಫೈಲಿನಲ್ಲಿ ಬೇರೆ ಫೋಟೋ ಹಾಕಿದ್ದರಿಂದ ಸ್ನೇಹಾ ಈತನ ಮಾತನ್ನು ನಂದಿದ್ದರು. ಇದನ್ನೂ ಓದಿ: ಡಿ.ಕೆ ಶಿವಕುಮಾರ್ ದೇಶದ ಎರಡನೇ ಶ್ರೀಮಂತ ಸಚಿವ ಒಟ್ಟು ಆಸ್ತಿ ಎಷ್ಟು?

    ಒಂದು ದಿನ  ಲಂಡನ್‌ನಿಂದ ಒಂದು ಸಾವಿರ ಯುಎಸ್ ಡಾಲರ್ ತಂದಿದ್ದೇನೆ. ದೆಹಲಿ ಕಸ್ಟಮ್ಸ್ ಆಫೀಸ್‌ನಲ್ಲಿ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಹಣವನ್ನು ಬಿಡಿಸಿಕೊಳ್ಳಲು ತುರ್ತಾಗಿ ಇಂಡಿಯನ್ ಕರೆನ್ಸಿ ಬೇಕಾಗಿದೆ  ಎಂದು ಹೇಳಿದ್ದ. ಈತನ ಮಾತನ್ನು ಕೇಳಿ ಲಕ್ಷ ಲಕ್ಷ ಹಣವವನ್ನು ಸ್ನೇಹಾ ವರ್ಗಾಯಿಸಿದ್ದರು. ಹಣ ಖಾತೆಗೆ ಬಂದ ಬೆನ್ನಲ್ಲೇ ಆತ ಸಂಪರ್ಕ ಕಡಿತಗೊಳಿಸಿದ್ದ.

    ತಾನು ವಂಚನೆಗೆ ಒಳಗಾದ ವಿಚಾರ ಗೊತ್ತಾಗಿ  ಸ್ನೇಹಾ ಅವರು 2024 ರಲ್ಲಿ ಇಳಕಲ್ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.  ಈ ಕೇಸ್ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು. ಈ ಪ್ರಕರಣವನ್ನು ತನಿಖೆ ಚುರುಕುಗೊಳಿಸಿದ ಸಿಇಎನ್ ಪೊಲೀಸರು ಕಾರ್ಯಾಚರಣೆ ಮಾಡಿ ನೈಜೀರಿಯನ್ ಪ್ರಜೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಪೆಟ್ರೋಲ್ ಟ್ಯಾಂಕರ್ ಪಲ್ಟಿ, ಕ್ಯಾನ್‌ನಲ್ಲಿ ತುಂಬಿಕೊಳ್ಳುತ್ತಿದಾಗ ಸ್ಫೋಟ – 70 ಮಂದಿ ಸಾವು

    ಪೆಟ್ರೋಲ್ ಟ್ಯಾಂಕರ್ ಪಲ್ಟಿ, ಕ್ಯಾನ್‌ನಲ್ಲಿ ತುಂಬಿಕೊಳ್ಳುತ್ತಿದಾಗ ಸ್ಫೋಟ – 70 ಮಂದಿ ಸಾವು

    ಅಬುಜಾ: ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಸ್ಫೋಟಗೊಂಡ ಪರಿಣಾಮ 70 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಉತ್ತರ ನೈಜೀರಿಯಾದ (Nigeria) ಕಡುನಾ (Kaduna) ನಗರದ ಡಿಕ್ಕೊ ಜಂಕ್ಷನ್‌ನಲ್ಲಿ ನಡೆದಿದೆ.

    ಶನಿವಾರ ಈ ಘಟನೆ ಸಂಭವಿಸಿದ್ದು, 60,000 ಲೀಟರ್ ಪೆಟ್ರೋಲ್ ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಸ್ಫೋಟಗೊಂಡಿದೆ. ಟ್ರಕ್ ಪಲ್ಟಿಯಾದಾಗ ಚೆಲ್ಲಿದ್ದ ಪೆಟ್ರೋಲ್‌ನ್ನು ತುಂಬಿಕೊಳ್ಳಲು ಹೋಗಿದ್ದವರ ಪೈಕಿ 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 56 ಜನ ಗಾಯಗೊಂಡಿದ್ದಾರೆ. ಜೊತೆಗೆ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಅಂಗಡಿಗಳು ನಾಶವಾಗಿವೆ ಎಂದು ರಾಷ್ಟ್ರೀಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿಳಿಸಿದೆ.ಇದನ್ನೂ ಓದಿ: ಬಣ ಬಡಿದಾಟದ ನಡುವೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೆ ಸುನಿಲ್ ಕುಮಾರ್ ಮನವಿ

    ಈ ಕುರಿತು ನೈಜರ್ ರಾಜ್ಯದ ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್ ಮುಖ್ಯಸ್ಥ ಕುಮಾರ್ ತ್ಸುಕ್ವಾಮ್ ಮಾತನಾಡಿ, ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನೈಜೇರಿಯಾ ರಾಜಧಾನಿ ಅಬುಜಾವನ್ನು ಕಡುನಾಗೆ ಸಂಪರ್ಕಿಸುವ ರಸ್ತೆಯ ಡಿಕ್ಕೊ ಜಂಕ್ಷನ್‌ನಲ್ಲಿ ಈ ಅವಘಡ ಸಂಭವಿಸಿದ್ದು, ಇಲ್ಲಿಯವರೆಗೆ ಸಾವಿನ ಸಂಖ್ಯೆ 70ಕ್ಕೆ ಏರಿದೆ ಎಂದು ತಿಳಿಸಿದರು.

    ನೈಜೀರಿಯಾದಲ್ಲಿ ಕಳೆದ 18 ತಿಂಗಳಲ್ಲಿ ಪೆಟ್ರೋಲ್ ಬೆಲೆ ಐದು ಪಟ್ಟು ಹೆಚ್ಚಾಗಿದೆ. ಹೀಗಾಗಿ ಟ್ರಕ್ ಪಲ್ಟಿಯಾದ ಸಮಯದಲ್ಲಿ ಪೆಟ್ರೋಲ್ ತೆಗೆದುಕೊಳ್ಳಲು ಹೋದವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ ಎಂದು ಹೇಳಿದರು.

    ಕಳೆದ ಅಕ್ಟೋಬರ್ ತಿಂಗಳಲ್ಲಿ ಆಫ್ರಿಕಾದ ಜಿಗಾವಾ ರಾಜ್ಯದಲ್ಲಿ ನಡೆದ ಸ್ಫೋಟದಲ್ಲಿ 170ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.ಇದನ್ನೂ ಓದಿ: ನಾಗು ಸಾಧುಗಳು ಯಾರು? ನೇಮಕಾತಿ ಹೇಗೆ ನಡೆಯುತ್ತೆ? ದೀಕ್ಷೆ ಪೂರ್ಣಗೊಳ್ಳುವುದು ಯಾವಾಗ?

  • ಪ್ರಧಾನಿ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ರಾಷ್ಟ್ರೀಯ ಗೌರವ

    ಪ್ರಧಾನಿ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ರಾಷ್ಟ್ರೀಯ ಗೌರವ

    ಅಬುಜಾ: ನೈಜೀರಿಯಾ (Nigeria) ಸೇರಿದಂತೆ ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರಿಗೆ ನೈಜೀರಿಯಾ ಸರ್ಕಾರ (Nigeria Government) ಎರಡನೇ ಅತ್ಯುನ್ನತ ರಾಷ್ಟ್ರೀಯ ಗೌರವ ನೀಡಿ ಅಭಿನಂದಿಸಿದೆ.

    ನೈಜೀರಿಯಾದ ಎರಡನೇ ಅತ್ಯುನ್ನತ ಪುರಸ್ಕಾರ `ದಿ ಗ್ರ‍್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ (The Grand Commander of The Order of the Niger) ನೀಡಿ ಗೌರವಿಸಿದೆ. ಪ್ರಧಾನಿ ಮೋದಿಯವರಿಗೆ ದೇಶವೊಂದು ನೀಡುತ್ತಿರುವ 17ನೇ ಅಂತರರಾಷ್ಟ್ರೀಯ ಪ್ರಶಸ್ತಿ ಇದಾಗಿದೆ.ಇದನ್ನೂ ಓದಿ: ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾ ಮುಖ್ಯ ವಕ್ತಾರ ಕಲ್ಲಾಸ್‌

    ಪ್ರಧಾನಿ ಮೋದಿ ಈ ಪ್ರಶಸ್ತಿ ಪಡೆದುಕೊಂಡು 2ನೇ ಗಣ್ಯರಾಗಿದ್ದಾರೆ. ಇದಕ್ಕೂ ಮುನ್ನ ರಾಣಿ ಎಲಿಜಬೆತ್ ಅವರು 1969ರಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

    ಐದು ದಿನಗಳ ಪ್ರವಾಸದಲ್ಲಿರುವ ಮೋದಿ ಭಾನುವಾರ (ನ.17) ನೈಜೀರಿಯಾಕ್ಕೆ ಬಂದಿಳಿದಿದ್ದು, ಭಾರತದ ಪ್ರಧಾನಿಯೊಬ್ಬರು 17 ವರ್ಷಗಳ ಬಳಿಕ ಈ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ.

    ನೈಜರೀಯಾ ಪ್ರವಾಸದ ಬಳಿಕ ಬ್ರೆಜಿಲ್ ಮತ್ತು ಗಯಾನಾಗೆ ಪ್ರಯಾಣ ಬೆಳೆಸಲಿದ್ದಾರೆ. ನ.18 ರಿಂದ 19 ರಂದು ರಿಯೋ ಡಿ ಜನೈರೋದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಮೋದಿ ಭಾಗಿಯಾಗಲಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪಾಲ್ಗೊಳ್ಳಲಿದ್ದಾರೆ.

    ಮೂರು ದಿನಗಳ ಹಿಂದೆಯಷ್ಟೇ ಡೊಮಿನಿಕಾ ಸರ್ಕಾರವು ಮೋದಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾಗಿರುವ `ಡಾಮಿನಿಕಾ ಅವಾರ್ಡ್ ಆಫ್ ಹಾನರ್’ ಅನ್ನು ಘೋಷಿಸಿದೆ.

    ಪ್ರಧಾನಿ ಮೋದಿ ಸ್ವೀಕರಿಸಿದ ಗೌರವಗಳ ಪಟ್ಟಿ
    ರಷ್ಯಾ: 2024ರಲ್ಲಿ ಆರ್ಡರ್ ಆಫ್ ಸೇಂಟ್ ಆಂಡ್ರ‍್ಯೂ ಪ್ರಶಸ್ತಿ
    ಭೂತಾನ್: 2024ರಲ್ಲಿ ಡ್ರುಕ್ ಗಯಾಲ್ಪೋ ಆದೇಶ
    ಫ್ರಾನ್ಸ್: 2023ರಲ್ಲಿ ಲೀಜನ್ ಆಫ್ ಆನರ್ ಗ್ರ‍್ಯಾಂಡ್ ಕ್ರಾಸ್
    ಈಜಿಪ್ಟ್: 2023ರಲ್ಲಿ ಆರ್ಡರ್ ಆಫ್ ನೈಲ್
    ಪಪುವಾ ನ್ಯೂಗಿನಿಯಾ: 2023ರಲ್ಲಿ ಆರ್ಡರ್ ಆಫ್ ಲೋಗೊಹುವಿನ ಗ್ರ‍್ಯಾಂಡ್ ಕಂಪ್ಯಾನಿಯನ್
    ಫಿಜಿ: 2023ರಲ್ಲಿ ಆರ್ಡರ್ ಆಫ್ ಫಿಜಿಯ ಒಡನಾಡಿ
    ಪಲಾವ್: 2023ರಲ್ಲಿ ಎಬಾಕಲ್ ಪ್ರಶಸ್ತಿ
    ಮಾಲ್ಡೀವ್ಸ್: 2019ರಲ್ಲಿ ನಿಶಾನ್ ಇಝುದ್ದೀನ್ ಆಳ್ವಿಕೆ
    ಯುಎಇ: 2019ರಲ್ಲಿ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿ
    ಬಹ್ರೇನ್: 2019ರಲ್ಲಿ ಕಿಂಗ್ ಹಮದ್ ಆರ್ಡರ್ ಆಫ್ ದಿ ರಿನೈಸಾನ್ಸ್
    ಪ್ಯಾಲೆಸ್ಟೈನ್: 2018ರಲ್ಲಿ ಪ್ಯಾಲೆಸ್ಟೈನ್ ರಾಜ್ಯದ ಗ್ರ‍್ಯಾಂಡ್ ಕಾಲರ್ ಪ್ರಶಸ್ತಿ
    ಅಫ್ಘಾನಿಸ್ತಾನ: 2016ರಲ್ಲಿ ಸ್ಟೇಟ್ ಆರ್ಡರ್ ಆಫ್ ಗಾಜಿ ಅಮೀರ್ ಅಮಾನುಲ್ಲಾ ಖಾನ್ ಪ್ರಶಸ್ತಿ
    ಸೌದಿ ಅರೇಬಿಯಾ: 2016ರಲ್ಲಿ ಕಿಂಗ್ ಅಬ್ದುಲ್ ಅಜೀಜ್ ಸಾಶ್ ಇದನ್ನೂ ಓದಿ:ರುಂಡವಿಲ್ಲದ ಮಹಿಳೆಯ ಮೃತದೇಹ ಅರೆಬೆತ್ತಲೆಯಾಗಿ ಪತ್ತೆ – ಮಣಿಪುರ ಮತ್ತೆ ಧಗ ಧಗ

  • ನೈಜೀರಿಯಾದಲ್ಲಿ ಗುರಿ ತಪ್ಪಿದ ಸೇನಾ ಡ್ರೋನ್‌ ದಾಳಿ – 85 ಮಂದಿ ನಾಗರಿಕರು ಬಲಿ

    ನೈಜೀರಿಯಾದಲ್ಲಿ ಗುರಿ ತಪ್ಪಿದ ಸೇನಾ ಡ್ರೋನ್‌ ದಾಳಿ – 85 ಮಂದಿ ನಾಗರಿಕರು ಬಲಿ

    ಅಬುಜಾ: ವಾಯುವ್ಯ ನೈಜೀರಿಯಾದಲ್ಲಿ (Nigeria) ಸೇನೆಯ ಡ್ರೋನ್‌ ದಾಳಿ ಗುರಿ ತಪ್ಪಿ, 85 ಮಂದಿ ನಾಗರಿಕರು ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ.

    ಕಡುನಾ ರಾಜ್ಯದ ತುಡುನ್‌ ಬಿರಿ ಗ್ರಾಮದ ಬಳಿ ಭಯೋತ್ಪಾದಕರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಆದರೆ ಗುರಿ ತಪ್ಪಿದ್ದು, ನಾಗರಿಕರ ಸಾವಿಗೆ ಕಾರಣವಾಗಿದೆ. ನೈಜೀರಿಯಾದ ಸಂಘರ್ಷದ ವಲಯದಲ್ಲಿ ನಡೆದ ಮಾರಣಾಂತಿಕ ದಾಳಿ ಬಗ್ಗೆ ತನಿಖೆ ನಡೆಸಲು ದೇಶದ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಉಗ್ರ ಚಟುವಟಿಕೆಗಳಲ್ಲಿ ಭಾಗಿ – ಖಲಿಸ್ತಾನಿ ಭಯೋತ್ಪಾದಕ ಪಾಕ್‌ನಲ್ಲಿ ಸಾವು

    ದಾಳಿಯಲ್ಲಿ ಕನಿಷ್ಠ 66 ಜನರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದಂತೆ 85 ಮಂದಿ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಸಿಲುಕಿರುವ ಸಂತ್ರಸ್ತರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

    ನೈಜೀರಿಯಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ತೌರೀದ್ ಲಗ್ಬಾಜಾ ಅವರು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಡ್ರೋನ್ ದಾಳಿಗೆ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ಗಾಜಾ ಸುರಂಗಗಳಲ್ಲಿ ಮಹಾ ಪ್ರವಾಹ ಸೃಷ್ಟಿಸಲು ಇಸ್ರೇಲ್‌ ಪ್ಲ್ಯಾನ್‌

    ತಪ್ಪಾದ ಲೆಕ್ಕಾಚಾರದ ವೈಮಾನಿಕ ದಾಳಿಯ ಘಟನೆಗಳು ದೇಶದಲ್ಲಿ ಆತಂಕಕಾರಿ ಆಯಾಮವನ್ನು ಪಡೆದುಕೊಳ್ಳುತ್ತಿದೆ ಎಂದು ನೈಜೀರಿಯಾದ ಮಾಜಿ ಉಪಾಧ್ಯಕ್ಷ ಮತ್ತು ಈ ವರ್ಷದ ಚುನಾವಣೆಯಲ್ಲಿ ಪ್ರಮುಖ ವಿಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಅತಿಕು ಅಬುಬಕರ್ ಅಭಿಪ್ರಾಯಪಟ್ಟಿದ್ದಾರೆ.

    ಒಂದು ದಶಕಕ್ಕೂ ಹೆಚ್ಚು ಕಾಲ ನೈಜೀರಿಯಾದ ಉತ್ತರವನ್ನು ಅಸ್ಥಿರಗೊಳಿಸಿದ ಉಗ್ರಗಾಮಿ ಹಿಂಸಾಚಾರ ಮತ್ತು ಬಂಡುಕೋರರ ದಾಳಿಯ ವಿರುದ್ಧ ಹೋರಾಡುವಾಗ ನೈಜೀರಿಯಾದ ಮಿಲಿಟರಿ ಆಗಾಗ್ಗೆ ವೈಮಾನಿಕ ದಾಳಿಗಳನ್ನು ನಡೆಸುತ್ತದೆ. ಆಗಾಗ್ಗೆ ನಾಗರಿಕ ಸಾವುನೋವುಗಳನ್ನು ಉಂಟುಮಾಡುತ್ತದೆ. ಜನವರಿಯಲ್ಲಿ ನಸಾರಾವಾ ರಾಜ್ಯ ಹಾಗೂ 2022 ರ ಡಿಸೆಂಬರ್‌ನಲ್ಲಿ ಝಂಫಾರಾ ರಾಜ್ಯದಲ್ಲಿ ಹತ್ತಾರು ಮಂದಿ ಇಂತಹ ದಾಳಿಗಳಿಗೆ ಬಲಿಯಾಗಿದ್ದಾರೆ.

  • ಬೋಟ್ ಮುಳುಗಿ ಮದುವೆಯಿಂದ ಹಿಂದಿರುಗುತ್ತಿದ್ದ 103 ಮಂದಿ ದುರ್ಮರಣ- ಹಲವರು ನಾಪತ್ತೆ

    ಬೋಟ್ ಮುಳುಗಿ ಮದುವೆಯಿಂದ ಹಿಂದಿರುಗುತ್ತಿದ್ದ 103 ಮಂದಿ ದುರ್ಮರಣ- ಹಲವರು ನಾಪತ್ತೆ

    ನೈಜೀರಿಯಾ: ಮದುವೆ (Marriage) ಯಿಂದ ಹಿಂದಿರುಗುತ್ತಿದ್ದಾಗ ದೋಣಿ ಮಗುಚಿ, ಮಕ್ಕಳು ಸೇರಿದಂತೆ ಕನಿಷ್ಠ 103 ಜನರು ಸಾವನ್ನಪ್ಪಿದ ಘಟನೆ ಎಂದು ಉತ್ತರ ನೈಜೀರಿಯಾ (Nigeria) ದಲ್ಲಿ ನಡೆದಿದೆ.

    ರಾಜ್ಯದ ರಾಜಧಾನಿ ಇಲೋರಿನ್‍ನಿಂದ 160 ಕಿಲೋಮೀಟರ್ ದೂರದಲ್ಲಿರುವ ಕ್ವಾರಾ ರಾಜ್ಯದ ಪಟೇಗಿ ಜಿಲ್ಲೆಯ ನೈಜರ್ ನದಿಯಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಹಲವು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಶೋಧ ಕಾರ್ಯ ನಡೆದಿದೆ. ಇದುವರೆಗೆ 100 ಜನರನ್ನು ರಕ್ಷಿಸಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

    ನೀರಿನಲ್ಲಿ ಮುಳುಗಿದವರಲ್ಲಿ ಹೆಚ್ಚಿನವರು ಸಂಬಂಧಿಕರಾಗಿದ್ದು, ಅವರು ಮದುವೆಗೆ ಬಂದಿದ್ದರು. ತಡರಾತ್ರಿಯವರೆಗೂ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂದು ಸ್ಥಳೀಯ ಮುಖ್ಯಸ್ಥ ಅಬ್ದುಲ್ ಗಣ ಲುಕ್ಪಾಡಾ ಹೇಳಿದ್ದಾರೆ. ಇದನ್ನೂ ಓದಿ: ಬಾಲಕನನ್ನು ಕೊಂದು ತಿಂದ ಮೊಸಳೆಯನ್ನೇ ಥಳಿಸಿ ಹತ್ಯೆಗೈದ್ರು- ವೀಡಿಯೋ ವೈರಲ್

    ಬೈಕ್ ನಲ್ಲಿ ಸಮಾರಂಭಕ್ಕೆ ಆಗಮಿಸಿದ ಅವರು, ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿದ ಪರಿಣಾಮ ಬೋಟ್ ನಲ್ಲಿ ತೆರಳಬೇಕಾಯಿತು. ದೋಣಿಯಲ್ಲಿ ಸುಮಾರು 300 ಜನ ಇದ್ದರು, ಹೀಗಾಗಿ ಬೋಟ್ ಓವರ್ ಲೋಡ್ ಆಗಿತ್ತು. ದೋಣಿ ಚಲಿಸುತ್ತಿದ್ದಾಗ ಒಂದು ದೊಡ್ಡ ಮರದ ದಿಮ್ಮಿಗೆ ಬಡಿದು ಎರಡು ಭಾಗವಾಗಿ ದುರ್ಘಟನೆ ಸಂಭವಿಸಿದೆ. ಮಂಗಳವಾರ ಸಂಜೆ ಹೊತ್ತಿಗೆ ಎಲ್ಲರ ಮೃತದೇಹಗಳನ್ನು ನೀರಿನಿಂದ ಹೊರ ತೆಗೆದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಅವರು ವಿವರಿಸಿದರು.

    ಇದು ಹಲವು ವರ್ಷಗಳಿಂದ ಕಂಡ ಅತ್ಯಂತ ಭೀಕರ ದೋಣಿ ದುರಂತ ಎಂದು ಸ್ಥಳೀಯರು ಹೇಳಿದ್ದಾರೆ.

  • ದೆಹಲಿಯಲ್ಲಿ ನೈಜೀರಿಯಾದ ವ್ಯಕ್ತಿಯ ಹುಚ್ಚಾಟ – ಪೋಷಕರ ಸಾವಿನ ಸುದ್ದಿ ತಿಳಿದು ಕಟ್ಟಡದಿಂದ ಜಿಗಿದ

    ದೆಹಲಿಯಲ್ಲಿ ನೈಜೀರಿಯಾದ ವ್ಯಕ್ತಿಯ ಹುಚ್ಚಾಟ – ಪೋಷಕರ ಸಾವಿನ ಸುದ್ದಿ ತಿಳಿದು ಕಟ್ಟಡದಿಂದ ಜಿಗಿದ

    ನವದೆಹಲಿ: ನೈಜೀರಿಯಾದ ವ್ಯಕ್ತಿಯೊಬ್ಬ (Nigerian Man) ದೆಹಲಿಯಲ್ಲಿ (Delhi) ಹುಚ್ಚಾಟ ನಡೆಸಿ, ಕಟ್ಟಡದ 2ನೇ ಮಹಡಿಯಿಂದ ಜಿಗಿದಿರುವ ಘಟನೆ ನಡೆದಿದೆ. ವ್ಯಕ್ತಿ ತನ್ನ ಪೋಷಕರನ್ನು ಕಳೆದುಕೊಂಡ ವಿಚಾರವನ್ನು ತಿಳಿದ ನಂತರ ಖಿನ್ನತೆಗೆ ಒಳಗಾಗಿ ಕಟ್ಟಡದಿಂದ ಜಿಗಿದಿದ್ದಾನೆ ಎನ್ನಲಾಗಿದೆ. ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

    ದೆಹಲಿಯ ನಿಹಾಲ್ ವಿಹಾರ್ ಪ್ರದೇಶದ ವಸತಿ ಕಟ್ಟಡದ 2ನೇ ಮಹಡಿಯಿಂದ ವ್ಯಕ್ತಿ ಜಿಗಿದಿದ್ದಾನೆ. ಆತನನ್ನು ಎನ್ಡಿನೊಜುವೋ (37) ಎಂದು ಗುರುತಿಸಲಾಗಿದೆ. ಆತ ಕಟ್ಟಡದಿಂದ (Building) ಜಿಗಿಯುವುದಕ್ಕೂ ಮೊದಲು ಬಾಲ್ಕನಿಯ ರೇಲಿಂಗ್‌ನಲ್ಲಿ ನೇತಾಡಿದ್ದಾನೆ. ಸುತ್ತ ಮುತ್ತಲಿದ್ದ ಜನ ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಆತ ಶಾಂತವಾಗದೇ ಗಲಾಟೆ ಮಾಡಿದ್ದಾನೆ. ಇದನ್ನೂ ಓದಿ: ಸಾರಸ್ ಕೊಕ್ಕರೆಯನ್ನು ಸಾಕಿದ್ದ ವ್ಯಕ್ತಿಗೆ ಅರಣ್ಯ ಇಲಾಖೆ ನೋಟಿಸ್

    ಕೆಲ ಹೊತ್ತು ಬಾಲ್ಕನಿಯ ರೇಲಿಂಗ್‌ನಲ್ಲಿ ನೇತಾಡಿಕೊಂಡು ಗಲಾಟೆ ಮಾಡಿದ ವ್ಯಕ್ತಿ ಏಕಾಏಕಿ 2ನೇ ಮಹಡಿಯಿಂದ ಜಿಗಿದಿದ್ದಾನೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ, ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    ನೈಜೀರಿಯಾದಲ್ಲಿ ತನ್ನ ಹೆತ್ತವರು ಅಪಘಾತದಲ್ಲಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಪಡೆದ ಆತ ಕಟ್ಟಡದಿಂದ ಜಿಗಿದಿರುವುದಾಗ ಪೊಲೀಸರ ಬಳಿ ತಿಳಿಸಿದ್ದಾನೆ. ಪೋಷಕರ ಸಾವಿನ ಬಗ್ಗೆ ತಿಳಿದ ಬಳಿಕ ಆತ ಖಿನ್ನತೆಗೆ ಒಳಗಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಕಾಲಿನ ಮೂಳೆ ಮುರಿತವಾಗಿದೆ. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಾಲಕಿ ಹತ್ಯೆಗೈದ ಅಪರಾಧಿಗೆ ನೂರು ವರ್ಷ ಜೈಲು

  • ನಮಾಜ್ ವಿಷಯಕ್ಕೆ ಗಲಾಟೆ – ವಿವಿಯಿಂದ ಹೊರನಡೆದ 60 ನೈಜೀರಿಯಾ ವಿದ್ಯಾರ್ಥಿಗಳು

    ನಮಾಜ್ ವಿಷಯಕ್ಕೆ ಗಲಾಟೆ – ವಿವಿಯಿಂದ ಹೊರನಡೆದ 60 ನೈಜೀರಿಯಾ ವಿದ್ಯಾರ್ಥಿಗಳು

    ಚಂಡೀಗಢ: ಭಾರತೀಯ ವಿದ್ಯಾರ್ಥಿಗಳು (Indian Students) ನಮ್ಮನ್ನು ಥಳಿಸಿದ್ದಾರೆ ಎಂದು ಆರೋಪಿಸಿದ ಸುಮಾರು 60 ನೈಜೀರಿಯಾದ ವಿದ್ಯಾರ್ಥಿಗಳು (Nigerian Students) ಕ್ಯಾಂಪಸ್‌ನಿಂದ ಹೊರನಡೆದಿರುವ ಘಟನೆ ಗುರುಗ್ರಾಮದ ಜಿಡಿ ಗೋಯೆಂಕಾ ವಿಶ್ವವಿದ್ಯಾಲಯದಲ್ಲಿ (Gurgaon University) ನಡೆದಿದೆ.

    ವರದಿಗಳ ಪ್ರಕಾರ ಆಟದ ಮೈದಾನದಲ್ಲಿ ನಮಾಜ್ (Namaz) ಮಾಡಿದ ವಿಷಯಕ್ಕೆ ಭಾರತೀಯ ವಿದ್ಯಾರ್ಥಿಗಳು ಅಸಮಾಧಾನಗೊಂಡಿದ್ದರು. ಬಳಿಕ ನೈಜೀರಿಯಾದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್, ಕೊಠಡಿಯೊಳಗೆ ನಮಾಜ್ ಮಾಡುವಂತೆ ಕೇಳಿಕೊಂಡಿದ್ದಾರೆ. ಮೊದಲಿಗೆ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ ಎಂದು ಪೊಲೀಸರು ಹಾಗೂ ವಿಶ್ವವಿದ್ಯಾಲಯದ ಆಡಳಿತ ತಿಳಿಸಿತ್ತು. ಆದರೆ ಇದೀಗ ತಮ್ಮ ಮೇಲೆ ಭಾರತೀಯ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವುದಾಗಿ ನೈಜೀರಿಯಾದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

    ನಮಾಜ್ ವಿವಾದದ ಕೆಲ ದಿನಗಳ ಬಳಿಕ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿದೆ. ಭಾರತ ಹಾಗೂ ನೈಜೀರಿಯಾದ ವಿದ್ಯಾರ್ಥಿಗಳು ಮಿಶ್ರ ತಂಡಗಳಲ್ಲಿ ಒಟ್ಟಿಗೆ ಫುಟ್‌ಬಾಲ್ ಆಡಬೇಕಿತ್ತು. ಆದರೆ ಇದಕ್ಕೆ ತಂಡದ ನಾಯಕ ಆಕ್ಷೇಪ ವ್ಯಕ್ತಪಡಿಸಿದ್ದು, ಪಂದ್ಯವನ್ನೇ ರದ್ದುಗೊಳಿಸಲಾಯಿತು. ಪಂದ್ಯ ರದ್ದಾದ ಬಳಿಕವೂ ಕೆಲ ಸ್ಥಳೀಯ ವಿದ್ಯಾರ್ಥಿಗಳು ಮೈದಾನಕ್ಕೆ ನುಗ್ಗಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನೈಜೀರಿಯನ್ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಚಾಲೆಂಜ್ ಸೋತ ಗಡ್ಕರಿ – ಎಂಪಿಗೆ ಕೊಡಬೇಕು 32 ಸಾವಿರ ಕೋಟಿ

    ನಮ್ಮ ಮೇಲೆ ದಾಳಿ ಮಾಡುವ ವೇಳೆ ಮುಂದೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭಾರತೀಯ ವಿದ್ಯಾರ್ಥಿಗಳು ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ನೈಜೀರಿಯಾದ ವಿದ್ಯಾರ್ಥಿಗಳು ಘರ್ಷಣೆಯನ್ನು ಸರಿಪಡಿಸಲು ತಮ್ಮ ರಾಯಭಾರ ಕಚೇರಿಯನ್ನು ಮಧ್ಯ ಪ್ರವೇಶಿಸುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

    ಪ್ರಕರಣದ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಆತಂಕ ಸೃಷ್ಟಿಸಿರುವ ಓಮಿಕ್ರಾನ್ ಉಪತಳಿ BQ.1 ಭಾರತದಲ್ಲಿ ಪತ್ತೆ

    Live Tv
    [brid partner=56869869 player=32851 video=960834 autoplay=true]

  • ನೈಜೀರಿಯಾದಲ್ಲಿ ಹಡಗು ಮುಳುಗಿ 10 ಸಾವು, 60 ಜನ ನಾಪತ್ತೆ

    ನೈಜೀರಿಯಾದಲ್ಲಿ ಹಡಗು ಮುಳುಗಿ 10 ಸಾವು, 60 ಜನ ನಾಪತ್ತೆ

    ಅಬುಜಾ: ಹಡಗೊಂದು (Ship) ಮುಳುಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಕನಿಷ್ಠ 10 ಜನರು ಸಾವನ್ನಪ್ಪಿದ್ದು, ಸುಮಾರು 60 ಜನರು ನಾಪತ್ತೆಯಾಗಿರುವ ಘಟನೆ ನೈಜೀರಿಯಾದ (Nigeria) ಅನಂಬ್ರಾ (Anambra) ರಾಜ್ಯದಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಹಡಗಿನಲ್ಲಿ 85 ಜನರಿದ್ದರು. ಭಾರೀ ಅಲೆಗಳ ನಡುವೆ ಹಡಗು ಮುಳುಗಿದ್ದು, ಅದರಲ್ಲಿದ್ದ 10 ಜನರು ಸಾವನ್ನಪ್ಪಿದ್ದಾರೆ. 60 ಜನ ನಾಪತ್ತೆಯಾಗಿದ್ದು, ಅವರ ರಕ್ಷಣೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಈದ್ ಮಿಲಾದ್ ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್ ಪರ ಘೋಷಣೆ

    ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಇದು ಸ್ಥಳೀಯವಾಗಿ ತಯಾರಿಸಲಾದ ಹಡಗಾಗಿದ್ದು, ಸಮುದ್ರಕ್ಕೆ ಇಳಿದ ಕೆಲವೇ ಹೊತ್ತಿನಲ್ಲಿ ಅದರ ಎಂಜಿನ್ ಹಾಳಾಗಿದೆ. ಬಳಿಕ ಭಾರೀ ಪ್ರಮಾಣದ ಅಲೆಗಳಿಗೆ ಸಿಲುಕಿ ಹಡಗು ಮುಳುಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹ್ಸಾ ಅಮಿನಿ ಸಾವು ಖಂಡಿಸಿ ಪ್ರತಿಭಟನೆ – ಇರಾನ್‌ ಸರ್ಕಾರಿ ಟಿವಿ ಹ್ಯಾಕ್‌ ಮಾಡಿದ ಪ್ರತಿಭಟನಾಕಾರರು

    ಈಗಾಗಲೇ 15 ಜನರನ್ನು ರಕ್ಷಿಸಲಾಗಿದೆ. ನೈಜೀರಿಯಾ ಸೇನೆಯ ಮಿಲಿಟರಿ ವಿಪತ್ತು ನಿರ್ವಹಣಾ ಘಟಕ ಶೋಧಕಾರ್ಯಕ್ಕೆ ಸಹಾಯ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೈಜೀರಿಯಾದಿಂದ ತಂದ ಚೀತಾಗಳಿಂದ ದೇಶಾದ್ಯಂತ ಲಂಪಿ ವೈರಸ್‌ ಹರಡುತ್ತಿದೆ: ನಾಲಿಗೆ ಹರಿಬಿಟ್ಟ ಕೈ ನಾಯಕ ನಾನಾ ಪಾಟೋಲೆ

    ನೈಜೀರಿಯಾದಿಂದ ತಂದ ಚೀತಾಗಳಿಂದ ದೇಶಾದ್ಯಂತ ಲಂಪಿ ವೈರಸ್‌ ಹರಡುತ್ತಿದೆ: ನಾಲಿಗೆ ಹರಿಬಿಟ್ಟ ಕೈ ನಾಯಕ ನಾನಾ ಪಾಟೋಲೆ

    ಮುಂಬೈ: ಕಳೆದ ಕೆಲ ತಿಂಗಳಿಂದ ದೇಶದ ಜಾನುವಾರುಗಳನ್ನು ಲಂಪಿ ವೈರಸ್(Lumpy Virus) ಇನ್ನಿಲ್ಲದಂತೆ ಕಾಡುತ್ತಿದೆ. ಈ ಚರ್ಮ ರೋಗದ ಕುರಿತಾಗಿ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಾಟೋಲೆ(Nana Patole) ಹೇಳಿರುವ ಮಾತು ಈಗ ವಿವಾದಕ್ಕೆ ಕಾರಣವಾಗಿದೆ.

    ನೈಜೀರಿಯಾದಿಂದ ತರಲಾದ ಚೀತಾಗಳಿಂದಾಗಿಯೇ(Nigerian’ Cheetahs) ದೇಶಾದ್ಯಂತ ಲಂಪಿ ವೈರಸ್ ಹಬ್ಬುತ್ತಿದ್ದು, ಸಾವಿರಾರು ಪಶುಗಳು ಸಾವನ್ನಪ್ಪುತ್ತಿವೆ ಎಂದು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೇ ದೇಶದ ರೈತರಿಗೆ ನಷ್ಟ ಉಂಟು ಮಾಡಬೇಕೆಂಬ ದುರುದ್ದೇಶದಿಂದಲೇ ಈ ಚೀತಾಗಳನ್ನು ಕೇಂದ್ರ ಸರ್ಕಾರ ಭಾರತಕ್ಕೆ ತಂದಿದೆ ಎಂದು ಹೇಳಿ ನಾಲಿಗೆ ಹರಿಬಿಟ್ಟಿದ್ದಾರೆ.

    ಈ ಹೇಳಿಕೆಯ ಬೆನಲ್ಲೇ ನಾನಾ ಪಾಟೋಲೆ ಮೇಲೆ ಬಿಜೆಪಿ ಮುಗಿಬಿದ್ದಿದೆ. ನಾನಾ ಪಾಟೋಲೆಗೆ ಕನಿಷ್ಠ ನೈಜೀರಿಯಾ ಮತ್ತು ನಮೀಬಿಯಾಗೆ ಇರುವ ವ್ಯತ್ಯಾಸ ಕೂಡ ಗೊತ್ತಿಲ್ಲ. ಅವರು ಮಹಾರಾಷ್ಟ್ರದ ರಾಹುಲ್ ಗಾಂಧಿ ಇದ್ದಂತೆ ಎಂದು ಲೇವಡಿ ಮಾಡಿದೆ. ಇದನ್ನೂ ಓದಿ: ಚುನಾವಣೆ ವೇಳೆ ಉಚಿತ ಕೊಡುಗೆ ಆಫರ್ – ಪಕ್ಷಗಳಿಗೆ ಶಾಕ್, ಆಯೋಗದ ನಿರ್ಧಾರಕ್ಕೆ ವಿಪಕ್ಷಗಳು ಕಿಡಿ

    ಸುಳ್ಳು ಸುದ್ದಿ, ತಪ್ಪು ತಪ್ಪಾಗಿ ಅಪಪ್ರಚಾರ ಮಾಡುವುದು ಕಾಂಗ್ರೆಸ್‍ಗೆ ಹೊಸದಲ್ಲ. ಕೋವಿಡ್‌ ಸಮಯದಲ್ಲೂ ಹೀಗೆ ಮಾಡಿತ್ತು ಎಂದು ಬಿಜೆಪಿ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ. ಸುಳ್ಳು ಸುದ್ದಿ ಹಬ್ಬಿಸುವ ಇಂಥವರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳುತ್ತಾ ಎಂದು ಸವಾಲು ಹಾಕಿದೆ.

    ಬಿಜೆಪಿ ಶಾಸಕ ರಾಮ್‌ ಕದಮ್‌ ಅವರು, ಚೀತಾವನ್ನು ತಂದಿದ್ದರಿಂದ ಭಾರತದಲ್ಲಿ ಲಂಪಿ ವೈರಸ್‌ ಹರಡುತ್ತಿದೆ ಎಂದು ಸಂಶೋಧನೆ ಮಾಡಿದ ನಾನಾ ಪಾಟೋಲೆಗೆ ನೊಬೆಲ್‌ ಪ್ರಶಸ್ತಿ(Nobel Award) ನೀಡಬೇಕೆಂದು ವ್ಯಂಗ್ಯವಾಡಿದ್ದಾರೆ.

    ಸೆಪ್ಟೆಂಬರ್ 17ರಂದು ನಮೀಬಿಯಾದಿಂದ ಭಾರತಕ್ಕೆ ಚೀತಾಗಳನ್ನು ತರಲಾಗಿತ್ತು. ಜುಲೈ ತಿಂಗಳಿನಲ್ಲಿ ಮೊದಲ ಬಾರಿಗೆ ಲಂಪಿ ವೈರಸ್‌ ಭಾರತದಲ್ಲಿ ಪತ್ತೆಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಚರ್ಚ್‍ನಲ್ಲಿ ಹತ್ಯಾಕಾಂಡ – 50 ಮಂದಿಯನ್ನು ಗುಂಡಿಟ್ಟು ಕೊಂದ

    ಚರ್ಚ್‍ನಲ್ಲಿ ಹತ್ಯಾಕಾಂಡ – 50 ಮಂದಿಯನ್ನು ಗುಂಡಿಟ್ಟು ಕೊಂದ

    ಅಬುಜಾ: ನೈರುತ್ಯ ನೈಜೀರಿಯಾದ ಕ್ಯಾಥೋಲಿಕ್ ಚರ್ಚ್ ಮೇಲೆ ಬಂದೂಕುಧಾರಿಯೋರ್ವ ಸಾಮೂಹಿಕ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 50 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಗಾಯಗೊಂಡಿದ್ದಾರೆ.

    ಭಾನುವಾರ ಬೆಳಗಿನ ಜಾವ ಚರ್ಚ್‍ನಲ್ಲಿ ಪ್ರಾರ್ಥನೆ ಮಾಡಲು ಅನೇಕ ಮಂದಿ ಆಗಮಿಸಿದ್ದರು. ಈ ವೇಳೆ ಮುತ್ತಿಗೆ ಹಾಕಿ ಬಂದೂಕುಧಾರಿ ಆರಂಭದಲ್ಲಿ ಹೊರಗಡೆ ದಾಳಿ ನಡೆಸಿ ನಂತ ಒಳಗಡೆ ದಾಳಿ ನಡೆಸಿದ್ದಾನೆ. ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಮನೆಬಂದಂತೆ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ:  ಬೆಂಗಳೂರಿನಲ್ಲಿ 16 ದಿನಗಳ ಬಳಿಕ ಕೊರೊನಾಗೆ ಮಹಿಳೆ ಬಲಿ

    ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಒಂಡೋ ರಾಜ್ಯದ ಪೊಲೀಸ್ ವಕ್ತಾರ ಫನ್ಮಿಲಾಯೊ ಇಬುಕುನ್ ಒಡುನ್ಲಾಮಿ, ಬಂದೂಕುಧಾರಿ ಚರ್ಚ್ ಕಟ್ಟಡದ ಹೊರಗೆ ಮತ್ತು ಒಳಗೆ ಜನರ ಮೇಲೆ ಗುಂಡು ಹಾರಿಸಿದ್ದಾನೆ. ಸದ್ಯ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಯಾರು ಎನ್ನುವುದು ತಿಳಿದು ಬಂದಿಲ್ಲ ಇದನ್ನೂ ಓದಿ: ಕೇರಳದಲ್ಲಿ ಎರಡು ನೊರೊವೈರಸ್ ಪ್ರಕರಣ ಪತ್ತೆ

    ನಂತರ ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಒಂಡೋ ರಾಜ್ಯ ಗವರ್ನರ್ ಅರಕುನ್ರಿನ್ ಒಲುವರೊಟಿಮಿ ಅಕೆರೆಡೊಲು ಅವರು, ಇದೊಂದು ದೊಡ್ಡ ಹತ್ಯಾಕಾಂಡ ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.