Tag: ನೈಜಿರಿಯಾ

  • Bengaluru | ಫುಡ್ ಕಿಟ್‌ನಲ್ಲಿ ಸಾಗಿಸುತ್ತಿದ್ದ 8.5 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್

    Bengaluru | ಫುಡ್ ಕಿಟ್‌ನಲ್ಲಿ ಸಾಗಿಸುತ್ತಿದ್ದ 8.5 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್

    ಬೆಂಗಳೂರು: ಫುಡ್ ಕಿಟ್‌ನಲ್ಲಿಟ್ಟು (Food Kit) ಸಾಗಿಸುತ್ತಿದ್ದ 8.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಡಿಆರ್‌ಐ ಅಧಿಕಾರಿಗಳು (DRI Officials) ವಶಪಡಿಸಿಕೊಂಡ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ನೈಜೀರಿಯಾ ಯುವತಿ ಮಕ್ಕಳ ಆಹಾರದ ಕಿಟ್‌ನಲ್ಲಿ ಡ್ರಗ್ಸ್ ಮಾರಾಟ ಮಾಡಲು ಯತ್ನಿಸಿದ್ದಳು. ಯುವತಿಯಿಂದ 4.5 ಕೆಜಿಯ 8.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಡಿಆರ್‌ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ ನಡುವಿನ ಉದ್ವಿಗ್ನತೆಯಿಂದ ಯುದ್ಧದ ಭೀತಿ – ಗಡಿಯಲ್ಲಿ ಬಂಕರ್‌ ಶುಚಿಗೊಳಿಸುವ ಕಾರ್ಯ ಚುರುಕು

    ಸದ್ಯ ನೈಜೀರಿಯಾ ಯುವತಿಯನ್ನು ಬಂಧಿಸಿದ ಡಿಆರ್‌ಐ 14 ದಿನ ಕಸ್ಟಡಿಗೆ ಪಡೆದಿದೆ. ಇದನ್ನೂ ಓದಿ: Pahalgam Terror Attack | ಮರದಿಂದ ಕೆಳಗಿಳಿದು ಉಗ್ರರ ದಾಳಿ

  • ನೈಜಿರಿಯಾ ತೈಲ ಸಂಸ್ಕರಣಾಗಾರದಲ್ಲಿ ಭಾರೀ ಸ್ಫೋಟ-100ಕ್ಕೂ ಅಧಿಕ ಜನ ಸಾವು

    ನೈಜಿರಿಯಾ ತೈಲ ಸಂಸ್ಕರಣಾಗಾರದಲ್ಲಿ ಭಾರೀ ಸ್ಫೋಟ-100ಕ್ಕೂ ಅಧಿಕ ಜನ ಸಾವು

    ಪೋರ್ಟ್ ಹಾರ್ಕೋಟ್: ನೈಜಿರಿಯಾ ತೈಲ ಸಂಸ್ಕರಣಾಗಾರದಲ್ಲಿ ಸಂಭವಿಸಿದ ಭಾರೀ ಸ್ಫೋಟ 100ಕ್ಕೂ ಅಧಿಕ ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.

    ದಕ್ಷಿಣ ನೈಜಿರಿಯಾದ ಇಮೋ ರಾಜ್ಯದ ನಡುವಿನ ಗಡಿಯಲ್ಲಿ ಘಟನೆ ಸಂಭವಿಸಿದೆ. ಸ್ಫೋಟದಲ್ಲಿ 100ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಇದು ಆಫ್ರಿಕಾದ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕವಾಗಿದೆ. ನೈಜಿರಿಯಾದಲ್ಲಿ ಇತ್ತೀಚಿಗೆ ನಡೆದ ಅತಿದೊಡ್ಡ ಸ್ಫೋಟವಾಗಿದೆ.

    ಅಕ್ರಮ ಸಂಸ್ಕರಣಾಗಾರದ ಸ್ಥಳದಲ್ಲಿ ನಿರ್ವಾಹಕರು ಮತ್ತು ಪೋಷಕರು ವ್ಯಾಪಾರಕ್ಕಾಗಿ ಒಟ್ಟುಗೂಡಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ವ್ಯಾಪಾರಿಗಳ ಬಳಿ ಚಿನ್ನ ಖರೀದಿ ಮಾಡದಂತೆ ಅಭಿಯಾನ

    ಅಕ್ರಮ ಕಚ್ಚಾ ತೈಲ ಸಂಸ್ಕರಣೆಯು ದಕ್ಷಿಣ ನೈಜಿರಿಯಾದ ತೈಲ ಪ್ರದೇಶದಲ್ಲಿ ಸಾಮಾನ್ಯವಾಗಿದೆ. ಅಲ್ಲಿ ತೈಲ ಕಳ್ಳರು ಕಚ್ಚಾ ತೈಲವನ್ನು ಕದಿಯಲು ಪೈಪ್‍ಲೈನ್‍ಗಳನ್ನು ಹಾಳುಮಾಡುತ್ತಾರೆ. ಅದನ್ನು ಅವರು ಬ್ಲಾಕ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಂಸ್ಕರಿಸುತ್ತಾರೆ.ಈ ಕಳ್ಳ ಸಾಗಣಿಕೆಯನ್ನು ತಡೆಯಲು ಸರ್ಕಾರ ಮಿಲಿಟರಿ ಪಡೆಯನ್ನು ನೇಮಿಸಿದೆ. ಆದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ಇದನ್ನೂ ಓದಿ: ಗೋಡ್ಸೆ ಸಿದ್ಧಾಂತವನ್ನು ಮೋದಿ ಬೆಂಬಲಿಸುತ್ತಿದ್ದಾರೆ: ಕೆಟಿಆರ್

  • ನೈಜಿರಿಯಾದಲ್ಲಿ ಕನ್ನಡಿಗರ ಪರದಾಟ- ರಾಜ್ಯದ 500ಕ್ಕೂ ಹೆಚ್ಚು ಮಂದಿ ಲಾಕ್

    ನೈಜಿರಿಯಾದಲ್ಲಿ ಕನ್ನಡಿಗರ ಪರದಾಟ- ರಾಜ್ಯದ 500ಕ್ಕೂ ಹೆಚ್ಚು ಮಂದಿ ಲಾಕ್

    – ಮರಳಿ ಕರೆಸಿಕೊಳ್ಳುವಂತೆ ಮನವಿ

    ಧಾರವಾಡ: ರಾಜ್ಯದ 500ಕ್ಕೂ ಹೆಚ್ಚು ಮಂದಿ ನೈಜಿರಿಯಾದಲ್ಲಿ ಲಾಕ್ ಆಗಿದ್ದು, ಇದೀಗ ಮರಳಿ ಕರೆಸಿಕೊಳ್ಳುವಂತೆ ಕನ್ನಡಿಗರು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

    ನೈಜಿರಿಯಾದಲ್ಲಿ ದಿನೇ ದಿನೇ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿರುವ ಕನ್ನಡಿಗರು ಭಯಭೀತರಾಗಿದ್ದು, ನೈಜಿರಿಯಾ ಕನ್ನಡ ಸಂಘ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ರಾಯಭಾರಿ ಕಚೇರಿಗೆ ನಿರಂತರ ಒತ್ತಡ ಹಾಕುತ್ತಿದೆ.

    ಧಾರವಾಡ ಸೇರಿದಂತೆ ರಾಜ್ಯದ 500ಕ್ಕೂ ಹೆಚ್ಚು ಮಂದಿ ನೈಜಿರಿಯಾದಲ್ಲಿ ಲಾಕ್ ಆಗಿದ್ದು, ಆದಷ್ಟು ಬೇಗ ಇಂಡಿಯಾಗೆ ಕರೆಸಿಕೊಂಡು ಬಿಡಿ ಎಂದು ಕನ್ನಡ ಸಂಘದವರು ಅಳಲು ತೋಡಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ಸಂಘದ ಕಾರ್ಯದರ್ಶಿ ರಾಮ್ ವಿಡಿಯೋ ಮಾಡಿ, ನೈಜಿರಿಯಾದಲ್ಲಿ ಕರ್ನಾಟಕದ 500ರಿಂದ 600 ಮಂದಿ ಇದ್ದೇವೆ. ಈ ದೇಶದಲ್ಲಿ ಕೋವಿಡ್ 19 ವೇಗವಾಗಿ ಹರಡುತ್ತಿದೆ. ಲೆಗೋಸ್ ಎಂಬ ಸಣ್ಣ ರಾಜ್ಯದಲ್ಲಿ ನಾವೆಲ್ಲ ಸಂಕಷ್ಟದಲ್ಲಿದ್ದೇವೆ. ಲೆಗೋಸ್ ರಾಜ್ಯದಲ್ಲಿ 997 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೊರೊನಾದಿಂದ ಈಗಾಗಲೇ 40 ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಸಾಧ್ಯವಾದಷ್ಟು ಬೇಗ ಪ್ರಧಾನಿ ಮತ್ತು ಮುಖ್ಯಮಂತ್ರಿ ನಮ್ಮನ್ನು ಕರೆಯಿಸಿಕೊಳ್ಳಬೇಕು ಎಂದು ಆಗ್ರಹ ಮತ್ತು ಮನವಿ ಮಾಡಿಕೊಂಡಿದ್ದಾರೆ.