Tag: ನೈಋತ್ಯ ರೈಲ್ವೆ

  • ದೀಪಾವಳಿ | ನೈಋತ್ಯ ರೈಲ್ವೆಯಿಂದ ವಿಶೇಷ ರೈಲು – ಇಲ್ಲಿದೆ ಸಂಪೂರ್ಣ ಮಾಹಿತಿ

    ದೀಪಾವಳಿ | ನೈಋತ್ಯ ರೈಲ್ವೆಯಿಂದ ವಿಶೇಷ ರೈಲು – ಇಲ್ಲಿದೆ ಸಂಪೂರ್ಣ ಮಾಹಿತಿ

    ಬೆಂಗಳೂರು: ದೀಪಾವಳಿ ಹಬ್ಬದ (Deepawali) ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆಯಿಂದ (South Western Railway) ವಿಶೇಷ ರೈಲುಗಳು ಸಂಚರಿಸಲಿವೆ.

    ವಿಶೇಷ ರೈಲುಗಳು ಹುಬ್ಬಳ್ಳಿ, ಮಂಗಳೂರು ಹಾಗೂ ಬೆಂಗಳೂರು ನಡುವೆ ಸಂಚರಿಸಲಿದ್ದು, ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿದೆ. ರೈಲುಗಳ ಸಮಯ, ದಿನಾಂಕ, ಸ್ಥಳ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.ಇದನ್ನೂ ಓದಿ: ದೀಪಾವಳಿಗೆ ಬೆಂಗಳೂರಿನಿಂದ ಹೆಚ್ಚುವರಿ KSRTC ಬಸ್ – ನಿಮ್ಮ ಊರಿಗೂ ಇದ್ಯಾ ಪರಿಶೀಲಿಸಿ

    1. ರೈಲು ಸಂಖ್ಯೆ 07353/07354: ಎಸ್ಎಸ್ಎಸ್ ಹುಬ್ಬಳ್ಳಿ–ಮಂಗಳೂರು ಜಂಕ್ಷನ್–ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ (1 ಟ್ರಿಪ್):

    ರೈಲು ಸಂಖ್ಯೆ 07353: ಎಸ್ಎಸ್ಎಸ್ ಹುಬ್ಬಳ್ಳಿ–ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲು ಇದೇ ಅ.17ರಂದು 4:00ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು, ಮರುದಿನ ಅ.18ರಂದು ಬೆಳಗ್ಗೆ 11:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಈ ರೈಲು ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

    ರೈಲು ಸಂಖ್ಯೆ 07354: ಮಂಗಳೂರು ಜಂಕ್ಷನ್–ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಇದೇ ಅ.18ರಂದು ಮಧ್ಯಾಹ್ನ 2:35ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು, ಅದೇ ದಿನ ರಾತ್ರಿ 11:15ಕ್ಕೆ ಯಶವಂತಪುರ ತಲುಪಲಿದೆ. ಈ ರೈಲು ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ ಮತ್ತು ಕುಣಿಗಲ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

    2. ರೈಲು ಸಂಖ್ಯೆ 06229/06230 ಯಶವಂತಪುರ-ಮಂಗಳೂರು ಜಂಕ್ಷನ್-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ (1 ಟ್ರಿಪ್):

    ರೈಲು ಸಂಖ್ಯೆ 06229: ಯಶವಂತಪುರ-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ಇದೇ ಅ.19ರಂದು ರಾತ್ರಿ 12:15ಕ್ಕೆ ಯಶವಂತಪುರದಿಂದ ಹೊರಟು, ಅದೇ ದಿನ ಬೆಳಗ್ಗೆ 11:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಈ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

    ರೈಲು ಸಂಖ್ಯೆ 06230: ಮಂಗಳೂರು ಜಂಕ್ಷನ್-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಇದೇ ಅ.19ರಂದು 2:35 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಟು, ಮರುದಿನ 12:30 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಇದು ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಕುಣಿಗಲ್ ಮತ್ತು ಎಸ್ಎಂವಿಟಿ ಬೆಂಗಳೂರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಕೇಸ್ – ಸ್ರೇಸನ್ ಲೈಸೆನ್ಸ್ ರದ್ದು, ಕಂಪನಿ ಬಂದ್

    ಈ ಎರಡೂ ವಿಶೇಷ ರೈಲುಗಳು (07353/07354 ಮತ್ತು 06229/06230) 20 ಬೋಗಿಗಳನ್ನು ಒಳಗೊಂಡಿರುತ್ತವೆ. 01 ಫಸ್ಟ್ ಕಮ್ ಸೆಕೆಂಡ್ ಎಸಿ, 01 ಎಸಿ 2-ಟೈರ್, 02 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 04 ಜನರಲ್ ಸೆಕೆಂಡ್ ಕ್ಲಾಸ್, ಮತ್ತು 02 ಎಸ್ಎಲ್ಆರ್/ಡಿ ಬೋಗಿಗಳು.

    3. ರೈಲು ಸಂಖ್ಯೆ 06507/06508 ಬೆಳಗಾವಿ-ಎಸ್ಎಂವಿಟಿ ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ (1 ಟ್ರಿಪ್):

    ರೈಲು ಸಂಖ್ಯೆ 06507: ಬೆಳಗಾವಿ -ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಇದೇ ಅ.18ರಂದು 8:00 ಗಂಟೆಗೆ ಬೆಳಗಾವಿಯಿಂದ ಹೊರಟು, ಅದೇ ದಿನ ರಾತ್ರಿ 07:45 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

    ರೈಲು ಸಂಖ್ಯೆ 06508: ಅ.18ರಂದು ರಾತ್ರಿ 09:00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು, ಅ.19ರಂದು ಬೆಳಗ್ಗೆ 08:35 ಗಂಟೆಗೆ ಬೆಳಗಾವಿಯನ್ನು ತಲುಪಲಿದೆ.

    ಮಾರ್ಗಮಧ್ಯೆ, ಈ ರೈಲು ಎರಡೂ ದಿಕ್ಕುಗಳಲ್ಲಿ ಲೋಂಡಾ, ಅಲ್ನಾವರ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮತ್ತು ಚಿಕ್ಕಬಾಣವರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ. ಈ ರೈಲು 19 ಬೋಗಿಗಳನ್ನು ಒಳಗೊಂಡಿರುತ್ತದೆ. 01 ಎಸಿ 2-ಟೈರ್, 03 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 03 ಜನರಲ್ ಸೆಕೆಂಡ್ ಕ್ಲಾಸ್, ಮತ್ತು 02 ಎಸ್ಎಲ್ಆರ್/ಡಿ ಬೋಗಿಗಳು.ಇದನ್ನೂ ಓದಿ: ಕುಟುಂಬಕ್ಕಾಗಿ ಬೆಂಗಳೂರಿನ ಕಾರ್ಪೊರೇಟ್ ಕೆಲಸಕ್ಕೆ ಗುಡ್‌ಬೈ – ಈಗ ಉಬರ್ ಚಾಲಕ, ಹೆಚ್ಚು ಸಂಪಾದನೆ

  • ನೈಋತ್ಯ ರೈಲ್ವೆ ಮಹಾಪ್ರಬಂಧಕರಾಗಿ ಸಂಜೀವ ಕಿಶೋರ್ ನೇಮಕ

    ನೈಋತ್ಯ ರೈಲ್ವೆ ಮಹಾಪ್ರಬಂಧಕರಾಗಿ ಸಂಜೀವ ಕಿಶೋರ್ ನೇಮಕ

    ಹುಬ್ಬಳ್ಳಿ: ನೈಋತ್ಯ ರೈಲ್ವೆ ನೂತನ ಮಹಾಪ್ರಬಂಧಕರಾಗಿ ಸಂಜೀವ ಕಿಶೋರ್ ಅಧಿಕಾರ ಸ್ವೀಕರಿಸಿದ್ದಾರೆ.

    ದಕ್ಷಿಣ ಮಧ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಗಜಾನನ್ ಮಲ್ಯ ಅವರು ಕಳೆದ ಏಪ್ರಿಲ್ ನಿಂದ ಇಲ್ಲಿಯವರೆಗೆ ಹೆಚ್ಚುವರಿಯಾಗಿ ನೈಋತ್ಯ ರೈಲ್ವೆ ಹುದ್ದೆಯನ್ನು ನಿಭಾಯಿಸಿದ್ದರು. ಇದೀಗ ಸಂಜೀವ ಕಿಶೋರ್ ನೂತನ ಮಹಾಪ್ರಬಂಧಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

    ಕಿಶೋರ್ ಅವರು ಈಶಾನ್ಯ ರೈಲ್ವೆ, ರೈಲ್ ಕೋಚ್ ಫ್ಯಾಕ್ಟರಿ, ಕಪುರ್ಥಾಲಾ, ಸೆಂಟ್ರಲ್ ರೈಲ್ವೆ, ರೈಟ್ಸ್, ಕೋಫೋ, ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ, ನವದೆಹಲಿ, ರೈಲ್ವೆ ಮಂಡಳಿ ಮತ್ತು ರೈಲ್ವೆ ವೀಲ್ ಫ್ಯಾಕ್ಟರಿ, ಯಲಹಂಕದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಶ್ರೇಷ್ಠ ಸೇವೆಗಾಗಿ 2003ರಲ್ಲಿ ರಾಷ್ಟ್ರೀಯ ಪ್ರಶಸ್ತಿ (ರೈಲ್ವೇಸ್ ಮಂತ್ರಿ ಪ್ರಶಸ್ತಿ) ಪಡೆದಿದ್ದಾರೆ.

    ಇನ್‍ಸ್ಟಿಟ್ಯೂಷನ್ ಆಫ್ ಎಂಜಿನಿಯರ್ ಇಂಡಿಯಾ ಮತ್ತು ಯುನೈಟೆಡ್ ಕಿಂಗ್ಡಂನ ಇನ್ಸಿಟ್ಯೂಷನ್ ಆಫ್ ಮೆಕ್ಯಾನಿಕಲ್ ಎಂಜಿನಿಯರ್ಸ್ ಫೆಲೋಶಿಪ್ ಸಹ ಕಿಶೋರ್ ಸಂಜೀವ ಪಡೆದಿದ್ದಾರೆ.

  • ಹುಬ್ಬಳ್ಳಿಯಲ್ಲಿ ಐಸೋಲೇಶನ್ ವಾರ್ಡ್‍ಗಳಾಗುತ್ತಿವೆ ರೈಲ್ವೇ ಬೋಗಿಗಳು

    ಹುಬ್ಬಳ್ಳಿಯಲ್ಲಿ ಐಸೋಲೇಶನ್ ವಾರ್ಡ್‍ಗಳಾಗುತ್ತಿವೆ ರೈಲ್ವೇ ಬೋಗಿಗಳು

    ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಕೇಂದ್ರದ ಸೂಚನೆಗಳಂತೆ ರೈಲ್ವೆ ಬೋಗಿಗಳನ್ನೇ ಐಸೋಲೇಶನ್ ವಾರ್ಡ್‍ಗಳನ್ನಾಗಿ ಮಾಡಲಾಗುತ್ತಿದೆ. ಇದನ್ನು ನೈಋತ್ಯ ರೈಲ್ವೇ ವಲಯ ಸಹ ಜಾರಿಗೆ ತರುತ್ತಿದ್ದು, ಹುಬ್ಬಳ್ಳಿ ಜಂಕ್ಷನ್‍ನಲ್ಲಿ ಈಗಾಗಲೇ ಈ ಕಾರ್ಯ ಆರಂಭವಾಗಿದೆ.

    ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ನೈಋತ್ಯ ರೈಲ್ವೇ ವಲಯದಲ್ಲಿನ ರೈಲು ಬೋಗಿಗಳನ್ನು ಪ್ರತ್ಯೇಕ ವಾರ್ಡ್‍ಗಳಾಗಿ ಪರಿವರ್ತಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಪ್ರತ್ಯೇಕ ಸೌಲಭ್ಯಗಳಿಗಾಗಿ ದೇಶದ ಸಾಮಥ್ರ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ರೈಲ್ವೆ ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಕೋವಿಡ್-19 ಐಸೋಲೇಷನ್ ವಾರ್ಡ್‍ಗಳಾಗಿ ಪರಿವರ್ತಿಸಲಾತ್ತಿದೆ.

    ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ರೈಲ್ವೇ ಕಾರ್ಮಿಕರು ಐಸೋಲೆಟೆಡ್ ವಾರ್ಡ್ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಬೋಗಿಗಳು ಸ್ವಚ್ಛವಾಗಿದ್ದು, ರೋಗಿಗಳು ಚೇತರಿಸಿಕೊಳ್ಳಲು ಆರೋಗ್ಯಕರ ಪರಿಸರವನ್ನು ಹೊಂದಿವೆ. ಅಗತ್ಯಕ್ಕನುಗುಣವಾಗಿ ಕೆಲವು ಕೋವಿಡ್-19 ರೋಗಿಗಳನ್ನು ಈ ಐಸೋಲೇಶನ್ ಭೋಗಿಗಳಲ್ಲಿರಿಸಿ ಚಿಕಿತ್ಸೆ ನೀಡಲಾಗುವುದು. ಆರಂಭದಲ್ಲಿ 5,000 ಪ್ರಯಾಣಿಕರ ಬೋಗಿಗಳನ್ನು ಐಸೋಲೇಶನ್ ವಾರ್ಡ್‍ಗಳನ್ನಾಗಿ ಮಾರ್ಪಡಿಸಲು ಯೋಜಿಸಲಾಗಿದೆ.

    ಮಾರ್ಚ್ 25 ರಂದು ಪ್ರಾರಂಭವಾದ ರಾಷ್ಟ್ರವ್ಯಾಪಿ ಲಾಕ್‍ಡೌನ್ ನಂತರ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಎಲ್ಲ ಪ್ರಯಾಣಿಕ ರೈಲು ಸೇವೆಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ. ಇವುಗಳಲ್ಲಿ ಕೆಲು ರೈಲುಗಳನ್ನು ಐಸೋಲೇಶನ್ ವಾರ್ಡ್‍ಗಳನ್ನಾಗಿ ಪರಿವರ್ತಿಸಲಾಗುತ್ತಿದೆ.

    ರೈಲ್ವೆ ಬೋಗಿಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆ ಸಿಗಲಿದೆ. ವೈದ್ಯ ಸಿಬ್ಬಂದಿ, ಸೋಂಕಿತರು, ಶಂಕಿತರು ಸೇರಿದಂತೆ ಆಹಾರ ಪೂರೈಕೆಗೂ ಅವಕಾಶ ಕಲ್ಪಿಸಲಾಗಿದೆ. ದೇಶದಲ್ಲಿ ಕೊರೊನಾ ವೈರಸ್ ಉಲ್ಬಣಗೊಂಡ ನಂತರ ತಮ್ಮನ್ನು ತಾವೇ ಪ್ರತ್ಯೇಕಿಸಿಕೊಳ್ಳುವ, ಮತ್ತೊಬ್ಬರಿಂದ ಅಂತರ ಕಾಯ್ದುಕೊಳ್ಳುವ ಸೌಲಭ್ಯಗಳ ಅವಶ್ಯಕತೆಯಿದೆ. ಈ ಬೇಡಿಕೆ ಈಡೇರಿಸಲು ಭಾರತೀಯ ರೈಲ್ವೆ ಒಂದು ಚತುರ ಪರಿಹಾರವನ್ನು ಕಂಡುಹಿಡಿದಿದೆ.

    ವಿದ್ಯುತ್:
    ಪ್ರತ್ಯೇಕ ಸೌಲಭ್ಯಗಳಿಗಾಗಿ ದೇಶದ ಸಾಮಥ್ರ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ರೈಲ್ವೆ ತನ್ನ ರೈಲು ಬೋಗಿಗಳನ್ನು ಕ್ವಾರಂಟೈನ್ ಹಬ್‍ಗಳಾಗಿ ಪರಿವರ್ತಿಸುವ ಯೋಜನೆಯನ್ನು ರೂಪಿಸುತ್ತಿದೆ. ಆದರೆ ವಿದ್ಯುತ್ ಸಂಪರ್ಕವಿರುವ ಸಮೀಪದಲ್ಲಿ ಬೋಗಿಗಳನ್ನು ನಿಲ್ಲಿಸಿದರೆ ಅನುಕೂಲವಾಗಲಿದೆ.

    ವಿನ್ಯಾಸ:
    ಕ್ವಾರಂಟೈನ್‍ಗಾಗಿ ರೈಲ್ವೆ ಇಲಾಖೆ ನಾನ್ ಎಸಿ ಕೋಚ್ ಆಯ್ಕೆ ಮಾಡಿಕೊಂಡಿದೆ. ಇದರಲ್ಲಿ 10 ಕ್ಯಾಬಿನ್‍ಗಳಿರುತ್ತವೆ. ಕೇವಲ ಒಂದು ಬರ್ತ್ ಬಿಟ್ಟು ಉಳಿದ ಮೂರು ಬರ್ತ್ ತೆಗೆದು ರೂಮ್ ರೀತಿ ಸಿದ್ಧಗೊಳಿಸಲಾಗಿದೆ. ಇದೇ ರೀತಿ ಸೋಂಕಿತ ವ್ಯಕ್ತಿಯ ಚಿಕಿತ್ಸೆಗೆ ಇರುವ ರೂಮ್ ವ್ವವಸ್ಥೆ ಮಾಡಲಾಗಿದ್ದು, ಪ್ಲಾಸ್ಟಿಕ್ ಕರ್ಟನ್‍ನಿಂದ ಕ್ಯಾಬಿನ್ ಕವರ್ ಮಾಡಲಾಗಿದೆ.

    ಶೌಚಾಲಯ:
    ಒಂದು ಕ್ಯಾಬಿನ್‍ನಲ್ಲಿ 3 ಭಾರತೀಯ ಶೈಲಿ 1 ವೆಸ್ಟರ್ನ್ ಟಾಯ್ಲೆಟ್‍ಗಳಿರುತ್ತವೆ. ಈ ಪೈಕಿ ಎರಡು ಟಾಯ್ಲೆಟ್‍ಗಳನ್ನು ಸ್ನಾನದ ಕೋಣೆಯಾಗಿ ಪರಿವರ್ತಿಸಲಾಗಿದೆ. ಬಾಥ್ ರೂಮ್‍ನಲ್ಲಿ ಟ್ಯಾಪ್‍ನ ಎತ್ತರವನ್ನು ಹೆಚ್ಚಿಸಲಾಗಿದೆ. ಜೊತೆಗೆ ಹ್ಯಾಂಡ್ ಶವರ್ ಗಳನ್ನ ಹಾಕಲಾಗಿದೆ.

    ವೈದ್ಯಕೀಯ ಸಿಬ್ಬಂದಿ:
    ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಡಾಕ್ಟರ್, ನರ್ಸ್ ಸೇರಿ ವೈದ್ಯಕೀಯ ಸಿಬ್ಬಂದಿಗೂ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಮಾಡಲಾಗಿದೆ. ರೋಗಿ ಮತ್ತು ವೈದ್ಯರ ಕ್ಯಾಬಿನ್ ಮಧ್ಯೆ ಅಡ್ಡವಾಗಿ ಪ್ಲಾಸ್ಟಿಕ್ ಕರ್ಟನ್ ಹಾಕಲಾಗಿದೆ.

    ಆಹಾರ:
    ಬೇಸ್ ಅಡಿಗೆಮನೆಗಳಿಲ್ಲದ ನಿಲ್ದಾಣಗಳಿಗೆ ಆಹಾರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಪ್ಯಾಂಟ್ರಿ ಕಾರುಗಳನ್ನು ಮೊಬೈಲ್ ಅಡುಗೆಮನೆಯನ್ನಾಗಿ ಪರಿವರ್ತಿಸಲು ರೈಲ್ವೆ ಯೋಜಿಸಿದೆ.