Tag: ನೇಹಾ ಹೀರೆಮಠ

  • ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ನಾವು ಸುಮ್ಮನೆ ಕೂರುವುದಿಲ್ಲ: ಅಮಿತ್ ಶಾ

    ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ನಾವು ಸುಮ್ಮನೆ ಕೂರುವುದಿಲ್ಲ: ಅಮಿತ್ ಶಾ

    ಹುಬ್ಬಳ್ಳಿ: ಪ್ರಜ್ವಲ್ ರೇವಣ್ಣ (Prajwal Revanna) ಸಿಡಿ ಹೊರಬಂದಿದೆ. ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ನಾವು ಸುಮ್ಮನೆ ಕೂರುವುದಿಲ್ಲ. ತಪ್ಪು ಮಾಡಿದವರಿಗೆ ಕಠೋರವಾದ ಕಠಿಣ ಶಿಕ್ಷೆ ಆಗಲೇಬೇಕು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಆಗ್ರಹಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballi) ಬಿಜೆಪಿ (BJP) ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರ ವಿಚಾರದಲ್ಲಿ ಯಾರೇ ತಪ್ಪು ಮಾಡಿದರೂ ನಾವು ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ. ಅಂಥವರ ಜೊತೆ ನಾವು ನಿಲ್ಲುವುದಿಲ್ಲ. ನಮ್ಮ ನಿಲುವು ಸ್ಪಷ್ಟವಾಗಿದೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಅತ್ಯಂತ ಹೀನಕೃತ್ಯ ಎಂದು ಕಿಡಿಕಾರಿದರು. ಇದನ್ನೂ ಓದಿ: ಶಾಸಕ ಇಕ್ಬಾಲ್‌ ಹುಸೇನ್‌ ವಿಡಿಯೋ ವೈರಲ್‌ – ಯುವತಿಯಿಂದ ದೂರು, ಎಫ್‌ಐಆರ್‌ ದಾಖಲು

    ನೇಹಾ ಹತ್ಯೆಯಾಗಿದೆ. ಕರ್ನಾಟಕದ ಮಹಿಳೆಯರ ಸುರಕ್ಷಿತ ಬಗ್ಗೆ ಪ್ರಶ್ನೆಯಾಗಿದೆ. ನಿಮ್ಮ ಕೈಯಲ್ಲಿ ಆಗದಿದ್ದರೆ ಹೇಳಿ. ನಾವು ಕರ್ನಾಟಕಕ್ಕೆ ರಕ್ಷಣೆ ನೀಡುತ್ತೇವೆ. ವಿಧಾನ ಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಹಾಕಿದರೆ ಸಿಎಂ ನನಗೇನು ಕೇಳಿಲ್ಲ ಎಂದರು. ಆದರೆ ಘೋಷಣೆ ಕೂಗಿದ್ದು ದೆಹಲಿಗೆ ಕೇಳಿಸಿತು ಎಂದು ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಅಮಿತ್‌ ಶಾ ಭೇಟಿಯಾದ ನೇಹಾ ಪೋಷಕರು

    ನಾವು ಚುನಾವಣೆ ವೇಳೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಆದರೆ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಯಾವುದೇ ಮಹಿಳೆಗೂ ಅನ್ಯಾಯವಾಗಲು ಬಿಜೆಪಿ ಬಿಡುವುದಿಲ್ಲ. ಸರ್ಕಾರ ನಿಮ್ಮದು, ಕ್ರಮ ತಗೆದುಕೊಳ್ಳಬೇಕಾದವರು ನೀವು. ಒಕ್ಕಲಿಗರ ಪ್ರದೇಶ ಮತದಾನ ಆಗುವವರೆಗೂ ಸುಮ್ಮನೆಯಿದ್ದು, ಎಲ್ಲವೂ ಗೊತ್ತಿದ್ದು, ಯಾವುದೇ ಕ್ರಮಕ್ಕೂ ಮುಂದಾಗದೇ, ರಾಜಕೀಯ ಉದ್ದೇಶಕ್ಕಾಗಿ ಸುಮ್ಮನಿದ್ದು, ಅವರಿಗೆ ಓಡಲು ಅವಕಾಶ ಮಾಡಿಕೊಟ್ಟವರು ನೀವು. ನಿಮಗೆ ಧೈರ್ಯವಿದ್ದರೆ ಜನರಿಗೆ ತಿಳಿಸಿ. ನಿಮ್ಮ ತಪ್ಪಿನಿಂದಾಗಿ ಮಹಾ ಅಪರಾಧವಾಗಿದೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಈ ರೀತಿಯ ಅಪರಾಧ ಮಾಡಿದವರಿಗೆ ಕಠಿಣಾಧಿಕಠಿಣ ಶಿಕ್ಷೆ ನೀಡಬೇಕು. ನಮ್ಮ ಮೇಲೆ ನೀವು ಆರೋಪ ಮಾಡುತ್ತೀರಾ ಎಂದು ಸಿಎಂ ಹಾಗೂ ಡಿಸಿಎಂ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಕೇಸ್‌ – ಏನಿದು ರಾಜತಾಂತ್ರಿಕ ಪಾಸ್‌ಪೋರ್ಟ್‌? ವಿದೇಶದಲ್ಲಿ ಬಂಧನ ಸಾಧ್ಯವೇ? ಏನು ಸವಲತ್ತು ಸಿಗುತ್ತೆ?

    ರಾಜ್ಯದಲ್ಲಿ ಸಿಎಂ-ಡಿಸಿಎಂ ನಡುವೆ ಶೀತಲ ಸಮರ ನಡೆದಿದೆ. ಬರಗಾಲದ ವಿಚಾರದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಾರೆ. ಆದರೆ ರಾಜ್ಯದವರು 3ನೇ ವರದಿ ಕಳುಹಿಸುವುದರಲ್ಲಿ ತಡಮಾಡಿದರು. ವರದಿ ಬರುವವರೆಗೂ ನೀತಿ ಸಂಹಿತೆ ಜಾರಿ ಅಯಿತು. ಹೀಗಾಗಿ ಹಣ ಬಿಡುಗಡೆಗೆ ಮಾಡಲು ತಡವಾಯಿತು ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಕೂಡ ಪ್ರಜ್ವಲ್ ಪರ ಪ್ರಚಾರ ಮಾಡಿದ್ದಾರೆ: ಸಿ.ಟಿ.ರವಿ

    ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದರೆ ರಕ್ತಪಾತವಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದರೆ ಐದು ವರ್ಷ ಕಳೆದಿದೆ. ಕಾಶ್ಮೀರದಲ್ಲಿ ಏನೂ ಆಗಿಲ್ಲ. ಕಲ್ಲು ತೂರಾಟ ನಿಂತು ಹೋಗಿದೆ. ಪುಲ್ವಾಮಾ ದಾಳಿ ಮಾಡಿದ ಪಾಕಿಸ್ತಾನಕ್ಕೆ ಮೋದಿ ಸರ್ಕಾರ ತಕ್ಕ ಉತ್ತರ ಕೊಟ್ಟಿದೆ. ಕರ್ನಾಟಕದ ಜನತೆ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಿದೆ. ನರೇಂದ್ರ ಮೋದಿಯವರನ್ನು ಮೂರನೇ ಬಾರಿ ಪ್ರಧಾನಮಂತ್ರಿ ಮಾಡಬೇಕಿದೆ. ದೇಶದ ಅರ್ಥ ವ್ಯವಸ್ಥೆಯನ್ನು ಮೂರನೇ ಸ್ಥಾನಕ್ಕೆ ಕೊಂಡೊಯ್ಯುವ ನಾಯಕತ್ವ ಬೇಕಿದೆ. ನಕ್ಸಲವಾದಿ ಪ್ರದೇಶದಲ್ಲಿ ಶಾಂತಿ ನೆಲೆಸಬೇಕಿದೆ. ಅದಕ್ಕಾಗಿ ಮೋದಿ ಪ್ರಧಾನಿಯಾಗಬೇಕು. 70 ವರ್ಷದಿಂದ ಕಾಂಗ್ರೆಸ್ ರಾಮಮಂದಿರ ವಿಚಾರ ಜಟಿಲ ಮಾಡಿತು. ವಿವಾದ ದೊಡ್ಡ ಮಾಡಿತು. ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಿಂದ ಸೋನಿಯಾ, ರಾಹುಲ್ ದೂರ ಉಳಿದರು. ಕಾಂಗ್ರೆಸ್ ವೋಟ್ ಬ್ಯಾಂಕ್ ಕೈ ತಪ್ಪುವ ಆತಂಕದಿಂದ ದೂರ ಉಳಿದರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೊದಲ ಬಾರಿಗೆ ಅಯೋಧ್ಯೆಗೆ ರಾಷ್ಟ್ರಪತಿ ಭೇಟಿ – ಬಾಲರಾಮನ ದರ್ಶನ, ವಿಶೇಷ ಪೂಜೆ ಸಲ್ಲಿಕೆ

  • ನನ್ನ ಹೇಳಿಕೆಯಿಂದ ನೇಹಾ ಪೋಷಕರಿಗೆ ಬೇಸರವಾಗಿದ್ದರೆ ವಿಷಾದವಿರಲಿ: ಪರಮೇಶ್ವರ್

    ನನ್ನ ಹೇಳಿಕೆಯಿಂದ ನೇಹಾ ಪೋಷಕರಿಗೆ ಬೇಸರವಾಗಿದ್ದರೆ ವಿಷಾದವಿರಲಿ: ಪರಮೇಶ್ವರ್

    -ಸತ್ಯ ಮುಚ್ಚಿಡಲು ಸಾಧ್ಯವಿಲ್ಲ

    ಬೆಂಗಳೂರು: ನೇಹಾ ಹತ್ಯೆಯ ಕುರಿತು ನನ್ನ ಹೇಳಿಕೆಯಿಂದ ಪೋಷಕರಿಗೆ ಬೇಸರವಾಗಿದ್ದರೆ ವಿಷಾದವಿರಲಿ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಹೇಳಿಕೆ ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿ (Hubballai) ವಿದ್ಯಾರ್ಥಿನಿ ನೇಹಾ ಹತ್ಯೆ ವೈಯಕ್ತಿಕ ಕಾರಣಕ್ಕೆ ನಡೆದಿದೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನೇಹಾ ಹತ್ಯೆ ಹೇಳಿಕೆಯಿಂದ ಅವರ ಪೋಷಕರಿಗೆ ಬೇಸರವಾಗಿದ್ದರೆ ವಿಷಾದವಿರಲಿ. ಆದರೆ ಸತ್ಯವನ್ನು ಯಾವತ್ತೂ ಮುಚ್ಚಿಡೋಕೆ ಆಗಲ್ಲ. ತನಿಖೆ ಬಳಿಕ ಎಲ್ಲಾ ವಿಷಯ ಹೊರಬರುತ್ತೆ. ನಮಗೆ ಬಂದಿರೋ ವರದಿ ಪ್ರಕಾರ ಮಾತಾಡಿದ್ದೇವೆ. ಎಬಿವಿಪಿಯಾಗಲಿ ಮತ್ತೊಬ್ಬರಾಗಲಿ ಅವರಿಗೆ ಸತ್ಯಾಂಶ ಗೊತ್ತಿಲ್ಲ ಎಂದರು. ಇದನ್ನೂ ಓದಿ: ನನ್ನ ಮಗ ತಪ್ಪು ಮಾಡಿದ್ದಾನೆ.. ಅವನಿಗೆ ಶಿಕ್ಷೆ ಆಗಲೇಬೇಕು: ಕೊಲೆಗಾರ ಫಯಾಜ್‌ ತಾಯಿ ಕಣ್ಣೀರು

    ಎಬಿವಿಪಿ (ABVP) ಕಾರ್ಯಕರ್ತರ ಮುತ್ತಿಗೆ ವಿಚಾರವಾಗಿ ಮಾತನಾಡಿದ ಅವರು, ಅವರಿಗೆ ಸತ್ಯಾಸತ್ಯತೆ ಗೊತ್ತಿಲ್ಲ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ನಮಗೆ ಜವಾಬ್ದಾರಿ ಇದೆ. ಅದರ ಬಗ್ಗೆ ತನಿಖೆ ಆಗುತ್ತೆ ಅಲ್ವಾ. ತನಿಖೆಯಲ್ಲಿ ಎಲ್ಲಾ ಸತ್ಯ ಹೊರಬೀಳುತ್ತೆ ಎಂದು ಹೇಳಿದರು. ಇದನ್ನೂ ಓದಿ: ನೇಹಾ ಹತ್ಯೆ ಕೇಸ್ – ಎಬಿವಿಪಿಯಿಂದ ಗೃಹಸಚಿವರ ಮನೆ ಮುತ್ತಿಗೆಗೆ ಯತ್ನ

  • ನೇಹಾ ಹತ್ಯೆ ಕೇಸ್ – ಎಬಿವಿಪಿಯಿಂದ ಗೃಹಸಚಿವರ ಮನೆ ಮುತ್ತಿಗೆಗೆ ಯತ್ನ

    ನೇಹಾ ಹತ್ಯೆ ಕೇಸ್ – ಎಬಿವಿಪಿಯಿಂದ ಗೃಹಸಚಿವರ ಮನೆ ಮುತ್ತಿಗೆಗೆ ಯತ್ನ

    ಬೆಂಗಳೂರು: ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ABVP) ಇಂದು ಪ್ರತಿಭಟನೆಗೆ ಮುಂದಾಗಿದ್ದು, ಬೆಂಗಳೂರಿನಲ್ಲಿರುವ ಗೃಹಸಚಿವ ಜಿ.ಪರಮೇಶ್ವರ್ (G Parameshwar) ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

    ಶನಿವಾರ ಬೆಳಗ್ಗೆ ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಲು ಎಬಿವಿಪಿ ಮುಂದಾಗಿದೆ. ನಾಳೆ (ಭಾನುವಾರ) ರಾಜ್ಯಾದ್ಯಂತ ಪ್ರತಿಭಟನೆಗೆ ಎಬಿವಿಪಿ ಕರೆ ಕೊಟ್ಟಿದೆ. ಬೆಂಗಳೂರಿನಲ್ಲೂ ಹತ್ಯೆ ಖಂಡಿಸಿ ಎಬಿವಿಪಿ ಹೋರಾಟ ನಡೆಸಲಿದೆ. ಇದನ್ನೂ ಓದಿ: ಮಂಡ್ಯದಲ್ಲಿಂದು ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಸಮಾವೇಶ

    ಇನ್ನು ಈ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ. ಸದ್ಯ ಗೃಹಸಚಿವ ಪರಮೇಶ್ವರ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ‘ಲೋಕ’ ಚುನಾವಣೆ; ಬೆಂಗಳೂರಲ್ಲಿ 1 ಸಾವಿರ ಬಾರ್ & ರೆಸ್ಟೋರೆಂಟ್‌ಗಳಿಗೆ ನೋಟಿಸ್