Tag: ನೇಹಾ ಹಿರೇಮಠ ಕೇಸ್‌

  • ನೇಹಾ ಹತ್ಯೆ ಕೇಸ್ – ಆರೋಪಿ ಫಯಾಜ್ ಜಾಮೀನು ಅರ್ಜಿ ವಜಾ

    ನೇಹಾ ಹತ್ಯೆ ಕೇಸ್ – ಆರೋಪಿ ಫಯಾಜ್ ಜಾಮೀನು ಅರ್ಜಿ ವಜಾ

    ಹುಬ್ಬಳ್ಳಿ: ನೇಹಾ ಹಿರೇಮಠ (Neha Hiremath) ಹತ್ಯೆ ಆರೋಪಿ ಫಯಾಜ್ (Accused Fayaz) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹುಬ್ಬಳ್ಳಿ (Hubballi) ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ.

    ಮಹಿಳಾ ನ್ಯಾಯಾಧೀಶರಾದ ಪಲ್ಲವಿ ಬಿಆರ್ ಮಹತ್ವದ ಆದೇಶ ನೀಡಿದ್ದಾರೆ. ಕಳೆದ ಒಂದು ವರ್ಷ ನಾಲ್ಕು ತಿಂಗಳಿಂದಲೂ ಧಾರವಾಡ (Dharwad) ಕೇಂದ್ರ ಕಾರಾಗೃಹದಲ್ಲಿರುವ ಆರೋಪಿ ಫಯಾಜ್ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದ. ಇದನ್ನೂ ಓದಿ: ಧರ್ಮಸ್ಥಳದ ಅರಣ್ಯದಲ್ಲಿ ಮತ್ತೊಂದು ಅಸ್ಥಿಪಂಜರ ಪತ್ತೆ

    ಆರೋಪಿ ಪರವಾಗಿ ಬೆಳಗಾವಿಯ (Belagavi) ಜೆಡ್ ಎಂ ಹತ್ತರಕಿ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿಗೆ ಸಿಐಡಿ ಪರ ವಕೀಲರಾದ ಎಸ್‌ಪಿಪಿ ಮಹೇಶ್ ವೈದ್ಯ, ನೇಹಾ ಕುಟುಂಬದ ಪರ ವಕೀಲ ರಾಘವೇಂದ್ರ ಮುತ್ತಗಿಕರ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಗ್ರಾ.ಪಂ ಸದಸ್ಯನ ಕಿಡ್ನ್ಯಾಪ್‌ಗೆ ಯತ್ನಿಸಿ ವಿಫಲ – ಚಾಕು ಇರಿದು ದುಷ್ಕರ್ಮಿಗಳು ಎಸ್ಕೇಪ್

    ಆರೋಪಿ ಫಯಾಜ್, ಜಾಮೀನಿಗಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಅರ್ಜಿಯಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಹೇಗೆ ಜಾಮೀನು ನೀಡಲಾಗಿದೆಯೋ ಹಾಗೇ ನನಗೂ ನೀಡಿ ಎಂದು ಬೇಡಿಕೆ ಇಟ್ಟಿದ್ದ. ಇದೀಗ ಈ ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, ಆರೋಪಿ ಫಯಾಜ್‌ಗೆ ಇದೇ ತಿಂಗಳ 6ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ ನೀಡಿದೆ. ಇದನ್ನೂ ಓದಿ: 1 ದಿನ ಸಾರಿಗೆ ಮುಷ್ಕರ ಮುಂದೂಡಿ: ಹೈಕೋರ್ಟ್‌ ಸೂಚನೆ

    ಏನಿದು ಪ್ರಕರಣ?
    ಏ.18ರ ಸಂಜೆ 4:45ರ ಸುಮಾರಿಗೆ ಫಯಾಜ್ ಎಂಬಾತ, ವಿದ್ಯಾರ್ಥಿನಿ ನೇಹಾ ಹಿರೇಮಠ ಕಾಲೇಜಿನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಆಕೆಯ ಕುತ್ತಿಗೆ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದ. ಬಳಿಕ ಆರೋಪಿ ಕಿಮ್ಸ್ ಆಸ್ಪತ್ರೆಯ ಹಿಂಬದಿ ಅವಿತು ಕುಳಿತಿದ್ದ, ಆತನನ್ನು ಕೂಡಲೇ ಬಂಧಿಸಲಾಗಿತ್ತು. ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗಳಾಗಿದ್ದವು.

  • ನೇಹಾ ಹತ್ಯೆ ನಿಜವಾಗಿಯೂ ಲವ್‌ ಜಿಹಾದ್‌ ಕೇಸ್‌, ನಾವು ಬಣ್ಣ ಕಟ್ಟಿಲ್ಲ: ಅಮಿತ್‌ ಶಾ

    ನೇಹಾ ಹತ್ಯೆ ನಿಜವಾಗಿಯೂ ಲವ್‌ ಜಿಹಾದ್‌ ಕೇಸ್‌, ನಾವು ಬಣ್ಣ ಕಟ್ಟಿಲ್ಲ: ಅಮಿತ್‌ ಶಾ

    – ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಕಾಂಗ್ರೆಸ್‌ ಕರ್ನಾಟಕದ ಭದ್ರತೆಯನ್ನೇ ಕಡೆಗಣಿಸಿದೆ
    – ಸಿಎಂ, ಡಿಸಿಎಂ ಕೆಳಮಟ್ಟದ ರಾಜಕೀಯ ಎಂದು ಶಾ ವಾಗ್ದಾಳಿ

    ನವದೆಹಲಿ: ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಹಿರೇಮಠ್‌ ಪ್ರಕರಣ (Neha Hiremath Case) ನಿಜವಾಗಿಯೂ ಲವ್‌ ಜಿಹಾದ್‌ ಪ್ರಕರಣ ಆಗಿದೆ. ನಾವು ಅದಕ್ಕೆ ಲವ್‌ ಜಿಹಾದ್‌ ಬಣ್ಣ ಕಟ್ಟುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಕಿಡಿ ಕಾರಿದ್ದಾರೆ.

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ನೇಹಾ ಹಿರೇಮಠ್‌ ಪ್ರಕರಣಕ್ಕೆ ನಾವು ಲವ್‌ ಜಿಹಾದ್‌ ಬಣ್ಣ ಕಟ್ಟುತ್ತಿಲ್ಲ. ಇದು ಖಂಡಿತವಾಗಿಯೂ ಲವ್‌ ಜಿಹಾದ್‌ ಪ್ರಕರಣವೇ (Love Jihad Case) ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಪೆನ್‌ಡ್ರೈವ್‌ ಪ್ರಕರಣ ಸದ್ದು ಮಾಡ್ತಿದ್ದಂತೇ ಅಭಿಮಾನಿಯಿಂದ ಪ್ರಜ್ವಲ್‌ಗೆ ಗೆಲುವಿನ ಶುಭಾಶಯ!

    ʻನೇಹಾ ಹೀರೇಮಠ್‌ ಪ್ರಕರಣವನ್ನು ಸಿಎಂ, ಡಿಸಿಎಂ (Karnataka CM and DCM) ವೈಯಕ್ತಿಕ ಕಾರಣಗಳಿಗೆ ನಡೆದಿದೆʼ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಕರ್ನಾಟಕ ಸಿಎಂ, ಡಿಸಿಎಂ ಅಲ್ಪ ಸಂಖ್ಯಾತರ ಮತಬ್ಯಾಂಕ್‌ಗಾಗಿ ಆ ರೀತಿ ಹೇಳಿದ್ದಾರೆ. ನಾನು ಅವರಿಗೆ ಒಂದು‌ ಪ್ರಶ್ನೆ ಕೇಳ್ತೀನಿ, ಕಾಲೇಜು ಕ್ಯಾಂಪಸ್‌ನಲ್ಲಿ ಈ ರೀತಿ ಕೊಲೆ ನಡೆಯುತ್ತದೆ ಎಂದರೆ ಅದು ವೈಯಕ್ತಿಕ ವಿಷಯ ಹೇಗಾಗುತ್ತದೆ? ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಭದ್ರತೆ ಸಿಗಬೇಕೋ ಬೇಡವೋ? ಎಂದು ಪ್ರಶ್ನಿಸಿದರಲ್ಲದೇ ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಈ ರೀತಿ ಸತ್ಯ ಮುಚ್ಚಿಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಬಾಂಬ್‌ ಸ್ಫೋಟವನ್ನೂ ಸಹ ಸಿಲಿಂಡರ್‌ ಸ್ಫೋಟ ಎಂದು ತಪ್ಪಾಗಿ ಬಿಂಬಿಸಲು ಹೊರಟಿದ್ದರು. ಆದ್ರೆ ಎನ್‌ಐಎ ತನಿಖೆಯಿಂದಾಗಿ ಸತ್ಯ ಬಯಲಾಯಿತು. ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಿಂದ ಬಾಂಬ್‌ ಸ್ಫೋಟ ನಡೆದಿರಲಿಲ್ಲ. ಆದ್ರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ಬಾಂಬ್ ಸ್ಫೋಟಗಳು ನಡೆಯಲಾರಂಭಿಸಿವೆ ಎಂದು ಕಿಡಿ ಕಾರಿದ್ದಾರೆ.

    ತಮ್ಮ ವೋಟ್ ಬ್ಯಾಂಕ್ ರಾಜಕಾರಣದಿಂದ ಅವರು ಎಷ್ಟು ಕೆಳಮಟ್ಟಕ್ಕೆ ಹೋಗುತ್ತಿದ್ದಾರೆ ಅಂದ್ರೆ, ಈ ದೇಶದ ಭದ್ರತೆ, ಬೆಂಗಳೂರಿನ ಭದ್ರತೆ ಮಾತ್ರವಲ್ಲ ಇಡೀ ಕರ್ನಾಟಕದ ಭದ್ರತೆಯನ್ನೂ ಕಾಂಗ್ರೆಸ್‌ ಕಡೆಗಣಿಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಇದೇ ವೇಳೆ ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯಬೇಕಿದೆ. ಹೆಚ್ಚು-ಕಡಿಮೆ ನಾವು ನಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಲವ್‌ ಮಾಡಿ ಯುವತಿಯನ್ನು ಕರೆದೊಯ್ದನೆಂದು ಯುವಕನ ತಾಯಿಯನ್ನೇ ಕಂಬಕ್ಕೆ ಕಟ್ಟಿ ಥಳಿತ!