Tag: ನೇಹಾ ಹಿರೇಮಠ

  • ಪ್ರೀತಿ ನಿರಾಕರಿಸಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಯುವತಿಗೆ ಟಾರ್ಚರ್, ಕೊಲೆ ಯತ್ನ

    ಪ್ರೀತಿ ನಿರಾಕರಿಸಿದ್ದಕ್ಕೆ ಅನ್ಯಕೋಮಿನ ಯುವಕನಿಂದ ಯುವತಿಗೆ ಟಾರ್ಚರ್, ಕೊಲೆ ಯತ್ನ

    – ನೇಹಾ ಹಿರೇಮಠ ಪ್ರಕರಣಕ್ಕೆ ವರ್ಷ ತುಂಬುತ್ತಲೇ ಅದೇ ರೀತಿಯ ಮತ್ತೊಂದು ಘಟನೆ

    ಹುಬ್ಬಳ್ಳಿ: ನೇಹಾ ಹಿರೇಮಠ (Neha Hiremath) ಪ್ರಕರಣಕ್ಕೆ ವರ್ಷ ತುಂಬುತ್ತಲೇ ಅದೇ ರೀತಿಯ ಘಟನೆಯೊಂದು ಹುಬ್ಬಳ್ಳಿಯ (Hubballi) ವಿದ್ಯಾನಗರದಲ್ಲಿ (Vidya Nagar) ನಡೆದಿದ್ದು, ಪ್ರೀತಿ ನಿರಾಕರಿಸಿದ್ದಕ್ಕೆ ಅನ್ಯಧರ್ಮೀಯ ಯುವಕನೊಬ್ಬ ಯುವತಿಗೆ ಟಾರ್ಚರ್ ನೀಡಿ, ಕೊಲೆಗೆ ಯತ್ನಿಸಿದ್ದಾನೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

    ಸಂತ್ರಸ್ತೆ ಹಾಗೂ ಸಿರಾಜ್ ಒಂದೇ ಪಟ್ಟಣದ ನಿವಾಸಿಗಳು. ಸದ್ಯ ಸಂತ್ರಸ್ತೆ ಪ್ಯಾರಾ ಮೆಡಿಕಲ್ ಕೋರ್ಸ್ನಲ್ಲಿ ಓದುತ್ತಿದ್ದಾಳೆ. ಮೊದಲಿನಿಂದಲೂ ಸಂತ್ರಸ್ತೆಗೆ ಸಿರಾಜ್‌ನ ಪರಿಚಯವಿತ್ತು. ಪ್ರೀತಿಸುವಂತೆ ಸಂತ್ರಸ್ತೆಗೆ ಒತ್ತಾಯ ಮಾಡಿದ್ದು, ಬಳಿಕ ಟಾರ್ಚರ್ ಕೂಡ ನೀಡಿದ್ದ. ಅಲ್ಲದೇ ಸಂತ್ರಸ್ತೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.ಇದನ್ನೂ ಓದಿ:ಪ್ರತಿದಿನ ಕಿರುಕುಳ ಕೊಡ್ತಿದ್ಲು, ನಾನೇ ದೌರ್ಜನ್ಯಕ್ಕೆ ಒಳಗಾಗಿದ್ದೇನೆ – ಪತ್ನಿಯ ಕೊಲೆ ರಹಸ್ಯ ಬಿಚ್ಚಿಟ್ಟ ಟೆಕ್ಕಿ ಪತಿ!

    ರಂಜಾನ್ ಹಬ್ಬದಂದು ಸಿರಾಜ್ ಹುಬ್ಬಳ್ಳಿಯಲ್ಲಿ ಸಂತ್ರಸ್ತೆ ಓದುತ್ತಿದ್ದ ಕಾಲೇಜಿಗೆ ತೆರಳಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದೆಲ್ಲದರಿಂದ ತ್ರೀವವಾಗಿ ಮನನೊಂದ ಸಂತ್ರಸ್ತೆ ಕಾಲೇಜಿನ ಹಾಸ್ಟೆಲ್‌ನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಕೆಎಂಸಿ ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗಳ ಈ ಪರಿಸ್ಥಿತಿಯನ್ನು ನೆನೆದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಸಿರಾಜ್ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇನ್ನೂ ಇದು ಅನ್ಯಧರ್ಮೀಯ ಯುವಕನಿಂದ ಲವ್ ಜಿಹಾದ್, ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

    ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ಭೇಟಿ ಸಂತ್ರಸ್ತೆಯ ಆರೋಗ್ಯ ವಿಚಾರಿಸಿ, ಪ್ರಕರಣದ ಕುರಿತು ಮಾಹಿತಿ ಪಡೆದಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಗಳವಾರ ರಾತ್ರಿಯೇ ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ (Vidya Nagar Police Station) ಪ್ರಕರಣ ದಾಖಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು, ನೇಹಾ ಹಿರೇಮಠ ಪ್ರಕರಣದ ನಂತರ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ, ಪಾಲಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೀಗಾಗಿ ಜನರು ಪೊಲೀಸ್ ಇಲಾಖೆಯ ಜೊತೆ ಸಹಕಾರ ನೀಡದರೆ ಮುಂದೆ ಈ ರೀತಿ ಘಟನೆ ನಡೆಯದಂತೆ ಸಕಾಲದಲ್ಲಿ ತಡೆಗಟ್ಟಲು ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದಾರೆ.ಇದನ್ನೂ ಓದಿ:ಉಕ್ರೇನ್‌ ಮಹಿಳೆಯರನ್ನ ರೇಪ್‌ ಮಾಡುವಂತೆ ಒತ್ತಾಯಿಸುತ್ತಿದ್ದ ರಷ್ಯಾ ಸೈನಿಕನ ಪತ್ನಿಗೆ ಕಠಿಣ ಜೈಲು ಶಿಕ್ಷೆ

  • ಹುಬ್ಬಳ್ಳಿಯಲ್ಲಿ ನೇಹಾ, ಅಂಜಲಿ ಹತ್ಯೆ ಪ್ರಕರಣ; ಹು-ಧಾ ಡಿಸಿಪಿ ತಲೆದಂಡ

    ಹುಬ್ಬಳ್ಳಿಯಲ್ಲಿ ನೇಹಾ, ಅಂಜಲಿ ಹತ್ಯೆ ಪ್ರಕರಣ; ಹು-ಧಾ ಡಿಸಿಪಿ ತಲೆದಂಡ

    ಹುಬ್ಬಳ್ಳಿ: ನೇಹಾ ಹಿರೇಮಠ (Neha Hiremath) ಹಾಗೂ ಅಂಜಲಿ (Anjali) ಹತ್ಯೆ ಪ್ರಕರಣವು ಹುಬ್ಬಳ್ಳಿಯಲ್ಲಿ (Hubballi) ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಲೋಪ ಎಸಗಿದ ಆರೋಪದಲ್ಲಿ ಹು-ಧಾ ಡಿಸಿಪಿಯನ್ನು ಅಮಾನತು ಮಾಡಲಾಗಿದೆ.

    ಐಪಿಎಸ್ ಅಧಿಕಾರಿ, ಹುಬ್ಬಳ್ಳಿ-ಧಾರವಾಡ ಡಿಸಿಪಿ ರಾಜೀವ್ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹುಬ್ಬಳ್ಳಿಗೆ ಗೃಹ ಸಚಿವರ ಭೇಟಿಗೂ ಮುನ್ನ ಅಮಾನತು ಆದೇಶ ಹೊರಬಿದ್ದಿದೆ. ಸೋಮವಾರ ಹುಬ್ಬಳ್ಳಿಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಮಗನ ತಪ್ಪಿನಿಂದಾಗಿ ಬಾಡಿಗೆ ಮನೆಯಿಂದ ನಮ್ಮನ್ನು ಹೊರಹಾಕಿದ್ರು: ಅಂಜಲಿ ಕೊಲೆ ಆರೋಪಿ ತಾಯಿ ಕಣ್ಣೀರು

    ಏಪ್ರಿಲ್ 18 ರಂದು ನೇಹಾ ಹಿರೇಮಠ ಅವರ ಭೀಕರ ಹತ್ಯೆಯಾಗಿತ್ತು. ಕಾಲೇಜು ಆವರಣದಲ್ಲೇ ಫಯಾಜ್ ಎಂಬಾತ ವಿದ್ಯಾರ್ಥಿನಿ ನೇಹಾಳಿಗೆ ಚಾಕುವಿನಿಂದ ಹಲವು ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ. ಇದು ರಾಜ್ಯದೆಲ್ಲೆಡೆ ಜನಾಕ್ರೋಶಕ್ಕೆ ಕಾರಣವಾಗಿತ್ತು.

    ನೇಹಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಅಂಜಲಿ ಎಂಬಾಕೆ ಹತ್ಯೆಯಾಗಿದೆ. ಅಂಜಲಿ ಮನೆಗೆ ನುಗ್ಗಿದ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಎರಡೂ ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಕೊಲೆ ಆರೋಪಿ ಗೋವಾ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ: ರೇಣುಕಾ ಸುಕುಮಾರ

  • ಆರೋಪಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಲು ಸಿದ್ಧ- ಮೃತ ಅಂಜಲಿ ಸಹೋದರಿ ಆಕ್ರೋಶ

    ಆರೋಪಿಯನ್ನು ಕೊಲೆ ಮಾಡಿ ಜೈಲಿಗೆ ಹೋಗಲು ಸಿದ್ಧ- ಮೃತ ಅಂಜಲಿ ಸಹೋದರಿ ಆಕ್ರೋಶ

    ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ಕೊಲೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿಯ ರಕ್ತ ಚೆಲ್ಲಿದೆ.

    ಹೌದು. ಪ್ರೀತಿ ನಿರಾಕರಿಸಿದ್ದಕ್ಕರ ಯುವತಿಯ ಮನೆಗೆ ನುಗ್ಗಿ ಯುವಕ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹುಬ್ಬಳ್ಳಿಯಲ್ಲಿ ನಡೆದ ಎರಡನೇ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೆಷ್ಟು ಹೆಣ್ಣು ಮಕ್ಕಳು ಬಲಿಯಾಗಬೇಕು ಎಂದು ಜನ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಇತ್ತ ಅಂಜಲಿ ಸಹೋದರಿ ಸಂಜನಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಆರೋಪಿಯನ್ನು ನಾನೇ ಕೊಲೆ ಮಾಡಿ ಜೈಲಿಗೆ ಹೋಗಲು ಸಿದ್ಧ ಅಂತ ಆಕ್ರೋಶ ಹೊರಹಾಕಿದ್ದಾರೆ.

    ಹುಬ್ಬಳ್ಳಿಯಲ್ಲಿ ಆರು ಹೆಣ್ಣು ಮಕ್ಕಳ ಸಾವಾಗಿದೆ. ಸಾಕಾ ನೀವು ನ್ಯಾಯ ಕೊಡಿಸೋಕೆ. ಇನ್ನೂ ಎಷ್ಟು ಬಲಿ ಬೇಕು. ಈಗ ಎರಡು ಸಾವು ಆಗಿದೆ ಇನ್ನೂ ನಾಲ್ಕು ಜನ ಸಾಯುತ್ತೀವಿ. ನಾವು ವಿಷ ತೆಗೆದುಕೊಂಡು ಸಾಯುತ್ತೇವೆ. ಹಾಗಾದ್ರೂ ನಮಗೆ ನ್ಯಾಯ ನೀಡಿ ಎಂದು ಕಿಡಿಕಾರಿದ್ದಾರೆ.

    ಅಂಜಲಿ ಮತ್ತು ನೇಹಾ ಇಬ್ಬರ ನಮಗೆ ಅಕ್ಕಂದಿರು. ಅವರ ಸಾವಿಗೆ ನ್ಯಾಯ ಬೇಕು. ಚೆನ್ನಮ್ಮ ಸರ್ಕಲ್ ನಲ್ಲಿ ನಿಲ್ಲಿಸಿ ಫಯಾಜ್ ಮತ್ತು ವಿಶ್ವನನನ್ನು ಎನ್ ಕೌಂಟರ್ ಮಾಡಬೇಕು. ಇಲ್ಲದಿದ್ದರೆ ಅವರನ್ನು ಹುಬ್ಬಳ್ಳಿ ಜನರ ಕೈಗೆ ತಂದುಕೊಡಿ ಎಂದು ಅಂಜಲಿ ಕುಟುಂಬಸ್ಥರು ಆಕ್ರೋಶಭರಿತ ಮಾತುಗಳನ್ನಾಡಿದ್ದಾರೆ.

  • ಅಮಿತ್‌ ಶಾ ಭೇಟಿಯಾದ ನೇಹಾ ಪೋಷಕರು

    ಅಮಿತ್‌ ಶಾ ಭೇಟಿಯಾದ ನೇಹಾ ಪೋಷಕರು

    ಹುಬ್ಬಳ್ಳಿ: ಹುಬ್ಬಳ್ಳಿ ನಗರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ಕೊಲೆಯಾದ ನೇಹಾ ಹಿರೇಮಠ ಕುಟುಂಬಸ್ಥರು ಬುಧವಾರ ಭೇಟಿಯಾದರು.

    ಹುಬ್ಬಳ್ಳಿಯಲ್ಲಿ (Hubballi) ಅಮಿತ್‌ ಶಾ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿದ ಬಳಿಕ ವೇದಿಕೆ ಹಿಂಭಾಗ ನೇಹಾ ಹಿರೇಮಠ (Neha Hiremath) ತಂದೆ, ತಾಯಿ ಹಾಗೂ ಸಹೋದರನನ್ನು ಭೇಟಿ ಮಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕೂಡ ಪ್ರಜ್ವಲ್ ಪರ ಪ್ರಚಾರ ಮಾಡಿದ್ದಾರೆ: ಸಿ.ಟಿ.ರವಿ

    ಭೇಟಿ ಬಳಿಕ ಮಾತನಾಡಿದ ನೇಹಾ ತಂದೆ, ನಮ್ಮ ಮಗಳ ಹತ್ಯೆ ಪ್ರಕರಣದಲ್ಲಿ ಅಮಿತ್ ಶಾ ಬಹಳಷ್ಟು ಗಂಭೀರವಾಗಿದ್ದಾರೆ. ನಮ್ಮ ಜೊತೆಗೆ ಹತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದರು. ನಿಮ್ಮ ಪರವಾಗಿ ನಾವು ಇದ್ದೇವೆ ಅಂತಾ ಧೈರ್ಯ ಹೇಳಿದರು ಎಂದರು.

    ಕೊಲೆ ಆರೋಪಿಗೆ ಉಗ್ರ ಶಿಕ್ಷೆಯಾಗುವ ನಿಟ್ಟಿನಲ್ಲಿ ವಿಶೇಷ ಕಾಯ್ದೆ ತರಲು ಮನವಿ ಮಾಡಿದ್ದೇವೆ. ಈ ಬಗ್ಗೆ ಮನವಿ ಪತ್ರ ನೀಡಿದ್ದೇವೆ. ನಮ್ಮ ಮನವಿಗೆ ಅಮಿತ್‌ ಶಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಡ್ರೈವರ್‌ ಕಾರ್ತಿಕ್‌ ಮಲೇಷ್ಯಾದಲ್ಲಿದ್ದಾನೆ, ಆತನನ್ನು ಅಲ್ಲಿಗೆ ಕಳುಹಿಸಿದ್ದು ಯಾರು: ಹೆಚ್‌ಡಿಕೆ ಪ್ರಶ್ನೆ

  • ನೇಹಾ ಪೋಷಕರಿಗೆ ಮಾಳವಿಕಾ ಅವಿನಾಶ್ ಸಾಂತ್ವನ- ಸರ್ಕಾರದ ವಿರುದ್ಧ ನಟಿ ವಾಗ್ದಾಳಿ

    ನೇಹಾ ಪೋಷಕರಿಗೆ ಮಾಳವಿಕಾ ಅವಿನಾಶ್ ಸಾಂತ್ವನ- ಸರ್ಕಾರದ ವಿರುದ್ಧ ನಟಿ ವಾಗ್ದಾಳಿ

    ನೇಹಾ ಹಿರೇಮಠ (Neha Hiremath) ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ನೇಹಾ ಮನೆಗೆ ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಪ್ರಥಮ್, ಹರ್ಷಿಕಾ ಪೂಣಚ್ಚ ದಂಪತಿ ಭೇಟಿ ನೀಡಿದ ಬೆನ್ನಲ್ಲೇ ನಟಿ ಮಾಳವಿಕಾ ಅವಿನಾಶ್ (Malavika Avinash) ಕೂಡ ನೇಹಾ ಪೋಷಕರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.

    ನೇಹಾ ಪೋಷಕರಾದ ನಿರಂಜನ್ ಹಿರೇಮಠ (Niranjan Hiremath)  ದಂಪತಿಯನ್ನು ಭೇಟಿಯಾಗಿ ಪುತ್ರಿ ನೇಹಾ ಹತ್ಯೆಯ ಕುರಿತು ಬೇಸರ ಹೊರಹಾಕಿದ್ದಾರೆ. ನೇಹಾ ಪೋಷಕರ ಬಳಿ ಘಟನೆಯ ಬಗ್ಗೆ ವಿಚಾರಿಸಿ ಸಾಂತ್ವನ ಹೇಳಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ದೇಶವೇ ಬೆಚ್ಚಿಬೀಳುವಂತಹ ಘಟನೆ ನಮ್ಮ ಹುಬ್ಬಳ್ಳಿಯಲ್ಲಿ ನಡೆದಿದೆ. ಅತ್ಯಂತ ಕ್ರೂರ ರೀತಿಯಲ್ಲಿ ನೇಹಾ ಹಿರೇಮಠ ಕೊಲೆ ಆಗಿದೆ. ಅದು ಕೂಡ ಕಾಲೇಜು ಆವರಣದಲ್ಲಿಯೇ ನಡೆದಿದೆ ಎಂಬುದು ಆತಂಕವನ್ನು ಮೂಡಿಸಿದೆ. ಹೆಣ್ಣು ಮಕ್ಕಳಿಗೆ ಕಾಲೇಜು ಕ್ಯಾಂಪಸ್‌ನಲ್ಲೇ ರಕ್ಷಣೆ ಇಲ್ಲ ಎಂದರೆ ಅವರನ್ನು ಕಾಲೇಜಿಗೆ ಕಳಿಸಲು ಇನ್ಮುಂದೆ ಪೋಷಕರು ಹೇಗೆ ಧೈರ್ಯ ಮಾಡುತ್ತಾರೆ ಎಂದು ಮಾಳವಿಕಾ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಟಾಪ್‌ಲೆಸ್ ಆಗಿ ಕಾಣಿಸಿಕೊಂಡ ‘ಕೆಜಿಎಫ್’ ನಟಿ- ಸಖತ್ ಹಾಟ್ ಎಂದ ನೆಟ್ಟಿಗರು

    ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಹೇಳುತ್ತೇನೆ. ಆಗ ಮಾತ್ರ ನ್ಯಾಯ ಸಿಗುತ್ತದೆ. ರಾಜ್ಯ ಸರ್ಕಾರದ ಧೋರಣೆ ಏನು ಎಂಬುದನ್ನು ನೋವು ಈಗಾಗಲೇ ನೋಡಿದ್ದೇವೆ. ಮೊದಲು ಏನೂ ನಡೆದೇ ಇಲ್ಲವೇನೋ ಎಂಬ ರೀತಿಯಲ್ಲಿ ಮಾತನಾಡಿದ್ದರು. ಆಮೇಲೆ ಅವರವರ ವೈಯಕ್ತಿಕ ಸಮಸ್ಯೆ ಎಂದು ವಿಚಾರವನ್ನು ತಳ್ಳಿಹಾಕುವ ಪ್ರಯತ್ನ ಮಾಡಿದರು. ಓಲೈಕೆಗಾಗಿ ಮಾಡುವುದು ಎಷ್ಟು ಸರಿ ಎಂದಿದ್ದಾರೆ. ಅವರು ಮಾಡುವ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ ಎಂದಿದ್ದಾರೆ ಮಾಳವಿಕಾ ಖಡಕ್‌ ಆಗಿ ಮಾತನಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 120 ದಿನದೊಳಗೆ ನ್ಯಾಯ ಕೊಡಿಸ್ತೀವಿ- ನೇಹಾ ತಂದೆಗೆ ಸಿಎಂ ಭರವಸೆ

    120 ದಿನದೊಳಗೆ ನ್ಯಾಯ ಕೊಡಿಸ್ತೀವಿ- ನೇಹಾ ತಂದೆಗೆ ಸಿಎಂ ಭರವಸೆ

    ಹುಬ್ಬಳ್ಳಿ: ನೇಹಾ ಹಿರೇಮಠ (Neha Hiremath) ಹತ್ಯೆ ಪ್ರಕರಣ ಸಂಬಂಧ 120 ದಿನದೊಳಗೆ ನ್ಯಾಯ ಕೊಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನಿರಂಜನ್‌ ಹಿರೇಮಠಗೆ ಭರವಸೆ ಕೊಟ್ಟಿದ್ದಾರೆ.

    ನೇಹಾ ಕುಟುಂಬವನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ, ನೇಹಾ ಕುಟುಂಬದ ಜೊತೆಗೆ ನಾವಿದ್ದೇವೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲು ಸೂಚಿಸಿದ್ದೇನೆ. ಇದೊಂದು ದುರದೃಷ್ಟ ಘಟನೆಯಾಗಿದ್ದು, ಸಿಐಡಿಗೆ ಕೋಟ್ಟಿದ್ದೇವೆ. ಆರೋಪಿಯನ್ನು ಬಂಧಿಸಿದ್ದೇವೆ ಎಂದರು.

    ಘಟನೆಯನ್ನು ತ್ರೀವಾಗಿ ಖಂಡನೆ ಮಾಡುತ್ತೇನೆ. ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವುದು ಅತ್ಯಂತ ಕಠಿಣ ಶಿಕ್ಷೆ ಇದೆ ಅದನ್ನು ಕೊಡಿಸುವ ಪ್ರಯತ್ನ ಮಾಡುತ್ತೇವೆ. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ನಾನು ಸಾಂತ್ವನ ಹೇಳಲು ಬಂದಿದ್ದೇನೆ. ರಾಜಕೀಯ ಮಾತನಾಡಲ್ಲ. ಅವರ ಕುಟುಂಬಕ್ಕೆ ರಕ್ಷಣೆ ನೀಡಲು ಸಿದ್ಧ. ಆರೋಪಿಗೆ ಕುಮ್ಮಕ್ಕು ನೀಡಿರುವ ಆ್ಯಂಗಲ್ ನಲ್ಲಿ ತನಿಖೆ ಮಾಡಲು ಸೂಚನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

    ನೇಹಾ ಕುಟುಂಬದವರಿಗೆ ರಕ್ಷಣೆ ಬೇಕಿದ್ದರೆ ಕೊಡುತ್ತೇವೆ. ಸಿಐಡಿ ಅಧಿಕಾರಿಗಳು ತನಿಖೆ ಮಾಡ್ತಾರೆ. ವಿಶೇಷ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುತ್ತಾರೆ. ನಂತರ ಕೋರ್ಟ್ ನಲ್ಲಿ ಟ್ರಯಲ್ ನಡೆಯುತ್ತೆ. ಆದಷ್ಟು ಬೇಗ ನ್ಯಾಯಾಲಯದಲ್ಲಿ ಗರಿಷ್ಠ ಶಿಕ್ಷೆ ಆಗುತ್ತೆ. ಧೈರ್ಯವಾಗಿ ಇರಿ. 120 ದಿನದ ಒಳಗೆ ನ್ಯಾಯ ಕೊಡಿಸೋಣ ಎಂದು ಸಿಎಂ ಅವರು ನಿರಂಜನ್ ಹಿರೇಮಠ್ ಬೆನ್ನು ತಟ್ಟಿದರು.

    ಇದೇ ವೇಳೆ ಸಿಬಿಐ ಕೊಡಬೇಕು ಅನ್ನೋ ಬಿಜೆಪಿ ಬೇಡಿಕೆ ವಿಚಾರದ ಕುರಿತು ಮಾತನಾಡಿ, ಬಿಜೆಪಿ ರಾಜಕೀಯ ಮಾಡ್ತಿದೆ. ಒಂದು ಪ್ರಕಣವನ್ನಾದ್ರೂ ಅವರು ಸಿಬಿಐಗೆ ಕೊಟ್ಟಿದ್ದಾರಾ..?. ನಮ್ಮ ಅವಧಿಯಲ್ಲಿ ಸಾಕಷ್ಟು ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೆವು ಎಂದು ವಾಗ್ದಾಳಿ ನಡೆಸಿದರು.

  • ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

    ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ

    ಹುಬ್ಬಳ್ಳಿ: ನೇಹಾ ಹಿರೇಮಠ (Neha Hiremath) ಕೊಲೆಯಾಗಿ ಒಂದು ವಾರದ ಬಳಿಕ ಕೊನೆಗೂ ಆಕೆ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭೇಟಿ ನೀಡಿದರು. ಇದೇ ವೇಳೆ ನೇಹಾ ತಂದೆ-ತಾಯಿಗೆ ಸಾಂತ್ವನ ಹೇಳಿದರು.

    ಹುಬ್ಬಳ್ಳಿಯಲ್ಲಿರುವ (Hubballi) ನೇಹಾ ಮನೆಗೆ ಸಿಎಂ ಸಿದ್ದರಾಮಯ್ಯ ಗುರುವಾರ ಭೇಟಿ ಕೊಟ್ಟರು. ಮನೆಯಲ್ಲಿ ಹಾಕಲಾಗಿದ್ದ ನೇಹಾ ಭಾವಚಿತ್ರಕ್ಕೆ ಸಿಎಂ ಪುಷ್ಪ ನಮನ ಸಲ್ಲಿಸಿದರು. ನಂತರ ನೇಹಾ ತಂದೆ-ತಾಯಿಯಾದ ನಿರಂಜನ ಹಿರೇಮಠ ಹಾಗೂ ಗೀತಾ ಅವರಿಗೆ ಸಿಎಂ ಸಾಂತ್ವನ ಹೇಳಿದರು. ಇದನ್ನೂ ಓದಿ: ಫಯಾಜ್ ನನ್ನ ಮಗಳನ್ನ ಕಿಡ್ನಾಪ್ ಮಾಡಲು ಯತ್ನಿಸಿದ್ದ: ನೇಹಾ ತಂದೆ

    ಮಗಳ ಅಗಲಿಕೆಯ ದುಃಖದಲ್ಲಿದ್ದ ನಿರಂಜನ ಹಿರೇಮಠ ಕೈ ಹಿಡಿದು ಸಿದ್ದರಾಮಯ್ಯ ಸಂತೈಸಿದರು. ಈ ವೇಳೆ ಸಚಿವರಾದ ಸಂತೋಷ್‌ ಲಾಡ್, ಹೆಚ್.ಕೆ.ಪಾಟೀಲ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಎನ್.ಹೆಚ್. ಕೋನರೆಡ್ಡಿ ಸಿಎಂ ಜೊತೆ ಇದ್ದರು.

    ನಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕು. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಇದೇ ವೇಳೆ ನೇಹಾ ತಂದೆ-ತಾಯಿ, ಸಿಎಂ ಬಳಿ ಕೈಮುಗಿದು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಲಾಗಿದೆ. ಖಂಡಿತವಾಗಿಯೂ ಆರೋಪಿಗೆ ತಕ್ಕ ಶಿಕ್ಷೆಯಾಗುತ್ತದೆ ಎಂದು ಭರವಸೆ ನೀಡಿದರು. ಇದು ಅಮಾನವೀಯ ಕೃತ್ಯ. ಇದನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು. ಇದನ್ನೂ ಓದಿ: ನೇಹಾ ಕೊಲೆ ಆರೋಪಿ ಫಯಾಜ್‍ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ

    ಏ.18 ರಂದು ಕಾಲೇಜಿನಲ್ಲಿ ನೇಹಾಳನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು. ಫಯಾಜ್‌ ಎಂಬಾತ ನೇಹಾಳಿಗೆ 9 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದ ಮನೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ರಾಜಕೀಯ ನಾಯಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.

  • ಫಯಾಜ್ ನನ್ನ ಮಗಳನ್ನ ಕಿಡ್ನಾಪ್ ಮಾಡಲು ಯತ್ನಿಸಿದ್ದ: ನೇಹಾ ತಂದೆ

    ಫಯಾಜ್ ನನ್ನ ಮಗಳನ್ನ ಕಿಡ್ನಾಪ್ ಮಾಡಲು ಯತ್ನಿಸಿದ್ದ: ನೇಹಾ ತಂದೆ

    ಹುಬ್ಬಳ್ಳಿ: ಫಯಾಜ್ (Fayaz) ನನ್ನ ಮಗಳನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದ ಎಂದು ಮೃತ ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ತಂದೆ ನಿರಂಜನ್ ಹಿರೇಮಠ (Niranjan Hiremath) ಹೇಳಿದ್ದಾರೆ.

    ಸಿಐಡಿ ಅಧಿಕಾರಿಗಳ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಸಿಐಡಿ ಅಧಿಕಾರಿಗಳ ಗಮನಕ್ಕೆ ಎಲ್ಲಾ ವಿಷಯ ತಂದಿದ್ದೇನೆ. ಬುಧವಾರ ಫಯಾಜ್ ಮಹಜರು ಮಾಡಿರೋ ವಿಷಯ ಕೂಡಾ ತಿಳಿಸಿದ್ರು. ಕೆಲವು ವಿಷಯ ಬಹಿರಂಗ ಮಾಡೋಕೆ ಆಗಲ್ಲ ಎಂದರು. ಇದನ್ನೂ ಓದಿ: ನೇಹಾ ಕರ್ನಾಟಕದ ಪುತ್ರಿ.. ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು: ಕಾಂಗ್ರೆಸ್‌ನ ರಣದೀಪ್‌ ಸುರ್ಜೇವಾಲಾ

    ಫಯಾಜ್ ನನ್ನ ಮಗಳನ್ನ ಕಿಡ್ನಾಪ್ ಮಾಡಲು ಯತ್ನಿಸಿದ್ದ. ಕೆಲ ದಿನಗಳಿಂದ ಬೆದರಿಕೆ ಇತ್ತು. ಯಾರ್ಯಾರೋ ಬಂದು ವೀಡಿಯೋ ಮಾಡ್ತಿದ್ದಾರೆ. ನನ್ನ ಪತ್ನಿ ಇರುವ ಕೋಣೆಗೆ ಬಂದು ವೀಡಿಯೋ ಮಾಡಿದ್ದಾರೆ, ಇದು ನನಗೆ ಗೊತ್ತಾಗಿ ಬಳಿಕ ಆ ವೀಡಿಯೋ ಡಿಲೀಟ್ ಮಾಡಿಸಿದ್ದೇನೆ ಎಂದು ಹೇಳಿದರು.

    ಕೆಲ ದಿನಗಳಿಂದ ಅನಾಮಿಕರು ಇಲ್ಲಿ ಓಡಾಡುತ್ತಿದ್ದಾರೆ. ಕೆಲವರಿಂದ ಭಯ ಆಗುತ್ತಿದೆ. ಇದನ್ನು ನಾನು ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನಾನು ನನ್ನ ಪ್ರಾಣ ಹೋದರೂ ಪರವಾಗಿಲ್ಲ. ಅವನ ಪ್ರಾಣ ತಗೋತೀನಿ ನನ್ನ ಮಗಳ ಶವದ ಮೇಲೆ ನಾನು ಶಪಥ ಮಾಡಿದ್ದೇನೆ. ಸಿಐಡಿ ಅಧಿಕಾರಿಗಳು ಫಯಾಜ್ ಗೆ ಸಹಾಯ ಮಾಡಿದವರನ್ನು ಅರೆಸ್ಟ್ ಮಾಡಬೇಕು ಎಂದು ನಿರಂಜನ್ ಹಿರೇಮಠ ಆಗ್ರಹಿಸಿದ್ದಾರೆ.

  • ನೇಹಾ ಕೊಲೆ ಆರೋಪಿಗೆ ಘೋರ ಶಿಕ್ಷೆ ಕೊಡಿಸುತ್ತೇವೆ: ಸಿದ್ದರಾಮಯ್ಯ

    ನೇಹಾ ಕೊಲೆ ಆರೋಪಿಗೆ ಘೋರ ಶಿಕ್ಷೆ ಕೊಡಿಸುತ್ತೇವೆ: ಸಿದ್ದರಾಮಯ್ಯ

    – ಬಿಜೆಪಿ ನಾಯಕರ ವಿರುದ್ಧ ಸಿಎಂ ಕಿಡಿ

    ಬೀದರ್: ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ಕೊಲೆ ಪ್ರಕರಣದ ಆರೋಪಿಗೆ ಘೋರ ಶಿಕ್ಷೆಯನ್ನು ಕೊಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ನೇಹಾ ಕುಟುಂಬವನ್ನು ಭೇಟಿಗೂ ಮುನ್ನ ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಹಾ ಹತ್ಯೆಯನ್ನು ನಾನು ಈಗಾಗಲೇ ಖಂಡಿಸಿದ್ದೇನೆ. ಪ್ರಕರಣವನ್ನು ಈಗಾಗಲೇ ಸಿಐಡಿಗೆ ಕೊಟ್ಟಿದ್ದೇವೆ. ಇದಕ್ಕಾಗಿ ವಿಶೇಷ ನ್ಯಾಯಾಲಯ ಮಾಡಬೇಕು. ಕೊಲೆ ಆರೋಪಿಗೆ ಕಠಿಣವಾದ ಶಿಕ್ಷೆ ಕೊಡಿಸಬೇಕು. ನಾನು ಈಗಾಗಲೇ ಪಬ್ಲಿಕ್ ಪ್ಯಾಸಿಕ್ಯೂಟರ್ ಜೊತೆ ಮಾತನಾಡಿದ್ದೇನೆ. ಆರೋಪಿಗೆ ಘೋರ ಶಿಕ್ಷೆ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.

    ನೇಹಾ ಹತ್ಯೆ ಸಿಬಿಐಗೆ ಕೊಡುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯವರು ಯಾವುದಾದರೂ ಪ್ರಕರಣವನ್ನ ಸಿಬಿಐಗೆ ಕೊಟ್ಟಿದ್ದಾರಾ..? ಅಧಿಕಾರದಲ್ಲಿ ಇದ್ದಾಗ ಒಂದು ಪ್ರಕರಣ ಸಿಬಿಐಗೆ ಕೊಟ್ಟಿದ್ದಾರಾ..? ನಾನು ಅಧಿಕಾರದಲ್ಲಿರುವಾಗ ಅನೇಕ ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೇನೆ. ಇದರಲ್ಲಿ ಬಿಜೆಪಿ ರಾಜಕೀಯ ಮಾಡಬಾರದು. ಇದನ್ನ ಬಿಜೆಪಿ ರಾಕೀಯವಾಗಿ ಬಳಸುವುದು ಸರಿಯಲ್ಲಾ ಎಂದು ಬಿಜೆಪಿ ನಾಯಕರ ವಿರುದ್ಧ ಸಿಎಂ ಕಿಡಿಕಾರಿದರು. ಇದನ್ನೂ ಓದಿ: ನೇಹಾ ಕೊಲೆ ಆರೋಪಿ ಫಯಾಜ್‍ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ

    ಕಾಂಗ್ರೆಸ್ ಜನರ ಆಸ್ತಿ ಕಿತ್ತುಕೊಳ್ಳುತ್ತಿದೆ ಎಂಬ ಮೋದಿ ಹೇಳಿಕೆ ಬಗ್ಗೆ ಮಾತನಾಡಿ, 15 ಲಕ್ಷ ಅಕೌಂಟ್‍ಗೆ ಹಾಕಿದ್ದಾರಾ.? 2 ಕೋಟಿ ಉದ್ಯೋಗ ಕೊಟ್ರಾ? ರೈತರ ಆದಾಯ ದುಪ್ಪಟ್ಟು ಮಾಡಿದ್ರಾ..? ಡಾಲರ್ ಬೆಲೆ, ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಿದ್ರಾ ಎಂದು ಸಿಎಂ ಲೇವಡಿ ಮಾಡಿದರು.

  • ನೇಹಾ ಕರ್ನಾಟಕದ ಪುತ್ರಿ.. ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು: ಕಾಂಗ್ರೆಸ್‌ನ ರಣದೀಪ್‌ ಸುರ್ಜೇವಾಲಾ

    ನೇಹಾ ಕರ್ನಾಟಕದ ಪುತ್ರಿ.. ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು: ಕಾಂಗ್ರೆಸ್‌ನ ರಣದೀಪ್‌ ಸುರ್ಜೇವಾಲಾ

    – ನಮ್ಮ ಮಗಳು ಸಾವನ್ನಪ್ಪಿರುವಾಗ ರಾಜಕೀಯ ಮಾಡಬೇಡಿ ಎಂದು ಬಿಜೆಪಿಗೆ ತಿರುಗೇಟು
    – ನೇಹಾ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಕಾಂಗ್ರೆಸ್‌ ನಾಯಕರು

    ಹುಬ್ಬಳ್ಳಿ: ನೇಹಾ (Neha Hiremath) ಹತ್ಯೆ ನಡೆದು ಒಂದು ವಾರವಾಗಿದ್ದು, ಕೊನೆಗೂ ಕಾಂಗ್ರೆಸ್ ಹಿರಿಯ ವರಿಷ್ಠರು ಕೊನೆಗೂ ನೇಹಾ ಮನೆಗೆ ಭೇಟಿ ನೀಡಿ ನೇಹಾ ತಂದೆ-ತಾಯಿಗೆ ಸಾಂತ್ವನ ಹೇಳಿದ್ದಾರೆ. ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Surejewala), ಸಚಿವರಾದ ಹೆಚ್.ಕೆ.ಪಾಟೀಲ್, ಸಂತೋಷ್ ಲಾಡ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ಎನ್.ಹೆಚ್.ಕೋನರೆಡ್ಡಿ ಅವರು ನೇಹಾ ಮನೆಗೆ ಭೇಟಿ ನೀಡಿದರು.

    ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸುರ್ಜೇವಾಲಾ, ಈ ಮನೆ ಹೊರತುಪಡಿಸಿ ನೀವು ರಾಜಕಾರಣ ಮಾಡಿ. ಸಾವಿನ ಮನೆಯಲ್ಲಿ ಚುನಾವಣಾ ರಾಜಕಾರಣ ಸರಿಯಲ್ಲ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ನೇಹಾ ಕೊಲೆ ಆರೋಪಿ ಫಯಾಜ್‍ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ

    ಇವತ್ತು ನಮ್ಮ ಮಗಳು ನೇಹಾ ನಿವಾಸಕ್ಕೆ ಬಂದಿದ್ದೇವೆ. ನೇಹಾ ಕೇವಲ ನಿರಂಜನ್ ಹಿರೇಮಠ ಪುತ್ರಿ ಅಲ್ಲ. ಇಡೀ ಕರ್ನಾಟಕದ ಪುತ್ರಿ. ನಿರಂಜನ್ ನಮ್ಮ ಕುಟುಂಬದ ಸದಸ್ಯರು. ಈ ಘಟನೆ ಬಗ್ಗೆ ಅತ್ಯಂತ ದುಃಖವಿದೆ. ನಾವೆಲ್ಲ ಅವರ ಜೊತೆ ಇರ್ತೇವೆ. ಸಂಪೂರ್ಣ ನ್ಯಾಯ ಕೊಡಿಸುವುದು ಸರ್ಕಾರದ ಕರ್ತವ್ಯ ಎಂದರು.

    ಈಗಾಗಲೇ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ. ತ್ವರಿತಗತಿಯಲ್ಲಿ ನ್ಯಾಯದಾನ ಆಗಬೇಕು. 90 ದಿನಗಳಲ್ಲಿ ನ್ಯಾಯದಾನ ಸಿಗಲಿದೆ ಎನ್ನುವ ವಿಶ್ವಾಸವಿದೆ. ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು. ಆಕೆಯ ಸಾವಿಗೆ ನ್ಯಾಯ ಸಿಗಬೇಕು. ವಿಶೇಷ ಕೋರ್ಟ್ ಖಂಡಿತಾ ತ್ವರಿತ ನ್ಯಾಯದಾನ ನೀಡಲಿದೆ. ಗಲ್ಲಿಗಿಂತ ಕಡಿಮೆ ಶಿಕ್ಷೆ ಸಿಗಲ್ಲ. ನಮ್ಮ ಮಗಳು ಸಾವನ್ನಪ್ಪಿರುವಾಗ ರಾಜಕಾರಣ ಮಾಡಬೇಡಿ. ಚುನಾವಣೆ ವೇಳೆ ರಾಜಕೀಕರಣ ಬೇಡ. ಈ ಮನೆ ಹೊರತುಪಡಿಸಿ ರಾಜಕೀಯ ಮಾಡಿ ಎಂದು ತಿಳಿಸಿದರು. ಇದನ್ನೂ ಓದಿ: ನೇಹಾ ಹಿರೇಮಠ ತಂದೆಯ ಬಳಿ ಕ್ಷಮೆಯಾಚಿಸಿದ ಸಿಎಂ!

    ಬಿಜೆಪಿಯಿಂದ ಸಿಬಿಐ ತನಿಖೆಗೆ ಆಗ್ರಹ ವಿಚಾರವಾಗಿ ಮಾತನಾಡಿ, ಸಿಐಡಿ ಮೇಲೆ ನಮಗೆ ನಂಬಿಕೆ ಇದೆ. ರಾಜ್ಯ ಪೊಲೀಸರ ಮೇಲೆ ವಿಶ್ವಾಸವಿದೆ. 90 ದಿನಗಳಲ್ಲಿ ಖಂಡಿತಾ ನ್ಯಾಯ ಸಿಗಲಿದೆ ಎನ್ನುವ ಖಾತ್ರಿ ಇದೆ ಎಂದರು.