Tag: ನೇಹಾ ದುಪಿಯಾ

  • ಶಾಹಿದ್ ಕಪೂರ್ ರನ್ನು ಮನೆಯಿಂದ ಹೊರಗೆ ಹಾಕಿದ್ದೆ ಎಂದ ಪತ್ನಿ ಮೀರಾ!

    ಶಾಹಿದ್ ಕಪೂರ್ ರನ್ನು ಮನೆಯಿಂದ ಹೊರಗೆ ಹಾಕಿದ್ದೆ ಎಂದ ಪತ್ನಿ ಮೀರಾ!

    ಮುಂಬೈ: ನನ್ನ ಪತಿ ಶಾಹಿದ್ ಕಪೂರ್ ರನ್ನು ಮನೆಯಿಂದ ಹೊರಹಾಕಿದ್ದೆ ಎಂದು ಪತ್ನಿ ಮೀರಾ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

    ಇತ್ತೀಚಿಗೆ ನಟ ಶಾಹಿದ್ ಕಪೂರ್ ಹಾಗೂ ಪತ್ನಿ ಮೀರಾ, ನೇಹಾ ದುಪಿಯಾ ನಡೆಸಿಕೊಡುವ ಬಿಎಫ್‍ಎಫ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮೀರಾ ಈ ಹಿಂದೆ ಶಾಹಿದ್ ರನ್ನು ಮನೆಯಿಂದ ಹೊರಹಾಕಿದ್ದೆ ಎಂದು ತಿಳಿಸಿದರು.

    ಶಾಹಿದ್ ಪದ್ಮಾವತ್ ಚಿತ್ರದ ಶೂಟಿಂಗ್ ಮುಗಿಸಿ ಬಂದಿದ್ದಾಗ ಅವರನ್ನು ಮನೆಯಿಂದ ಹೊರಹಾಕಿದ್ದೆ. ಅವರು ಬೆಳಗ್ಗೆ 8 ಗಂಟೆಗೆ ಶೂಟಿಂಗ್ ಮುಗಿಸಿಕೊಂಡು ಬಂದು ಮಧ್ಯಾಹ್ನ 2 ಗಂಟೆಗೆ ಏಳುತ್ತಿದ್ದರು. ಇಡೀ ರಾತ್ರಿ ಸಿನಿಮಾ ಶೂಟಿಂಗ್‍ನಲ್ಲಿ ತೊಡಗಿ ಮನೆಗೆ ಬಂದು ಮಲಗುವ ಸಮಯದಲ್ಲಿ ಅವರಿಗೆ ಯಾವುದೇ ರೀತಿ ತೊಂದರೆ ಆಗಬಾರದೆಂಬುದು ನನಗೆ ತಿಳಿದಿತ್ತು. ಆದರೆ ಅದೇ ಸಮಯದಲ್ಲಿ ನನ್ನ ಮಗಳು ಮಿಷಾ ಕೂಡ ಆಟವಾಡುತ್ತಿದ್ದಳು. ಮಿಷಾಳ ಗಲಾಟೆ ಕೇಳಿ ಶಾಹಿದ್ ಈ ಬಗ್ಗೆ ಎನ್ನನ್ನೂ ಮಾತನಾಡಲಿಲ್ಲ. ಆದರೆ ಅವರಿಗೆ ಡಿಸ್ಟರ್ಬ್ ಆಗುತ್ತಿತ್ತು ಎಂಬುದು ನನಗೆ ತಿಳಿಯಿತು. ಇದೇ ವೇಳೆ ನಾನು ಮಿಷಾಗೆ ಸುಮ್ಮನಿರಲು ಹೇಳಲು ಸಾಧ್ಯವಿಲ್ಲ. ಇದರಿಂದಾಗಿ ನಾನು ಶಾಹಿದ್‍ರನ್ನು ಮನೆಯಿಂದ ಹೊರಗೆ ಕಳುಹಿಸಿ ಹೊಟೇಲ್‍ನಲ್ಲಿ ತಂಗಲು ಹೇಳಿದ್ದೆ ಎಂದು ಮೀರಾ ಹೇಳಿದರು.

    ಆಗ ಶಾಹಿದ್ ಕಪೂರ್ ತನ್ನ ಜುಹು ಮನೆಯನ್ನು ಬಿಟ್ಟು, ಸಿನಿಮಾ ಸೆಟ್‍ಗೆ ಹತ್ತಿರವಿದ್ದ ಗುರ್ ಗಾಂವ್‍ನ ಸ್ಟಾರ್ ಹೊಟೇಲಿನಲ್ಲಿ ತಂಗಿದ್ದರು ಎಂದು ಮೀರಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

    ಸದ್ಯ ಶಾಹಿದ್ ಕಪೂರ್ ‘ಬತ್ತಿ ಗುಲ್ ಮೀಟರ್ ಚಾಲೂ’ ಚಿತ್ರದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಕಪೂರ್ ಹಾಗೂ ಯಾಮಿ ಗೌತಮ್ ನಾಯಕಿಯರಾಗಿ ನಟಿಸುತ್ತಿದ್ದಾರೆ.