ಕಠ್ಮಂಡು: ಕಾರು ಹಾಗೂ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಭಾರತೀಯ ಪ್ರವಾಸಿಗರು ಸೇರಿದಂತೆ ಐವರು ಸಾವನ್ನಪ್ಪಿದ ಘಟನೆ ನೇಪಾಳದ ಧಾಡಿಂಗ್ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬಿಮಲಚಂದ್ರ ಅಗರವಾಲ್ (40), ಸಾಧನಾ ಅಗರವಾಲ್ (35), ಸಂಧ್ಯಾ ಅಗರವಾಲ್ (40), ರಾಕೇಶ್ ಅಗರವಾಲ್ (55) ಮತ್ತು ತನ್ಹು ಜಿಲ್ಲೆಯ ಖೈರೇನಿಯ ದಿಲ್ ಬಹದ್ದೂರ್ ಬಾಸ್ನೆಟ್ (36) ಮೃತರು. ಠಾಕ್ರೆ ಪ್ರದೇಶದ ಫೃಥ್ವಿ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಭಾರತೀಯ ಪ್ರಜೆಗಳು ಪೋಖರಾಗೆ ಭೇಟಿ ನೀಡಿ ನಂತರ ಕಠ್ಮುಂಡುವಿಗೆ ಹಿಂದುರುಗಿತ್ತಿದ್ದರು. ಈತನು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಸ್ ಕಠ್ಮಂಡುವಿನಿಂದ ಧಾಡಿಂಗ್ ಕಡೆಗೆ ಹೋಗುತ್ತಿತ್ತು. ಅಪಘಾತದಲ್ಲಿ ಕಾರಿನ ಚಾಲಕ ನೇಪಾಳದವನಾಗಿದ್ದನು. ಇದನ್ನೂ ಓದಿ: ಕೈ ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್
ಉಳಿದ ಭಾರತೀಯರು ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಸ್ಥಳೀಯ ಆಸ್ಪತ್ರೆಗ ದಾಖಲಿಸಲಾಗುತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಫ್ರಾನ್ಸ್ ಅಧ್ಯಕ್ಷರನ್ನು ಅಭಿನಂದಿಸಿದ ಮೋದಿ
ನವದೆಹಲಿ: ಶುಕ್ರವಾರ ಬೆಳಗ್ಗೆ ಉಭಯ ನಾಯಕರ ನಡುವೆ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಪಹಾರಿ ಶಾಲೆ ಚಿಕಣಿ ಚಿತ್ರಕಲೆಯನ್ನು ನೇಪಾಳದ ಸಹವರ್ತಿ ಶೇರ್ ಬಹದ್ದೂರ್ ದೇವುಬಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಮಾನ್ಸೂನ್ ಋತುವಿನ ಪ್ರಾಕೃತಿಕ ವಿಶೇಷತೆಯನ್ನು ಚಿತ್ರಕಲೆ ಪ್ರತಿಬಿಂಬಿಸುತ್ತದೆ. ಸಾಂಪ್ರದಾಯಿಕ ಬರಹ್ಮಾಸ ಶೈಲಿಯ ಒಂದು ಭಾಗವಾಗಿರುವ ಈ ಚಿತ್ರಕಲೆಯಲ್ಲಿ ರಾಧಾ ಮತ್ತು ಕೃಷ್ಣರ ಪ್ರಣಯ ಸನ್ನಿವೇಶವನ್ನು ಕಾಣಬಹುದು. ಮಾನ್ಸೂನ್ ಸಂದರ್ಭದಲ್ಲಿ ಆಕಾಶದಲ್ಲಿ ಮೋಡಗಳು ದಟ್ಟೈಸಿ ಮಳೆಯ ಮುನ್ಸೂಚನೆಯ ವಾತಾವರಣ ಚಿತ್ರಿತವಾಗಿದೆ. ರಾಧಾ, ಕೃಷ್ಣ ಮೃದುವಾಗಿ ಕೈಗಳನ್ನು ಹಿಡಿದು ಅವರ ಆಕರ್ಷಕ ನೋಟಗಳೊಂದಿಗೆ ಪ್ರೀತಿಯ ಸಂಭಾಷಣೆಯಲ್ಲಿ ತೊಡಗಿಕೊಂಡಿರುವುದನ್ನು ಚಿತ್ರಕಲೆ ಸೂಚಿಸುತ್ತದೆ. ಇದನ್ನೂ ಓದಿ: ಕುರಿ, ಕೋಳಿ ಪ್ರಜ್ಞೆ ತಪ್ಪಿಸುವುದು ಹೇಗೆ: ಸ್ಟನ್ನಿಂಗ್ ನಿಯಮಕ್ಕೆ ಡಿಕೆಶಿ ಕಿಡಿ
ಗುಡುಗುವ ಮೋಡಗಳು ಮತ್ತು ಶಾಂತವಾದ ಭೂದೃಶ್ಯವು ರಾಧಾ ಮತ್ತು ಕೃಷ್ಣರ ಪ್ರಕ್ಷುಬ್ಧ ಆಂತರಿಕ ಭಾವನೆಗಳಿಗೆ ಒಂದು ಸಂಕೇತವಾಗಿದೆ. ಇದು ಅವರ ಶಾಂತ ಬಾಹ್ಯ ವರ್ತನೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಹೀಗಾಗಿ ಬರಹ್ಮಾಸ ಶೈಲಿಯ ವರ್ಣಚಿತ್ರಗಳು ಕೇವಲ ಋತುಗಳ ಚಿತ್ರಣಗಳಲ್ಲದೇ ಮಾನವನ ಭಾವನೆಗಳನ್ನು ಸಂವಹನ ಮಾಡುವ ಮಾಧ್ಯಮವಾಗಿದೆ. ಇದನ್ನೂ ಓದಿ: ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ಮಗುವಿನ ನೆರವಿಗೆ ಬಂದ ರೈಲ್ವೆ ಅಧಿಕಾರಿಗಳು
ಸಂಕೀರ್ಣವಾಗಿ ಚಿತ್ರಿಸಲಾದ ವರ್ಣಚಿತ್ರದಲ್ಲಿ ಸೊಂಪಾದ ಸಸ್ಯ ಮತ್ತು ಜಾನಪದ ಗುಡಿಸಲುಗಳ ಸುಂದರವಾದ ಭೂದೃಶ್ಯದಲ್ಲಿ ಹೊಂದಿಸಲ್ಪಟ್ಟಿದೆ. ಇದು ಹಿಮಾಚಲ ಪ್ರದೇಶದ ಶಾಂತ ಸೌಂದರ್ಯವನ್ನು ಚಿತ್ರಿಸುತ್ತದೆ. ವಿಶೇಷವಾಗಿ 17ನೇ ಶತಮಾನದಿಂದ 19ನೇ ಶತಮಾನದವರೆಗಿನ ಅವಧಿಯಲ್ಲಿ ಪಹಾರಿ ಸ್ಕೂಲ್ ಆಫ್ ಮಿನಿಯೇಚರ್ ಪೇಂಟಿಂಗ್‍ನ ಕಂಗ್ರಾ, ಗುಲೇರ್ ಮತ್ತು ಭಾಸೋಲಿಯಂತಹ ಉಪ-ಶಾಲೆಗಳಲ್ಲಿ ರಾಜಮನೆತನದ ಆಶ್ರಯದಲ್ಲಿ ಈ ರೀತಿಯ ವರ್ಣಚಿತ್ರಗಳು ಕಂಡುಬಂದಿವೆ.
ಕಠ್ಮಂಡು: ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳದ ಸಹವರ್ತಿ ಶೇರ್ ಬಹದ್ದೂರ್ ದೇವುಬಾ ಶನಿವಾರ ಗಡಿಯಾಚೆಗಿನ ರೈಲ್ವೇ ನೆಟ್‌ವರ್ಕ್, ವಿದ್ಯುತ್ ಪ್ರಸರಣ ಮಾರ್ಗವನ್ನು ಉದ್ಘಾಟಿಸಿದರು ಹಾಗೂ ಭಾರತದ ರುಪೇ ಪಾವತಿ ಕಾರ್ಡ್ ಅನ್ನು ನೇಪಾಳದಲ್ಲಿ ಪ್ರಾರಂಭಿಸಿದರು.
ಮೋದಿ ಹಾಗೂ ದೇವುಬಾ ಉದ್ಘಾಟನೆ ಸಂದರ್ಭದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ರೈಲ್ವೇ ಹಾಗೂ ಇಂಧನ ಕ್ಷೇತ್ರಗಳಲ್ಲಿ ಸಹಕಾರಗಳನ್ನು ಮುಂದುವರಿಸಲು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಉಭಯ ದೇಶಗಳ ನಡುವಿನ ಗಡಿ ಸಮಸ್ಯೆಗಳನ್ನು ಚರ್ಚಿಸಲಾಗಿದೆ ಹಾಗೂ ಅವುಗಳನ್ನು ಪರಿಹರಿಸಲು ಮೋದಿಗೆ ಒತ್ತಾಯಿಸಲಾಗಿದೆ ಎಂದು ದೇವುಬಾ ತಿಳಿಸಿದರು. ಇದನ್ನೂ ಓದಿ: ತಮಿಳುನಾಡು ಬಿಜೆಪಿ ನಾಯಕ ಕೆ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ
ಕಠ್ಮಂಡು: ಭಾರತದ UPI ವ್ಯವಸ್ಥೆಯನ್ನು ನೇಪಾಳ ಅಳವಡಿಸಿಕೊಳ್ಳುತ್ತಿದ್ದು, ಮೊದಲ ದೇಶ ಎನಿಸಿಕೊಳ್ಳುತ್ತಿದೆ. ಇದು ನೆರೆಯ ದೇಶದ ಡಿಜಿಟಲ್ ಆರ್ಥಿಕತೆಯನ್ನು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(NPCI) ತಿಳಿಸಿದೆ.
ಕಾಠ್ಮಂಡು: ನೇಪಾಳದ ಹಿಮಾಲಯ ರಾಷ್ಟ್ರದಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರಿ ತಳಿ ಓಮಿಕ್ರಾನ್ ದೃಢಪಟ್ಟ ಮೊದಲ ಪ್ರಕರಣ ವರದಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನವೆಂಬರ್ 19 ರಂದು ವಿಮಾನದಲ್ಲಿ ಬಂದ 66 ವರ್ಷದ ವಿದೇಶಿ ಪ್ರಜೆಯೊಬ್ಬರಿಗೆ ಓಮಿಕ್ರಾನ್ ದೃಢಪಟ್ಟಿದ್ದು, ಅವರೊಂದಿಗೆ ಸಂಪರ್ಕ ಹೊಂದಿದ್ದ 71 ವರ್ಷದ ಮತ್ತೊಬ್ಬ ವ್ಯಕ್ತಿಗೂ ಓಮಿಕ್ರಾನ್ ದೃಢಪಟ್ಟಿದೆ. ಇದೀಗ ಇಬ್ಬರು ಸೋಂಕಿತರನ್ನು ಕ್ವಾರಂಟೈನ್‍ಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಅಮೇರಿಕಾದಲ್ಲಿ ಓಮಿಕ್ರಾನ್ ಮೊದಲ ಪ್ರಕರಣ ಪತ್ತೆ – ದಕ್ಷಿಣ ಆಫಿಕ್ರಾದಿಂದ ಬಂದ ವ್ಯಕ್ತಿಗೆ ಸೋಂಕು
ಸೋಂಕಿತರಿಬ್ಬರೊಂದಿಗೂ ಸಂಪರ್ಕ ಹೊಂದಿದ್ದ ಇತರ 66 ಮಂದಿಗೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಿಗೆಲ್ಲಾ ನೆಗೆಟಿವ್ ವರದಿ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಸೋಂಕಿತರಿಬ್ಬರು ಸಹ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಹೊಂದಿದ್ದರು ಮತ್ತು ಇಬ್ಬರು ಸಂಪೂರ್ಣ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕಳೆದ ವರ್ಷ ಕೊರೊನಾ ಸಾಂಕ್ರಾಮಿಕ ರೋಗದ ಆರಂಭದಿಂದಲು ನೇಪಾಳದಲ್ಲಿ 918,084 ಕೊರೊನಾವೈರಸ್ ಪ್ರಕರಣಗಳು ಮತ್ತು 11,541 ಸಾವುಗಳನ್ನು ವರದಿ ಮಾಡಿದೆ. ಕೇವಲ 28.6% ಮಂದಿ ಮಾತ್ರ ಕೋವಿಡ್-19 ವಿರುದ್ಧ ಸಂಪೂರ್ಣವಾಗಿ ಲಸಿಕೆ ಪಡೆದುಕೊಂಡಿದ್ದಾರೆ.
ಕಠ್ಮಂಡು: ಸಾಮಾನ್ಯವಾಗಿ ರಸ್ತೆಯಲ್ಲಿ ವಾಹನಗಳನ್ನು ತಳ್ಳುವುದನ್ನು ನೋಡಿದ್ದೇವೆ. ಆದರೆ ವಿಚಿತ್ರ ಎನ್ನುವಂತೆ ವಿಮಾನವೊಂದನ್ನು ಅದೇ ರೀತಿ ತಳ್ಳುತ್ತಿರುವ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ನೇಪಾಳದ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಈ ವೀಡಿಯೋವನ್ನು ಅಧಿಕ ಜನರು ವೀಕ್ಷಿಸಿದ್ದು, ಹೆಚ್ಚು ಲೈಕ್ ಮತ್ತು ಕಾಮೆಂಟ್‌ನ್ನು ಪಡೆದುಕೊಂಡಿದೆ.
ವೀಡಿಯೋದಲ್ಲಿ ಏನಿದೆ?: ವಿಮಾನದ ರನ್‌ವೇ ಟೈರ್ ಸಿಡಿದಿದ್ದರಿಂದ, ಅದು ರನ್‌ವೇದಲ್ಲೇ ನಿಂತುಕೊಂಡಿತ್ತು. ಇದರಿಂದ ಇತರೇ ವಿಮಾನಗಳಿಗೆ ತೊಂದರೆ ಆಗಬಾರದು ಎಂದು ಅಲ್ಲಿದ್ದ ಭದ್ರತಾ ಸಿಬ್ಬಂದಿ ಹಾಗೂ ಪ್ರಯಾಣಿಕರು ತಳ್ಳಲು ಪ್ರಾರಂಭಿಸಿದ್ದಾರೆ. ಇದನ್ನು ಅಲ್ಲಿರುವ ಪ್ರಯಾಣಿಕರೆಲ್ಲರೂ ಸೇರಿ ವಿಮಾನವನ್ನು ತಳ್ಳುವುದನ್ನು ಅಲ್ಲಿದ್ದ ಪ್ರಯಾಣಿಕರೊಬ್ಬರು ಚಿತ್ರಿಕರಿಸಿಕೊಂಡಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಮಗನನ್ನು ಹತ್ಯೆಗೈದು ತಾಯಿ ಆತ್ಮಹತ್ಯೆ
ಕಠ್ಮಂಡು: ನೇಪಾಳದಲ್ಲಿ 2015ರಲ್ಲಿ ಸಂಭವಿಸಿದ್ದ ಭೂಕಂಪದಿಂದ ಸಾವಿರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು. ಇದೀಗ ಭಾರತ ಸರ್ಕಾರ ಮನೆಕಳೆದುಕೊಂಡವರಿಗೆ 50 ಸಾವಿರ ನೂತನ ಮನೆಗಳನ್ನು ಸಿದ್ಧಪಡಿಸಿದೆ.
ನೇಪಾಳದಲ್ಲಿ 2015ರಲ್ಲಿ ಸಂಭವಿಸಿದ್ದ ಭೂಕಂಪಕ್ಕೆ ಸಾವಿರಾರು ಮನೆ, ಆಸ್ತಿ, ಪಾಸ್ತಿ ಜೀವ ಹಾನಿ ಸಂಭವಿಸಿತ್ತು. ಬಳಿಕ ಬದುಕುಳಿದವರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು ಅಂತವರಿಗೆ ನೆರವಾದ ಭಾರತ ಸರ್ಕಾರ ಗೂರ್ಖಾ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ 50 ಸಾವಿರ ಮನೆಗಳ ನಿರ್ಮಾಣ ಮಾಡಿದೆ. ಇದನ್ನೂ ಓದಿ: ಹಾಡಹಗಲೇ ಕೇರಳದಲ್ಲಿ RSS ಕಾರ್ಯಕರ್ತನ ಬರ್ಬರ ಹತ್ಯೆ
ಭಾರತ ಸರ್ಕಾರ, ರಾಷ್ಟ್ರೀಯ ಪುನರ್ ನಿರ್ಮಾಣ ಪ್ರಾಧಿಕಾರ (NRA), ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ (UNDP) ಮತ್ತು ವಿಶ್ವಸಂಸ್ಥೆಯ ಯೋಜನಾ ಸೇವೆಗಳ ಕಚೇರಿ (UNOPS) ಸಹಯೋಗದಲ್ಲಿ ಮನೆಗಳ ನಿರ್ಮಾಣ ಕಾರ್ಯವಾಗುತ್ತಿದ್ದು, ಇಂದು ಭಾರತೀಯ ರಾಯಭಾರ ಕಚೇರಿ ಕಾರ್ಯಕ್ರಮ ಆಯೋಜನೆ ಮಾಡಿ ಮನೆ ನಿರ್ಮಾಣ ಪೂರ್ಣಗೊಂಡಿರುವ ಬಗ್ಗೆ ಘೋಷಿಸಿದೆ. ಇದನ್ನೂ ಓದಿ: ಹುಬ್ಬಳ್ಳಿ ಆಹಾರ ನಿಗಮದ ವಿಭಾಗೀಯ ಕೇಂದ್ರ ಕಚೇರಿಗೆ ಪಿಯೂಷ್ ಗೋಯಲ್ ಚಾಲನೆ
ವಸತಿ ಕಳೆದುಕೊಂಡ ನಿರಾಶ್ರಿತರಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲು ಮುಂದಾಗಿರುವ ಭಾರತ ಸರ್ಕಾರ ವಸತಿ ಕಲ್ಪಿಸಿಕೊಡಲು ಈಗಾಗಲೇ 150 ಮಿಲಿಯನ್ 1,116 ಕೋಟಿ ರೂ.ಗಳನ್ನು ವಿನಿಯೋಗಿಸಿದ್ದು, ನೇಪಾಳದ 71 ಶಿಕ್ಷಣ ಕ್ಷೇತ್ರದ ಯೋಜನೆಗಳು, 132 ಆರೋಗ್ಯ ಕಟ್ಟಡಗಳು ಮತ್ತು 28 ಪರಂಪರಿಕ ತಾಣಗಳ ಮರು ನಿರ್ಮಾಣ ಕಾರ್ಯಕ್ಕೆ ಭಾರತ ಸರ್ಕಾರ ಎನ್‍ಆರ್‍ಎ ಜೊತೆ ಕೈಜೋಡಿಸಿ ಈಗಾಗಲೇ 50 ಸಾವಿರ ಮನೆಗಳನ್ನು ನಿರ್ಮಾಣಮಾಡಿ ಹಸ್ತಾಂತರ ಮಾಡಲು ಸಿದ್ಧಗೊಂಡಿದೆ. 2015ರಲ್ಲಿ ನಡೆದ ಭೂಕಂಪಕ್ಕೆ ನೇಪಾಳದ 11 ಜಿಲ್ಲೆಗಳು ತತ್ತರಿಸಿ ಹೋಗಿತ್ತು. ಇದೀಗ ಮರು ನಿರ್ಮಾಣ ಕಾರ್ಯ ನಡೆಯುತ್ತಿದೆ.
ಕಠ್ಮಂಡು: ಭಾರೀ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಪರಿಣಾಮ 88 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನೇಪಾಳದಲ್ಲಿ ನಡೆದಿದೆ.
ನೇಪಾಳದಲ್ಲಿ ಭಾರೀ ಮಳೆಯ ಪರಿಣಾಮ ಭೂಕುಸಿತ ಉಂಟಾಗಿ 88 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಇನ್ನೂ 11 ಸಾವುಗಳು ವರದಿಯಾದ ನಂತರ ಗುರುವಾರ ಸಾವಿನ ಸಂಖ್ಯೆ 88ಕ್ಕೆ ಏರಿದೆ. ಬುಧವಾರ 63 ಜನರು ಸಾವನ್ನಪ್ಪಿದ್ದು, ಮಂಗಳವಾರ ಸಾವಿನ ಸಂಖ್ಯೆ 14 ಇತ್ತು ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದರು. ಇದನ್ನೂ ಓದಿ: ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಂದ್ವ ನೀತಿ: ಹೆಚ್‍ಡಿಕೆ ತರಾಟೆ
ಸಚಿವಾಲಯದ ವಿಪತ್ತು ನಿರ್ವಹಣಾ ವಿಭಾಗದ ಪ್ರಕಾರ ಪ್ರವಾಹ, ಭೂಸಿತದಿಂದ 30ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಪೂರ್ವ ನೇಪಾಳದ ಪಂಚತಾರ್ ಜಿಲ್ಲೆಯಲ್ಲಿ ಸುಮಾರು 27 ಜನರು ಸಾವನ್ನಪ್ಪಿದ್ದು, ಅತಿ ಹೆಚ್ಚು ಸಾವುಗಳು ದಾಖಲಾಗಿದೆ. ಇಲಾಮ್ ಮತ್ತು ದೋತಿ ಜಿಲ್ಲೆಗಳಲ್ಲಿ 13 ಸಾವುಗಳು ಸಂಭವಿಸಿದೆ. ಕಾಳಿಕೋಟ್, ಬೈತಾಡಿ, ದಡೆಲ್ಧುರ, ಬಜಾಂಗ್, ಹುಮಲಾ, ಸೋಲುಖುಂಬು, ಪ್ಯುಥಾನ್, ಧಂಕುತ, ಮೊರಾಂಗ್, ಸುನ್ಸಾರಿ ಮತ್ತು ಉದಯಪುರ ಸೇರಿದಂತೆ ಇತರ 15 ಜಿಲ್ಲೆಗಳಿಂದಲೂ ಸಾವುಗಳು ವರದಿಯಾಗಿದೆ ಎಂದು ತಿಳಿಸಿದರು.
ನೇಪಾಳದಲ್ಲಿ 20 ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದು, ಬಜಾಂಗ್ ಜಿಲ್ಲೆಯಲ್ಲಿ 21 ಜನರು ನಾಪತ್ತೆಯಾಗಿದ್ದಾರೆ. ಗುರುವಾರದಿಂದ ಹವಾಮಾನ ಪರಿಸ್ಥಿತಿ ಸುಧಾರಿಸುತ್ತಿದೆ. ಭಾನುವಾರದಿಂದ ಈ ಪ್ರದೇಶದಲ್ಲಿ ಹಿಮಪಾತ ಆರಂಭವಾಗಿದ್ದು, ಹವಾಮಾನ ವೈಪರೀತ್ಯದಿಂದಾಗಿ ಬುಧವಾರ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಲಿಲ್ಲ. ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲು ಸ್ಥಳೀಯ ಆಡಳಿತವು ಗೃಹ ಸಚಿವಾಲಯದಿಂದ ಹೆಲಿಕಾಪ್ಟರ್ ನೀಡುವಂತೆ ಕೋರಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ನಾಲ್ಕು ಸ್ಲೊವೇನಿಯನ್ ಪ್ರವಾಸಿಗರು ಮತ್ತು ಮೂವರು ಗೈಡ್‍ಗಳು ಸೇರಿದಂತೆ 12 ಜನರು ಕಠ್ಮಂಡುವಿನಿಂದ 700 ಕಿಮೀ ಪಶ್ಚಿಮದಲ್ಲಿರುವ ಹುಮ್ಲಾ ಜಿಲ್ಲೆಯ ನಖ್ಲಾದಲ್ಲಿ ಸಿಲುಕಿಕೊಂಡಿದ್ದಾರೆ. ಲಿಮಿಯಲ್ಲಿ ಟ್ರೆಕ್ಕಿಂಗ್ ಮುಗಿಸಿ, ಅವರು ಸಿಮಿಕೋಟ್‍ಗೆ ಮರಳುತ್ತಿದ್ದರು ಎಂದು ಹುಮ್ಲಾ ಮುಖ್ಯ ಜಿಲ್ಲಾ ಅಧಿಕಾರಿ ಗಣೇಶ್ ಆಚಾರ್ಯ ಹೇಳಿದರು.
ಕಠ್ಮಂಡು: ನೇಪಾಳದಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಭೀಕರ ಮಳೆಗೆ 50ಕ್ಕೂ ಹೆಚ್ಚು ಜನ ಕೊಚ್ಚಿ ಹೋಗಿ, ಹಲವು ಮನೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ನೇಪಾಳದ 100ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸುರಿದ 105 ಮಿಲಿ ಮೀಟರ್‍ಗೂ ಹೆಚ್ಚಿನ ಮಳೆಯಿಂದಾಗಿ ಜನ ಭಯಭೀತರಾಗಿದ್ದಾರೆ. ಈಗಾಗಲೇ ನೇಪಾಳದ ರಾಜಾಧಾನಿ ಕಠ್ಮಂಡುವಿನಲ್ಲಿ 350ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದು, 50ಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ವರುಣನ ಅಬ್ಬರ- ಹೊನ್ನಾವರದಲ್ಲಿ ದಾಖಲೆ ಮಳೆ
ಧಾರಾಕಾರ ಮಳೆಗೆ ನೇಪಾಳದ ನದಿಗಳೆಲ್ಲ ತುಂಬಿ ಹರಿಯುತ್ತಿದ್ದು, ವಸತಿ ಪ್ರದೇಶಗಳತ್ತ ನೀರು ನುಗ್ಗಿ ಹಲವು ಅವಾಂತರಗಳು ನಡೆದು ಹೋಗಿವೆ. ಸಾಕಷ್ಟು ಜನ ಕಣ್ಮರೆಯಾಗಿದ್ದು, ನೇಪಾಳದ ಪೊಲೀಸರು, ರಕ್ಷಣಾ ಪಡೆ ಸೇರಿದಂತೆ ಸೇನೆ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಕಳೆದ ರಾತ್ರಿ ಸಂಕಷ್ಟಕ್ಕೆ ಸಿಲುಕಿದ್ದ 130ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. ಹಲವು ಕಡೆ ಜನ ಸಂಪರ್ಕಕ್ಕೆ ಸಿಗದೆ ಕಷ್ಟದಲ್ಲಿದ್ದಾರೆ. ಅವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಇದನ್ನೂ ಓದಿ: ಡೆಂಗ್ಯೂ, ವೈರಲ್ ಫಿವರ್‌ನಿಂದ ಮಕ್ಕಳನ್ನು ರಕ್ಷಿಸಿ: ಯುಪಿ ಸರ್ಕಾರದ ವಿರುದ್ಧ ಅಖಿಲೇಶ್ ಕಿಡಿ
ಮಳೆಯೊಂದಿಗೆ ಸಿಡಿಲಿನ ಅಬ್ಬರ ಕೂಡ ಜೋರಾಗಿದ್ದು, ಈಗಾಗಲೇ ಸಿಡಿಲು ಬಡಿದು 7 ಮಂದಿ ಮೃತರಾಗಿರುವ ಬಗ್ಗೆ ಸ್ಥಳೀಯ ವಾಹಿನಿ ವರದಿ ಮಾಡಿದೆ. ಸಿಡಿಲು ಬಡಿದು ಹಲವು ಮನೆಗಳಿಗೆ ಹಾನಿಯಾಗಿದೆ.
ಉಡುಪಿ: ಇಲ್ಲಿನ ವಿಶಾಲ ಗಾಣಿಗ ಕೊಲೆ ಪ್ರಕರಣವನ್ನು ಪೊಲೀಸರು 10 ದಿನದೊಳಗೆ ಬೇಧಿಸಿದ್ದಾರೆ. ನೇಪಾಳ ದೇಶದ ಗಡಿ ಪ್ರದೇಶದಲ್ಲಿ ಸುಪಾರಿ ಹಂತಕ ಅರೆಸ್ಟ್ ಆಗಿದ್ದಾನೆ. ಪತಿಯೇ ಪತ್ನಿಯ ಕೊಲೆಗೆ ಎರಡು ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಜುಲೈ 12 ರಂದು ಸಂಜೆ ಉಡುಪಿ ಜಿಲ್ಲೆ ಬ್ರಹ್ಮಾವರದ ಮಿಲನ್ ಅಪಾರ್ಟ್ ಮೆಂಟ್ ನಲ್ಲಿ ವಿಶಾಲ ಕೊಲೆಯಾಗಿತ್ತು. ಮೈಮೇಲಿದ್ದ ಚಿನ್ನಾಭರಣವನ್ನು ಕದ್ದು ಆರೋಪಿ ಪ್ರಕರಣದ ದಿಕ್ಕು ತಪ್ಪಿಸಿ ಪರಾರಿಯಾಗಿದ್ದ. ಒಂದು ವಾರಗಳ ಕಾಲ ತನಿಖೆ ನಡೆಸಿದ ಪೊಲೀಸರು, ಉತ್ತರಪ್ರದೇಶ ರಾಜ್ಯದ ಗೋರಖಪುರ ಜಿಲ್ಲೆಯ ಚಾರ್ಪನ್ ಬಹುರಾಗ್ ಗ್ರಾಮದ ಶ್ರೀ ಸ್ವಾಮಿನಾಥ ನಿಶಾದ (38) ನನ್ನು ಬಂಧಿಸಲಾಗಿದೆ. ಆರೋಪಿ ಕೊಲೆಗೈದು ಉತ್ತರ ಪ್ರದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ.
ಪೊಲೀಸ್ ತನಿಖೆ ತೀವ್ರವಾಗುತ್ತಿದ್ದಂತೆ ನೇಪಾಳ ದೇಶಕ್ಕೆ ನುಸುಳಲು ಯತ್ನಿಸಿದ್ದ. ಕೊಲೆಯ ಹಿಂದಿನ ಸಂಚು ಗಂಡನದ್ದೆಂದು ಪೊಲೀಸರು ಫೋನ್ ಕರೆಯೊಂದರಿಂದ ಕಂಡು ಹುಡುಕಿದ್ದಾರೆ. ಸಾಕ್ಷಿಗಳೇ ಇಲ್ಲದ ಸವಾಲಿನ ಪ್ರಕರಣವನ್ನು ತಾಂತ್ರಿಕ ಸಾಕ್ಷಿಗಳ ಮೂಲಕ ಪತ್ತೆ ಮಾಡಿದ್ದಾರೆ. ಗಂಡ-ಹೆಂಡತಿಯ ನಡುವೆ ಅನ್ಯೋನ್ಯತೆ ಸಮಸ್ಯೆಯಿತ್ತು. ಇದೇ ಕಾರಣಕ್ಕೆ ಕೊಲೆ ಮಾಡಿಸಿರುವುದಾಗಿ ಗಂಡ ರಾಮಕೃಷ್ಣ ಗಾಣಿಗ ಹೇಳಿಕೆ ನೀಡಿದ್ದಾನೆ. ಇದನ್ನೂ ಓದಿ: ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಲಿ: ಸಿದ್ದಗಂಗಾ ಶ್ರೀ
ತನ್ನ ಹೇಳಿಕೆಗಳನ್ನು ಆಗಾಗ ಬದಲಿಸುತ್ತಿರುವ ರಾಮಕೃಷ್ಣರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೌಟುಂಬಿಕ ಸಮಸ್ಯೆಗೆ ಕೊಲೆ ನಡೆದಿರಲಿಕ್ಕಿಲ್ಲ. ಕೊಲೆಗೆ ಇನ್ನೇನೋ ಮಹತ್ವದ ಕಾರಣ ಇದೆ ಎಂಬ ಗುಮಾನಿ ಪೊಲೀಸರಿಗೆ ಇದೆ. ಆಸ್ತಿ ವಿಚಾರದ ದೃಷ್ಟಿಯಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೊಲೆಗೆ ಡೀಲ್ ಕುದುರಿಸಿದ ಓರ್ವ ಆರೋಪಿ ಮತ್ತು ಕೊಲೆಗೈದಿರುವ ಇನ್ನೋರ್ವ ಆರೋಪಿಯ ಬಂಧನ ಇನ್ನಷ್ಟೇ ಆಗಬೇಕಾಗಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿದೆ. ಪ್ರಕರಣ ಸಂಬಂಧ ಪೊಲೀಸರಿಗೆ ಆರಂಭಿಕ ಹಂತದಲ್ಲಿ ಯಾವುದೇ ಸಾಕ್ಷ್ಯಗಳು ಲಭ್ಯವಾಗಿರಲಿಲ್ಲ. ಪಡುಬಿದ್ರೆಯಿಂದ ಬೈಂದೂರುವರೆಗೆ ನೂರಾರು ಕಿಲೋಮೀಟರ ಸಿಸಿಟಿವಿ ಜಾಲಾಡಿದ್ದರು.
ವಿಮಾನ ನಿಲ್ದಾಣ ರೈಲು ನಿಲ್ದಾಣದಲ್ಲಿ ಪೊಲೀಸರು ಮಾಹಿತಿ ಕಲೆಹಾಕಲು ಶ್ರಮಿಸಿದ್ದರು. ಪ್ರಕರಣ ತನಿಖೆ ಮಾಡಿದ ಪೊಲೀಸರ ನಾಲ್ಕು ತಂಡಗಳಿಗೆ ಪೊಲೀಸರಿಗೆ ಎಸ್ಪಿ ವಿಷ್ಣುವರ್ಧನ್ ಧನ್ಯವಾದ ಹೇಳಿದ್ದಾರೆ. ರಾಜ್ಯದ ಗಮನ ಸೆಳೆದಿದ್ದ ಜಟಿಲ ಪ್ರಕರಣವನ್ನು ಬೇಧಿಸಿರುವ ಸಹೋದ್ಯೋಗಿಗಳಿಗೆ ಡಿಜಿಪಿ ಪ್ರವೀಣ್ ಸೂದ್ 50 ಸಾವಿರ ರುಪಾಯಿ ಬಹುಮಾನ ನೀಡಿದ್ದಾರೆ.