Tag: ನೇಪಾಳ

  • ದೆಹಲಿಯಲ್ಲಿ ಕಂಪಿಸಿದ ಭೂಮಿ – ಮನೆಯಿಂದ ಹೊರ ಬಂದ ಜನತೆ

    ದೆಹಲಿಯಲ್ಲಿ ಕಂಪಿಸಿದ ಭೂಮಿ – ಮನೆಯಿಂದ ಹೊರ ಬಂದ ಜನತೆ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ (Delhi) ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭೂಕಂಪ (Earthquake) ಸಂಭವಿಸಿದ್ದು ಕಟ್ಟಡಗಳು ಅಲುಗಾಡಿವೆ.

    ಭೂಕಂಪದ ಕೇಂದ್ರಬಿಂದುವನ್ನು ನೆರೆಯ ನೇಪಾಳದಲ್ಲಿ (Nepal) ಗುರುತಿಸಲಾಗಿದೆ. ನೇಪಾಳದಲ್ಲಿ 5.4 ತೀವ್ರತೆಯ ಭೂಕಂಪ ಉಂಟಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

    ವರದಿಗಳ ಪ್ರಕಾರ ದೆಹಲಿಯಲ್ಲಿ ಮಂಗಳವಾರ ಮಧ್ಯಾಹ್ನ 2:30ರ ವೇಳೆಗೆ ಭೂಕಂಪನದ ಅನುಭವವಾಗಿದೆ. ಜನರು ಭಯಭೀತರಾಗಿ ಮನೆ, ಕಚೇರಿಗಳಿಂದ ಹೊರಗೆ ಓಡಿದ್ದಾರೆ. ಇದನ್ನೂ ಓದಿ: ನನಗೆ ಬೆಂಬಲ ಕೊಡಿ.. ನಾನು ನಿಮಗೆ ಹಿಂದೂ ರಾಷ್ಟ್ರ ಕೊಡುತ್ತೇನೆ – ಧೀರೇಂದ್ರ ಶಾಸ್ತ್ರಿ

    ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್, ಪಿಥೋರ್‌ಗಢ್ ಹಾಗೂ ಅಲ್ಮೋರಾ ಸೇರಿದಂತೆ ಇತರ ಜಿಲ್ಲೆಗಳಲ್ಲೂ ಕಂಪನದ ಅನುಭವವಾಗಿರುವುದಾಗಿ ವರದಿಯಾಗಿದೆ.

    ಸದ್ಯ ಇಲ್ಲಿಯವರೆಗೆ ಯಾವುದೇ ಜೀವ ಅಥವಾ ಆಸ್ತಿಪಾಸ್ತಿ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ಗಂಜಲ ಹಾಕಿ ವಿಧಾನ ಸೌಧ ಕ್ಲೀನ್ ಮಾಡಿಸ್ತೀವಿ: ಡಿಕೆಶಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 16 ವರ್ಷಗಳ ಹಿಂದೆ ಪತಿ, ಈಗ ಪತ್ನಿ – ದಂಪತಿ ಜೀವನ ವಿಮಾನ ದುರಂತದಲ್ಲಿ ಅಂತ್ಯ

    16 ವರ್ಷಗಳ ಹಿಂದೆ ಪತಿ, ಈಗ ಪತ್ನಿ – ದಂಪತಿ ಜೀವನ ವಿಮಾನ ದುರಂತದಲ್ಲಿ ಅಂತ್ಯ

    ಕಠ್ಮಂಡು: 16 ವರ್ಷಗಳ ಹಿಂದೆ ನಡೆದ ಯೇತಿ ಏರ್‌ಲೈನ್ಸ್‌ನ (Yeti Airlines) ವಿಮಾನ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದ ಪತ್ನಿ, ತಾನೂ ಅಂತಹದ್ದೇ ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ.

    ಹೌದು. ಯೇತಿ ಏರ್‌ಲೈನ್ಸ್ (Airlines) ಸಹ ಪೈಲಟ್ ಅಂಜು ಖತಿವಾಡ ಭಾನುವಾರ ನೇಪಾಳದ ಪೋಖ್ರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Pokhara International Airport) ನಡೆದ ದುರಂತದಲ್ಲಿ ಮೃತಪಟ್ಟಿದ್ದಾರೆ.

    ಮೃತ ಅಂಜು ಖತಿವಾಡ, ಆಕೆಯ ಪತಿ ಯೇತಿ ಏರ್‌ಲೈನ್ಸ್ ಸಹ ಪೈಲಟ್ ಆಗಿದ್ದರು. ಪತಿ 16 ವರ್ಷಗಳ ಹಿಂದೆ, ಅಂದ್ರೆ 2016ರ ಜೂನ್ 21 ರಂದು ಮೃತಪಟ್ಟಿದ್ದರು. ನೇಪಾಲಗಂಜ್‌ನಿಂದ ಸುರ್ಖೇತ್ ಮೂಲಕ ಜುಮ್ಲಾಗೆ ತೆರಳುತ್ತಿದ್ದ 9-N AEQ ವಿಮಾನ ಅಪಘಾತಕ್ಕೀಡಾಗಿ 6 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ಸಾವನ್ನಪಿದ್ದರು. ಅದರಲ್ಲಿ ಅಂಜು ಪತಿಯೂ ಒಬ್ಬರಾಗಿದ್ದರು. ಇದೀಗ ಭಾನುವಾರ (ಜ.15) ನಡೆದ ವಿಮಾನ ಅಪಘಾತದಲ್ಲಿ ಅಂಜು ಸಹ ಮೃತಪಟ್ಟಿದ್ದಾರೆ.

    ಮೂಲಗಳ ಪ್ರಕಾರ, ಅಂಜು ಖತಿವಾಡ ಪೈಲಟ್ ಆಗುವ ಕನಸು ಕಂಡಿದ್ದರು. ಅದಕ್ಕಾಗಿ ಇನ್ನೂ ಕೆಲವೇ ಗಂಟೆಗಳು ಬಾಕಿಯಿತ್ತು. ಸದ್ಯ ಹಿರಿಯ ಕ್ಯಾಪ್ಟನ್ ಕೆ.ಸಿ ಕಮಲ್ ಪೈಲಟ್ ಆಗಿ, ಅಂಜು ಸಹ ಪೈಲಟ್ ಆಗಿದ್ದರು. ದುರಾದೃಷ್ಟ ಅದುವೇ ಅವರ ಕೊನೆಯ ಹಾರಾಟವಾಗಿದೆ. ಪೈಲಟ್ ಆಗುವ ಕನಸು ಕನಸಾಗಿಯೇ ಉಳಿದು – ಜೀವ ಅಳಿದು ಹೋಗಿದೆ. ಇದನ್ನೂ ಓದಿ: 9ರ ಬಾಲಕಿ ಮೇಲೆ ಅಪ್ರಾಪ್ತರಿಂದ ರೇಪ್- ವೀಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್

    ಈ ಹಿಂದೆ ಅಂಜು ಕೆಲಸ ನಿವರ್ಹಿಸಿದ ನೇಪಾಳದ ಎಲ್ಲ ವಿಮಾನಗಳೂ ನಿಲ್ದಾಣಕ್ಕೆ ಯಶಸ್ವಿಯಾಗಿ ಬಂದಿಳಿದಿದ್ದವು. 100 ಗಂಟೆ ಯಶಸ್ವಿ ಪ್ರಯಾಣ ಬೆಳೆಸಿ ಪೈಲಟ್‌ ಆಗೋದ್ರಲ್ಲಿದ್ದರು. ಅವರು ಪೈಲಟ್ ಆಗೋದಕ್ಕೆ ಕೆಲವೇ ಸೆಕೆಂಡುಗಳು ಬಾಕಿಯಿತ್ತು. ಆಗಲಿದ್ದರು. ಆದ್ರೆ ವಿಧಿ ಆಟ ಬೇರೆಯಾಗಿತ್ತು. ಲ್ಯಾಂಡಿಂಗ್‌ಗೇ ಕೆಲವೇ ಕ್ಷಣಗಳಿಗೂ ಮುನ್ನ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Nepal Plane Crashː ನಾಲ್ವರು ಭಾರತೀಯರು ಸೇರಿ ಮೃತರ ಸಂಖ್ಯೆ 68ಕ್ಕೆ ಏರಿಕೆ, ಇಂದು ರಾಷ್ಟ್ರೀಯ ಶೋಕಾಚರಣೆ

    ಏನಿದು ಘಟನೆ?
    ಇದೇ ಜನವರಿ 15ರಂದು ನೇಪಾಳದ ಪೋಖ್ರಾ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ವಿಮಾನ ನಿಲ್ದಾಣ ಅಪಘಾತದಲ್ಲಿ 68 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ನಾಲ್ವರು ಭಾರತೀಯರು ಸೇರಿದ್ದಾರೆ. ಪ್ರಸ್ತುತ ಪ್ರದೇಶದಲ್ಲಿ ಶೋಧ ಮುಂದುವರಿದಿದ್ದು, ಇನ್ನೂ ನಾಲ್ವರಿಗಾಗಿ ಹುಡುಕಾಟ ನಡೆಸಿದ್ದಾರೆ. ಒಟ್ಟು 4 ಸಿಬ್ಬಂದಿ 68 ಪ್ರಯಾಣಿಕರು ಸೇರಿ 72 ಮಂದಿ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Nepal Plane Crashː ನಾಲ್ವರು ಭಾರತೀಯರು ಸೇರಿ ಮೃತರ ಸಂಖ್ಯೆ 68ಕ್ಕೆ ಏರಿಕೆ, ಇಂದು ರಾಷ್ಟ್ರೀಯ ಶೋಕಾಚರಣೆ

    Nepal Plane Crashː ನಾಲ್ವರು ಭಾರತೀಯರು ಸೇರಿ ಮೃತರ ಸಂಖ್ಯೆ 68ಕ್ಕೆ ಏರಿಕೆ, ಇಂದು ರಾಷ್ಟ್ರೀಯ ಶೋಕಾಚರಣೆ

    ಕಠ್ಮಂಡು: ನೆರೆರಾಷ್ಟ್ರ ನೇಪಾಳದಲ್ಲಿ (Nepal) ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ (Nepal Plane Crash) ನಾಲ್ವರು ಭಾರತೀಯರು ಸೇರಿದಂತೆ ಒಟ್ಟು ಮೃತಪಟ್ಟವರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ. ಮೃತರಿಗೆ ಸಂತಾಪ ಸೂಚಿಸಲು ಜನವರಿ 16ರಂದು ನೇಪಾಳದಲ್ಲಿ ರಾಷ್ಟ್ರೀಯ ಶೋಕದಿನ ಆಚರಿಸಲಾಗುತ್ತಿದೆ.

    ಯೇತಿ ಏರ್‌ಲೈನ್ಸ್‌ನ (Yeti Airlines) ಈ ವಿಮಾನದಲ್ಲಿ ನಾಲ್ವರು ಸಿಬ್ಬಂದಿ, ಐವರು ಭಾರತೀಯರು, 10 ವಿದೇಶಿಗರು ಸೇರಿ 72 ಜನ ಪ್ರಯಾಣಿಕರಿದ್ದರು. ದುರಂತದಲ್ಲಿ ಐವರಲ್ಲಿ ನಾಲ್ವರು ಭಾರತೀಯರು ಸೇರಿ 68 ಜನ ಸಾವನ್ನಪ್ಪಿದ್ದಾರೆ. ಓರ್ವ ಭಾರತೀಯ ಪತ್ತೆಯಾಗಿಲ್ಲ. ಇದರಲ್ಲಿ 9 ಮಕ್ಕಳು ಕೂಡ ಇದ್ದರು ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ಮತ್ತೆ ರಷ್ಯಾ ಕ್ಷಿಪಣಿ ದಾಳಿ – 12 ಮಂದಿ ಸಾವು

    ಇಬ್ಬರು ನೇಪಾಳಿಗರು ಜೀವನ್ಮರಣದ ಹೋರಾಟ ನಡೆಸ್ತಿದ್ದು, ಇಬ್ಬರ ಶವ ಪತ್ತೆಯಾಗಿಲ್ಲ. ರಾಜಧಾನಿ ಕಠ್ಮಂಡುವಿನಿಂದ ಟೇಕಾಫ್ ಆದ ಯೇತಿ ಏರ್‌ಲೈನ್ಸ್‌ ವಿಮಾನ ಪೋಖ್ರಾದಲ್ಲಿ ಲ್ಯಾಂಡಿಂಗ್ 2 ಕಿ.ಮೀ. ದೂರ ಇರುವಾಗ ಪತನವಾಗಿದೆ. 2 ನಿಲ್ದಾಣಗಳ ನಡುವೆ ಒಟ್ಟು 25 ನಿಮಿಷಗಳ ಪ್ರಯಾಣವಾಗಿದ್ದು, 20 ನಿಮಿಷಗಳ ಪ್ರಯಾಣ ಮಾಡಿದ್ದ ವಿಮಾನ ಲ್ಯಾಂಡಿಂಗ್ ಗೆ 5 ನಿಮಿಷ ಬಾಕಿ ಇರುವಾಗ ರನ್‌ವೇನಲ್ಲಿ ವಿಮಾನ ಪತನಗೊಂಡಿದೆ.

    ಈ ವಿಮಾನದಲ್ಲಿ ಒಟ್ಟು 53 ನೇಪಾಳ, 5 ಭಾರತ, 4 ರಷ್ಯಾ, 2 ಕೊರಿಯಾ, ಅರ್ಜೆಂಟೀನಾ, ಆಸ್ಟ್ರೇಲಿಯಾ, ಐರ್ಲೆಂಡ್ ಹಾಗೂ ಫ್ರಾನ್ಸ್ನ ತಲಾ ಒಬ್ಬರು ಪ್ರಜೆಗಳು ದುರ್ಮರಣಕ್ಕೀಡಾಗಿದ್ದಾರೆ. ಭಾರತೀಯರಾದ ಅಭಿಷೇಕ್ ಕುಶ್ವಾಹ, ಬಿಶಾಲ್ ಶರ್ಮಾ, ಅನಿಲ್ ಕುಮಾರ್ ರಾಜ್‌ಭರ್ , ಸೋನು ಜೈಸ್ವಾಲ್, ಸಂಜಯ್ ಜೈಸ್ವಾಲ್ ಸಜೀವ ದಹನಗೊಂಡಿದ್ದಾರೆ. ಘಟನೆಗೆ ನಿಖರ ಕಾರಣ ಏನು ಎನ್ನುವುದು ತಿಳಿದುಬಂದಿಲ್ಲ. ಇದನ್ನು ಅರಿಯುವ ಪ್ರಯತ್ನವೂ ನಡೆದಿದೆ. ತಾಂತ್ರಿಕ ಕಾರಣವಾ ಅಥವಾ ಪೈಲಟ್ ನಿರ್ಲಕ್ಷö್ಯವಾ ಅನ್ನೋದು ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: Nepal Plane Crashː 32 ಮೃತದೇಹ ಹೊರಕ್ಕೆ – ತುರ್ತು ಸಭೆ ಕರೆದ ನೇಪಾಳ ಸರ್ಕಾರ

    ಘಟನಾ ಸ್ಥಳಕ್ಕೆ ಪ್ರಧಾನಿ ಪುಷ್ಪ ಕಮಲ್ ದಹಾಲ್ ಮತ್ತು ಗೃಹ ಸಚಿವ ರಬಿ ಲಮಿಚಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ವಿಮಾನ ಸಂಚಾರ ಬಂದ್ ಮಾಡಲಾಗಿದೆ. ನೇಪಾಳದಲ್ಲಿ 8 ತಿಂಗಳ ಅಂತರದಲ್ಲಿ 2ನೇ ಹಾಗೂ 30 ವರ್ಷಗಳಲ್ಲಿ ಅತಿದೊಡ್ಡ ದುರಂತ ಇದಾಗಿದೆ. ಮೃತರಿಗೆ ಸಂತಾಪ ಸೂಚಿಸಲು ಜನವರಿ 16ರಂದು ನೇಪಾಳ ಸರ್ಕಾರ ರಾಷ್ಟ್ರೀಯ ಶೋಕಾಚರಣೆ ದಿನವನ್ನಾಗಿ ಘೋಷಣೆ ಮಾಡಿದೆ. ಪ್ರಯಾಣದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Nepal Plane Crashː 32 ಮೃತದೇಹ ಹೊರಕ್ಕೆ – ತುರ್ತು ಸಭೆ ಕರೆದ ನೇಪಾಳ ಸರ್ಕಾರ

    Nepal Plane Crashː 32 ಮೃತದೇಹ ಹೊರಕ್ಕೆ – ತುರ್ತು ಸಭೆ ಕರೆದ ನೇಪಾಳ ಸರ್ಕಾರ

    ಕಠ್ಮಂಡು: ಐವರು ಭಾರತೀಯರು ಸೇರಿ 72 ಜನರಿದ್ದ ವಿಮಾನವು ನೇಪಾಳದ ಪೋಖ್ರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇನಲ್ಲೇ ಪತನಗೊಂಡಿದ್ದು, 32 ಮಂದಿ ಮೃತದೇಹಗಳನ್ನ ಹೊರಕ್ಕೆ ತೆಗೆಯಲಾಗಿದೆ.

    ವಿಮಾನದಲ್ಲಿ 68 ಪ್ರಯಾಣಿಕರು ಮತ್ತು ನಾಲ್ಕು ಸಿಬ್ಬಂದಿ ಪ್ರಯಾಣಿಸುತ್ತಿದ್ದ ಯೇತಿ ಏರ್‌ಲೈನ್ಸ್ ವಿಮಾನವು ಇಲ್ಲಿನ ಹಳೆಯ ವಿಮಾನ ನಿಲ್ದಾಣ ಹಾಗೂ ಪೋಖ್ರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಪತನಗೊಂಡಿದೆ. ವಿಮಾನ ಪತನದ ಸ್ಥಳದಲ್ಲಿ 32 ಮಂದಿಯ ಮೃತದೇಹಗಳನ್ನ ಹೊರತೆಗೆಯಲಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ನಂದು- ಜಶ್ವಂತ್ ಬ್ರೇಕಪ್‌ಗೆ ಕಾರಣವಾದ್ರಾ ಸಾನ್ಯ ಅಯ್ಯರ್?

    ವಿಮಾನವು ರನ್‌ವೇಗೆ ಅಪ್ಪಳಿಸಿದ್ದು, ಅದರ ರಭಸಕ್ಕೆ ಕೂಡಲೇ ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ. ಮುಗಿಲೆತ್ತರ ಚಿಮ್ಮುತ್ತಿದ್ದ ಅಗ್ನಿ ಜ್ವಾಲೆಗಳನ್ನು ನಂದಿಸಲು ರಕ್ಷಣಾ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ರಕ್ಷಣಾ ಕಾರ್ಯಚರಣೆ ಮುಕ್ತಾಯವಾಗುವವರೆಗೂ ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಸಿಬ್ಬಂದಿ ಸೇರಿ 72 ಜನರಿದ್ದ ವಿಮಾನ ನೇಪಾಳದಲ್ಲಿ ಪತನ – ಹೊತ್ತಿ ಉರಿದ ಫ್ಲೈಟ್‌

    ಈ ವಿಮಾನದಲ್ಲಿ 53 ಮಂದಿ ನೇಪಾಳಿಗರು, ಐವರು ಭಾರತೀಯರು, ನಾಲ್ವರು ರಷ್ಯನ್ನರು, ಇಬ್ಬರು ಕೊರಿಯನ್ಸ್‌, ಅರ್ಜೆಂಟೀನಿಯಾ ಹಾಗೂ ಐರಿಶ್‌ ದೇಶದ ಒಬ್ಬೊಬ್ಬರು ಪ್ರಯಾಣಿಸುತ್ತಿದ್ದರು.

    ತುರ್ತು ಕ್ಯಾಬಿನೆಟ್ ಸಭೆ: ಪೋಖ್ರಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ವಿಮಾನ ಅಪಘಾತ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರ ತುರ್ತು ಕ್ಯಾಬಿನೆಟ್ ಸಭೆ ಕರೆದಿದೆ. ರಕ್ಷಣಾ ಕಾರ್ಯಚರಣೆ ಬಗ್ಗೆ ಚರ್ಚೆಗೆ ತಕ್ಷಣವೇ ಬರುವಂತೆ ಸೂಚನೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೆರೆಯ ನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ – ಉತ್ತರಾಖಂಡದಲ್ಲೂ ಕಂಪಿಸಿದ ಅನುಭವ

    ನೆರೆಯ ನೇಪಾಳದಲ್ಲಿ 5.3 ತೀವ್ರತೆಯ ಭೂಕಂಪ – ಉತ್ತರಾಖಂಡದಲ್ಲೂ ಕಂಪಿಸಿದ ಅನುಭವ

    ಕಠ್ಮಂಡು: ನೆರೆಯ ದೇಶ ನೇಪಾಳದಲ್ಲಿ (Nepal) ಬುಧವಾರ ಮುಂಜಾನೆ 4.7 ಹಾಗೂ 5.3 ತೀವ್ರತೆಯ 2 ಬಾರಿ ಭೂಕಂಪನ (Earthquake) ಸಂಭವಿಸಿದೆ ಎಂದು ನೇಪಾಳದ ಭೂಕಂಪ ಮಾನಿಟರಿಂಗ್ ಹಾಗೂ ಸಂಶೋಧನಾ ಕೇಂದ್ರ (NEMRC) ತಿಳಿಸಿದೆ.

    ನೇಪಾಳದ ಬಾಗ್ಲುಂಗ್ ಜಿಲ್ಲೆಯಲ್ಲಿ ಸ್ಥಳೀಯ ಕಾಲಮಾನ 01:23 ಹಾಗೂ 02:07 ರ ವೇಳೆಗೆ ಭೂಕಂಪ ಸಂಭವಿಸಿದೆ. ಇದೇ ವೇಳೆ ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚಾರ್ಮಾಡಿ ಘಾಟ್‌ನಲ್ಲಿ ಕಾಡ್ಗಿಚ್ಚು- ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

    ಈ ಬಗ್ಗೆ ಟ್ವೀಟ್ ಮಾಡಿರುವ ಎನ್‌ಇಎಂಆರ್‌ಸಿ, 01:23ಕ್ಕೆ ಬಾಗ್ಲುಂಗ್ ಜಿಲ್ಲೆಯ ಅಧಿಕಾರಿ ಚೌರ್ ಬಳಿ 4.7 ತೀವ್ರತೆಯ ಭೂಕಂಪ ಸಂಭವಿಸಿದೆ. 02:07 ವೇಳೆಗೆ ಬಾಂಗ್ಲುಂಗ್ ಜಿಲ್ಲೆಯ ಖುಂಗಾ ಬಳಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.

    ಭೂಕಂಪದಿಂದಾಗಿ ಸದ್ಯ ಎಲ್ಲೂ ಸಾವು-ನೋವುಗಳು ಹಾಗೂ ಆಸ್ತಿ-ಪಾಸ್ತಿ ನಷ್ಟವಾಗಿರುವ ವರದಿಯಾಗಿಲ್ಲ. ಈ ಭೂಕಂಪಗಳಿಂದಾಗಿ ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಜನರು ಮೊದಲಿಗಿಂತಲೂ ಹೆಚ್ಚು ಭಯಭೀತರಾಗಿದ್ದಾರೆ. ಏಕೆಂದರೆ ಡಿಸೆಂಬರ್ 24 ರಂದು ಇಲ್ಲಿ ನಡೆದ ಭೂಕಂಪದಿಂದಾಗಿ ನಗರದ ಅನೇಕ ಮನೆಗಳು ಬಿರುಕು ಬಿಟ್ಟು ಧರೆಗುರುಳಿದ್ದವು. ಜನರು ಘಟನೆಯಿಂದಾಗಿ ಬೀದಿಗಿಳಿದಿದ್ದರು. ಇದನ್ನೂ ಓದಿ: ಆರ್ಥಿಕ ಸಮಸ್ಯೆ ಇದ್ದು, ಇನ್ಮುಂದೆ ಮಕ್ಕಳು ಮಾಡಲ್ಲ ಎಂದ 12 ಪತ್ನಿ, 102 ಮಕ್ಕಳನ್ನು ಹೊಂದಿದ ವ್ಯಕ್ತಿ!

    Live Tv
    [brid partner=56869869 player=32851 video=960834 autoplay=true]

  • 3ನೇ ಬಾರಿ ನೇಪಾಳದ ಪ್ರಧಾನಿ ಪಟ್ಟಕ್ಕೇರಿದ ಪುಷ್ಪ ಕಮಲ್ ದಹಾಲ್ ಪ್ರಚಂಡ

    3ನೇ ಬಾರಿ ನೇಪಾಳದ ಪ್ರಧಾನಿ ಪಟ್ಟಕ್ಕೇರಿದ ಪುಷ್ಪ ಕಮಲ್ ದಹಾಲ್ ಪ್ರಚಂಡ

    ಕಠ್ಮಂಡು: ಸಿಪಿಎನ್-ಮಾವೋವಾದಿ ಸೆಂಟರ್ (CPNMC) ಅಧ್ಯಕ್ಷ ಪುಷ್ಪ ಕಮಲ್ ದಹಾಲ್ ಪ್ರಚಂಡ (Pushpa Kamal Dahal Prachanda) ನೇಪಾಳದ (Nepal) ನೂತನ ಪ್ರಧಾನಿಯಾಗಿ (Prime Minister) ನೇಮಕಗೊಂಡಿದ್ದಾರೆ. ಈ ಮೂಲಕ 3 ಬಾರಿ ನೇಪಾಳದ ಪ್ರಧಾನಿ ಪಟ್ಟಕ್ಕೇರಿದಂತಾಗಿದೆ.

    ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ನೂತನ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರನ್ನು ಇಂದು ನೇಮಕ ಮಾಡಿದ್ದಾರೆ. ಪ್ರಚಂಡ ಅವರು ಪಕ್ಷೇತರ ಸಂಸದರು ಸೇರಿದಂತೆ 169 ಸಂಸದರ ಬೆಂಬಲವಿದೆ ಎಂದು ತಿಳಿಸಿದ ಬಳಿಕ ಪ್ರಧಾನಿಯಾಗಿ ಆಯ್ಕೆ ಮಾಡಲು ಅಧ್ಯಕ್ಷರು ಒಪ್ಪಿದರು. ಇದಕ್ಕೂ ಮೊದಲು ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ನೇತೃತ್ವದಲ್ಲಿ ಸಿಪಿಎನ್-ಯುಎಂಎಲ್, ಸಿಪಿಎನ್-ಎಂಸಿ, ರಾಷ್ಟ್ರೀಯ ಸ್ವತಂತ್ರ ಪಕ್ಷ (RSP) ಮತ್ತು ಇತರ ಪಕ್ಷಗಳೊಂದಿಗೆ ಮಹತ್ವದ ಸಭೆ ನಡೆಯಿತು. ಇದರಲ್ಲಿ ಪ್ರಚಂಡ ನೇತೃತ್ವದಲ್ಲಿ ಸರ್ಕಾರ ರಚಿಸಲು ಒಪ್ಪಿಗೆ ನೀಡಿದ ಬಳಿಕ ಮೈತ್ರಿ ಸರ್ಕಾರ ರಚನೆಯಾಗಿದೆ. ಇದನ್ನೂ ಓದಿ: ಅಟಲ್ ಬಿಹಾರಿ ವಾಜಪೇಯಿ ರೋಲ್‌ನಲ್ಲಿ ಪಂಕಜ್ ತ್ರಿಪಾಠಿ: ಫಸ್ಟ್ ಲುಕ್ ಔಟ್

    ಪ್ರಚಂಡ ನೇತೃತ್ವದಲ್ಲಿ ಸರ್ಕಾರ ರಚನೆಗೂ ಮುನ್ನ ಒಪ್ಪಂದವೊಂದು ನಡೆದಿದೆ. ಮೈತ್ರಿ ಸರ್ಕಾರದ ಒಪ್ಪಂದದ ಪ್ರಕಾರ ಮುಂದಿನ ಎರಡೂವರೆ ವರ್ಷಗಳ ಕಾಲ ಪ್ರಚಂಡ ಪ್ರಧಾನಿಯಾದರೆ, ಮುಂದಿನ ಎರಡೂವರೆ ವರ್ಷ ಸಿಪಿಎನ್-ಯುಎಂಎಲ್ ನಾಯಕ ಮಾಜಿ ಪ್ರಧಾನಿ ಒಲಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಇದನ್ನೂ ಓದಿ: ನಮಗೆ ಜೀವ ನೀಡುವುದೂ ಗೊತ್ತು.. ಜೀವ ತೆಗೆಯುವುದೂ ಗೊತ್ತು – ಪ್ರಜ್ಞಾ ಸಿಂಗ್‌ ಪ್ರಚೋದನಕಾರಿ ಭಾಷಣ

    ಪ್ರಚಂಡ ನೇತೃತ್ವದ ಹೊಸ ಸರ್ಕಾರವು 275 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿನ್ಸ್‌ನಲ್ಲಿ 169 ಸದಸ್ಯರ ಬೆಂಬಲವನ್ನು ಹೊಂದಿದೆ. ಇದರಲ್ಲಿ ಸಿಪಿಎನ್-ಯುಎಂಎಲ್‍ನ 78, ಸಿಪಿಎನ್-ಎಂಸಿಯಿಂದ 32, ಆರ್‌ಎಸ್‌ಪಿಯ 20, ಆರ್‌ಪಿಪಿಯಿಂದ 14, ಜೆಎಸ್‍ಪಿಯಿಂದ 12, ಆರು ಜನ್ಮತ್ ಮತ್ತು ಸಿವಿಲ್ ಲಿಬರೇಶನ್ ಪಾರ್ಟಿಯ ಮೂವರು ಸದಸ್ಯರೊಂದಿಗೆ ಸ್ವತಂತ್ರ ಸಂಸದರೂ ಸೇರಿದ್ದಾರೆ. ಪ್ರಚಂಡ ಮತ್ತು ಓಲಿ ಇಬ್ಬರು ಸೇರಿ ಮೈತ್ರಿ ಸರ್ಕಾರ ರಚಿಸಿದ್ದು, ಪ್ರಚಂಡ ಅವರನ್ನು ಮೊದಲ ಎರಡೂವರೆ ವರ್ಷಗಳ ಅವಧಿಯಲ್ಲಿ ಪ್ರಧಾನಿ ಮಾಡಲು ಓಲಿ ಒಪ್ಪಿಗೆ ನೀಡಿ ಬಳಿಕ ಮುಂದಿನ ಎರಡೂವರೆ ವರ್ಷಗಳ ಕಾಲ ಪ್ರಧಾನಿಯಾಗಿ ಅಧಿಕಾರಕ್ಕೇರುವ ಇರಾದೆಯಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲಿವ್ ಇನ್ ರಿಲೇಶನ್‌ಶಿಪ್‍ನಲ್ಲಿದ್ದ ಪ್ರಿಯತಮೆಯನ್ನು ಕೊಲೆಗೈದ ಪ್ರಿಯಕರ

    ಲಿವ್ ಇನ್ ರಿಲೇಶನ್‌ಶಿಪ್‍ನಲ್ಲಿದ್ದ ಪ್ರಿಯತಮೆಯನ್ನು ಕೊಲೆಗೈದ ಪ್ರಿಯಕರ

    ಬೆಂಗಳೂರು: ಲಿವ್ ಇನ್ ರಿಲೇಶನ್‌ಶಿಪ್‍ನಲ್ಲಿದ್ದ (Live In Relationship) ಪ್ರೇಮಿಗಳ ನಡುವೆ ಜಗಳ ಶುರುವಾಗಿ ಪ್ರಿಯತಮೆಯ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ನೇಪಾಳ (Nepal) ಮೂಲದ ಕೃಷ್ಣಕುಮಾರಿ (23) ಕೊಲೆಯಾದ ಯುವತಿ ಹಾಗೂ ನೇಪಾಳ ಮೂಲದ ಸಂತೋಷ್ ದಾಮಿ (27) ಕೊಲೆ ಮಾಡಿದ ಆರೋಪಿ. ಕೃಷ್ಣ ಕುಮಾರಿ ಹೊರಮಾವು ಯೂನಿಸೆಕ್ಸ್ ಸ್ಪಾದಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದಳು. ಸಂತೋಷ್ ಟಿ.ಸಿ ಪಾಳ್ಯದಲ್ಲಿ ಬಾರ್ಬರ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ.

    ಈ ಇಬ್ಬರಿಗೂ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ಅದಾದ ಬಳಿಕ ಕೃಷ್ಣಕುಮಾರಿ ಹಾಗೂ ಸಂತೋಷ್ ಇಬ್ಬರು ಸೇರಿ ರಾಮೂರ್ತಿನಗರದ ಟಿಸಿಪಾಳ್ಯದಲ್ಲಿ ಬಾಡಿಗೆ ರೂಮ್‍ನ್ನು ಪಡೆದಿದ್ದಾರೆ. ಆ ಬಳಿಕ ಅದೇ ಬಾಡಿಗೆ ರೂಂನಲ್ಲೇ ಇಬ್ಬರೂ ವಾಸಿಸುತ್ತಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ ರೌಡಿಗಳ ಪಕ್ಷ.. ಡಿಕೆಶಿ ತಿಹಾರ್‌ ಜೈಲಿಗೆ ಹೋಗಿ ಬಂದವರು – ಈಶ್ವರಪ್ಪ ತಿರುಗೇಟು

    crime

    ಇಂದು ಬೆಳಗ್ಗೆ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಜಗಳ ತಾರಕ್ಕೇರಿದ್ದು ಕೃಷ್ಣಕುಮಾರಿಯನ್ನು ಸಂತೋಷ್ ದಾಮಿ ಕೊಲೆ ಮಾಡಿದ್ದಾನೆ. ಘಟನೆ ಸಂಬಂಧ ರಾಮೂರ್ತಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಒಂದು ವರ್ಷದ ಹಿಂದೆ ಈ ಇಬ್ಬರೂ ಬೆಂಗಳೂರಿಗೆ ಬಂದಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಇದನ್ನೂ ಓದಿ: ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಜೀವ ಬೆದರಿಕೆ

    Live Tv
    [brid partner=56869869 player=32851 video=960834 autoplay=true]

  • ದೆಹಲಿಯಲ್ಲಿ ಪ್ರಬಲ ಭೂಕಂಪನ – ಬೆಚ್ಚಿಬಿದ್ದ ಜನ

    ದೆಹಲಿಯಲ್ಲಿ ಪ್ರಬಲ ಭೂಕಂಪನ – ಬೆಚ್ಚಿಬಿದ್ದ ಜನ

    ನವದೆಹಲಿ: ರಾಷ್ಟ್ರ ರಾಜಧಾನಿ ಹಾಗೂ ಅಕ್ಕಪಕ್ಕದ ನಗರಗಳಲ್ಲಿ ಇಂದು (ನ.12) ರಾತ್ರಿ 8 ಗಂಟೆ ಸುಮಾರಿಗೆ ಭೂಮಿ ಕಂಪಿಸಿದ (Earthquake) ಅನುಭವವಾಗಿದ್ದು, ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

    ಇದು ವಾರದಲ್ಲಿ 2ನೇ ಬಾರಿಗೆ ಭೂಕಂಪ ಸಂಭವಿಸಿದೆ. ದೆಹಲಿಯ ನೋಯ್ಡಾ (Noida) ಹಾಗೂ ಗುರುಗ್ರಾಮ್‌ನಲ್ಲಿ (Gurugram) ಭೂಮಿ ಕಂಪಿಸಿರುವುದಾಗಿ ವರದಿಯಾಗಿದೆ. ಆದರೆ ಭೂಕಂಪನದ ತೀವ್ರತೆಯ ಅಂದಾಜು ತಕ್ಷಣವೇ ತಿಳಿದುಬಂದಿಲ್ಲ. ಇದನ್ನೂ ಓದಿ: ಡೇರ್ ಡೆವಿಲ್ ಸ್ಟಂಟ್ ಮಾಡಿದ ನಟ ಪವನ್ – ಕೇಸ್ ದಾಖಲಿಸಿದ ಪೊಲೀಸರು

    ಇದಕ್ಕೂ ಮುನ್ನ ಮಂಗಳವಾರ ನೇಪಾಳದಲ್ಲಿ ಸರಿಸುಮಾರು 6.3 ತೀವ್ರತೆಯಷ್ಟು ಭೂಕಂಪ ಸಂಭವಿಸಿತ್ತು. ಇದರಿಂದ 6 ಮಂದಿ ಮೃತಪಟ್ಟು, 8 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಸ್ಟೋನ್ ತೆಗೆಯುವ ನೆಪದಲ್ಲಿ ರೋಗಿಯ ಕಿಡ್ನಿಯನ್ನೇ ತೆಗೆದ್ರು

    ಇದಾದ 2 ಗಂಟೆಯ ನಂತರ ದೆಹಲಿಯಲ್ಲೂ ಪ್ರಬಲ ಭೂಕಂಪನ ಉಂಟಾಗಿತ್ತು. ಸುಮಾರು 10 ಕಿ.ಮೀ ಆಳದ ವರೆಗೆ ಭೂಮಿ ಕಂಪಿಸಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (National Center for Seismology) ತಿಳಿಸಿತ್ತು. ಇದೀಗ 2ನೇ ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನೇಪಾಳದಲ್ಲಿ ಭೂಕಂಪ- ಮನೆ ಕುಸಿದು 6 ಮಂದಿ ದುರ್ಮರಣ

    ಕಠ್ಮಂಡು: ನೇಪಾಳ (Nepala) ದ ದೋಟಿ ಜಿಲ್ಲೆಯಲ್ಲಿ ಭೂಕಂಪ (Earthquake) ದಿಂದ ಮನೆ ಕುಸಿದು ಆರು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.

    ನೇಪಾಳದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ. ಮಧ್ಯರಾತ್ರಿ 1.12ರ ಸುಮಾರಿಗೆ ಭೂಮಿ ಕಂಪನವಾಗಿದೆ. ಈನ್ನು ಮನೆ ಕುಸಿದು ಮೃತಪಟ್ಟವರ ಗುರುತು ಪತ್ತೆಯಾಗಿಲ್ಲ.

    ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ (EMSC) ಈ ಹಿಂದೆ ಭೂಕಂಪದ ತೀವ್ರತೆಯನ್ನು 5.6 ಎಂದು ಗುರುತಿಸಿತ್ತು. ನೇಪಾಳದಲ್ಲಿ ಕಳೆದ 24 ಗಂಟೆಯಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ.

    ಇತ್ತ ದೆಹಲಿ, ಎನ್‍ಸಿಆರ್ ವ್ಯಾಪ್ತಿಯ 2 ಕಡೆ ಕೂಡ ಭೂಮಿ ನಡುಗಿದ ಅನುಭವವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನೇಪಾಳದ ಮನೆಯಲ್ಲೇ ಶೂಟೌಟ್ – ISI ಏಜೆಂಟ್, ದೇಶದ ದೊಡ್ಡ ನಕಲಿ ನೋಟು ವಿತರಕನ ಹತ್ಯೆ

    ನೇಪಾಳದ ಮನೆಯಲ್ಲೇ ಶೂಟೌಟ್ – ISI ಏಜೆಂಟ್, ದೇಶದ ದೊಡ್ಡ ನಕಲಿ ನೋಟು ವಿತರಕನ ಹತ್ಯೆ

    ಕಠ್ಮಂಡು: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‍ಐ)ನ ಏಜೆಂಟ್ (ISI Agent) ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ನೇಪಾಳದ (Nepal) ಕಠ್ಮಂಡುವಿನಲ್ಲಿದ್ದ (Kathmandu) ಆತನ ಅಡಗುತಾಣದ ಹೊರಗೆ ಗುಂಡಿಕ್ಕಿ ಸೋಮವಾರ ಕೊಲ್ಲಲಾಗಿದೆ. ಈತ ಭಾರತದಲ್ಲಿ ನಕಲಿ ನೋಟುಗಳನ್ನು ಅತಿ ಹೆಚ್ಚು ಪೂರೈಕೆ ಮಾಡುತ್ತಿದ್ದ ವಿತರಕ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

    ಮೃತ ಐಎಸ್‍ಐ ಏಜೆಂಟ್ ಅನ್ನು ಲಾಲ್ ಮೊಹಮ್ಮದ್ (Laal Mohammad) (55) ಅಲಿಯಾಸ್ ಮೊಹಮ್ಮದ್ ದರ್ಜಿ (Alias Mohammad Darji) ಎಂದು ಗುರುತಿಸಲಾಗಿದೆ. ಐಎಸ್‍ಐ ಸೂಚನೆ ಮೇರೆಗೆ ಲಾಲ್ ಮೊಹಮ್ಮದ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುದ್ರಣವಾಗುತ್ತಿದ್ದ ಭಾರತದ ನಕಲಿ ಕರೆನ್ಸಿಗಳನ್ನು ನೇಪಾಳಕ್ಕೆ ಸಾಗಿಸಿ ನಂತರ ಭಾರತದಲ್ಲಿ ತನ್ನ ಏಜೆಂಟರಿಗೆ ನೀಡುತ್ತಿದ್ದ. ಇದನ್ನೂ ಓದಿ: ಕೈಯಲ್ಲಿ ಮಚ್ಚು ಹಿಡಿದು ಫುಟ್‍ಬೋರ್ಡ್ ಮೇಲೆ ವಿದ್ಯಾರ್ಥಿ ಪುಂಡಾಟ

    CRIME 2

    ಲಾಲ್ ಮೊಹಮ್ಮದ್ ಐಎಸ್‍ಐಗೆ ಲಾಜಿಸ್ಟಿಕ್ಸ್ ಬೆಂಬಲದೊಂದಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡಿ-ಗ್ಯಾಂಗ್‍ನೊಂದಿಗೆ (Dawood Ibrahim’s D-Gang) ಸಂಪರ್ಕ ಹೊಂದಿದ್ದಲ್ಲದೇ ಸಹಾಯ ಕೂಡ ಮಾಡುತ್ತಿದ್ದನು. ಇದರ ಜೊತೆಗೆ ಐಎಸ್‍ಐ ಏಜೆಂಟ್‍ಗಳಿಗೂ ಆಶ್ರಯ ನೀಡಿದ್ದನು. ಇದನ್ನೂ ಓದಿ: 3 ದಿನಗಳ ಹಿಂದೆ ಸಭೆ – 6 ಕಂಟ್ರೋಲ್‌ ರೂಂ – PFI, SDPI ಮೇಲೆ NIA, ED ದಾಳಿಯ ಇನ್‌ಸೈಡ್‌ ನ್ಯೂಸ್‌

    ಇದೀಗ ಲಾಲ್ ಮೊಹಮ್ಮದ್ ಗುಂಡಿಕ್ಕಿ ಹತ್ಯೆಗೈದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಕಠ್ಮಂಡುವಿನ ಗೊತಾಟರ್ ಪ್ರದೇಶದಲ್ಲಿರುವ ತನ್ನ ಮನೆಯ ಮುಂದೆ ಐಷಾರಾಮಿ ಕಾರಿನಲ್ಲಿ ಬಂದ ಲಾಲ್ ಮೊಹಮ್ಮದ್ ಕೆಳಗಿಳಿಯುತ್ತಿದ್ದಂತೆ ಇಬ್ಬರು ಹಂತಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಕಾರಿನ ಹಿಂದೆ ಬಚ್ಚಿಟ್ಟಿಕೊಳ್ಳಲು ಲಾಲ್ ಮೊಹಮ್ಮದ್ ಪ್ರಯತ್ನಿಸಿದರೂ ದುಷ್ಕರ್ಮಿಗಳು ಬಿಟ್ಟುಬಿಡದೇ ಗುಂಡಿನ ದಾಳಿ ನಡೆಸಿದ್ದಾರೆ.

    ಇದೇ ವೇಳೆ ಮೊಹಮ್ಮದ್ ಅವರ ಮಗಳು ತಮ್ಮ ತಂದೆಯನ್ನು ರಕ್ಷಿಸಲು ಮನೆಯ ಮೊದಲನೇ ಮಹಡಿಯಿಂದ ಜಿಗಿಯುತ್ತಾರೆ. ಆದರೆ ಅಷ್ಟರಲ್ಲಿ ಆರೋಪಿಗಳು ಮೊಹಮ್ಮದ್‍ನನ್ನು ಕೊಂದು ಎಸ್ಕೇಪ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]