ಲಕ್ನೋ: ಎಸ್‌ಯುವಿ ಕಾರು (Car) ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಕಂದಕಕ್ಕೆ ಉರುಳಿ ಬಿದ್ದಿದ್ದು, ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ನೇಪಾಳಿ ಪ್ರಜೆಗಳು (Nepali Citizens) ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ (Uttar Pradesh) ಶ್ರಾವಸ್ತಿ ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ ಸಂಜೆ ಘಟನೆ ನಡೆದಿದ್ದು, ಎಸ್‌ಯುವಿ (SUV) ಕಾರು ಚಾಲಕ ರಸ್ತೆಯಲ್ಲಿದ್ದ ಜಾನುವಾರುಗಳಿಗೆ ಅಪಘಾತ ತಪ್ಪಿಸಲು ಹೋಗಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೃತಪಟ್ಟವರು ನೇಪಾಳದ ನೇಪಾಳಗಂಜ್ ನಗರದ ತ್ರಿಭುವನ್ ಚೌಕ್ ಪ್ರದೇಶದ ನಿವಾಸಿಗಳು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಣಿಪುರದಲ್ಲಿ ನಿಲ್ಲದ ಸಂಘರ್ಷ – ಕಳೆದ 24 ಗಂಟೆಗಳಲ್ಲಿ ಆರು ಮಂದಿ ಸಾವು
ಮೃತರನ್ನು ನಿಲಾಂಶ್ (36), ನೀತಿ (20), ದೀಪಿಕಾ (35), ವೈಭವ್ ಅಲಿಯಾಸ್ ಸೋನು (36) ಎಂದು ಗುರುತಿಸಲಾಗಿದ್ದು, ಅಪಘಾತದಲ್ಲಿ ಮೃತಪಟ್ಟ ಅಪ್ರಾಪ್ತ ಮಕ್ಕಳ ಗುರುತು ಪತ್ತೆಯಾಗಿಲ್ಲ. ಇದನ್ನೂ ಓದಿ: ಪತಿ ಲಂಚ ಪಡೆದಿದ್ದಕ್ಕೆ ಜೈಪುರ ಮೇಯರ್ ವಜಾ
ಕಾಠ್ಮಂಡು: ನೇಪಾಳದ (Nepal) ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಭಾರತ (India) 84 ವಾಹನಗಳನ್ನು ಭಾನುವಾರ ಉಡಗೊರೆಯಾಗಿ ನೀಡಿದೆ.
ನೇಪಾಳದ ಸಚಿವ ಅಶೋಕ್ ಕುಮಾರ್ ರೈ ಅವರ ಸಮ್ಮುಖದಲ್ಲಿ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ್ 34 ಅಂಬುಲೆನ್ಸ್‌ಗಳು (Ambulances) ಮತ್ತು 50 ಶಾಲಾ ಬಸ್‍ಗಳನ್ನು (School Bus) ಸಂಸ್ಥೆಗಳ ಪ್ರತಿನಿಧಿಗಳಿಗೆ ಹಸ್ತಾಂತರಿಸಿದ್ದಾರೆ.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಸುಧಾರಿಸಲು ಅನುಕೂಲವಾಗಲು ಈ ವಾಹನಗಳನ್ನು ನೀಡಲಾಗಿದೆ. ಈ ವಿಚಾರದಲ್ಲಿ ನೇಪಾಳ ಸರ್ಕಾರದ ಪ್ರಯತ್ನಗಳಿಗೆ ನೆರವಾಗುವುದು ನೇಪಾಳ-ಭಾರತ ಅಭಿವೃದ್ಧಿ ಪಾಲುದಾರಿಕೆ ಕಾರ್ಯಕ್ರಮದಲ್ಲಿ ಒಂದಾಗಿದೆ. ಅದರ ಅಡಿಯಲ್ಲಿ ವಾಹನಗಳನ್ನು ಉಡುಗೊರೆಯಾಗಿ ನೀಡುವುದು ಭಾರತ ಸರ್ಕಾರದ ದೀರ್ಘಕಾಲದ ಸಂಪ್ರದಾಯ ಎಂದು ಶ್ರೀವಾಸ್ತವ್ ಈ ವೇಳೆ ಹೇಳಿದ್ದಾರೆ. ಇದನ್ನೂ ಓದಿ: UPA ಮೈತ್ರಿ ಕೂಟದ ಮಹತ್ವದ ಸಭೆಗೆ ಬೆಂಗಳೂರಿನಲ್ಲಿ ಮುಹೂರ್ತ
ಜನರ ಜೀವನ ಮಟ್ಟವನ್ನು ಉನ್ನತ ಮಟ್ಟಕ್ಕೆ ಏರಿಸುವುದು ಇದರ ಮೂಲ ಉದ್ದೇಶವಾಗಿದೆ. ಈ ಪ್ರಯತ್ನ ನೇಪಾಳದ ಅಭಿವೃದ್ಧಿ ದಾರಿಯಲ್ಲಿ ಸ್ಪಷ್ಟವಾದ ಪ್ರಗತಿಯನ್ನು ತರಲಿದೆ ಎಂದು ಸ್ಥಳೀಯ ಮೇಯರ್ ಹೇಳಿಕೊಂಡಿದ್ದಾರೆ.
ಇದೇ ವೇಳೆ ನೇಪಾಳದಲ್ಲಿ ನಡೆಯುತ್ತಿರುವ ಭಾರತ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಶಿಕ್ಷಣ ಸಚಿವ ರೈ ಶ್ಲಾಘಿಸಿದರು. ಇಂತಹ ಯೋಜನೆಗಳಿಂದ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಉತ್ತಮವಾಗಿರಲು ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಠ್ಮಂಡು: ಐದು ಮಂದಿ ವಿದೇಶಿ ಪ್ರವಾಸಿಗರು ಸೇರಿ ಒಟ್ಟು ಆರು ಮಂದಿ ಪ್ರಯಾಣಿಕರಿದ್ದ ಮನಾಂಗ್ ಹೆಲಿಕಾಪ್ಟರ್ (Manang Helicopter) ನೇಪಾಳದಲ್ಲಿ (Nepal) ನಾಪತ್ತೆಯಾಗಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.
ಸೋಲುಖುಂಬುವಿನಿಂದ (Solukhumbu) ಕಠ್ಮಂಡುವಿಗೆ (Kathmandu) ತೆರಳುತ್ತಿದ್ದ ಹೆಲಿಕಾಪ್ಟರ್, ಬೆಳಗ್ಗೆ 10 ಗಂಟೆಯ ಸುಮಾರಿಗೆ ಕಂಟ್ರೋಲ್ ಟವರ್‌ನೊಂದಿಗೆ ಸಂಪರ್ಕ ಕಡಿತವಾಗಿದೆ. ಈ ಹೆಲಿಕಾಪ್ಟರ್ 5 ಮೆಕ್ಸಿಕನ್ (Mexixcan) ಪ್ರಯಾಣಿಕರು ಮತ್ತು ಓರ್ವ ನೇಪಾಳಿ ಪೈಲೆಟ್ (Pilot) ಅನ್ನು ಒಳಗೊಂಡಿದ್ದು, ಮೌಂಟ್ ಎವರೆಸ್ಟ್ (Mount Everest) ಬಳಿ ನಾಪತ್ತೆಯಾಗಿದೆ ಎಂದು ಕಠ್ಮಂಡು ವಿಮಾನ ನಿಲ್ದಾಣದ ಅಧಿಕಾರಿ ಟೆಕ್‌ನಾಥ್ ಸಿತೌಲಾ ತಿಳಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಹಿಮಾಚಲದಲ್ಲಿ 20 ಮಂದಿ ಬಲಿ – 7 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
ಸೋಲುಖುಂಬುವಿನ ಸುರ್ಕಿಯಿಂದ ರಾಜಧಾನಿ ಕಠ್ಮಂಡುವಿಗೆ ಬೆಳಗ್ಗೆ 9:45ಕ್ಕೆ ಹೆಲಿಕಾಪ್ಟರ್ ಟೇಕಾಫ್ ಆಗಿತ್ತು. ಹೆಲಿಕಾಪ್ಟರ್ 9ಎನ್ ಎಎಮ್‌ವಿ (9N-AMV) ಕರೆ ಚಿಹ್ನೆಯೊಂದಿಗೆ ಸ್ಥಳೀಯ ಸಮಯ ಬೆಳಿಗ್ಗೆ 10:12 ಕ್ಕೆ ರಾಡಾರ್‌ನಿಂದ ಹೊರಬಂದಿತು ಎಂದು ಮಾಹಿತಿ ಅಧಿಕಾರಿ ಜ್ಞಾನೇಂದ್ರ ಭುಲ್ (Gyanendra Bhul) ಹೇಳಿದ್ದಾರೆ. ಇದನ್ನೂ ಓದಿ: ಚಿಪ್ ಘಟಕ ತೆರೆಯಲ್ಲ- ವೇದಾಂತ ಜೊತೆಗಿನ 1.61 ಲಕ್ಷ ಕೋಟಿ ಒಪ್ಪಂದವನ್ನ ರದ್ದುಗೊಳಿಸಿದ ಫಾಕ್ಸ್‌ಕಾನ್
ಕಾಠ್ಮಂಡು: ನೇಪಾಳದ (Nepal) ರಾಜಧಾನಿ ಕಾಠ್ಮಂಡುವಿನಲ್ಲಿರುವ (Kathmandu) ವಿಶ್ವವಿಖ್ಯಾತ ಪಶುಪತಿನಾಥ ದೇವಸ್ಥಾನದಲ್ಲಿ (Pashupatinath Temple) 10 ಕೆಜಿ ಚಿನ್ನ (Gold) ಕಳ್ಳತನವಾಗಿದೆ. ಇದನ್ನು ತನಿಖೆ ನಡೆಸಲು ಅಧಿಕಾರಿಗಳು ದೇವಾಲಯವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಸಾರ್ವಜನಿಕರ ಪ್ರವೇಶಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ಕಳೆದ ವರ್ಷ ಶಿವರಾತ್ರಿ ಹಬ್ಬದ ಆಚರಣೆ ವೇಳೆ ಗರ್ಭಗುಡಿಯಲ್ಲಿರುವ ಶಿವಲಿಂಗದ ಸುತ್ತ 103 ಕೇಜಿ ಚಿನ್ನದ ಜಲಹರಿಯನ್ನು ನಿರ್ಮಿಸಲಾಗಿತ್ತು. ಇದರಲ್ಲಿ 10 ಕೆಜಿ ಚಿನ್ನ ಕಾಣೆಯಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಬೆಂಗಳೂರಿನಲ್ಲಿ ಬೀಳಲಿದೆ ಮಳೆ – ಭಾನುವಾರ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಬೆಂಗಳೂರು: ನಾಯಕ ಸುನೀಲ್ ಚೆಟ್ರಿ ಅವರ ಆರಂಭಿಕ ಗೋಲಿನ ಬಲದಿಂದ ಶನಿವಾರ ನೇಪಾಳ ವಿರುದ್ಧ 2-0 ಗೋಲುಗಳ ಅಂತರದಿಂದ ಭಾರತೀಯ ಫುಟ್ಬಾಲ್ ತಂಡ (Indian Football Team) ಗೆದ್ದು, ಸ್ಯಾಫ್ ಫುಟ್ಬಾಲ್ ಚಾಂಪಿಯನ್‌ಶಿಪ್ (SAFF Championship 2023) ಟೂರ್ನಿಯ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.
ಭಾರತ ಮತ್ತು ನೇಪಾಳ (Nepal Football Team) ತಂಡಗಳ ನಡುವೆ ಪ್ರಬಲ ಪೈಪೋಟಿ ನಡೆದಿತ್ತು. ಫಸ್ಟ್ ಹಾಫ್‌ನಲ್ಲಿ ಇತ್ತಂಡಗಳ ಸಮಬಲ ಪೈಪೋಟಿಯಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಸೆಕೆಂಡ್ ಹಾಫ್‌ನಲ್ಲಿ ನಾಯಕ ಸುನೀಲ್ ಚೆಟ್ರಿ (Sunil Chhetri) ಮ್ಯಾಜಿಕ್‌ನಿಂದ ಮೊದಲ ಗೋಲು ದಾಖಲಾಯಿತು. ಈ ಮೂಲಕ ಚೆಟ್ರಿ 91ನೇ ಅಂತಾರಾಷ್ಟ್ರೀಯ ಗೋಲನ್ನು ದಾಖಲಿಸಿದರು. ಇದಾದ ಕೆಲವೇ ನಿಮಿಷಗಳಲ್ಲಿ ಸಹ ಆಟಗಾರ ಮಹೇಶ್ ಸಿಂಗ್ ಮತ್ತೊಂದು ಗೋಲು ದಾಖಲಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಾಯಕ ಸುನೀಲ್ ಚೆಟ್ರಿ ಹ್ಯಾಟ್ರಿಕ್ ಗೋಲುಗಳನ್ನು ಗಳಿಸುವ ಮೂಲಕ ಮಿಂಚಿದ್ದರು. ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಆಟದಲ್ಲಿ ಅತಿಥೇಯ ತಂಡ ಉತ್ತಮ ಪ್ರದರ್ಶನ ನೀಡಿತ್ತು.
ಪ್ರಭಾಸ್ ನಟನೆಯ ಆದಿಪುರುಷ ಸಿನಿಮಾಗೆ ನೇಪಾಳ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಸೀತೆಯ ಕುರಿತಾದ ಡೈಲಾಗ್ ಅನ್ನು ಪ್ರಶ್ನಿಸಿ ಕಠ್ಮಂಡು ಮೇಯರ್ ಬಲೇನ್ ಶಾ ಕೋರ್ಟ್ ಮೊರೆ ಹೋಗಿದ್ದರು. ಜೊತೆಗೆ ನೇಪಾಳದಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿತ್ತು. ಈ ಬ್ಯಾನ್ ಪ್ರಶ್ನಿಸಿ ಚಿತ್ರತಂಡ ಕೂಡ ಕೋರ್ಟ್ ಮೆಟ್ಟಿಲು ಏರಿತು.
ಆದಿಪುರುಷ ಸಿನಿಮಾ ಕುರಿತಾದ ಅರ್ಜಿಯನ್ನು ಕೈಗೆತ್ತಿಕೊಂಡ ನೇಪಾಳ ಹೈಕೋರ್ಟ್, ‘ಸಿನಿಮಾ ಸೆನ್ಸಾರ್ ಆಗಿದೆ. ಸೆನ್ಸಾರ್ ಮಂಡಳಿಯು ಚಿತ್ರವನ್ನು ಒಪ್ಪಿಕೊಂಡ ಮೇಲೆ ಬ್ಯಾನ್ ಗೆ ಅರ್ಥವಿಲ್ಲ. ಹಾಗಾಗಿ ಬ್ಯಾನ್ ತೆರೆವುಗೊಳಿಸಿ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಇದರಿಂದಾಗಿ ನೇಪಾಳದಲ್ಲಿ ಆದಿಪುರುಷ ಚಿತ್ರಕ್ಕೆ ದೊಡ್ಡ ಗೆಲುವು ಸಿಕ್ಕಿದೆ. ಆದರೆ, ಕೋರ್ಟ್ ತೀರ್ಪು ಏನೇ ಬಂದರೂ, ಸಿನಿಮಾ ಪ್ರದರ್ಶನಕ್ಕೆ ಬಿಡುವುದಿಲ್ಲ ಎಂದಿದ್ದಾರೆ ಬಲೇನ್ ಶಾ.
ಆದಿಪುರುಷ (Adi Purush) ಸಿನಿಮಾದಲ್ಲಿ ಸೀತೆಯನ್ನು ಭಾರತದ ಮಗಳು ಎಂದು ಕರೆದ ಡೈಲಾಗ್ ಕುರಿತಂತೆ ಕಠ್ಮಂಡು ಮೇಯರ್ ಈ ಹಿಂದೆ ಆಕ್ಷೇಪ ವ್ಯಕ್ತ ಪಡಿಸಿದ್ದರು. ಸಿನಿಮಾದಲ್ಲಿ ಸುಳ್ಳು ಇತಿಹಾಸವನ್ನು ಹೇಳಿದ್ದಕ್ಕೆ ಚಿತ್ರವನ್ನು ಕಠ್ಮಂಡುವಿನಲ್ಲಿ ಬ್ಯಾನ್ ಮಾಡಿದ್ದರು. ಡೈಲಾಗ್ ತಗೆಯುವಂತೆ ಚಿತ್ರತಂಡಕ್ಕೆ ಹೇಳಿದ್ದರೂ ಡೈಲಾಗ್ ಅನ್ನು ತಗೆಯದೇ ಇರುವ ಕಾರಣಕ್ಕಾಗಿ ಕಠ್ಮಂಡು ಮೇಯರ್ ಸುತ್ತೋಲೆ ಹೊರಡಿಸಿದ್ದಾರೆ. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ
ಬರೀ ಆದಿಪುರುಷ ಸಿನಿಮಾ ಮಾತ್ರವಲ್ಲ, ಕಠ್ಮಂಡುನಲ್ಲಿ (Kathmandu) ಒಟ್ಟು 17 ಚಿತ್ರಮಂದಿರಗಳಿದ್ದು ಈ ಅಷ್ಟೂ ಚಿತ್ರಮಂದಿರಗಳಲ್ಲೂ ಭಾರತೀಯ ಸಿನಿಮಾಗಳನ್ನು ಪ್ರದರ್ಶನ ಮಾಡಬಾರದು ಎಂದು ಆದೇಶ ಹೊರಡಿಸಿರುವುದಾಗಿ ಮೇಯರ್ ಬಲೇನ್ ಶಾ (Balen Shah) ಟ್ವೀಟ್ ಮಾಡಿದ್ದರು. ಆದಿಪುರುಷ ಸಿನಿಮಾ ಸೇರಿದಂತೆ ಭಾರತದ ಅಷ್ಟೂ ಸಿನಿಮಾಗಳನ್ನೂ ಬ್ಯಾನ್ (Ban) ಮಾಡಿರುವುದಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಓಂ ರಾವತ್ (Om Raut) ನಿರ್ದೇಶನದ ‘ಆದಿಪುರುಷ್’ ಸಿನಿಮಾಗೆ ಕೆಟ್ಟ ವಿಮರ್ಶೆ ವ್ಯಕ್ತವಾಗಿದೆ. ಈ ಸಿನಿಮಾದ ಹಲವು ಅಂಶಗಳನ್ನು ಟೀಕಿಸಲಾಗುತ್ತಿದೆ. ರಾಮಾಯಣವನ್ನು ಆಧರಿಸಿದ ಈ ಚಿತ್ರದಲ್ಲಿ ಪ್ರಭಾಸ್ ಅವರು ರಾಮನ ಪಾತ್ರ ಮಾಡಿದ್ದಾರೆ. ಸೀತೆಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಆಂಜನೇಯನಾಗಿ ದೇವದತ್ತ ನಾಗೆ ಅವರು ಅಭಿನಯಿಸಿದ್ದಾರೆ. ಲಕ್ಷ್ಮಣನ ಪಾತ್ರಕ್ಕೆ ಸನ್ನಿ ಸಿಂಗ್ ಅವರು ಬಣ್ಣ ಹಚ್ಚಿದ್ದಾರೆ. ಸೈಫ್ ಅಲಿ ಖಾನ್ ಅವರು ರಾವಣನಾಗಿ ಅಬ್ಬರಿಸಿದ್ದಾರೆ. ಆದರೆ ರಾಮಾಯಣವನ್ನು ತೋರಿಸಿದ ರೀತಿ ಸರಿಯಾಗಿಲ್ಲ ಎಂದು ಪ್ರೇಕ್ಷಕರು ತಕರಾರು ತೆಗೆದಿದ್ದಾರೆ. ಸೈಫ್‌ರನ್ನ ಮಾಡ್ರನ್ ರಾವಣನಂತೆ ತೋರಿಸಿರೋದು ಟ್ರೋಲ್ ಆಗುತ್ತಿದೆ. ಸಿನಿಮಾ ನೈಜವಾಗಿ ತೋರಿಸಿಲ್ಲ ಎಂದು ಟೀಕೆ ಮಾಡಿದ್ದಾರೆ.
ಚಿತ್ರಕಥೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಸಿನಿಮಾದ ಸಂಭಾಷಣೆಕಾರ ಮನೋಜ್ ಮುಂತಶೀರ್ ಅವರು ಮಾತು ಬದಲಾಯಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ‘ಆದಿಪುರುಷ್’ ಸಿನಿಮಾವನ್ನು ಟ್ರೋಲ್ ಮಾಡಲಾಗುತ್ತಿದೆ. ಪಾತ್ರಗಳನ್ನು ತೋರಿಸಿದ ರೀತಿ, ಗ್ರಾಫಿಕ್ಸ್ ಗುಣಮಟ್ಟ ಸೇರಿದಂತೆ ಅನೇಕ ವಿಚಾರಗಳನ್ನು ಜನರು ಟೀಕಿಸುತ್ತಿದ್ದಾರೆ. ಈ ನಡುವೆ ಸಂಭಾಷಣಕಾರ ಮನೋಜ್ ಮುಂತಶೀರ್ ಅವರು ನೀಡಿದ ಕೇಳಿಕೆ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ಇದನ್ನು ನಾನು ಮೊದಲೇ ಹೇಳಿದ್ದೇ ಮತ್ತು ಈಗಲೂ ಹೇಳುತ್ತೇನೆ. ಈ ಸಿನಿಮಾದ ಹೆಸರು ಆದಿಪುರುಷ್. ನಾವು ರಾಮಾಯಣವನ್ನು ಸಿನಿಮಾ ಮಾಡಿಲ್ಲ. ರಾಮಾಯಾಣಕ್ಕೂ ಆದಿಪುರುಷ್ ಸಿನಿಮಾಗೂ ಸಂಬಂಧವಿಲ್ಲ. ಅದರಿಂದ ತುಂಬ ಸ್ಫೂರ್ತಿ ಪಡೆದಿದ್ದೇವೆ. ಡಿಸ್‌ಕ್ಲೈಮರ್‌ನಲ್ಲೂ ನಾವು ಅದನ್ನೇ ಹೇಳಿದ್ದೇವೆ ಎಂದು ಮನೋಜ್ ಮುಂತಶೀರ್ ಹೇಳಿದ್ದಾರೆ.
ಕಠ್ಮಂಡು: ಎದೆನೋವು ಕಾಣಿಸಿಕೊಂಡಿದ್ದರಿಂದ ನೇಪಾಳದ (Nepal) ಅಧ್ಯಕ್ಷ ರಾಮಚಂದ್ರ ಪೌಡೆಲ್ (RamChandra Paudel) ಅವರನ್ನು ಶನಿವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾರೋಗ್ಯ ಸಮಸ್ಯೆಯಿಂದ ಒಂದು ವಾರದಲ್ಲಿ ಎರಡನೇ ಬಾರಿಗೆ ಪೌಡೆಲ್ ಆಸ್ಪತ್ರೆ ಸೇರಿದ್ದಾರೆ.
ಎದೆನೋವಿನಿಂದಾಗಿ ಇಂದು ಬೆಳಗ್ಗೆ ತ್ರಿಭುವನ್ ವಿಶ್ವವಿದ್ಯಾಲಯದ ಬೋಧನಾ ಆಸ್ಪತ್ರೆಯ ಮನಮೋಹನ್ ಕಾರ್ಡಿಯೋಥೊರಾಸಿಕ್ ನಾಳೀಯ ಮತ್ತು ಕಸಿ ಕೇಂದ್ರದಲ್ಲಿ ರಾಮಚಂದ್ರ ಪೌಡೆಲ್ ಅವರನ್ನು ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಪ್ತ ಕಾರ್ಯದರ್ಶಿ ಚಿರಂಜೀಬಿ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ಅಧ್ಯಕ್ಷರನ್ನು ಈ ಹಿಂದೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಯಲ್ಲಿ ಚಿಕಿತ್ಸೆಗಾಗಿ ಶ್ರೀ ಏರ್‌ಲೈನ್ಸ್ ವಿಮಾನದಲ್ಲಿ ನವದೆಹಲಿಗೆ ಕರೆದೊಯ್ಯಲಾಗಿತ್ತು. ಅವರು ಚಿಕಿತ್ಸೆ ಪಡೆದು ಏಪ್ರಿಲ್ 30 ರಂದು ವಾಪಸ್ ಆಗಿದ್ದರು. ಇದನ್ನೂ ಓದಿ: ಬೃಹತ್ ಗಾತ್ರದ ಕಡಿದ ಮರ ತಬ್ಬಿಕೊಂಡು ಸೆಕ್ಸ್ – ವಿಕೃತ ಕಾಮಿ ಅರೆಸ್ಟ್
ಕಠ್ಮಂಡು: ನೇಪಾಳದ (Nepal) ಕರ್ನಾಲಿ (Karnali) ಪ್ರಾಂತ್ಯದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ (Avalanche) ಮೂವರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ಭಾನುವಾರ ತಿಳಿಸಿದೆ.
ಪ್ರಾಂತ್ಯದ ಮುಗು ಜಿಲ್ಲೆಯ ಚ್ಯಾರ್ಖು ಪಾಸ್‌ನಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಜಿಲ್ಲೆಯ ಪಾತರಸಿ ಪುರಸಭೆಯಿಂದ ಹದಿನಾಲ್ಕು ಜನರು ಯರ್ಶಗುಂಬ (ಕಂಬಳಿಹುಳು ಶಿಲೀಂಧ್ರ) ಸಂಗ್ರಹಿಸಲು ಚ್ಯಾರ್ಖುಗೆ ಹೋಗಿದ್ದಾರೆ. ಅವರಲ್ಲಿ ಮೂವರು ಸಾವನ್ನಪ್ಪಿದ್ದು, ಒಂಬತ್ತು ಮಂದಿಗೆ ಹಿಮಪಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಭಾರತ – ಪಾಕಿಸ್ತಾನ ಕಾಶ್ಮೀರದ ವಿವಾದವನ್ನು ವಿಶ್ವಸಂಸ್ಥೆ ನಿರ್ಣಯದಂತೆ ಬಗೆಹರಿಸಬೇಕು: ಚೀನಾ
ಮೇ 18ರ ಮೊದಲು ಸ್ಥಳೀಯ ಅಧಿಕಾರಿಗಳು ಪಿಕ್ಕರ್‌ಗಳಿಗೆ ಅವಕಾಶ ನೀಡದಿದ್ದರೂ ನೂರಾರು ಜನರು ಮುಗು ಜಿಲ್ಲೆಯ ಎತ್ತರದ ಪ್ರದೇಶಗಳಿಗೆ ಕಂಬಳಿಹುಳು ಶಿಲೀಂಧ್ರವನ್ನು (Caterpillar Fungus) ಸಂಗ್ರಹಿಸಲು ಪ್ರಯಾಣಿಸಿದ್ದಾರೆ. ಹಿಮಪಾತದಲ್ಲಿ ಸಾವನ್ನಪ್ಪಿದ ಮೂವರು ಅಡ್ಡ ದಾರಿಗಳನ್ನು ಮಾರ್ಗಗಳನ್ನು ಬಳಸಿಕೊಂಡು ಎತ್ತರದ ಪ್ರದೇಶಗಳಿಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಖಲಿಸ್ತಾನಿ ಕಮಾಂಡೋ ಹತ್ಯೆ
ಕಠ್ಮಂಡು: ನೇಪಾಳದ (Nepal) ಅನ್ನಪೂರ್ಣ ಪರ್ವತವನ್ನು (Mount Annapurna) ಏರುತ್ತಿದ್ದ ವೇಳೆ ಆಳವಾದ ಬಿರುಕಿನೊಳಗೆ ಬಿದ್ದು ಸೋಮವಾರದಿಂದ ನಾಪತ್ತೆಯಾಗಿದ್ದ ಭಾರತೀಯ ಪರ್ವತಾರೋಹಿ (Indian Climber) ಅನುರಾಗ್ ಮಾಲೂ (Anurag Maloo) ಅವರನ್ನು ಜೀವಂತವಾಗಿ ಪತ್ತೆಹಚ್ಚಲಾಗಿದೆ.
34 ವರ್ಷದ ಭಾರತೀಯ ವಾಣಿಜ್ಯೋದ್ಯಮಿ ಮತ್ತು ಅನುಭವಿ ಪರ್ವತಾರೋಹಿ ಅನುರಾಗ್ ಮಾಲೂ ಸೋಮವಾರ ನಾಪತ್ತೆಯಾಗಿದ್ದರು. ಸೋಮವಾರ 4ನೇ ಕ್ಯಾಂಪ್‌ನಿಂದ ಹಿಂತಿರುಗುತ್ತಿದ್ದಾಗ 3ನೇ ಕ್ಯಾಂಪ್ ಬಳಿ ಬಿರುಕಿನಲ್ಲಿ ಬಿದ್ದಿದ್ದರು. ಅನ್ನಪೂರ್ಣ ಪರ್ವತ ವಿಶ್ವದ 10ನೇ ಅತಿ ಎತ್ತರದ ಪರ್ವತವಾಗಿದೆ.
ಇದೀಗ ಅನುರಾಗ್ ಅವರನ್ನು ರಕ್ಷಣಾ ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ಅನುರಾಗ್ ಸದ್ಯ ಜೀವಂತವಾಗಿ ಪತ್ತೆಯಾಗಿದ್ದರೂ ಅವರ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕಿದೆ ಎಂದು ಅನುರಾಗ್ ಸಹೋದರ ಸುಧೀರ್ ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್‌ಗೆ ಹಿನ್ನಡೆ – ಜೈಲು ಶಿಕ್ಷೆಗೆ ತಡೆ ಕೋರಿದ ಅರ್ಜಿ ವಜಾ
ಅನುರಾಗ್ ರಾಜಸ್ಥಾನದ ಕಿಶನ್‌ಗಢ್ ಮೂಲದವರಾಗಿದ್ದು ರೆಕ್ಸ್ ಕರಮ್‌ವೀರ್ ಚಕ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅನುಭವಿ ಪರ್ವತಾರೋಹಿಯಾಗಿರುವ ಮಾಲೂ ಕಳೆದ ವರ್ಷ ಮೌಂಟ್ ಅಮಾ ದಬ್ಲಾಮ್ ಅನ್ನು ಹತ್ತಿದ್ದರು. ಈ ಋತುವಿನಲ್ಲಿ ನೇಪಾಳದ ಮೌಂಟ್ ಎವರೆಸ್ಟ್, ಅನ್ನಪೂರ್ಣ ಮತ್ತು ಲೊಟ್ಸೆಯನ್ನು ಏರುವ ಯೋಜನೆಯನ್ನು ಅವರು ಮಾಡಿದ್ದರು.
ಲಕ್ನೋ: ಅಯೋಧ್ಯೆಯಲ್ಲಿ (Ayodhya) ಭವ್ಯ ರಾಮಮಂದಿರ (Ram Mandir) ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಗರ್ಭಗುಡಿಯಲ್ಲಿ ಭಗವಾನ್ ರಾಮ (Ram) ಮತ್ತು ಜಾನಕಿ ದೇವಿಯ ವಿಗ್ರಹಗಳನ್ನು (Idols) ಕೆತ್ತನೆ ಮಾಡಲು 2 ಅಪರೂಪದ ಸಾಲಿಗ್ರಾಮ ಶಿಲೆಗಳನ್ನು (Shaligram Rock) ಗುರುವಾರ ನೇಪಾಳದಿಂದ (Nepal) ತರಿಸಲಾಗಿದೆ.
ಅತ್ಯಂತ ವಿಶೇಷವಾದ ಈ ಶಿಲೆಗಳು ಬರೋಬ್ಬರಿ 6 ಕೋಟಿ ವರ್ಷ ಹಳೆಯದು ಎನ್ನಲಾಗಿದೆ. 2 ಶಿಲೆಗಳ ಪೈಕಿ ಒಂದು 26 ಟನ್ ತೂಕವಿದ್ದರೆ, ಇನ್ನೊಂದು ಶಿಲೆ 14 ಟನ್‌ಗಳಷ್ಟು ತೂಗುತ್ತದೆ. ಇದನ್ನು ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ನೇಪಾಳದ ಮುಸ್ತಾಂಗ್ ಜಿಲ್ಲೆಯಿಂದ ಅಯೋಧ್ಯೆಗೆ ತರಿಸಲಾಗಿದೆ. ಶಿಲೆಗಳನ್ನು ತರಿಸಲು 2 ವಿಭಿನ್ನ ಟ್ರಕ್‌ಗಳನ್ನು ಬಳಸಲಾಗಿದೆ.
ಅಪರೂಪ ಶಿಲೆಗಳ ವಿಶೇಷತೆ:
ಶ್ರೀರಾಮ ಹಾಗೂ ಸೀತಾ ಮಾತೆಯ ವಿಗ್ರಗಳನ್ನು ಕೆತ್ತಲಾಗುವ ಈ ವಿಶೇಷ ಶಿಲೆಗಳು ನೇಪಾಳದ ಮುಸ್ತಾಂಗ್ ಜಿಲ್ಲೆಯ ಸಾಲಿಗ್ರಾಮ ಅಥವಾ ಮುಕ್ತಿನಾಥ (ಮೋಕ್ಷದ ಸ್ಥಳ) ಸಮೀಪವಿರುವ ಸ್ಥಳದಲ್ಲಿ ಗಂಡಕಿ ನದಿ ಬಳಿ ದೊರಕಿವೆ.
ಈ ಶಿಲೆಗಳಿಂದ ಶ್ರೀರಾಮನ ಮಗುವಿನ ರೂಪದ ವಿಗ್ರಹವನ್ನು ಕೆತ್ತಲು ತೀರ್ಮಾನಿಸಲಾಗಿದೆ. ಈ ವಿಗ್ರಹವನ್ನು ರಾಮಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗುತ್ತದೆ. ಮುಂದಿನ ವರ್ಷ ಜನವರಿಯಲ್ಲಿ ಮಕರ ಸಂಕ್ರಾಂತಿಯ ಸಂದರ್ಭ ಮೂರ್ತಿ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 50 ಸಾವಿರ ವರ್ಷಕ್ಕೊಮ್ಮೆ ಗೋಚರಿಸುವ ವಿಸ್ಮಯ – ಬೆಂಗಳೂರಲ್ಲಿ ಗೋಚರಿಸಲಿಲ್ಲ ಹಸಿರು ಧೂಮಕೇತು
Live Tv
[brid partner=56869869 player=32851 video=960834 autoplay=true]