Tag: ನೇಪಾಳ

  • Nepal Earthquake: ಕಟ್ಟಡದಡಿ ಸಿಲುಕಿ ಮಲಗಿದ್ದಲ್ಲೇ ಉಸಿರುಚೆಲ್ಲಿದ ಉಪಮೇಯರ್

    Nepal Earthquake: ಕಟ್ಟಡದಡಿ ಸಿಲುಕಿ ಮಲಗಿದ್ದಲ್ಲೇ ಉಸಿರುಚೆಲ್ಲಿದ ಉಪಮೇಯರ್

    – ಸಾವಿನ ಸಂಖ್ಯೆ 129ಕ್ಕೆ ಏರಿಕೆ
    – ಮುಂದುವರಿದ ರಕ್ಷಣಾ ಕಾರ್ಯಾಚರಣೆ

    ಕಠ್ಮಂಡು: ನೇಪಾಳದಲ್ಲಿ (Neapl Earthquake) ನಡೆದ ಭಾರೀ ಭೂಕಂಪನದಿಂದ ಜಾಜರ್ ಕೋಟ್ ಉಪ ಮೇಯರ್ (Jajarkot Deputy Mayor) ಸೇರಿ ಸಾವಿನ ಸಂಖ್ಯೆ 129ಕ್ಕೆ ಏರಿಕೆ ಆಗಿದೆ.

    ಜಾಜರ್ ಕೋಟ್‍ನ ನಲ್ಗಢ್ ಪುರಸಭೆಯ ಉಪಮೇಯರ್ ಸರಿತಾ ಸಿಂಗ್ (Deputy Mayor Sarita Singh) ಅವರು ಸಾವನ್ನಪ್ಪಿದ್ದಾರೆ. ಉಪಮೇಯರ್ ಸಿಂಗ್ ಅವರು ಪಾಲಿಕೆಯ ಪ್ರಧಾನ ಕಚೇರಿಯಲ್ಲಿರುವ ತಮ್ಮ ನಿವಾಸದಲ್ಲಿ ಮಲಗಿದ್ದರು. ಈ ವೇಳೆ ಭೂಕಂಪನದಿಂದ ಕಟ್ಟಡದಡಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಕರ್ನಾಲಿ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಡಿಐಜಿ ಭೀಮ್ ಧಾಕಲ್ ಮಾಹಿತಿ ನೀಡಿದ್ದಾರೆ. ಉಪಮೇಯರ್ ಸರಿತಾ ಸಿಂಗ್ ನೇಪಾಳಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ.

    ನವೆಂಬರ್ 3 ರಂದು ರಾತ್ರಿ 11:47ರ ಸುಮಾರಿಗೆ ಸಂಭವಿಸಿದ ಭೂಕಂಪವು ಕಠ್ಮಂಡು, ಸುತ್ತಮುತ್ತಲಿನ ಜಿಲ್ಲೆಗಳು ಮತ್ತು ನವದೆಹಲಿಯವರೆಗೂ ವ್ಯಾಪಕವಾದ ಪರಿಣಾಮವನ್ನು ಬೀರಿತು. ವರದಿಗಳ ಪ್ರಕಾರ, ಪಶ್ಚಿಮ ನೇಪಾಳದ ಜಾಜರ್‌ ಕೋಟ್ ಮತ್ತು ರುಕುಮ್ ಜಿಲ್ಲೆಗಳಲ್ಲಿ ಸರಿಸುಮಾರು 128 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 140ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಸದ್ಯ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲು ನೇಪಾಳ ಸೇನೆ ಮತ್ತು ನೇಪಾಳ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಭರದಿಂದ ಸಾಗಿದೆ. ನೇಪಾಳ ಪ್ರಧಾನಿ ಪುಷ್ಪಕಮಲ್ ದಹಲ್ (Pushpa Kamal Dahal) ಇಂದು ಬೆಳಗ್ಗೆ ವೈದ್ಯಕೀಯ ತಂಡದೊಂದಿಗೆ ಭೂಕಂಪದ ಘಟನೆಯ ಸ್ಥಳಕ್ಕೆ ತೆರಳಿದ್ದಾರೆ.

    ಘಟನೆ ಸಂಬಂಧ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಎಕ್ಸ್ ನಲ್ಲಿ ಬರೆದುಕೊಂಡಿದ್ದು, ಸಂತಾಪ ಸೂಚಿಸಿದ್ದಾರೆ. ಭಾರತವು ನೇಪಾಳದ ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ. ಹಾಗೆಯೇ ಸಾಧ್ಯವಿರುವ ಎಲ್ಲ ನೆರವನ್ನು ನೀಡಲು ಸಿದ್ಧವಾಗಿದೆ. ಮೃತರ ಕುಟುಂಬಸ್ಥರ ದುಃಖದಲ್ಲಿ ನಾವು ಪಾಲುದಾರರಾಗಿದ್ದೇವೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಬಯಸುವುದಾಗಿ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Nepal Earthquake: ಭೀಕರ ಭೂಕಂಪನಕ್ಕೆ ಬೆಚ್ಚಿಬಿದ್ದ ನೇಪಾಳ- 70 ಮಂದಿ ದುರ್ಮರಣ

    Nepal Earthquake: ಭೀಕರ ಭೂಕಂಪನಕ್ಕೆ ಬೆಚ್ಚಿಬಿದ್ದ ನೇಪಾಳ- 70 ಮಂದಿ ದುರ್ಮರಣ

    – ದೆಹಲಿಯಲ್ಲೂ ನಡುಗಿದ ಭೂಮಿ, ಜನ ಆತಂಕ

    ಕಠ್ಮಂಡು: ನೇಪಾಳದಲ್ಲಿ (Nepal Earthquake) ಸಂಭವಿಸಿದ ಪ್ರಬಲ ಭೂಕಂಪನಕ್ಕೆ 70 ಮಂದಿ ಬಲಿಯಾಗಿದ್ದಾರೆ. ನೂರಾರು ಮಂದಿಗೆ ಗಾಯಗಳಾಗಿವೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 6.4ರಷ್ಟು ದಾಖಲಾಗಿದೆ.

    ಕಟ್ಟಡಗಳು ಉರುಳಿದ್ದು, ಮನೆಗಳ ಗೋಡೆಗಳು ಬಿರುಕುಬಿಟ್ಟಿದೆ. ಧರೆಗುರುಳಿದ ಕಟ್ಟಡದ ಅವಶೇಷಗಳಡಿ ನೂರಾರು ಮಂದಿ ಸಿಲುಕಿರುವ ಸಾಧ್ಯತೆ ಇದೆ. ನೇಪಾಳದ ರುಕುಂ ವೆಸ್ಟ್ ಪ್ರದೇಶದಲ್ಲಿ 36 ಮಂದಿ, ಜಾಜರ್‍ಕೋಟ್ ಪ್ರದೇಶದಲ್ಲಿ 34 ಮಂದಿ ಮೃತಪಟ್ಟಿದ್ದಾರೆ. ಸಾವು- ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಳ ಆಗುವ ಸಂಭವ ಇದೆ. ಇದನ್ನೂ ಓದಿ: ಪತ್ನಿ, ಪೊಲೀಸರ ಮಾನಸಿಕ ಕಿರುಕುಳದಿಂದ ಸೂಸೈಡ್ ಕೇಸ್- ನಿಜವಾಯ್ತು ಪಬ್ಲಿಕ್ ಟಿವಿ, ಡಿಜಿಟಲ್ ವರದಿ

    ಭಾರತದ ಹಲವು ರಾಜ್ಯಗಳಲ್ಲೂ ಭೂಮಿ ಕಂಪಿಸಿದೆ. ಬಿಹಾರ, ಜಾರ್ಖಂಡ್, ಉತ್ತರಾಖಂಡ್ ಸೇರಿ ಹಲವೆಡೆ ಭೂಮಿ ನಡುಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 1ತಿಂಗಳಲ್ಲಿ 3ನೇ ಭೂಮಿ ಕಂಪಿಸಿದೆ. ಆತಂಕಗೊಂಡ ಜನ ಮನೆಯಿಂದ ಆಚೆ ಬಂದು ರಾತ್ರಿಯೆಲ್ಲಾ ರೋಡಲ್ಲೇ ಜಾಗರಣ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ – ಐವರು ಸ್ಥಳದಲ್ಲೇ ಸಾವು

    ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ – ಐವರು ಸ್ಥಳದಲ್ಲೇ ಸಾವು

    ಕಲಬುರಗಿ: ಬೈಕಿಗೆ (Bike) ಲಾರಿ (Lorry) ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿಯ (Kalaburagi) ಅಫಜಲಪುರ (Afzalpur) ತಾಲೂಕಿನ ಹಳ್ಳೋಳ್ಳಿ ಕ್ರಾಸ್ ಬಳಿ ನಡೆದಿದೆ.

    ಘಟನೆಯಲ್ಲಿ ನೇಪಾಳ (Nepal) ಮೂಲದ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಂದೇ ಬೈಕ್‌ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ತೆರಳುತ್ತಿದ್ದರು. ಈ ವೇಳೆ ದುದುನಿಯಿಂದ ಅಫಜಲಪುರ ಕಡೆಗೆ ಬರುತ್ತಿದ್ದ ಲಾರಿ ಬೈಕಿಗೆ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇದನ್ನೂ ಓದಿ:‌ ಮಾಲ್‌ನಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆ – ಆರೋಪಿ ಕೋರ್ಟ್‌ಗೆ ಶರಣು

    ಮೃತರು ಅಫಜಲಪುರದಲ್ಲಿ ಫಾಸ್ಟ್‌ಫುಡ್ ಹೋಟೆಲ್ ನಡೆಸುತ್ತಿದ್ದರು. ನೇಪಾಳ ಮೂಲದ ಈ ಕುಟುಂಬ ಕಳೆದ ಹಲವು ವರ್ಷಗಳಿಂದ ಅಫಜಲಪುರದಲ್ಲಿ ವಾಸವಿತ್ತು. ಘಟನಾ ಸ್ಥಳಕ್ಕೆ ಅಫಜಲಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಾಸನ ಕಾಲೇಜಿನ 5ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asian Games 2023 ನೇಪಾಳ ವಿರುದ್ಧ 23 ರನ್‌ಗಳ ಜಯ –  ಸೆಮಿಫೈನಲ್‌ಗೆ ಭಾರತ

    Asian Games 2023 ನೇಪಾಳ ವಿರುದ್ಧ 23 ರನ್‌ಗಳ ಜಯ – ಸೆಮಿಫೈನಲ್‌ಗೆ ಭಾರತ

    ಹ್ಯಾಂಗ್‌ಝೋ: ಚೀನಾದಲ್ಲಿ (China) ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ (Asian Games) ಕ್ರೀಡಾಕೂಟದ ಕ್ವಾರ್ಟರ್‌ ಫೈನಲಿನಲ್ಲಿ ಭಾರತ (Team India) ನೇಪಾಳ (Nepal) ವಿರುದ್ಧ 23 ರನ್‌ಗಳ ಜಯ ಸಾಧಿಸಿ ಸೆಮಿಫೈನಲ್‌ (Semi Final) ಪ್ರವೇಶಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 202 ರನ್‌ ಗಳಿಸಿತು. ನಂತರ ಬ್ಯಾಟ್‌ ಮಾಡಿದ ನೇಪಾಳ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 179 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

    https://twitter.com/pavankalyan9_/status/1709031595313963333

    ಯಶಸ್ವಿ ಜೈಸ್ವಾಲ್‌ (Yashasvi Jaiswal) ಮತ್ತು ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಮೊದಲ ವಿಕೆಟಿಗೆ 59 ಎಸೆತಗಳಲ್ಲಿ 103 ರನ್‌ ಜೊತೆಯಾಟವಾಡಿದರು. ಗಾಯಕ್ವಾಡ್‌ 25 ರನ್‌ ಗಳಿಸಿ ಔಟಾದರು. ತಿಲಕ್‌ ವರ್ಮಾ, ಜಿತೇಶ್‌ ಶರ್ಮಾ ಔಟಾದರೂ ಜೈಸ್ವಾಲ್‌ ಸ್ಫೋಟಕ ಶತಕ ಸಿಡಿಸಿದರು. 49 ಎಸೆತಗಳಲ್ಲಿ 100 ರನ್‌ (8 ಬೌಂಡರಿ, 7 ಸಿಕ್ಸರ್‌) ಹೊಡೆದು ಕ್ಯಾಚ್‌ ನೀಡಿ ಹೊರ ನಡೆದರು. ಕೊನೆಯಲ್ಲಿ ಶಿವಂ ದುಬೆ ಔಟಾಗದೇ 25 ರನ್‌(19 ಎಸೆತ, 2 ಬೌಂಡರಿ, 1 ಸಿಕ್ಸರ್‌) ಹೊಡೆದರೆ ರಿಂಕು ಸಿಂಗ್‌ ಔಟಾಗದೇ 37 ರನ್‌(15 ಎಸೆತ, 2 ಬೌಂಡರಿ, 4 ಸಿಕ್ಸರ್‌) ಹೊಡೆದರು. ಮೂಲಕ ತಂಡದ ಮೊತ್ತ 200 ರನ್‌ ಗಳ ಗಡಿ ದಾಟಿತು.  ಇದನ್ನೂ ಓದಿ: Asian Games 2023: ಕೊನೇ ಪ್ರಯತ್ನದಲ್ಲಿ ಗುಂಡು ಎಸೆದು ಚಿನ್ನ ಗೆದ್ದ ಗಂಡುಗಲಿ – ಭಾರತಕ್ಕೆ ಒಂದೇ ದಿನ 15 ಪದಕ

    ನೇಪಾಳ ಪರ ದೀಪೇಂದ್ರ ಸಿಂಗ್‌ 32 ರನ್‌ (15 ಎಸೆತ, 4 ಬೌಂಡರಿ), ಸಂದೀಪ್‌ ಜೋರಾ 29 ರನ್‌ (12 ಎಸೆತ, 1 ಬೌಂಡರಿ, 3 ಸಿಕ್ಸರ್‌), ಕುಶಾಲ್ ಭುರ್ಟೆಲ್ 28 ರನ್‌, ಕುಶಾಲ್‌ ಮಲ್ಲ 29 ರನ್‌ ಹೊಡೆದು ಔಟಾದರು.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 20 ಓವರ್‌ಗಳಲ್ಲಿ 314 ರನ್‌, 9 ಎಸೆತಗಳಲ್ಲಿ ಸ್ಫೋಟಕ ಫಿಫ್ಟಿ; T20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ ನೇಪಾಳ

    20 ಓವರ್‌ಗಳಲ್ಲಿ 314 ರನ್‌, 9 ಎಸೆತಗಳಲ್ಲಿ ಸ್ಫೋಟಕ ಫಿಫ್ಟಿ; T20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ ನೇಪಾಳ

    -16 ವರ್ಷಗಳಿಂದ ಯುವರಾಜ್‌ ಸಿಂಗ್‌ ಹೆಸರಲ್ಲಿದ್ದ ದಾಖಲೆ ನುಚ್ಚು ನೂರು
    -ರೋಹಿತ್‌ ಶರ್ಮಾ ದಾಖಲೆಯೂ ಪುಡಿ-ಪುಡಿ

    ಹ್ಯಾಂಗ್‌ಝೌ: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ ಪುರುಷರ ಟಿ20 ಕ್ರಿಕೆಟ್‌ನಲ್ಲಿ (Asian Games T20 Cricket) ನೇಪಾಳ ತಂಡ ಹಲವು ವಿಶ್ವದಾಖಲೆಗಳನ್ನ ಉಡೀಸ್‌ ಮಾಡಿ ಹೊಸ ಇತಿಹಾಸ ನಿರ್ಮಿಸಿದೆ.

    ಮಂಗೋಲಿಯಾ ವಿರುದ್ಧದ ಪಂದ್ಯದಲ್ಲಿ ನೇಪಾಳ ತಂಡದ ಬ್ಯಾಟರ್‌ಗಳು ಅಬ್ಬರಿಸಿದ್ದು 20 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ನಷ್ಟಕ್ಕೆ ಬರೋಬ್ಬರಿ 314 ರನ್ ಗಳಿಸಿ ವಿಶ್ವದಾಖಲೆ ಬರೆದಿದ್ದಾರೆ. 315 ರನ್‌ಗಳ ಗುರಿ ಬೆನ್ನತ್ತಿದ್ದ ಮಂಗೋಲಿಯಾ (Mongolia) ತಂಡ 13.1 ಓವರ್‌ಗಳಲ್ಲೇ ಕೇವಲ 41 ರನ್‌ ಗಳಿಗೆ ಆಲೌಟ್‌ ಆಗಿದೆ. ಪರಿಣಾಮ ನೇಪಾಳ 273 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ (T20I) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 300 ರನ್‌ ಚಚ್ಚಿದ್ದು ಇದೇ ಮೊದಲು. ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ಮಾತ್ರವಲ್ಲದೇ ಇನ್ನೂ ಕೆಲ ಪ್ರಮುಖ ವಿಶ್ವದಾಖಲೆಗಳು ಈ ಪಂದ್ಯದಲ್ಲಿ ನಿರ್ಮಾಣವಾಗಿದೆ. ಇದೊಂದೇ ಪಂದ್ಯದಲ್ಲಿ ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ, ಸ್ಫೋಟಕ ಅರ್ಧಶತಕಗಳೂ ದಾಖಲಾಗಿದೆ. ಇದನ್ನೂ ಓದಿ: Asian Games 2023- ಮಹಿಳಾ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ

    ಏಷ್ಯನ್ ಗೇಮ್ಸ್ ಟೂರ್ನಿಯ ಪುರುಷರ ಕ್ರಿಕೆಟ್‌ನ ಮೊದಲ ಪಂದ್ಯದಲ್ಲೇ ನೇಪಾಳ ಬ್ಯಾಟ್ಸ್‌ಮ್ಯಾನ್‌ಗಳಿಂದ ಈ ಪ್ರದರ್ಶನ ಕಂಡುಬಂದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮಂಗೋಲಿಯಾ ತಂಡ ಬೌಲಿಂಗ್‌ ಆಯ್ದುಕೊಂಡು ಬ್ಯಾಟಿಂಗ್‌ ಮಾಡುವ ಅವಕಾಶವನ್ನು ನೇಪಾಳ ತಂಡಕ್ಕೆ ನೀಡಿತು. ಮೊದಲ ಎರಡು ವಿಕೆಟ್‌ ಪಡೆಯುವವರೆಗೆ ಉತ್ತಮ ಹಿಡಿತ ಸಾಧಿಸಿದ್ದ ಮಂಗೋಲಿಯಾ ನಂತರ ಎದುರಾಳಿ ಬ್ಯಾಟರ್‌ಗಳನ್ನ ಕಟ್ಟಿಹಾಕುವಲ್ಲಿ ವಿಫಲವಾಯಿತು. ಇದನ್ನೂ ಓದಿ: Asian Games 2023: ಕ್ರಿಕೆಟ್‌ನಲ್ಲಿ ಚಿನ್ನ – ಇತಿಹಾಸ ನಿರ್ಮಿಸಿದ ಭಾರತದ ಮಹಿಳೆಯರು

    ಹಿಟ್‌ಮ್ಯಾನ್‌ ದಾಖಲೆ ನುಚ್ಚು ನೂರು:
    ಕ್ರೀಸ್‌ಗಿಳಿಯುತ್ತಿದ್ದಂತೆ ಮಂಗೋಲಿಯಾ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿದ ಕುಶಾಲ್ ಮಲ್ಲ (Kushal Malla) ಹಾಗೂ ನಾಯಕ ರೋಹಿತ್ ಪೌಡೆಲ್ ಸ್ಫೋಟಕ ಬ್ಯಾಟಿಂಗ್‌ನಿಂದ ವಿಶ್ವ ದಾಖಲೆ ನಿರ್ಮಿಸಿದರು. ನಾಯಕ ರೋಹಿತ್‌ ಪೌಡೆಲಾ 27 ಎಸೆತಗಳಲ್ಲಿ 6 ಸಿಕ್ಸರ್‌, 2 ಬೌಂಡರಿಗಳೊಂದಿಗೆ 61 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಆದ್ರೆ ಕೊನೆಯವರೆಗೂ ಬ್ಯಾಟಿಂಗ್‌ ಅಬ್ಬರ ಮುಂದುವರಿಸಿದ ಕುಶಾಲ್‌ ಮಲ್ಲ ಕೇವಲ 34 ಎಸೆತಗಳಲ್ಲಿ 9 ಸಿಕ್ಸರ್‌, 6 ಬೌಂಡರಿಗಳೊಂದಿಗೆ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ 35 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ದಾಖಲೆಯನ್ನೂ ಉಡೀಸ್‌ ಮಾಡಿದರು. ಒಟ್ಟಾರೆ 50 ಎಸೆತಗಳನ್ನ ಎದುರಿಸಿದ ಕುಶಾಲ್‌ ಮಲ್ಲ 12 ಸಿಕ್ಸರ್‌, 8 ಬೌಂಡರಿಗಳೊಂದಿಗೆ 137 ಬಾರಿಸಿ ಅಜೇರಾಗುಳಿದರು.

    ಯುವಿ ದಾಖಲೆ ಪುಡಿ ಪುಡಿ:
    ಇನ್ನೂ ನೇಪಾಳ ತಂಡದ ಮತ್ತೋರ್ವ ಆಟಗಾರ ದೀಪೇಂದ್ರ ಸಿಂಗ್ ಐರಿ (Dipendra Singh Airee) ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಹೆಸರಿನಲ್ಲಿದ್ದ 16 ವರ್ಷಗಳ ಹಿಂದಿನ ದಾಖಲೆಯನ್ನ ಪುಡಿ ಪುಡಿ ಮಾಡಿದರು. ಯುವರಾಜ್ ಸಿಂಗ್ 2007ರ ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದರು. ಆದ್ರೆ ನೇಪಾಳ ಕ್ರಿಕೆಟಿಗ ದೀಪೇಂದ್ರ ಸಿಂಗ್‌ ಸತತವಾಗಿ 8 ಸಿಕ್ಸ್‌ಗಳನ್ನ ಬಾರಿಸುವ ಮೂಲಕ ಕೇವಲ 9 ಎಸೆತಗಳಲ್ಲೇ 50 ರನ್‌ ಚಚ್ಚಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಒಟ್ಟು 10 ಎಸೆತಗಳಲ್ಲಿ 52 ರನ್‌ ಬಾರಿಸಿ ಅಜೇಯರಾಗುಳಿದಿದ್ದಾರೆ.

    ಇಷ್ಟು ಸಾಲದು ಅಂತ ನೇಪಾಳ ತಂಡ ಟಿ20 ಕ್ರಿಕೆಟ್‌ನಲ್ಲಿ ಹಿಂದೆಂದೂ ಕಾಣದಷ್ಟು ರನ್ ಕಲೆಹಾಕಿದೆ. 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 314 ರನ್‌ಗಳನ್ನು ಗಳಿಸಿದೆ. ಇದು ಟಿ20 ಇತಿಹಾಸದಲ್ಲೇ 300ಕ್ಕೂ ಹೆಚ್ಚು ರನ್‌ ದಾಖಲಾದ ಪಂದ್ಯವಾಗಿದೆ. ಅಫ್ಘಾನಿಸ್ತಾನ ತಂಡ 2019ರಲ್ಲಿ ಐರ್ಲೆಂಡ್ ವಿರುದ್ಧ 3 ವಿಕೆಟ್‌ ನಷ್ಟಕ್ಕೆ 278 ರನ್‌ ಗಳಿಸಿದ್ದು ಈವರೆಗಿನ ಅತಿಹೆಚ್ಚಿನ ರನ್‌ ಆಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೇಪಾಳ ವಿರುದ್ಧ 10 ವಿಕೆಟ್‌ಗಳ ಜಯ – ಸೂಪರ್ 4ಗೆ ಟೀಂ ಇಂಡಿಯಾ ಎಂಟ್ರಿ

    ನೇಪಾಳ ವಿರುದ್ಧ 10 ವಿಕೆಟ್‌ಗಳ ಜಯ – ಸೂಪರ್ 4ಗೆ ಟೀಂ ಇಂಡಿಯಾ ಎಂಟ್ರಿ

    ಪಲ್ಲೆಕೆಲೆ: ನಾಯಕ ರೋಹಿತ್‌ ಶರ್ಮಾ ಮತ್ತು ಶುಭಮನ್‌ ಗಿಲ್‌ ಅವರ ಅಜೇಯ ಅರ್ಧಶತಕದ ಆಟದಿಂದ ಏಷ್ಯಾ ಕಪ್‌ ಕ್ರಿಕೆಟ್‌ (Asia Cup Cricket) ಟೂರ್ನಿಯಲ್ಲಿ ನೇಪಾಳ (Nepal) ವಿರುದ್ಧ ಟೀಂ ಇಂಡಿಯಾ (Team India) 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಸೂಪರ್‌ 4 ಪ್ರವೇಶಿಸಿದೆ.

    ಟಾಸ್‌ ಸೋತು ಬ್ಯಾಟಿಂಗ್‌ ನಡೆಸಿದ ನೇಪಾಳ 48.2 ಓವರ್‌ನಲ್ಲಿ 230 ರನ್‌ಗಳಿಗೆ ಆಲೌಟ್‌ ಆಯ್ತು. ನಂತರ ಬ್ಯಾಟಿಂಗ್‌ ಆರಂಭಿಸಿದ ಭಾರತ 2.1 ಓವರ್‌ಗಳಲ್ಲಿ 17 ರನ್‌ ಗಳಿಸಿದ್ದಾಗ ಜೋರಾಗಿ ಮಳೆ (Rain) ಸುರಿಯಿತು.

    ಮಳೆ ನಿಂತ ಮೇಲೆ ಭಾರತಕ್ಕೆ ಡಕ್‌ವರ್ಥ್‌ಲೂಯಿಸ್‌ ನಿಯಮದ ಅನ್ವಯ 23 ಓವರ್‌ಗಳಲ್ಲಿ 145 ರನ್‌ ಗುರಿ ನೀಡಲಾಯಿತು. ಸುಲಭದ ಗುರಿಯನ್ನು ಬೆನ್ನತ್ತಿದ ಭಾರತ ಆರಂಭಿಕ ಆಟಗಾರರಾದ ರೋಹಿತ್‌ ಶರ್ಮಾ (Rohith Sharma) ಮತ್ತು ಶುಭಮನ್‌ ಗಿಲ್‌ (Shubman Gill) ಶತಕದ ಜೊತೆಯಾಟವಾಡಿದ ಪರಿಣಾಮ 20.1 ಓವರ್‌ನಲ್ಲಿ 147 ನ್‌ ಹೊಡೆದು ಜಯಗಳಿಸಿತು. ರೋಹಿತ್‌ ಶರ್ಮಾ ಔಟಾಗದೇ 74 ರನ್‌(59 ಎಸೆತ, 6 ಬೌಂಡರಿ, 5 ಸಿಕ್ಸರ್‌), ಶುಭಮನ್‌ ಗಿಲ್‌ ಔಟಾಗದೇ 67 ರನ್‌(62 ಎಸೆತ, 8 ಬೌಂಡರಿ, 1 ಸಿಕ್ಸ್‌) ಹೊಡೆದರು.

    ಇದಕ್ಕೂ ಮೊದಲು ಬ್ಯಾಟ್‌ ಮಾಡಿದ ನೇಪಾಳ ಪರ ಆರಂಭಿಕ ಆಟಗಾರರಾದ ಕುಶಾಲ್ ಭುರ್ಟೆಲ್ 38 ರನ್‌(25 ಎಸೆತ, 3 ಬೌಂಡರಿ, 2 ಸಿಕ್ಸ್‌), ಅಸೀಫ್‌ ಶೇಕ್‌ 58 ರನ್‌(97 ಎಸೆತ, 8 ಬೌಂಡರಿ) ಹೊಡೆದರೆ  ಸೋಂಪಾಲ್ ಕಾಮಿ 48 ರನ್‌( 56 ಎಸೆತ, 1 ಬೌಂಡರಿ, 2 ಸಿಕ್ಸರ್‌) ಚಚ್ಚಿ ಔಟಾದರು.  ಇದನ್ನೂ ಓದಿ: ಬುಮ್ರಾ, ಸಂಜನಾ ದಂಪತಿಗೆ ಗಂಡು ಮಗು- ಮಗನ ಹೆಸರು ರಿವೀಲ್ ಮಾಡಿದ ವೇಗಿ

    ಮೊಹಮ್ಮದ್‌ ಸಿರಾಜ್‌ ಮತ್ತು ಜಡೇಜಾ ತಲಾ 3 ವಿಕೆಟ್‌ ಕಿತ್ತರೆ, ಶಮಿ, ಹಾರ್ದಿಕ್‌ ಪಾಂಡ್ಯ, ಶಾರ್ದೂಲ್‌ ಠಾಕೂರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಎ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ಸೂಪರ್‌ 4 ಹಂತವನ್ನು ಪ್ರವೇಶಿಸಿದೆ. ಎರಡೂ ಪಂದ್ಯವನ್ನು ಸೋತ ನೇಪಾಳ ಟೂರ್ನಿಯಿಂದ ಹೊರ ಬಿದ್ದಿದೆ.

    ಬಿ ಗುಂಪಿನಲ್ಲಿ ಎರಡು ಪಂದ್ಯಗಳಿಂದ ಬಾಂಗ್ಲಾದೇಶ 2 ಅಂಕ ಸಂಪಾದಿಸಿದ್ದರೆ ಶ್ರೀಲಂಕಾ 1 ಪಂದ್ಯದಿಂದ 2 ಅಂಕ ಸಂಪಾದಿಸಿದೆ. ಅಫ್ಘಾನಿಸ್ತಾನ ತಾನು ಆಡಿದ ಒಂದು ಪಂದ್ಯವನ್ನು ಸೋತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asia Cup 2023: ಟೀಂ ಇಂಡಿಯಾ ಸೋಲಿಸಲು ರಣತಂತ್ರ ರೂಪಿಸಿದ್ದೇವೆ – ನೇಪಾಳ ಕ್ಯಾಪ್ಟನ್‌ ಎಚ್ಚರಿಕೆ

    Asia Cup 2023: ಟೀಂ ಇಂಡಿಯಾ ಸೋಲಿಸಲು ರಣತಂತ್ರ ರೂಪಿಸಿದ್ದೇವೆ – ನೇಪಾಳ ಕ್ಯಾಪ್ಟನ್‌ ಎಚ್ಚರಿಕೆ

    – ಕೈ ಹಿಡಿಯುತ್ತಾರಾ ಗಿಲ್‌, ಕೊಹ್ಲಿ, ರೋಹಿತ್‌

    ಕ್ಯಾಂಡಿ: ಏಕದಿನ ಏಷ್ಯಾಕಪ್‌ (AsiaCup 2023) ಟೂರ್ನಿ ಆರಂಭವಾಗಿದ್ದು, ಇಂದು ʻAʼ ಗುಂಪಿನಲ್ಲಿರುವ ಭಾರತ ಮತ್ತು ನೇಪಾಳ ನಡುವೆ ಪಂದ್ಯ ನಡೆಯಲಿದೆ. ಗೆದ್ದ ತಂಡ ಸೂಪರ್‌ ಫೋರ್‌ ಹಂತ ಪ್ರವೇಶಿಸಲಿದೆ.

    ಸಹಜವಾಗಿಯೇ ಟೀಂ ಇಂಡಿಯಾ (Team India) ಗೆಲ್ಲುವ ಫೇವರಿಟ್‌ ಆಗಿದ್ದು, ದೈತ್ಯ ಭಾರತ ತಂಡಕ್ಕೆ ಪೈಪೋಟಿ ನೀಡಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿ ರೋಹಿತ್‌ ಪೌದೆಲ್‌ (Rohit Paudel) ಸಾರಥ್ಯದ ನೇಪಾಳ ತಂಡ ಎದುರು ನೋಡುತ್ತಿದೆ. ಈ ನಡುವೆ ಶ್ರೀಲಂಕಾದ (SriLanka) ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ವಿರುದ್ಧದ ಪಂದ್ಯದ ಬಗ್ಗೆ ಮಾತನಾಡಿರುವ ನೇಪಾಳ ತಂಡ ಕ್ಯಾಪ್ಟನ್‌, ಟೀಂ ಇಂಡಿಯಾ ಬ್ಯಾಟರ್‌ ಹಾಗೂ ಬೌಲರ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ನೇಪಾಳ ತಂಡದ ನಾಯಕ ರೋಹಿತ್‌ ಪೌದೆಲ್‌, ಟೀಂ ಇಂಡಿಯಾ ಸ್ಟಾರ್‌ ಬ್ಯಾಟರ್‌ಗಳಾದ ವಿರಾಟ್‌ ಕೊಹ್ಲಿ (Virat Kohli), ಶುಭಮನ್‌ ಗಿಲ್‌ (Shubhman Gill), ರೋಹಿತ್‌ ಶರ್ಮಾ (Rohit Sharma) ಅವರನ್ನ ಔಟ್‌ ಮಾಡಲು ವಿಶೇಷ ರಣತಂತ್ರ ರಚಿಸಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: Asia Cup 2023: ಮಳೆಗೆ ಜಯ, ಭಾರತ-ಪಾಕ್‌ ಪಂದ್ಯ ರದ್ದು – ಸೂಪರ್‌-4ಗೆ ಹಾರಿದ ಪಾಕ್‌

    ಟೀಂ ಇಂಡಿಯಾ ವಿರುದ್ಧ ಆಡಲು ಕಾತುರರಾಗಿದ್ದೇವೆ. ಭಾರತ ದೊಡ್ಡ ದೇಶ, ಭಾರತದ ಎದುರು ನೇಪಾಳವನ್ನ ಪ್ರತಿನಿಧಿಸುತ್ತಿರುವುದಕ್ಕೆ ಬಹಳ ಹೆಮ್ಮೆಯಿದೆ. ಕಳೆದ 10 ವರ್ಷಗಳಲ್ಲಿ ವಿರಾಟ್‌ ಮತ್ತು ರೋಹಿತ್‌ ಭಾರತ ತಂಡದ ಪರ ಬೃಹತ್‌ ತಾರೆಗಳಾಗಿದ್ದಾರೆ. ಆದರೆ ಅವರನ್ನ ಕಟ್ಟಿಹಾಕಲು ನಾವು ನಮ್ಮದೇ ವಿಶೇಷ ರಣತಂತ್ರ ರಚಿಸಿದ್ದೇವೆ. ಅದನ್ನು ಕಾರ್ಯರೂಪಕ್ಕೆ ತರುತ್ತೇವೆ. ಈ ಪಂದ್ಯದಲ್ಲಿ ಎರಡೂ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ ಹೇಳಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ನೇಪಾಳ ತಂಡದ ಆಟಗಾರಿಗೆ ಸ್ಪೂರ್ತಿ ಎಂದು ಪೌದೆಲ್‌ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: AsiaCup 2023: ಬಾಬರ್‌, ಇಫ್ತಿಕಾರ್‌ ಶತಕದ ಅಬ್ಬರ – 238 ರನ್‌ಗಳ ಭರ್ಜರಿ ಜಯ, ಪಾಕ್‌ ಶುಭಾರಂಭ

    ಕೈ ಹಿಡಿಯುತ್ತಾರಾ ಕಿಂಗ್‌ ಕೊಹ್ಲಿ, ಗಿಲ್‌:
    ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಅಕ್ರಮಾಂಕದ ಬ್ಯಾಟರ್‌ಗಳಾದ ಗಿಲ್‌, ರೋಹಿತ್‌ ಹಾಗೂ ಕೊಹ್ಲಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ರೋಹಿತ್‌ ಶರ್ಮಾ 22 ಎಸೆತಗಳಲ್ಲಿ 11 ರನ್‌ಗಳಿಸಿದ್ರೆ ಮಂದಗತಿಯ ಬ್ಯಾಟಿಂಗ್‌ ಮಾಡಿದ ಶುಭಮನ್‌ ಗಿಲ್‌ 30 ಎಸೆತಗಳಲ್ಲಿ ಕೇವಲ 10 ರನ್‌ ಗಳಿಸಿ ವಿಕೆಟ್‌ ಕೈಚೆಲ್ಲಿದರು. ಈ ಬೆನ್ನಲ್ಲೇ ಭರವಸೆ ಆಟಗಾರ ವಿರಾಟ್‌ ಕೊಹ್ಲಿ (Virat Kohli) ಸಹ 4 ರನ್‌ ಹಾಗೂ ಸ್ಫೋಟಕ ಆರಂಭ ನೀಡಿದ್ದ ಶ್ರೇಯಸ್‌ ಅಯ್ಯರ್‌ 14 ರನ್‌ ಗಳಿಗೆ ಔಟಾಗಿ ಪೆವಿಲಿಯನ್‌ ಸೇರಿಕೊಂಡಿದ್ದರು. ಇದೀಗ ಯುವ ಆಟಗಾರರ ಬಲ ಹೊಂದಿರುವ ನೇಪಾಳ ತಂಡದ ವಿರುದ್ಧವಾದರೂ ಇವರು ಕೈಹಿಡಿಯುತ್ತಾರಾ ಅನ್ನೋ ಪ್ರಶ್ನೆ ಎದ್ದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Asia Cup ಭಾರತ Vs ನೇಪಾಳ ಪಂದ್ಯಕ್ಕೂ ಮಳೆ ಕಾಟ – ರದ್ದಾದ್ರೆ ಏನು?

    Asia Cup ಭಾರತ Vs ನೇಪಾಳ ಪಂದ್ಯಕ್ಕೂ ಮಳೆ ಕಾಟ – ರದ್ದಾದ್ರೆ ಏನು?

    ಪಲ್ಲೆಕೆಲೆ: ಏಷ್ಯಾ ಕಪ್ (Asia Cup) ಕ್ರಿಕೆಟ್‌ ಟೂರ್ನಿಯಲ್ಲಿ ಸೋಮವಾರ ಭಾರತ-ನೇಪಾಳ (India-Nepal) ಮಧ್ಯೆ ಪಂದ್ಯ ನಡೆಯಲಿದೆ. ಆದರೆ ಪಂದ್ಯಕ್ಕೂ ಮಳೆ (Rain) ಅಡ್ಡಿಯಾಗುವ ಸಂಭವ ಇದೆ.

    ಶನಿವಾರ ಪಾಕಿಸ್ತಾನ (Pakistan) ವಿರುದ್ಧದ ಪಂದ್ಯವನ್ನು ಮಳೆ ಬಲಿ ಪಡೆದಿತ್ತು. ಇದೀಗ ಈ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿದರೆ ಭಾರತ ತಂಡ ಸೂಪರ್‌ 4 ಹಂತವನ್ನು ಪ್ರವೇಶಿಸಲಿದೆ. ಇದನ್ನೂ ಓದಿ: ಕೆಎಲ್ ರಾಹುಲ್ ಫಿಟ್ – ಟೀಂ ಇಂಡಿಯಾದಿಂದ ಯಾರು ಔಟ್?

    ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನೇಪಾಳ ತಂಡವಿದೆ. ನೇಪಾಳವನ್ನು ಸೋಲಿಸಿದ್ದಕ್ಕೆ 2 ಅಂಕ, ಭಾರತದ ವಿರುದ್ಧ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಪಾಕ್‌ 1 ಅಂಕ ಸಂಪಾದಿಸಿ ಸೂಪರ್‌ 4 ಪ್ರವೇಶಿಸಿದೆ. ಭಾರತ ಈಗಾಗಲೇ 1 ಅಂಕ ಸಂಪಾದಿಸಿದ್ದು ನೇಪಾಳ ವಿರುದ್ಧ ಗೆದ್ದರೆ ಸುಲಭವಾಗಿ ಸೂಪರ್‌ 4 ಪ್ರವೇಶಲಿದೆ. ಒಂದು ವೇಳೆ ಪಂದ್ಯ ರದ್ದಾದರೂ 1 ಅಂಕ ಸಿಗುವ ಕಾರಣ ಸೂಪರ್‌ 4 ಪ್ರವೇಶ ನಿಶ್ಚಿತ. ಯಾಕೆಂದರೆ  ನೇಪಾಳ 1 ಅಂಕ ಪಡೆದರೆ ಭಾರತ  ರದ್ದಾದ ಎರಡೂ ಪಂದ್ಯಗಳಿಂದ 2 ಅಂಕ ಪಡೆಯುವ ಮೂಲಕ ಸೂಪರ್‌ 4 ಪ್ರವೇಶ ಮಾಡಲಿದೆ.

    ಪಿಚ್‌ ಹೇಗಿದೆ?
    ಆರಂಭದಲ್ಲಿ ಪಲ್ಲೆಕೆಲೆ ಪಿಚ್‌ ವೇಗಿಗಳಿಗೆ ಸಹಕಾರ ನೀಡುತ್ತದೆ. ನಂತರ ನಿಧಾನಗೊಂಡು ಬ್ಯಾಟರ್‌ಗಳಿಗೆ ಸಹಾಯ ನೀಡುತ್ತದೆ. ಈ ಕಾರಣಕ್ಕೆ ಟಾಸ್‌ ಗೆದ್ದ ತಂಡ ಆರಂಭದಲ್ಲಿ ಬ್ಯಾಟಿಂಗ್‌ ಆರಿಸಿ ದೊಡ್ಡ ಮೊತ್ತವನ್ನು ಪೇರಿಸಿ ಎದುರಾಳಿ ತಂಡಕ್ಕೆ ಒತ್ತಡ ಹೇರುತ್ತದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • AsiaCup 2023: ಬಾಬರ್‌, ಇಫ್ತಿಕಾರ್‌ ಶತಕದ ಅಬ್ಬರ – 238 ರನ್‌ಗಳ ಭರ್ಜರಿ ಜಯ, ಪಾಕ್‌ ಶುಭಾರಂಭ

    AsiaCup 2023: ಬಾಬರ್‌, ಇಫ್ತಿಕಾರ್‌ ಶತಕದ ಅಬ್ಬರ – 238 ರನ್‌ಗಳ ಭರ್ಜರಿ ಜಯ, ಪಾಕ್‌ ಶುಭಾರಂಭ

    ಇಸ್ಲಾಮಾಬಾದ್‌: ನಾಯಕ ಬಾಬರ್‌ ಆಜಂ (Babar Azam), ಇಫ್ತಿಕಾರ್‌ ಅಹ್ಮದ್ (Iftikhar Ahmed) ಶತಕದ ಬ್ಯಾಟಿಂಗ್‌ ಹಾಗೂ ಶಾದಾಬ್ ಖಾನ್ ಸ್ಪಿನ್‌ ಬೌಲಿಂಗ್‌ ದಾಳಿ ನೆರವಿನಿಂದ ಪಾಕಿಸ್ತಾನ ತಂಡ ನೇಪಾಳ ವಿರುದ್ಧ 238 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2023ರ ಏಷ್ಯಾಕಪ್‌ (AsiaCup 2023) ಟೂರ್ನಿಯ ಉದ್ಘಾಟನಾ ಆವೃತ್ತಿಯಲ್ಲಿ ಪಾಕಿಸ್ತಾನ ಗೆಲುವಿನ ಶುಭಾರಂಭ ಕಂಡಿದೆ.

    ಇಲ್ಲಿನ ಮುಲ್ತಾನ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 342 ರನ್‌ ಪೇರಿಸಿತ್ತು. 343 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ನೇಪಾಳ ತಂಡ (Nepal Team) 23.4 ಓವರ್‌ಗಳಲ್ಲೇ 104 ರನ್‌ಗಳ ಸರ್ವಪತನ ಕಂಡಿತು. ಇದನ್ನೂ ಓದಿ: AsiaCup 2023: ಉದ್ಘಾಟನೆಗೆ ರಂಗು ತುಂಬಿದ ಬಿಳಿ ಸೀರೆಯ ಸುಂದರಿ – ಈಕೆ ಯಾರು ಗೊತ್ತಾ?

    ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ನೇಪಾಳ ತಂಡ ಪಾಕ್‌ ಬೌಲರ್‌ಗಳ ದಾಳಿಗೆ ಸಂಪೂರ್ಣ ತತ್ತರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಆರಿಫ್ ಶೇಖ್ 26 ರನ್‌, ಸೋಂಪಾಲ್ ಕಾಮಿ 28 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಯಾರೊಬ್ಬರೋ ಕ್ರೀಸ್‌ನಲ್ಲಿ ಉಳಿಯದ ಕಾರಣ ಪಾಕ್‌ ತಂಡಕ್ಕೆ ಗೆಲುವು ಸುಲಭ ತುತ್ತಾಯಿತು.

    ಪಾಕ್‌ ಪರ ಸ್ಪಿನ್‌ ದಾಳಿ ನಡೆಸಿದ ಶಾದಾಬ್ ಖಾನ್ 6.4 ಓವರ್‌ಗಳಲ್ಲಿ 27 ರನ್‌ ಬಿಟ್ಟುಕೊಟ್ಟು ಪ್ರಮುಖ 4 ವಿಕೆಟ್‌ಗಳನ್ನು ಕಿತ್ತರೆ, ಶಾಹೀನ್‌ ಶಾ ಅಫ್ರಿದಿ ಹಾಗೂ ಹ್ಯಾರಿಸ್‌ ರೌಫ್‌ ತಲಾ 2 ವಿಕೆಟ್‌ ಪಡೆದರು. ನಸೀಮ್‌ ಶಾಹಾಗೂ ಮೊಹಮ್ಮದ್‌ ನವಾಜ್‌ ತಲಾ ಒಂದೊಂದು ವಿಕೆಟ್‌ ಪಡೆದು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಪಾಕ್‌ 6 ವಿಕೆಟ್ ಕಳೆದುಕೊಂಡು 342 ರನ್‌ ಕಲೆಹಾಕಿತು. ನಾಯಕ ಬಾಬರ್ ಅಜಂ ಹಾಗೂ ಇಫ್ತಿಕಾರ್ ಅಹ್ಮದ್ ಅಮೋಘ ಶತಕ ಸಿಡಿಸಿ ಅಬ್ಬರಿಸಿದರು.  ಇದನ್ನೂ ಓದಿ: AsiaCup ಟೂರ್ನಿಯಲ್ಲಿ ಭಾರತದ್ದೇ ಮೇಲುಗೈ – ಗೆದ್ದವರು, ಬಿದ್ದವರ ಕಥೆ

    ಆರಂಭಿಕರಾಗಿ ಕಣಕ್ಕಿಳಿದ ಪಖಾರ್‌ ಜಮಾನ್‌ ಹಾಗೂ ಇಮಾಮ್‌ ಉಲ್‌ ಹಕ್‌ ಉತ್ತಮ ಆರಂಭ ನೀಡುವಲ್ಲಿ ವಿಫಲವಾದರು ಮೂರನೇ ಕ್ರಮಾಂಕದಲ್ಲಿ ಬಂದ ಬಾಬರ್‌ ಆಜಂ, ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ, ಇಫ್ತಿಕಾರ್‌ ಅಹಮದ್‌ ಹಾಗೂ ಮೊಹಮದ್‌ ರಿಜ್ವಾನ್‌ ಭರ್ಜರಿ ಬ್ಯಾಟಿಂಗ್‌ ನೆರವಿಂದ ಉತ್ತಮ ರನ್‌ ಗಳಿಸುವಲ್ಲಿ ಯಶಸ್ವಿಯಾಯಿತು.

    ಬಾಬರ್ ಅಜಂ 131 ಎಸೆಗಳಲ್ಲಿ 151 ರನ್‌ (14 ಬೌಂಡರಿ, 4 ಸಿಕ್ಸರ್‌) ಬಾರಿಸಿದರೆ, ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದ ಇಫ್ತಿಕಾರ್‌ ಅಹ್ಮದ್ 71 ಎಸೆತಗಳಲ್ಲಿ ಸ್ಫೋಟಕ 109 ರನ್‌ (11 ಬೌಂಡರಿ, 4 ಸಿಕ್ಸರ್‌) ಚಚ್ಚಿದರು. ಇದರೊಂದಿಗೆ ಮೊಹಮ್ಮದ್‌ ರಿಜ್ವಾನ್‌ 50 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 44 ರನ್‌ ಕೊಡುಗೆ ನೀಡಿದರು.

    ನೇಪಾಳ ತಂಡದ ಪರ ಸಂಪಾಲ್‌ ಕಾಮಿ 2 ವಿಕೆಟ್‌ ಪಡೆದರೆ, ಕೆ.ಸಿ ಕರನ್‌, ಸಂದೀಪ್ ಲಮಿಚಾನೆ ತಲಾ ಒಂದೊಂದು ವಿಕೆಟ್‌ ಪಡೆದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • AsiaCup 2023: ಉದ್ಘಾಟನೆಗೆ ರಂಗು ತುಂಬಿದ ಬಿಳಿ ಸೀರೆಯ ಸುಂದರಿ – ಈಕೆ ಯಾರು ಗೊತ್ತಾ?

    AsiaCup 2023: ಉದ್ಘಾಟನೆಗೆ ರಂಗು ತುಂಬಿದ ಬಿಳಿ ಸೀರೆಯ ಸುಂದರಿ – ಈಕೆ ಯಾರು ಗೊತ್ತಾ?

    ಇಸ್ಲಾಮಾಬಾದ್‌: ಏಷ್ಯಾ ಕಪ್‌ (AsiaCup 2023) ಟೂರ್ನಿಯ 16ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ (Pakistan) ಮತ್ತು ನೇಪಾಳ (Nepal) ತಂಡಗಳು ಸೆಣಸಾಡುತ್ತಿವೆ.

    ಪಾಕ್‌ ತಂಡದ ನಾಯಕ ಬಾಬರ್‌ ಆಜಂ (Babar Azam) ದಾಖಲೆಯ ಶತಕ ಸಿಡಿಸಿ ಮೊದಲ ಪಂದ್ಯದಲ್ಲಿಯೇ ಮಿಂಚಿದ್ದಾರೆ. ಆದ್ರೆ ಏಷ್ಯಾಕಪ್‌ ಉದ್ಘಾಟನಾ ಕಾರ್ಯಕ್ರಮಕ್ಕೆ ರಂಗು ಚೆಲ್ಲಿದ ಗಾಯಕಿಯೊಬ್ಬರು ಸಖತ್‌ ಟ್ರೆಂಡ್‌ ಆಗುತ್ತಿದ್ದಾರೆ. ಉದ್ಘಾಟನಾ ಸಮಾರಂಭದ ವೇಳೆ ಬಿಳಿ ಸೀರೆಯುಟ್ಟ ಸುಂದರಿ, ನೇಪಾಳದ ಗಾಯಕಿ ತ್ರಿಶಾಲಾ ಗುರುಂಗ್ ತಮ್ಮ ಸುಮಧುರ ಕಂಠದಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ: AsiaCup ಟೂರ್ನಿಯಲ್ಲಿ ಭಾರತದ್ದೇ ಮೇಲುಗೈ – ಗೆದ್ದವರು, ಬಿದ್ದವರ ಕಥೆ

    ಚೆಲುವೆಯಂತೆ ಕಾಣುವ ಗಾಯಕಿ ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದು, ತ್ರಿಶಾಲಾ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನೇಪಾಳ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದಿರುವ ತ್ರಿಶಾಲಾ ವೈದ್ಯಕೀಯ ಕ್ಷೇತ್ರದ ಜೊತೆಗೆ ಗಾಯಕಿಯಾಗಿಯೂ ಜನಪ್ರಿಯತೆ ಗಳಿಸಿದ್ದಾರೆ. 28ರ ಸುಂದರಿ ನೇಪಾಳದ ಖ್ಯಾತ ಗಾಯಕ ರೋಹಿತ್‌ ಶಾಕ್ಯಾ ಅವರನ್ನ ವಿವಾಹವಾಗಿ ಸುಂದರ ಸಂಸಾರ ನಡೆಸುತ್ತಿದ್ದಾರೆ. ಇವರು ಕಳೆದ 4 ವರ್ಷಗಳ ಹಿಂದೆ ‘ಯೋ ಮನ್‌‘ ಎಂಬ ತಮ್ಮ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದರು. ಆ ನಂತರ ಇವರ ಕೀರ್ತಿ ದಿನೇ ದಿನೇ ಹೆಚ್ಚಾಗುತ್ತಿದೆ.

    ಪಾಕಿಸ್ತಾನ ಮುಲ್ತಾನ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ ತಂಡ 50 ಓವರ್‌ಗಳಲ್ಲಿ ಕೇವಲ 6 ವಿಕೆಟ್‌ ನಷ್ಟಕ್ಕೆ 342 ರನ್‌ ಗಳಿಸಿದೆ. ಇದನ್ನೂ ಓದಿ: ಹಲವು ವರ್ಷಗಳ ಹೆತ್ತವರ ಕನಸನ್ನು ಸಾಕಾರಗೊಳಿಸಿದ್ದೀರಿ- ಆನಂದ್ ಮಹೀಂದ್ರಾಗೆ ಪ್ರಜ್ಞಾನಂದ ಥ್ಯಾಂಕ್ಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]