Tag: ನೇಪಾಳ

  • ದೇಹವನ್ನ ಪೀಸ್‌ ಪೀಸ್‌ ಮಾಡಿ ತರಕಾರಿ ಜೋಡಿಸಿದಂತೆ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ; ಕ್ರೂರತೆಗೆ ಕೊನೆ ಇಲ್ವಾ?

    ದೇಹವನ್ನ ಪೀಸ್‌ ಪೀಸ್‌ ಮಾಡಿ ತರಕಾರಿ ಜೋಡಿಸಿದಂತೆ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ; ಕ್ರೂರತೆಗೆ ಕೊನೆ ಇಲ್ವಾ?

    – ಮನುಷ್ಯರು ಹೀಗೆ ಮಾಡ್ತಾರಾ ಅಂತರ ಕಣ್ಣೀರಿಟ್ಟ ಮಹಾಲಕ್ಷ್ಮಿ ತಾಯಿ

    ಬೆಂಗಳೂರು: ಕೊಲೆ ಮಾಡಿದ್ಮೇಲೆ ಜೀವನೇ ಇರಲ್ಲ. ಅಂತದ್ರಲ್ಲಿ ದೇಹವನ್ನ ತುಂಡು ತುಂಡಾಗಿ ಕತ್ತರಿಸ್ತಾನೆ ಅಂದ್ರೆ ಹಂತಕನ ಮನಸ್ಸು ಅದೆಷ್ಟು ಕ್ರೂರವಾಗಿರಬೇಕು ಅನ್ನೋದು ಫೋಟೋವೊಂದರಿಂದ ಗೊತ್ತಾಗಿದೆ.

    ಹೌದು. ಗಂಡನಿಂದ ದೂರಾಗಿದ್ದ ಮಹಿಳೆಯನ್ನ (Bengaluru Woman) ಕೊಲೆ ಮಾಡಿ 50 ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ, ಹಂತಕನ ಈ ಕ್ರೂರತ್ವ ಕುಟುಂಬದವರೇ ಬೆಚ್ಚಿ ಬೆರಗಾಗಿದ್ದಾರೆ. ಈ ಫೋಟೋ ಸಹ ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಲೆಯಾದ ಮಹಿಳೆ ತಾಯಿ ಮೀನಾ, ಮನೆ ಬೀಗ ತೇಗೆದಾಗ ಮಹಾಲಕ್ಷ್ಮಿ ದೇಹ ತುಂಡಾಗಿ ಫ್ರೀಡ್ಜ್‌ನಲ್ಲಿತ್ತು. ಕೊನೆಯದ್ದಾಗಿ ರಕ್ಷಾಬಂಧನ ಹಬ್ಬದಂದು ನೋಡಿದ್ದು, ನನಗೆ ಮನೆ ಓನರ್ ಫೋನ್‌ ಮಾಡಿದ್ರು. ಮನುಷ್ಯರು ಅನ್ನಿಸಿಕೊಂಡವರು ಇಂತಹ ಕೆಲಸ ಮಾಡ್ತಾರಾ? ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು ಎಂದು ಕಣ್ಣೀರಿಟ್ಟಿದ್ದಾರೆ.

    ಇನ್ನೂ ಮೃತ ಮಹಾಲಕ್ಷ್ಮಿ ಪತಿ ಹೇಮಂತ ಮಾತನಾಡಿ, ಮದುವೆಯಾಗಿ 6 ವರ್ಷ ಆಗಿತ್ತು. ಓನರ್‌ ಈಚೆಗೆ ರೂಂ ನಿಂದ ವಾಸನೆ ಬರ್ತಿದೆ ಅಂತ ಫೋನ್‌ ಮಾಡಿದ್ದರು. ಬಂದು ನೋಡಿದಾಗ ಹೀಗಾಗಿತ್ತು. ಮೂಲತಃ ನೇಪಾಳ ಆದ್ರು ಅವರ ಅಪ್ಪ ಇಲ್ಲೇ ನೆಲೆಸಿದ್ದರು. ಮಹಾಲಕ್ಷ್ಮಿ ಇಲ್ಲೇ ಹುಟ್ಟಿ ಬೆಳೆದವರು. ನಾನು ಬೇರೆ ಇರ್ತಿನಿ ಅಂತ ಹೇಳಿದ್ದರು. ಹಾಗಾಗಿ 9 ತಿಂಗಳಿಂದ ದೂರ ಇದ್ವಿ. ಮಗು ನನ್ನ ಜೊತೆಯೇ ಇದೆ ಎಂದಿದ್ದಾರೆ. ಇದನ್ನೂ ಓದಿ: Bengaluru | ಹೇಗೆ ನಡೆಯುತ್ತೆ ಭೀಕರ ಕೊಲೆಯ ಮರಣೋತ್ತರ ಪರೀಕ್ಷೆ?

    ನಾನು ಮಹಾಲಕ್ಷ್ಮಿ ಜೊತೆಗೆ ಸಂಪರ್ಕದಲ್ಲಿರಲಿಲ್ಲ. ಅಶ್ರಫ್ ಮೇಲೆ ದೂರು ಕೊಟ್ಟಿದ್ದಿನಿ, ಮೇ ತಿಂಗಳಲ್ಲಿ ನನಗೆ ಇವರ ಸಂಬಂಧಧ ಬಗ್ಗೆ ಗೊತ್ತಾಯ್ತು. 25 ದಿನಗಳ ಹಿಂದೆ ನೆಲಮಂಗಲದಲ್ಲಿ ಭೇಟಿ ಮಾಡಿದ್ದೆ, ಆಗ ಕೋಪ ಇರಲಿಲ್ಲ ಎಂದು ಸಹ ತಿಳಿಸಿದ್ದಾರೆ. ಇದನ್ನೂ ಓದಿ:  ನಾಗಮಂಗಲ ಗಲಭೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್‌ – ಚಿಕ್ಕಬಳ್ಳಾಪುರದಲ್ಲಿ ಗಣೇಶ ವಿಸರ್ಜನೆಗೆ 600 ಪೊಲೀಸರ ಭದ್ರತೆ

  • Bengaluru | ಹೇಗೆ ನಡೆಯುತ್ತೆ ಭೀಕರ ಕೊಲೆಯ ಮರಣೋತ್ತರ ಪರೀಕ್ಷೆ?

    Bengaluru | ಹೇಗೆ ನಡೆಯುತ್ತೆ ಭೀಕರ ಕೊಲೆಯ ಮರಣೋತ್ತರ ಪರೀಕ್ಷೆ?

    – 10 ದಿನಗಳ ಹಿಂದೆಯೇ ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು; ರಹಸ್ಯ ಸ್ಫೋಟ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಡೆಡ್ಲಿ ಮರ್ಡರ್‌ವೊಂದು ನಡೆದಿದೆ. 29 ವರ್ಷದ ಮಹಾಲಕ್ಷ್ಮಿ ಎಂಬ ಮಹಿಳೆಯನ್ನ ವ್ಯಕ್ತಿಯೋರ್ವ ರಣಭೀಕರವಾಗಿ ಹತ್ಯೆಗೈದಿದ್ದಾನೆ. ಮಹಿಳೆಯ ಮೃತದೇಹವನ್ನು ಒಂದಲ್ಲ, ಎರಡಲ್ಲ ಬರೋಬ್ಬರಿ 50ಕ್ಕೂ ಹೆಚ್ಚು ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟಿರುವ (Fridge) ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದೆ. ನಗರದ ವೈಯಾಲಿಕಾವಲ್‌ನ ಮುನೇಶ್ವರ ಬ್ಲಾಕ್‌ನಲ್ಲಿ ನಡೆದಿರುವ ಈ ಪ್ರಕರಣದಲ್ಲಿ ಒಂದೊಂದೇ ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ.

    10 ದಿನಗಳ ಹಿಂದೆಯೇ ಮೊಬೈಲ್‌ ಸ್ವಿಚ್‌ಆಫ್‌:
    ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಹತ್ತು ದಿನಗಳ ಹಿಂದೆಯೇ ಮಹಿಳೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಮಹಾಲಕ್ಷ್ಮಿ ಕಳೆದ ಒಂದು ವಾರದಿಂದ ಕೆಲಸಕ್ಕೆ ಹೋಗಿಲ್ಲ. ವಾಸವಿರುವ ಮನೆಯ ಬಳಿಯೂ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. 10 ದಿನಗಳ ಹಿಂದೆಯೇ ಮಹಾಲಕ್ಷ್ಮಿ ಮೊಬೈಲ್ (Mobile) ಸಹ ಸ್ವಿಚ್‌ಆಫ್‌ ಆಗಿದೆ. ಹಾಗಾಗಿ 10 ದಿನಗಳ ಹಿಂದೆಯೇ ಕೊಲೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆ ಕಗ್ಗೊಲೆ; ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ಯಾಕೆ ಹಂತಕ?

    ಬೌರಿಂಗ್ ಆಸ್ಪತ್ರೆಯಲ್ಲಿಂದು ಮರೋಣತ್ತರ ಪರೀಕ್ಷೆ:
    ಮಹಾಲಕ್ಷ್ಮಿ ಮೃತದೇಹ ತುಂಡುಗಳ ಮರಣೋತ್ತರ ಪರೀಕ್ಷೆ ಭಾನುವಾರ (ಇಂದು) ನಗರದ ಬೌರಿಂಗ್‌ ಆಸ್ಪತ್ರೆಯಲ್ಲಿ (Bowring Hospital) ನಡೆಯಲಿದೆ. ಬೆಳಗ್ಗೆ 10 ಘಂಟೆ ಬಳಿಕ ಪೋಸ್ಟ್ ಮಾರ್ಟಂ ಪ್ರಕ್ರಿಯೆ ಶುರುವಾಗಲಿದೆ. ಇದನ್ನೂ ಓದಿ: ಗಾಜಾದಲ್ಲಿ ಹಮಾಸ್ ಉಗ್ರರ ಮೇಲೆ ಇಸ್ರೇಲ್ ದಾಳಿ – 13 ಮಕ್ಕಳು ಸೇರಿ 22 ಮಂದಿ ಸಾವು

    ಹೇಗೆ ನಡೆಯುತ್ತೆ ಭೀಕರ ಕೊಲೆಯ ಪೋಸ್ಟ್ ಮಾರ್ಟಂ?
    1 ಮೊದಲು ಪ್ರತಿ ಪೀಸ್‌ಗೂ ನಂಬರಿಂಗ್ ಮಾಡಲಾಗುತ್ತೆ
    2 ಪ್ರತಿ ಪೀಸ್ಸ್‌ನ ರೆಡಿಯಾಲಿಜಿಕಲ್ ಎಕ್ಸಾಮೀನೇಶನ್ ಮಾಡಲಾಗುತ್ತೆ, ಸಿಟಿ ಸ್ಕ್ಯಾನ್ ಎಕ್ಸರೇ ಹೀಗೆ
    3 ಆಯ್ದ ತುಂಡುಗಳ ಟಾಕ್ಸಿಕಲ್ ಎಕ್ಸಾಮಿನೇಷನ್ ಮಾಡಲಾಗುತ್ತೆ
    4 ಆಯ್ದ ತುಂಡುಗಳ ಪ್ಯಾಥಾಲಿಜಿಕಲ್ ಎಕ್ಸಾಮಿನೇಷನ್ ಮಾಡಲಾಗುತ್ತೆ
    5 DNA ಪರೀಕ್ಷೆ ಮಾಡಲಾಗುತ್ತೆ
    6 ಅವಶ್ಯವಿದ್ದರೆ ಬಾಡಿ ರಿ ಅಸ್ಸೆಂಬಲ್ ಮಾಡಲಾಗುತ್ತೆ
    7 ಅಂತಿಮವಾಗಿ ಕಂಡು ಬಂದ ಅಂಶಗಳ ಕುರಿತು ವರದಿಯನ್ನ ಸಿದ್ಧಪಡಿಸಲಾಗುತ್ತೆ

    ಫ್ರಿಡ್ಜ್‌ನಿಂದ ರಕ್ತ ತೊಟ್ಟಿಕ್ಕುತ್ತಿತ್ತು:
    ದೇಹದ ಪೀಸ್‌ಗಳನ್ನ ನೀಟಾಗಿ ಜೋಡಿಸಿ ಫ್ರಿಡ್ಜ್ ಆನ್ ಮಾಡಿದ್ದ ಕಾರಣ ದೇಹದ ಪೀಸ್‌ಗಳು ಕೊಳೆಯುವ ಹಂತಕ್ಕೆ ಹೋಗಿರಲಿಲ್ಲ. ಬಿಲ್ಡಿಂಗ್‌ಗೆ ಎಫ್‌ಎಸ್‌ಎಲ್ ಟೀಂ ಎಂಟ್ರಿ ಕೊಟ್ಟಾಗ ಮೃತದೇಹದ ದುರ್ವಾಸನೆ ಬರುತ್ತಿತ್ತಂತೆ, ಅಷ್ಟೇ ಅಲ್ಲ ಫ್ರಿಡ್ಜ್‌ನೊಳಗೆ ಇಟ್ಟಿದ್ದ ದೇಹದ ತುಂಡುಗಳಿಂದ ರಕ್ತ ತೊಟ್ಟಿಕ್ಕುತ್ತಿದ್ದವು ಎನ್ನಲಾಗಿದೆ. ಕರೆಂಟ್ ಹೋದಂತ ಸಂಧರ್ಬದಲ್ಲಿ ಒಂದಷ್ಟು ರಕ್ತ ಫ್ರಿಡ್ಜ್ ನಿಂದ ಕೆಳ ಬಿದ್ದಿತ್ತು ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಡಿಸಿಗೆ ಧಮ್ಕಿ ಹಾಕ್ತಿದ್ದಾರೆ, ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲ್ಲ: ಡಿಕೆಶಿ ಗರಂ

    https://youtu.be/_6AUt6S8aQM?si=-30qMwrG26AuzF7y

  • ಬೆಂಗಳೂರಿನಲ್ಲಿ ಮಹಿಳೆ ಕಗ್ಗೊಲೆ; ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ಯಾಕೆ ಹಂತಕ?

    ಬೆಂಗಳೂರಿನಲ್ಲಿ ಮಹಿಳೆ ಕಗ್ಗೊಲೆ; ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ಯಾಕೆ ಹಂತಕ?

    ಬೆಂಗಳೂರು: ಬಾಡಿಗೆಮನೆಯಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು 30ಕ್ಕೂ ಹೆಚ್ಚು ಪೀಸ್ ಆಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ (Fridge) ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳು ಬೆಳಕಿಗೆ ಬರುತ್ತಿವೆ. ಇದೀಗ ಕೊಲೆಗೈದ ಹಂತಕ ಹತ್ಯೆ ಮಾಡಿದ ದಿನ ಮತ್ತು ತಪ್ಪಿಸಿಕೊಳ್ಳಲು ಸಮಯ ಸಿಗುತ್ತದೆ ಎಂಬ ಸಲುವಾಗಿ ಮಹಿಳೆಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

    ಬಿಹಾರ ಮೂಲದ ಮಹಾಲಕ್ಷ್ಮಿ (29) ಕೊಲೆಯಾದ ದುರ್ದೈವಿ. ಈಕೆ ಈ ಮೊದಲು ಗಂಡ ಮತ್ತು 4 ವರ್ಷದ ಮಗುವಿನೊಂದಿಗೆ ನೆಲಮಂಗಲದಲ್ಲಿ ವಾಸವಾಗಿದ್ದಳು. ಕಳೆದ 6 ತಿಂಗಳ ಹಿಂದೆ ಗಂಡ-ಹೆಂಡತಿ ನಡುವೆ ಮನಸ್ಥಾಪ ಉಂಟಾಗಿತ್ತು. ಈ ಹಿನ್ನೆಲೆ ಮಹಾಲಕ್ಷ್ಮಿ ಗಂಡನಿಂದ ದೂರವಾಗಿ 3 ತಿಂಗಳಿನಿಂದ ಒಬ್ಬಂಟಿಯಾಗಿ ಬೆಂಗಳೂರಿನ (Bengaluru) ವೈಯಾಲಿಕಾವಲ್‌ನ (Vyalikaval) ವಿನಾಯಕನಗರದಲ್ಲಿ (Vinayaka Nagara) ಬಾಡಿಗೆ ಮನೆಯಲ್ಲಿದ್ದರು. ಅಲ್ಲದೇ ಪ್ರತಿಷ್ಠಿತ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ. ಇಂದು ಆಕೆ ವಾಸವಿದ್ದ ಮನೆಯಿಂದ ವಾಸನೆ ಬರುತ್ತಿದೆ ಎಂದು ಅವರ ಸಂಬಂಧಿಕರು ಬಾಗಿಲು ತೆಗೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಗಾಜಾದಲ್ಲಿ ಹಮಾಸ್ ಉಗ್ರರ ಮೇಲೆ ಇಸ್ರೇಲ್ ದಾಳಿ – 13 ಮಕ್ಕಳು ಸೇರಿ 22 ಮಂದಿ ಸಾವು

    ಮರಣೋತ್ತರ ಪರೀಕ್ಷಾ ವರದಿಯಿಂದ ಕೊಲೆ ನಡೆದ ದಿನಾಂಕ ಹೊರಬರುತ್ತಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ದೇಹ ತುಂಡರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿರುವುದರಿಂದ ಕೊಲೆ ನಡೆದ ದಿನ, ಸಮಯ ಪತ್ತೆ ಹಚ್ಚೋದು ಅಷ್ಟು ಸುಲಭವಲ್ಲ. ಸಾಮಾನ್ಯವಾಗಿ ಸಾವು ಹೇಗಾಯಿತು? ಕೊಲೆ ನಡೆದ ಸಮಯ ಪತ್ತೆ ಹಚ್ಚಲು ಪೋಸ್ಟ್ ಮಾರ್ಟಂ ಮಾಡಲಾಗುತ್ತದೆ. ಆದರೆ ಇಲ್ಲಿ ಹಂತಕನೇ ಮಹಿಳೆಯನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಅಲ್ಲದೇ ದೇಹದ ತುಂಡುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದಾನೆ. ಹೀಗಾಗಿ ಯಾವಾಗ ಕೊಲೆಯಾಗಿದೆ ಎಂದು ಪತ್ತೆ ಮಾಡೋದು ಕಷ್ಟ. ಹಂತಕ ಸಿಕ್ಕ ಬಳಿಕವಷ್ಟೇ ಕೊಲೆ ನಡೆದ ದಿನ ಹಾಗೂ ಕೊಲೆಯ ಉದ್ದೇಶ ಪತ್ತೆಯಾಗಬೇಕಿದೆ. ಇದನ್ನೂ ಓದಿ: ಕುಮಾರಸ್ವಾಮಿ ಡಿಸಿಗೆ ಧಮ್ಕಿ ಹಾಕ್ತಿದ್ದಾರೆ, ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲ್ಲ: ಡಿಕೆಶಿ ಗರಂ

    ಪೊಲೀಸರಿಗೆ ಈ ಕೊಲೆ ತನಿಖೆಯೇ ಚಾಲೆಂಜ್ ಆಗಿದೆ. ಎಷ್ಟು ದಿನದ ಹಿಂದೆ ಕೊಲೆಯಾಗಿದೆ ಎನ್ನುವ ಬಗ್ಗೆ ಖಚಿತತೆ ಇಲ್ಲದಿರುವುದರಿಂದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಎಷ್ಟು ದಿನದ ಹಿಂದಿನಿಂದ ಈಕೆ ಹೊರಬಂದಿಲ್ಲ ಎನ್ನುವ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ. ಈಕೆ ಕೆಲಸ ಮಾಡುತ್ತಿದ್ದ ಜಾಗದಲ್ಲೂ ವಿಚಾರಣೆ ನಡೆಸಲಾಗುತ್ತಿದೆ. ಎಷ್ಟು ದಿನದಿಂದ ಕೆಲಸಕ್ಕೆ ಬಂದಿಲ್ಲ? ರಜೆ ಹಾಕುವ ಬಗ್ಗೆ ಮುಂಚಿತವಾಗಿ ಮಾಹಿತಿ ಕೊಟ್ಟಿದ್ರಾ? ಕೆಲಸಗಾರರ ಬಳಿ ಏನಾದ್ರೂ ಹೇಳಿಕೊಂಡಿದ್ರಾ ಹಾಗೂ ಆಕೆಯ ಲಾಸ್ಟ್ ಕಾಲ್ ಬಗ್ಗೆ ಕೂಡ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಟವರ್ ಡಂಪ್ ತೆಗೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಮರ್ ಪ್ರೀತ್ ಸಿಂಗ್ ವಾಯುಸೇನಾ ಮುಖ್ಯಸ್ಥರಾಗಿ ನೇಮಕ

    ಕೊಲೆ ಮಾಡಿ ಎಸ್ಕೇಪ್ ಆಗಲು ಹಂತಕ ಮಾಸ್ಟರ್ ಪ್ಲಾನ್ ಮಾಡಿದ್ನಾ ಎಂಬ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದೆ. ಫ್ರಿಜ್‌ನಲ್ಲಿ ಮೃತ ದೇಹದ ತುಂಡು ಕತ್ತರಿಸಿ ಇಟ್ಟರೆ ಅಷ್ಟು ಸುಲಭದಲ್ಲಿ ಗೊತ್ತಾಗಲ್ಲ. ತಪ್ಪಿಸಿಕೊಳ್ಳಲು ಸಮಯ ಸಿಗುತ್ತೆ ಎಂದು ಈ ಪ್ಲಾನ್ ಮಾಡಿದ್ನಾ? 15 ದಿನದ ಹಿಂದೆ ಕೊಲೆ ಆಗಿದ್ದರೂ ಕೂಡ ವಾಸನೆ ಬರೋದಿಲ್ಲ ಎಂದು ಫ್ರಿಡ್ಜ್ ಕೂಡ ಆನ್ ಮಾಡಿ ಇಟ್ಟುಹೋಗಿದ್ನಾ ಎಂಬ ಸಾಕಷ್ಟು ಅನುಮಾನ ಹುಟ್ಟುಕೊಂಡಿವೆ. ತಪ್ಪಿಸಿಕೊಳ್ಳಲು ಸಮಯ ಬೇಕಾಗುತ್ತೆ ಅಂತಲೇ ಈ ರೀತಿ ಮಾಡಿದ್ನಾ ಎಂಬ ಸಂಶಯ ಮೂಡಿದೆ. ಆರೋಪಿಯ ಜಾಡು ಪತ್ತೆ ಮಾಡುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಇದನ್ನೂ ಓದಿ: ಇಂದಿನಿಂದ ಮೋದಿ ಅಮೆರಿಕ ಪ್ರವಾಸ – 2 ಸ್ಟೇಜ್, 400 ಕಲಾವಿದರು

    ಕೊಲೆಯಾದ ಮಹಾಲಕ್ಷ್ಮಿ ಗಂಡ ಹೇಮಂತ್ ದಾಸ್ ಮಗುವಿನೊಂದಿಗೆ ನೆಲಮಂಗಲ ನಗರದ ಲೋಹತ್ ನಗರದಲ್ಲಿ ವಾಸ ಮಾಡುತ್ತಿದ್ದರು. 2023ರ ಡಿಸೆಂಬರ್ 1ರಂದು ಗಂಡ-ಹೆಂಡತಿ ವಿಚಾರದಲ್ಲಿ ಗಲಾಟೆ ನಡೆದು ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸರು ಎನ್‌ಸಿ ದಾಖಲು ಮಾಡಿ ಇಬ್ಬರನ್ನೂ ಕರೆಸಿ ರಾಜಿ ಸಂಧಾನ ಮಾಡಿದ್ದರು. ನಂತರ ಇಬ್ಬರು ಒಟ್ಟಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ದಿನ ಬಂದಿತ್ತು 300 ಕೆಜಿ ತಿರುಪತಿ ಲಡ್ಡು

    ಹೇಮಂತ್ ದಾಸ್ ನೇಪಾಳ ಮೂಲದವರಾಗಿದ್ದುಪತ್ನಿ ಅಕ್ರಮ ಸಂಬಂಧ ಹೊಂದಿದ್ದ ಬಗ್ಗೆ ಗಂಡನಿಗೆ ಅನುಮಾನವಿತ್ತಾ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಪತ್ನಿಗೆ ಅನ್ಯ ಸಮುದಾಯದ ಯುವಕನ ಸಂಪರ್ಕ ಇದ್ದ ಬಗ್ಗೆ ಪತಿ ಹೇಮಂತ್ ದಾಸ್ ಎಚ್ಚರಿಕೆ ನೀಡಿದ್ದರು ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಪತ್ನಿಗೆ ನೆಲಮಂಗಲದಲ್ಲಿ ಮೊಬೈಲ್ ಅಂಗಡಿ ಕೂಡ ಇಟ್ಟುಕೊಟ್ಟಿದ್ದರು. ನಂತರದಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಸಾಕಷ್ಟು ಬಾರಿ ಗಲಾಟೆ ನಡೆದಿತ್ತು. ಬಳಿಕ ಮಹಾಲಕ್ಷ್ಮಿ ಗಂಡನನ್ನು ತೊರೆದು ಬೆಂಗಳೂರು ನಗರದಲ್ಲಿ ವಾಸವಿದ್ದಳು. ಇದನ್ನೂ ಓದಿ: ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಲಾಂಚ್ ಆಯ್ತು ಟ್ರೈಲರ್

    ದೇಹದ ತುಂಡುಗಳಿಂದ ಹಂತ ಹಂತವಾಗಿ ರಕ್ತ ಫ್ರಿಜ್‌ನಿಂದ ತೊಟ್ಟಿಕ್ಕಿದೆ. ಬಳಿಕ ರಕ್ತ ತೊಟ್ಟಿಕ್ಕಿ ಗೊಬ್ಬರ ಮಾದರಿ ಆಗಿ ಹುಳ ಆಗಿದೆ. ಸದ್ಯ ಪೊಲೀಸರು ಹಾಗು ಎಫ್‌ಎಸ್‌ಎಲ್ ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ ಸಿಕ್ಕಿರುವ ಎಫ್‌ಎಸ್‌ಎಲ್ ಫ್ರೀಜರ್‌ನಿಂದ ದೇಹದ ಪೀಸ್‌ಗಳನ್ನು ಹೊರ ತೆಗೆದು ಎಲ್ಲಾ ಆಯಾಮದಲ್ಲಿ ಸ್ಯಾಂಪಲ್ಸ್ ಕಲೆಹಾಕಿದ್ದಾರೆ. ಮಹಾಲಕ್ಷ್ಮಿ ಜೊತೆ ಓರ್ವ ಯುವಕ ನಿರಂತರ ಸಂಪರ್ಕದಲ್ಲಿದ್ದು, ಪಿಕಪ್ ಡ್ರಾಪ್ ಕೊಡುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಹೀಗಾಗಿ ಆತನ ಮೇಲೆ ಬಲವಾದ ಶಂಕೆ ವ್ಯಕ್ತವಾಗಿದ್ದು, ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ದೆಹಲಿಯ ನೂತನ ಸಿಎಂ ಆಗಿ ಅತಿಶಿ ಮರ್ಲೆನಾ ಪ್ರಮಾಣವಚನ ಸ್ವೀಕಾರ

  • ನೇಪಾಳದಲ್ಲಿ ನದಿಗೆ ಉರುಳಿತು 40 ಭಾರತೀಯರಿದ್ದ ಬಸ್ಸು – 14 ಮಂದಿ ಸಾವು

    ನೇಪಾಳದಲ್ಲಿ ನದಿಗೆ ಉರುಳಿತು 40 ಭಾರತೀಯರಿದ್ದ ಬಸ್ಸು – 14 ಮಂದಿ ಸಾವು

    ಕಠ್ಮಂಡು: 40 ಮಂದಿ ಭಾರತೀಯ ಪ್ರಯಾಣಿಕರಿದ್ದ ಬಸ್ ನದಿಗೆ ಪಲ್ಟಿ ಹೊಡೆದಿರುವ ಘಟನೆ ನೇಪಾಳದಲ್ಲಿ (Nepal) ನಡೆದಿದೆ.

    ನೇಪಾಳದ ತನಾಹುನ್ ಜಿಲ್ಲೆಯ (Tanahun District) ಮರ್ಸ್ಯಾಂಗ್ಡಿ ನದಿಗೆ (Marsyangdi River) ಬಸ್ ಉರುಳಿದೆ. ಉತ್ತರಪ್ರದೇಶದ (Uttar Pradesh) ಎಫ್‌ಟಿ 7623 ನಂಬರ್ ಪ್ಲೇಟ್ ಹೊಂದಿದ್ದ ಬಸ್ ನದಿಗೆ ಪಲ್ಟಿಹೊಡೆದಿದೆ. ತನಾಹುನ್ ಜಿಲ್ಲೆಯ ಡಿಎಸ್‌ಪಿ ದೀಪ್‌ಕುಮಾರ್ ರಾಯಾ (DSP Deepkumar Roy) ದೂರವಾಣಿಯ ಮೂಲಕ ದೃಢಪಡಿಸಿದ್ದಾರೆ.ಇದನ್ನೂ ಓದಿ: ಅನಿಲ್‌ ಅಂಬಾನಿಗೆ ಸೆಬಿ ಶಾಕ್‌ – ಸೆಕ್ಯೂರಿಟೀಸ್‌ ಮಾರುಕಟ್ಟೆಯಿಂದ 5 ವರ್ಷ ಬ್ಯಾನ್‌, 25 ಕೋಟಿ ದಂಡ

    40 ಭಾರತೀಯ ಪ್ರಯಾಣಿಕರಿದ್ದ ಬಸ್ ಪೋಖರಾದಿಂದ (Pokhara) ಕಠ್ಮಂಡುವಿನಿಂದ (Kathmandu) ತೆರಳುತ್ತಿತ್ತು. ಆಗ ತನಾಹುನ್ ಜಿಲ್ಲೆಯ ಮರ್ಸ್ಯಾಂಗ್ಡಿ ನದಿಗೆ ಉರುಳಿದೆ. 14 ಜನರು ಸಾವನ್ನಪ್ಪಿದ್ದು ಮತ್ತು 16 ಮಂದಿ ಗಾಯಗೊಂಡಿದ್ದಾರೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.

    ಅಪಘಾತ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಬಸ್ಸು ರಸ್ತೆಯಿಂದ ಸುಮಾರು 300 ಮೀಟರ್ ಉರುಳಿ ನದಿಗೆ ಬಿದ್ದಿದೆ.ಇದನ್ನೂ ಓದಿ: ದಶಕದ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಮಳೆ ದಾಖಲು

  • Women’s Asia Cup: ನೇಪಾಳ ವಿರುದ್ಧ 82 ರನ್‌ಗಳ ಭರ್ಜರಿ ಗೆಲುವು – ಸೆಮಿಸ್‌ಗೆ ಲಗ್ಗೆಯಿಟ್ಟ ಭಾರತ

    Women’s Asia Cup: ನೇಪಾಳ ವಿರುದ್ಧ 82 ರನ್‌ಗಳ ಭರ್ಜರಿ ಗೆಲುವು – ಸೆಮಿಸ್‌ಗೆ ಲಗ್ಗೆಯಿಟ್ಟ ಭಾರತ

    ಡಂಬುಲ್ಲಾ: ಶಫಾಲಿ ವರ್ಮಾ (Shafali Verma) ಸ್ಫೋಟಕ ಬ್ಯಾಟಿಂಗ್‌, ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದ ಭಾರತ ಮಹಿಳಾ ಕ್ರಿಕೆಟ್‌ ತಂಡವು ನೇಪಾಳ ತಂಡದ ವಿರುದ್ಧ 82 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2024ರ ಮಹಿಳಾ ಟಿ20 ಏಷ್ಯಾಕಪ್‌ (Women’s Asia Cup 2024) ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದೆ. ಹಾಲಿ ಚಾಂಪಿಯನ್ಸ್‌ ಸಹ ಆಗಿರುವ ಭಾರತ 2024ರಲ್ಲಿ ಮಹಿಳಾ ಏಷ್ಯಾಕಪ್‌ ಟೂರ್ನಿಯ ಸೆಮಿಸ್‌ಗೆ ಎಂಟ್ರಿ ಕೊಟ್ಟ ಮೊದಲ ತಂಡವೂ ಆಗಿದೆ.

    ಇಲ್ಲಿನ ರಣಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 178 ರನ್‌ ಬಾರಿಸಿತ್ತು. 179 ರನ್‌ಗಳ ಗುರಿ ಬೆನ್ನಟ್ಟಿದ ನೇಪಾಳ ತಂಡ (Nepal Womens Team) ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ ಕೇವಲ 96 ರನ್‌ಗಳಿಸಿ ಹೀನಾಯ ಸೋಲು ಕಂಡಿತು. ಇದನ್ನೂ ಓದಿ: ಭದ್ರತಾ ಕಾರಣಕ್ಕಾಗಿ ಭಾರತ ಸರ್ಕಾರ ಅನುಮತಿ ನಿರಾಕರಿಸಿದ್ರೆ ಬಿಸಿಸಿಐ ಬರೆದುಕೊಡಲಿ – ಪಾಕ್‌ ಪಟ್ಟು!

    ಸ್ಮೃತಿ ಮಂಧಾನ (Smriti Mandhana) ನಾಯಕತ್ವದಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ ಪರ ಶಫಾಲಿ ವರ್ಮಾ ಎದುರಾಳಿ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು. 48 ಎಸೆತಗಳಲ್ಲಿ ಸ್ಫೋಟಕ 81 ರನ್‌ (12 ಬೌಂಡರಿ, 1 ಸಿಕ್ಸರ್)‌ ಚಚ್ಚಿದರು. ಇದರೊಂದಿಗೆ ದಯಾಳನ್‌ ಹೇಮಲತಾ 47 ರನ್‌ (42 ಎಸೆತ, 5 ಬೌಂಡರಿ, 1 ಸಿಕ್ಸರ್)‌, ಸಜೀವನ್‌ ಸಜನ 10 ರನ್‌, ಜೆಮಿಮಾ ರೊಡ್ರಿಗ್ಸ್‌ 28 ರನ್‌ ಹಾಗೂ ರಿಚಾ ಘೋಷ್‌ 6 ರನ್‌ ಗಳಿಸಿ ಮಿಂಚಿದರು. ಇದನ್ನೂ ಓದಿ: Paris Olympic 2024: ಭಾರತೀಯ ಕ್ರೀಡಾಪಟುಗಳಿಗೆ 8.5 ಕೋಟಿ ನೆರವು ಘೋಷಿಸಿದ ಬಿಸಿಸಿಐ

    ಸ್ಫರ್ಧಾತ್ಮಕ ಗುರಿ ಬೆನ್ನಟ್ಟಿದ ನೇಪಾಳ ಟೀಂ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿ, ಆರಂಭದಿಂದಲೇ ವಿಕೆಟ್‌ ಕಳೆದುಕೊಂಡಿತು. ನೇಪಾಳ ಪರ ನಾಯಕಿ ಇಂದು ಬರ್ಮಾ 14 ರನ್‌, ಸೀತಾ ರಾಣಾ ಮಗರ್ 18 ರನ್‌, ರುಬಿನಾ 15 ರನ್‌ ಹಾಗೂ ಬಿಂದು 17 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಆಟಗಾರ್ತಿಯರು ಅಲ್ಪಮೊತ್ತಕ್ಕೆ ಪೆವಿಲಿಯನ್‌ನತ್ತ ಮುಖ ಮಾಡಿದರು. ಇದರಿಂದ ಗೆಲುವು ಸುಲಭವಾಗಿ ಭಾರತದ ವನಿತೆಯರ ಪಾಲಾಯಿತು.

    ಟೀಂ ಇಂಡಿಯಾ ಪರ ದೀಪ್ತಿ ಶರ್ಮಾ 3 ವಿಕೆಟ್‌ ಕಿತ್ತರೆ, ಅರುಂಧತಿ ರೆಡ್ಡಿ, ರಾಧಾ ಯಾದವ್‌ ತಲಾ 2 ವಿಕೆಟ್‌ ಹಾಗೂ ರೇಣಿಕಾ ಸಿಂಗ್‌ 1 ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: ಮುಂಬೈಗೆ ಗುಡ್‌ಬೈ ಹೇಳ್ತಾರಾ ರೋಹಿತ್‌, ಬುಮ್ರಾ, ಸೂರ್ಯ? – 2025ರ ಐಪಿಎಲ್‌ನ ಮಹತ್ವದ 5 ಬೆಳವಣಿಗೆಗಳು ಹೀಗಿವೆ

  • ಭಾರೀ ಮಳೆಗೆ ನೇಪಾಳದಲ್ಲಿ ಗುಡ್ಡ ಕುಸಿತ – ರಸ್ತೆ ಮಧ್ಯೆ ಸಿಲುಕಿದ ಕನ್ನಡಿಗ ಯಾತ್ರಾರ್ಥಿಗಳು

    ಭಾರೀ ಮಳೆಗೆ ನೇಪಾಳದಲ್ಲಿ ಗುಡ್ಡ ಕುಸಿತ – ರಸ್ತೆ ಮಧ್ಯೆ ಸಿಲುಕಿದ ಕನ್ನಡಿಗ ಯಾತ್ರಾರ್ಥಿಗಳು

    – ರಕ್ಷಣಾ ಪಡೆಯಿಂದ ಯಾತ್ರಾರ್ಥಿಗಳ ರಕ್ಷಣೆ

    ಕಾಠ್ಮಂಡು: ಭಾರೀ ಮಳೆ ಹಿನ್ನೆಲೆ ನೇಪಾಳದಲ್ಲಿ (Nepal) ಗುಡ್ಡ ಕುಸಿದ (Land Slide) ಪರಿಣಾಮ ಮುಕ್ತಿನಾಥ ದೇವಾಲಯಕ್ಕೆ ತೆರಳಿದ್ದ ಕನ್ನಡಿಗ ಯಾತ್ರಾರ್ಥಿಗಳು (Kannadiga Pilgrims) ರಸ್ತೆ ಮಧ್ಯೆ ಸಂಕಷ್ಟಕ್ಕೀಡಾಗಿದ್ದಾರೆ.

    ಭಾರೀ ಮಳೆಗೆ ನೇಪಾಳದಲ್ಲಿ ಗುಡ್ಡ ಬಂಡೆಗಳು ಕುಸಿದಿವೆ. 50 ಮಂದಿ ಯಾತ್ರಾರ್ಥಿಗಳು ಎರಡು ದಿನದ ಹಿಂದೆ ಬೆಂಗಳೂರಿನಿಂದ ನೇಪಾಳದ ಮುಕ್ತಿನಾಥ ದೇವಾಲಯಕ್ಕೆ ತೆರಳಿದ್ದರು. ಗುಡ್ಡ ಕುಸಿದ ಪರಿಣಾಮ ನೇಪಾಳದ ಪ್ರೋಕ್ರಾದಿಂದ ಮುಕ್ತಿನಾಥ ದೇವಾಲಯ ರಸ್ತೆಯಲ್ಲಿ ಯಾತ್ರಾರ್ಥಿಗಳು ಸಿಲುಕಿದ್ದಾರೆ. ಇದನ್ನೂ ಓದಿ: ಉತ್ತರ ಭಾರತದಲ್ಲಿ ಕರ್ನಾಟಕ ಶಾಸಕರ ಅಧ್ಯಯನ ಪ್ರವಾಸ

    ಭಾರೀ ಮಳೆಗೆ ಗುಡ್ಡ ಕುಸಿದು ವಾಹನಗಳು ಪಲ್ಟಿಯಾಗಿವೆ. ಯಾತ್ರಾರ್ಥಿಗಳು 11 ದಿನಗಳ ಪ್ರವಾಸಕ್ಕೆಂದು ತೆರಳಿದ್ದರು. ಸದ್ಯ ಎಲ್ಲಾ ಕನ್ನಡಿಗರು ಅಪಾಯದಿಂದ ಪಾರಾಗಿರುವ ಮಾಹಿತಿ ಲಭಿಸಿದೆ. ರಕ್ಷಣಾ ಪಡೆ ಎಲ್ಲಾ ಕನ್ನಡಿಗ ಯಾತ್ರಾರ್ಥಿಗಳನ್ನು ರಕ್ಷಣೆ ಮಾಡಿದೆ. ಸದ್ಯ ಎಲ್ಲಾ ಯಾತ್ರಾರ್ಥಿಗಳು ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಇದನ್ನೂ ಓದಿ: ಕೆಂಗೇರಿಯಲ್ಲಿ ತಡೆಗೋಡೆಗೆ ಬೈಕ್ ಡಿಕ್ಕಿ – ನಾಪತ್ತೆಯಾಗಿದ್ದ ಯುವಕನ ಶವ ರಾಜಕಾಲುವೆಯಲ್ಲಿ ಪತ್ತೆ

  • 16ನೇ ವಯಸ್ಸಿಗೆ ವಿಶ್ವದ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರ ಏರಿ ಭಾರತದ ಬಾಲಕಿ ಸಾಧನೆ

    16ನೇ ವಯಸ್ಸಿಗೆ ವಿಶ್ವದ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರ ಏರಿ ಭಾರತದ ಬಾಲಕಿ ಸಾಧನೆ

    ನವದೆಹಲಿ: ಭಾರತದ 16 ವಯಸ್ಸಿನ ಬಾಲಕಿ ವಿಶ್ವದ ಅತಿ ಎತ್ತರದ ಮೌಂಟ್‌ ಎವರೆಸ್ಟ್‌ (Mount Everest) ಶಿಖರವನ್ನು ನೇಪಾಳ (Nepal) ಕಡೆಯಿಂದ ಏರುವ ಮೂಲಕ ಸಾಧನೆ ಮಾಡಿದ್ದಾರೆ. ಎತ್ತರದ ಶಿಖರ ಏರಿದ ಅತ್ಯಂತ ಕಿರಿಯ ಭಾರತೀಯ ವರ್ವತಾರೋಹಿ ಎನಿಸಿಕೊಂಡಿದ್ದಾರೆ.

    ಭಾರತೀಯ ನೌಕಾಪಡೆಯ ಅಧಿಕಾರಿ ಮಗಳು ಹಾಗೂ 12ನೇ ತರಗತಿ ವಿದ್ಯಾರ್ಥಿನಿ ಕಾಮ್ಯ ಕಾರ್ತಿಕೇಯನ್‌ (Kaamya Karthikeyan), ತನ್ನ ತಂದೆ ಜೊತೆ ಏ.3 ರಂದು ಮೌಂಟ್‌ ಎವರೆಸ್ಟ್‌ ಏರುವ ಕಾರ್ಯ ಶುರುಮಾಡಿದ್ದರು. ಮೇ 20 ರಂದು 8,849 ಮೀಟರ್‌ ಎವರೆಸ್ಟ್‌ ಯಶಸ್ವಿಯಾಗಿ ಏರಿದ್ದಾರೆ. ಇದನ್ನೂ ಓದಿ: ಆರೋಪಿ ಬಂಧನಕ್ಕೆ ಏಮ್ಸ್‌ ಒಳಗಡೆ ವಾಹನ ನುಗ್ಗಿಸಿದ ಪೊಲೀಸರು!

    ಪಶ್ಚಿಮ ನೌಕಾ ಕಮಾಂಡ್ ಎಕ್ಸ್‌ನಲ್ಲಿ ಕಾಮ್ಯ ಫೋಟೊ ಹಂಚಿಕೊಂಡು ಆಕೆಯ ಸಾಧನೆ ಕೊಂಡಾಡಿದೆ. ಮೌಂಟ್‌ ಎವರೆಸ್ಟ್‌ ಏರಿದ ವಿಶ್ವದ ಎರಡನೇ ಕಿರಿಯ ಹುಡುಗಿ ಮತ್ತು ನೇಪಾಳದ ಕಡೆಯಿಂದ ವಿಶ್ವದ ಅತಿ ಎತ್ತರದ ಶಿಖರವನ್ನು ಏರಿದ ಕಿರಿಯ ಭಾರತೀಯ ಪರ್ವತಾರೋಹಿಯಾಗಿದ್ದಾರೆ ಎಂದು ಬರೆದುಕೊಂಡಿದೆ.

    2020 ರಲ್ಲಿ ದಕ್ಷಿಣ ಅಮೆರಿಕಾ ಮತ್ತು ಏಷ್ಯಾದ ಹೊರಗಿನ ಅತ್ಯುನ್ನತ ಶಿಖರವಾದ ಮೌಂಟ್ ಅಕೊನ್‌ಕಾಗುವಾವನ್ನು ಏರಿದ ವಿಶ್ವದ ಅತ್ಯಂತ ಕಿರಿಯ ಹುಡುಗಿ ಎನಿಸಿಕೊಂಡಿದ್ದಾರೆ. ಏಳು ಖಂಡಗಳ ಪೈಕಿ ಆರರಲ್ಲಿ ಅತ್ಯುನ್ನತ ಶಿಖರಗಳನ್ನು ಏರುವಲ್ಲಿ ಅಪಾರ ಧೈರ್ಯ ಪ್ರದರ್ಶಿಸಿದ್ದಕ್ಕಾಗಿ ಭಾರತೀಯ ನೌಕಾಪಡೆಯು ಕಾಮ್ಯಳನ್ನು ಶ್ಲಾಘಿಸಿದೆ. ಇದನ್ನೂ ಓದಿ: ಮೊದಲ ಬಾರಿ ನೈಟ್ ವಿಷನ್ ಗಾಗಲ್ಸ್ ಬಳಸಿ ವಿಮಾನ ಲ್ಯಾಂಡ್ ಮಾಡಿದ ಐಎಎಫ್

    ಎಲ್ಲಾ ಏಳು ಖಂಡಗಳ ಅತಿ ಎತ್ತರದ ಶಿಖರಗಳನ್ನು ಏರುವ ಆಕಾಂಕ್ಷೆ ಹೊಂದಿರುವ ಕಾಮ್ಯಳಿಗೆ ಭಾರತೀಯ ನೌಕಾಪಡೆ ಶುಭಹಾರೈಸಿದೆ.

  • ರಾಮನ ಅತ್ತೆ ಮನೆ ಜನಕಪುರದಲ್ಲಿಯೂ ಹಬ್ಬದ ವಾತಾವರಣ

    ರಾಮನ ಅತ್ತೆ ಮನೆ ಜನಕಪುರದಲ್ಲಿಯೂ ಹಬ್ಬದ ವಾತಾವರಣ

    – ವಿದ್ಯುದ್ದೀಪಗಳಿಂದ ಕಂಗೊಳಿಸ್ತಿದೆ ಜಾನಕಿ ಮಂದಿರ

    ಕಠ್ಮಂಡು: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಇಂದು ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ (Pran Prathistha ceremony) ಕ್ಷಣಗಣನೆ ನಡೆಯುತ್ತಿದ್ದರೆ, ಇತ್ತ ರಾಮನ ಅತ್ತೆ ಮನೆ ನೇಪಾಳದಲ್ಲಿಯೂ ಹಬ್ಬದ ಸಡಗರ ಜೋರಾಗಿದೆ.

    ಹೌದು. ನೇಪಾಳದ ಜನಕಪುರದಲ್ಲಿರುವ (Janakpur) ಜಾನಕಿ ದೇವಾಲಯದಲ್ಲಿ ಸಕಲ ತಯಾರಿಗಳು ನಡೆದಿದೆ. ಇನ್ನೂ ದೇಗುಲವು ವಿದ್ಯುದ್ದೀಪಗಳಿಂದ ಕಣ್ಮನ ಸೆಳೆಯುತ್ತಿದೆ. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯುತ್ತಿದ್ದಂತೆಯೇ, ಜನಕ್‌ಪುರದಲ್ಲಿ ಸಂತೋಷ ಮತ್ತು ಹಬದ ರೀತಿಯಲ್ಲಿ ಸಂಭ್ರಮಿಸಲಾಗುತ್ತದೆ. ಇದು ಎರಡು ಸ್ಥಳಗಳ ನಡುವೆ ಹಂಚಿಕೊಂಡಿರುವ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಒತ್ತಿಹೇಳುತ್ತದೆ.

    ಈ ಸಂಬಂಧ ಶ್ರೀರಾಮ ಯುವ ಸಮಿತಿಯ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ಚೌಧರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ತ್ರೇತಾಯುಗದ ವನವಾಸದ ಸಂದರ್ಭದಲ್ಲಿ ರಾಮಚಂದ್ರ ಅನುಭವಿಸಿದ ನೋವು ಕಲಿಯುಗದಲ್ಲಿಯೂ ಮುಂದುವರಿದಿದೆ. ಬರೋಬ್ಬರಿ 500 ವರ್ಷಗಳ ಹೋರಾಟವನ್ನು ಮಾಡಬೇಕಾಯಿತು. ಈ ಸಮಯದಲ್ಲಿ ಅವರು ಟಾರ್ಪಾಲಿನ ಅಡಿಯಲ್ಲಿ ಆಶ್ರಯ ಪಡೆಯಬೇಕಾಗಿತ್ತು. ಅವರ ನೋವು ನಿಜಕ್ಕೂ ಎಲ್ಲಾ ಹಿಂದೂಗಳ ನೋವಾಗಿದೆ. ನಮ್ಮ ಪೂರ್ವಜರು ಕಷ್ಟಪಟ್ಟು ಹೋರಾಡಿದರು. ಇದೀಗ ಅಂತಿಮ ಫಲಿತಾಂಶವು ಇಂದು ಇಲ್ಲಿ ಮರ್ಯಾದಾಪುರುಷ ಭಗವಾನ್ ರಾಮನ ದೇವಾಲಯದ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ನಾನು ಎಲ್ಲಾ ಭಾರತೀಯರನ್ನು ಅಭಿನಂದಿಸುತ್ತೇನೆ ಮತ್ತು ಜನಕಪುರದ ಜನ ಕೂಡ ಸಂತೋಷದಿಂದಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: Ram Mandir: ಭಗವಾನ್‌ ರಾಮನ ಅಜ್ಜಿ ಮನೆಯಿಂದ 3,000 ಕ್ವಿಂಟಾಲ್‌ ಅಕ್ಕಿ, ಅತ್ತೆ ಮನೆಯಿಂದ 1,100 ತಟ್ಟೆ ಉಡುಗೊರೆ

    ನೇಪಾಳದಿಂದ ಯಾರಿಗೆಲ್ಲ ಆಹ್ವಾನ?: ನೇಪಾಳದ (Nepala) ಜನಕ್‌ಪುರದಿಂದ ಚೋಟ್ಟೆ ಮಹಾಂತರೊಂದಿಗೆ ಮುಖ್ಯ ಮಹಂತರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದ್ದು, ಈಗಾಗಲೇ ಅಯೋಧ್ಯೆಗೆ ತೆರಳಿದ್ದಾರೆ. ಇದಕ್ಕೂ ಮುನ್ನ ಜನಕಪುರ್ ಸ್ಥಳೀಯವಾಗಿ ಭರ್ ಎಂಬ ಅರ್ಪಣೆಗಳನ್ನು ಅಯೋಧ್ಯೆಗೆ ಆಚರಣೆಯ ಭಾಗವಾಗಿ ಕಳುಹಿಸಲಾಗಿದೆ. ಇದರಲ್ಲಿ ಆಭರಣಗಳು, ಪಾಕಪದ್ಧತಿಗಳು, ಬಟ್ಟೆಗಳು ಮತ್ತು ಇತರ ದೈನಂದಿನ ಅಗತ್ಯತೆಗಳಿದ್ದವು. ಸೀತಾ ದೇವಿಯ ತಾಯಿಯ ಮನೆಯಾದ ಜನಕಪುರ ಕೂಡ ಪ್ರಾಣ ಪ್ರತಿಷ್ಠೆಯ ದಿನದಂದು ಹಲವಾರು ಕಾರ್ಯಕ್ರಮಗಳನ್ನು ನಡೆಸಲು ಸಿದ್ಧವಾಗಿದೆ.

    ಸೋಮವಾರ ಸಂಜೆ ದೀಪಾವಳಿ ಆಚರಿಸಲು ಉದ್ದೇಶಿಸಿರುವುದರಿಂದ ಕಲಾವಿದರು ಬಣ್ಣಗಳ ಜೊತೆಗೆ ಹೂವುಗಳನ್ನು ಬಳಸಿ ರಂಗೋಲಿ ಮಾಡುತ್ತಾರೆ. ಸೋಮವಾರ ಸಂಜೆ ಹಬ್ಬದ ರೀತಿ ಆಚರಿಸಲು ಈಗಾಗಲೇ ಸಂಗ್ರಹಿಸಲಾದ 2500 ಲೀಟರ್ ಸಾಸಿವೆ ಎಣ್ಣೆಯಿಂದ ಸುಮಾರು 2,50,000 ಎಣ್ಣೆ-ಪೂರಿತ ದೀಪಗಳನ್ನು ಬೆಳಗಿಸುವ ಸಂಗ್ರಹ ಅಭಿಯಾನ ನಡೆಯುತ್ತಿದೆ.

  • Ayodhya Ram Mandir: ರಾಮಮಂದಿರ ಉದ್ಘಾಟನೆಗೆ ನೇಪಾಳದಿಂದ ಬರ್ತಿದೆ ಚಿನ್ನಾಭರಣ, ವಸ್ತ್ರ, ಸಿಹಿತಿನಿಸು

    Ayodhya Ram Mandir: ರಾಮಮಂದಿರ ಉದ್ಘಾಟನೆಗೆ ನೇಪಾಳದಿಂದ ಬರ್ತಿದೆ ಚಿನ್ನಾಭರಣ, ವಸ್ತ್ರ, ಸಿಹಿತಿನಿಸು

    ಕಠ್ಮಂಡು: ಮುಂದಿನ ತಿಂಗಳು ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ಉದ್ಘಾಟನೆ ಆಗಲಿದ್ದು, ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ಅಯೋಧ್ಯೆ ವಿಶೇಷ ಉಡುಗೊರೆ ನೀಡಿ ವಿಶ್‌ ಮಾಡಲು ನೆರೆ ರಾಷ್ಟ್ರ ನೇಪಾಳ (Nepal) ಸಿದ್ಧತೆ ಮಾಡಿಕೊಂಡಿದೆ.

    ಹೌದು, ಅಯೋಧ್ಯೆಯಲ್ಲಿ ಹೊಸ ವರ್ಷದ ಜನವರಿ 22 ರಂದು ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗಾಗಿ ನೇಪಾಳ ರಾಷ್ಟ್ರ ವಿವಿಧ ರೀತಿಯ ಆಭರಣಗಳು, ವಸ್ತುಗಳು, ವಸ್ತ್ರ ಹಾಗೂ ಸಿಹಿ ತಿನಿಸುಗಳು ಸೇರಿ ಹಲವು ಸ್ಮರಣಿಕೆಗಳನ್ನು ಕಳುಹಿಸಲಿದೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆಗೂ ಮುನ್ನ ಸಿಂಗಾರಗೊಳ್ಳಲಿದೆ ರಾಮನ ಮೆಟ್ಟಿಲು! – ಏನಿದರ ಮಹತ್ವ? ಈ ಹೆಸರು ಯಾಕೆ ಬಂತು?

    ಸ್ಮರಣಿಕೆಗಳನ್ನು ತಲುಪಿಸಲು ಜನಕಪುರಧಾಮ್-ಅಯೋಧ್ಯಧಾಮ ಪ್ರಯಾಣವನ್ನು ಕೈಗೊಳ್ಳಲಾಗುವುದು ಎಂದು ನೇಪಾಳದ ಮೈ ರಿಪಬ್ಲಿಕಾ ಪತ್ರಿಕೆ ವರದಿ ಮಾಡಿದೆ. ಜನವರಿ 18 ರಂದು ಪ್ರಾರಂಭವಾಗುವ ಪ್ರಯಾಣವು ಜನವರಿ 20 ರಂದು ಅಯೋಧ್ಯೆಯಲ್ಲಿ ಕೊನೆಗೊಳ್ಳಲಿದೆ.

    ಜನಕ್‌ಪುರಧಾಮ್‌ನಿಂದ ಜಲೇಶ್ವರನಾಥ್, ಮಲಂಗ್ವಾ, ಸಿಮ್ರೌಂಗಧ್, ಗಧಿಮಾಯಿ, ಬಿರ್‌ಗುಂಜ್ ಮೂಲಕ ಬೇಟಿಯಾ, ಕುಶಿನಗರ, ಸಿದ್ಧಾರ್ಥನಗರ, ಗೋರಖ್‌ಪುರ ಮೂಲಕ ಸಾಗಿ ಉತ್ತರ ಪ್ರದೇಶದ ಅಯೋಧ್ಯೆ ತಲುಪಲಿದೆ. ಇದನ್ನೂ ಓದಿ: Ayodhya Ram Mandir: ಆಧಾರ್ ಕಡ್ಡಾಯ – ಒಂದು ಆಹ್ವಾನ ಪತ್ರಿಕೆಗೆ ಒಬ್ಬರಿಗೆ ಮಾತ್ರ ಪ್ರವೇಶ

    ಜ.20 ರಂದೇ ಸ್ಮರಣಿಕೆಗಳನ್ನು ಶ್ರೀರಾಮ ಜನ್ಮಭೂಮಿ ರಾಮಮಂದಿರ ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು ಎಂದು ಜಾನಕಿ ದೇವಸ್ಥಾನದ ಜಂಟಿ ಮಹಂತ ರಾಮರೋಷನ್ ದಾಸ್ ವೈಷ್ಣವ್ ತಿಳಿಸಿದ್ದಾರೆ. ಜ.22 ರಂದು ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಜೊತೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ.

    ನೇಪಾಳದ ಕಾಳಿಗಂಡಕಿ ನದಿ ದಡದಿಂದ ಸಂಗ್ರಹಿಸಿದ ಶಾಲಿಗ್ರಾಮ ಕಲ್ಲುಗಳನ್ನು ಅಯೋಧ್ಯೆಯಲ್ಲಿ ರಾಮನ ಪ್ರತಿಮೆಯನ್ನು ನಿರ್ಮಿಸಲು ಕಳುಹಿಸಲಾಗಿತ್ತು. ಉದ್ಘಾಟನಾ ದಿನದಂದು ದೇವಾಲಯದಲ್ಲಿ ಇದನ್ನು ಸ್ಥಾಪಿಸಲಾಗುವುದು ಎಂದು ಪತ್ರಿಕೆ ತಿಳಿಸಿದೆ. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ವೈಯಕ್ತಿಕ ಆಹ್ವಾನ ಪತ್ರದಲ್ಲೇನಿದೆ..?

  • ನೇಪಾಳದಲ್ಲಿ ಸಲಿಂಗ ವಿವಾಹವಾದ ಮೊದಲ ಜೋಡಿ

    ನೇಪಾಳದಲ್ಲಿ ಸಲಿಂಗ ವಿವಾಹವಾದ ಮೊದಲ ಜೋಡಿ

    – ಸಲಿಂಗ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿದ ದಕ್ಷಿಣ ಏಷ್ಯಾದ ಮೊದಲ ದೇಶ ನೇಪಾಳ

    ಕಠ್ಮಂಡು: ನೇಪಾಳದ (Nepal) ಸುಪ್ರೀಂ ಕೋರ್ಟ್‌ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ 5 ತಿಂಗಳ ನಂತರ ದೇಶದಲ್ಲಿ ಸಲಿಂಗ ವಿವಾಹದ ಮೊದಲ ನೋಂದಣಿಯಾಗಿದೆ. ಆ ಮೂಲಕ ದಕ್ಷಿಣ ಏಷ್ಯಾದಲ್ಲೇ ಸಲಿಂಗ ವಿವಾಹವನ್ನು ನೋಂದಾಯಿಸಿದ ಮೊದಲ ದೇಶವಾಗಿ ನೇಪಾಳ ಹೊರಹೊಮ್ಮಿದೆ.

    ಲಿಂಗ ಪರಿವರ್ತಿತ ಮಹಿಳೆ ಮಾಯಾ ಗುರುಂಗ್ (35) ಮತ್ತು ಸುರೇಂದ್ರ ಪಾಂಡೆ (27) ಕಾನೂನುಬದ್ಧವಾಗಿ ವಿವಾಹವಾದರು. ಅವರ ವಿವಾಹವನ್ನು ಪಶ್ಚಿಮ ನೇಪಾಳದ ಲಾಮ್‌ಜಂಗ್ ಜಿಲ್ಲೆಯ ಡೋರ್ಡಿ ಗ್ರಾಮೀಣ ಪುರಸಭೆಯಲ್ಲಿ ನೋಂದಾಯಿಸಲಾಗಿದೆ ಎಂದು ಬ್ಲೂ ಡೈಮಂಡ್ ಸೊಸೈಟಿಯ ಅಧ್ಯಕ್ಷ ಸಂಜಿಬ್ ಗುರುಂಗ್ (ಪಿಂಕಿ) ತಿಳಿಸಿದ್ದಾರೆ. ಬ್ಲೂ ಡೈಮಂಡ್‌ ಸೊಸೈಟಿಯು ನೇಪಾಳದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡುವ ಸಂಸ್ಥೆಯಾಗಿದೆ. ಇದನ್ನೂ ಓದಿ: ಇಸ್ರೇಲ್‌ ವೈಮಾನಿಕ ದಾಳಿಗೆ 10 ತಿಂಗಳ ಮಗು ಬಲಿಯಾಗಿದೆ: ಹಮಾಸ್‌ ಆರೋಪ

    2007 ರಲ್ಲಿ ನೇಪಾಳದ ಸುಪ್ರೀಂ ಕೋರ್ಟ್ ಸಲಿಂಗ ವಿವಾಹಕ್ಕೆ (Same Sex Marriage) ಅನುಮತಿ ನೀಡಿತ್ತು. 2015 ರಲ್ಲಿ ಅಂಗೀಕರಿಸಲ್ಪಟ್ಟ ನೇಪಾಳದ ಸಂವಿಧಾನವು ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಯಾವುದೇ ತಾರತಮ್ಯ ಇರುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ.

    2023, ಜೂನ್ 27 ರಂದು ಗುರುಂಗ್ ಸೇರಿದಂತೆ ಅನೇಕ ಜನರು ಸಲ್ಲಿಸಿದ ರಿಟ್ ಅರ್ಜಿಯಲ್ಲಿ ನೇಪಾಳದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿತು. ಆದರೆ ಸಲಿಂಗ ವಿವಾಹವನ್ನು ತಾತ್ಕಾಲಿಕವಾಗಿ ನೋಂದಾಯಿಸುವ ಐತಿಹಾಸಿಕ ಆದೇಶದ ಹೊರತಾಗಿಯೂ, ನಾಲ್ಕು ತಿಂಗಳ ಹಿಂದೆ ಕಠ್ಮಂಡು ಜಿಲ್ಲಾ ನ್ಯಾಯಾಲಯವು ಅಗತ್ಯ ಕಾನೂನುಗಳ ಕೊರತೆಯನ್ನು ಉಲ್ಲೇಖಿಸಿ ಈ ಕ್ರಮವನ್ನು ತಿರಸ್ಕರಿಸಿತು. ಇದನ್ನೂ ಓದಿ: ಜಪಾನ್ ಕರಾವಳಿ ತೀರದಲ್ಲಿ ಅಮೆರಿಕ ಸೇನಾ ವಿಮಾನ ಪತನ – 8 ಸಿಬ್ಬಂದಿ ದುರ್ಮರಣ

    ಆ ಸಮಯದಲ್ಲಿ ಸುರೇಂದ್ರ ಪಾಂಡೆ ಮತ್ತು ಮಾಯಾ ಅವರ ವಿವಾಹದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಈಗ ವಿವಾಹವನ್ನು ನೋಂದಣಿ ಮಾಡಲಾಗಿದೆ. ಈ ಕುರಿತು ಪಿಂಕಿ ಸೊಸೈಟಿ ಪ್ರತಿಕ್ರಿಯಿಸಿ, ವಿಚಾರ ತಿಳಿದು ತುಂಬಾ ಸಂತೋಷವಾಗಿದೆ. ಇದು ನೇಪಾಳದ ಮೂರನೇ ಲಿಂಗ ಸಮುದಾಯವಾದ ನಮಗೆ ಉತ್ತಮ ಸಾಧನೆಯಾಗಿದೆ. ಇದು ನೇಪಾಳಕ್ಕೆ ಮಾತ್ರವಲ್ಲದೆ ಇಡೀ ದಕ್ಷಿಣ ಏಷ್ಯಾದಲ್ಲಿ ಮೊದಲ ಪ್ರಕರಣವಾಗಿದೆ. ನಾವು ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದೆ.

    ಕುಟುಂಬದ ಒಪ್ಪಿಗೆಯೊಂದಿಗೆ ಸಾಂಪ್ರದಾಯಿಕ ರೀತಿಯಲ್ಲಿ ವಿವಾಹವಾದ ನವಲಪರಸಿ ಜಿಲ್ಲೆಯ ನಿವಾಸಿ ಸುರೇಂದ್ರ ಮತ್ತು ಲಾಮ್‌ಜಂಗ್ ಜಿಲ್ಲೆಯ ಮಾಯಾ ಅವರು ಕಳೆದ ಆರು ವರ್ಷಗಳಿಂದ ಪತಿ-ಪತ್ನಿಯಾಗಿ ಒಟ್ಟಿಗೆ ವಾಸಿಸುತ್ತಿದ್ದಾರೆ.