Tag: ನೇಪಾಳ

  • ನೇಪಾಳದಲ್ಲಿ ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ

    ನೇಪಾಳದಲ್ಲಿ ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿ 26 ಸೋಷಿಯಲ್ ಮೀಡಿಯಾಗಳಿಗೆ ನಿಷೇಧ

    ಕಠ್ಮಂಡು: ನೇಪಾಳದಲ್ಲಿ (Nepal) ಫೇಸ್ಬುಕ್‌, ಎಕ್ಸ್‌, ಯೂಟ್ಯೂಬ್‌ ಸೇರಿದಂತೆ 26 ಸೋಷಿಯಲ್‌ ಮೀಡಿಯಾಗಳಿಗೆ ನಿಷೇಧ ವಿಧಿಸಲಾಗಿದೆ.

    ನೇಪಾಳದಲ್ಲಿ ಅಧಿಕೃತವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಮಾತ್ರ ಬಳಕೆಗೆ ಅವಕಾಶ ನೀಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸರ್ಕಾರ ನಿರ್ಧಾರ ಕೈಗೊಂಡಿದೆ.

    ಸ್ಥಳೀಯ ಮಟ್ಟದಲ್ಲಿ ನೋಂದಣಿಯಾಗಿರಲಿಲ್ಲ. ಜಾಹೀರಾತುಗಳ ಮೇಲೆ ಸರ್ಕಾರದ ನಿಯಂತ್ರಣ ಇರಲಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿತ್ತು. ಸ್ಥಳೀಯ ನೋಂದಣಿವರೆಗೂ ಬಳಕೆಗೆ ತಡೆ ಹಾಕುವಂತೆ ಕೋರ್ಟ್‌ ಸೂಚಿಸಿತ್ತು.

    ಇದರ ಬೆನ್ನಲ್ಲೇ ಸರ್ಕಾರದಿಂದ ದೂರಸಂಪರ್ಕ ಪ್ರಾಧಿಕಾರಕ್ಕೆ ಪತ್ರ ರವಾನೆಯಾಗಿದೆ. ಈ ಪ್ಲಾಟ್‌ಫಾರ್ಮ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಸರ್ಕಾರ ನಿರ್ದೇಶಿಸಿದೆ.

  • ಭಾರತದ ಮೋಸ್ಟ್‌ ವಾಂಟೆಡ್‌ ʻಸಲೀಂ ಪಿಸ್ತೂಲ್ʼ ನೇಪಾಳದಲ್ಲಿ ಅರೆಸ್ಟ್‌

    ಭಾರತದ ಮೋಸ್ಟ್‌ ವಾಂಟೆಡ್‌ ʻಸಲೀಂ ಪಿಸ್ತೂಲ್ʼ ನೇಪಾಳದಲ್ಲಿ ಅರೆಸ್ಟ್‌

    – ಐಎಸ್ಐ, ಡಿ-ಕಂಪನಿಯೊಂದಿಗೆ ಸಂಪರ್ಕದಲ್ಲಿದ್ದ ಸಲೀಂ
    – ಸಿಧು ಮೂಸೆವಾಲಾ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದ

    ಕಠ್ಮಂಡು: ಭಾರತಕ್ಕೆ ಬೇಕಿದ್ದ ಮೋಸ್ಟ್‌ ವಾಂಟೆಡ್‌, ಶಸ್ತ್ರಾಸ್ತ್ರ ಪೂರೈಕೆದಾರ ಸಲೀಂ ಅಲಿಯಾಸ್ ʻಸಲೀಂ ಪಿಸ್ತೂಲ್‌ʼನನ್ನು (Salim Pistol) ನೇಪಾಳದಲ್ಲಿ ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

    ಖಚಿತ ಮಾಹಿತಿ ಮೇರೆಗೆ ದೆಹಲಿ ಪೊಲೀಸ್ (Delhi Police) ವಿಶೇಷ ಘಟಕ ಮತ್ತು ಭದ್ರತಾ ಸಂಸ್ಥೆಗಳ ತಂಡ ಪ್ರಮುಖ ಕಾರ್ಯಾಚರಣೆಯಲ್ಲಿ ಬಂಧಿಸಿದೆ.

    ಐಎಸ್ಐ ಮತ್ತು ಡಿ ಕಂಪನಿಯೊಂದಿಗೆ ಸಂಬಂಧ
    ಇನ್ನೂ ಪೊಲೀಸರ ಪ್ರಕಾರ, ಸಲೀಂ ಪಿಸ್ತೂಲ್‌ ಕಳೆದ ಹಲವಾರು ವರ್ಷಗಳಿಂದ ‌ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಹ್ಯಾಂಗ್, ಹಾಶಿಂ ಬಾಬಾ ಸೇರಿದಂತೆ ಅನೇಕ ದರೋಡೆಕೋರರಿಗೆ ಪಾಕಿಸ್ತಾನದಿಂದ ಗುಣಮಟ್ಟದ ಶಸ್ತ್ರಾಸ್ತ್ರಗಳನ್ನ ಪೂರೈಸುತ್ತಿದ್ದ. ಅಲ್ಲದೇ ಈತ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ, ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಡಿ-ಕಂಪನಿಯೊಂದಿಗೂ ಸಂಪರ್ಕ ಹೊಂದಿದ್ದ ಅನ್ನೋ ರಹಸ್ಯವನ್ನ ತನಿಖಾಧಿಕಾರಿಗಳು ಸಾಕ್ಷಿ ಸಮೇತ ಬಯಲಿಗೆಳೆದಿವೆ.

    ಸಿಧು ಮೂಸೆವಾಲಾ, ಬಾಬಾ ಸಿದ್ದಿಕಿ ಕೊಲೆ ಪ್ರಕರಣ ಸೇರಿದಂತೆ ಪ್ರಮುಖ ಅಪರಾಧಗಳಲ್ಲಿ ಸಲೀಂ ಪಿಸ್ತೂಲ್‌ನ ಹೆಸರು ಕಾಣಿಸಿಕೊಂಡಿದೆ. ಅಲ್ಲದೇ ಸಿಧು ಮೂಸೆವಾಲಾರ ಹಂತಕರ ಪೈಕಿ ಓಬ್ಬನಿಗೆ ಈತನೇ ಮಾರ್ಗದರ್ಶಕನಾಗಿದ್ದ ಅನ್ನೋದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿ.

    1972ರಲ್ಲಿ ದೆಹಲಿಯ ಸೀಲಾಂಪುರದಲ್ಲಿ ಜನಿಸಿದ ಶೇಖ್ ಸಲೀಂ ಆರ್ಥಿಕ ಸಮಸ್ಯೆಯಿಂದಾಗಿ 8ನೇ ತರಗತಿಗೇ ಓದನ್ನು ಬಿಟ್ಟು ಟ್ಯಾಕ್ಸಿ ಚಾಲಕನಾದ. ನಂತರ ಸ್ನೇಹಿತರ ಸಹವಾಸದಿಂದ ವಾಹನ ಕಳ್ಳತನಕ್ಕಿಳಿಯುವ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ. 2000 ಇಸವಿಯಲ್ಲಿ ಮೊದಲ ಬಾರಿಗೆ ವಾಹನ ಕಳ್ಳತನ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದ. ಆ ನಂತರ 2018ರಲ್ಲಿ ದೆಹಲಿಯಲ್ಲಿ ಅರೆಸ್ಟ್‌ ಆದ ಬಳಿಕ ಸಲೀಂ ವಿದೇಶಕ್ಕೆ ಪರಾರಿಯಾಗಿದ್ದ ಅಲ್ಲಿಂದ ಶಸ್ತ್ರಾಸ್ತ್ರ ಪೂರೈಕೆ ಜಾಲ ನಿರ್ವಹಿಸಲು ಪ್ರಾರಂಭಿಸಿದ್ದ. ಕೊನೆಗೆ ನೇಪಾಳದಲ್ಲಿ ಅಡಗಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಭಯೋತ್ಪಾದನೆ ವಿರುದ್ಧ ನಾವು ನಿಮ್ಮೊಂದಿಗೆ – ಭಾರತದ ಬೆಂಬಲಕ್ಕೆ ನಿಂತ ನೇಪಾಳ

    ಭಯೋತ್ಪಾದನೆ ವಿರುದ್ಧ ನಾವು ನಿಮ್ಮೊಂದಿಗೆ – ಭಾರತದ ಬೆಂಬಲಕ್ಕೆ ನಿಂತ ನೇಪಾಳ

    – ಪಹಲ್ಗಾಮ್‌ ದಾಳಿಯಲ್ಲಿ ಉಗ್ರರ ಗುಂಡಿಗೆ ಬಲಿಯಾಗಿದ್ದ ನೇಪಾಳ ಪ್ರಜೆ

    ಕಠ್ಮಂಡು: ಪಹಲ್ಗಾಮ್‌ ಭಯೋತ್ಪಾದಕ ದಾಳಿ (Pahalgam Terror Attack) ಬಳಿಕ ಭಾರತ ಮತ್ತು ಪಾಕ್‌ ನಡುವೆ ಉದ್ವಿಗ್ನತೆ ತಲೆದೋರಿರುವ ಹೊತ್ತಲ್ಲಿ ನೇಪಾಳ (Nepal) ಭಾರತಕ್ಕೆ (India) ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.

    ಏ.22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಭಾರತ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ನಡೆಸುತ್ತಿದೆ. ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿ ಭಾರತ ದಾಳಿ ಮಾಡಿತು. ಪರಿಣಾಮ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಈ ಹೊತ್ತಿನಲ್ಲಿ ಭಾರತಕ್ಕೆ ನೇಪಾಳ ಒಗ್ಗಟ್ಟನ್ನು ಘೋಷಿಸಿದೆ. ಇದನ್ನೂ ಓದಿ: ಜಲಯುದ್ಧ – ಚೆನಾಬ್ ನದಿಯ 2 ಡ್ಯಾಂನಿಂದ ನೀರು ಬಿಟ್ಟು ಪಾಕ್‌ಗೆ ಶಾಕ್ ಕೊಟ್ಟ ಭಾರತ

    ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ವಿದೇಶಾಂಗ ಸಚಿವಾಲಯ, ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ನೇಪಾಳ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ದಾಳಿಯಲ್ಲಿ ನೇಪಾಳಿ ಪ್ರಜೆ ಸೇರಿದಂತೆ 26 ಜನರು ಸಾವನ್ನಪ್ಪಿದ್ದರು. ಈ ದುರಂತದ ಸನ್ನಿವೇಶದಲ್ಲಿ ನೇಪಾಳ ಮತ್ತು ಭಾರತ ಒಗ್ಗಟ್ಟಿನಿಂದ ನಿಂತವು. ದುಃಖ ಮತ್ತು ಸಂಕಟ ಹಂಚಿಕೊಂಡು ಒಂದಾಗಿವೆ ಎಂದು ತಿಳಿಸಿದೆ.

    ನೇಪಾಳವು ಭಯೋತ್ಪಾದನೆಯ ವಿರುದ್ಧದ ದೃಢ ನಿಲುವು ತಾಳಿದೆ. ಅನಾಗರಿಕ ಭಯೋತ್ಪಾದಕ ದಾಳಿಯನ್ನು ನಿಸ್ಸಂದಿಗ್ಧವಾಗಿ ಖಂಡಿಸಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನೇಪಾಳ ಎಲ್ಲರೊಂದಿಗೂ ಒಟ್ಟಾಗಿ ನಿಲ್ಲುತ್ತದೆ. ಯಾವುದೇ ಶತ್ರು ಶಕ್ತಿಗಳು ತನ್ನ ನೆರೆಯ ರಾಷ್ಟ್ರಗಳ ವಿರುದ್ಧ ತನ್ನ ಮಣ್ಣನ್ನು ಬಳಸಲು ಅನುಮತಿಸುವುದಿಲ್ಲ ಎಂದು ನೇಪಾಳ ಸ್ಪಷ್ಟಪಡಿಸಿದೆ ಎಂದು ಸಚಿವಾಲಯ ಹೇಳಿದೆ. ಇದನ್ನೂ ಓದಿ: ಪಾಕ್‌ನ ಸಿನಿಮಾ, ಹಾಡು, ಪಾಡ್‌ಕಾಸ್ಟ್ ಸ್ಟ್ರೀಮಿಂಗ್ ನಿಲ್ಲಿಸಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಸರ್ಕಾರ ಆದೇಶ

    ಉದ್ವಿಗ್ನತೆಯನ್ನು ಕಡಿಮೆ ಮಾಡಲು ನೇಪಾಳ ಆಶಿಸುತ್ತಿದೆ. ಈ ಪ್ರದೇಶದಲ್ಲಿ ಶಾಶ್ವತ ಶಾಂತಿ ಮತ್ತು ಸ್ಥಿರತೆಗೆ ತನ್ನ ಬದ್ಧತೆಯನ್ನು ದೃಢಪಡಿಸುತ್ತದೆ ಎಂದು ಸಚಿವಾಲಯದ ಪತ್ರಿಕಾ ಹೇಳಿಕೆ ತಿಳಿಸಿದೆ.

  • ಭಾರತೀಯ ಪ್ರವಾಸಿಗರ ಕೊಂಡೊಯ್ಯುತ್ತಿದ್ದ ಬಸ್ ಅಪಘಾತ – 25 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಭಾರತೀಯ ಪ್ರವಾಸಿಗರ ಕೊಂಡೊಯ್ಯುತ್ತಿದ್ದ ಬಸ್ ಅಪಘಾತ – 25 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಲಕ್ನೋ: ನೇಪಾಳದ ಪೊಖಾರಾಕ್ಕೆ ಭಾರತೀಯ ಪ್ರವಾಸಿಗರನ್ನು (Indian Tourists) ಕೊಂಡೊಯ್ಯುತ್ತಿದ್ದ ಬಸ್ ಒಂದು ಡಾಂಗ್ ಜಿಲ್ಲೆಯ ಚಿಸಾಪಾನಿಯಲ್ಲಿ ಅಪಘಾತಕ್ಕೀಡಾಗಿದೆ. ದುರ್ಘಟನೆಯಲ್ಲಿ 25 ಜನ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

    ಪ್ರಾಥಮಿಕ ತನಿಖೆಯ ಪ್ರಕಾರ, ಬಸ್‌ನ ಬ್ರೇಕ್ ವಿಫಲವಾದ ಕಾರಣ ಚಾಲಕ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಗಾಯಗೊಂಡ 25 ಪ್ರವಾಸಿಗರಲ್ಲಿ 19 ಜನರನ್ನು ಉತ್ತರ ಪ್ರದೇಶದ ತುಲಸೀಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ (Health Center) ದಾಖಲಿಸಲಾಗಿದೆ. ಕೆಲವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಆದ್ರೆ ಗಂಭೀರವಾಗಿ ಗಾಯಗೊಂಡ ಮೂವರನ್ನು ನೇಪಾಳದ ಆಸ್ಪತ್ರೆಯಲ್ಲಿ (Nepal Hospital) ಚಿಕಿತ್ಸೆಗಾಗಿ ಇರಿಸಲಾಗಿದೆ ಎಂದು ತುಲಸೀಪುರದ ಸರ್ಕಲ್ ಆಫೀಸರ್ ಬೃಜನಂದನ್ ರಾಯ್ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ಟೆಂಟ್‌ ಸಾಮಗ್ರಿ ಪೂರೈಸುತ್ತಿದ್ದ ಕಂಪನಿಯ ಗೊಡೋನ್​ನಲ್ಲಿ ಅಗ್ನಿ ದುರಂತ

    ಈ ಬಸ್ ಲಕ್ನೋದಿಂದ ಪೊಖಾರಾಕ್ಕೆ ಪ್ರಯಾಣಿಸುತ್ತಿತ್ತು, ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು ಉತ್ತರ ಪ್ರದೇಶದ ಲಕ್ನೋ, ಸೀತಾಪುರ, ಹರದೋಯ್ ಮತ್ತು ಬರಾಬಂಕಿ ಜಿಲ್ಲೆಗಳಿಗೆ ಸೇರಿದವರಾಗಿದ್ದಾರೆ. ಅಪಘಾತದ ಸುದ್ದಿ ತಿಳಿದ ಕೂಡಲೇ, ನೇಪಾಳದ ಗಢವಾ ಪೊಲೀಸರು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಅಲ್ಲಿಂದ 19 ಜನರನ್ನು ತುಲಸೀಪುರಕ್ಕೆ ಸ್ಥಳಾಂತರಿಸಲಾಯಿತು. ಇದನ್ನೂ ಓದಿ: ರಾಹುಲ್ಲನನ್ನ ಬಿಟ್ಟು ಬದುಕಲ್ಲ – ಭಾವಿ ಅಳಿಯನೊಂದಿಗೆ ಒಟ್ಟಿಗೆ ಜೀವನ ನಡೆಸಲು ಮುಂದಾದ ಮಹಿಳೆ

    ಸ್ಥಳೀಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಚಾಲಕನ ಕಾರ್ಯಾಚರಣೆ ಮತ್ತು ಬಸ್‌ನ ಯಾಂತ್ರಿಕ ಸ್ಥಿತಿಯ ಬಗ್ಗೆ ವಿವರವಾದ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಕಟ್ಟಡ ಕುಸಿತ – 9 ತಿಂಗಳ ಮಗು ಸೇರಿ ನಾಲ್ವರು ಸಾವು

  • ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪನ – ಉತ್ತರ ಭಾರತದಲ್ಲೂ ಎಫೆಕ್ಟ್‌

    ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪನ – ಉತ್ತರ ಭಾರತದಲ್ಲೂ ಎಫೆಕ್ಟ್‌

    ಕಠ್ಮಂಡು: ಮ್ಯಾನ್ಮಾರ್‌, ಥಾಯ್ಲೆಂಡ್‌ ಹಾಗೂ ಜಪಾನ್‌ ಬಳಿಕ ಈಗ ಭಾರತದ ನೆರೆಯ ರಾಷ್ಟ್ರ ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪನ (Nepal Earthquak) ಸಂಭವಿಸಿದೆ.

    ರಾಷ್ಟ್ರೀಯ ಭೂಕಂಪನ ಕೇಂದ್ರದ ಪ್ರಕಾರ, ಶುಕ್ರವಾರ ಸಂಜೆ ನೇಪಾಳದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ. ಸ್ಥಳೀಯ ಕಾಲಮಾನ ರಾತ್ರಿ 7.52ಕ್ಕೆ (ಸ್ಥಳೀಯ ಕಾಲಮಾನ) ಭೂಮಿಯಿಂದ 20 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದೆ. ಇದರ ಪರಿಣಾಮ ಉತ್ತರ ಭಾರತದಲ್ಲೂ ಲಘು ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.

    ಇತ್ತೀಚೆಗಷ್ಟೇ ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯೇ ಭಾರೀ ಭೂಕಂಪ (Myanmar Earthquake) ಸಂಭವಿಸಿತ್ತು. ಇದರಿಂದ ನೂರಾರು ಗಗನಚುಂಬಿ ಕಟ್ಟಡಗಳು ನೆಲಸಮಗೊಂಡಿದ್ದಲ್ಲದೇ ಸಾವಿರಾರು ಸಂಖ್ಯೆಯ ಜನ ಸಾವನ್ನಪ್ಪಿದ್ದಾರೆ. ಈವರೆಗೆ ಸುಮಾರು 441 ಮಂದಿ ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

  • ನೇಪಾಳದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪನ – ಭಾರತ, ಚೀನಾ ಗಡಿಯಲ್ಲೂ ಕಂಪಿಸಿದ ಭೂಮಿ

    ನೇಪಾಳದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪನ – ಭಾರತ, ಚೀನಾ ಗಡಿಯಲ್ಲೂ ಕಂಪಿಸಿದ ಭೂಮಿ

    ಕಠ್ಮಂಡು: ನೇಪಾಳದಲ್ಲಿ (Nepal) ಇಂದು (ಶುಕ್ರವಾರ) ಮುಂಜಾನೆ 6.1 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಹಿಮಾಲಯನ್‌ನ ಮಧ್ಯಭಾಗದ ಸಿಂಧುಪಾಲ್‌ಚೌಕ್ ಜಿಲ್ಲೆಯಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ.

    ರಾಷ್ಟ್ರೀಯ ಭೂಕಂಪ ನಿರ್ವಹಣಾ ಮತ್ತು ಸಂಶೋಧನಾ ಕೇಂದ್ರ ತನ್ನ ವೆಬ್‌ಸೈಟ್‌ನಲ್ಲಿ ಭೂಕಂಪದ ಕೇಂದ್ರವು ಸಿಂಧುಪಾಲ್‌ಚೌಕ್ (Sindhupalchowk) ಜಿಲ್ಲೆಯ ಭೈರವಕುಂಡದಲ್ಲಿ ಸ್ಥಳೀಯ ಕಾಲಮಾನ ಬೆಳಗಿನ ಜಾವ 2:51ಕ್ಕೆ ಆಗಿದೆ ಎಂದು ಗುರುತಿಸಿದೆ. ಇದನ್ನೂ ಓದಿ: ಎಸ್‌ಸಿ, ಎಸ್‌ಟಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ದುರ್ಬಳಕೆ: ಸಿ.ಸಿ.ಪಾಟೀಲ್

    ನೇಪಾಳದ ಹಲವು ಪ್ರದೇಶಗಳಲ್ಲಿ ವಿಶೇಷವಾಗಿ ಪೂರ್ವ ಮತ್ತು ಮಧ್ಯ ಪ್ರದೇಶಗಳಲ್ಲಿ, ಭೂಮಿ ಕಂಪಿಸಿದ ಅನುಭವ ಉಂಟಾಗಿದೆ ಎಂದು ವರದಿ ಮಾಡಿದೆ. ಭಾರತ ಮತ್ತು ಟಿಬೆಟ್, ಚೀನಾದ ಗಡಿ ಪ್ರದೇಶಗಳಲ್ಲೂ ಕಂಪನದ ಅನುಭವವಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತ್ನಾ ಪುಣೆ ಅತ್ಯಾಚಾರ ಆರೋಪಿ? – ಪೊಲೀಸರಿಂದ ಡ್ರೋನ್‌ ಬಳಸಿ ಹುಡುಕಾಟ

    ಸದ್ಯ ಇದರಿಂದ ಯಾವುದೇ ಜೀವಹಾನಿಯಾಗಲಿ, ಗಾಯಗೊಂಡಿರುವುದಾಗಲಿ ಕಂಡುಬಂದಿಲ್ಲ. ಆದ್ರೆ ಭೂಕಂಪನ ಸಂಭವಿಸಿದ ಪ್ರದೇಶಗಳಲ್ಲಿ ಜನ ಆತಂಕಗೊಂಡಿದ್ದಾರೆ ಎಂದು ತಿಳಿದುಬಂದಿದೆ.

  • ಮೌಂಟ್‌ ಎವರೆಸ್ಟ್‌ ಇನ್ನು ಮುಂದೆ ದುಬಾರಿ| ಶುಲ್ಕ ಭಾರೀ ಏರಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆ?

    ಮೌಂಟ್‌ ಎವರೆಸ್ಟ್‌ ಇನ್ನು ಮುಂದೆ ದುಬಾರಿ| ಶುಲ್ಕ ಭಾರೀ ಏರಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆ?

    ಕಠ್ಮಂಡು: ಜಗತ್ತಿನ ಎತ್ತರದ ಪರ್ವತವಾದ ಮೌಂಟ್‌ ಎವರೆಸ್ಟ್‌ (Mount Everest) ಏರುವ ಕನಸು ಕಾಣುತ್ತಿದ್ದೀರಾ? ಹಾಗಾದ್ರೆ ಇನ್ನು ಮುಂದೆ ನೀವು ದುಬಾರಿ ಶುಲ್ಕವನ್ನು (Climbing Fees) ಪಾವತಿಸಿ ಪರ್ವತ ಏರಬೇಕು. ನೇಪಾಳ (Nepal) ಸರ್ಕಾರ 8 ವರ್ಷದ ಬಳಿಕ ದರವನ್ನು ಪರಿಷ್ಕರಿಸಿದೆ. ಶೇ.36ರಷ್ಟು ಶುಲ್ಕವನ್ನು ಏರಿಸಿ ಚಾರಣಿಗರಿಗೆ ಶಾಕ್‌ ನೀಡಿದೆ.

    ವಿದೇಶಿಯರಿಗೆ ಪರ್ವತಾರೋಹಣ ಶುಲ್ಕವನ್ನು ಈ ಮೊದಲು 11,000 ಡಾಲರ್‌ ( ಅಂದಾಜು 9 ಲಕ್ಷ ರೂ.) ಇತ್ತು. ಈಗ ಈ ಶುಲ್ಕವನ್ನು 15,000 ಡಾಲರ್‌ಗೆ(13 ಲಕ್ಷ ರೂ.) ಏರಿಕೆ ಮಾಡಿದೆ.

    ಹೊಸ ದರವು ಈ ವರ್ಷದ ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ. ಚಳಿಗಾಲ ಮತ್ತು ಮಳೆಗಾಲದಲ್ಲಿ ಇದ್ದ 2,750 ಡಾಲರ್‌ (ಅಂದಾಜು 2.37 ಲಕ್ಷ ರ) ಶುಲ್ಕವನ್ನು 3,750 ಡಾಲರ್‌ (ಅಂದಾಜು 3.23 ಲಕ್ಷ ರೂ.) ಏರಿಸಲಾಗಿದೆ. ನೇಪಾಳಿ ಪರ್ವಾತರೋಹಿಗಳಿಗೆ 75,000 ನೇಪಾಳಿ ರೂಪಾಯಿ (545 ಡಾಲರ್‌) ಇದ್ದರೆ ಈಗ ಶುಲ್ಕವನ್ನು 1,50,000 ನೇಪಾಳಿ ರೂಪಾಯಿಗೆ(1,090 ಡಾಲರ್) ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಕಾಂತಾರ 2ಗೆ ಬಿಗ್ ರಿಲೀಫ್ – ಅಧಿಕಾರಿಗಳಿಂದ ಕ್ಲೀನ್ ಚಿಟ್

    ನೇಪಾಳ ಕೊನೆಯದಾಗಿ ಜನವರಿ 1, 2015 ರಂದು ಪರ್ವತಾರೋಹಣ ಶುಲ್ಕವನ್ನು ಪರಿಷ್ಕರಿಸಿತ್ತು. ಸಾಮಾನ್ಯವಾಗಿ ಏಪ್ರಿಲ್‌ನಿಂದ ಮೇ ವರೆಗೆ ಹೆಚ್ಚಿನ ಸಂಖ್ಯೆಯ ಚಾರಣಿಗರು ಪರ್ವತವನ್ನು ಹತ್ತಲು ಬಯಸುತ್ತಾರೆ. ಪರ್ವತ ಏರಲು ಪಾವತಿಸುವ ಅನುಮತಿ ಶುಲ್ಕ ಹಾಗೂ ವಿದೇಶಿ ಪರ್ವತಾರೋಹಿಗಳು ಮಾಡುವ ಖರ್ಚು ನೇಪಾಳ ಆದಾಯದ ಮೂಲಗಳಲ್ಲಿ ಒಂದಾಗಿದೆ.

    8,848.86 ಮೀಟರ್ ಎತ್ತರ ಹೊಂದಿರುವ ಮೌಂಟ್‌ ಎವರೆಸ್ಟ್‌ ಅನ್ನು ಎರಡು ಮಾರ್ಗ ಬಳಸಿ ಹತ್ತಬಹುದು. ನೇಪಾಳದ ಆಗ್ನೇಯ ಭಾಗ ಮತ್ತು ಟಿಬೆಟ್‌ನ ಉತ್ತರದಿಂದ ಹತ್ತಬಹುದು. ನೇಪಾಳ ಮಾರ್ಗದಲ್ಲಿ ಸವಾಲುಗಳು ಕಡಿಮೆ ಇದ್ದರೂ ಹಿಮಪಾತ, ವಿಪರೀತ ಗಾಳಿ ಬೀಸುವ ಸಾಧ್ಯತೆ ಇರುತ್ತದೆ.

     

  • ಟಿಬೆಟ್‌ನಲ್ಲಿ 7.1 ತೀವ್ರತೆಯ ಭೂಕಂಪ – ಸಾವಿನ ಸಂಖ್ಯೆ 95ಕ್ಕೆ ಏರಿಕೆ

    ಟಿಬೆಟ್‌ನಲ್ಲಿ 7.1 ತೀವ್ರತೆಯ ಭೂಕಂಪ – ಸಾವಿನ ಸಂಖ್ಯೆ 95ಕ್ಕೆ ಏರಿಕೆ

    ಬೀಜಿಂಗ್‌: ಇಂದು ಮುಂಜಾನೆ ನೇಪಾಳ (Nepal) ಮತ್ತು ಟಿಬೆಟ್‌ (Tibet) ಗಡಿಯಲ್ಲಿ 7.1 ತೀವ್ರತೆಯ ಭಾರೀ ಭೂಕಂಪ (EarthQuake) ಸಂಭವಿಸಿದ್ದು, 95 ಮಂದಿ ಸಾವಿಗೀಡಾಗಿದ್ದು, 130 ಮಂದಿ ಗಾಯಗೊಂಡಿದ್ದಾರೆ.

    ಭೂಕಂಪದ ತೀವ್ರತೆಗೆ ಚೀನಾ, ನೇಪಾಳ, ಉತ್ತರ ಭಾರತದ ಹಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಭೂಕಂಪವು ಭಾರತೀಯ ಕಾಲಮಾನ ಬೆಳಿಗ್ಗೆ 6:35 ಕ್ಕೆ ಸಂಭವಿಸಿದೆ ಮತ್ತು ಟಿಬೆಟ್‌ನ ಕ್ಸಿಜಾಂಗ್ ಅದರ ಕೇಂದ್ರಬಿಂದುವಾಗಿದೆ ಎಂದು ಭೂಕಂಪನ ರಾಷ್ಟ್ರೀಯ ಕೇಂದ್ರ (NCS) ತಿಳಿಸಿದೆ.

    ದೆಹಲಿ-ಎನ್‌ಸಿಆರ್ ಮತ್ತು ಬಿಹಾರದ ರಾಜಧಾನಿ ಪಾಟ್ನಾ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಮತ್ತು ರಾಜ್ಯದ ಉತ್ತರ ಭಾಗದ ಅನೇಕ ಸ್ಥಳಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲೂ ಭೂಕಂಪದ ಅನುಭವವಾಗಿದೆ.

    ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ, ಬಲವಾದ ಕಂಪನದ ನಂತರ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿಹೋಗಿದ್ದಾರೆ. ಟಿಬೆಟ್‌ನ ಗಡಿಯಲ್ಲಿರುವ ಏಳು ಗುಡ್ಡಗಾಡು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ ಎಂದು ದೇಶದ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

  • ಟಿಬೆಟ್‌ನಲ್ಲಿ ಭಾರೀ ಭೂಕಂಪ – 32 ಮಂದಿ ಬಲಿ

    ಟಿಬೆಟ್‌ನಲ್ಲಿ ಭಾರೀ ಭೂಕಂಪ – 32 ಮಂದಿ ಬಲಿ

    ಬೀಜಿಂಗ್‌: ಇಂದು ಮುಂಜಾನೆ ನೇಪಾಳ (Nepal) ಮತ್ತು ಟಿಬೆಟ್‌ (Tibet) ಗಡಿಯಲ್ಲಿ 7.1 ತೀವ್ರತೆಯ ಭಾರೀ ಭೂಕಂಪ (EarthQuake) ಸಂಭವಿಸಿದೆ. ಟಿಬೆಟ್‌ನಲ್ಲಿ ಸಂಭವಿಸಿದರೂ ಚೀನಾ, ನೇಪಾಳ, ಉತ್ತರ ಭಾರತದ ಹಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ.

    ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ (NCS), ಭೂಕಂಪವು ಭಾರತೀಯ ಕಾಲಮಾನ ಬೆಳಿಗ್ಗೆ 6:35 ಕ್ಕೆ ಸಂಭವಿಸಿದೆ ಮತ್ತು ಟಿಬೆಟ್‌ನ ಕ್ಸಿಜಾಂಗ್ ಅದರ ಕೇಂದ್ರಬಿಂದುವಾಗಿದೆ.

    ಚೀನಾದ Xinhua ನ್ಯೂಸ್‌ ಏಜೆನ್ಸಿ 32 ಮಂದಿ ಮೃತಪಟ್ಟರೆ 38 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ. ಇದನ್ನೂ ಓದಿ: “ಕಷ್ಟದಲ್ಲಿದ್ರೂ ತಂದೆ, ತಾಯಿ ಮಾತನಾಡ್ತಿಲ್ಲ, ಕಾಲ್‌ ಮಾಡಿದ್ರೂ ಕಟ್‌ ಮಾಡ್ತಿದ್ರು” – ಟೆಕ್ಕಿ ಅನೂಪ್‌ ಡೆತ್‌ನೋಟ್‌ನಲ್ಲಿ ಏನಿದೆ?

    ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಜನ ಮನೆಯಿಂದ ಹೊರಗಡೆ ಓಡಿಕೊಂಡು ಬಂದಿರುವ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

     

  • ಭಾರೀ ಮಳೆಗೆ ತತ್ತರಿಸಿದ ನೇಪಾಳ – ಪ್ರವಾಹ, ಭೂಕುಸಿತದಿಂದ 112 ಮಂದಿ ಸಾವು

    ಭಾರೀ ಮಳೆಗೆ ತತ್ತರಿಸಿದ ನೇಪಾಳ – ಪ್ರವಾಹ, ಭೂಕುಸಿತದಿಂದ 112 ಮಂದಿ ಸಾವು

    – 200ಕ್ಕೂ ಹೆಚ್ಚು ಕಡೆಗಳಲ್ಲಿ ಭೂಕುಸಿತ
    – 54 ವರ್ಷಗಳ ಬಳಿಕ ದಾಖಲೆಯ ಮಳೆ

    ಕಠ್ಮಂಡು: 54 ವರ್ಷಗಳ ಬಳಿಕ ನೇಪಾಳದಲ್ಲಿ ಈ(Nepal) ಭಾರೀ ಮಳೆಯಾಗಿದ್ದು, ಮಳೆಯ (Rain) ಅವಾಂತರಕ್ಕೆ 112 ಮಂದಿ ಸಾವಿಗೀಡಾಗಿದ್ದಾರೆ.

    ಮಳೆಯ ಆರ್ಭಟಕ್ಕೆ ನದಿಗಳು ಪ್ರವಾಹ ಮಟ್ಟ ಮೀರಿ ಹರಿಯುತ್ತಿವೆ. ಪರಿಣಾಮ ನಗರಗಳಿಗೆ ನೀರು ನುಗ್ಗಿದೆ, 200 ಕ್ಕೂ ಅಧಿಕ ಕಡೆ ಭೂ ಕುಸಿತ (Landslide) ಸಂಭವಿಸಿದೆ. ನೇಪಾಳದಲ್ಲಿ 24 ಗಂಟೆಗಳ ಒಳಗೆ 323 ಮಿಲಿಮೀಟರ್ ಮಳೆ ದಾಖಲಾಗಿದೆ. ರಾಜಧಾನಿ ಕಠ್ಮಂಡುವಿನ ಸುತ್ತಮುತ್ತಲಿನ ನದಿಗಳು ಪ್ರವಾಹ ಮಟ್ಟ ಮೀರಿ ಹರಿಯುತ್ತಿವೆ. ಏಕಾಏಕಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಹಿನ್ನಲೆ, ಜನರು ಜೀವ ಉಳಿಸಿಕೊಳ್ಳಲು ಕಟ್ಟಡಗಳ ಮೇಲೆ ನಿಂತಿದ್ದಾರೆ. ಇನ್ನೂ ಕೆಲ ಜನರು ನೀರಿನಲ್ಲಿ ನಡೆಯುತ್ತಾ ಸುರಕ್ಷಿತ ಸ್ಥಳಗಳನ್ನು ಹುಡುಕುತ್ತಿದ್ದಾರೆ. ಭಾರಿ ನೀರಿನ ಹರಿವಿನ ನಡುವೆ ಮನೆಯೊಂದು ಕುಸಿದು ಬೀಳುವ ವಿಡಿಯೋ ಸಹ ವೈರಲ್‌ ಆಗಿದೆ. ಇದನ್ನೂ ಓದಿ: ಇಸ್ರೇಲಿ ದಾಳಿ; ಒಂದೇ ದಿನ 33 ಮಂದಿ ಸಾವು, 195 ಮಂದಿಗೆ ಗಾಯ

    ವಿಪತ್ತಿನಲ್ಲಿ ಕಾಣೆಯಾದ 68 ಜನರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎರಡು ದಿನಗಳಲ್ಲಿ ಪ್ರವಾಹ ಮತ್ತು ಭೂಕುಸಿತದ 200 ಘಟನೆಗಳು ವರದಿಯಾಗಿವೆ ಈ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಇಲ್ಲಿಯವರೆಗೂ 4,12,000 ಕುಟುಂಬಗಳು ಪರಿಣಾಮ ಬೀರುವ ನಿರೀಕ್ಷೆ ಇತ್ತು. ಹೆಲಿಕಾಪ್ಟರ್‌ಗಳು ಮತ್ತು ಮೋಟಾರ್‌ಬೋಟ್‌ಗಳೊಂದಿಗೆ ರಕ್ಷಣಾ ಕಾರ್ಯಚರಣೆಗಾಗಿ 3,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸೆಕ್ಸ್ ನಿರಾಕರಿಸಿದ್ದಕ್ಕೆ ಕೊಡಲಿಯಿಂದ ಕೊಚ್ಚಿ ಪತ್ನಿಯನ್ನು ಭೀಕರವಾಗಿ ಕೊಲೆಗೈದ ಪತಿ