Tag: ನೇಪಾಳ

  • ದೇಶಾದ್ಯಂತ ಮಳೆರಾಯನ ಅಬ್ಬರ- ಪ್ರವಾಹದಲ್ಲೇ ನದಿ ದಾಟಿದ ಪ್ರಯಾಣಿಕರು

    ದೇಶಾದ್ಯಂತ ಮಳೆರಾಯನ ಅಬ್ಬರ- ಪ್ರವಾಹದಲ್ಲೇ ನದಿ ದಾಟಿದ ಪ್ರಯಾಣಿಕರು

    ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನಾದ್ಯಂತ ಶನಿವಾರ ಭಾರೀ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ರೆಕ್ಕೆಪುಟ್ಟಿ ಹಳ್ಳ ತುಂಬಿ ಹರಿಯುತ್ತಿದ್ದು, ಹುನಗುಂದದ ಬೇಕಮಲದಿನ್ನಿ ಗ್ರಾಮಕ್ಕೆ ತೆರಳುವ ರಸ್ತೆ ಜಲಾವೃತವಾಗಿದೆ.

    ಮಳೆಗೆ ರಸ್ತೆ ಜಲಾವೃತವಾಗಿದ್ದ ಕಾರಣಕ್ಕೆ ಬಸ್ಸೊಂದು ರಸ್ತೆಯ ಒಂದು ಬದಿಯಲ್ಲೇ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು. ಈ ವೇಳೆ ಪ್ರಯಾಣಿಕರು ನೀರಲ್ಲೇ ನಡೆದುಕೊಂಡು ಹೋಗಬೇಕಾಯ್ತು. ಬೆಳಗಾವಿಯ ಚಾಂದಶಿರದವಾಡ ಗ್ರಾಮದಲ್ಲಿ ದೂಧ್‍ಗಂಗಾ ನದಿ ಪ್ರವಾಹದಿಂದ ಉಕ್ಕಿ ಹರೀತಿದ್ದು, ನದಿಯಲ್ಲಿ ಮೀನು ಹಿಡಿಯಲು ಹೋದ 14 ವರ್ಷದ ಸಂಸ್ಕಾರ ಪವಾರ ನೀರುಪಾಲಾಗಿದ್ದಾನೆ.

    ಇನ್ನೊಂದೆಡೆ ಈಶಾನ್ಯ ಭಾರತದ ರಾಜ್ಯಗಳು ಕೂಡ ಭಾರೀ ಪ್ರವಾಹಕ್ಕೆ ನಲುಗಿದೆ. ಅಸ್ಸಾಂ ರಾಜ್ಯವೊಂದರಲ್ಲೇ 7 ಮಂದಿ ಸಾವನ್ನಪ್ಪಿದ್ದಾರೆ. ಬ್ರಹ್ಮಪುತ್ರ ನದಿಯಲ್ಲಿನ ಪ್ರವಾಹದಿಂದಾಗಿ ಇಲ್ಲಿನ ಮೋರಿಗ್ವಾನ್ ಜಿಲ್ಲೆಯ ತೆಲಂಗುರಿ ಗ್ರಾಮದಲ್ಲಿ ಶಾಲೆಯ ಕಟ್ಟಡವೇ ನೀರುಪಾಲಾಗಿದೆ. ಈವರೆಗೆ 15 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.

    ಅಲ್ಲದೆ ನೇಪಾಳದಲ್ಲಿ ಸುರಿದ ಭಾರೀ ಮಳೆ ಹಾಗೂ ಭೂಕುಸಿತದಿಂದ 40 ಜನ ಸಾವನ್ನಪ್ಪಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ ಮಳೆಯಿಂದಾಗಿ ಸಂಭವಿಸಿದ ಪ್ರವಾಹದಿಂದಾಗಿ 20ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ನೇಪಾಳದ 21 ಜಿಲ್ಲೆಗಳಿಗಲ್ಲಿ ತೀವ್ರ ಹಾನಿ ಸಂಭವಿಸಿದೆ. ರಾಜಧಾನಿ ಕಠ್ಮಂಡುವಿನ ರಸ್ತೆಗಳೆಲ್ಲಾ ಪ್ರವಾಹಕ್ಕೆ ಸಿಲುಕಿ ಹಾನಿಯಾಗಿವೆ.

  • ಶ್ರೀಲಂಕಾ ಬಳಿಕ ನೇಪಾಳದಲ್ಲಿ ಸರಣಿ ಸ್ಫೋಟ – 4 ಸಾವು, ಹಲವರಿಗೆ ಗಾಯ

    ಶ್ರೀಲಂಕಾ ಬಳಿಕ ನೇಪಾಳದಲ್ಲಿ ಸರಣಿ ಸ್ಫೋಟ – 4 ಸಾವು, ಹಲವರಿಗೆ ಗಾಯ

    ಕಠ್ಮಂಡು: ಭಾರತದ ನೆರೆಯ ದೇಶ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಭಾನುವಾರ 3 ಸರಣಿ ಸ್ಫೋಟಗಳು ಸಂಭವಿಸಿದ್ದು ನೇಪಾಳ ಜನತೆಯನ್ನು ಬೆಚ್ಚಿ ಬೀಳಿಸಿದೆ. ಈ ಸ್ಫೋಟದಲ್ಲಿ ಈವರೆಗೆ ನಾಲ್ಕು ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ.

    ಈ ಸ್ಫೋಟಗಳ ಹಿಂದೆ ಮಾವೋವಾದಿ ಸಂಘಟನೆಗಳ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದ್ದು, ಸ್ಫೋಟದ ಹಿಂದಿನ ಕಾರಣ ತಿಳಿಯಲು ತನಿಖೆ ಮುಂದುವರಿಸಿದ್ದೇವೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.

    ಕಠ್ಮಂಡು ನಗರದ ಮಧ್ಯ ಭಾಗದಲ್ಲಿ ಮೊದಲ ಸ್ಫೋಟ ಸಂಭವಿಸಿತ್ತು. ಮನೆಯೊಂದರಲ್ಲಿ ಸಂಭವಿಸಿರುವ ಸ್ಫೋಟದಲ್ಲಿ ನಿವಾಸಿಯೊಬ್ಬರು ಬಲಿಯಾಗಿದ್ದಾರೆ. ಸ್ಫೋಟದಿಂದಾಗಿ ಮನೆಯ ಗೋಡೆಗಳು ಕುಸಿದಿದೆ. ಇದರ ಬಳಿಕ ಕಠ್ಮಂಡು ನಗರದ ಹೊರವಲಯದಲ್ಲಿರುವ ಸುಖೇದಾದಲ್ಲಿ ಎರಡನೇ ಸ್ಫೋಟ ಸಂಭವಿಸಿದ್ದು, ಥಾಂಕೋಟ್ ಪ್ರದೇಶದಲ್ಲಿ ಮೂರನೇ ಸ್ಫೋಟ ನಡೆದಿದೆ.

    ಈ ಮೂರು ಸ್ಫೋಟಗಳಲ್ಲಿ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಪೊಲೀಸ್ ಅಧಿಕಾರಿ ಶ್ಯಾಮ್ ಲಾಲ್ ಗವಾಲಿಯ ಪ್ರಕಾರ, ಮಾವೋವಾದಿ ಸಂಘಟನೆಗಳಿಗೆ ಸಂಬಂಧಿಸಿದ ಕೆಲವು ಪತ್ರಗಳು ಮೊದಲ ಸ್ಫೋಟದಲ್ಲಿ ಸುಟ್ಟುಹೋಗಿದ್ದು, ಸ್ಥಳದಲ್ಲಿ ಸಿಕ್ಕ ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸ್ಫೋಟಗಳ ಹಿಂದೆ ಮಾವೋವಾದಿ ಸಂಘಟನೆಗಳ ಕೈವಾಡವಿದ್ದು, ಅವರು ಸರ್ಕಾರದ ವಿರುದ್ಧ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿ ಶಂಕೆ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಶಂಕಿತ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸ್ಫೋಟಗಳ ಬಗ್ಗೆ ತನಿಖೆಯನ್ನು ಆರಂಭಿಸಲಾಗಿದೆ. ಅಲ್ಲದೆ ಗಾಯಗೊಂಡವರಿಗೆ ಕಠ್ಮಂಡುವಿನ ಎರಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಹಿಂದೆ ಈಸ್ಟರ್ ಭಾನುವಾರದಂದು ನೆರೆಯ ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿತ್ತು. ಆಗ 290ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

  • ಗಂಗಾ ನದಿಯಂತೆ ನೇಪಾಳದಲ್ಲೂ ಬೃಹತ್ ಸ್ವಚ್ಛತಾ ಅಭಿಯಾನ ಆರಂಭ

    ಗಂಗಾ ನದಿಯಂತೆ ನೇಪಾಳದಲ್ಲೂ ಬೃಹತ್ ಸ್ವಚ್ಛತಾ ಅಭಿಯಾನ ಆರಂಭ

    – ಪರಿಸರ ದಿನದಂದು ಘನ ತ್ಯಾಜ್ಯ ಪ್ರದರ್ಶನ

    ಕಠ್ಮಂಡು: ನಮ್ಮ ದೇಶದಲ್ಲಿ ಗಂಗಾ ನದಿ ಸ್ವಚ್ಛತಾ ಅಭಿಯಾನದಂತೆ ನೇಪಾಳದಲ್ಲೂ ಬೃಹತ್ ಸ್ವಚ್ಛತಾ ಅಭಿಯಾನವೊಂದು ಆರಂಭವಾಗಿದೆ.

    ಜಗತ್ತಿನ ಎತ್ತರದ ಮೌಂಟ್ ಎವರೆಸ್ಟ್ ಶಿಖರದ ಸ್ವಚ್ಛತಾ ಕಾರ್ಯ ಆರಂಭವಾಗಿದೆ. ನೇಪಾಳದಲ್ಲಿ ಹೊಸ ವರ್ಷದ ಆಚರಣೆಯ ಅಂಗವಾಗಿ ಮೌಂಟ್ ಎವರೆಸ್ಟ್ ಪರ್ವತ ಶ್ರೇಣಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಅಲ್ಲಿನ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿದೆ.

    ಏಪ್ರಿಲ್ 14 ರಿಂದ ಆರಂಭವಾಗಿರುವ ಮೌಂಟ್ ಎವರೆಸ್ಟ್ ಪರ್ವತ ಶ್ರೇಣಿಯ ಸ್ವಚ್ಛತಾ ಅಭಿಯಾನ ಮೇ 29ಕ್ಕೆ ಮುಗಿಯಲಿದೆ. ಈಗಾಗಲೇ ಸುಮಾರು 3,000 ಕೆಜಿ ಘನ ತ್ಯಾಜ್ಯವನ್ನು ಎವರೆಸ್ಟ್ ಪರ್ವತ ಶ್ರೇಣಿಯಿಂದ ಸಂಗ್ರಹಿಸಲಾಗಿದೆ. ಒಟ್ಟು ಸುಮಾರು 10,000 ಕೆಜಿಯಷ್ಟು ತ್ಯಾಜ್ಯ ಸಂಗ್ರಹ ಗುರಿ ಹೊಂದಲಾಗಿದೆ. ಎವರೆಸ್ಟ್ ಬೇಸ್ ಕ್ಯಾಂಪಿನಲ್ಲಿ 5,000 ಕೆಜಿಗೂ ಅಧಿಕ ತ್ಯಾಜ್ಯ ಸಂಗ್ರಹವಾಗುವ ನಿರೀಕ್ಷೆಯಿದೆ. ಕ್ಯಾಂಪ್ 2 ಹಾಗೂ 3 ಸೇರಿದಂತೆ 3000 ಕೆಜಿ ತ್ಯಾಜ್ಯ ಸಂಗ್ರಹ ಗುರಿಯಿದೆ.

    ತ್ಯಾಜ್ಯದ ಜೊತೆಗೆ ಟ್ರೆಕ್ಕಿಂಗ್ ಸಂದರ್ಭದಲ್ಲಿ ಮೃತಪಟ್ಟು ಅಲ್ಲೇ ಉಳಿದ ಶವಗಳಿದ್ದರೆ, ಅವುಗಳನ್ನು ಕೆಳಗಿಳಿಸಲಾಗುತ್ತದೆ. ಜೂನ್ 5ರ ಪರಿಸರ ದಿನದಂದು ಈ ಬೃಹತ್ ಘನ ತ್ಯಾಜ್ಯವನ್ನು ಪ್ರದರ್ಶನ ಮಾಡಿ ನಂತರ ಮರು ಬಳಕೆಗೆ ಸಂಸ್ಕರಣೆ ಮಾಡಲಾಗುತ್ತದೆ.

  • ಸಮ್ಮಿಟ್ ಏರ್‌ಫ್ಲೈಟ್ ಪತನ- ಇಬ್ಬರ ದುರ್ಮರಣ, ಐವರಿಗೆ ಗಾಯ!

    ಸಮ್ಮಿಟ್ ಏರ್‌ಫ್ಲೈಟ್ ಪತನ- ಇಬ್ಬರ ದುರ್ಮರಣ, ಐವರಿಗೆ ಗಾಯ!

    ನವದೆಹಲಿ: ನೇಪಾಳದ ಟೆನ್ಜಿಂಗ್-ಹಿಲರಿ ವಿಮಾನ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಸಮ್ಮಿಟ್ ಏರ್ ಫ್ಲೈಟ್ ಪತನಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.

    ಟೆನ್ಜಿಂಗ್-ಹಿಲರಿ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡಲ್ಪಟ್ಟ ಚಾಪರ್ ವಿಮಾನದೊಂದಿಗೆ ಸಮ್ಮಿಟ್ ಏರ್ ಫ್ಲೈಟ್ ಘರ್ಷಣೆಯಾಗಿತ್ತು. ಆದ್ದರಿಂದ ವಿಮಾನ ಪತನವಾಗಿರಬಹುದು ಎಂದು ಶಂಕಿಸಲಾಗಿದೆ. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಆದ್ರೆ ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಹಾಗೂ ವಿಮಾನ ಪತನವಾಗಲು ಕಾರಣವೇನು ಎಂಬ ನಿಖರ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

  • ವೀಸಾ ಬೇಡ, ಆಧಾರ್ ಕಾರ್ಡ್ ಇದ್ರೆ ಭೂತಾನ್, ನೇಪಾಳಕ್ಕೆ ಎಂಟ್ರಿ!

    ವೀಸಾ ಬೇಡ, ಆಧಾರ್ ಕಾರ್ಡ್ ಇದ್ರೆ ಭೂತಾನ್, ನೇಪಾಳಕ್ಕೆ ಎಂಟ್ರಿ!

    ನವದೆಹಲಿ: ಇನ್ಮುಂದೆ ನಮ್ಮ ನೆರೆಯ ದೇಶಗಳಾದ ಭೂತಾನ್ ಹಾಗೂ ನೇಪಾಳಕ್ಕೆ ಪ್ರಯಾಣಿಸಲು 15 ವರ್ಷದೊಳಗಿನ ಮಕ್ಕಳಿಗೆ ಮತ್ತು 65 ವರ್ಷ ಮೇಲ್ಪಟ್ಟವರಿಗೆ ವಿಸಾದ ಅಗತ್ಯವಿಲ್ಲ, ಆಧಾರ್ ಕಾರ್ಡ್ ಇದ್ದರೆ ಸಾಕು ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.

    ಭಾರತೀಯರು ಪಾಸ್‍ಪೋರ್ಟ್ ಹೊಂದಿದ್ದರೆ, ಭಾರತ ಸರ್ಕಾರ ನೀಡಿದ ಫೋಟೋ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗ ನೀಡಿದ ಚುನಾವಣಾ ಗುರುತಿನ ಚೀಟಿ ಇದ್ದರೆ ವೀಸಾ ಬೇಕಾಗಿಲ್ಲ, ಹಾಗೆಯೇ ಈ ಎರಡು ದೇಶಗಳಿಗೆ ಹೋಗಬಹುದು ಎಂದು ಸಚಿವಾಲಯ ತಿಳಿಸಿದೆ.

    ಮೊದಲೆಲ್ಲ 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 15 ವರ್ಷದೊಳಗಿನವರು ನೇಪಾಳ ಮತ್ತು ಭೂತಾನ್‍ಗೆ ಹೋಗುವುದಕ್ಕೆ ಗುರುತು ಪರಿಶೀಲನೆಗಾಗಿ ಹಲವು ದಾಖಲೆಗಳನ್ನು ನೀಡಬೇಕಾಗಿತ್ತು. ಗುರುತಿಗಾಗಿ ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ ಸರ್ಕಾರದ ಆರೋಗ್ಯ ಸೇವೆ ಕಾರ್ಡ್ ಅಥವಾ ರೇಷನ್ ಕಾರ್ಡ್‍ನ್ನು ಮಾತ್ರ ಸಲ್ಲಿಸಲು ಅವಕಾಶವಿತ್ತು. ಆದರೆ ಆಧಾರ್ ಕಾರ್ಡ್‍ನ್ನು ಸಲ್ಲಿಸಲು ಅವಕಾಶವಿರಲಿಲ್ಲ.

    ಆದರೆ ಇನ್ಮುಂದೆ ಹಾಗೆ ಆಗಲ್ಲ. ಯಾಕೆಂದರೆ ಆಧಾರ್ ಕಾರ್ಡ್ ಅನ್ನು ಕೂಡ ಗುರುತಿನ ದಾಖಲೆಗಳಾಗಿ ಪರಿಗಣಿಸಬಹುದು. ಅಲ್ಲದೆ ಪ್ರಯಾಣಿಕರು ಆಧಾರ್ ಕಾರ್ಡ್ ಅನ್ನು ಪ್ರಯಾಣ ದಾಖಲೆಯಾಗಿ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಅಷ್ಟೇ ಅಲ್ಲದೆ 15 ರಿಂದ 18 ವರ್ಷದೊಳಗಿನ ಯುವಕ-ಯುವತಿಯರಿಗೆ ಭಾರತ ಮತ್ತು ನೇಪಾಳಕ್ಕೆ ಪ್ರಯಾಣಿಸಲು ಶಾಲೆಯ ಪ್ರಾಂಶುಪಾಲರಿಂದ ಪಡೆದ ಗುರುತಿನ ಚೀಟಿಯನ್ನು ಬಳಸಬಹುದಾಗಿದೆ. ಹಾಗೆಯೇ ಒಂದೇ ಕುಟುಂಬ ಹಲವರು ಒಟ್ಟಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಎಲ್ಲರಿಗೂ ಪಾಸ್‍ಪೋರ್ಟ್ ಅಥವಾ ಚುನಾವಣೆ ಐಡಿಗಳನ್ನು ತೋರಿಸುವ ಅಗತ್ಯವಿಲ್ಲ. ಬದಲಿಗೆ ಆ ಕುಟುಂಬಸ್ಥರಲ್ಲಿ ಹಿರಿಯರಾದವರು ಸರ್ಕಾರದಿಂದ ಮಾನ್ಯತೆ ಪಡೆದ ದಾಖಲೆಗಳನ್ನು ಹೊಂದಿದ್ದರೆ ಸಾಕು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ಹಾಗೆಯೇ ಭಾರತೀಯರು ಭೂತಾನ್‍ಗೆ ತೆರಳಲು ಅವರ ಬಳಿ 6 ತಿಂಗಳು ಅವಧಿ ಇರುವ ಭಾರತದ ಪಾಸ್‍ಪೋರ್ಟ್ ಅಥವಾ ಚುನಾವಣೆ ಐಡಿ ಇರಬೇಕು. ಪ್ರತಿ ದಿನವು ಭೂತಾನ್ ಹಾಗೂ ಭಾರತ ಗಡಿ ಭಾಗದಲ್ಲಿ 8 ರಿಂದ 10 ಸಾವಿರ ಕೂಲಿ ಕಾರ್ಮಿಕರು ಓಡಾಡುತ್ತಾರೆ. ಅಲ್ಲದೆ ನೇಪಾಳದಲ್ಲಿ ಸುಮಾರು 6 ಲಕ್ಷ ಭಾರತೀಯರು ವಾಸವಾಗಿದ್ದಾರೆ. ಆದರಿಂದ ಆಧಾರ್ ಕಾರ್ಡ್ ಅನ್ನು ಗುರುತಿನ ದಾಖಲೆಯಾಗಿ ಪರಿಗಣಿಸಲು ಗೃಹ ಸಚಿವಾಲಯ ನಿಯಮ ಜಾರಿಗೊಳಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 700 ಮೀ. ಆಳದ ಕಂದಕಕ್ಕೆ ಬಿದ್ದ 37 ಜನರಿದ್ದ ಪ್ರವಾಸದ ಬಸ್

    700 ಮೀ. ಆಳದ ಕಂದಕಕ್ಕೆ ಬಿದ್ದ 37 ಜನರಿದ್ದ ಪ್ರವಾಸದ ಬಸ್

    ಕಠ್ಮಂಡು: ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್‍ವೊಂದು ಕಂದಕಕ್ಕೆ ಬಿದ್ದ ಪರಿಣಾಮ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 23 ಜನ ಮೃತಪಟ್ಟ ದುರ್ಘಟನೆ ನೇಪಾಳದಲ್ಲಿ ನಡೆದಿದೆ.

    ಸಲ್ಯಾನ್ ಜಿಲ್ಲೆಯ ಕಪುರ್ ಕೋಟ್‍ನಿಂದ ಬಸ್‍ನಲ್ಲಿ ಕಾಲೇಜಿಗೆ ಹಿಂದಿರುಗುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಬಸ್ ನಲ್ಲಿದ್ದ 37 ಜನರು ಪೈಕಿ ಚಾಲಕ, ಇಬ್ಬರು ಶಿಕ್ಷಕರು ಹಾಗೂ 20 ಜನ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ 5 ಜನ ಮಹಿಳೆಯರು ಸೇರಿದಂತೆ 14 ಜನರ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಸುಮಾರು 16ರಿಂದ 20 ವರ್ಷದವರು ಎಂದು ವರದಿಯಾಗಿದೆ.

    ಘಟನೆಯ ವಿವರ:
    ನೇಪಾಳದ ಕೃಷ್ಣ ಸೇನ್ ಇಚ್ಚುಕ್ ಪಾಲಿಕೆಟ್ನಿಕ್ ಇನ್‍ಸ್ಟಿಟ್ಯೂಟ್‍ನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಸ್ಯಶಾಸ್ತ್ರ ಅಧ್ಯಯನಕ್ಕೆಂದು ಸಲ್ಯಾನ್ ಜಿಲ್ಲೆಯ ಕಪುರ್ ಕೋಟ್ ತೆರಳಿದ್ದರು. ಶೈಕ್ಷಣಿಕ ಪ್ರವಾಸ ಮುಗಿಸಿಕೊಂಡು ಶುಕ್ರವಾರ ಮರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ 700 ಮೀ. ಆಳದ ಕಂದಕಕ್ಕೆ ಬಿದ್ದಿದೆ. ಪರಿಣಾಮ 37 ಜನ ಪ್ರಯಾಣಿಕರಲ್ಲಿ 23 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ದಾಂಗ್ ಜಿಲ್ಲೆಯ ತುಲ್ಸಿಪುರ್ ಸಮೀಪದ ರಾಮ್ರಿ ಗ್ರಾಮದ ಬಳಿ ಇರುವ ಕಂದಕದಲ್ಲಿ ಈ ಅನಾಹುತ ಸಂಭವಿಸಿದೆ. ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಂಭೀರವಾಗಿ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.

    ವೇಗವಾಗಿ ಚಾಲನೆ ಮಾಡಿದ್ದರಿಂದಲೇ ಬಸ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿ ಎಂದು ಪೊಲೀಸ್ ಅಧಿಕಾರಿ ಬೆಲ್ ಬಹುದ್ದುರ್ ಪಾಂಡೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೇಪಾಳ ರಾಯಭಾರಿಯಾದ ಬಾಲಿವುಡ್ ನಟಿ ಜಯಪ್ರದಾ

    ನೇಪಾಳ ರಾಯಭಾರಿಯಾದ ಬಾಲಿವುಡ್ ನಟಿ ಜಯಪ್ರದಾ

    ನವದೆಹಲಿ: ಮಾಜಿ ಸಂಸತ್ ಸದಸ್ಯೆ ಹಾಗೂ ಬಾಲಿವುಡ್‍ನ ಖ್ಯಾತ ನಟಿ ಜಯಪ್ರದಾ ಅವರನ್ನು ನೇಪಾಳ ಸರ್ಕಾರ ಸೌಹಾರ್ದ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿದೆ.

    ಸೌಹಾರ್ದ ರಾಯಭಾರಿಯನ್ನಾಗಿ ನಟಿ ಜಯಪ್ರದಾರವರನ್ನು ಆಯ್ಕೆಮಾಡುವ ಬಗ್ಗೆ ನೇಪಾಳ ಸರ್ಕಾರ ಸಂಸತ್ತಿನಲ್ಲಿ ವಿಚಾರ ಪ್ರಸ್ತಾಪಿಸಿತ್ತು. ಇದಕ್ಕೆ ಎಲ್ಲಾ ಸದಸ್ಯರು ಸರ್ವಾನುಮತದಿಂದ ಆಯ್ಕೆಮಾಡಿ ನೇಪಾಳ ಸರ್ಕಾರದ ಸೌಹಾರ್ದ ರಾಯಭಾರಿಯನ್ನಾಗಿ ನಟಿ ಜಯಪ್ರದಾರವರನ್ನು ಅಂಗೀಕರಸಿದೆ.

    ಜಯಪ್ರದಾ ಅವರು ರಾಯಭಾರಿ ಹುದ್ದೆಗೆ ನಾಮನಿರ್ದೇಶನದಿಂದಾಗಿ ನೆರೆಹೊರೆ ರಾಷ್ಟ್ರಗಳ ನಡುವಿನ ಹಳೆಯ ಸಾಂಸ್ಕೃತಿಕ ಸಂಬಂಧ ಮತ್ತಷ್ಟು ಬಲಗೊಳಿಸುವ ಹಾಗೂ ನೇಪಾಳದ ಪ್ರವಾಸೋದ್ಯಮ ಇಲಾಖೆಯನ್ನು ಭಾರತದಲ್ಲಿ ಉತ್ತೇಜಿಸಲು ನೆರವಾಗಲಿದೆ. ಒಟ್ಟು ನಾಲ್ಕು ವರ್ಷಗಳ ಕಾಲ ಜಯಪ್ರದಾ ಅವರು ನೇಪಾಳದ ರಾಯಭಾರಿಗಳಾಗಲಿದ್ದಾರೆ ಎನ್ನಲಾಗಿದೆ.

    ಆದಾಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ನೇಪಾಳಕ್ಕೆ ಪ್ರವಾಸೋದ್ಯಮವೇ ಮೂಲ ಆಧಾರವಾಗಿದೆ. ಅಲ್ಲದೇ ಭಾರತದ ಪ್ರವಾಸಿಗರು ನೇಪಾಳದ ಪ್ರಮುಖ ಗ್ರಾಹಕರಾಗಿದ್ದಾರೆ. ಹೀಗಾಗಿ ಪ್ರವಾಸೋದ್ಯಮವನ್ನು ಸೆಳೆಯುವ ಹಾಗೂ ಪ್ರೋತ್ಸಾಹಿಸುವ ದೃಷ್ಟಿಯಿಂದ ನೇಪಾಳ ಸರ್ಕಾರವು 2020ರ ವರ್ಷವನ್ನು ವಿಸಿಟ್ ನೇಪಾಳ ಇಯರ್ ಎಂಬ ಅಡಿಬರಹದ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಮೂಲಕ ನೇಪಾಳಕ್ಕೆ ಭೇಟಿ ನೀಡುವ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಿದೆ. ಈ ಯೋಜನೆ ಮೂಲಕ ಸುಮಾರು 20 ಲಕ್ಷ ಪ್ರವಾಸಿಗರನ್ನು ಸೆಳೆಯುವ ಉದ್ದೇಶವನ್ನು ಪ್ರವಾಸೋದ್ಯಮ ಇಲಾಖೆ ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೇಪಾಳದಲ್ಲಿ ಸೆಕ್ಸ್ ವೆಬ್‍ಸೈಟ್‍ಗಳ ಕಡಿವಾಣಕ್ಕೆ ಚಿಂತನೆ!

    ನೇಪಾಳದಲ್ಲಿ ಸೆಕ್ಸ್ ವೆಬ್‍ಸೈಟ್‍ಗಳ ಕಡಿವಾಣಕ್ಕೆ ಚಿಂತನೆ!

    ಕಠ್ಮಂಡು: ಅತ್ಯಾಚಾರ ಪ್ರಕರಣ ಹೆಚ್ಚಳಕ್ಕೆ ಸೆಕ್ಸ್ ವಿಡಿಯೋ ವೆಬ್ ಸೈಟ್‍ಗಳೇ ಕಾರಣ. ಹೀಗಾಗಿ ಅವುಗಳನ್ನು ಸ್ಥಗಿತಗೊಳಿಸಬೇಕು ಎಂದು ನೇಪಾಳದ ಮಾಹಿತಿ ಮತ್ತು ಸಂವಹನ ಸಚಿವಾಲಯ ಪ್ರಕಟಣೆ ಬಿಡುಗಡೆ ಮಾಡಿದೆ.

    ಅಂದಹಾಗೆ ಇತ್ತೀಚಿನ ದಿನಗಳಲ್ಲಿ ನೇಪಾಳದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಂತಹ ಹೊಸ ಪ್ರಸ್ತಾಪವೊಂದನ್ನು ಸರ್ಕಾರ ಸಲ್ಲಿಸಿದೆ.

    ಪ್ರಕಟಣೆಯಲ್ಲಿ ಏನಿದೆ?
    ಅತ್ಯಾಚಾರ ಪ್ರಕರಣ ಹೆಚ್ಚಳಕ್ಕೆ ಅಶ್ಲೀಲ ಮತ್ತು ಕಾಮ ಪ್ರಚೋದಕ ವಿಷಯಗಳ ಪ್ರಕಟಣೆ ಮತ್ತು ಪ್ರಸರಣವೇ ಕಾರಣ. ಕ್ರಿಮಿನಲ್ ಕೋಡ್ 2071ರ 121ನೇ ವಿಧಿ ಹಾಗೂ ಇತರ ಪ್ರಚಲಿತ ಕಾನೂನುಗಳು ಅಶ್ಲೀಲ ವಿಷಯಗಳನ್ನು ಉತ್ಪಾದಿಸುವುದು ಹಾಗೂ ಪ್ರಸರಣ ಮಾಡುವುದನ್ನು ನಿಷೇಧಿಸುತ್ತವೆ. ಈ ಕಾನೂನುಗಳ ಅನ್ವಯ ವಿದ್ಯುನ್ಮಾನ ಮಾಧ್ಯಮ ಹಾಗೂ ವೆಬ್ ಸೈಟ್‍ಗಳಲ್ಲಿ ಅತ್ಯಾಚಾರ ಪ್ರಚೋದಕ ವಿಷಯ ಬಿತ್ತರಿಸಿಸುವುದನ್ನು ಅಲಭ್ಯಗೊಳಿಸಬೇಕು ಎಂದು ತಿಳಿಸಲಾಗಿದೆ.

    ಕಳೆದ ವಾರ ಹೆಚ್ಚಿನ ಸಂಖ್ಯೆಯಲ್ಲಿ ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಹೊಸ ನಿರ್ಧಾರಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಇತ್ತೀಚೆಗೆ ನೇಪಾಳದ ದಕ್ಷಿಣ ಭಾಗದಲ್ಲಿ ನಡೆದ ಶಾಲಾ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಹಾಗೂ ಕೊಲೆ ಮಾಡಿದ್ದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದಿರುವುದಕ್ಕೆ ಸರ್ಕಾರದ ವೈಫಲ್ಯವೇ ಕಾರಣವೆಂದು ಸ್ಥಳೀಯರು ಕಟುವಾಗಿ ಟೀಕಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಭಾರತದಲ್ಲಿ ಪೆಟ್ರೋಲ್ ದರ 82 ರೂ. – ಪಾಕಿಸ್ತಾನ, ಅಮೆರಿಕ, ಶ್ರೀಲಂಕಾದಲ್ಲಿ ಎಷ್ಟು?

    ಭಾರತದಲ್ಲಿ ಪೆಟ್ರೋಲ್ ದರ 82 ರೂ. – ಪಾಕಿಸ್ತಾನ, ಅಮೆರಿಕ, ಶ್ರೀಲಂಕಾದಲ್ಲಿ ಎಷ್ಟು?

    ನವದೆಹಲಿ: ಪೆಟ್ರೋಲ್, ಡೀಸೆಲ್ ದರ ಪ್ರತಿನಿತ್ಯ ಏರಿಕೆಯಾಗುತ್ತಿದ್ದು ಕರ್ನಾಟಕದಲ್ಲಿ 80ರ ಗಡಿ ದಾಟಿದೆ. ಪೆಟ್ರೋಲ್ ದರ ಭಾರತದಲ್ಲಿ ಮಾತ್ರ ಏರಿಕೆಯಾಗುತ್ತಿದೆಯೋ? ಬೇರೆ ಕಡೆ ಏರಿಕೆಯಾದರೆ ಎಷ್ಟು ರೂ. ಇದೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಹೀಗಾಗಿ ಇಲ್ಲಿ ಅಮೆರಿಕ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಇಂಗ್ಲೆಂಡ್ ದೇಶಗಳ ಪೆಟ್ರೋಲ್, ಡೀಸೆಲ್ ಬೆಲೆಯನ್ನು ನೀಡಲಾಗಿದೆ.

    ಅಮೆರಿಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 0.54 ಡಾಲರ್(53.88 ರೂ.), ಇದ್ದರೆ ಡೀಸೆಲ್ ಬೆಲೆ 0.83 ಡಾಲರ್(58.9 ರೂ.) ಇದೆ. ಅಮೆರಿಕ ವಿಶ್ವದ ಪೆಟ್ರೋಲ್ ಉತ್ಪದನಾ ರಾಷ್ಟ್ರಗಳಲ್ಲಿ ಒಂದಾಗಿದ್ದು, ಪ್ರತಿದಿನ 14.86 ದಶಲಕ್ಷ ಬ್ಯಾರಲ್(ವಿಶ್ವದ 15.3%) ಕಚ್ಚಾ ತೈಲವನ್ನು ಉತ್ಪಾದನೆ ಮಾಡುತ್ತಿದೆ. ಒಪೆಕ್ ರಾಷ್ಟ್ರಗಳ ಅತಿ ಹೆಚ್ಚು ಉತ್ಪಾದನೆ ಮಾಡುವ ಸೌದಿ ಅರೇಬಿಯಾ ಪ್ರತಿ ದಿನ 12.39 ದಶಲಕ್ಷ ಬ್ಯಾರಲ್ ತೈಲವನ್ನು ಉತ್ಪಾದನೆ ಮಾಡುತ್ತಿದೆ. ಇದನ್ನು ಓದಿ: ನೂರರ ಗಡಿಯತ್ತ ತೈಲ ಬೆಲೆ: ಪೆಟ್ರೋಲ್‍ನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಪಾಲು ಎಷ್ಟು? ಕೇಂದ್ರ ಹೇಳೋದು ಏನು?

    ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 112.8 ಪಾಕಿಸ್ತಾನ ರೂ.(ಭಾರತದ 65.2 ರೂ.) ಇದ್ದರೆ, ಡೀಸೆಲ್ ಬೆಲೆ 106.57 ಪಾಕಿಸ್ತಾನ  ರೂ.( ಭಾರತದ 106.57 ರೂ.) ಇದೆ.

    ಭಾರತದಲ್ಲಿ ಪ್ರತಿದಿನ ತೈಲ ಬೆಲೆ ಪರಿಷ್ಕರಣೆ ಆಗುತ್ತಿದ್ದರೆ ಶ್ರೀಲಂಕಾದಲ್ಲಿ ಪ್ರತಿ ತಿಂಗಳ 10 ರಂದು ತೈಲ ಬೆಲೆ ಪರಿಷ್ಕರಣೆಯಾಗುತ್ತದೆ. ಕೆಲ ಸಮಯದ ಹಿಂದೆ ಶ್ರೀಲಂಕಾ ಈ ನೀತಿಯನ್ನು ಅಳವಡಿಸಿದ್ದು ಪ್ರಸ್ತುತ ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ 157 ಶ್ರೀಲಂಕಾ ರೂಪಾಯಿ(ಭಾರತದ 69.14 ರೂ.) ಇದ್ದರೆ, ಡೀಸೆಲ್ ಬೆಲೆ 118 ಶ್ರೀಲಂಕಾ ರೂಪಾಯಿ(51.9 ರೂ.) ಇದೆ.

    ನೇಪಾಳದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 111 ನೇಪಾಳಿ ರೂ.(ಭಾರತದ 71.25 ರೂ.) ಇದ್ದರೆ ಡೀಸೆಲ್ ಬೆಲೆ 95 ನೇಪಾಳಿ ರೂ.(59.43 ರೂ.) ಇದೆ.

    ಅತಿ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡುವ ದೇಶಗಳ ಪೈಕಿ 2017ರಿಂದ ಚೀನಾ ಮೊದಲ ಸ್ಥಾನ ಪಡೆದಿದ್ದು ಪ್ರತಿ ಲೀಟರ್ ಪೆಟ್ರೋಲ್ ಗೆ 7.57 ಯುವಾನ್(78.95 ರೂ.) ಇದ್ದರೆ ಡೀಸೆಲ್ ಬೆಲೆ 6.76 ಯುವಾನ್(70.49 ರೂ. ಇದೆ). ಪ್ರತಿ ದಿನ ಚೀನಾ 8.4 ದಶಲಕ್ಷ ಬ್ಯಾರಲ್ ತೈಲ ಅಮದು ಮಾಡಿಕೊಳ್ಳುತ್ತಿದೆ. ಅಮೆರಿಕ ವಾಣಿಜ್ಯ ಸಮರ ಆರಂಭಿಸಿದ ಬಳಿಕ ಚೀನಾ ಕರೆನ್ಸಿ ಡಾಲರ್ ಮುಂದೆ ದುರ್ಬಲವಾಗುತ್ತಿದ್ದು ತೈಲ ಬೆಲೆ ಏರತೊಡಗಿದೆ.

    ಯುರೋಪಿಯನ್ ದೇಶಗಳ ಪೈಕಿ ಇಂಗ್ಲೆಂಡ್ ಅತಿ ಹೆಚ್ಚು ತೆರಿಗೆಯನ್ನು ತೈಲದ ಮೇಲೆ ವಿಧಿಸಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 5.91 ಪೌಂಡ್(119.9 ರೂ.) ಇದ್ದರೆ ಡೀಸೆಲ್ ಬೆಲೆ 6.03 ಪೌಂಡ್(121.8 ರೂ.) ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾನಸ ಸರೋವರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 26 ಕನ್ನಡಿಗರು ವಾಪಸ್

    ಮಾನಸ ಸರೋವರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 26 ಕನ್ನಡಿಗರು ವಾಪಸ್

    ಬೆಂಗಳೂರು: ಮಾನಸ ಸರೋವರಕ್ಕೆ ತೆರಳಿ ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರ ಪೈಕಿ 26 ಮಂದಿಯನ್ನು ರಕ್ಷಿಸುವಲ್ಲಿ ಕರ್ನಾಟಕ ಭವನ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

    ಮೈಸೂರಿನ ತಂಡದಲ್ಲಿದ್ದ ಶ್ರೀಕಾಂತ್ ಶರ್ಮಾ ಜೊತೆಗೆ ಬೆಂಗಳೂರಿನ ಬಸವನಗುಡಿಯ ನಿವಾಸಿಗಳಾದ ಸರಸ್ವತಿ ರೆಡ್ಡಿ, ಕೃಷ್ಣ ವೇಣಿ, ಪದ್ಮಾ, ಶೋಭಾ ದೇವಿ, ಪ್ರಮೀಳಾ ಸೇರಿದಂತೆ 26 ಮಂದಿಯ ತಂಡ ಮೈಸೂರಿಗೆ ಬಂದು ಸೇರಿದೆ. ಚನ್ನಪಟ್ಟಣದ ಮಲ್ಲೇಶ್ ಅವರು ಕೂಡಾ ಮರಳಿದ್ದು, ಕಾಲು ಮುರಿದಿದ್ದರಿಂದ ಚಿಕಿತ್ಸೆ ಪಡಿಯುತ್ತಿದ್ದಾರೆ. ತಾವು ಅನುಭವಿಸಿದ ಕಷ್ಟವನ್ನು ಹಂಚಿಕೊಂಡ ಮಲ್ಲೇಶ್, ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದರು.

    ಮತ್ತೊಂದು ತಂಡ ಇವತ್ತು ರಾತ್ರಿ ಬೆಂಗಳೂರಿಗೆ ಆಗಮಿಸಲಿದೆ. ಉಳಿದವರಲ್ಲಿ ಕೆಲವರು ಸಿಮೀಕೋಟ್‍ನಿಂದ ನೇಪಾಳದ ಗಂಜ್‍ಗೆ ಬಂದಿದ್ದು, ಕಠ್ಮಂಡು ಮೂಲಕ ನಾಳೆ ಬೆಂಗಳೂರಿಗೆ ಬರಲಿದ್ದಾರೆ. ರಕ್ಷಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳಾದ ವೆಂಕಟೇಶ್, ಈಶ್ವರ್ ಕಟ್ಟಿಮನಿ ಬಳಿ ಯಾತ್ರಿಗಳು ಕಣ್ಣೀರಿಟ್ಟು, ತಾವು ಅನುಭವಿಸಿದ ನರಕಯಾತನೆಯನ್ನು ಹೇಳಿಕೊಂಡಿದ್ದಾರೆ.