Tag: ನೇಪಾಳ ವಿಮಾನ ದುರಂತ

  • Nepal Plane Crash – ಮೃತರ ಸಂಖ್ಯೆ 71ಕ್ಕೆ ಏರಿಕೆ

    Nepal Plane Crash – ಮೃತರ ಸಂಖ್ಯೆ 71ಕ್ಕೆ ಏರಿಕೆ

    ಕಠ್ಮಂಡು: ನೇಪಾಳದ ಪೋಖ್ರಾ (Pokhara) ಪ್ರದೇಶದಲ್ಲಿ ಜನವರಿ 15 ರಂದು ಸಂಭವಿಸಿದ ಯೇತಿ ಏರ್‌ಲೈನ್ಸ್‌ನ (Yeti Airlines) ವಿಮಾನ ದುರಂತದಲ್ಲಿ ನಾಪತ್ತೆಯಾಗಿದ್ದ ಮತ್ತಿಬ್ಬರು ಪ್ರಯಾಣಿಕರ ಮೃತದೇಹಗಳು ಪತ್ತೆಯಾಗಿದೆ. ನಿರಂತರ ಕಾರ್ಯಚರಣೆ ಬಳಿಕ ಮೃತದೇಹಗಳ ಸಂಖ್ಯೆ ಈಗ 71ಕ್ಕೆ ಏರಿದೆ. ಮತ್ತೋರ್ವ ಪ್ರಯಾಣಿಕನ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

    ನೇಪಾಳದ ಪೋಖ್ರಾ (Pokhara) ವಿಮಾನ ನಿಲ್ದಾಣದ ಸಮೀಪ ನಡೆದ ಭೀಕರ ವಿಮಾನ ದುರಂತದಲ್ಲಿ ಯೇತಿ ಏರ್‌ಲೈನ್ಸ್‌ನ ATR 72 ವಿಮಾನದಲ್ಲಿದ್ದ 72 ಜನರ ಪೈಕಿ ಈವರೆಗೆ 71 ಜನ ಮೃತಪಟ್ಟಿದ್ದಾರೆ. ಎಲ್ಲ ಪ್ರಯಾಣಿಕರ ಮೃತ ದೇಹಗಳನ್ನು ವೈದ್ಯಕೀಯ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತಿದೆ ಎಂದು ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರ (CAAN) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ವಿಮಾನದ ಎರಡು ಕಪ್ಪು ಪೆಟ್ಟಿಗೆಯೂ (Black Box) ಸಿಕ್ಕಿದ್ದು ದುರಂತದ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ.

    ಜನವರಿ 15 ರಂದು ಕಠ್ಮಾಂಡುವಿನಿಂದ ಪೋಖ್ರಾಗೆ ತೆರಳುತ್ತಿದ್ದ ಯೇತಿ ಏರ್‌ಲೈನ್ಸ್‌ ವಿಮಾನ ಪತನಗೊಂಡು 72 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ವಿಮಾನದಲ್ಲಿ ಐದು ಮಂದಿ ಭಾರತೀಯರು 10ಕ್ಕೂ ಅಧಿಕ ವಿದೇಶಿ ಪ್ರಯಾಣಿಕರು ಸೇರಿದಂತೆ  9 ಮಕ್ಕಳು ಕೂಡ ಇದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Nepal Plane Crash – ವಿಮಾನದ ಎರಡು ಬ್ಲ್ಯಾಕ್ ಬಾಕ್ಸ್ ಪತ್ತೆ

    Nepal Plane Crash – ವಿಮಾನದ ಎರಡು ಬ್ಲ್ಯಾಕ್ ಬಾಕ್ಸ್ ಪತ್ತೆ

    ಕಠ್ಮಂಡು: ನೇಪಾಳದಲ್ಲಿ ನಡೆದ ವಿಮಾನ ದುರಂತದ (Nepal Plane Crash) ಸ್ಥಳದಲ್ಲಿ ವಿಮಾನದಲ್ಲಿದ್ದ 2 ಬ್ಲ್ಯಾಕ್ ಬಾಕ್ಸ್ (Black Box) ಪತ್ತೆಯಾಗಿದೆ.

    ನೇಪಾಳದ ಪೋಖ್ರಾ (Pokhara) ವಿಮಾನ ನಿಲ್ದಾಣದ ಸಮೀಪ ನಡೆದ ಭೀಕರ ವಿಮಾನ ದುರಂತದಲ್ಲಿ ಯೇತಿ ಏರ್‌ಲೈನ್ಸ್‌ನ (Yeti Airlines) ATR 72 ವಿಮಾನದಲ್ಲಿದ್ದ 72 ಜನರ ಪೈಕಿ ಈವರೆಗೆ 68 ಜನ ಮೃತಪಟ್ಟಿದ್ದಾರೆ. ಇನ್ನೂಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ನಡುವೆ ವಿಮಾನದಲ್ಲಿದ್ದ 2 ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಬ್ಲ್ಯಾಕ್ ಬಾಕ್ಸ್‌ನ್ನು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ (CAAN) ಹಸ್ತಾಂತರಿಸಲಾಗಿದೆ ಎಂದು ಯೇತಿ ಏರ್‌ಲೈನ್ಸ್‌ನ ವಕ್ತಾರ ಸುದರ್ಶನ್ ಬರ್ತೌಲಾ ತಿಳಿಸಿದ್ದಾರೆ. ಇದನ್ನೂ ಓದಿ: ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ವಿಮಾನ ದುರಂತದಲ್ಲಿ ನಾಲ್ವರು ಸಿಬ್ಬಂದಿ, ಐವರು ಭಾರತೀಯರು, 10 ವಿದೇಶಿಗರು ಸೇರಿ 72 ಜನ ಪ್ರಯಾಣಿಕರಿದ್ದರು. ದುರಂತದಲ್ಲಿ ಐವರಲ್ಲಿ ನಾಲ್ವರು ಭಾರತೀಯರು ಸೇರಿ 68 ಜನ ಸಾವನ್ನಪ್ಪಿದ್ದಾರೆ. ಓರ್ವ ಭಾರತೀಯ ಪತ್ತೆಯಾಗಿಲ್ಲ. ಇದರಲ್ಲಿ 9 ಮಕ್ಕಳು ಕೂಡ ಇದ್ದರು ಎಂಬುದು ತಿಳಿದುಬಂದಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

    ಏನಿದು ಬ್ಲ್ಯಾಕ್ ಬಾಕ್ಸ್?
    ವಿಮಾನದಲ್ಲಿ ಧ್ವನಿಗ್ರಹಣಕ್ಕೆ ಬಳಸಲಾಗುವ ಎರಡು ಸಾಧನಗಳನ್ನು ತಾಂತ್ರಿಕ ಭಾಷೆಯಲ್ಲಿ ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಗುತ್ತದೆ. ಬ್ಲ್ಯಾಕ್ ಬಾಕ್ಸ್ ಅನ್ನು ‘ಫ್ಲೈಟ್ ಡಾಟಾ ರೆಕಾರ್ಡರ್’ ಎಂದೂ ಕರೆಯುತ್ತಾರೆ. ಬ್ಲ್ಯಾಕ್ ಬಾಕ್ಸ್ ಹಾರಾಟದ ಸಮಯದಲ್ಲಿನ ವಿಮಾನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತದೆ. ಎಲ್ಲ ರೀತಿಯ ವಿಮಾನಗಳಲ್ಲಿ ಬ್ಲ್ಯಾಕ್ ಬಾಕ್ಸ್ ಅನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ. ಇದನ್ನೂ ಓದಿ: 16 ವರ್ಷಗಳ ಹಿಂದೆ ಪತಿ, ಈಗ ಪತ್ನಿ – ದಂಪತಿ ಜೀವನ ವಿಮಾನ ದುರಂತದಲ್ಲಿ ಅಂತ್ಯ

    ವಿಮಾನ ಅಪಘಾತವಾದಾಗ ಅದಕ್ಕೆ ಕಾರಣ ಪತ್ತೆ ಹಚ್ಚಲು ನೆರವಾಗಲೆಂದೇ 5 ಕೆಜಿ ತೂಕದ ರೆಕಾರ್ಡಿಂಗ್ ಸಾಧನವನ್ನು ಅಳವಡಿಸಲಾಗುತ್ತದೆ. ಭದ್ರತೆಯ ದೃಷ್ಟಿಯಿಂದ ಕಪ್ಪು ಪೆಟ್ಟಿಗೆಯನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಈ ಪೆಟ್ಟಿಗೆಯನ್ನು ಟೈಟಾನಿಯಂ ಲೋಹದಿಂದ ಮಾಡಲಾಗಿದ್ದು, ಟೈಟಾನಿಯಂ ಪೆಟ್ಟಿಗೆಯಲ್ಲಿ ಸುತ್ತುವರಿಯಲಾಗಿದೆ. ಇದು ಎಷ್ಟು ಶಕ್ತಿಶಾಲಿಯೆಂದರೆ ಸಮುದ್ರದಲ್ಲಿ ಬಿದ್ದರೆ ಅಥವಾ ಎತ್ತರದಿಂದ ಬಿದ್ದರೂ ಯಾವುದೇ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ. ಬೆಂಕಿಯಲ್ಲೂ ಸುಟ್ಟು ಹೋಗದಷ್ಟರ ಮಟ್ಟಿಗೆ ಸಾಮರ್ಥ್ಯ ಇದಕ್ಕಿದೆ. ಹಾಗಾಗಿ ವಿಮಾನ ಅಥವಾ ಹೆಲಿಕಾಪ್ಟರ್ ಅಪಘಾತವಾದ ಬಳಿಕ ಬ್ಲ್ಯಾಕ್ ಬಾಕ್ಸ್‌ಗಾಗಿ ಹುಡುಕಾಟ ನಡೆಸುತ್ತಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k