Tag: ನೇತ್ರಾವತಿ ನದಿ

  • ಗ್ರಾಮಸ್ಥರು ನಿರ್ಮಿಸಿದ್ದ ಸೇತುವೆಯನ್ನು ಧ್ವಂಸಗೊಳಿಸಿದ ವಿಧ್ವಂಸಕರು

    ಗ್ರಾಮಸ್ಥರು ನಿರ್ಮಿಸಿದ್ದ ಸೇತುವೆಯನ್ನು ಧ್ವಂಸಗೊಳಿಸಿದ ವಿಧ್ವಂಸಕರು

    ಮಂಗಳೂರು: ಸರ್ಕಾರದ ಅನುದಾನದ ದಾರಿ ನೋಡದೇ ಜಿಲ್ಲೆಯ ಪಾವೂರು ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿಕೊಂಡಿದ್ದರು. ಇದೀಗ ಅದೇ ಸೇತುವೆಯನ್ನು ಕೆಲ ವಿಧ್ವಂಸಕರು ಧ್ವಂಸಗೊಳಿಸಿ ಅಟ್ಟಹಾಸ ಮೆರೆದಿದ್ದಾರೆ.

    ಮಂಗಳೂರು ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಪಾವೂರು ಗ್ರಾಮಕ್ಕೆ ಒಳಪಡುವ ಉಳಿಯ, ನೇತ್ರಾವತಿ ನದಿಯ ಮಧ್ಯೆ ನೂರು ಎಕರೆಯಷ್ಟು ಇರುವ ಒಂದು ಸಣ್ಣ ಪ್ರದೇಶವಾಗಿದೆ. ಈ ದ್ವೀಪದಲ್ಲಿ ಸುಮಾರು 50 ಮನೆಗಳಿದ್ದು, 200ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ. ಹತ್ತಾರು ವರ್ಷಗಳಿಂದ ಇಲ್ಲೊಂದು ಸೇತುವೆ ನಿರ್ಮಾಣ ಮಾಡಬೇಕೆಂದು ನಡೆಸಿಕೊಂಡು ಬಂದ ಹೋರಾಟಕ್ಕೆ ಬೆಲೆಯೇ ಸಿಕ್ಕಿರಿಲಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ತಾವೇ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದರು.

    ನೇತ್ರಾವತಿ ನದಿ ದಡದಲ್ಲಿ ಅಕ್ರಮ ಮರಳುಗಾರಿಕೆಯ ಬಗ್ಗೆ ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ಪೊಲೀಸರು ಶುಕ್ರವಾರ ದಾಳಿ ನಡೆಸಿ 5 ಬೋಟ್ ಗಳನ್ನು ವಶಪಡಿಸಿಕೊಂಡಿದ್ದರು. ಇದನ್ನೂ ಓದಿ: ಸರ್ಕಾರದ ಭರವಸೆಯಿಂದ ಕಂಗೆಟ್ಟು ತಾವೇ ಹಣ ಸಂಗ್ರಹಿಸಿ ಸೇತುವೆ ನಿರ್ಮಿಸಿದ್ರು – ಸಚಿವರ ಕ್ಷೇತ್ರದ ಕಥೆ

    ಗ್ರಾಮಸ್ಥರು ದೂರು ನೀಡಿದ್ದರಿಂದ ಪೊಲೀಸ್ ದಾಳಿ ನಡೆದಿದೆ ಎಂದು ತಿಳಿದ ಅಕ್ರಮ ಮರಳು ದಂಧೆಕೋರರು ಇತ್ತೀಚೆಗೆ ನಿರ್ಮಿಸಿದ್ದ ಸೇತುವೆಯನ್ನು ಧ್ವಂಸಗೊಳಿಸಿದ್ದಾರೆ. ಸೇತುವೆ ಬಳಿ ನಿಲ್ಲಿಸಿದ್ದ ಆಟೋ,ಬೈಕ್ ಗಳನ್ನು ಧ್ವಂಸಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸಚಿವ ಯು.ಟಿ.ಖಾದರ್ ಕ್ಷೇತ್ರದ ಕುಗ್ರಾಮದ ಕಣ್ಣೀರಿನ ಕಥೆ

    ಸಚಿವ ಯು.ಟಿ.ಖಾದರ್ ಕ್ಷೇತ್ರದ ಕುಗ್ರಾಮದ ಕಣ್ಣೀರಿನ ಕಥೆ

    ಮಂಗಳೂರು: ಅದು ಮಂಗಳೂರಿನ ಹೊರವಲಯದ ನೇತ್ರಾವತಿ ನದಿ ಮಧ್ಯದಲ್ಲಿರುವ ದ್ವೀಪ ಪ್ರದೇಶ. ಸುತ್ತ ನೀರಿನಿಂದ ಆವೃತವಾಗಿರುವ ಈ ದ್ವೀಪದಲ್ಲಿ ನೂರಾರು ಮಂದಿ ವಾಸವಿದ್ದಾರೆ. ರಾಜ್ಯದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಕ್ಷೇತ್ರದಲ್ಲಿರುವ ಈ ಕುಗ್ರಾಮ ಸ್ಮಾರ್ಟ್ ಸಿಟಿ ಮಂಗಳೂರಿನ ಆವರಣದಲ್ಲೇ ಇದ್ದರೂ, ಜನರ ಸಂಪರ್ಕಕ್ಕೆ ಸೇತುವೆಯೇ ಇಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿ ಸೋತ ಅಲ್ಲಿನ ಜನರು ತಾವೇ ತಾತ್ಕಾಲಿಕ ಸೇತುವೆಯನ್ನು ರೆಡಿ ಮಾಡಿದ್ದಾರೆ. ಹಗ್ಗದ ಮೇಲಿನ ನಡಿಗೆಯಂತಿರೋ ಈ ಸೇತುವೆ ಸಂಚಾರ ಮಾತ್ರ ತುಂಬಾನೇ ಡೇಂಜರಸ್.

    ಸಚಿವ ಯುಟಿ ಖಾದರ್ ಸಿಂಪ್ಲಿಸಿಟಿಗೆ ಮತ್ತೊಂದು ಹೆಸರು. ಮಾನವೀಯತೆ ತೋರೋದರಲ್ಲಿ ಎತ್ತಿದ ಕೈ ಎಂಬ ಮಾತುಗಳನ್ನ ಸಾರ್ವಜನಿಕ ವಲಯದಲ್ಲಿ ಕೇಳಿರುತ್ತೇವೆ. ಆದರೆ ಅವರದ್ದೇ ಕ್ಷೇತ್ರದ ಊರೊಂದರ ಕಣ್ಣೀರ ಕಹಾನಿ ಇಲ್ಲಿದೆ. ಸ್ಮಾರ್ಟ್ ಸಿಟಿಯ ಗರಿ ಸಿಕ್ಕಿಸಿಕೊಂಡಿರುವ ಮಂಗಳೂರು ನಗರದ ಕೂಗಳತೆ ದೂರದಲ್ಲೇ ಇರೋ ಪಾವೂರಿಗೆ ಇನ್ನೂ ಮೂಲಸೌಲಭ್ಯಗಳೇ ಮರೀಚಿಕೆ. ದಿಪದ ಬುಡದಲ್ಲಿ ಕತ್ತಲೇ ಎಂಬಂತೆ ಪಾವೂರು ಇನ್ನು ಕುಗ್ರಾಮವಾಗಿ ಉಳಿದುಕೊಂಡಿದೆ. ನೇತ್ರಾವತಿ ನದಿ ಮಧ್ಯದಲ್ಲಿರುವ ಪಾವೂರು ಎಂಬ ಈ ದ್ವೀಪದಲ್ಲಿ ಸುಮಾರು 50 ಮನೆಗಳಿದ್ದು, 200ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ. ಹತ್ತಾರು ವರ್ಷಗಳಿಂದ ಇಲ್ಲೊಂದು ಸೇತುವೆ ನಿರ್ಮಿಸಬೇಕೆಂದು ನಡೆಸಿರುವ ಹೋರಾಟಕ್ಕೆ ಬೆಲೆ ಸಿಕ್ಕಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ತಾತ್ಕಾಲಿಕ ಸೇತುವೆ ನಿರ್ಮಿಸಿದ್ದಾರೆ.

    ಕಬ್ಬಿಣದ ಪೈಪ್ ಮತ್ತು ಹಲಗೆ ಬಳಸಿ ಗ್ರಾಮಸ್ಥರೇ ನಿರ್ಮಿಸಿರುವ ಈ ಸೇತುವೆಯ ಸಂಚಾರ ಹಗ್ಗದ ಮೇಲಿನ ನಡಿಗೆಯಂತಿದ್ದು, ವಿಸ್ತಾರವಾಗಿರುವ ನದಿಯನ್ನು ದಾಟುವುದೇ ಸಾಹಸವಾಗಿದೆ. ಶಾಲಾ ಮಕ್ಕಳು, ಮಹಿಳೆಯರು ಇದೇ ಹಲಗೆಯಲ್ಲಿ ಸಂಚರಿಸುತ್ತಿದ್ದು, ದುರಂತಕ್ಕೆ ಆಹ್ವಾನ ನೀಡುವಂತಿದೆ. ಕ್ಷೇತ್ರದ ಶಾಸಕ ಯು.ಟಿ.ಖಾದರ್ ಸತತ ಮೂರು ಬಾರಿ ಸಚಿವರಾದರೂ, ಸೇತುವೆಯ ಬೇಡಿಕೆ ಇನ್ನೂ ಅವರ ಅವರ ಕಿವಿ ಮುಟ್ಟಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ದೋಣಿಯಲ್ಲಿ ಸಂಚರಿಸುತ್ತಿದ್ದ ಜನರು ಸದ್ಯಕ್ಕೆ ಹಲಗೆಯ ಸೇತುವೆಯಲ್ಲಿ ಸಾಗುತ್ತಿದ್ದಾರೆ. ಆದರೆ, ಯಾವಾಗ ಬೀಳುತ್ತೋ ಅನ್ನುವ ಭಯದಲ್ಲೇ ಜನ ಓಡಾಡುತ್ತಿದ್ದಾರೆ. ಈ ಸೇತುವೆ ಬೇಸಿಗೆಗೆ ಸೀಮಿತವಾಗಿದ್ದು, ಜೂನ್ ವೇಳೆಗೆ ನದಿ ತುಂಬಿದಾಗ ಜನರು ಮತ್ತೆ ದೋಣಿಯನ್ನೇ ಅವಲಂಬಿಸಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೇತ್ರಾವತಿ ನದಿಗೆ ಹಾರಿ ಆಟೋ ಚಾಲಕ ಆತ್ಮಹತ್ಯೆ- ವಿಡಿಯೋ ವೈರಲ್

    ನೇತ್ರಾವತಿ ನದಿಗೆ ಹಾರಿ ಆಟೋ ಚಾಲಕ ಆತ್ಮಹತ್ಯೆ- ವಿಡಿಯೋ ವೈರಲ್

    ಮಂಗಳೂರು: ಆಟೋ ಚಾಲಕರೊಬ್ಬರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.

    ಕಾಟಿಪಳ್ಳದ 35 ವರ್ಷದ ಮಹಮ್ಮದ್ ಬಶೀರ್ ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ. ನದಿಗೆ ಬಿದ್ದ ಕೊನೆ ಕ್ಷಣದಲ್ಲಿ ನೀರಿನಲ್ಲಿ ವಿಲವಿಲ ಒದ್ದಾಡಿದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಘಟನೆ ಗುರುವಾರ ಸಂಜೆ ನಡೆದಿದ್ದು, ಅದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ಮಂಗಳೂರಿನ ಉಳ್ಳಾಲದ ಸೇತುವೆ ಮೇಲೆ ಆಟೋ ನಿಲ್ಲಿಸಿದ ಬಶೀರ್, ಅಲ್ಲಿಂದಲೇ ನದಿಗೆ ಹಾರಿದ್ದಾರೆ. ಕೂಡಲೇ ಸೇತುವೆ ಮೇಲೆ ಸೇರಿದ ಸಾರ್ವಜನಿಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

    ಬಶೀರ್ ನದಿಯಲ್ಲಿ ಮುಳುಗೇಳುತ್ತಾ ಸಾವಿನ ಕೊನೆಕ್ಷಣದಲ್ಲಿ ಒದ್ದಾಡುತ್ತಿರುವ ಕರುಣಾಜನಕ ದೃಶ್ಯ ಈಗ ವೈರಲ್ ಆಗಿದೆ.

    https://www.youtube.com/watch?v=KxxEvUThRbE

  • ಈಜಲು ತೆರಳಿದ್ದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನೀರುಪಾಲು

    ಈಜಲು ತೆರಳಿದ್ದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನೀರುಪಾಲು

    ಮಂಗಳೂರು: ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಕೊಣಾಜೆ ಠಾಣೆ ವ್ಯಾಪ್ತಿಯ ಇನ್ನೋಳಿ ಸಮೀಪದ ನೇತ್ರಾವತಿ ನಡುಗಡ್ಡೆಯ ಬಳಿ ನಡೆದಿದೆ.

    ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಬೆಳ್ತಂಗಡಿ ನಿವಾಸಿ ವಿಶಾಲ್ (21), ಬಿಹಾರ ಮೂಲದ ಶುಭಂ(22), ಚಿತ್ರದುರ್ಗ ಮೂಲದ ಶ್ರೀರಾಮ್(22) ಮೃತ ದುರ್ದೈವಿಗಳು.

    ಎಂಟು ಮಂದಿಯ ವಿದ್ಯಾರ್ಥಿಗಳ ಗುಂಪೊಂದು ನೇತ್ರಾವತಿ ನದಿಯಲ್ಲಿ ಸೋಮವಾರ ಈಜಾಟಕ್ಕೆ ತೆರಳಿದ್ದರು. ಈ ವೇಳೆ ಸ್ಥಳೀಯರಿಂದ ಐವರು ವಿದ್ಯಾರ್ಥಿಗಳ ರಕ್ಷಣೆ ಮಾಡಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ. ಓರ್ವ ವಿದ್ಯಾರ್ಥಿಯ ಶವ ಪತ್ತಯಾಗಿದ್ದು ಇನ್ನಿಬ್ಬರ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.