Tag: ನೇತ್ರಾವತಿ

  • 6 ಗಂಟೆ ಕಾರ್ಯಾಚರಣೆ – 22 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳದ ಗುಂಡಿ ತೋಡಿದರೂ ಸಿಗದ ಮೂಳೆ

    6 ಗಂಟೆ ಕಾರ್ಯಾಚರಣೆ – 22 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳದ ಗುಂಡಿ ತೋಡಿದರೂ ಸಿಗದ ಮೂಳೆ

    – ಧರ್ಮಸ್ಥಳದ 13ನೇ ಪಾಯಿಂಟ್‌ನಲ್ಲಿ ಅಸ್ಥಿಗೆ ಶೋಧ

    ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯಕ್ಕೆ (Dharmasthala Mass Burial Case) ಸಂಬಂಧಿಸಿದಂತೆ ಪಾಯಿಂಟ್ 13 ಕುತೂಹಲಕ್ಕೆ ತೆರೆಬಿದ್ದಿದೆ. 6 ತಾಸು ಹುಡುಕಿದರೂ ಏನೂ ಸಿಕ್ಕಿಲ್ಲ.

    ಸೋಮವಾರ ನೇತ್ರಾವತಿ ತಟದ ಪಾಯಿಂಟ್ 13ರಲ್ಲಿ ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್ (GPR) ಮೂಲಕ ಡೆಮೋ ನಡೆಸಿ ತೆರಳಿದ್ದ ವಿಶೇಷ ತನಿಖಾ ತಂಡ(SIT) ಇಂದು ನೇರವಾಗಿ ಅಖಾಡಕ್ಕೆ ಇಳಿಯಿತು. ಕಗ್ಗಂಟಾಗಿದ್ದ ಪಾಯಿಂಟ್ ನಂಬರ್ 13ರಲ್ಲಿ ಅನಾಮಿಕನ ಸಮ್ಮುಖದಲ್ಲಿ ಅಸ್ಥಿ ಶೋಧ ನಡೆಸಿದರು.

    ಪಾಯಿಂಟ್ 13ರಲ್ಲಿ ಮೂರು ಪಟ್ಟು ಜಾಗವನ್ನು ಗುರುತು ಮಾಡಲಾಗಿತ್ತು. ಕೆಎಸ್‌ಆರ್‌ಪಿ (KSRP) ಸಹಿತ ಶಸ್ತ್ರಸಜ್ಜಿತ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಸ್ಥಳಕ್ಕೆ ಖುದ್ದು ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಆಗಮಿಸಿ ಮಾಹಿತಿ ಪಡೆದರು. ಇದನ್ನೂ ಓದಿ: ಆ.17ಕ್ಕೆ ಬಿಜೆಪಿಯಿಂದ ಧರ್ಮಸ್ಥಳ ಚಲೋ

     

    ಮಧ್ಯಾಹ್ನದ ಹೊತ್ತಿಗೆ ಡ್ರೋನ್ ಮೌಂಟೆಡ್ ಜಿಪಿಆರ್‌ನಿಂದ ಸಂಗ್ರಹಿಸಿದ ಫುಟೇಜ್ ಆಧರಿಸಿ 2 ಹಿಟಾಚಿಗಳ ಮೂಲಕ ಕಾರ್ಯಾಚರಣೆ ನಡೆಸಲಾಯಿತು. ಈ ಹಿಂದೆ‌  ನೆರೆಯಿಂದ ಮಣ್ಣು ಸ್ವಲ್ಪ ಕೊಚ್ಚಿ ಹೋಗಿತ್ತು. ಜೊತೆಗೆ ರಸ್ತೆ ನಿರ್ಮಾಣ ಸಂಬಂಧ ಪಂಚಾಯತ್‌ 100  ಲೋಡ್ ಮಣ್ಣನ್ನು  ಹಾಕಿತ್ತು. ಹೀಗಾಗಿ ಈ ಮಣ್ಣುಗಳನ್ನು ತೆಗೆದು ಕಾರ್ಯಾಚರಣೆ ನಡೆಸಲಾಗುತ್ತಿದೆ.

    ಅನಾಮಿಕ ದೂರುದಾರ 20 ಅಡಿ ಆಳದವರೆಗೆ ಗುಂಡಿ ತೋಡಲು  ಕೋರಿದ್ದಾನೆ. ಮಳೆಯಿಂದಾಗಿ ಮಣ್ಣು ತೆಗೆಯುವಾಗ ನೀರು ಬರುತ್ತಿದೆ. ಹೀಗಾಗಿ ಪೈಪ್‌ಗಳ ಮೂಲಕ  ಹೊರ ಹಾಕಲಾಯಿತು. ಹಿಟಾಚಿ ಮೂಲಕ 22 ಅಡಿ ಉದ್ದ, 8 ಅಡಿ ಅಗಲ, 18 ಅಡಿ ಆಳಕ್ಕೆ ಗುಂಡಿ ಅಗೆದು, ಒಂದೇ ಕಡೆ ಸುಮಾರು 6 ತಾಸು ಶೋಧ ನಡೆಸಿ ಇಂದಿನ ಕಾರ್ಯಾಚರಣೆ ಅಂತ್ಯಗೊಳಿಸಲಾಯಿತು. ಆದರೆ ಯಾವುದೇ ಅಸ್ಥಿಯ ಕುರುಹು ಸಿಗಲಿಲ್ಲ.

    ಬುಧವಾರವೂ ಮಣ್ಣು ತೆಗೆಯುವ ಕಾರ್ಯಾಚರಣೆ ಮುಂದುವರಿಯುವ ಸಾಧ್ಯತೆಯಿದೆ. ಇಂದಿನ ಕಾರ್ಯಾಚರಣೆ ಸಮಯದಲ್ಲಿ ಎರಡು ವಿದ್ಯುತ್‌ ಕಂಬಗಳಿದ್ದವು. ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಕಾರ್ಯಾಚರಣೆ ನಡೆಸಲಾಗಿತ್ತು.

    ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೂಡ ಭೇಟಿ ನೀಡಿ ಕಳೇಬರ ಶೋಧ ಕಾರ್ಯಕ್ಕೆ ಸಾಕ್ಷಿಯಾಯ್ತು. ಬೆಳ್ತಂಗಡಿ ಎಸ್‌ಐಟಿ ಕಚೇರಿಯಲ್ಲಿ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಸಭೆ ನಡೆಸಿ ತನಿಖೆಯ ಮಾಹಿತಿಯನ್ನು ಪಡೆದುಕೊಂಡರು. ತನಿಖಾ ತಂಡದ ಎಸ್ಪಿ ಸೈಮನ್ ವಿವರಣೆ ನೀಡಿದರು.

  • ಧರ್ಮಸ್ಥಳದಲ್ಲಿ ಸಮಾಧಿ ಶೋಧ ಮ್ಯಾರಥಾನ್ – ಐದು ಅಡಿ ಅಗೆದರೂ ಸಿಕ್ಕಿದ್ದು ಬರೀ ಮಣ್ಣು

    ಧರ್ಮಸ್ಥಳದಲ್ಲಿ ಸಮಾಧಿ ಶೋಧ ಮ್ಯಾರಥಾನ್ – ಐದು ಅಡಿ ಅಗೆದರೂ ಸಿಕ್ಕಿದ್ದು ಬರೀ ಮಣ್ಣು

    – ಇಂದು 16,17,18ನೇ ಪಾಯಿಂಟ್‌ನಲ್ಲಿ ಉತ್ಖನನ ಸಾಧ್ಯತೆ

    ಮಂಗಳೂರು: ಧರ್ಮಸ್ಥಳದ ಅರಣ್ಯದಲ್ಲಿ ಅನಾಮಿಕ ವ್ಯಕ್ತಿಯ ಬುರುಡೆ ರಹಸ್ಯ (Dharmasthala Mass Burials) ಬಿಚ್ಚಿಡುವ ಕಾರ್ಯಾಚರಣೆ ಮುಂದುವರೆದಿದೆ. ಕಳೆದ 15 ದಿನಗಳಿಂದ ವಿಚಾರಣೆ, ಸಮಾಧಿ ಶೋಧ ನಡೆಯುತ್ತಾ ಬಂದಿದ್ದು, ಶುಕ್ರವಾರ ಧಿಡೀರ್ 15ನೇ ಪಾಯಿಂಟ್‌ನಲ್ಲಿ ಶೋಧಕಾರ್ಯ ನಡೆಯಿತು. 5 ಗಂಟೆಗಳ ಕಾಲಹರಣ ಬಿಟ್ಟರೆ ಸಮಾಧಿ ಒಳಗೆ ಸಿಕ್ಕಿದ್ದು ಬರೀ ಮಣ್ಣು.

    ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದೇನೆ ಎಂಬ ಅನಾಮಿಕನ ವಿಚಾರಣೆ ಮತ್ತು ಸ್ಥಳಶೋಧ ಕಾರ್ಯ ಮುಂದುವರೆಯಿತು. ನೇತ್ರಾವತಿ ನದಿ ತೀರದ ಬಂಗ್ಲೆಗುಡ್ಡೆಯ ಕಾರ್ಯಾಚರಣೆ ಮುಗಿದಿದ್ದು ಶುಕ್ರವಾರ ಅಧಿಕಾರಿಗಳ ತಂಡ ಬೊಳಿಯಾರ್‌ಗೆ ಬಂದು ಇಳಿಯಿತು. ಮಧ್ಯಾಹ್ನ ಒಂದು ಗಂಟೆಗೆ ಮುಸುಕುಧಾರಿ ಮತ್ತು 40 ಅಧಿಕಾರಿಗಳು ಹಾಗೂ ಪೊಲೀಸರ ತಂಡ ಕಾಡು ಪ್ರವೇಶಿಸಿತು. ನಂತರ ಶುರುವಾಗಿದ್ದೇ ತಲೆ ಬುರುಡೆಗಳ ತಲಾಶ್ ಕಾರ್ಯ. ಇದನ್ನೂ ಓದಿ: ಪುಟಿನ್‌ ಭೇಟಿಗೆ ಟ್ರಂಪ್‌ ಮುಹೂರ್ತ ಫಿಕ್ಸ್‌ – ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಗೆ ಮಾತುಕತೆ

    ಕಾಡಿನಲ್ಲಿ ಸುಮಾರು ಐದು ಗಂಟೆಗಳ ಕಾರ್ಯಾಚರಣೆಯ ನಂತರ ಎಸ್‌ಐಟಿ (SIT) ಅಧಿಕಾರಿಗಳಿಗೆ ಸಿಕ್ಕಿದ್ದು ಬರೀ ಮಣ್ಣು ಮಾತ್ರ. ಆರು ಅಡಿಗಿಂತ ಆಳಕ್ಕೆ ಹೋದ ತಂಡ ಇಲ್ಲೇನು ಇಲ್ಲ ಎಂದು ನಿರ್ಧರಿಸಿಬಿಟ್ಟಿತು. ಮಾಸ್ಕ್ ಮ್ಯಾನ್ ಮತ್ತೆ ಕನ್ಫ್ಯೂಷನ್ ಆಗಿ ಬೇರೆಬೇರೆ ಜಾಗ ತೋರಿಸಿದ. ಅಲ್ಲಿ ಇಲ್ಲಿ ಕಾಡಿನಲ್ಲಿ ಸುತ್ತಾಡಿ ಪರಿಶೀಲಿಸಿ ತಂಡ ವಾಪಸ್ ಬಂದಿದೆ. ಇದನ್ನೂ ಓದಿ: ಬುದ್ಧಿಮಾಂದ್ಯ ಯುವತಿ ಮೇಲೆ ಗ್ಯಾಂಗ್ ರೇಪ್ – ವೀಡಿಯೋ ಮಾಡಿ ಯುವತಿಯ ಸಹೋದರನಿಗೆ ಕಳುಹಿಸಿದ ಕೀಚಕರು

    ಇಂದು 16,17,18ನೇ ಪಾಯಿಂಟ್‌ನಲ್ಲಿ ಮಹಜರು ಮಾಡಿ ಶವ ಶೋಧಿಸುವ ಸಾಧ್ಯತೆಯಿದೆ. ಈ ಮ್ಯಾರಥಾನ್ 30ನೇ ಪಾಯಿಂಟ್‌ವರಿಗೂ ಮುಂದುವರೆಯಬಹುದು ಎಂದು ಹೇಳಲಾಗುತ್ತಿದೆ. ಆತ ಹೇಳಿದ ಸ್ಥಳಗಳಲ್ಲಿ ಪರಿಶೀಲನೆ ಮಾಡುವ ಅನಿವಾರ್ಯತೆ ಮತ್ತು ಜವಾಬ್ದಾರಿ ಎಸ್‌ಐಟಿಯದ್ದಾಗಿದೆ. ಇದನ್ನೂ ಓದಿ: ಭಾನುವಾರ ಯೆಲ್ಲೋ ಮೆಟ್ರೋ ಮಾರ್ಗ ಉದ್ಘಾಟನೆ – ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಸಂಚಾರ ಬದಲಾವಣೆ

  • ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ | ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ತಳುಕು

    ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ | ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ತಳುಕು

    – ಹೆಣ ಹೂಳಲು ಪೊಲೀಸ್ ಅಧಿಕಾರಿ ಕೂಡ ಸಾಥ್ ನೀಡಿದ್ದಾಗಿ ತಿಳಿಸಿದ ದೂರುದಾರ
    – ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯದಲ್ಲಿ ಇಂದು ಉತ್ಖನನ ಕಾರ್ಯ

    ಮಂಗಳೂರು: ಧರ್ಮಸ್ಥಳ (Dharmasthala) ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ಟ್ವಿಸ್ಟ್ ಸಿಕ್ಕಿದ್ದು, ದೂರುದಾರ ವ್ಯಕ್ತಿ ನನಗೆ ಹೆಣ ಹೂಳಲು ಓರ್ವ ಪೊಲೀಸ್ ಅಧಿಕಾರಿ ಸಾಥ್ ನೀಡಿರುವುದಾಗಿ ತಿಳಿಸಿದ್ದಾನೆ.

    ಎಸ್‌ಐಟಿ (SIT) ವಿಚಾರಣೆ ವೇಳೆ ದೂರುದಾರ ವ್ಯಕ್ತಿ ಓರ್ವ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರನ್ನು ಬಾಯ್ಬಿಟ್ಟಿದ್ದಾನೆ. ನಾನು ಹೆಣ ಹೂಳುವಾಗ ಈ ಅಧಿಕಾರಿ ಕೂಡ ನನಗೆ ಸಾಥ್ ನೀಡಿರುವುದಾಗಿ ತಿಳಿಸಿದ್ದಾನೆ. ದೂರುದಾರನ ಮಾಹಿತಿ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು 1995ರಿಂದ ಧರ್ಮಸ್ಥಳ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದವರ ಲಿಸ್ಟ್ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಮನವಿ ಪತ್ರ ಕಳುಹಿಸಿದ್ದಾರೆ.ಇದನ್ನೂ ಓದಿ: ದಾವಣಗೆರೆ | ಕಡಿಮೆ ಬೆಲೆಗೆ 250 ಗ್ರಾಂ ಚಿನ್ನದ ನಾಣ್ಯ ನೀಡುವುದಾಗಿ 5 ಲಕ್ಷ ವಂಚಿಸಿ ಪರಾರಿ

    ಇನ್ನೂ ಇಂದು ಎರಡನೇ ದಿನದ ಉತ್ಖನನ ಪ್ರಕ್ರಿಯೆ ಆರಂಭವಾಗಿದ್ದು, ಎಸಿ ಸ್ಟೆಲ್ಲಾ ವರ್ಗೀಸ್, ಡಿಐಜಿ ಅನುಚೇತ್, ತನಿಖಾಧಿಕಾರಿ ಜಿತೇಂದ್ರ ದಯಾಮ ಅವರ ಸಮ್ಮುಖದಲ್ಲೇ ಒಟ್ಟು 20 ಕಾರ್ಮಿಕರಿಂದ ಉತ್ಖನನ ಕಾರ್ಯ ನಡೆಯುತ್ತಿದೆ ಇಂದು ಒಂದೇ ಸಮಯದಲ್ಲಿ ಎರಡು ಪಾಯಿಂಟ್‌ನಲ್ಲಿ ಅಗೆಯುತ್ತಿದ್ದು, ಉತ್ಖನನ ಪ್ರಕ್ರಿಯೆ ಬೇಗ ಮುಗಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ 2 ರಿಂದ 8 ಸಂಖ್ಯೆಯವರೆಗೆ ಅರಣ್ಯ ಪ್ರದೇಶದಲ್ಲಿ ಗುರುತಿಸಲಾಗಿದ್ದು, ಈ ಜಾಗದಲ್ಲಿ ಹಿಟಾಟಿ ಹೋಗೋದು ಕಷ್ಟವಾಗಿದೆ. ಒಂದು ವೇಳೆ ಹೋದರೂ ಕೂಡ ಅರಣ್ಯ ಇಲಾಖೆ ಹೋಗದಂತೆ ನಿರ್ಬಂಧ ಹೇರಿದೆ. ಹೀಗಾಗಿ ಇಂದಿನ ಉತ್ಖನನ ಕಾರ್ಯ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

    ಸೋಮವಾರ ದೂರುದಾರ (ಜು.28) 13 ಜಾಗಗಳನ್ನು ಗುರುತಿಸಿದ್ದ. ಅದಾದ ಬಳಿಕ ಮಂಗಳವಾರ ಮೊದಲು ಗುರುತು ಮಾಡಿದ್ದ ಸ್ಥಳದಿಂದಲೇ ಎಸ್‌ಐಟಿ ಅಗೆಯುವ ಕೆಲಸ ಆರಂಭಿಸಿತ್ತು, 12 ಜನ ಕಾರ್ಮಿಕರು, ನಾಲ್ವರು ವೈದ್ಯರು, ಸಹಾಯಕ ಸಿಬ್ಬಂದಿ, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಸಮ್ಮುಖದಲ್ಲೇ ಬೆಳಿಗ್ಗೆ 11 ಗಂಟೆಗೆ ಶುರುವಾದ ಶೋಧ ಕಾರ್ಯ 7 ತಾಸು ನಡೆದಿತ್ತು. ಆದರೆ 15 ಅಡಿ ಅಗಲ, 8 ಅಡಿ ಆಳ ಅಗೆದರೂ ಯಾವುದೇ ಕುರುಹು ಸಿಕ್ಕಿರಲಿಲ್ಲ. ಬಳಿಕ ಎಸ್‌ಐಟಿ ಅಧಿಕಾರಿಗಳು, ಆಳಕ್ಕೆ ಹೋದಷ್ಟು ಅಸ್ಥಿಪಂಜರ ಸಿಗಬಹುದು ಎನ್ನುವ ಕಾರಣಕ್ಕಾಗಿ ಹಿಟಾಚಿಯಿಂದಲೂ ಕಾರ್ಯಾಚರಣೆ ನಡೆಸಿದ್ದರು. ಆದರೂ ಕೂಡ ಯಾವುದೇ ಕಳೇಬರ ಸಿಕ್ಕಿರಲಿಲ್ಲ.

    ಸೋಮವಾರ ಗುರುತಿಸಿರೋ ಎಲ್ಲಾ 13 ಜಾಗಗಳಿಗೂ ಎಸ್‌ಐಟಿ ವಿಶೇಷ ಭದ್ರತೆ ಕಲ್ಪಿಸಿದೆ. ಗುರುತಿಸಿದ ಪ್ರತಿ ಸ್ಥಳಕ್ಕೂ ತಲಾ 2 ಮಂದಿ ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನ ನೇಮಕ ಮಾಡಿದ್ದು, ದಟ್ಟ ಅರಣ್ಯದಲ್ಲಿ ರಾತ್ರಿ ಹಗಲು ಸರ್ಪಗಾವಲು ಹಾಕಿದೆ. ಗುರುತಿಸಿದ ಜಾಗಗಳಿಗೆ ಟೇಪ್ ಹಾಕಿ, ಎಲ್ಲದಕ್ಕೂ ನಂಬರ್ ನೀಡಲಾಗಿದೆ.ಇದನ್ನೂ ಓದಿ: ಬೆಂಗಳೂರು | ಅಲ್-ಖೈದಾ ಜೊತೆ ನಂಟು – ಜಾರ್ಖಂಡ್ ಮೂಲದ ಮಹಿಳೆ ಬಂಧನ

  • ಧರ್ಮಸ್ಥಳ ಫೈಲ್ಸ್‌ | ನಿಗೂಢ ಸತ್ಯದ ಬೆನ್ನತ್ತಿದ SIT – ನೇತ್ರಾವತಿ ಸ್ನಾನಘಟ್ಟ ಬಳಿ ಶವಗಳ ಉತ್ಖನನ ಕಾರ್ಯ ಶುರು

    ಧರ್ಮಸ್ಥಳ ಫೈಲ್ಸ್‌ | ನಿಗೂಢ ಸತ್ಯದ ಬೆನ್ನತ್ತಿದ SIT – ನೇತ್ರಾವತಿ ಸ್ನಾನಘಟ್ಟ ಬಳಿ ಶವಗಳ ಉತ್ಖನನ ಕಾರ್ಯ ಶುರು

    ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ (Dharmasthala Burials Case) ತನಿಖೆ ನಿರ್ಣಾಯಕ ಹಂತ ತಲುಪಿದೆ. ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ದೂರುದಾರ ಇದೀಗ 13 ಸ್ಥಳಗಳನ್ನ ಗುರುತಿಸಿದ್ದು, ಇಂದಿನಿಂದ ಶವಗಳನ್ನು ಹೊರತೆಯುವ ಕಾರ್ಯ ಶುರು ಮಾಡಲಾಗುತ್ತಿದೆ.

    ನಿನ್ನೆ (ಸೋಮವಾರ) ಮೊದಲು ಗುರುತು ಮಾಡಿದ್ದ ಸ್ಥಳದಿಂದಲೇ ಸಮಾಧಿ ಅಗೆಯುವ ಕೆಲಸಕ್ಕೆ ಎಸ್‌ಐಟಿ (SIT) ಮುಂದಾಗಿದೆ. ಅದಕ್ಕಾಗಿ 12 ಕಾರ್ಮಿಕರನ್ನು ನಿಯೋಜನೆ ಮಾಡಿಕೊಂಡಿದೆ ವಿಶೇಷ ತನಿಖಾ ತಂಡ. ಗ್ರಾಮ ಪಂಚಾಯಿತಿಯಿಂದ 12 ಕಾರ್ಮಿಕರನ್ನ ನಿಯೋಜನೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಧರ್ಮಸ್ಥಳ ಗ್ರಾಪಂ ನಿಂದ ಉತ್ಖನನಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಸ್ಟೆಲ್ಲಾ ವರ್ಗೀಸ್, ಕಂದಾಯ ಇಲಾಖೆ ಇತರ ಸಿಬ್ಬಂದಿಗಳೂ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ. ಇಂದಿನಿಂದ ಸಮಾಧಿ ಅಗೆಯುವ ಕಾರ್ಯ ಶುರುವಾಗಲಿದೆ.

    ನೇತ್ರಾವತಿ ಸ್ನಾನಘಟ್ಟದ ಬಳಿ ಈಗಾಗಲೇ ಸಿಬ್ಬಂದಿಗಳು ‌ಬಂದಿದ್ದು, 12 ಕಾರ್ಮಿಕರ ತಂಡ ಆರೆ, ಪಿಕಾಸಿ, ಗುದ್ದಲಿ ಜೊತೆಗೆ ಸಮಾಧಿ ಅಗೆಯಲು ಬೇಕಾದ ಎಲ್ಲ ಸಾಮಗ್ರಿಗಳನ್ನು ಸಜ್ಜುಗೊಳಿಸಲಾಗಿದೆ. ಅಲ್ಲದೇ ನಾಲ್ವರು ವೈದ್ಯರು, ಸಹಾಯಕ ಸಿಬ್ಬಂದಿ, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. ಕೆಲವೇ ಕ್ಷಣಗಳಲ್ಲಿ ಇವರೆಲ್ಲರ ಸಮಕ್ಷಮದಲ್ಲಿ ಸಮಾಧಿ ಅಗೆಯುವ ಕೆಲಸ ಶುರುವಾಗಲಿದೆ.

    ಸೋಮವಾರ ಧರ್ಮಸ್ಥಳ ಗ್ರಾಮದ ಬೇರೆ ಬೇರೆ ಕಡೆಗಳಲ್ಲಿ ಶವ ಹೂತಿಟ್ಟ 13 ಜಾಗಗಳನ್ನ ಗುರುತು ಮಾಡಲಾಗಿತ್ತು. ಎಸ್‌ಐಟಿ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಆತನನ್ನು ಧರ್ಮಸ್ಥಳದ ನೇತ್ರಾವತಿ ಸ್ಥಾನಘಟ್ಟದ ಬಳಿ ಕರೆ ತಂದು, ಸ್ನಾನಘಟ್ಟದ ಎಡ ಬದಿಯಲ್ಲಿ ಎರಡು ಗಂಟೆಗಳ ಕಾಲ ಒಂದು ಕಿಲೋಮೀಟರ್ ಸಾಗಿ ಒಟ್ಟು 8 ಸ್ಥಳಗಳನ್ನ ಗುರುತಿಸಲಾಗಿತ್ತು. ಬಳಿಕ ನೇತ್ರಾವತಿ ಸ್ನಾನಘಟ್ಟ ಹಾಗೂ ನೇತ್ರಾವತಿ ಸೇತುವೆಯ ಮಧ್ಯಭಾಗದ ಅರಣ್ಯ ಪ್ರದೇಶದಲ್ಲಿ ನಾಲ್ಕು ಜಾಗಗಳನ್ನ ಗುರುತಿಸಲಾಗಿದೆ. ಬಳಿಕ ನೇತ್ರಾವತಿ ಸ್ನಾನಘಟ್ಟದ ಬಲ ಬದಿಯಲ್ಲಿದ್ದ ಅಜಿಕುರಿ ರಸ್ತೆ ಬದಿಯ ಜಾಗದಲ್ಲೂ ಶವ ಹೂತಿಟ್ಟಿರೋದಾಗಿ ಅನಾಮಿಕ ವ್ಯಕ್ತಿ ಗುರುತಿಸಿದ್ದಾರೆ. ಸೋಮವಾರ ಒಟ್ಟು 15 ಸ್ಥಳಗಳನ್ನು ಗುರುತಿಸುವ ತಯಾರಿ ಎಸ್‌ಐಟಿ ನಡೆಸಿದ್ದರೂ ಕತ್ತಲಾದ ಹಿನ್ನೆಲೆಯಲ್ಲಿ 13 ಸ್ಥಳಗಳನ್ನ ಮಾತ್ರ ಗುರುತಿಸಲಾಗಿತ್ತು.

    ಸೋಮವಾರ ಗುರುತಿಸಿರೋ ಎಲ್ಲಾ 13 ಜಾಗಗಳಿಗೂ ಎಸ್‌ಐಟಿ ವಿಶೇಷ ಭದ್ರತೆ ಕಲ್ಪಿಸಿದೆ. ಮಹಜರಿನ ಮೊದಲ ದಿನ 13 ಸ್ಥಳಗಳನ್ನು ಗುರುತಿಸಿದ ಸ್ಥಳಗಳ ದಾಖಲೀಕರಣ ಮಾಡಿದ ಎಸ್‌ಐಟಿ ಟೀಮ್ ಗುರುತಿಸಿದ ಎಲ್ಲಾ ಸ್ಥಳಗಳಲ್ಲಿ ಬಿಗಿ ಭದ್ರತೆ ಮಾಡಿದೆ. ಗುರುತಿಸಿದ ಪ್ರತಿ ಸ್ಥಳಕ್ಕೂ ತಲಾ 2 ಮಂದಿ ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನ ನೇಮಕ ಮಾಡಿದ್ದು, ದಟ್ಟ ಅರಣ್ಯದಲ್ಲಿ ರಾತ್ರಿ ಹಗಲು ಸರ್ಪಗಾವಲು ಹಾಕಿದೆ. ಗುರುತಿಸಿದ ಜಾಗಗಳಿಗೆ ಟೇಪ್ ಹಾಕಿ, ಎಲ್ಲದಕ್ಕೂ ನಂಬರ್ ನೀಡಲಾಗಿದೆ. ಇಂದು ಮತ್ತೆ ಉಳಿದಿರೋ ಜಾಗಗಳ ಗುರುತಿಸುವ ಕೆಲಸ ನಡೆಯಲಿದ್ದು, ಬಳಿಕ ಎಲ್ಲವನ್ನ ಅಗೆಯುವ ತೀರ್ಮಾನವನ್ನು ಎಸ್‌ಐಟಿ ಮಾಡಿದೆ.

  • ಧರ್ಮಸ್ಥಳ ಫೈಲ್ಸ್; ಪ್ರಮುಖ ಘಟ್ಟ ತಲುಪಿದ ತನಿಖೆ – ಇಂದು ಮತ್ತಷ್ಟು ಜಾಗಗಳ ಗುರುತು

    ಧರ್ಮಸ್ಥಳ ಫೈಲ್ಸ್; ಪ್ರಮುಖ ಘಟ್ಟ ತಲುಪಿದ ತನಿಖೆ – ಇಂದು ಮತ್ತಷ್ಟು ಜಾಗಗಳ ಗುರುತು

    ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದ (Dharmasthala Mass Burials) ತನಿಖೆ ಪ್ರಮುಖ ಘಟ್ಟ ತಲುಪಿದೆ. ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ದೂರುದಾರ ಇದೀಗ 13 ಸ್ಥಳಗಳನ್ನ ಗುರುತಿಸಿದ್ದಾರೆ. ಇನ್ನುಳಿದ ಜಾಗಗಳನ್ನೂ ಇಂದು ಗುರುತಿಸಲಿದ್ದು, ಬಳಿಕ ಗುರುತಿಸಿರೋ ಜಾಗಗಳನ್ನು ಅಗೆಯಲು ಎಸ್‌ಐಟಿ (SIT) ತೀರ್ಮಾನಿಸಿದೆ.

    ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನ ಹೂತಿಟ್ಟಿದ್ದೇನೆ ಎಂದು ಅನಾಮಿಕ ವ್ಯಕ್ತಿ ದೂರು ನೀಡಿದ್ದ. ಆ ಬಳಿಕ ತನಿಖೆಗೆ ರಚನೆಯಾಗಿದ್ದ ಎಸ್‌ಐಟಿ, ದೂರುದಾರ ವ್ಯಕ್ತಿಯನ್ನ ಎರಡು ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಎಲ್ಲೆಲ್ಲಿ ಶವಗಳನ್ನ ಹೂತಿಟ್ಟಿದ್ದೇನೆ ಎಂದು ಆತ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮದ ಬೇರೆ ಬೇರೆ ಕಡೆಗಳಲ್ಲಿ ಶವ ಹೂತಿಟ್ಟ ಜಾಗಗಳನ್ನ ಗುರುತು ಮಾಡಲಾಗಿದೆ. ಇದನ್ನೂ ಓದಿ: ‘ನಾಗ ದೇವರ’ ಮಹಿಮೆ ಸಾರುವ ಕನ್ನಡದ ಸಿನಿಮಾಗಳು

    ಎಸ್‌ಐಟಿ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಆತನನ್ನು ಧರ್ಮಸ್ಥಳದ ನೇತ್ರಾವತಿ ಸ್ಥಾನಘಟ್ಟದ ಬಳಿ ಕರೆ ತಂದು, ಸ್ನಾನಘಟ್ಟದ ಎಡ ಬದಿಯಲ್ಲಿ ಎರಡು ಗಂಟೆಗಳ ಕಾಲ ಒಂದು ಕಿಲೋಮೀಟರ್ ಸಾಗಿ ಒಟ್ಟು 8 ಸ್ಥಳಗಳನ್ನ ಗುರುತಿಸಲಾಗಿತ್ತು. ಬಳಿಕ ನೇತ್ರಾವತಿ ಸ್ನಾನಘಟ್ಟ ಹಾಗೂ ನೇತ್ರಾವತಿ ಸೇತುವೆಯ ಮಧ್ಯಭಾಗದ ಅರಣ್ಯ ಪ್ರದೇಶದಲ್ಲಿ ನಾಲ್ಕು ಜಾಗಗಳನ್ನ ಗುರುತಿಸಲಾಗಿದೆ. ಬಳಿಕ ನೇತ್ರಾವತಿ ಸ್ನಾನಘಟ್ಟದ ಬಲ ಬದಿಯಲ್ಲಿದ್ದ ಅಜಿಕುರಿ ರಸ್ತೆ ಬದಿಯ ಜಾಗದಲ್ಲೂ ಶವ ಹೂತಿಟ್ಟಿರೋದಾಗಿ ಅನಾಮಿಕ ವ್ಯಕ್ತಿ ಗುರುತಿಸಿದ್ದಾರೆ. ಸೋಮವಾರ ಒಟ್ಟು 15 ಸ್ಥಳಗಳನ್ನು ಗುರುತಿಸುವ ತಯಾರಿ ಎಸ್‌ಐಟಿ ನಡೆಸಿದ್ದರೂ ಕತ್ತಲಾದ ಹಿನ್ನೆಲೆಯಲ್ಲಿ 13 ಸ್ಥಳಗಳನ್ನ ಮಾತ್ರ ಗುರುತಿಸಲಾಗಿದೆ. ಇಂದು ಮತ್ತಷ್ಟು ಜಾಗಗಳ ಗುರುತಿಸೋ ಕೆಲಸ ಮುಂದುವರಿಯಲಿದೆ. ಇದನ್ನೂ ಓದಿ: ಅಸಾಮಾನ್ಯ ಶಕ್ತಿಯ ʻನಾಗʼತಾಣಗಳ ಬಗ್ಗೆ ನಿಮಗೆ ಗೊತ್ತೇ? ಇಲ್ಲಿ ನಂಬಿಕೆ ಸುಳ್ಳಾಗಿಲ್ಲ ಅಂತಾರೆ ಭಕ್ತರು!

    ಸೋಮವಾರ ಗುರುತಿಸಿರೋ ಎಲ್ಲಾ 13 ಜಾಗಗಳಿಗೂ ಎಸ್‌ಐಟಿ ವಿಶೇಷ ಭದ್ರತೆ ಕಲ್ಪಿಸಿದೆ. ಮಹಜರಿನ ಮೊದಲ ದಿನ 13 ಸ್ಥಳಗಳನ್ನು ಗುರುತಿಸಿದ ಸ್ಥಳಗಳ ದಾಖಲೀಕರಣ ಮಾಡಿದ ಎಸ್‌ಐಟಿ ಟೀಮ್ ಗುರುತಿಸಿದ ಎಲ್ಲಾ ಸ್ಥಳಗಳಲ್ಲಿ ಬಿಗಿ ಭದ್ರತೆ ಮಾಡಿದೆ. ಗುರುತಿಸಿದ ಪ್ರತಿ ಸ್ಥಳಕ್ಕೂ ತಲಾ 2 ಮಂದಿ ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನ ನೇಮಕ ಮಾಡಿದ್ದು, ದಟ್ಟ ಅರಣ್ಯದಲ್ಲಿ ರಾತ್ರಿ ಹಗಲು ಸರ್ಪಗಾವಲು ಹಾಕಿದೆ. ಗುರುತಿಸಿದ ಜಾಗಗಳಿಗೆ ಟೇಪ್ ಹಾಕಿ, ಎಲ್ಲದಕ್ಕೂ ನಂಬರ್ ನೀಡಲಾಗಿದೆ. ಇಂದು ಮತ್ತೆ ಉಳಿದಿರೋ ಜಾಗಗಳ ಗುರುತಿಸುವ ಕೆಲಸ ನಡೆಯಲಿದ್ದು, ಬಳಿಕ ಎಲ್ಲವನ್ನ ಅಗೆಯುವ ತೀರ್ಮಾನವನ್ನು ಎಸ್‌ಐಟಿ ಮಾಡಿದೆ. ಇದನ್ನೂ ಓದಿ: ಜೋಕಾಲಿ ಆಡಿ, ಕೊಬ್ಬರಿ ಕುಬುಸ ಕೊಡೋದೆ ಉತ್ತರ ಕರ್ನಾಟಕದ ನಾಗರ ಪಂಚಮಿ

  • ಧರ್ಮಸ್ಥಳದ ಸ್ನಾನಘಟ್ಟ ಅಪವಿತ್ರಕ್ಕೆ ಹುನ್ನಾರ – ನೇತ್ರಾವತಿಯ ಉಪನದಿಯಲ್ಲಿ 11 ಗೋಣಿ ಗೋಮಾಂಸ ಪತ್ತೆ

    ಧರ್ಮಸ್ಥಳದ ಸ್ನಾನಘಟ್ಟ ಅಪವಿತ್ರಕ್ಕೆ ಹುನ್ನಾರ – ನೇತ್ರಾವತಿಯ ಉಪನದಿಯಲ್ಲಿ 11 ಗೋಣಿ ಗೋಮಾಂಸ ಪತ್ತೆ

    – ಚಾರ್ಮಾಡಿಯ ಮೃತ್ಯುಂಜಯ ನದಿಯಲ್ಲಿ ತ್ಯಾಜ್ಯ

    ಮಂಗಳೂರು: ಧರ್ಮಸ್ಥಳದ (Dharmasthala) ಸ್ನಾನಘಟ್ಟವನ್ನು ಅಪವಿತ್ರಗೊಳಿಸಲು ಕೆಲ ಕಿಡಿಗೇಡಿಗಳು ಪ್ರಯತ್ನ ನಡೆಸಿದ್ದಾರೆ.

    ನೇತ್ರಾವತಿ ನದಿಯನ್ನು (Netravati River) ಸೇರುವ ಚಾರ್ಮಾಡಿಯ (Charmadi) ಮೃತ್ಯುಂಜಯ ನದಿಗೆ (Mrityunjaya River) ಕಿಡಿಗೇಡಿಗಳು ಗೋಮಾಂಸದ (Beef) ತ್ಯಾಜ್ಯವನ್ನು ಸುರಿದಿದ್ದಾರೆ. ನದಿಯಲ್ಲಿ ದನದ ಚರ್ಮ, ಕೊಂಬು, ಇತ್ಯಾದಿ ತ್ಯಾಜ್ಯ ಹೊಂದಿರುವ 11 ಗೋಣಿಗಳು ಪತ್ತೆಯಾಗಿದೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ವಿರುದ್ಧ ಚಿಕ್ಕಮಗಳೂರಿನಲ್ಲಿ ಕೇಸ್‌, ತರೀಕೆರೆಯಲ್ಲಿ ವಿಚಾರಣೆ!

    ನೇತ್ರಾವತಿ ನದಿ ಸೇರುವ ಮೃತ್ಯುಂಜಯ ನದಿ ನೀರಿನಲ್ಲಿಯೇ ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳು ಸ್ನಾನ ಮಾಡುತ್ತಾರೆ. ಇಂತಹ ನೀರಲ್ಲಿ ಈ ಕೃತ್ಯ ಎಸಗಿರುವುದು ಸಾಕಷ್ಟು ಅನುಮಾನ, ಆಕ್ರೋಶಕ್ಕೆ ಕಾರಣವಾಗಿದೆ.

    ಧಾರ್ಮಿಕ ಕ್ಷೇತ್ರವನ್ನು ಅಪವಿತ್ರ ಮಾಡಬೇಕು ಎನ್ನುವುದು ದುಷ್ಟ ಮನಸ್ಥಿತಿಗಳ ಹುನ್ನಾರ. ಇದು ಮತಾಂಧತೆಯನ್ನು ತೋರಿಸುತ್ತದೆ ಎಂದು ಬಿಜೆಪಿಯ ಪರಿಷತ್‌ ಸದಸ್ಯ ಸಿಟಿ ರವಿ ಕಿಡಿಕಾರಿದ್ದಾರೆ. ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಇದ್ಯೋ?.ಇಲ್ವೋ ಎಂದು ಪ್ರಶ್ನೆ ಮಾಡಿದ್ದಾರೆ.

     

  • ಬಂಟ್ವಾಳದಲ್ಲಿ ಪೋಷಕರ ಕಣ್ಣೆದುರೇ ಮಕ್ಕಳು ನೀರುಪಾಲು

    ಬಂಟ್ವಾಳದಲ್ಲಿ ಪೋಷಕರ ಕಣ್ಣೆದುರೇ ಮಕ್ಕಳು ನೀರುಪಾಲು

    ಮಂಗಳೂರು: ಪೋಷಕರ ಎದುರೇ ಇಬ್ಬರು ಮಕ್ಕಳು ನೀರುಪಾಲಾದ ಘಟನೆ ಬಂಟ್ವಾಳದ (Bantwal) ನಾವೂರಿನಲ್ಲಿ ನಡೆದಿದೆ.

    ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಆಶ್ರಾ (11) ಮತ್ತು ಇಲಿಯಾಸ್ ಅವರ ಪುತ್ರಿ ನಾಶಿಯಾ (14) ನೀರುಪಾಲದ ಬಾಲಕಿಯರು. ಮಕ್ಕಳೊಂದಿಗೆ ಪೋಷಕರು ನೇತ್ರಾವತಿ ನದಿ (Netravati River) ತೀರಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮುಂದಿನ 5 ದಿನ ರಾಜ್ಯದ ಹಲವೆಡೆ ಮಳೆ ಸಾಧ್ಯತೆ

    ಈಜು ಬಾರದ ಕಾರಣ ಕಣ್ಣ ಮುಂದೆ ಮಕ್ಕಳು ನೀರು ಪಾಲಾಗುತ್ತಿದ್ದರೂ ಪೋಷಕರಿಗೆ ರಕ್ಷಿಸಲು ಸಾಧ್ಯವಾಗಲಿಲ್ಲ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಅಪಾರ್ಟ್‍ಮೆಂಟ್‍ನಿಂದ ಜಿಗಿದು ಸಾವು

    ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಅಪಾರ್ಟ್‍ಮೆಂಟ್‍ನಿಂದ ಜಿಗಿದು ಸಾವು

    ಬೆಂಗಳೂರು: ಈ ಹಿಂದೆ ಧರ್ಮಸ್ಥಳದಲ್ಲಿ (Dharmasthala) ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಅಪಾಟ್ಮೆರ್ಂಟ್‍ನಿಂದ ಜಿಗಿದು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ವಿಜಯಲಕ್ಷ್ಮಿ (17) ವರ್ಷ ಮೃತ ಯುವತಿ. ಈ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ. ಖಿನ್ನತೆಗೊಳಗಾಗಿ ವಿದ್ಯಾರ್ಥಿನಿ ಇಲ್ಲಿನ ಬ್ರೈಡ್ ಅಪಾರ್ಟ್ ಮೆಂಟ್ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಆತ್ಮಹತ್ಯೆ ಮಾಡಿಕೊಳ್ಳಲು ಧರ್ಮಸ್ಥಳಕ್ಕೆ ಹೋಗಿದ್ದಳು. ಅಲ್ಲಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಸ್ಥಳೀಯ ರಬ್ಬರು ರಕ್ಷಣೆ ಮಾಡಿ ಬುದ್ಧಿ ಹೇಳಿ ಕಳುಹಿಸಿದ್ರು. ಪೋಷಕರಿಗೆ ಫೋನ್ ಮಾಡಿ ತಿಳಿ ಹೇಳಿ ಯುವತಿ ಯನ್ನು ವಾಪಸ್ ಕಳುಹಿಸಿದ್ರು. ಧರ್ಮಸ್ಥಳದಿಂದ ಬೆಂಗಳೂರಿಗೆ ವಾಪಸ್ ಬಂದು ಅಪಾರ್ಟ್ ಮೆಂಟ್ ನ ಟೆರೇಸ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಇಬ್ಬರು ಯುವಕರ ದುರ್ಮರಣ

    ಇತ್ತ ಪುತ್ರಿ ಕಾಣೆಯಾಗಿದ್ದ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೈಂಟ್ ಕೂಡ ದಾಖಲಾಗಿತ್ತು. ಸದ್ಯ ಯುವತಿ ಆತ್ಮಹತ್ಯೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೈದ್ಯರ ನಿರ್ಲಕ್ಷ್ಯಕ್ಕೆ ಜ್ಯೂನಿಯರ್ ಆರ್ಟಿಸ್ಟ್  ಬಲಿ : ತಾಯಿಯ ಆರೋಪ

    ವೈದ್ಯರ ನಿರ್ಲಕ್ಷ್ಯಕ್ಕೆ ಜ್ಯೂನಿಯರ್ ಆರ್ಟಿಸ್ಟ್ ಬಲಿ : ತಾಯಿಯ ಆರೋಪ

    ವೈದ್ಯರ (Doctor) ನಿರ್ಲಕ್ಷ್ಯ ಕಾರಣದಿಂದಾಗಿ ಜ್ಯೂನಿಯರ್ ಆರ್ಟಿಸ್ಟ್ (Junior Artist)ಒಬ್ಬರು ಬಲಿಯಾದ ಪ್ರಕರಣ ಬೆಂಗಳೂರಿನ ಬಗಲಗುಂಟೆಯಲ್ಲಿ ನಡೆದಿದೆ. ಹದಿನೈದರ ವಯಸ್ಸಿನ ಸಿಂಚನಾ (Sinchana) ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಸಹ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ದಿನಗಳಿಂದ ಅವರು ವಾಂತಿ ಬೇಧಿಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಮನೆಯ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ನಿರ್ಲಕ್ಷ್ಯ ಕಾರಣದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಸಿಂಚನಾ ತಾಯಿ ನೇತ್ರಾವತಿ (Netravati) ಆರೋಪಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಎರಡು ದಿನಗಳಿಂದ ನನ್ನ ಮಗಳು ವಾಂತಿ ಬೇಧಿಯಿಂದ ಬಳಲುತ್ತಿದ್ದಳು. ಮೊದಲು ಕ್ಲಿನಿಕ್ ನಲ್ಲಿ ತೋರಿಸಿದ್ದೆವು. ತುಂಬಾ ಸುಸ್ತಾಗಿದ್ದರಿಂದ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದರು. ಮನೆಯ ಸಮೀಪದಲ್ಲೇ ಇದ್ದ ಖಾಸಗಿ ಆಸ್ಪತ್ರೆಗೆ ಮಗಳನ್ನು ದಾಖಲಿಸಲಾಯಿತು. ಆದರೆ, ಅವಳಿಗೆ ಸರಿಯಾದ ವೇಳೆಗೆ ಚಿಕಿತ್ಸೆ ದೊರೆಯಲಿಲ್ಲ. ಇದೇ ನನ್ನ ಮಗಳ ಸಾವಿಗೆ ಕಾರಣವಾಗಿದೆ’ ಎನ್ನುತ್ತಾರೆ ಸಿಂಚನಾ ತಾಯಿ.

    ಮುಂದುವರೆದು ಮಾತನಾಡಿದ ಅವರು, ‘ಸಿಂಚನಾಗೆ ಕತ್ತಿನ ಭಾಗಕ್ಕೆ ಇಂಜೆಕ್ಷನ್ ನೀಡಿದ್ದರು. ಕತ್ತಿನಲ್ಲಿ ರಕ್ತಸ್ರಾವ ಹೆಚ್ಚಾಯಿತು. ಅದನ್ನು ವೈದ್ಯರ ಗಮನಕ್ಕೆ ತಂದರೂ, ಅವರು ಅದನ್ನು ಗಂಭೀರವಾಗಿ ತಗೆದುಕೊಳ್ಳಲಿಲ್ಲ. ತರಬೇತಿ ವೈದ್ಯರು ನನ್ನ ಮಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ನುರಿತ ವೈದ್ಯರನ್ನು ಕರೆಯಿಸುವಂತೆ ಬೇಡಿಕೊಂಡರೂ, ಅವರು ಕೇಳಲಿಲ್ಲ. ಹಾಗಾಗಿ ನನ್ನ ಮಗಳನ್ನು ಕಳೆದುಕೊಳ್ಳಬೇಕಾಯಿತು’ ನೇತ್ರಾವತಿ. ಇದನ್ನೂ ಓದಿ:ಬಾಲಿವುಡ್‌ನ `ಸಿಟಾಡೆಲ್’ ಸೀರಿಸ್ ಒಪ್ಪಿಕೊಂಡಿದ್ಯಾಕೆ? ಕಾರಣ ಬಿಚ್ಚಿಟ್ಟ ಸಮಂತಾ

    ಈ ಸಾವಿನ ಕುರಿತಂತೆ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ತಗೆದುಕೊಳ್ಳುವ ಕುರಿತು ಪೊಲೀಸರು ಆಶ್ವಾಸನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೇತ್ರಾವತಿ ಸ್ನಾನಘಟ್ಟದಲ್ಲೇ ಮರಳು ದಂಧೆ- ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

    ನೇತ್ರಾವತಿ ಸ್ನಾನಘಟ್ಟದಲ್ಲೇ ಮರಳು ದಂಧೆ- ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

    -ಅಧಿಕಾರಿಗಳಿಗೆ ಕಣ್ಣಿದ್ದೂ ಕುರುಡು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಿಲ್ಲುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಜಿಲ್ಲಾಡಳಿತ ಜನಸಾಮಾನ್ಯರಿಗೆ ನಿಗದಿತ ಬೆಲೆಯಲ್ಲಿ ಮರಳು ನೀಡಲು ಅದೆಷ್ಟೋ ವ್ಯವಸ್ಥೆ ಕಲ್ಪಿಸಿದರೂ ಕೂಡಾ ಅಕ್ರಮ ದಂಧೆಕೋರರು ಅವೆಲ್ಲದಕ್ಕೂ ಡೋಂಟ್ ಕೇರ್ ಎಂದು ಬಿಂದಾಸ್ ಆಗಿ ದಂಧೆ ನಡೆಸುತ್ತಿದ್ದಾರೆ.

    ಜಿಲ್ಲೆಯ ಪ್ರಸಿದ್ಧ ತೀರ್ಥ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟಕ್ಕೆ ಕೂಗಳತೆ ದೂರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಡ್ರೆಜಿಂಗ್ ಮೆಷಿನ್, ಜೇಸಿಬಿ ಬಳಸಿ ನದಿಯ ಒಡಲು ಬರಿದು ಮಾಡುತ್ತಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದ್ದು, ಸುಮ್ನೆ ನಮಗೆ ಅದೆಲ್ಲ ಯಾಕೆ ಸಾರ್, ದಾಳಿ ನಡೆಸಲು ಮುಂದಾದರೆ ಮೇಲಿಂದ ಫೋನ್ ಬರುತ್ತೆ. ವಿಧಾನಸೌಧ ತನಕ ಅವರ ಕೈ ಇದೆ. ಏನು ಮಾಡಿದ್ರೂ ವೇಸ್ಟ್ ಅಂತಾರೆ ಪೊಲೀಸ್ ಸಿಬ್ಬಂದಿ. ಹೀಗೆ ಕೆಳಗಿಂದ ಮೇಲಿನವರೆಗೆ ಮಾಮೂಲಿ ಯಾಗೇ ನಡೀತಿರೋ ದಂಧೆಯನ್ನು ಮಟ್ಟ ಹಾಕಿ ನದಿಯನ್ನು ಉಳಿಸೋದ್ಯಾರು ಅನ್ನೋದು ಧರ್ಮಸ್ಥಳ ಜನರ ಪ್ರಶ್ನೆಯಾಗಿದೆ. ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ರೇಪ್ – ಬೆಳ್ತಂಗಡಿ ಪೊಲೀಸರಿಂದ ಇಬ್ಬರು ಅರೆಸ್ಟ್

    ಧರ್ಮಸ್ಥಳದ ಸ್ನಾನಘಟ್ಟದಿಂದ ಎಡಭಾಗಕ್ಕೆ ಮುಂಡಾಜೆ-ಚಾರ್ಮಾಡಿ ಸಂಧಿಸುವ ರಸ್ತೆ ಹೋಗುತ್ತದೆ. ಇಲ್ಲಿ 100 ಮೀಟರ್ ಮುಂದಕ್ಕೆ ಹೋದರೆ ಸೂರ್ಯಕಮಲ್ ಲಾಡ್ಜ್ ಇದ್ದು ಇದರ ಅಂಗಳದಲ್ಲೇ ಅಕ್ರಮ ಮರಳುಗಾರಿಕೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಲಾಡ್ಜ್ ಮುಂಭಾಗ, ಹಿಂಭಾಗ ಎಲ್ಲೆಂದರಲ್ಲಿ ಟಿಪ್ಪರ್, ಜೇಸಿಬಿ ಸಾಲುಗಟ್ಟಿ ನಿಲ್ಲುತ್ತಿದ್ದು ಇಲ್ಲೇ ನೇತ್ರಾವತಿ ನದಿಯಿಂದ ಡ್ರೆಜಿಂಗ್ ಮೆಷಿನ್ ಬಳಸಿ ಮರಳು ತೆಗೆಯಲಾಗುತ್ತಿದೆ. ಹಾಗೆ ತೆಗೆದ ಮರಳನ್ನು ಟಿಪ್ಪರ್ ಗಳಲ್ಲಿ ರಾಜಾರೋಷವಾಗಿ ಸಾಗಾಟ ಮಾಡಲಾಗುತ್ತಿದೆ. ಇಲ್ಲಿಂದ ಬೆಳ್ತಂಗಡಿ, ಮೂಡಬಿದ್ರೆ, ಚಾರ್ಮಾಡಿ ಮಾರ್ಗವಾಗಿ ಚಿಕ್ಕಮಗಳೂರು, ಕಡಬ, ಮಂಗಳೂರು ಕಡೆಗೆ ಮರಳು ಸಾಗಾಟ ಮಾಡಲಾಗುತ್ತದೆ. ಹೀಗೆ ದಿನವೊಂದಕ್ಕೆ ಸುಮಾರು 100-150 ಟಿಪ್ಪರ್ ಗಳಷ್ಟು ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದು ದಂಧೆಕೋರರು ಅಧಿಕಾರಿಗಳ ಕೃಪಾಕಟಾಕ್ಷದಿಂದ ದುಡ್ಡಿನ ಕಂತೆ ಎಣಿಸುತ್ತಿದ್ದಾರೆ. ಸ್ನಾನಘಟ್ಟದ ಬಳಿಯಲ್ಲಿ ರಸ್ತೆಯಲ್ಲಿ ಘನವಾಹನ ಪ್ರವೇಶ ನಿಷೇಧಸಲಾಗಿದೆ ಎಂಬ ಬೋರ್ಡ್ ಹಾಕಿದ್ದರೂ ಭಾರೀ ಗಾತ್ರದ ಟಿಪ್ಪರ್ ಗಳು ರಸ್ತೆಯನ್ನು ಹಾಳುಗೆಡವುತ್ತಿದ್ದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

    ಸುಬ್ರಮಣ್ಯ ಸ್ನಾನಘಟ್ಟದ ಬಳಿಕ ನೇತ್ರಾವತಿಗೆ ಕಂಟಕ:
    ಕೆಲವು ತಿಂಗಳ ಹಿಂದೆ ಕೊರೊನಾ ಲಾಕ್‍ಡೌನ್ ಅವಧಿಯಲ್ಲಿ ಸುಬ್ರಮಣ್ಯದ ಕುಮಾರಧಾರ ಸ್ನಾನಘಟ್ಟದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದುದು ಬೆಳಕಿಗೆ ಬಂದಿತ್ತು. ಪೊಲೀಸ್ ಇಲಾಖೆಯಿಂದ ಹಿಡಿದು ವಿವಿಧ ಇಲಾಖೆಗಳ ಅಧಿಕಾರಿಗಳು ದಂಧೆಯಲ್ಲಿ ಶಾಮೀಲಾಗಿದ್ದ ಆರೋಪ ಕೇಳಿಬಂದಿತ್ತು. ಸಾರ್ವಜನಿಕರ ಆಕ್ರೋಶದ ಬಳಿಕ ದಂಧೆಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಂದ್ ಮಾಡಿದ್ದರು. ಈಗ ಮತ್ತೆ ಅಂತದ್ದೇ ಘಟನೆ ಧರ್ಮಸ್ಥಳದಲ್ಲಿ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಗಣಿ ಇಲಾಖೆ ಅನ್ನೋದು ಇದೆಯೇ ಎನ್ನುವಷ್ಟು ಸಂದೇಹ ಜನರನ್ನು ಕಾಡಲಾರಂಭಿಸಿದೆ. ಸರ್ಕಾರಕ್ಕೆ ರಾಜಾಧನ ಪಾವತಿಸದೆ, ಲೀಸ್ ಪಡೆಯದೇ, ಯಾವೊಂದು ಅನುಮತಿಯೂ ಇಲ್ಲದೆ, ಲೈಸೆನ್ಸ್ ಅಗತ್ಯವೇ ಇಲ್ಲದೆ, ಸುಪ್ರೀಂಕೋರ್ಟ್ ನಿಷೇಧಿಸಿರುವ ಡ್ರೆಜಿಂಗ್ ಬಳಸಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ದಂಧೆ ನಡೆಯುತ್ತಿದ್ದರೆ ಅಧಿಕಾರಿಗಳು ದಾಳಿ ನಡೆಸದಂತೆ ಕಟ್ಟಿ ಹಾಕುತ್ತಿರುವ ಕೈ ಯಾವುದು ಅನ್ನೋದಕ್ಕೆ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರೇ ಉತ್ತರಿಸಬೇಕಿದೆ. ದಂಧೆ ಹೀಗೆ ಮುಂದುವರಿದರೆ ಲಕ್ಷಾಂತರ ಭಕ್ತರ ನಂಬಿಕೆಯಾಗಿರುವ ನೇತ್ರಾವತಿ ನದಿಗೆ ಮುಂದಿನ ದಿನಗಳಲ್ಲಿ ಕಂಟಕ ಎದುರಾಗಲಿರುವುದು ಸುಳ್ಳಲ್ಲ.  ಇದನ್ನೂ ಓದಿ: ನನ್ನ ಮಗಳ ಸಾವಿಗೆ ತೆಲುಗು ನಟ ಕಾರಣ- ಸೌಜನ್ಯ ತಂದೆ ದೂರು