ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡ ಕೈಮಗ್ಗ ನೇಕಾರರಿಗೆ 5 ಲಕ್ಷ ಪರಿಹಾರ ಕೊಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡೋದಾಗಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಉಮಾಶ್ರೀ ಪ್ರಶ್ನೆ ಕೇಳಿದ್ರು. ಸಂಕಷ್ಟಕ್ಕೆ ಸಿಲುಕಿರೋ ನೇಕಾರರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನೇಕಾರರಿಗೆ ಪರಿಹಾರ ಕೊಡುವ ಕೆಲಸ ಸರ್ಕಾರ ಮಾಡಬೇಕು. ಬರ, ಕೋವಿಡ್, ಮೈಕ್ರೋ ಫೈನಾನ್ಸ್ ಸೇರಿ ಹಲವು ಸಮಸ್ಯೆಯಿಂದ ನೇಕಾರರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನೇಕಾರ ಹೆಂಡತಿಗೆ ಪಿಂಚಣಿ ಕೊಡಿ. ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ನೇಕಾರರು ಆತ್ಮಹತ್ಯೆ ಮಾಡಿಕೊಂಡರೆ ಅವರಿಗೆ ಪರಿಹಾರ ಕೊಡಲು ಪರಿಹಾರ ನಿಧಿ ಪ್ರಾರಂಭ ಮಾಡಬೇಕು ಅಂತ ಒತ್ತಾಯ ಮಾಡಿದ್ರು.
ಇದಕ್ಕೆ ಸಚಿವ ಶಿವಾನಂದ ಪಾಟೀಲ್ ಉತ್ತರ ನೀಡಿ, 5 ವರ್ಷಗಳಲ್ಲಿ 51 ಜನ ನೇಕಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನೇಕಾರರಿಗೆ ಪರಿಹಾರ ನೀಡಲು ಯಾವುದೇ ಯೋಜನೆ ಇಲ್ಲ. ಅದಾಗ್ಯೂ 2020-21, 2021-22 ರಲ್ಲಿ 25 ರೈತರಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ 5 ಲಕ್ಷ ಪರಿಹಾರ ನೀಡಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ನೇಕಾರ ಪತ್ನಿಗೆ ಪಿಂಚಣಿ ನೀಡುವ, ಅವರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ಯೋಜನೆ ಇಲ್ಲ. ಕೋವಿಡ್ ಸಮಯದಲ್ಲಿ ಮೃತರಾದ ನೇಕಾರರಿಗೆ ಪರಿಹಾರ ಕೊಡುವ ಕೆಲಸ ಆಯ್ತು. ಆತ್ಮಹತ್ಯೆ ಮಾಡಿಕೊಂಡ 25 ಜನರಿಗೆ ಮಾತ್ರ ಪರಿಹಾರ ಕೊಡಲಾಗಿತ್ತು. ಉಳಿದವರಿಗೆ ಸಿಎಂ ಅವರು ಪರಿಹಾರ ನೀಡುವ ಕೆಲಸ ಮಾಡ್ತಿದ್ದೇವೆ ಅಂತ ತಿಳಿಸಿದರು.
ಕೈಮಗ್ಗ ನೇಕಾರರು ಮೃತರಾದರೆ 5 ಲಕ್ಷ ಕೊಡುವ ಯೋಜನೆ ಪರಿಶೀಲನೆ ಹಂತದಲ್ಲಿ ಇದೆ. ಕೇಂದ್ರದ ಪಿಎಂ ಯೋಜನೆ ಅಡಿ 439 ರೂಪಾಯಿ ಪ್ರಿಮಿಯಂ ಕಟ್ಟಿದರೆ ಅವರು 2 ಲಕ್ಷ ಕೊಡ್ತಾರೆ. ಉಳಿದ 3 ಲಕ್ಷ ರಾಜ್ಯ ಸರ್ಕಾರ ಸಿಎಂ ನಿಧಿಯಿಂದ ಕೊಡುವ ಕೆಲಸ ಮಾಡ್ತೀವಿ. ಕೈಮಗ್ಗ ನೇಕಾರರು ಆತ್ಮಹತ್ಯೆ ಮಾಡಿಕೊಂಡರೆ 5 ಲಕ್ಷ ಪರಿಹಾರ ಯೋಜನೆ ಸಿಎಂ ಜೊತೆ ಆರ್ಥಿಕ ಇಲಾಖೆ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ತೀವಿ ಅಂತ ತಿಳಿಸಿದರು.
ಬಾಗಲಕೋಟೆ: ಜಿಲ್ಲೆಯ ಬನಹಟ್ಟಿಯಲ್ಲಿ (Banahatti) ಕೆಹೆಚ್‌ಡಿಎಸಿ ನೇಕಾರರು ಕೈಗೊಂಡ ಅನಿರ್ದಿಷ್ಟಾವಧಿ ಪ್ರತಿಭಟನೆ (Weavers’ protest) ಗುರುವಾರ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನಾ ನಿರತ ನೇಕಾರರು ಬನಹಟ್ಟಿ ಪಟ್ಟಣದ ಭಾಂಗಿ ವೃತ್ತದ ಮುಖ್ಯ ರಸ್ತೆಯನ್ನು ಬಂದ್ ಮಾಡಿ, ರಸ್ತೆಯಲ್ಲಿಯೇ ಜಂತರದ ಮೂಲಕ ನೂಲು ಸುತ್ತಿ, ಅಲ್ಲಿಯೇ ಉಪಹಾರ ಸೇವಿಸಿ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಬಿಎಸ್‌ವೈಗೆ ಮತ್ತೊಂದು ಸಂಕಷ್ಟ- 2020ರ ಕೇಸ್‌ಗೆ ಮತ್ತೆ ಜೀವ
ನೇಕಾರ ಮುಖಂಡ ಶಿವಲಿಂಗ ಟರ್ಕಿ ಮಾತನಾಡಿ, ದೇಶದ ಜನರ ಮಾನಮುಚ್ಚುವ ನೇಕಾರರು ಇಂದು ಬೀದಿಗೆ ಬಿದ್ದು, ರಸ್ತೆಯಲ್ಲಿಯೇ ಉಪಹಾರ ಮಾಡುವಂತಾಗಿದ್ದು, ಶೋಚನಿಯ ಸ್ಥಿತಿಯಾಗಿದೆ.
ಎಂಟು ದಿನ ಕಳೆದರೂ ಯಾವೊಬ್ಬ ಜನಪ್ರತಿನಿಧಿ ಬಾರದೇ ನಿರ್ಲಕ್ಷ್ಯ ತೋರಿಸುತ್ತಿರುವುದು ನೇಕಾರರ ಮೇಲೆ ಆಗುತ್ತಿರುವ ಅನ್ಯಾಯವಾಗಿದೆ. ಮುಂದಿನ ದಿನಗಳಲ್ಲಿ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂಬ ಎಚ್ಚರಿಕೆಯನ್ನು ಅವರು ನೀಡಿದರು.
ರಸ್ತೆ ಬಂದ್ ಆಗಿದ್ದರಿಂದ ಬೈಕ್ ಸವಾರರು ಸೇರಿದಂತೆ ವಾಹನ ಸವಾರರು ಬೇರೆ ದಾರಿಗಳತ್ತ ಸಾಗುವ ದೃಶ್ಯ ಸಾಮಾನ್ಯವಾಗಿತ್ತು. ಅನೇಕ ನೇಕಾರರು ಘೋಷಣೆಗಳನ್ನು ಕೂಗಿ ಸರ್ಕಾರ ಮತ್ತು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು.
ಬೆಂಗಳೂರು: ಭಾರತೀಯ ಕುಶಲಕರ್ಮಿಗಳು (Handicraft) ಮತ್ತು ನೇಕಾರರು (Handloom) ತಮ್ಮ ಸಾಂಪ್ರದಾಯಿಕ ಕಲೆ ಮತ್ತು ಜೀವನೋಪಾಯವನ್ನು ಕಾಪಾಡಿಕೊಳ್ಳಲು ಭಾರೀ ಹೋರಾಟವನ್ನು ನಡೆಸುತ್ತಿದ್ದಾರೆ. ಸದ್ಯಕ್ಕೆ ತಾವು ಉತ್ಪಾದಿಸಿದ ವಸ್ತುಗಳ ಮಾರಾಟದಲ್ಲಿ ಭಾರೀ ಏರಿಕೆ ಕಾಣುತ್ತಿರುವುದಕ್ಕೆ ಆನ್‌ಲೈನ್ (Online) ಪ್ಲಾಟ್‌ಫಾರ್ಮ್‌ಗಳಿಗೆ ಋಣಿಯಾಗಿದ್ದಾರೆ.
ಉದಾಹರಣೆಗೆ, ನಶಿಸುತ್ತಿರುವ ಕರಕುಶಲ ಕಲೆಯನ್ನು ಜೀವಂತವಾಗಿ ಇರಿಸಲು ಡಿಜಿಟಲ್‌ನ (Digital) ಶಕ್ತಿಯನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ ಸ್ಥಳೀಯ ಮಾರಾಟಗಾರ ಅದಿಲ್. ಶತಮಾನದ ಹಳೆಯ ಅವರ ಕುಟುಂಬ ನಿಯಂತ್ರಿತ ವ್ಯಾಪಾರ ಚನ್ನಪಟ್ಟಣ ಆಟಿಕೆಗಳು ಹಲವಾರು ಸ್ಥಳೀಯ ಕುಶಲಕರ್ಮಿಗಳ ಮೇಲೆ ಪರಿಣಾಮ ಬೀರುತ್ತವೆ. ನನ್ನೊಂದಿಗೆ ಸುಮಾರು 35 ಕುಶಲಕರ್ಮಿಗಳು ಕೆಲಸ ಮಾಡುತ್ತಿದ್ದಾರೆ. ಕೆಲವರು 40 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದರೆ, ಇನ್ನೂ ಕೆಲವರು 60 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಈ ಕುಶಲಕರ್ಮಿಗಳಿಗೆ ಜೀವನೋಪಾಯದ ಪ್ರಮುಖ ಮೂಲವಾಗಿವೆ. ಈ ಸೌಲಭ್ಯಗಳು ನನ್ನ ತಂದೆ ಮತ್ತು ತಾತನಿಗೆ ಇರಲಿಲ್ಲ. ಆದರೆ ಇಂದು ನಾನು ಕಡಿಮೆ ಹೂಡಿಕೆಯೊಂದಿಗೆ ಖರೀದಿದಾರರ ಜೊತೆಗೆ ತೊಡಗಿಸಿಕೊಳ್ಳಲು ಮತ್ತು ದೊಡ್ಡ ಪರಿಣಾಮ ರೂಪಿಸಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಶಕ್ತಿಯನ್ನು ಬಳಸಿಕೊಳ್ಳಬಹುದು. ನಮ್ಮ ಭವ್ಯವಾದ ಕರಕುಶಲ ಪರಂಪರೆ ಸಂರಕ್ಷಿಸುವ ಜೊತೆಗೆ ವ್ಯಾಪಾರವನ್ನು ಹೆಚ್ಚಿಸಲು ಮತ್ತು ಈ ವಿಶಿಷ್ಟ ಚನ್ನಪಟ್ಟಣದ ಆಟಿಕೆಗಳನ್ನು ಭಾರತದಿಂದ ಜಗತ್ತಿಗೆ ಲಭ್ಯವಾಗುವಂತೆ ಮಾಡಲು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
ಆಂಧ್ರಪ್ರದೇಶ ಮೂಲದ ಆದಿಲಕ್ಷ್ಮಿ ಟಾಯ್ಸ್‌ನ ಮಾಲೀಕ ಅಡವಿ ಶ್ರೀನಿವಾಸ್ ಅವರಿಗೆ ತಮ್ಮ ಉದ್ಯಮಶೀಲತೆಯ ಕನಸನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮ ಮತ್ತು ಜಿಯೋಮಾರ್ಟ್ ಸೇರಿದಂತೆ ಹೊಸ ವಿತರಣೆ ಚಾನೆಲ್‌ಗಳತ್ತ ಮುಖ ಮಾಡಿದ್ದಾರೆ. ಜಿಯೋಮಾರ್ಟ್‌ನ ಕ್ರಾಫ್ಟ್ಸ್ ಮೇಳಗಳಂತಹ ಆನ್‌ಲೈನ್ ಮಳಿಗೆಗಳಿಂದ ಕುಶಲಕರ್ಮಿಗಳು ಮತ್ತು ಶ್ರೀನಿವಾಸ್ ಅವರಂತಹ ಉದ್ಯಮಿಗಳಿಗೆ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ದೇಶಾದ್ಯಂತದ ಹೊಸ ಗ್ರಾಹಕರಿಗೆ ತಲುಪಿಸಲು ಸಹಾಯ ಮಾಡುತ್ತವೆ.
ತಮಿಳುನಾಡಿನ ಈರೋಡ್‌ನ ಲಾವಣ್ಯಾ ಅವರು ಹೊಸ ಗ್ರಾಹಕರನ್ನು ಹುಡುಕಲು ಮತ್ತು ಕಾರ್ಯಾಚರಣೆಯನ್ನು ಹೆಚ್ಚಿಸಲು ದರ್ಭಾಯಿ ಮತ್ತು ಸಾಂಬು ನದಿ ಹುಲ್ಲಿನಿಂದ ನೇಯ್ದ ಯೋಗ ಮತ್ತು ಧ್ಯಾನ ಮ್ಯಾಟ್‌ಗಳನ್ನು ಮಾರಾಟ ಮಾಡುವ 100 ವರ್ಷಗಳ ಹಳೆಯ ಮತ್ತು ಸ್ಪಾರ್ಟಾನ್ ಕುಟುಂಬ ನಡೆಸುವ ಅಂಗಡಿಯನ್ನು ಆನ್‌ಲೈನ್‌ನಲ್ಲಿ ತಂದಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಕೆಲಸ ಕಳೆದುಕೊಂಡ ನಂತರ ನನ್ನ ಹಳ್ಳಿಯ ಜನರು ಇತರ ನಗರಗಳಿಂದ ಮರಳಿದರು ಎಂದು 17 ವರ್ಷಗಳ ಕೆಲಸದ ಅನುಭವ ಹೊಂದಿರುವ ಸಾಫ್ಟ್‌ವೇರ್ ಎಂಜಿನಿಯರ್ ಲಾವಣ್ಯಾ ಹೇಳುತ್ತಾರೆ.
ಅವರ ಮೂರನೇ ತಲೆಮಾರಿನ ವ್ಯವಹಾರವನ್ನು ಮುಂದುವರಿಸಲು ತಮ್ಮ 9-5 ಗಂಟೆ ತನಕ ಮಾಡುವ ಕೆಲಸವನ್ನು ತೊರೆದಿದ್ದಾರೆ. ಪುರುಷ ಮತ್ತು ಸ್ತ್ರೀ ಕುಶಲಕರ್ಮಿಗಳಿಗೆ ಕೈಮಗ್ಗದ ಟವೆಲ್ ಮತ್ತು ಯೋಗ ಹಾಗೂ ಧ್ಯಾನ ಮ್ಯಾಟ್‌ಗಳನ್ನು ನೇಯಲು ತರಬೇತಿ ನೀಡುವುದಕ್ಕೆ ನಾನು ನಿರ್ಧರಿಸಿದೆ. ಅವರ ಜೀವನೋಪಾಯವು ಇದರ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ.
ಪ್ರಬಲವಾದ ವ್ಯಾಪಾರವನ್ನು ರೂಪಿಸುವುದಕ್ಕೆ ತನ್ನ ಹಳ್ಳಿಯಲ್ಲಿ ನೇಕಾರರ ಜೀವನೋಪಾಯವನ್ನು ಬೆಂಬಲಿಸಲು ಮತ್ತು ತನ್ನ ಸಮುದಾಯದ ಇತರ ಮಹಿಳೆಯರಿಗೆ ಮಾದರಿಯಾಗಿ, ಲಾವಣ್ಯಾ ತನ್ನದೇ ಆದ ವೆಬ್‌ಸೈಟ್ ಅನ್ನು ಪ್ರಾರಂಭಿಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಶುರು ಮಾಡಿದರು. ನಾನು ಜಿಯೋಮಾರ್ಟ್‌ನಂತಹ ಆನ್‌ಲೈನ್ ಮಾರ್ಕೆಟ್ ಪ್ಲೇಸ್‌ಗಳಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದೇನೆ. ಅಲ್ಲಿ ಇತ್ತೀಚೆಗೆ ನನ್ನ ಉತ್ಪನ್ನಗಳನ್ನು ಲಿಸ್ಟ್ ಮಾಡಿದ್ದೇನೆ ಮತ್ತು ಆರ್ಡರ್‌ಗಳನ್ನು ಪಡೆಯಲು ಪ್ರಾರಂಭಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕೃಷಿ, ಜಲ ಸಂಪನ್ಮೂಲ ಅಭಿವೃದ್ಧಿಯಲ್ಲಿ ದೇಶದಲ್ಲೇ ರಾಯಚೂರಿಗೆ ಫಸ್ಟ್ ರ‍್ಯಾಂಕ್
2019 ರಲ್ಲಿ ಹೈದರಾಬಾದ್‌ನ ದಿಲ್‌ಸುಖ್ ನಗರದಲ್ಲಿ ಆದಿಲಕ್ಷ್ಮಿ ಟಾಯ್ಸ್ ಪ್ರಾರಂಭಿಸಲು 18 ವರ್ಷಗಳ ಕೆಲಸವನ್ನು ತೊರೆದ ಇನ್ನೊಬ್ಬ ಮಾರಾಟಗಾರ ಶ್ರೀನಿವಾಸ್ ಕೂಡ ಡಿಜಿಟಲ್ ವಿತರಣಾ ಚಾನೆಲ್‌ಗಳನ್ನು ಅನುಸರಿಸುವ ಮೂಲಕ ಫೇಸ್‌ಬುಕ್ ಜಾಹೀರಾತುಗಳತ್ತ ಹೊರಳಿದರು ಮತ್ತು ದೃಢವಾದ ಸಾಮಾಜಿಕ ಮಾಧ್ಯಮ ಉಪಸ್ಥಿತಿಯನ್ನು ರೂಪಿಸುವ ಮೂಲಕ ಹೆಚ್ಚಿನ ಮಾರಾಟವನ್ನು ಮಾಡುತ್ತಿದ್ದಾರೆ.
ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ನೇಕಾರರಿಗೆ ಡಿಜಿಟಲೈಸೇಷನ್ ಬಗ್ಗೆ ಸ್ವಲ್ಪವೇ ತಿಳಿದಿದೆ. ಅವರ ಕಲೆಯನ್ನು ಮುನ್ನಲೆಗೆ ತರುವುದು ಮತ್ತು ಅವರನ್ನು ಬೆಂಬಲಿಸುವುದು ಬಹಳ ಮುಖ್ಯ. ವಿಷಕಾರಿಯಲ್ಲದ, ಬಾಳಿಕೆ ಬರುವ ಮತ್ತು ಸುಸ್ಥಿರವಾಗಿರುವ ಮರದ ಆಟಿಕೆಗಳನ್ನು ಉತ್ತೇಜಿಸುವುದು ನಮ್ಮ ಗುರಿಯಾಗಿದೆ ಎಂದು ಜಿಯೋಮಾರ್ಟ್ನ ಮಾರಾಟಗಾರ ಶ್ರೀನಿವಾಸ್ ಹೇಳುತ್ತಾರೆ.
ಹಲವಾರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಹೆಚ್ಚುತ್ತಿರುವ ಆರ್ಡರ್‌ಗಳನ್ನು ಪಡೆಯುವುದರ ಹೊರತಾಗಿ, ಅವರು ಸದ್ಯಕ್ಕೆ ಆಟಿಕೆಗಳನ್ನು ರಫ್ತು ಮಾಡುತ್ತಿದ್ದಾರೆ. ಇನ್ನೂ ಕುತೂಹಲಕಾರಿ ಅಂಶ ಏನೆಂದರೆ, ಅವರ ಗ್ರಾಹಕರಲ್ಲಿ ಹೆಚ್ಚಿನವರು 40 ರಿಂದ 50 ವರ್ಷ ವಯಸ್ಸಿನವರಾಗಿದ್ದಾರೆ. ಇದನ್ನೂ ಓದಿ: ವಿಜಯ್ ಮಲ್ಯಗೆ ಮುಳುವಾಗಿದ್ದ ಟಿಪ್ಪು ಖಡ್ಗ 145 ಕೋಟಿಗೆ ಹರಾಜು
ಬೆಂಗಳೂರು: ಖಾದಿಗೆ ಉತ್ತಮ ಭವಿಷ್ಯವಿದೆ. ಯಾರು ಭಯ ಪಡುವ ಅವಶ್ಯಕತೆ ಇಲ್ಲ. ಈ ಬಾರಿಯ ಬಜೆಟ್‌ನಲ್ಲಿ ದುಡಿಯುವ ವರ್ಗಕ್ಕೆ ಮಹತ್ವ ಕೊಡುತ್ತಿದ್ದೇವೆ. ಖಾದಿ ಮತ್ತು ಗ್ರಾಮೋದ್ಯೋಗದಿಂದ (Khadi And Gramodyoga) ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಹೀಗಾಗಿ ಬಜೆಟ್‌ನಲ್ಲಿ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ವಿಶೇಷವಾದ ಒತ್ತು, ಹಣಕಾಸಿನ ನೆರವು ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನದ ಉದ್ಘಾಟಿಸಿದ ಅವರು, ಮಹಾತ್ಮ ಗಾಂಧೀಜಿಯವರು ಖಾದಿಗೆ ಬಹಳ ಮಹತ್ವ ಕೊಟ್ಟಿದ್ದರು. ಸ್ವರಾಜ್ಯದ ಪ್ರತೀಕಾರವಾಗಿ ವಿದೇಶಿ ವಸ್ತುಗಳನ್ನು ಬಹಿಷ್ಕಾರ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸ್ವದೇಶಿ ವಸ್ತುಗಳ ಬಳಕೆ ಮಾಡುವ ವಿಚಾರದಲ್ಲಿ ಮೊಟ್ಟಮೊದಲ ಸ್ಪಂದಿಸಿ ಯಶಸ್ವಿಯಾಗಿ ಸಹಾಯ ಮಾಡಿದ್ದು ಖಾದಿ ಗ್ರಾಮೋದ್ಯೋಗಿಗಳು, ನೇಕಾರರು. ದೊಡ್ಡ ಪ್ರಮಾಣದಲ್ಲಿ ಬಟ್ಟೆ ಉತ್ಪಾದನೆ ಮಾಡಿ ದೇಶಕ್ಕೆ ಕೊಟ್ಟಿದ್ದರು. ಬೃಹತ್ ಪ್ರಮಾಣದ ಕಾರ್ಖಾನೆಯಿಂದ ಉತ್ಪಾದನೆ ಆಗಬಾರದು. ಬೃಹತ್ ಪ್ರಮಾಣದ ಜನಸಂಖ್ಯೆಯಿಂದ ಉತ್ಪಾದನೆಯಾಗಿ ಎಲ್ಲರಿಗೂ ಉದ್ಯೋಗ ಸಿಗಬೇಕು ಎಂದು ಮಹಾತ್ಮ ಗಾಂಧಿಜೀಯವರು ಹೇಳಿದ್ದರು. ಇವತ್ತಿಗೂ ಕೃಷಿಯ ನಂತರ ಅತಿಹೆಚ್ಚು ಉದ್ಯೋಗ ನೀಡುತ್ತಿರುವುದು ಖಾದಿ ಗ್ರಾಮೋದ್ಯೋಗ ಕ್ಷೇತ್ರ ಎಂದು ತಿಳಿಸಿದರು.
ಇವತ್ತು ತಂತ್ರಜ್ಞಾನ ಬದಲಾವಣೆ ಆಗಿದ್ದರಿಂದ ಖಾದಿಗೆ ಹಿನ್ನೆಡೆಯಾಗಿದೆ. ಪಾಲಿಸ್ಟರ್ ಬಟ್ಟೆಗಳ ಉಪಯೋಗ ಹೆಚ್ಚಾದಾಗ ಖಾದಿ ಉದ್ಯೋಗಕ್ಕೆ ಹೆಚ್ಚಿನ ತೊಂದರೆ ಆಗಿತ್ತು. ಆದರೆ ಈಗ ಸಾಕಷ್ಟು ಬದಲಾವಣೆಯಾಗಿದೆ. ಎತ್ನಿಕ್ ಉತ್ಪಾದನೆಗೆ ಹೆಚ್ಚು ಬೇಡಿಕೆ ಇದೆ. ಖಾದಿ ಬಟ್ಟೆಗಳು, ಸಾವಯವ ಆಹಾರಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್‌ನಂತಹ ಸಂಸ್ಥೆಗಳು ಖಾದಿ ವಸ್ತುಗಳ ಖರೀದಿಗೆ ಆಸಕ್ತಿವಹಿಸಿವೆ. ನೇರವಾಗಿ ಉತ್ಪಾದಕರಿಂದ ಮಾರುಕಟ್ಟೆಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಆನ್‌ಲೈನ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ತಿಳಿಸಿದರು.
ಇಂದು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ “ಖಾದಿ ಉತ್ಸವ -2023″ರ ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿದೆನು. pic.twitter.com/8yQcqzQnSv
ಸ್ತ್ರೀ ಸಾಮರ್ಥ್ಯ ಯೋಜನೆ ಮೂಲಕ ಮಹಿಳೆಯರಿಗೆ 5 ಲಕ್ಷದವರೆಗೂ ಧನ ಸಹಾಯ ಮಾಡಿ ಮಹಿಳಾ ಸಂಘಗಳ ಮೂಲಕ ಉತ್ಪಾದನೆಗೆ ಆದ್ಯತೆ ನೀಡಿದ್ದೇವೆ. ಯುವಕರಿಗೆ ಸಂಘಗಳ ಮೂಲಕ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಿದ್ದೇವೆ. ಖಾದಿ ಗ್ರಾಮೋದ್ಯೋಗ ಕಾಲಕ್ಕೆ ತಕ್ಕಂತೆ ಡಿಸೈನ್ ಮಾಡಿ ಉತ್ಪಾದನೆ ಮಾಡಬೇಕು. ಈ ಬಾರಿ ಬಜೆಟ್ ನಲ್ಲಿ ದುಡಿಯುವ ವರ್ಗಕ್ಕೆ ಆದ್ಯತೆ ನೀಡಲಾಗುತ್ತಿದೆ. ಖಾದಿ ಗ್ರಾಮೋದ್ಯೋಗಕ್ಕೂ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಖಾದಿಗೆ ಉತ್ತಮ ಭವಿಷ್ಯ ಇದೆ. ಯಾರು ಭಯ ಪಡಬೇಕಿಲ್ಲ ಎಂದರು. ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ – ಬಿಬಿಸಿಯನ್ನು ಸಮರ್ಥಿಸಿಕೊಂಡ ಅಮೆರಿಕ
ಆರ್ಥಿಕ ಬಲ ಹೆಚ್ಚಳಕ್ಕೆ ಕ್ರಮ: ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಆರ್ಥಿಕ ಬಲಕ್ಕೆ ಎಲ್ಲ ಕ್ರಮ ನಾನು ತೆಗೆದುಕೊಳ್ಳುತ್ತೇನೆ. ಬಾಕಿ ಇರುವ 74 ಕೋಟಿ ರೂ.ಗೆ ಅನುಮೋದನೆ ಮತ್ತು ಬೇರೆ ಬೇರೆ ಕಡೆಯ ದೊಡ್ಡ ದೊಡ್ಡ ಆಸ್ತಿಯ ರಕ್ಷಣೆಗೆ 5 ಕೋಟಿ ರೂ. ಕೊಡುವಂತೆ ಮನವಿ ಮಾಡಿದ್ದೀರಿ. ಅದಕ್ಕೆ ಸಂಬಂಧಿಸಿದ ಎಲ್ಲ ಕ್ರಮವನ್ನು ಕೈಗೊಳ್ಳುತ್ತೇನೆ ಎಂದರು.
ಬೆಳಗಾವಿ: ಜವಳಿ ಸಚಿವ ಶ್ರೀಮಂತ ಪಾಟೀಲ್ ತವರು ಜಿಲ್ಲೆಯಲ್ಲೇ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲಬಾಧೆ ತಡೆಯಲಾರದೆ ವಾರದಲ್ಲಿ ಮೂವರು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಬೆಳಗಾವಿ ನಗರದ ವಡಗಾಂವ ನಿವಾಸಿ ಸುಜಿತ್ ಉಪರಿ (38), ಹುಕ್ಕೇರಿ ತಾಲೂಕಿನ ಆನಂದಪುರ ನಿವಾಸಿ ಶಂಕರ (60), ವಡಗಾಂವ ನಿವಾಸಿ ಸುವರ್ಣ ಕಾಮ್ಕರ್ (47) ಆತ್ಮಹತ್ಯೆಗೆ ಶರಣಾದ ನೇಕಾರರು. ಕೊರೊನಾ ನಡುವೆ ಕೆಲಸವಿಲ್ಲದೇ ಕುಟುಂಬ ಸಾಗಿಸಲಾಗದೆ, ಸಾಲದ ಕಿರುಕುಳಕ್ಕೆ ಬೇಸತ್ತು ನೇಕಾರರು ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ.
ಅದರಲ್ಲೂ ಜವಳಿ ಸಚಿವ ಶ್ರೀಮಂತ ಪಾಟೀಲ್ ತರವರಲ್ಲೇ ಈ ರೀತಿಯಾದರೂ ಸಾಂತ್ವನ ಹೇಳಬೇಕಿದ್ದ ಸಚಿವರೇ ನಾಪತ್ತೆಯಾಗಿದ್ದಾರೆ. ಜವಳಿ ಸಚಿವರಾಗಿ ಆಯ್ಕೆಯಾದ ಬಳಿಕ ಜಿಲ್ಲೆಯಲ್ಲಿ ಶ್ರೀಮಂತ ಪಾಟೀಲ್ ಒಂದೇ ಒಂದು ಸಭೆ ಕೂಡ ಮಾಡಿಲ್ಲ. ಜೊತೆಗೆ ಒಂದೇ ವಾರದಲ್ಲಿ ಮೂರು ಜನ ಆತ್ಮಹತ್ಯೆ ಮಾಡಿಕೊಂಡರೂ ಜಿಲ್ಲೆಗೆ ಶ್ರೀಮಂತ ಪಾಟೀಲ್ ಬಂದಿಲ್ಲ. ಹೀಗಾಗಿ ಶ್ರೀಮಂತ ಪಾಟೀಲ್ ವಿರುದ್ಧ ನೇಕಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ: ನೇಕಾರರು, ರೈತರು ದೇಶದ ಎರಡು ಕಣ್ಣುಗಳು ಎನ್ನುತ್ತಾರೆ. ಕರ್ನಾಟಕದಲ್ಲಿ ಉಂಟಾದ ಪ್ರವಾಹಕ್ಕೆ ಸಿಲುಕಿ ಈ ಎರಡು ವರ್ಗ ಸಾಕಷ್ಟು ಹಾನಿ ಅನುಭವಿಸಿದೆ. ಸರ್ಕಾರ ಈಗಾಗಲೇ ಪ್ರವಾಹ ಪೀಡಿತರಿಗೆ ಪರಿಹಾರ ನೀಡಲು ಒಂದು ಹಂತದಲ್ಲಿ ಕ್ರಮ ಕೈಗೊಳ್ಳುತ್ತಿದೆ. ಆದರೆ ನೇಕಾರರ ಮಗ್ಗಗಳ ಹಾನಿಗೆ ಪರಿಹಾರ ಕಲ್ಪಿಸುವಲ್ಲಿ ಜನಪ್ರತಿನಿಧಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಸಿಎಂ ಹಾಗೂ ಸಚಿವರ ದ್ವಂದ್ವ ಹೇಳಿಕೆಗಳು ನೇಕಾರರನ್ನು ಮತ್ತಷ್ಟು ಗೊಂದಲಕ್ಕೀಡುಮಾಡಿವೆ.
ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ಮಲಪ್ರಭಾ, ಕೃಷ್ಣಾ ನದಿಗಳ ಆರ್ಭಟಕ್ಕೆ ಮಗ್ಗಗಳು ಜಲಾವೃತವಾಗಿ ಸರ್ವನಾಶವಾಗಿವೆ. ರಬಕವಿ ಬನಹಟ್ಟಿ, ತೇರದಾಳ, ಗುಳೇದಗುಡ್ಡ, ಹುನಗುಂದ, ಇಳಕಲ್ ಭಾಗದಲ್ಲಿ ನೇಕಾರರ ಕುಟುಂಬಗಳ ಬದುಕು ಮೂರಾಬಟ್ಟೆಯಾಗಿವೆ. ಸಾಲಸೋಲ ಮಾಡಿ ನಿರ್ಮಿಸಿಕೊಂಡಿದ್ದ ಮಗ್ಗಗಳು ರಾತ್ರೋ ರಾತ್ರಿ ನೀರಿನಲ್ಲಿ ಮುಳುಗಿ ನೇಕಾರರು ಬೀದಿಗೆ ಬಿದ್ದಿದ್ದಾರೆ. ಇದನ್ನೂ ಓದಿ:ಸಿಎಂ ಆದೇಶವನ್ನೇ ತಿದ್ದುಪಡಿ ಮಾಡಿದ ಕಂದಾಯ ಇಲಾಖೆ- ನೇಕಾರರು ಗರಂ
ಬಾಗಲಕೋಟೆ ಜಿಲ್ಲೆಯ 270 ಮಗ್ಗಗಳು ಹಾನಿಗೊಳಗಾಗಿವೆ. ಆದ್ರೆ 240 ಮಗ್ಗಗಳನ್ನು ಮಾತ್ರ ಫಲಾನುಭವಕ್ಕೆ ಸರ್ಕಾರ ಆಯ್ಕೆ ಮಾಡಿದೆ. ಉಳಿದ 30 ಮಗ್ಗಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಹಾಗೆಯೇ ಸರ್ಕಾರ ಪ್ರತಿ ಕುಟುಂಬಕ್ಕೆ 25 ಸಾವಿರ ಪರಿಹಾರ ಘೋಷಿಸಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮಗ್ಗಗಳನ್ನು ಕಳೆದುಕೊಂಡ ನೇಕಾರರು ಅಸಮಾಧಾನ ಹೊರಹಾಕಿದ್ದಾರೆ. ಒಂದು ಕುಟುಂಬದಲ್ಲಿ 2-3 ಮಗ್ಗಗಳಿರುವ ವಿಚಾರವನ್ನೂ ನಿರ್ಲಕ್ಷಿಸಲಾಗಿದೆ. ಪ್ರತಿ ಕುಟುಂಬದ ಬದಲು ಪ್ರತಿ ಮಗ್ಗ ಎಂದು ಪರಿಗಣಿಸಿ ಸರ್ಕಾರ ಪರಿಹಾರಧನ ಆದೇಶ ಮರುಪರಿಶೀಲನೆ ಮಾಡಬೇಕು ಎಂದು ನೇಕಾರರು ಆಗ್ರಹಿಸಿದ್ದಾರೆ.
ಬಾಗಲಕೋಟೆ ನೇಕಾರರ ಕುಟುಂಬ ಹೆಚ್ಚು ಇರುವ ಜಿಲ್ಲೆಯಾಗಿದೆ. ಇದೇ ನೇಕಾರರಿಂದ ಪ್ರಸಿದ್ಧ ಇಳಕಲ್ ಸೀರೆ ತಯಾರಾಗುತ್ತದೆ. ಆದರೆ ಭೀಕರ ಪ್ರವಾಹ ನೇಕಾರರ ಜೀವನಕ್ಕೆ ಕಲ್ಲು ಹಾಕಿದೆ. ಈ ಬಗ್ಗೆ ಡಿಸಿಎಂ ಹಾಗೂ ಬಾಗಲಕೋಟೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರನ್ನು ಕೇಳಿದರೆ, ಮರುಪರಿಶೀಲನೆ ಮಾಡ್ತೇವೆ ಎಂದಿದ್ದಾರೆ.
ಬೆಳಗಾವಿ: ಸಿಎಂ ಯಡಿಯೂರಪ್ಪ ಅವರ ಆದೇಶಕ್ಕೆ ಕಂದಾಯ ಇಲಾಖೆ ಬೆಲೆ ಕೊಡದೆ, ಪ್ರವಾಹ ಹಿನ್ನೆಲೆಯಲ್ಲಿ ವಿದ್ಯುತ್ ಮಗ್ಗಗಳ ಹಾನಿಗೆ ಹೊರಡಿಸಿದ ಪರಿಹಾರದ ಆದೇಶವನ್ನೇ ತಿದ್ದುಪಡಿ ಮಾಡಿ ನೇಕಾರರಿಗೆ ಮೋಸ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಜಿಲ್ಲೆಯಲ್ಲಿ ಭಾರೀ ಪ್ರವಾಹದಿಂದ 1763 ವಿದ್ಯುತ್ ಮಗ್ಗಗಳಿಗೆ ಹಾನಿಯುಂಟಾಗಿತ್ತು. ಅದರಲ್ಲಿ ರಾಮದುರ್ಗದಲ್ಲಿ ಹಾನಿಗೊಳಗಾದ ಮಗ್ಗಗಳ ಸಂಖ್ಯೆಯೇ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಹಾನಿಯಾಗಿದ್ದ ವಿದ್ಯುತ್ ಮಗ್ಗಗಳಿಗೆ ಪರಿಹಾರ ನೀಡುವ ಭರವಸೆ ನೀಡಿದ್ದರು. ಪ್ರತಿ ಮಗ್ಗಕ್ಕೆ 25 ಸಾವಿರ ರೂ. ಪರಿಹಾರ ಹಣ ನೀಡುವಂತೆ ಅ. 18ಕ್ಕೆ ಸಿಎಂ ಆದೇಶ ಹೊರಡಿಸಿದ್ದರು. ಆದರೆ ಅ.24ಕ್ಕೆ ಸಿಎಂ ಆದೇಶವನ್ನೇ ಕಂದಾಯ ಇಲಾಖೆ ಮಾರ್ಪಾಡು ಮಾಡಿದೆ ಎಂದು ಆರೋಪಿಸಲಾಗುತ್ತಿದೆ.
ಸಿಎಂ ಆದೇಶದಲ್ಲಿ ‘ಹಾನಿಗೊಳಗಾದ ಪ್ರತಿ ಮಗ್ಗಕ್ಕೆ ನಿಗದಿಪಡಿಸಿದ ಮೊತ್ತ’ ಎಂದಿತ್ತು. ಆದರೆ ಇದನ್ನು ಪ್ರತಿ ಮಗ್ಗದ ಬದಲಾಗಿ ‘ಹಾನಿಯಾದ ಮಗ್ಗದ ಪ್ರತಿ ಫಲಾನುಭವಿಯಾದ ಮಗ್ಗದ ಮಾಲೀಕರಿಗೆ’ ಎಂದು ಕಂದಾಯ ಇಲಾಖೆ ತಿದ್ದುಪಡಿ ಮಾಡಿದೆ. ಇದರಿಂದ ನೇಕಾರರಿಗೆ ಮೋಸವಾಗಿದೆ ಎಂದು ಸಿಎಂ ಹಾಗೂ ಕಂದಾಯ ಸಚಿವರ ವಿರುದ್ಧ ನೇಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಬಿ.ಎಸ್.ಯಡಿಯೂರಪ್ಪಮವರು ರೈತರು ಹಾಗೂ ನೇಕಾರರಿಗೆ ಕೊಡುಗೆ ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 14 ತಿಂಗಳ ಮೈತ್ರಿ ಸರ್ಕಾರ ಮಾಡಿದ ಸಾಧನೆ ಏನು? ಮುಂದೆ ನಾವು ಮಾಡಲಿರುವ ಅಭಿವೃದ್ಧಿ ಕೆಲಸಗಳು ಏನು ಎನ್ನುವುದನ್ನು ರಾಜ್ಯದ ಜನತೆಗೆ ತೋರಿಸಬೇಕಿದೆ. ಆದರೆ ರಾಜ್ಯದಲ್ಲಿ ಆಡಳಿತ ಮಟ್ಟ ಕುಸಿದಿದೆ. ಅದನ್ನು ಮೊದಲು ಸರಿ ಮಾಡುತ್ತೇವೆ ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ರಾಜ್ಯದ ಜನತೆಗೆ ಹಾಗೂ ಪ್ರತಿಪಕ್ಷದ ನಾಯಕರಿಗೆ ಭರವಸೆ ನೀಡುತ್ತೇನೆ. ನನ್ನನ್ನು ಯಾರೇ ದ್ವೇಷ ಮಾಡಿದರೂ ಅವರನ್ನು ಪ್ರೀತಿಯಿಂದ ಕಾಣುತ್ತೇನೆ. ಮುಖ್ಯಮಂತ್ರಿಯಾಗಲು ರಾಜ್ಯದ ಜನತೆಯ ಆಶೀರ್ವಾದ ನೀಡಿದ್ದಾರೆ ಹಾಗೂ ಲಕ್ಷಾಂತರ ಕಾರ್ಯಕರ್ತರು ಶ್ರಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಧ್ಯಕ್ಷ ಅಧ್ಯಕ್ಷ ಅಮಿತ್ ಶಾ ಅವರ ಅನುಗ್ರಹದಿಂದ ಈ ಹಂತಕ್ಕೆ ಬಂದಿದ್ದೇನೆ ಎಂದು ನೆನೆದರು.
ರಾಜ್ಯದಲ್ಲಿ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು, ನೇಕಾರರು, ಮೀನುಗಾರರ ಸಂಕಷ್ಟವನ್ನು ಪರಿಹರಿಸಲು ವಿಶೇಷ ಗಮನ ಹರಿಸುತ್ತೇನೆ. ಈ ಸಂಬಂಧ ಕ್ಯಾಬಿನೆಟ್ ಸಭೆಯಲ್ಲಿ ಎರಡು ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಪ್ರಧಾನ ಮಂತ್ರಿ ಸಮ್ಮಾನ್ ಯೋಜನೆಗೆ ಈಗಾಗಲೇ ಆಯ್ಕೆ ಮಾಡಲಾದ ರೈತರಿಗೆ ರಾಜ್ಯ ಸರ್ಕಾರದಿಂದಲೂ 4 ಸಾವಿರ ರೂ.ವನ್ನು ಎರಡು ಕಂತುಗಳಲ್ಲಿ ನೀಡಲು ನಿರ್ಧರಿಸಿದ್ದೇವೆ. ನೇಕಾರರ 100 ಕೋಟಿ ರೂ. ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ ಎಂದು ತಿಳಿಸಿದರು.
ವಿಧಾನಸಭೆ ಹಾಗೂ ಪರಿಷತ್ ಕಲಾಪದಲ್ಲಿ ಜುಲೈ 29ರಂದು ಅಂದ್ರೆ ಸೋಮವಾರ ಬೆಳಗ್ಗೆ 10 ಗಂಟೆಗೆ ಅಧಿವೇಶನ ನಡೆಯಲಿದೆ. ಅಂದು ಬಹುಮತ ಸಾಬೀತು ಹಾಗೂ ಹಣಕಾಸು ವಿಧೇಯಕಕ್ಕೆ ಒಪ್ಪಿಗೆ ಪಡೆಯಲು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಇದೇ ವೇಳೆ ಮಾಧ್ಯಮಗಳು ರೈತರ ಸಾಲಮನ್ನಾ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್ ಯಡಿಯೂರಪ್ಪ ಅವರು, ಈ ಕುರಿತು ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು. ಇದಕ್ಕೂ ಮುನ್ನ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದರು.