Tag: ನೆಹರೂ ತಾರಾಲಯ

  • ಬಾನಂಗಳದಲ್ಲಿ ಚಂದ್ರಗ್ರಹಣ ಗೋಚರ; ವಿಸ್ಮಯ ಕಣ್ತುಂಬಿಕೊಂಡ ಜನ

    ಬಾನಂಗಳದಲ್ಲಿ ಚಂದ್ರಗ್ರಹಣ ಗೋಚರ; ವಿಸ್ಮಯ ಕಣ್ತುಂಬಿಕೊಂಡ ಜನ

    ಬೆಂಗಳೂರು: ಚಂದ್ರನ (Lunar Eclipse) ಮೇಲೆ ಭೂಮಿಯ ಬೆಳಕು ಬೀಳುವುದೇ ಚಂದ್ರಗ್ರಹಣ (Chandra Grahan). ಇಂದು (ಭಾನುವಾರ) ಸಂಭವಿಸಿದ ಅಪರೂಪದ ಚಂದ್ರಗ್ರಹಣ ಆಗಸದಲ್ಲಿ ವಿಸ್ಮಯ ಮೂಡಿಸಿತು. ನಭೋಮಂಡಲದಲ್ಲಿ ಸಂಭವಿಸಿದ ಈ ವಿಸ್ಮಯವನ್ನು ಜನರು ಕಣ್ತುಂಬಿಕೊಂಡು ಖುಷಿಪಟ್ಟರು.

    ಭಾನುವಾರ ನಸುಕಿನ 1:04 ಗಂಟೆಗೆ ಸರಿಯಾಗಿ ಪಾರ್ಶ್ವ ಗ್ರಹಣ ಗೋಚರಿಸಿತು. 1:44 ಗಂಟೆಗೆ ಮಧ್ಯ ಕಾಲ ಗ್ರಹಣ ಹಾಗೂ 2:22 ಗಂಟೆಗೆ ಮೋಕ್ಷ ಕಾಲ ಗ್ರಹಣ ಗೋಚರಿಸಿತು. 3:55 ಗಂಟೆಗೆ ಸಂಪೂರ್ಣವಾಗಿ ಗ್ರಹಣ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ. ಇದನ್ನೂ ಓದಿ: ಸಮೋಸ, ಬಾಳೆಹಣ್ಣು ತಿಂದು 2023ರ ಚಂದ್ರಗ್ರಹಣಕ್ಕೆ ಸ್ವಾಗತ – ಪ್ರಗತಿಪರರಿಂದ ವಿನೂತನ ಜಾಗೃತಿ

    ಇಂದು ಸಿಗಿ ಹುಣ್ಣಿಮೆಯ ಪರ್ವ ದಿನ. ರಾತ್ರಿ ರಾಹುಗ್ರಸ್ಥ, ಖಂಡಗ್ರಾಸ ಚಂದ್ರಗ್ರಹಣ ಸಂಭವಿಸಿತು. ಪಶ್ಚಿಮ ಬಂಗಾಳ ಸೇರಿ ದೇಶದ ವಿವಿಧೆಡೆ ಚಂದ್ರಗ್ರಹಣ ಗೋಚರಿಸಿತು. ಯುರೋಪ್, ಆಫ್ರಿಕಾ ಖಂಡದಲ್ಲಿ ಚಂದ್ರಗ್ರಹಣ ಭಾಗಶಃ ಗೋಚರಿಸಿತು. ಶರದ್‌ಪೂರ್ಣಿಮೆಯಂದು ಗಜಕೇಸರಿ ಯೋಗದಲ್ಲಿ ಈ ಚಂದ್ರಗ್ರಹಣ ಸಂಭವಿಸಿದೆ. 30 ವರ್ಷಗಳಿಗೊಮ್ಮೆ ಇಂತಹ ಚಂದ್ರಗ್ರಹಣ ಸಂಭವಿಸಲಿದೆ.

    ಬೆಂಗಳೂರಿನ ನೆಹರೂ ತಾರಾಲಯ, ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಚಂದ್ರಗ್ರಹಣ ವೀಕ್ಷಣೆಗೆ ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ರಾತ್ರಿಯಾಗಿದ್ದರೂ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿ ದೂರದರ್ಶಕದ ಮೂಲಕ ಚಂದ್ರಗ್ರಹಣ ವಿಸ್ಮಯವನ್ನು ಕಣ್ತುಂಬಿಕೊಂಡರು. ದೂರದರ್ಶಕದ ಮೂಲಕ ಗುರುಗ್ರಹ, ಶನಿಗ್ರಹ ಮತ್ತು ಚಂದ್ರನನ್ನು ವೀಕ್ಷಿಸಿದರು. ಬರಿಗಣ್ಣಿನಿಂದಲೂ ಅನೇಕರು ಗ್ರಹಣ ವೀಕ್ಷಣೆ ಮಾಡಿದರು. ಈ ಗ್ರಹಣ ವೀಕ್ಷಣೆಗೆ ವಿಶೇಷ ಮುಂಜಾಗ್ರತಾ ಕ್ರಮಗಳ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದರು. ಇದನ್ನೂ ಓದಿ: ಚಂದ್ರಗ್ರಹಣದ ವೇಳೆಯೇ ಬಾಗಿಲು ತೆರೆದ ಉಡುಪಿ ಶ್ರೀಕೃಷ್ಣ ಮಠ

    ಗ್ರಹಣದ ಹಿನ್ನೆಲೆಯಲ್ಲಿ ಹಲವೆಡೆ ದೇವಾಲಯಗಳು ಬಂದ್‌ ಆಗಿದ್ದವು. ಆದರೆ ಉಡುಪಿ ಶ್ರೀಕೃಷ್ಣ ಮಠ ತೆರೆದಿತ್ತು. ಅಲ್ಲದೇ ಮೌಢ್ಯ ವಿರೋಧಿಸಿ ಮೂಢನಂಬಿಕೆ ವಿರೋಧಿ ಒಕ್ಕೂಟದವರು ಸಮೋಸ ತಿಂದು ಚಂದ್ರಗ್ರಹಣಕ್ಕೆ ಸ್ವಾಗತ ಕೋರಿದರು. ಗ್ರಹಣದಂದು ಯಾವುದೇ ಆಹಾರ ಸೇವಿಸಬಾರದು ಎಂಬ ಆಚರಣೆಯನ್ನು ಈ ವೇಳೆ ಅಲ್ಲಗಳೆದರು. ನಟ ಚೇತನ್‌ ದಂಪತಿ ಕೂಡ ಈ ಮೌಢ್ಯ ವಿರೋಧಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮೋಸ, ಬಾಳೆಹಣ್ಣು ತಿಂದು 2023ರ ಚಂದ್ರಗ್ರಹಣಕ್ಕೆ ಸ್ವಾಗತ – ಪ್ರಗತಿಪರರಿಂದ ವಿನೂತನ ಜಾಗೃತಿ

    ಸಮೋಸ, ಬಾಳೆಹಣ್ಣು ತಿಂದು 2023ರ ಚಂದ್ರಗ್ರಹಣಕ್ಕೆ ಸ್ವಾಗತ – ಪ್ರಗತಿಪರರಿಂದ ವಿನೂತನ ಜಾಗೃತಿ

    ಬೆಂಗಳೂರು: ರಾತ್ರಿ ನಭೋಮಂಡಲದಲ್ಲಿ ಸಂಭವಿಸಿದ ಚಂದ್ರಗ್ರಹಣದ (Lunar Eclipse) ವಿಸ್ಮಯವನ್ನು ಹಲವು ಪ್ರಗತಿಪರರು ಆಹಾರ ಸೇವನೆ ಮಾಡುತ್ತಾ ಚಂದ್ರಗ್ರಹಣ ವೀಕ್ಷಣೆ ಮಾಡಿದ್ದಾರೆ. ʻಖಗೋಳ ವಿಸ್ಮಯ ಚಂದ್ರಗ್ರಹಣ ಸಂಭ್ರಮಿಸೋಣ, ಮೂಡನಂಭಿಕೆ ಅಳಿಸೋಣ, ಮಾನವೀಯತೆ ಉಳಿಸೋಣ, ವಿಜ್ಞಾನದೆಡೆಗೆ ನಮ್ಮ ನಡಿಗೆʼ ಎಂಬ ಘೋಷವಾಕ್ಯದೊಂದಿಗೆ ಸಮೋಸ (Samosa), ಬಾಳೆಹಣ್ಣು ತಿನ್ನುತ್ತಾ 2023ರ ಚಂದ್ರಗ್ರಹಣಕ್ಕೆ ಸ್ವಾಗತ ಕೋರಿದರು.

    ಇಲ್ಲಿನ ಚಾಲುಕ್ಯ ವೃತ್ತದ ಬಳಿಯಿರುವ ಬಸವಣ್ಣ ಪ್ರತಿಮೆ (Basavanna Statue) ಮುಂದೆ ಜಮಾಯಿಸಿದ್ದ ಹಲವು ಪ್ರಗತಿಪರರು ʻಗ್ರಹಣದ ಸಮಯದಲ್ಲಿ ಊಟ ಮಾಡಬಾರದುʼ ಅನ್ನೋ ಜೋತಿಷಿಗಳ ನಂಬಿಕೆಗೆ ಸೆಡ್ಡು ಹೊಡೆದು ಆಹಾರ ಸೇವನೆ ಮಾಡಿದರು. ಗ್ರಹಣದ ಸಮಯದಲ್ಲಿ ಊಟ ಮಾಡಬಾರದು ಅನ್ನೋದು ಮೌಢ್ಯ, ಅದನ್ನ ವಿರೋಧಿಸಿ ಚಂದ್ರಗ್ರಹಣ ಸಂಭ್ರಮಿಸೋಣ ಎಂದು ಪ್ರಗತಿಪರರು ಕರೆ ನೀಡಿದ್ದಾರೆ. ನಟ ಚೇತನ್‌ ದಂಪತಿ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಮೂಢನಂಬಿಕೆ ವಿರೋಧಿ ಒಕ್ಕೂಟದಿಂದ ವಿಜ್ಞಾನದೆಡಗೆ ನಮ್ಮ ನಡಿಗೆ ಘೋಷವಾಕ್ಯದೊಂದಿಗೆ ಗ್ರಹಣದ ಬಗ್ಗೆ ಮೌಢ್ಯ ಬೇಡವೆಂದು ನೆಹರೂ ತಾರಾಲಯದಲ್ಲಿ (Nehru Planetarium) ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿತು. ಇದನ್ನೂ ಓದಿ: ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಗ್ರಹಣ ವೀಕ್ಷಣೆಗೆ ಅಡ್ಡಿಯಾದ‌ ಮೋಡ: ಇನ್ನೂ ಚಂದ್ರಗ್ರಹಣ ವೀಕ್ಷಣೆಗೆ ಮೋಡ ಅಡ್ಡಿಯುಂಟು ಮಾಡಿದೆ. ನಸುಕಿನ 1:04 ಗಂಟೆಗೆ ಪೂರ್ಣ ಪ್ರಮಾಣದ ಗ್ರಹಣ ಆರಂಭವಾಗಿತ್ತು. 1 ಗಂಟೆ 30 ನಿಮಿಷಗಳ ವರೆಗೂ ಗ್ರಹಣ ಗೋಚರವಾಗುತ್ತಿತ್ತು. ಆ ನಂತರ ಸ್ಬಲ್ಪ ಸಮಯ ಮೋಡ ಅಡ್ಡಿಯಾಗಿದ್ದರಿಂದ ಗ್ರಹಣ ವೀಕ್ಷಣೆಗೂ ಅಡಚಣೆಯುಂಟಾಗಿತ್ತು. ಇದನ್ನೂ ಓದಿ: ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

    Web Stories 
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಬೆಂಗಳೂರು: ಇಂದು (ಭಾನುವಾರ) ರಾತ್ರಿ ನಭೋಮಂಡಲದಲ್ಲಿ ಸಂಭವಿಸಿದ ರಾಹುಗ್ರಸ್ಥ, ಖಂಡಗ್ರಾಸ ಚಂದ್ರಗ್ರಹಣದ (Lunar Eclipse) ವಿಸ್ಮಯವನ್ನು ನೆಹರೂ ತಾರಾಲಯದಲ್ಲಿ (Nehru Planetarium) ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇಸ್ರೋ (ISRO) ಸಿಬ್ಬಂದಿ ಸೇರಿದಂತೆ ಅನೇಕರು ಕಣ್ತುಂಬಿಕೊಂಡರು.

    ಚಂದ್ರಗ್ರಹಣವನ್ನು ಬರಿಗಣ್ಣಿನಿಂದಲೂ ವೀಕ್ಷಣೆ ಮಾಡಬಹುದೆಂದು ವಿಜ್ಞಾನಿಗಳು ಹೇಳಿದ್ದಾರೆ. ಇದರ ಹೊರತಾಗಿಯೂ ನೆಹರೂ ತಾರಾಲಯದಲ್ಲಿ ಟೆಲಿಸ್ಕೋಪ್ ವ್ಯವಸ್ಥೆ ಮಾಡಲಾಗಿದೆ. ಚಂದ್ರನ ಕೌತುಕ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದಲೂ ಶಿಕ್ಷಕರು, ವಿದ್ಯಾರ್ಥಿಲೂ (Students) ನೆಹರೂ ತಾರಾಲಯಕ್ಕೆ ಆಗಮಿಸಿದ್ದರು. ಇದನ್ನೂ ಓದಿ: ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

    ಈ ಸಂತದವನ್ನು `ಪಬ್ಲಿಕ್ ಟಿವಿ’  (Public TV) ಜೊತೆಗೆ ಹಂಚಿಕೊಂಡರು. ಚಂದ್ರಗ್ರಹಣ ವೀಕ್ಷಣೆಯಿಂದ ಸಾಕಷ್ಟು ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡೆವು. ಶಾಲೆಗಳಲ್ಲಿ ಈ ಬಗ್ಗೆ ಮಕ್ಕಳಿಗೆ ಹೆಚ್ಚಿನ ತಿಳಿವಳಿಕೆ ನೀಡಬಹುದು. ಇಷ್ಟು ಹತ್ತಿರದಿಂದ ಚಂದ್ರನನ್ನು ನೋಡುತ್ತಿದ್ದೇವೆ. ಜೊತೆಗೆ ಗುರುಗ್ರಹವನ್ನೂ (Jupiter) ನೋಡುತ್ತಿರುವುದು ಖುಷಿ ಸಿಕ್ಕಿದೆ ಎಂದು ಹಾವೇರಿಯಿಂದ ಬಂದ ಶಿಕ್ಷಕರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ ಹಿನ್ನೆಲೆ – ರಾಯರ ವೃಂದಾವನಕ್ಕೆ ನಿರಂತರ ಜಲಾಭಿಷೇಕ

    ಇನ್ನೂ ಕೆಲ ಮಕ್ಕಳು, ನಾವು ಪುಸ್ತಕಗಳಲ್ಲಿ ಮಾತ್ರವೇ ಗ್ರಹಣದ ಬಗ್ಗೆ ಓದಿದ್ದೆವು, ಕೇಳಿದ್ದೆವು. ಆದ್ರೆ ಈಗ ಕಣ್ಣಾರೆ ವೀಕ್ಷಿಸುತ್ತಿರುವುದು ವಿಸ್ಮಯವೇ ಅನ್ನಿಸಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೋದಿಯಂತಹ ನಾಯಕ ದೇಶಕ್ಕೆ ಅನಿವಾರ್ಯ.. ಮತ್ತೊಮ್ಮೆ ಮೋದಿ ನಾಯಕತ್ವ ಬೇಕು ಅನ್ನೋದು ತಪ್ಪಲ್ಲ: ಮಂತ್ರಾಲಯ ಶ್ರೀ

    ಚಂದ್ರಗ್ರಹಣ ಕುರಿತು ಮಾಹಿತಿ ನೀಡಿದ್ದ ನೆಹರೂ ತಾರಾಲಯದ ವಿಜ್ಞಾನಿ ಆನಂದ್, ಮಧ್ಯರಾತ್ರಿ ಜಾವ 1:05 ಗಂಟೆಗೆ ಪೂರ್ಣ ಪ್ರಮಾಣದ ಗ್ರಹಣ ಆರಂಭವಾಗಲಿದೆ. 3:05 ಕ್ಕೆ ಮೋಕ್ಷ ಆಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಭೂಮಿಯ ನೆರಳಿನ ಶಂಕು ದೊಡ್ಡದು. ಚಂದ್ರನನ್ನ ಇದು ಆವರಿಸಿಕೊಳ್ಳುತ್ತದೆ. ಚಂದ್ರಗ್ರಹಣ ಎಲ್ಲಾ ದೇಶಗಳಲ್ಲೂ ವೀಕ್ಷಣೆ ಮಾಡಬಹುದು. ಆದರೆ ಪ್ರಮಾಣ ಹೆಚ್ಚುಕಮ್ಮಿ ಇರುತ್ತದೆ. ಚಂದ್ರನ ಒಂದು ಭಾಗ ಮಾತ್ರ ನೆರಳಿನಿಂದ ಆವೃತವಾಗುತ್ತದೆ. 1:05ಕ್ಕೆ ಆರಂಭವಾಗಿ 1:45 ಗಂಟೆಗೆ ದಟ್ಟವಾಗುತ್ತದೆ. ಬೆಂಗಳೂರಿನಲ್ಲಿ 6% ಮಾತ್ರ ಛಾಯೆ ಸುತ್ತುವರಿಯುತ್ತದೆ. ಗರಿಷ್ಟ ಮಟ್ಟದ ಪ್ರಮಾಣ 1:45 ಗಂಟೆಗೆ ತಲುಪುತ್ತದೆ ಎಂದು ವಿವರಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

    ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

    ಬೆಂಗಳೂರು: ಇದು ಪಾರ್ಶ್ವ ಚಂದ್ರಗ್ರಹಣ. ಇದನ್ನು ಎಲ್ಲಾ ದೇಶಗಳಲ್ಲೂ ವೀಕ್ಷಿಸಬಹುದು. ಆದರೆ ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ ಎಂದು ನೆಹರು ತಾರಾಲಯದ ವಿಜ್ಞಾನಿ ಆನಂದ್ ತಿಳಿಸಿದ್ದಾರೆ.

    ಚಂದ್ರಗ್ರಹಣ ಕುರಿತು ಮಾತನಾಡಿದ ಅವರು, ಬೆಳಗಿನ ಜಾವ 1:05 ಗಂಟೆಗೆ ಪೂರ್ಣ ಪ್ರಮಾಣದ ಗ್ರಹಣ ಆರಂಭವಾಗಲಿದೆ. 3:05 ಕ್ಕೆ ಮೋಕ್ಷ ಆಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನೆಹರು ತಾರಾಲಯದಲ್ಲಿ ಬ್ಲಡ್ ಮೂನ್ ಗ್ರಹಣ ವೀಕ್ಷಣೆಗೆ ಅವಕಾಶ

    ಭೂಮಿಯ ನೆರಳಿನ‌ ಶಂಕು ದೊಡ್ಡದು. ಚಂದ್ರನನ್ನ ಇದು ಆವರಿಸಿಕೊಳ್ಳುತ್ತದೆ. ಚಂದ್ರಗ್ರಹಣ ಎಲ್ಲಾ ದೇಶಗಳಲ್ಲೂ ವೀಕ್ಷಣೆ ಮಾಡಬಹುದು. ಆದರೆ ಪ್ರಮಾಣ ಹೆಚ್ಚುಕಮ್ಮಿ ಇರುತ್ತದೆ. ಚಂದ್ರನ ಒಂದು ಭಾಗ ಮಾತ್ರ ನೆರಳಿನಿಂದ ಆವೃತವಾಗುತ್ತದೆ ಎಂದು ವಿವರಿಸಿದ್ದಾರೆ.

    1:05ಕ್ಕೆ ಆರಂಭವಾಗಿ 1:45 ಗಂಟೆಗೆ ದಟ್ಟವಾಗುತ್ತದೆ. ಬೆಂಗಳೂರಿನಲ್ಲಿ 6% ಮಾತ್ರ ಛಾಯೆ ಸುತ್ತುವರಿಯುತ್ತದೆ. ಗರಿಷ್ಟ ಮಟ್ಟದ ಪ್ರಮಾಣ 1:45 ಗಂಟೆಗೆ ತಲುಪುತ್ತದೆ. ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ ಎಂದು ಹೇಳಿದ್ದಾರೆ.

    ಗ್ರಹಣ ವೀಕ್ಷಣೆಗೆ ಬೇರೆ ಸಲಕರಣೆಗಳ ಅಗತ್ಯವಿಲ್ಲ. ಚಂದ್ರಗ್ರಹಣ ಬರಿಗಣ್ಣಿನಿಂದ ನೋಡಬಹುದು. ಟೆಲಿಸ್ಕೋಪ್‌ಗಳ ಅಗತ್ಯ ಇರಲ್ಲ. ಕುತೂಹಲಕ್ಕಾಗಿ ಟೆಲಿಸ್ಕೋಪ್‌ಗಳ ಮೂಲಕ ವೀಕ್ಷಣೆಗೆ ಅವಕಾಶವಿದೆ. ಬೆಳಕಿನ ಮೂಲಕ್ಕೆ ಅಡ್ಡ ಬರುವ ಕಾಯವೇ ಗ್ರಹಣ. ಬೆಳಕು ವ್ಯತ್ಯಾಸಗಳಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಇಂದು ವರ್ಷದ ಕೊನೆಯ ಚಂದ್ರಗ್ರಹಣ- ಮಧ್ಯರಾತ್ರಿ 1 ಗಂಟೆಗೆ ಗ್ರಹಣ ಸ್ಪರ್ಶ

    ಚಂದ್ರನ ಮೇಲೆ ಭೂಮಿ ಹಾದು ಹೋಗುತ್ತದೆ. ಚಂದ್ರನ ದೂರ, ಭೂಮಿ, ಚಂದಿರನ ಅಂತರ ಅಳೆಯಲು ನೆರವಾಗಿದೆ ಈ ಗ್ರಹಣ. ಗ್ರಹಣದ ವೇಳೆ ಪ್ರಾಕೃತಿಕ ವಿಕೋಪಗಳು ಆಗೋದು ಕಾಕತಾಳೀಯ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 50 ಸಾವಿರ ವರ್ಷಕ್ಕೊಮ್ಮೆ ಗೋಚರಿಸುವ ವಿಸ್ಮಯ – ಬೆಂಗಳೂರಲ್ಲಿ ಗೋಚರಿಸಲಿಲ್ಲ ಹಸಿರು ಧೂಮಕೇತು

    50 ಸಾವಿರ ವರ್ಷಕ್ಕೊಮ್ಮೆ ಗೋಚರಿಸುವ ವಿಸ್ಮಯ – ಬೆಂಗಳೂರಲ್ಲಿ ಗೋಚರಿಸಲಿಲ್ಲ ಹಸಿರು ಧೂಮಕೇತು

    ಬೆಂಗಳೂರು: ಮೋಡ ಕವಿದ ವಾತಾವರಣ ಇರೋದ್ರಿಂದ ಬೆಂಗಳೂರಿನಲ್ಲಿ (Bengaluru) ಹಸಿರು ಧೂಮಕೇತುವಿನ (Green Comet) ಗೋಚರ ಸಾಧ್ಯವಾಗಿಲ್ಲ.

    ಗುರುವಾರ ಮುಂಜಾನೆ 5 ಗಂಟೆ ಸುಮಾರಿಗೆ ಹಸಿರು ಧೂಮಕೇತು ಗೋಚರವಾಗಬೇಕಿತ್ತು. ಆದ್ರೆ ಬೆಂಗಳೂರಿನಲ್ಲಿ ದಟ್ಟವಾದ ಮೋಡ ಇರುವುದರಿಂದ ಹಸಿರು ಧೂಮಕೇತು (Green Comet) ಕಣ್ತುಂಬಿಕೊಳ್ಳಲು ಆಗಲಿಲ್ಲ. ಇದನ್ನೂ ಓದಿ: PublicTV Explainer: ಕ್ಷಣ ಕಾಲ ನಿಂತು ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಾ ಭೂಮಿ? – ಭೂಗರ್ಭದ ರಹಸ್ಯ ಬಿಚ್ಚಿಟ್ಟ ವಿಜ್ಞಾನಿಗಳು

    ಸುಮಾರು 50 ಸಾವಿರ ವರ್ಷಗಳ ಹಿಂದೆ ಅಂದ್ರೆ ಶಿಲಾ ಯುಗದ ಸಂದರ್ಭದಲ್ಲಿ ಭೂಮಿಯ ಸಮೀಪದಲ್ಲಿ ಹಾದು ಹೋಗಿದ್ದ ಹಸಿರು ಧೂಮಕೇತು ಮತ್ತೊಮ್ಮೆ ಭೂಮಿಯ ಸಮೀಪಕ್ಕೆ ಬಂದಿದೆ. ಆಕಾಶದಲ್ಲಿ ಸಂಭವಿಸುವ ಕೌತುಕವನ್ನು ಬರಿಗಣ್ಣಿನಿಂದ ಕಣ್ತುಂಬಿಕೊಳ್ಳಬಹುದು ಎಂದು ನಾಸಾ (NASA) ತಿಳಿಸಿದೆ. ಉತ್ತರ ಧ್ರುವ ನಕ್ಷತ್ರ, ಸಪ್ತರ್ಷಿ ಮಂಡಲದ ಮಧ್ಯೆ ಇದು ಕಂಡುಬರಲಿದೆ.

    ಭೂಮಿಗೆ 42 ಮಿಲಿಯನ್ ಕಿ.ಮೀ. ನಷ್ಟು ಸನಿಹಕ್ಕೆ ಈ ಗ್ರೀನ್ ಕಾಮೆಟ್ ಬರಲಿದೆ. ಆದ್ರೆ ಭಾರತದಲ್ಲಿ ಇದು ಬರಿಗಣ್ಣಿಗೆ ಕಾಣುವುದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಬೈನಾಕುಲರ್ ಮೂಲಕ ಇದನ್ನು ವೀಕ್ಷಣೆ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    ಉತ್ತರ ದಿಕ್ಕಿನ ಡ್ರಾಕೊ ನಕ್ಷತ್ರಪುಂಜದ ಸಮೀಪ ಅಥವಾ ಸಪ್ತರ್ಷಿ ಮಂಡಲದ ಸಮೀಪ ಇದನ್ನ ಯಾವುದೇ ದೃಶ್ಯ ಉಪಕರಣಗಳ ಸಹಾಯವಿಲ್ಲದೇ ವೀಕ್ಷಿಸಬಹುದು. ಸೌರವ್ಯೂಹದ ಆಚೆಗಿನ ಕೌಡ್‌ನಿಂದ ಹೊರಬಂದು ಭೂಮಿಯ ಸಮೀಪಕ್ಕೆ ಧೂಮಕೇತು ಬರುತ್ತಿದ್ದು, ಇದಕ್ಕೆ ಹಸಿರು ಧೂಮಕೇತು ಎಂದು ಕರೆಯಲಾಗಿದೆ. ಮಂಜು ಮತ್ತು ಧೂಳಿನಿಂದ ಕೂಡಿರುವ ಈ ಧೂಮಕೇತುವನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ.

    50 ವರ್ಷಗಳ ಹಿಂದೆ ಭೂಮಿ ಸಮೀಪಕ್ಕೆ ಬಂದಿದ್ದ ಈ ಹಸಿರು ಧೂಮಕೇತು, 2022ರ ಮಾರ್ಚ್ ತಿಂಗಳಲ್ಲಿ ಮೊದಲ ಬಾರಿಗೆ ವೀಕ್ಷಿಸಲಾಗಿತ್ತು. ಬುಧವಾರ ರಾತ್ರಿ 7 ಗಂಟೆಯಿಂದ ಗುರುವಾರ ಮುಂಜಾನೆ 4 ಗಂಟೆಯ ತನಕ ಇದು ಗೋಚರಿಸುತ್ತಿತ್ತು. ಈ ಧೂಮಕೇತುವಿಗೆ `C/2022 E3 (ZTF)’ ಎಂದು ಹೆಸರಿಡಲಾಗಿದೆ.

    ಬುಧವಾರ ಹಾಗೂ ಗುರುವಾರ ಹಸಿರು ಧೂಮಕೇತುವನ್ನು, ಬೆಳಗಿನ ಜಾವ 5 ಗಂಟೆವರೆ ಬೈನಾಕೂಲರ್ ಮೂಲಕ ಕಣ್ತುಂಬಿಕೊಳ್ಳಬಹುದಿತ್ತು ಎಂದು ನೆಹರೂ ತಾರಾಲಯದ (Jawaharlal Nehru Planetarium) ಹಿರಿಯ ವಿಜ್ಞಾನಿ (Scientist) ಡಾ. ಆನಂದ್ ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k