Tag: ನೆಹರು ಓಲೇಕಾರ್

  • ನನ್ನ ಮೇಲಿನ ಆರೋಪವನ್ನು ಓಲೇಕಾರ್ ಸಾಬೀತು ಮಾಡಲಿ: ಬೊಮ್ಮಾಯಿ

    ನನ್ನ ಮೇಲಿನ ಆರೋಪವನ್ನು ಓಲೇಕಾರ್ ಸಾಬೀತು ಮಾಡಲಿ: ಬೊಮ್ಮಾಯಿ

    ಹಾವೇರಿ: ನೆಹರು ಓಲೇಕಾರ್ (Neharu Olekar) ನನ್ನ ಮೇಲೆ ಆರೋಪ ಮಾಡಿದ್ದನ್ನು ಸಾಬೀತು ಮಾಡಲಿ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ಆದರೆ, ಓಲೇಕಾರ್ ಅವರು ನನ್ನ ಮೇಲಿರುವ ಆರೋಪಗಳ ಬಗ್ಗೆ ಮೊದಲು ಸ್ಪಷ್ಟೀಕರಣ ಕೊಡಲಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಓಲೇಕಾರ್ ವಿರುದ್ಧ ಕಿಡಿ ಕಾರಿದರು.

    ಶನಿವಾರ ಶಿಗ್ಗಾಂವಿಯ (Shiggavi) ತಹಶೀಲ್ದಾರ್ ಕಚೇರಿಯಲ್ಲಿ 2023ರ ಚುನಾವಣೆಗೆ (Election) ನಾಮಪತ್ರ (Nomination Papers) ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಗ್ಗಾಂವಿ ಕ್ಷೇತ್ರದಲ್ಲಿ ನನಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಹಲವಾರು ಬಾರಿ ಶಿಗ್ಗಾಂವಿ ಮತಕ್ಷೇತ್ರದ ಜನರು ಆಶೀರ್ವದಿಸಿ ಬೆಂಬಲಿಸಿದ್ದಾರೆ. ಈ ಬಾರಿಯೂ ಹಿಂದಿನ ದಾಖಲೆಯನ್ನು ಮುರಿದು, ಅತ್ಯಧಿಕ ಮತದಿಂದ ಗೆದ್ದು ಬರುವ ವಿಶ್ವಾಸವಿದೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಸಿಎಂ ರೇಸ್‌ನಲ್ಲಿ ಯಾರ‍್ಯಾರಿದ್ದಾರೆ? – ಎಂ.ಬಿ.ಪಾಟೀಲ್ ಕೊಟ್ರು ಸುಳಿವು 

    ಈ ತಾಲೂಕಿನ ಮತದಾರರು ಪ್ರಬುದ್ಧ ಹಾಗೂ ಜಾಗೃತ ಮತದಾರರಿದ್ದಾರೆ. ಈ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕ್ಷೇತ್ರದ ಜನರು ಮತವನ್ನು ನೀಡಿದ್ದಾರೆ. ಈ ಬಾರಿ ಕಳೆದ ಬಾರಿಗಿಂತಲೂ ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ಎಲ್ಲಾ ವರ್ಗಕ್ಕೂ ಸಮಾನವಾದ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ ಎಂದರು. ಇದನ್ನೂ ಓದಿ: ಮೊಯ್ಲಿ ವಿರೋಧಿ ಮುನಿಯಾಲು ಉದಯ್‌ಗೆ ಕಾಂಗ್ರೆಸ್ ಟಿಕೆಟ್ – ಕಾರ್ಕಳದಲ್ಲಿ ಟೈಟ್ ಫೈಟ್ ಫಿಕ್ಸ್ 

    ಹೊಸ ಕೈಗಾರಿಕೆ, ಟೆಕ್ಸ್ಟೈಲ್ ಪಾರ್ಕ್, ಐಐಟಿ, ಆಯುರ್ವೇದ ಆಸ್ಪತ್ರೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿವೆ. ಹೀಗಾಗಿ ಜನರು ಹಿಂದಿಗಿಂತಲೂ ಹೆಚ್ಚಿನ ಬೆಂಬಲವನ್ನು ಕೊಡುತ್ತಾರೆ. ನಮ್ಮದು ಆಡಳಿತ ಪಕ್ಷವಾಗಿರುವುದರಿಂದ ಆಕಾಂಕ್ಷಿಗಳು ಬಹಳ ಇದ್ದಾರೆ. ಹಾಲಿ ಶಾಸಕರನ್ನು ಬದಲಾವಣೆ ಮಾಡಿದಾಗ ಬಂಡಾಯ ಸಹಜ. ಎರಡು ಮೂರು ದಿನಗಳಲ್ಲಿ ಎಲ್ಲವೂ ಶಮನವಾಗುತ್ತದೆ. ಸದ್ಯದಲ್ಲಿಯೇ ಕೊನೆಯ ಪಟ್ಟಿ ಬಿಡುಗಡೆಯಾಗಲಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸಿದ್ದುಗೆ ಕೋಲಾರ ಟಿಕೆಟ್‌ ಮಿಸ್‌ – ವರುಣಾ ಒಂದೇ ಫಿಕ್ಸ್‌ 

    ಚುನಾವಣೆ ಎಂದರೆ ಕುಸ್ತಿ ಕಣ. ನನ್ನ ಕ್ಷೇತ್ರದಲ್ಲಿ ಎದುರಾಳಿ ಯಾರೇ ಬರಲಿ ಪ್ರತಿಸ್ಪರ್ಧಿ ಗಟ್ಟಿಯಾಗಿದ್ದರೆ ಚುನಾವಣೆ ಚೆನ್ನಾಗಿ ನಡೆಯುತ್ತದೆ. ನನ್ನ ವಿಶ್ವಾಸ ನನ್ನ ಕ್ಷೇತ್ರದ ಜನರ ಮೇಲಿದೆ. ಹತ್ತು ಹಲವರು ಪೈಪೋಟಿ ಮಾಡಿದರೂ ಜನರು ನನಗೆ ಬೆಂಬಲ ಕೊಡುತ್ತಾರೆ. ಏಪ್ರಿಲ್ 19ರಂದು ಇನ್ನೊಂದು ಬಾರಿ ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಆ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ (J.P.Nadda) ಅವರು ಆಗಮಿಸಲಿದ್ದಾರೆ ಎಂದರು. ಇದನ್ನೂ ಓದಿ: ಬಿಜೆಪಿಯವರಿಂದಲೇ ಕಾಂಗ್ರೆಸ್ ಸೇರುವ ವಾತಾವರಣ ನಿರ್ಮಾಣ: ಲಕ್ಷ್ಮಣ ಸವದಿ

  • ನೆಹರು ಓಲೇಕಾರ್‌ಗೆ ಸಚಿವ ಸ್ಥಾನ ನೀಡುವಂತೆ ನೀರಿನ ಟ್ಯಾಂಕ್ ಏರಿದ ಅಭಿಮಾನಿಗಳು

    ನೆಹರು ಓಲೇಕಾರ್‌ಗೆ ಸಚಿವ ಸ್ಥಾನ ನೀಡುವಂತೆ ನೀರಿನ ಟ್ಯಾಂಕ್ ಏರಿದ ಅಭಿಮಾನಿಗಳು

    ಹಾವೇರಿ: ಶಾಸಕ ನೆಹರು ಓಲೇಕಾರ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಇಬ್ಬರು ಅಭಿಮಾನಿಗಳು ನೀರಿನ ಟ್ಯಾಂಕ್ ಏರಿದ ಘಟನೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದ ಬಳಿ ನಡೆದಿದೆ.

    ನೀರಿನ ಟ್ಯಾಂಕ್ ಏರಿದ ಅಭಿಮಾನಿಗಳನ್ನು ಭೀಮನಗೌಡ ಮತ್ತು ಚಂದ್ರಶೇಖರ್ ಎಂದು ಗುರುತಿಸಲಾಗಿದ್ದು, ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದ ನಿವಾಸಿಗಳು ಎನ್ನಲಾಗಿದೆ.

    ಶಾಸಕ ಓಲೇಕಾರ ಪರ ಘೋಷಣೆ ಕೂಗುತ್ತಾ, ಬಿಜೆಪಿ ಬಾವುಟ ಹಿಡಿದು, ಟ್ಯಾಂಕ್ ಮೇಲೆ ನಿಂತು ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ. ಸಚಿವ ಸ್ಥಾನ ಸಿಗೋವರೆಗೂ ನೀರಿನ ಟ್ಯಾಂಕ್ ನಿಂದ ಕೆಳಗೆ ಇಳಿಯೋದಿಲ್ಲ ಎಂದು ಪಟ್ಟು ಹಿಡಿದಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾವೇರಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಟ್ಯಾಂಕ್ ನಿಂದ ಇಳಿಯುವಂತೆ ಮನವೊಲಿಕೆ ಮಾಡಿದರು.

    ಸ್ಥಳಕ್ಕೆ ತಹಶೀಲ್ದಾರ್ ಗಿರೀಶ್ ಸ್ವಾದಿ ಹಾಗೂ ಪಿಎಸ್‍ಐ ಹೊಸಮನಿ ಭೇಟಿ ನೀಡಿ ಮನವೊಲಿಕೆ ನಂತರ ಟ್ಯಾಂಕ್‍ನಿಂದ ಇಬ್ಬರು ಕೆಳಗೆ ಇಳಿದರು. ತಹಶೀಲ್ದಾರ್ ಗಿರೀಶ್ ಸ್ವಾದಿ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾಗೆ ಮನವಿ ಸಲ್ಲಿಸಿದರು. ನೆಹರು ಓಲೇಕಾರ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.

  • ಸ್ವಾಮೀಜಿ ಆಗಿದ್ದೀರಿ ಗೌರವದಿಂದ ಇರಿ, ಇಲ್ಲಾ ಖಾವಿ ಬಿಚ್ಚಿ ರಾಜಕೀಯ ಮಾಡಿ: ನೆಹರು ಓಲೇಕಾರ್

    ಸ್ವಾಮೀಜಿ ಆಗಿದ್ದೀರಿ ಗೌರವದಿಂದ ಇರಿ, ಇಲ್ಲಾ ಖಾವಿ ಬಿಚ್ಚಿ ರಾಜಕೀಯ ಮಾಡಿ: ನೆಹರು ಓಲೇಕಾರ್

    – ಅಲ್ಪ ಮತ ತೆಗೆದುಕೊಂಡು ಸಮಾಜ ತಲೆ ತಗ್ಗಿಸುವಂತೆ ಮಾಡಬೇಡಿ

    ಚಿತ್ರದುರ್ಗ: ಸ್ವಾಮೀಜಿ ಆಗಿದ್ದೀರಿ ಗೌರವದಿಂದ ಇರಿ, ಇಲ್ಲಾ, ಖಾವಿ ಬಿಚ್ಚಿ ಹಾಕಿ ರಾಜಕೀಯ ಮಾಡಿ ಎಂದು ರಾಜ್ಯ ಪರಿಶಿಷ್ಠ ಪಂಗಡ ಹಾಗೂ ಪರಿಶಿಷ್ಠ ಜಾತಿ ಆಯೋಗದ ಅಧ್ಯಕ್ಷ ನೆಹರು ಓಲೇಕರ್ ಅವರು ಛಲವಾದಿ ಗುರುಪೀಠದ ಶ್ರೀಬಸವ ನಾಗೀದೇವ ಸ್ವಾಮೀಜಿ ಅವರಿಗೆ ಹೇಳಿದರು.

    ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲೆಯ ಛಲವಾದಿ ಸಮುದಾಯದ ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ರಾಜಕೀಯ ಮಾಡುವುದಾದರೆ ಖಾವಿ ಬಿಚ್ಚಿ ಹಾಕಿ, ರಾಜಕೀಯ ಮಾಡಿ. ಖಾವಿ ಹಾಕಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪ ಪ್ರಮಾಣದ ಮತ ತೆಗೆದುಕೊಂಡು ಸಮಾಜ ತಲೆ ತಗ್ಗಿಸುವ ಕೆಲಸ ಮಾಡಬೇಡಿ. ಖಾವಿ ಹಾಕಿ ರಾಜಕೀಯ ಮಾಡಿದರೆ ನಮಗೆ ನಾಚಿಕೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

    ರಾಜಕೀಯ ಸುಲಭವಾದ ಕೆಲಸ ಅಲ್ಲ. ತಲೆ ತಗ್ಗಿಸುವ ಕೆಲಸ ಮಾಡಬೇಡಿ. ಮಾಡಿದರೆ ನಿಮ್ಮ ಮೇಲಿನ ಗೌರವ ಕಡಿಮೆ ಆಗಲಿದೆ. ಸ್ವಾಮೀಜಿ ಆಗಿ ಸಮಾಜವನ್ನು ಕಟ್ಟುವ ಕೆಲಸ ಮಾಡಿ, ಕೆಳಮಟ್ಟದ ಸಮುದಾಯವನ್ನು ಮೇಲೆ ಎತ್ತಿ. ಸಾಮಾಜಿಕ, ಶೈಕ್ಷಣಿಕ ಹಾಗೂ ಅರ್ಥಿಕವಾಗಿ ಬೆಳೆಸಿದರೆ ನಿಮ್ಮ ಜನರೆ ನಿಮ್ಮನ್ನು ಗೌರವಿಸುತ್ತಾರೆ ಎಂದರು. ಇದಕ್ಕೆ ವೇದಿಕೆಯಲ್ಲಿ ಸಾನಿಧ್ಯ ವಹಿಸಿ ಕುಳಿತಿದ್ದ ಶ್ರೀ ಬಸವ ನಾಗೀದೇವ ಸ್ವಾಮೀಜಿ ಮೌನ ವಹಿಸಿ ತಲೆಯಾಡಿಸಿದರು.

    ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಹೆಚ್.ಸಿ.ನಿರಂಜನಮೂರ್ತಿ, ನಿವೃತ್ತ ಪೊಲೀಸ್ ಅಧೀಕ್ಷಕ ಎನ್.ರುದ್ರಮುನಿ, ಜಿ.ಪಂ.ಮುಖ್ಯ ಲೆಕ್ಕ ಅಧೀಕ್ಷಕ ಓಂಕಾರಪ್ಪ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ ದ್ರಾವಿಡ್, ಗುರುಮೂರ್ತಿ, ಯಶವಂತ್, ತಿಪ್ಪೇಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.

  • ನಾನು ಹಿರಿಯ, ಸಚಿವ ಸ್ಥಾನದ ಆಕಾಂಕ್ಷಿ: ಶಾಸಕ ನೆಹರು ಓಲೇಕಾರ್

    ನಾನು ಹಿರಿಯ, ಸಚಿವ ಸ್ಥಾನದ ಆಕಾಂಕ್ಷಿ: ಶಾಸಕ ನೆಹರು ಓಲೇಕಾರ್

    -ಆಂತರಿಕವಾಗಿ ಮಾತಾಡ್ತಾರೆ, ಬಹಿರಂಗವಾಗಿ ಯಾರೂ ಹೇಳ್ತಿಲ್ಲ

    ಹಾವೇರಿ: ನಾನು ಸಹ ಪಕ್ಷದಲ್ಲಿಯ ಹಿರಿಯ ನಾಯಕರಲ್ಲಿ ಒಬ್ಬ. ಹಾಗಾಗಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಬಿಜೆಪಿಯ ಹಾವೇರಿ ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.

    ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಪಕ್ಷದಲ್ಲಿಯ ಹಿರಿಯರು ಶಮನ ಮಾಡುತ್ತಾರೆ. ನಾನು ಪರಿಶಿಷ್ಠ ಜಾತಿಯ ಬಲಗೈ ಮುಖಂಡ. ರಾಜ್ಯದಲ್ಲಿ ಬಲಗೈ ಸಮುದಾಯಕ್ಕೆ ಇದುವರೆಗೂ ಸಿಕ್ಕಿಲ್ಲ. ಮುಖ್ಯಮಂತ್ರಿಗಳು ನಮ್ಮ ಸಮುದಾಯಕ್ಕೆ ಅವಕಾಶ ನೀಡುತ್ತೇನೆ ಎಂದು ಹೇಳಿದ್ದಾರೆ. ಎಲ್ಲರೂ ಸಚಿವರಾಗಲು ನಾನಾ ತಂತ್ರಗಳನ್ನು ಮಾಡುತ್ತಿದ್ದು, ಅದು ಹೊರಗಡೆ ಭಿನ್ನಾಭಿಪ್ರಾಯದ ರೀತಿಯಲ್ಲಿ ಕಾಣಿಸುತ್ತಿದೆ. ಹಿರಿಯರ ಮಧ್ಯಸ್ಥಿಕೆಯಲ್ಲಿ ಎಲ್ಲವೂ ಶಮನವಾಗಲಿದೆ ಎಂದು ಹೇಳಿದರು.

    ಅಧಿಕಾರ ಬೇಕೆಂದಾಗ ಭಿನ್ನಾಭಿಪ್ರಾಯ ಉಂಟಾಗೋದು ಸಹಜ. ತಮಗೆ ಸಚಿವ ಸ್ಥಾನ ನೀಡಲಿಲ್ಲ ಅಂದ್ರೆ ಯಡಿಯೂರಪ್ಪನವರನ್ನು ಕೆಳಗೆ ಇಳಿಸ್ತೀವಿ ಅಂತಾ ಕೆಲವರು ಆಂತರಿಕವಾಗಿ ಹೇಳ್ತಾರೆ. ಆದ್ರೆ ಯಾರು ಅದನ್ನು ಬಹಿರಂಗವಾಗಿ ಹೇಳುತ್ತಿಲ್ಲ. ಹಿರಿಯ ನಾಯಕರಿಗೆ ಸಂಪುಟದಲ್ಲಿ ಸ್ಥಾನ ನೀಡಿ, ಅಸಮರ್ಥರನ್ನು ಕೈಬಿಡಬೇಕು. ಮುಂದಿನ ದಿನಗಳಲ್ಲಿ ಉಮೇಶ್ ಕತ್ತಿಯವರಿಗೂ ಸಚಿವ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ನನಗೂ ಸಚಿವ ಸ್ಥಾನ ನೀಡುವಂತೆ ಕೇಳುತ್ತೇನೆ – ಹಾವೇರಿ ಶಾಸಕ ನೆಹರು ಓಲೇಕಾರ

    ನನಗೂ ಸಚಿವ ಸ್ಥಾನ ನೀಡುವಂತೆ ಕೇಳುತ್ತೇನೆ – ಹಾವೇರಿ ಶಾಸಕ ನೆಹರು ಓಲೇಕಾರ

    ಹಾವೇರಿ: ಕಳೆದ ಬಾರಿ ಸಚಿವ ಸ್ಥಾನದ ಅವಕಾಶ ಸಿಕ್ಕಿಲ್ಲ. ಈ ಬಾರಿ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ ಹೇಳಿದ್ದಾರೆ.

    ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ನಾಲ್ಕನೇ ಬಾರಿಗೆ ಸಿಎಂ ಆಗ್ತಿರೋದು ಸಂತಸ ತಂದಿದೆ. ಕಳೆದ ಬಾರಿ ಸಚಿವನಾಗುವ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಬಿ.ಎಸ್.ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

    ವಿಶ್ವಾಸ ಮತಯಾಚನೆ ನಂತರ ಸಚಿವರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ರಾಷ್ಟ್ರೀಯ ನಾಯಕರ ಸೂಚನೆಯಂತೆ ಯಡಿಯೂರಪ್ಪನವರ ಮಂತ್ರಿಮಂಡಲ ರಚನೆಯಾಗಲಿದೆ. ಪರಿಶಿಷ್ಟ ಜಾತಿಯ ಬಲಗೈ ಸಮುದಾಯದನಾದ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಕಳೆದ ಬಾರಿ ಸಚಿವ ಸ್ಥಾನದ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸವಿದೆ. ನನಗೆ ಸಚಿವಸ್ಥಾನ ನೀಡುವಂತೆ ಸಮುದಾಯದ ಅನೇಕರು ಈಗಾಗಲೇ ಒತ್ತಡ ತಂದಿದ್ದಾರೆ ಎಂದು ತಿಳಿಸಿದರು.

    ವಿಶ್ವಾಸ ಮತಯಾಚನೆ ನಂತರ ಯಡಿಯೂರಪ್ಪನವರನ್ನು ಭೇಟಿ ಮಾಡಿ ಸಚಿವಸ್ಥಾನ ನೀಡುವಂತೆ ಕೇಳುತ್ತೇನೆ. ಆದರೆ ಸಚಿವಸ್ಥಾನ ಸಿಕ್ಕರು, ಸಿಗದಿದ್ದರೂ ಬಿಎಸ್‍ವೈ ಜೊತೆಗಿರುತ್ತೇನೆ. ಜಿಲ್ಲೆಯಲ್ಲಿ ಶಾಸಕರಾದ ಬಿ.ಸಿ.ಪಾಟೀಲ, ಆರ್.ಶಂಕರ, ಬಸವರಾಜ ಬೊಮ್ಮಾಯಿ ಹಾಗೂ ಸಂಸದ ಸಿ.ಎಂ.ಉದಾಸಿ ಇದ್ದಾರೆ. ಹೆಚ್ಚು ಪ್ರಭಾವಿ ಶಾಸಕರಿರುವುದರಿಂದ ಸಚಿವಸ್ಥಾನ ಹಂಚಿಕೆ ಬಹಳ ಜಟಿಲವಾಗಿದೆ. ಆದರೂ ಸಮುದಾಯಕ್ಕೆ ಮಂತ್ರಿಸ್ಥಾನ ಕೊಡಿ ಎಂಬ ಬೇಡಿಕೆಯನ್ನಷ್ಟೇ ಇಡುತ್ತೇನೆ ಎಂದರು.