ನೆಲಮಂಗಲ: ಬೆಳಗಾವಿಯಿಂದ ಬೆಂಗಳೂರಿನ ಖಸಾಯಿಖಾನೆಗೆ ಸಾಗಾಟ ಆಗ್ತಿದ್ದ ಜಾನುವಾರುಗಳನ್ನು ಭಜರಂಗದಳದವರು ರಕ್ಷಣೆ ಮಾಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ನಗರದ ನವಯುಗ ಟೋಲ್ ಬಳಿ ಜಾನುವಾರುಗಳ ತುಂಬಿದ ಲಾರಿ ಸಂಚಾರ ಮಾಡುವ ನಿಖರ ಮಾಹಿತಿ ಮೇರೆಗೆ ಭಜರಂಗದಳದ ಕಾರ್ಯಕರ್ತರು ವಾಹನವನ್ನು ತಡೆದಿದ್ದಾರೆ. ಇದನ್ನೂ ಓದಿ: ಬಸ್ ಪಲ್ಟಿ- ಪ್ರಯಾಣಿಕರಿಗೆ ಗಂಭೀರ ಗಾಯ
ವಾಹನದಲ್ಲಿ ಸುಮಾರು 45 ಜಾನುವಾರುಗಳು ಪತ್ತೆಯಾಗಿವೆ. ಲಾರಿಯಲ್ಲಿದ್ದ ಜಾನುವಾರುಗಳನ್ನು ಲಾರಿ ಸಹಿತ ನೆಲಮಂಗಲ ಟೌನ್ ಪೊಲೀಸರ ವಶಕ್ಕೆ ನೀಡಲಾಗಿದೆ. ಪೊಲೀಸರ ವಶದಲ್ಲಿದ್ದ ಲಾರಿ ಕೆಲ ಹೊತ್ತಲ್ಲೆ ಹಾಸನ ರಸ್ತೆಯ ಟೋಲ್ ಬಳಿ ಪ್ರತ್ಯಕ್ಷವಾಗಿದ್ದು, ಪೊಲೀಸ್ ಇಲಾಖೆಯೇ ಜಾನುವಾರುಗಳನ್ನು ಸಾಗಾಣೆ ಮಾಡಲು ಸಾಥ್ ಕೊಟ್ಟಿದೆಯಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಇದನ್ನೂ ಓದಿ: ಕೆಲಸಕ್ಕೆ ಹಾಜರಾಗಿ – ಪೊಲೀಸರಿಗೆ ತಾಲಿಬಾನ್ ಕಮಾಂಡರ್ಗಳಿಂದ ಕರೆ
ಬೆಂಗಳೂರು/ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲದ ಅಂಚೆಪಾಳ್ಯದ ಬಳಿ ನಮ್ಮ ಮೆಟ್ರೋ ನಿಲ್ದಾಣ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು.
ನಿರ್ಮಾಣ ಹಂತದಲ್ಲಿರುವ ಪಿಲ್ಲರ್ ಗಳನ್ನ ಏರಿದ ಯುವಕರು ಮಹಾತ್ಮ ಗಾಂಧಿಜೀ ಹಾಗೂ ಅಂಬೇಡ್ಕರ್ ಫೋಟೋಗಳನ್ನ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಇತ್ತ ನೂರಾರು ಸಂಖ್ಯೆಯಲ್ಲಿ ಸೇರಿದ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ತಡೆಯಲು ಮುಂದಾದರು. ಈ ಹಿಂದೆ ನಮ್ಮ ಮೆಟ್ರೋ ಅಧಿಕಾರಿಗಳು ಅಂಚೆಪಾಳ್ಯದ ಬಳಿ ಮೆಟ್ರೋ ನಿಲ್ದಾಣ ಮಾಡುವ ಭರವಸೆ ನೀಡಿದ್ದರು. ಆದರೆ ಏಕಾಏಕಿ ರಸ್ತೆ ಹಾಗೂ ನಿಲ್ದಾಣವನ್ನ ಸಹ ಮಾಡುವುದಿಲ್ಲ ಎಂಬುದಕ್ಕೆ ಆಕ್ರೋಶಗೊಂಡು ಗ್ರಾಮಸ್ಥರು ಮೆಟ್ರೋ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಸ್ಥಳದಲ್ಲಿ ಮಾದನಾಯಕನಹಳ್ಳಿ ಪೊಲೀಸರು ಮೊಕ್ಕಾಂ ಹೂಡಿದ್ದು, ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ರಾಷ್ಟ್ರೀಯ ಹೆದ್ದಾರಿ 48ರ ಸರ್ವೀಸ್ ರಸ್ತೆಯಲ್ಲಿ ಕುಳಿತು ಪ್ರತಿಭಟಿಸುತ್ತಿದ್ದ, ಪ್ರತಿಭಟನಾ ಸ್ಥಳಕ್ಕೆ ಬಿಎಂಆರ್ ಸಿಎಲ್ ಎಂಡಿ ಬರುವಂತೆ ಆಗ್ರಹಿಸುತ್ತಿದ್ದರು. ಪ್ರತಿಭಟನೆಯಲ್ಲಿ ಮಹಿಳೆಯರು ಸಹ ಭಾಗಿಯಾಗಿದ್ದು, ಪಟ್ಟುಬಿಡದೇ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೂಡಲೇ ಪೊಲೀಸರು ಟ್ರಾಫಿಕ್ ನಿಯಂತ್ರಣಕ್ಕೆ ತಂದರು. ಇದನ್ನೂ ಓದಿ: ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್ – ಅಂತರಾಷ್ಟ್ರೀಯ ಷಡ್ಯಂತ್ರ ಎಂದ ಕಂಗನಾ
ಸ್ಥಳಕ್ಕೆ ನೆಲಮಂಗಲ ಉಪ ವಿಭಾಗದ ಡಿವೈಎಸ್ ಪಿ ಜಗದೀಶ್, ನಮ್ಮ ಮೆಟ್ರೋ ಮುಖ್ಯ ಇಂಜಿನಿಯರ್ ಕಲ್ಲಪ್ಪ ಭೇಟಿ ನೀಡಿ ಪ್ರತಿಭಟನಾಕಾರರ ಜೊತೆ ಮಾತನಾಡಿ, ಉನ್ನತ ಅಧಿಕಾರಿಗಳೊಂದಿಗೆ ಮತ್ತೆ ಸಭೆ ನಡೆಸುವ ಭರವಸೆ ನೀಡಿದರು. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದೆ ಉಗ್ರ ರೂಪದಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಇದನ್ನೂ ಓದಿ;ಸಿಂಗಲ್ ಡೋಸ್ ಸ್ಪುಟ್ನಿಕ್ ಲೈಟ್ ವ್ಯಾಕ್ಸಿನ್ ಸೆಪ್ಟೆಂಬರ್ಗೆ ಲಭ್ಯ – ಬೆಲೆ 750 ರೂ.
ಬೆಂಗಳೂರು: ಕೊರೊನ ಎರಡನೇ ಅಲೆಯಲ್ಲಿ ಅಂಬ್ಯುಲೆನ್ಸ್ ಗಳ ಕೊರತೆ, ದುಪ್ಪಟ್ಟು ಹಣ ಪೀಕಲಾಟ ಸಮಸ್ಯೆಗಳ ನಡುವೆ ಕೊರೊನ ಸೋಂಕಿತರಿಗೆ ಯಾವುದೇ ಸಮಸ್ಯೆಯಾಗದಂತೆ ಸೋಂಕಿತರ ನೆರವಿಗೆ ಧಾವಿಸಿ, ಉಚಿತ ಸೇವೆ ನೀಡಲು ದಾನಿಗಳು ತಾಲೂಕಿಗೆ ಅಂಬ್ಯುಲೆನ್ಸ್ ನೀಡಿದ್ದರು. ಆದರೆ ಇದೀಗ ಕಿಡಿಗೇಡಿಗಳು ಆ ಅಂಬ್ಯುಲೆನ್ಸ್ ಗೆ ಕಲ್ಲು ತೂರಾಟ ನಡೆಸಿರುವ ಘಟನೆ ನೆಲಮಂಗಲದಲ್ಲಿ ವರದಿಯಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕುಣಿಗಲ್ ಬೈಪಾಸ್ ಬಳಿ ಅಂಬ್ಯುಲೆನ್ಸ್ ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ನೆಲಮಂಗಲ ನಗರದ ಪುರಸಭೆ ಮಾಜಿ ಅಧ್ಯಕ್ಷ ನಾರಾಯಣ ಗೌಡ ಕೊರೊನ ಸಂದರ್ಭದಲ್ಲಿ ಉಂಟಾಗಿದ್ದ ಅಂಬ್ಯುಲೆನ್ಸ್ ಸಮಸ್ಯೆಯನ್ನು ಗಮನಿಸಿ ಜಿಲ್ಲೆಯ ಸೋಂಕಿತರಿಗೆ ಉಚಿತವಾಗಿ ಸೇವೆಗಾಗಿ ಅಂಬ್ಯುಲೆನ್ಸ್ ದಾನ ನೀಡಿದ್ದರು. ಇದನ್ನೂ ಓದಿ:ಅಂಬ್ಯುಲೆನ್ಸ್ ಚಾಲಕನ ಒಂದು ಸುಳ್ಳಿಗೆ ಸೋಂಕಿತ ಮಹಿಳೆ ಬಲಿ
ಇದೀಗ ಕಿಡಿಗೇಡಿಗಳ ಅವಾಂತರದಿಂದಾಗಿ ಕೊರೊನ ಸೋಂಕಿತರಿಗೆ ಉಚಿತ ಸೇವೆ ನೀಡುತಿದ್ದ ಅಂಬ್ಯುಲೆನ್ಸ್ ನ ಮುಂಭಾಗದ ಗಾಜು ಪುಡಿಪುಡಿಯಾಗಿದ್ದು, ಕಿಡಿಗೇಡಿಗಳು ಯಾರು ಇಲ್ಲದ ವೇಳೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಘಟನೆಗೆ ಯಾವುದೇ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಬೆಂಗಳೂರು: ಕಳೆದ ಎರಡು ದಿನದ ಹಿಂದೆ ಮನೆಯ ಬಳಿ ಆಟವಾಡುತಿದ್ದ ಪ್ರೀತಿಯ ಶ್ವಾನ ನಾಪತ್ತೆಯಾಗಿದ್ದು, ಮುದ್ದಿನ ಶ್ವಾನ ಕಳೆದು ಹೋಗಿದಕ್ಕೆ ಕುಟುಂಬಸ್ಥರು ಬೇಸರಗೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಇತ್ತ ಸಹಪಾಠಿ ಗುಂಡನ ನಾಪತ್ತೆಯಿಂದ ಉಳಿದ ಶ್ವಾನಗಳು ಸಹ ಊಟ ಮಾಡದೆ ನೀರು ಕುಡಿಯದೇ ಮಂಕಾಗಿ ಹೋಗಿವೆ. ಬೆಂಗಳೂರು ಹೊರವಲಯ ನೆಲಮಂಗಲ ನಗರದ ಹರ್ಷ ಕ್ಯಾಂಪಸ್ ನಿಂದ ಶ್ವಾನ ನಾಪತ್ತೆಯಾಗಿದೆ. ಹರ್ಷ ವಿದ್ಯಾಸಂಸ್ಥೆಗಳ ಮಾಲೀಕ ಶಿವಕುಮಾರ್ ಅವರ ಸಾಕು ನಾಯಿ ಗುಂಡ ನಾಪತ್ತೆಯಾಗಿದೆ.
ಕಳೆದ ಒಂದೂವರೆ ವರ್ಷದಿಂದ ಗುಂಡನನ್ನು ಶಿವಕುಮಾರ್ ಮುದ್ದಾಗಿ ಸಾಕಿದ್ದರು. ಬಿಳಿ, ಕಪ್ಪು ಬಣ್ಣದ ಗುಂಡ ಕಳೆದ ಶನಿವಾರದಿಂದ ನಾಪತ್ತೆಯಾಗಿದ್ದಾನೆ. ಹೀಗಾಗಿ ಹುಡುಕಿ ಕೊಟ್ಟವರಿಗೆ 10,000 ಇನಾಮು ನೀಡಲು ತೀರ್ಮಾನ ಮಾಡಿದ್ದಾರೆ. ಶ್ವಾನದ ಮಾಲೀಕ ಯಶಸ್ ಮಾತನಾಡಿ ಪ್ಲೀಸ್ ಯಾರಿಗಾದರೂ ಸಿಕ್ಕಿದರೆ ನಮಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು: ತನ್ನ ಮಗ ಅಂತರ್ಜಾತಿ ವಿವಾಹವಾಗಿರುವುದ್ದಕ್ಕೆ ಗ್ರಾಮಸ್ಥರು ನಿಂದನೆ ಮಾಡುತ್ತಿದ್ದರಿಂದ ಮನನೊಂದ ತಂದೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿರುವ ತಂದೆಯನ್ನು ನೆಲಮಂಗಲ ತಾಲೂಕಿನ ಆನಂದ್ ನಗರದ ನಿವಾಸಿ 53 ವರ್ಷದ ಕೃಷ್ಣಪ್ಪ ಎಂದು ಗುರುತಿಸಲಾಗಿದೆ. ಮಗ ಶಿವಕುಮಾರ್, ಬೇರೆ ಜಾತಿಯ ಕಿರಣ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ಮದುವೆಗೆ ವಿರೋಧ ಮಾಡಿದ್ದ ಗ್ರಾಮಸ್ಥರು ಕೃಷ್ಣಪ್ಪನನ್ನು ನಿಂದಿಸಿದ್ದಾರೆ.
ಗ್ರಾಮಸ್ಥರ ನಿಂದನೆಯಿಂದ ಬೇಸತ್ತಿದ್ದ ಕೃಷ್ಣಪ್ಪ ಗ್ರಾಮಸ್ಥರ ವಿರುದ್ಧ ನೊಂದು ಡೆತ್ ನೋಟ್ ಬರೆದು ವಿಷ ಸೇವನೆ ಮಾಡಿದ್ದಾರೆ. ತೀವ್ರ ಅಸ್ವಸ್ಥ ಆಗಿದ್ದ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.