Tag: ನೆರೆ ವೀಕ್ಷಣೆ

  • ಊರಿಗೆ ಊರೇ ಕೊಚ್ಚಿಹೋದ್ರೂ 2 ನಿಮಿಷದಲ್ಲಿ ನೆರೆ ವೀಕ್ಷಣೆ – ಅಶೋಕ್ ಕಾಟಾಚಾರದ ವಿಸಿಟ್

    ಊರಿಗೆ ಊರೇ ಕೊಚ್ಚಿಹೋದ್ರೂ 2 ನಿಮಿಷದಲ್ಲಿ ನೆರೆ ವೀಕ್ಷಣೆ – ಅಶೋಕ್ ಕಾಟಾಚಾರದ ವಿಸಿಟ್

    – ಫೋಟೋಗೆ ಪೋಸ್ ಕೊಟ್ಟು ಎಸ್ಕೇಪ್

    ಯಾದಗಿರಿ: ಕಂದಾಯ ಸಚಿವ ಆರ್ ಅಶೋಕ್ ಅವರು ಯಾವುದೇ ಹಾನಿಯಾಗದ ಪ್ರದೇಶಕ್ಕೆ ಭೇಟಿ ನೀಡುವ ಮೂಲಕ ಕಾಟಚಾರದ ವಿಸಿಟ್ ಮಾಡಿರುವುದು ರೈತರ ಅಕ್ರೋಶಕ್ಕೆ ಕಾರಣವಾಗಿದೆ.

    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಗ್ರಾಮದ ಭತ್ತ ಬೆಳೆದ ಪ್ರದೇಶ ವೀಕ್ಷಣೆ ಮಾಡಿದ್ದು ಈ ಪ್ರದೇಶವು ಕಳೆದ ವರ್ಷ ಕೃಷ್ಣಾ ನದಿಯ ಪ್ರವಾಹಕ್ಕೆ ಬೆಳೆ ಹಾನಿಯಾಗಿತ್ತು. ಆದರೆ ಈ ತಿಂಗಳು ಕೃಷ್ಣಾ ಪ್ರವಾಹ ಹಾಗೂ ಮಳೆಯಿಂದ ಹಾನಿಯಾದ ಪ್ರದೇಶ ವೀಕ್ಷಣೆ ಮಾಡದ್ದಕ್ಕೆ ಜಿಲ್ಲೆಯ ರೈತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೇವಲ ಎರಡು ನಿಮಿಷದಲ್ಲಿ ದೇವಾಪೂರ ಗ್ರಾಮದಲ್ಲಿ ಭತ್ತದ ಬೆಳೆ ವೀಕ್ಷಣೆ ಮಾಡಿ ವಾಪಸ್ ತೆರಳಿದ್ದಾರೆ.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ್, ಬೆಳೆ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್‍ಎಫ್) ನಿಯಮದ ಪ್ರಕಾರ ರೈತರಿಗೆ ಬೆಳೆ ಪರಿಹಾರ ನೀಡಲಾಗುತ್ತದೆ. 4 ಸಾವಿರ ಕೋಟಿ ರೂ ಪರಿಹಾರದ ಹಣ ನೀಡಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದರು.