Tag: ನೆರೆಮನೆ ವ್ಯಕ್ತಿ

  • ಮನೆಗೆ ನುಗ್ಗಿ ಗನ್ ತೋರಿಸಿ 14ರ ಬಾಲಕಿಯ ಅತ್ಯಾಚಾರ

    ಮನೆಗೆ ನುಗ್ಗಿ ಗನ್ ತೋರಿಸಿ 14ರ ಬಾಲಕಿಯ ಅತ್ಯಾಚಾರ

    – ರಾತ್ರಿ ಗೋಡೆ ಹಾರಿ ಬಂದ ಪಕ್ಕದ್ಮನೆ ವ್ಯಕ್ತಿ

    ಲಕ್ನೋ: ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬ ಗೋಡೆ ಹಾರಿ ನೆರೆಮನೆಗೆ ನುಗ್ಗಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.

    ಬಾಲಕಿ ತನ್ನ ಕುಟುಂಬಸ್ಥರ ಜೊತೆ ಮಲಗಿದ್ದಳು. ರಾತ್ರಿ ಮನೆಗೆ ನುಗ್ಗಿದ ಕಾಮುಕ ದೇಶಿ ಗನ್ ತೋರಿಸಿ ಬೆದರಿಸಿ ಅತ್ಯಾಚಾರ ನಡೆಸಿದ್ದಾನೆ. ಬಾಲಕಿ ಸಹಾಯಕ್ಕಾಗಿ ಕಿರುಚಿಕೊಂಡಾಗ ಕುಟುಂಬಸ್ಥರು ಕಾಮುಕನನ್ನ ಹಿಡಿದು ಥಳಿಸಿದ್ದಾರೆ.

    ಘಟನೆ ಸಂಬಂಧ ಬಾಲಕಿ ಪೋಷಕರು ನೋಯ್ಡಾ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನ ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.