Tag: ನೆಮ್ಮಾರ್ ಸೀಮೆ

  • ಮಲೆನಾಡಿನಲ್ಲಿ ನಿಲ್ಲದ ವರುಣನ ಆರ್ಭಟ – ಮಳೆ ದೇವನಿಗೆ ಸ್ಥಳೀಯರಿಂದ ವಿಶೇಷ ಪೂಜೆ

    ಮಲೆನಾಡಿನಲ್ಲಿ ನಿಲ್ಲದ ವರುಣನ ಆರ್ಭಟ – ಮಳೆ ದೇವನಿಗೆ ಸ್ಥಳೀಯರಿಂದ ವಿಶೇಷ ಪೂಜೆ

    ಚಿಕ್ಕಮಗಳೂರು: ಕಾಫಿನಾಡು ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರಿದ ಪರಿಣಾಮ ಸ್ಥಳೀಯರು ಮಳೆ ದೇವನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರ ದೇವರಿಗೆ ನೆಮ್ಮಾರ್ ಸೀಮೆಯವರು ವಿಶೇಷ ಪೂಜೆ ಸಲ್ಲಿಸಿ ಮಳೆ ನಿಲ್ಲುವಂತೆ ಬೇಡಿಕೊಂಡಿದ್ದಾರೆ. ಕಿಗ್ಗಾದ ಋಷ್ಯಶೃಂಗೇಶ್ವರ ಮಳೆ ಬೇಕು ಅಂದಾಗ ಸುರಿಸೋ, ಬೇಡವೆಂದಾಗ ನಿಲ್ಲಿಸೋ ಮಳೆ ದೇವರು ಎಂದೇ ಪ್ರಸಿದ್ಧಿ ಹೊಂದಿದೆ. ಇದನ್ನೂ ಓದಿ:  ʼಬೆಲ್ಲದ ದೋಸೆʼ ಮಾಡುವ ಸೂಪರ್‌ ವಿಧಾನ 

    ಪ್ರಸ್ತುತ ಶೃಂಗೇರಿಯಲ್ಲಿ ವಾಡಿಕೆಗಿಂತ ಡಬಲ್ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಕಾಫಿ, ಮೆಣಸು, ಅಡಿಕೆಗೆ ಕೊಳೆಯುವ ರೋಗದ ಭೀತಿ ಜನರಲ್ಲಿ ಆವರಿಸಿದೆ. ಪರಿಣಾಮ ಸ್ಥಳೀಯರು ಅತಿವೃಷ್ಟಿ ನಿವಾರಿಸೋ ಎಂದು ಋಷ್ಯಶೃಂಗನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಈ ದೇವನಿಗೆ ಅತಿವೃಷ್ಟಿ-ಅನಾವೃಷ್ಟಿ ವೇಳೆ ಸರ್ಕಾರವೇ ಪೂಜೆ ಸಲ್ಲಿಸಿದೆ.

    Live Tv
    [brid partner=56869869 player=32851 video=960834 autoplay=true]