Tag: ನೆಪೋಟಿಸಂ

  • ರಾತ್ರಿ ಅಳುತ್ತಿದ್ದೆ, ಬೆಳಗ್ಗೆ ಪ್ರಾರ್ಥಿಸುತ್ತಿದ್ದೆ: ಕರಾಳ ದಿನಗಳ ನೆನೆದ ವಿದ್ಯಾ ಬಾಲನ್

    ರಾತ್ರಿ ಅಳುತ್ತಿದ್ದೆ, ಬೆಳಗ್ಗೆ ಪ್ರಾರ್ಥಿಸುತ್ತಿದ್ದೆ: ಕರಾಳ ದಿನಗಳ ನೆನೆದ ವಿದ್ಯಾ ಬಾಲನ್

    ಬಾಲಿವುಡ್ ನಲ್ಲಿರುವ ನೆಪೋಟಿಸಂ (Nepotism) ಬಗ್ಗೆ ನಟಿ ವಿದ್ಯಾ ಬಾಲನ್ ಮಾತನಾಡಿದ್ದಾರೆ. ನನಗೆ ಯಾರೇ ತೊಂದರೆ ಕೊಟ್ಟರೂ ನಾನು ಇಲ್ಲಿಯೇ ಇರುವೆ ಎಂದಿದ್ದಾರೆ. ಮೂರು ವರ್ಷಗಳಿಂದ ನನಗೆ ಯಾವುದೇ ಅವಕಾಶ ಸಿಗಲಿಲ್ಲ. ಬಂದಿರೋ ಆಫರ್ ಹಾಗೆಯೇ ಹೋಗಿ ಬಿಡುತ್ತಿತ್ತು. ಆ ದಿನಗಳಲ್ಲಿ ರಾತ್ರಿ ಅಳುತ್ತಿದ್ದೆ, ಮತ್ತೆ ಬೆಳಗ್ಗೆ ಎದ್ದಾಗ ಪ್ರಾರ್ಥಿಸುತ್ತಿದ್ದೆ. ಈಗ ನೆಮ್ಮದಿಯಾಗಿ ನಿದ್ದೆ ಮಾಡುತ್ತಿರುವ ಎಂದಿದ್ದಾರೆ ವಿದ್ಯಾ ಬಾಲನ್.

    ಮೊದಲಿನಿಂದಲೂ ತಮ್ಮನ್ನು ಹತ್ತಿಕ್ಕುವಂತಹ ಕೆಲಸವನ್ನು ಹಲವರು ಮಾಡುತ್ತಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ. ಒಂದು ಕಡೆ ಬಾಲಿವುಡ್ ನವರಿಂದ ವಿದ್ಯಾ ತೊಂದರೆಗೆ ಒಳಗಾಗುತ್ತಿದ್ದರೆ, ಇನ್ನೊಂದು ಕಡೆ ಇವರ ಹೆಸರಿನಲ್ಲಿ ಮೋಸ ಮಾಡುವಂತಹ ಕೆಲಸ ಕೂಡ ನಡೆದಿದೆ.

    ನಟ ನಟಿಯರ ಹಾಗೂ ಅವರ ಸಂಸ್ಥೆಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ಹಣ ದೋಚುವ ಪ್ರಕರಣಗಳು ಒಂದರ ಮೇಲೊಂದು ನಡೆಯುತ್ತಲೇ ಇದೆ. ಈ ಹಿಂದೆ ಸಲ್ಮಾನ್ ಖಾನ್ ಅವರ ನಿರ್ಮಾಣ ಸಂಸ್ಥೆಯ ಹೆಸರಿನಲ್ಲಿ ಇಂಥದ್ದೊಂದು ದೋಖಾ ನಡೆದಿತ್ತು. ಅದಕ್ಕೆ ಸಲ್ಮಾನ್ (Salman Khan) ಸ್ಪಷ್ಟನೆಯನ್ನೂ ನೀಡಿದ್ದರು. ಇದೀಗ ವಿದ್ಯಾ ಬಾಲನ್ (Vidya Balan) ಹೆಸರಿನಲ್ಲೂ ಇಂಥದ್ದೊಂದು ಕೃತ್ಯ ನಡೆದಿದೆ.

    ವಿದ್ಯಾ ಬಾಲನ್ ಹೆಸರಿನಲ್ಲಿ ನಕಲಿ ಸೋಷಿಯಲ್ ಮೀಡಿಯಾ ಖಾತೆ ತೆರೆದು ನಟಿಯ ಹೆಸರಿನಲ್ಲಿ ಹಣ ಮಾಡುತ್ತಿದ್ದಾರಂತೆ.  ಈ ವಿಷಯ ಅವರಿಗೆ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ ವಿದ್ಯಾ ಬಾಲನ್. ಇಂತಹ ಕೃತ್ಯ ಮಾಡುತ್ತಿರುವವರನ್ನು ಬಂಧಿಸಿ, ಸೂಕ್ತ ಕ್ರಮವನ್ನು ತೆಗೆದುಕೊಳ್ಳಲು ಅವರು ಮನವಿ ಮಾಡಿದ್ದಾರೆ.

     

    ತಮ್ಮ ಹೆಸರನ್ನು ಬಳಸಿಕೊಂಡು ಕೆಲವರು ಹಣ ಮಾಡುತ್ತಿದ್ದಾರೆ. ನನ್ನ ಹೆಸರನ್ನು ಅವರು ದುರ್ಬಳಕ್ಕೆ ಮಾಡುತ್ತಿದ್ದಾರೆ. ನನ್ನ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಖಾತೆ ತೆರೆದು ಇಂತಹ ಕೆಲಸ ಮಾಡುತ್ತಿರುವವರನ್ನು ಪತ್ತೆ ಮಾಡಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

  • ರಾಹುಲ್ ಗಾಂಧಿ ಹೆಸರು ಹೇಳಿಯೇ ನೆಪೋಟಿಸಂ ಬಗ್ಗೆ ಧ್ವನಿ ಎತ್ತಿದ ಕಂಗನಾ

    ರಾಹುಲ್ ಗಾಂಧಿ ಹೆಸರು ಹೇಳಿಯೇ ನೆಪೋಟಿಸಂ ಬಗ್ಗೆ ಧ್ವನಿ ಎತ್ತಿದ ಕಂಗನಾ

    ವರೆಗೂ ಬಾಲಿವುಡ್ ನಲ್ಲಿನ ನೆಪೋಟಿಸಂ (Nepotism) ಬಗ್ಗೆ ಮಾತನಾಡುತ್ತಿದ್ದರು ನಟಿ ಕಂಗನಾ ರಣಾವತ್. ಹಿಂದಿ ಸಿನಿಮಾ ರಂಗದಲ್ಲಿನ ನೆಪೋಟಿಸಂ ಬಗ್ಗೆ ಸಾಕಷ್ಟು ಬಾರಿ ಅವರು ಮಾತನಾಡಿದ್ದಾರೆ. ಅದರಿಂದಾಗಿ ಕಷ್ಟವನ್ನೇ ಎದುರಿಸಿದ್ದಾರೆ. ಇದೀಗ ರಾಜಕಾರಣಕ್ಕೂ ಎಂಟ್ರಿ ಕೊಟ್ಟಿರುವ ಕಂಗನಾ, ಇಲ್ಲಿನ ನೆಪೋಟಿಸಂ ಬಗ್ಗೆ ಟೀಕಿಸಿದ್ದಾರೆ.

    ಮೊದಲಿನಿಂದಲೂ ನಾನು ಕಾಂಗ್ರೆಸ್ ಅನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದಕ್ಕೆ ಕಾರಣ ಕುಟುಂಬ ರಾಜಕಾರಣ. ರಾಹುಲ್ ಗಾಂಧಿ (Rahul Gandhi) ಹೆಸರನ್ನು ನೇರವಾಗಿಯೇ ತಗೆದುಕೊಳ್ಳುತ್ತೇನೆ. ಈ ನೆಪೋಟಿಸಂ ಅಂತ್ಯವಾಗಬೇಕು. ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಕಂಗನಾ ರಣಾವತ್ ಕಟು ನುಡಿಯಲ್ಲೇ ಟೀಕೆ ಮಾಡಿದ್ದಾರೆ.

    ದ್ಯ ಲೋಕಸಭಾ ಅಖಾಡದಲ್ಲಿ ಕಸರತ್ತು ಮಾಡುತ್ತಿದ್ದಾರೆ ನಟಿ ಕಂಗನಾ ರಣಾವತ್. ಇದೇ ವೇಳೆಯಲ್ಲಿ ಮಾಧ್ಯಮಗಳ ಜೊತೆಯೂ ಅವರು ಮಾತನಾಡಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಸೂಪರ್ ಸ್ಟಾರ್ ಅನಿಸಿಕೊಂಡ ಶಾರುಖ್ (Shahrukh Khan) ಕೂಡ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಸೋಲುಂಡಿದ್ದಾರೆ. ನಾನು ಮತ್ತು ಶಾರುಖ್ ಈ ಯುಗದ ಕೊನೆಯ ಸೂಪರ್ ಸ್ಟಾರ್ಸ್ ಎಂದು ಬಣ್ಣಿಸಿಕೊಂಡಿದ್ದಾರೆ.

    ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಮಿಂಚಿನ ಸಂಚಾರವನ್ನೂ ಕಂಗನಾ ಕೈಗೊಂಡಿದ್ದಾರೆ.  ಸಖತ್ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರನ್ನು ಭೇಟಿ ಮಾಡಿ ತಮ್ಮ ಕ್ಷೇತ್ರದ ಬಗ್ಗೆ ಹಾಗೂ ರಾಜಕೀಯ ನಡೆಯ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಮಾಹಿತಿಯನ್ನು ಸ್ವತಃ ಅವರೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಕೂಡ ಮಾಡಿಕೊಂಡಿದ್ದಾರೆ.

     

    ಬಿಜೆಪಿ ತನ್ನ ಲೋಕಸಭಾ (Lok Sabha) ಚುನಾವಣೆಯ 5ನೇ ಪಟ್ಟಿ ಘೋಷಣೆ ಮಾಡಿ, ಈ ಪಟ್ಟಿಯಲ್ಲಿ ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut)ಗೆ ತವರು ರಾಜ್ಯ ಹಿಮಾಚಲ ಪ್ರದೇಶದ (Himachal Pradesh) ಮಂಡಿ (Mandi) ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ಕಂಗನಾ ಮಂಡಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿನ  ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ಕೂಡ ಆಡುತ್ತಿದ್ದಾರೆ.

  • ಬಾಲಿವುಡ್ ನಲ್ಲಿ ನೆಪೋಟಿಸಂ: ಮತ್ತೆ ಗುಡುಗಿದ ಕಂಗನಾ ರಣಾವತ್

    ಬಾಲಿವುಡ್ ನಲ್ಲಿ ನೆಪೋಟಿಸಂ: ಮತ್ತೆ ಗುಡುಗಿದ ಕಂಗನಾ ರಣಾವತ್

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಬಾಲಿವುಡ್ ನಲ್ಲಿರುವ ನೆಪೋಟಿಸಂ ಬಗ್ಗೆ ಆಗಾಗ್ಗೆ ಧ್ವನಿ ಎತ್ತುತ್ತಲೇ ಇರುತ್ತಾರೆ. ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ ಪ್ರದಾನ ಬೆನ್ನಲ್ಲೇ ಮತ್ತೆ ನೆಪೋಟಿಸಂ ಮಾಫಿಯಾ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಕೆಲವು ಪ್ರಶಸ್ತಿಗಳ ಕುರಿತಾಗಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ನೇರವಾಗಿ ಅವರು ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಯ ಕುರಿತು ಟೀಕೆ ಮಾಡಿದ್ದಾರೆ.

    ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿಯಲ್ಲಿ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ಅವರಿಗೆ ಅತ್ಯುತ್ತಮ ನಟಿ ಹಾಗೂ ನಟ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಬಗ್ಗೆ ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದು, ಅರ್ಹ ಪ್ರತಿಭೆಗಳಿದ್ದರೂ, ಅವರಿಂದ ಈ ಪ್ರಶಸ್ತಿಯನ್ನು ಕಸಿದುಕೊಳ್ಳಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇಂತಹ ಪ್ರಶಸ್ತಿಗಳಿಂದಾಗಿ ಇನ್ನೂ ನೆಪೋಟಿಸಂ ಜೀವಂತವಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: ಸಿಂಬು ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ನಟಿ ಹನ್ಸಿಕಾ ಮೋಟ್ವಾನಿ

    ಕನ್ನಡದ ರಿಷಬ್ ಶೆಟ್ಟಿ, ಅನುಪಮ್ ಖೇರ್, ದಿ ಕಾಶ್ಮೀರ್ ಫೈಲ್ಸ್, ಆರ್.ಆರ್.ಆರ್ ಸಿನಿಮಾಗಳಿಗೂ ಈ ಬಾರಿ ಪ್ರಶಸ್ತಿ ಬಂದಿದ್ದು, ಅವರನ್ನೆಲ್ಲ ಶ್ಲ್ಯಾಘಿಸಿದ್ದಾರೆ. ನಿಜಕ್ಕೂ ಇಂತಹ ಸಿನಿಮಾ ಮತ್ತು ನಟರಿಗೆ ಪ್ರಶಸ್ತಿ ಬಂದಿರುವುದು ಖುಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಕಂಗನಾ ಬರೆದಿರುವುದು ಪೋಸ್ಟ್ ಗೆ ಸಾಕಷ್ಟು ಕಾಮೆಂಟ್ ಗಳು ಕೂಡ ಬಂದಿವೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನನ್ನಪ್ಪ ನನಗಾಗಿ ಒಂದು ಸಿನಿಮಾ ಮಾಡಿಲ್ಲ – ನೆಪೊಟಿಸಂ ಬಗ್ಗೆ ಅಭಿಷೇಕ್ ಬಚ್ಚನ್ ಮಾತು

    ನನ್ನಪ್ಪ ನನಗಾಗಿ ಒಂದು ಸಿನಿಮಾ ಮಾಡಿಲ್ಲ – ನೆಪೊಟಿಸಂ ಬಗ್ಗೆ ಅಭಿಷೇಕ್ ಬಚ್ಚನ್ ಮಾತು

    – ಕಾಲ್ ಮಾಡಿ ಮಗನಿಗೆ ಅವಕಾಶ ಕೊಡಿಯೆಂದು ಯಾರನ್ನೂ ಕೇಳಿಲ್ಲ

    ಮುಂಬೈ: ನನ್ನಪ್ಪ ನನಗಾಗಿ ಒಂದು ಸಿನಿಮಾ ಮಾಡಿಲ್ಲ ಎಂದು ಹೇಳುವ ಮೂಲಕ ಬಾಲಿವುಡ್ ಬಿಗ್‍ಬಿ ಅಮಿತಾಭ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರು ನೆಪೊಟಿಸಂ ಬಗ್ಗೆ ಮಾತನಾಡಿದ್ದಾರೆ.

    ಇತ್ತೀಚೆಗೆ ಬಾಲಿವುಡ್‍ನಲ್ಲಿ ನೆಪೊಟಿಸಂ (ಸ್ವಜನಪಕ್ಷಪಾತ) ಬಹಳ ಸದ್ದು ಮಾಡುತ್ತಿದೆ. ಅದರಲ್ಲೂ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ, ಬಾಲಿವುಡ್‍ನ ಹಲವಾರು ಮಂದಿ ಮೂವಿ ಮಾಫಿಯಾ ಮತ್ತು ಬಾಲಿವುಡ್ ನೆಪೊಟಿಸಂ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೆಪೊಟಿಸಂ ಹೆಸರು ಬಾಲಿವುಡ್‍ನಲ್ಲಿ ಕೇಳಿ ಬಂದಾಗ ಹಲವಾರು ಮಂದಿ ನಟ ಅಭಿಷೇಕ್ ಬಚ್ಚನ್ ಕಡೆ ಬೊಟ್ಟು ಮಾಡುತ್ತಾರೆ.

    ಈಗ ನೆಪೋಟಿಸಂ ಬಗ್ಗೆ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಭಿಷೇಕ್ ಬಚ್ಚನ್ ಅವರು, ಕೆಲವರು ನೆಪೋಟಿಸಂ ಪದ ಕೇಳಿದ ತಕ್ಷಣ ನನ್ನ ಕಡೆ ಬೊಟ್ಟು ಮಾಡುತ್ತಾರೆ. ಆದರೆ ಇದುವರೆಗೂ ನನ್ನ ಅಪ್ಪ ಯಾವ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಫೋನ್ ಮಾಡಿ ನನ್ನ ಮಗನಿಗೆ ಚಾನ್ಸ್ ಕೊಡಿ ಎಂದು ಕೇಳಿಲ್ಲ. ಜೊತೆಗೆ ಅವರೆಂದು ನನಗಾಗಿ ಒಂದು ಸಿನಿಮಾವನ್ನು ಮಾಡಿಲ್ಲ. ಹೀಗಿದ್ದರೂ ಜನ ನನ್ನ ಕಡೆ ಯಾಕೆ ಬೊಟ್ಟು ಮಾಡುತ್ತಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ಜೊತೆಗೆ ನಮ್ಮದೇ ಸಿನಿಮಾ ನಿರ್ಮಾಣದ ಸಂಸ್ಥೆ ಇದ್ದರೂ ಅದರಲ್ಲಿ ನನ್ನ ಸಿನಿಮಾಗಳನ್ನು ನನ್ನ ತಂದೆ ನಿರ್ಮಾಣ ಮಾಡಿಲ್ಲ. ಆದರೆ ನಾನು ನನ್ನ ಚಿತ್ರ ನಿರ್ಮಾಣ ಸಂಸ್ಥೆಯಿಂದ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದ್ದೇನೆ. ನಮ್ಮ ತಂದೆಯ ಹೆಸರಿನಿಂದ ಬಾಲಿವುಡ್‍ಗೆ ಬರಲು ಸುಲಭ ಆಯ್ತು. ನಿಜ ಆದರೆ ಇಲ್ಲಿ ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ. ಸಿನಿಮಾಗಾಗಿ ಕಷ್ಟಪಟ್ಟಿದ್ದೇನೆ. ಹೀಗಿರುವಾಗ ಇಲ್ಲಿ ನೆಪೊಟಿಸಂ ಹೇಗೆ ಬರುತ್ತದೆ ಎಂದು ಅಭಿಷೇಪ್ ಪ್ರಶ್ನೆ ಮಾಡಿದ್ದಾರೆ.

    ಬಾಲಿವುಡ್‍ನಲ್ಲಿ ಸದ್ಯ ಹಳೆ ಹೀರೋ, ವಿಲನ್, ನಿರ್ಮಾಪಕ ಮತ್ತು ನಿರ್ದೇಶಕರ ಮಕ್ಕಳೇ ಹೆಚ್ಚು ನಟ-ನಟಿಯರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿ ನೆಪೋಟಿಸಂ ಜಾಸ್ತಿ ಹೊರಗಿನಿಂದ ಬರುವ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗುವುದಿಲ್ಲ ಎಂದು ಕೆಲವರು ದೂರುತ್ತಾರೆ.