Tag: ನೆದರ್ಲ್ಯಾಂಡ್ಸ್

  • ಆಕೆ ಧೈರ್ಯಶಾಲಿ – ನೂಪುರ್‌ ಶರ್ಮಾ ಬೆಂಬಲಿಸಿ ವೈಯಕ್ತಿಕ ಸಂದೇಶ ಕಳಿಸಿದ್ದೇನೆಂದ ಡಚ್‌ ನಾಯಕ

    ಆಕೆ ಧೈರ್ಯಶಾಲಿ – ನೂಪುರ್‌ ಶರ್ಮಾ ಬೆಂಬಲಿಸಿ ವೈಯಕ್ತಿಕ ಸಂದೇಶ ಕಳಿಸಿದ್ದೇನೆಂದ ಡಚ್‌ ನಾಯಕ

    ಆಮ್ಸ್ಟರ್ಡ್ಯಾಮ್: ಇಸ್ಲಾಂ ವಿರೋಧಿ ನಿಲುವುಗಳಿಗೆ ಹೆಸರುವಾಸಿಯಾಗಿದ್ದ ಡಚ್ ಬಲಪಂಥೀಯ ನಾಯಕ ಗೀರ್ಟ್ ವೈಲ್ಡರ್ಸ್ (Geert Wilders) ಅವರೀಗ ಮತ್ತೆ ಸುದ್ದಿಯಲ್ಲಿದ್ದಾರೆ.

    ಪ್ರವಾದಿ ಮೊಹಮ್ಮದ್‌ ಪೈಗಂಬರ್‌ (Prophet Mohammed) ಅವರ ಕುರಿತು ಅವಹೇಳಕಾರಿ ಹೇಳಿಕೆ ನೀಡಿ, ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದ ನೂಪುರ್‌ ಶರ್ಮಾ (Nupur Sharma) ಬೆಂಬಲಿಸಿ ಎಕ್ಸ್‌ ಖಾತೆಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ ಮುಖವಾಣಿ; ಕೇರಳದ ʻಜೈಹಿಂದ್‌ ಟಿವಿʼ ಚಾನೆಲ್‌ ಬ್ಯಾಂಕ್‌ ಖಾತೆಗಳು ಫ್ರೀಜ್‌!

    ಧೈರ್ಯಶಾಲಿ ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿ ವೈಯಕ್ತಿಕ ಸಂದೇಶ ಕಳುಹಿಸಿದ್ದೇನೆ ಎಂದು ಗೀರ್ಟ್ ವೈಲ್ಡರ್ಸ್ X ಖಾತೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ ಕಳೆದ ವರ್ಷ ಸಂಸತ್ತಿನ ಚುನಾವಣೆಯಲ್ಲಿ ಗೆಲವು ಸಾಧಿಸಿದ ವೈಲ್ಡರ್ಸ್‌ ನೂಪುರ್‌ ಅವರನ್ನು ಭೇಟಿಯಾಗಲು ಬಯಸುತ್ತೇನೆ ಎಂಬುದಾಗಿಯೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಟಾಪ್‌ 5 ಸಿಎಂಗಳ ಪೈಕಿ ಯೋಗಿ ಆದಿತ್ಯನಾಥ್‌ಗೆ 2 ನೇ ಸ್ಥಾನ- ಮೊದಲನೇಯವರು ಯಾರು?

    ವೈಲ್ಡರ್ಸ್‌ ಎಕ್ಸ್‌ ಖಾತೆಯಲ್ಲಿ ಏನಿದೆ?
    ಸತ್ಯವನ್ನು ಮಾತನಾಡಿದ್ದಕ್ಕಾಗಿ ಇಸ್ಲಾಮಿಸ್ಟ್‌ಗಳಿಂದ ಬೆದರಿಕೆ ಎದುರಿಸುತ್ತಿರುವ ಧೈರ್ಯಶಾಲಿ ನೂಪುರ್‌ ಶರ್ಮಾ ಅವರಿಗೆ ವೈಯಕ್ತಿಕವಾಗಿ ಬೆಂಬಲಿಸುವ ಸಂದೇಶ ಕಳುಹಿಸಿದ್ದೇನೆ. ಪ್ರಪಂಚದಾದ್ಯಂತ ಇರುವ ಸ್ವಾತಂತ್ರ್ಯ ಪ್ರೇಮಿಗಳು ಅವಳನ್ನು ಬೆಂಬಲಿಸಬೇಕು. ಭಾರತಕ್ಕೆ ಭೇಟಿ ನೀಡುವಾಗ ಒಂದು ದಿನ ಅವರನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಗೀರ್ಟ್ ವೈಲ್ಡರ್ಸ್ ಬರೆದುಕೊಂಡಿದ್ದಾರೆ.

    ಈ ಹಿಂದೆಯೂ ಹಾಡಿ ಹೊಗಳಿದ್ದ ವೈಲ್ಡರ್ಸ್‌:
    ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿ ಈ ಹಿಂದೆಯೂ ವೈಲ್ಡರ್ಸ್‌ ಹೊಗಳಿದ್ದರು. ನೂಪುರ್ ಶರ್ಮಾ ಸತ್ಯವನ್ನು ಬಿಟ್ಟು ಬೇರೇನೂ ಮಾತನಾಡದ ವೀರ ಮಹಿಳೆ. ಇಡೀ ಜಗತ್ತು ಅವಳ ಬಗ್ಗೆ ಹೆಮ್ಮೆ ಪಡಬೇಕು. ಅವಳು ನೊಬೆಲ್ ಪ್ರಶಸ್ತಿಗೆ ಅರ್ಹಳು ಎಂದು ಹೇಳಿದ್ದರು. ಇದನ್ನೂ ಓದಿ: ಭಯೋತ್ಪಾದಕರಿಗೆ ಕಾಂಗ್ರೆಸ್‌ ಮುಕ್ತ ಅವಕಾಶ ಕೊಟ್ಟಿದೆ; ಉದಯಪುರ ಟೈಲರ್‌ ಹತ್ಯೆ ಖಂಡಿಸಿದ ಮೋದಿ

  • ನೂಪುರ್ ಶರ್ಮಾ ಬೆಂಬಲಿಸಿದ್ದ ಗೀರ್ಟ್ ವೈಲ್ಡರ್ಸ್‌ಗೆ ಚುನಾವಣೆಯಲ್ಲಿ ಗೆಲುವು – ನೆದರ್ಲೆಂಡ್ಸ್ ಪ್ರಧಾನಿಯಾಗಲು ಸಜ್ಜು

    ನೂಪುರ್ ಶರ್ಮಾ ಬೆಂಬಲಿಸಿದ್ದ ಗೀರ್ಟ್ ವೈಲ್ಡರ್ಸ್‌ಗೆ ಚುನಾವಣೆಯಲ್ಲಿ ಗೆಲುವು – ನೆದರ್ಲೆಂಡ್ಸ್ ಪ್ರಧಾನಿಯಾಗಲು ಸಜ್ಜು

    ಆಮ್ಸ್ಟರ್ಡ್ಯಾಮ್: ಇಸ್ಲಾಂ ವಿರೋಧಿ ನಿಲುವುಗಳಿಗೆ ಹೆಸರುವಾಸಿಯಾಗಿದ್ದ ಡಚ್ ಬಲಪಂಥೀಯ ನಾಯಕ ಗೀರ್ಟ್ ವೈಲ್ಡರ್ಸ್ (Geert Wilders) ಅವರು ನೆದರ್ಲೆಂಡ್ಸ್ (Netherlands) ಸಂಸತ್ತಿನ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ.

    ಚುನಾವಣೆಯಲ್ಲಿ ಗೆದ್ದಿರುವ ಹಿನ್ನೆಲೆ ಗೀರ್ಟ್ ವೈಲ್ಡರ್ಸ್ ನೆದರ್ಲೆಂಡ್ಸ್‌ನ ನೂತನ ಪ್ರಧಾನಿಯಾಗಿ (PM) ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.

    ಈ ಹಿಂದೆ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ವಿವಾದಾತ್ಮಕವಾದ ಹೇಳಿಕೆಗಳನ್ನು ನೀಡಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರನ್ನು ವೈಲ್ಡರ್ಸ್ ಬೆಂಬಲಿಸಿದ್ದರು. ಇದೀಗ ಬಲಪಂಥೀಯ, ಇಸ್ಲಾಂ ವಿರೋಧಿ ಜನಪರವಾದಿ ಗೀರ್ಟ್ ವೈಲ್ಡರ್ಸ್ ಅವರು ವಿಶ್ವ ಸಮರ 2ರ ನಂತರ ಡಚ್ ರಾಜಕೀಯದಲ್ಲಿ ದೊಡ್ಡ ಅಲೆ ಎಬ್ಬಿಸಿದ್ದಾರೆ. ದೇಶದ ಮೊದಲ ಬಲಪಂಥೀಯ ಪ್ರಧಾನಿಯಾಗಲು ಮುಂದಾಗಿದ್ದಾರೆ. ಇದನ್ನೂ ಓದಿ: ಇಂದಿನಿಂದ ಭಾರತ-ಆಸೀಸ್‌ T20 ಸರಣಿ – ODI ನಲ್ಲಿ ಫ್ಲಾಪ್‌ ಆದ್ರೂ T20ಯಲ್ಲಿ ಅಬ್ಬರಿಸ್ತಾರಾ ಸೂರ್ಯ?

    ರಾಷ್ಟ್ರೀಯ ಬ್ರಾಡ್‌ಕಾಸ್ಟರ್ ಎನ್‌ಒಎಸ್ ಪ್ರಕಟಿಸಿರುವ ಸಮೀಕ್ಷೆಯಲ್ಲಿ ಸಂಸತ್ತಿನ ಕೆಳಮನೆಯ 150 ಸ್ಥಾನಗಳಲ್ಲಿ ವೈಲ್ಡರ್ಸ್ ಪಾರ್ಟಿ ಫಾರ್ ಫ್ರೀಡಮ್ 35 ಸ್ಥಾನಗಳನ್ನು ಗೆದ್ದಿದೆ ಎಂದು ಹೇಳಿದೆ. ಇದು ಕಳೆದ ಚುನಾವಣೆಯಲ್ಲಿ ಅವರು ಗೆದ್ದ ಸ್ಥಾನಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಇದನ್ನೂ ಓದಿ: ಉಗ್ರರ ವಿರುದ್ಧ ಎನ್‌ಕೌಂಟರ್‌ – ಕರ್ನಾಟಕ ಮೂಲದ ಕ್ಯಾಪ್ಟನ್‌ ಸೇರಿ ನಾಲ್ವರು ಯೋಧರು ಹುತಾತ್ಮ

  • ಮೋದಿಗೆ ನೆದರ್ಲ್ಯಾಂಡ್ಸ್ ಪ್ರಧಾನಿ ಕೊಟ್ಟ ಗಿಫ್ಟ್ ಏನು ಗೊತ್ತಾ?

    ಮೋದಿಗೆ ನೆದರ್ಲ್ಯಾಂಡ್ಸ್ ಪ್ರಧಾನಿ ಕೊಟ್ಟ ಗಿಫ್ಟ್ ಏನು ಗೊತ್ತಾ?

    ನವದೆಹಲಿ: ಪ್ರಧಾನಿ ಮೋದಿ ಮೂರು ದೇಶಗಳ ಪ್ರವಾಸ ಮುಗಿಸಿ ಬುಧವಾರದಂದು ಭಾರತಕ್ಕೆ ವಾಪಸ್ಸಾಗಿದ್ದಾರೆ.

    ಮೋದಿ ಭಾರತಕ್ಕೆ ಮರಳುವಾಗ ಒಂದು ಸೈಕಲ್ ಕೂಡ ಜೊತೆಯಲ್ಲಿ ತಂದಿದ್ದಾರೆ. ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಮೋದಿಗೆ ಈ ಸೈಕಲ್ ಉಡುಗೊರೆಯಾಗಿ ನೀಡಿದ್ದಾರೆ. ಹೊಸ ಸೈಕಲ್‍ನೊಂದಿಗೆ ತೆಗೆಸಿಕೊಂಡಿರೋ ಫೋಟೋವನ್ನ ಮೋದಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು ಮಾರ್ಕ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

    ತಿಳಿ ನೀಲಿ ಬಣ್ಣದ ಈ ಬಟಾವಸ್ ಸೈಕಲ್‍ನಲ್ಲಿ ಮುಂಭಾಗದಲ್ಲಿರುವ ಎಲ್‍ಇಡಿ ದೀಪವಿದ್ದು, ಇದನ್ನು ಬೆಳಗಿಸಲು ನೆರವಾಗುವಂತೆ ಡೈನಮೋ ಅಳವಡಿಸಲಾಗಿದೆ.

    ನೆದರ್ಲ್ಯಾಂಡ್ಸ್ ನಲ್ಲಿ ಹೆಚ್ಚಾಗಿ ಜನ ಸಾರಿಗೆಗೆ ಸೈಕಲ್ ಬಳಸುತ್ತಾರೆ. ಅಂಕಿ ಅಂಶದ ಪ್ರಕಾರ ಶೇ. 36ರಷ್ಟು ಜನ ಸೈಕಲ್ ಬಳಸಲು ಇಷ್ಟಪಡುತ್ತಾರೆ ಎಂದು ವರದಿಯಾಗಿದೆ. ಅಲ್ಲದೆ ಸ್ವತಃ ಅಲ್ಲಿನ ಪ್ರಧಾನಿ ಮಾರ್ಕ್ ಕೂಡ ಕಚೇರಿಗೆ ಹೋಗಲು ಸೈಕಲ್ ಬಳಸುತ್ತಾರೆಂದು ವರದಿಯಾಗಿದೆ.

    ಮೋದಿ ಪೋರ್ಚುಗಲ್, ಅಮೆರಿಕ ಹಾಗೂ ನೆದರ್ಲ್ಯಾಂಡ್ಸ್ ಗೆ ಭೇಟಿ ನೀಡಿ ಇಂದು ವಾಪಸ್ಸಾಗಿದ್ದಾರೆ. ಇದೇ ಮೊದಲ ಬಾರಿಗೆ ವೈಟ್‍ಹೌಸ್‍ಗೆ ಭೇಟಿ ನೀಡಿದ ಮೋದಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗಾಗಿ ಸುಂದರ ಕೆತ್ತನೆಯುಳ್ಳ ಮರದ ಪೆಟ್ಟಿಗೆಯನ್ನ ಉಡುಗೊರೆಯಾಗಿ ನೀಡಿದ್ರು. ಹಾಗೆ ಮೆಲಾನಿಯಾ ಟ್ರಂಪ್‍ಗಾಗಿ ಕಾಶ್ಮೀರಿ ಶಾಲ್, ಹಿಮಾಚಲ ಪ್ರದೇಶದ ಬೆಳ್ಳಿ ಬ್ರೇಸ್‍ಲೆಟ್, ಟೀ ಹಾಗೂ ಜೇನುತುಪ್ಪವನ್ನ ಉಡುಗೊರೆಯಗಿ ನೀಡಿದ್ದಾರೆ.