Tag: ನೆದರ್‌ಲೆಂಡ್

  • ನೆದರ್ಲೆಂಡ್‌ನಲ್ಲಿ ಮಹಿಳೆಯರು, ಮಕ್ಕಳು, ವಯಸ್ಕರಿಗೂ ಸನ್ ಕ್ರೀಮ್ ಉಚಿತ, ಎಲ್ಲರಿಗೂ ಖಚಿತ – ಏಕೆ ಗೊತ್ತೇ?

    ನೆದರ್ಲೆಂಡ್‌ನಲ್ಲಿ ಮಹಿಳೆಯರು, ಮಕ್ಕಳು, ವಯಸ್ಕರಿಗೂ ಸನ್ ಕ್ರೀಮ್ ಉಚಿತ, ಎಲ್ಲರಿಗೂ ಖಚಿತ – ಏಕೆ ಗೊತ್ತೇ?

    ಆಂಸ್ಟರ್ಡ್ಯಾಮ್: ಹೆಚ್ಚುತ್ತಿರುವ ಚರ್ಮದ ಕ್ಯಾನ್ಸರ್ ಪ್ರಮಾಣ ತಗ್ಗಿಸಲು ನೆದರ್ಲೆಂಡ್ (Netherlands) ವಿಶೇಷ ಉಪಾಯ ಮಾಡಿದೆ. ಬೇಸಿಗೆಯಲ್ಲಿ ಸೂರ್ಯನ ಶಾಖದಿಂದ ರಕ್ಷಣೆ (Sun Protection) ಒದಗಿಸಲು ಎಲ್ಲರಿಗೂ ಉಚಿತವಾಗಿ ಸನ್ ಕ್ರೀಮ್ (Sun Cream) ವಿತರಿಸಲು ಮುಂದಾಗಿದೆ. ಅದಕ್ಕಾಗಿ ದೇಶಾದ್ಯಂತ ಶಾಲೆಗಳು, ವಿಶ್ವವಿದ್ಯಾಲಯಗಳು (Universities), ಉತ್ಸವಗಳು, ಉದ್ಯಾನವನಗಳು, ಕ್ರೀಡಾ ಸ್ಥಳಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಸನ್ ಕ್ರೀಮ್ ವಿತರಕಗಳನ್ನು ಇರಿಸಲಾಗುತ್ತಿದೆ.

    ವಾರಾಂತ್ಯದಲ್ಲಿ ಬ್ರೆಡಾದಲ್ಲಿ ನಡೆದ ಉತ್ಸವದಲ್ಲಿ ಸನ್ ಕ್ರೀಮ್ ವಿತರಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಆಸ್ಟ್ರೇಲಿಯಾದ ಯಶಸ್ವಿ `ಸ್ಲಿಪ್, ಸ್ಲಾಪ್, ಸ್ಲ್ಯಾಪ್’ ಅಭಿಯಾನದಿಂದ ಸ್ಫೂರ್ತಿ ಪಡೆದ ನಂತರ ತನ್ನ ದೇಶದ ಪ್ರಜೆಗಳೂ ಬಿಸಿಲಿನ ವಾತಾವರಣದಲ್ಲಿ ಹೊರಗೆ ಹೋಗುವಾಗ ರಕ್ಷಣಾತ್ಮಕ ಉಡುಪು ಧರಿಸುವುದು, ಸನ್‌ಸ್ಕ್ರೀನ್ ಹಾಗೂ ಟೋಪಿ ಧರಿಸುವಂತೆ ಸೂಚಿಸಿದೆ. ಇಲ್ಲಿನ ಎಲ್ಲ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸುಮಾರು 120 ಪ್ರಾಥಮಿಕ ಶಾಲೆಗಳಿಗೆ ಸನ್ ಕ್ರೀಮ್ ವಿತರಿಸಲು ಹಣ ನೀಡಲು ಯೋಜಿಸಿದೆ.

    ಇಲ್ಲಿನ ವೈದ್ಯಕೀಯ ತಜ್ಞರೂ ಇತ್ತೀಚಿನ ವರ್ಷಗಳಲ್ಲಿ ಜನ ಚರ್ಮದ ಕ್ಯಾನ್ಸರ್ ಪ್ರಕರಣಗಳಿಗೆ ತುತ್ತಾಗುತ್ತಿದ್ದಾರೆ. ಅದಕ್ಕೆ ಸನ್ ಕ್ರೀಮ್ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಡಲತೀರದಲ್ಲಿ ಸೆಕ್ಸ್ ಮಾಡೋದು ಬೇಡ – ಪ್ರವಾಸಿಗರಿಗೆ ಮನವಿ

    ವರದಿಗಳ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಯುರೋಪಿನಾದ್ಯಂತ ಚರ್ಮದ ಕ್ಯಾನ್ಸರ್ ಪ್ರಮಾಣವು ಹೆಚ್ಚುತ್ತಿದೆ. ನೆರೆಯ ಜರ್ಮನಿಯು 2001 ರಿಂದ ಚರ್ಮದ ಕ್ಯಾನ್ಸರ್-ಸಂಬಂಧಿತ ಸಾವುಗಳಲ್ಲಿ 55% ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ನೆದರ್ಲೆಂಡ್ ಸರ್ಕಾರ ತನ್ನ ದೇಶದ ಪ್ರಜೆಗಳಿಗೆ ಉಚಿತವಾಗಿ ಸನ್ ಕ್ರೀಮ್ ವಿತರಿಸಲು ಮುಂದಾಗಿದೆ. ಇದನ್ನೂ ಓದಿ: 14ರ ಹಿಂದೂ ಬಾಲಕಿ ಕಿಡ್ನ್ಯಾಪ್‌ ಮಾಡಿ ಇಸ್ಲಾಂಗೆ ಮತಾಂತರ – ಪೋಷಕರ ಜೊತೆ ಕಳುಹಿಸಲು ಪಾಕ್‌ ಕೋರ್ಟ್‌ ನಿರಾಕರಣೆ

  • ಕಡಲತೀರದಲ್ಲಿ ಸೆಕ್ಸ್ ಮಾಡೋದು ಬೇಡ – ಪ್ರವಾಸಿಗರಿಗೆ ಮನವಿ

    ಕಡಲತೀರದಲ್ಲಿ ಸೆಕ್ಸ್ ಮಾಡೋದು ಬೇಡ – ಪ್ರವಾಸಿಗರಿಗೆ ಮನವಿ

    ಆಂಸ್ಟರ್ಡ್ಯಾಮ್: ದಯವಿಟ್ಟು ಕಡಲತೀರದಲ್ಲಿ ಸೆಕ್ಸ್ ಮಾಡೋದು ಬೇಡ ಎಂದು ನೆದರ್ಲೆಂಡ್‌ನ (Netherland) ಆಂಸ್ಟರ್ಡ್ಯಾಮ್ ಪಟ್ಟಣ ಪ್ರವಾಸಿಗರಿಗೆ (Tourists) ಮನವಿ ಮಾಡಿದೆ. ಇದೇ ಮೊದಲಬಾರಿಗೆ ನೆದರ್‌ ಲ್ಯಾಂಡ್‌ನ ನಗರವೊಂದು ಬೀಚ್‌ ಮತ್ತು ದಿಬ್ಬಗಳಲ್ಲಿ ಸೆಕ್ಸ್‌ ಮಾಡುವುದನ್ನು ನಿಷೇಧಿಸಿದೆ. ದಕ್ಷಿಣ ನೆದರ್‌ಲ್ಯಾಂಡ್‌ನ ವೀರೆ ಎಂಬ ಪಟ್ಟಣವು No Sex On The Beach (ಬೀಚ್‌ನಲ್ಲಿ ಸೆಕ್ಸ್‌ ಬೇಡ) ಎಂಬ ಅಭಿಯಾನ ಕೈಗೊಂಡಿದೆ.

    ವೀರೆ ಮುನ್ಸಿಪಾಲಿಟಿಯು (Veere Municipality) ಬೀಚ್‌ನಲ್ಲಿ ಸೆಕ್ಸ್‌ ನಿಷೇಧದ ಫಲಕಗಳನ್ನ ಅಳವಡಿಸುವ ಮೂಲಕ ಪ್ರವಾಸಿಗರಿಗೂ ತಿಳಿಸಲಾಗುತ್ತಿದೆ. ವಿಶೇಷವಾಗಿ ಮರಳಿನ ದಿಬ್ಬಗಳಲ್ಲಿ ರತಿಕ್ರೀಡೆಗೆ ಅವಕಾಶವಿಲ್ಲ. ಅವುಗಳನ್ನ ಕಾನೂನುಬದ್ಧಗೊಳಿಸಲಾಗಿದೆ. ಮೀಸಲು ಅರಣ್ಯ ಮತ್ತು ಬೀಚ್‌ಗಳಲ್ಲಿ ಸೆಕ್ಸ್‌ ಮಾಡೋದನ್ನ ತಪ್ಪಿಸಲು ಮೇಲ್ವಿಚಾರಣೆ ಹೆಚ್ಚಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಗುರುವಾರ ವೀರೆ ಮುನ್ಸಿಪಾಲಿಟಿ (Netherland Veere Municipality) ಈ ನಿರ್ಣಯ ಕೈಗೊಂಡಿದ್ದು, ಕಡಲ ತೀರಗಳು, ನೈಸರ್ಗಿಕ ಪ್ರದೇಶಗಳು ಹಾಗೂ ಮರಳಿನ ದಿಬ್ಬಗಳಲ್ಲಿ ಸಾರ್ವಜನಿಕ ಲೈಂಗಿಕತೆಯನ್ನ ನಿಷೇಧಿಸಿದೆ. ಇದನ್ನೂ ಓದಿ: ಸೆಕ್ಸ್ ಕೂಡ ಒಂದು ಕೆಲಸ – ಕಾನೂನುಬದ್ಧಗೊಳಿಸಲು ಹೊಸ ಮಸೂದೆ ಮಂಡನೆ

    ಈ ಕುರಿತು ಪ್ರಕಟಣೆ ನೀಡಿರುವ ವೀರೆ ಪಟ್ಟಣದ ಮೇಯರ್ ಫ್ರೆಡೆರಿಕ್ ಶೌವೆನಾರ್‌, ಸ್ಥಳೀಯ ಸಮುದಾಯಕ್ಕೆ ಈ ಮರಳಿನ ದಿಬ್ಬಗಳು ತುಂಬ ಮಹತ್ವದ್ದಾಗಿವೆ. ಹಾಗಾಗಿ ನೈಸರ್ಗಿಕ ಪರಿಸರ ಹಾನಿಗೊಳಿಸುವಂತಹ ಅನಪೇಕ್ಷಿತ ನಡವಳಿಕೆಯಿಂದ ರಕ್ಷಿಸಬೇಕಾದ ಅಗತ್ಯವಿದೆ. ಪ್ರವಾಸಿಗರ ಸೆಕ್ಸ್ ಚಟುವಟಿಕೆಯು ರಜೆ ಆಸ್ವಾದಿಸಲು ಬರುವ ಇತರರಿಗೂ ತೊಂದರೆಯಾಗಬಹುದು. ಈ ನಿರ್ಧಾರವು ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒಂದು ಪ್ರಮುಖ ಹೆಜ್ಜೆಯಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರ ಇನ್ನುಮುಂದೆ ಎಚ್ಚರಿಕೆಗಳನ್ನು ನೀಡುವುದಿಲ್ಲ ಬದಲಿಗೆ, ತ್ವರಿತ ಮೌಖಿಕವಾಗಿ ತಿಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಪ್ರವಾಸಿಗರಿಗೆ ಮಾಹಿತಿ ಒದಗಿಸುವ ಎಂಟು ಹೊಸ ಮಾಹಿತಿ ಫಲಕಗಳನ್ನು ಸ್ಥಾಪಿಸಲಾಗಿದೆ. ಈ ಮಧ್ಯೆ ಸ್ಥಳೀಯ ಆಡಳಿತದ ನಿರ್ಧಾರಕ್ಕೆ ಆಕ್ಷೇಪ ಕೂಡ ವ್ಯಕ್ತವಾಗಿದೆ. ಲೈಂಗಿಕ ನಡವಳಿಕೆಯಿಂದ ಬೆತ್ತಲೆ ಸೂರ್ಯ ಸ್ನಾನ ಪ್ರಕ್ರಿಯೆಯನ್ನು ಪ್ರತ್ಯೇಕಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

    ಬೆತ್ತಲೆ ಸೂರ್ಯ ಸ್ನಾನವು ಲೈಂಗಿಕತೆಯಲ್ಲ ಅದು ಸ್ವಾತಂತ್ರ್ಯದ ಭಾವನೆಯನ್ನು ನೀಡುತ್ತದೆ, ಫೋಟೋಶಾಪ್ ಮಾಡದ ನೈಜ, ಬೆತ್ತಲೆ ದೇಹಗಳನ್ನು ನೋಡುವುದು ತುಂಬಾ ಆರೋಗ್ಯಕರ. ಆದರೆ ನಾವು ಹೊರಾಂಗಣದಲ್ಲಿ ಲೈಂಗಿಕತೆಯಿಂದ ದೂರವಿರುತ್ತೇವೆ ಎಂದು ಸಂಘಟನೆಯೊಂದು ತಿಳಿಸಿದೆ.

  • ಮಂಗಳೂರು ಮುಸ್ಲಿಂ ಯುವಕನನ್ನು ವರಿಸಿದ ನೆದರ್ಲೆಂಡ್ ಕನ್ಯೆ

    ಮಂಗಳೂರು ಮುಸ್ಲಿಂ ಯುವಕನನ್ನು ವರಿಸಿದ ನೆದರ್ಲೆಂಡ್ ಕನ್ಯೆ

    ಮಂಗಳೂರು: ಪ್ರೀತಿ ಎಂಬ ಮಾಯೆಗೆ ಅಂತರವಿಲ್ಲ, ಭಾಷೆ ಬೇಕಿಲ್ಲ ಪ್ರೀತಿಸುವ ಮನಸ್ಸುಗಳಿದ್ದರೆ ಸಾಕು, ಯಾರಿಗೆ, ಯಾವಾಗ, ಯಾರಮೇಲಾದರೂ ಪ್ರೀತಿ ಹುಟ್ಟಬಹುದು. ಇದಕ್ಕೆ ನೆದರ್ಲೆಂಡ್ (Netherland) ಯುವತಿ ಮಂಗಳೂರಿನ (Mangaluru) ಯುವಕ ಪರಸ್ಪರ ಪ್ರೀತಿಸಿ ಮದುವೆಯಾಗಿರುವ ಘಟನೆ ಸಾಕ್ಷಿಯಾಗಿದೆ.

    ಯುವಕ ಮೂಲತಃ ಮಂಗಳೂರಿನವನಾಗಿದ್ದು ನೆದರ್ಲೆಂಡ್‌ನಲ್ಲಿ (Netherland) ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಪ್ರೀತಿಯಾಗಿದ್ದು (Love), ಇಬ್ಬರೂ ಪರಸ್ಪರ ಒಪ್ಪಿಕೊಂಡು ಮದುವೆಯಾಗಿದ್ದಾರೆ (Marriage). ನೆದರ್‌ಲೆಂಡ್ ಯುವತಿ ಮುಸ್ಲಿಂ ಸಂಪ್ರದಾಯದಂತೆಯೇ ಇಲ್ಲಿನ ಸುರತ್ಕಲ್ ನಲ್ಲಿ (Surathkal) ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಯುವತಿ ಕುಟುಂಬಸ್ಥರೂ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ಸಂಭ್ರಮದ ವೀಡಿಯೋ ಜಾಲತಾಣದಲ್ಲಿ (Social Media) ಸದ್ದು ಮಾಡುತ್ತಿದೆ.

    ಮದುವೆ ಬಳಿಕ ಭಾಷೆ ತಿಳಿಯದ ಹುಡುಗನ ಹಿರಿಯಜ್ಜಿ ವಿದೇಶಿಗರ ಜೊತೆ ಮಾತನಾಡಲು ಪ್ರಯತ್ನಿಸಿದ್ದಾರೆ, ಈ ತಮಾಷೆಯ ವೀಡಿಯೋ ತುಣುಕು ನೆಟ್ಟಿಗರಲ್ಲಿ ಹಾಸ್ಯ ತರಿಸಿದೆ. ಇದನ್ನೂ ಓದಿ: ಆಟೋರಾಜನ ಕೈಹಿಡಿದ ಬೆಲ್ಜಿಯಂ ಕನ್ಯೆ – ಹಿಂದೂ ಸಂಪ್ರದಾಯದಂತೆ ಅದ್ದೂರಿ ಮದುವೆ

    ಕಳೆದ ವರ್ಷ ಬೆಲ್ಜಿಯಂ ಕನ್ಯೆಯೊಬ್ಬಳು, ಹಂಪಿಯ ಆಟೋಚಾಲಕ ಯುವಕನನ್ನ ಪ್ರೀತಿಸಿ ಮದುವೆ ಆಗಿದ್ದರು. ಈ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಇದನ್ನೂ ಓದಿ: ಪುತ್ತೂರು ಕಂಬಳದಲ್ಲಿ ಕಿರಿಕ್ – ಸಮಸ್ಯೆ ಪರಿಹಾರಕ್ಕೆ ದೇವರ ಮೊರೆಹೋದ ಕಂಬಳ ಸಮಿತಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಶ್ವಕಪ್‌ನಲ್ಲಿರೋ ಆಟಗಾರರಿಗೆ ಸರಿಯಾಗಿ ಊಟ ಸಿಗ್ತಿಲ್ಲ- ಟೀಂ ಇಂಡಿಯಾ ಬೇಸರ

    ವಿಶ್ವಕಪ್‌ನಲ್ಲಿರೋ ಆಟಗಾರರಿಗೆ ಸರಿಯಾಗಿ ಊಟ ಸಿಗ್ತಿಲ್ಲ- ಟೀಂ ಇಂಡಿಯಾ ಬೇಸರ

    ಮೆಲ್ಬರ್ನ್: ವಿಶ್ವಕಪ್ (T20 WorldCup) ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ (Pakistan) ಹುಟ್ಟಡಗಿಸಿರುವ ಟೀಂ ಇಂಡಿಯಾ (Team India) ಗೆಲುವಿನ ನಗೆ ಬೀರಿದೆ.

    ಅಲ್ಲದೇ ಇಂದು ನೆದರ್‌ಲೆಂಡ್‌ನೊಂದಿಗೆ (Netherlands) ಕಣಕ್ಕಿಳಿಯಲಿದೆ. ಆದರೆ ವಿಶ್ವಕಪ್‌ನಲ್ಲಿರುವ ಆಟಗಾರರಿಗೆ ಸರಿಯಾದ ಊಟ ಸಿಗುತ್ತಿಲ್ಲ ಎಂದು ಟೀಂ ಇಂಡಿಯಾ ಬೇಸರ ವ್ಯಕ್ತಪಡಿಸಿದೆ. ಅತೀ ತಣ್ಣಗಿನ ಹಾಗೂ ಗ್ರಿಲ್ ಮಾಡದ ಸ್ಯಾಂಡ್‌ವಿಚ್ ಹಾಗೂ ಬಟರ್‌ಫ್ರೂಟ್ ಅನ್ನೇ ನೀಡುತ್ತಿದ್ದಾರೆ. ಅದನ್ನು ಹೇಗೆ ತಿನ್ನುವುದು ಎಂದು ಬೇಸರ ಹೊರಹಾಕಿದೆ. ಇದನ್ನೂ ಓದಿ: ಭಾರತ-ಪಾಕ್ ಪಂದ್ಯದಲ್ಲಿ ಕಾಂಟ್ರವರ್ಸಿ – ಗೆಲುವಿನ ಬಳಿಕ ಅಗ್ರೇಸ್ಸಿವ್ ಮೂಡ್‍ನಲ್ಲಿ ದ್ರಾವಿಡ್

    ಇದಕ್ಕೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ (Virender Sehwag), ಸಿಡ್ನಿಯಲ್ಲಿ ನಡೆದ ತರಬೇತಿಯ ಅವಧಿಯ ನಂತರ ಟೀಂ ಇಂಡಿಯಾಕ್ಕೆ ತಣ್ಣಗಿನ ಆಹಾರ ಮತ್ತು ಸ್ಯಾಂಡ್‌ವಿಚ್‌ಗಳನ್ನ, ಫಲಾಫೆಲ್ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ನನ್ನ ತಂದೆ ಬಗ್ಗೆ ಮಾತ್ರ ಯೋಚಿಸುತ್ತೇನೆ – ಗ್ರೌಂಡ್‌ನಲ್ಲೇ ಕಣ್ಣೀರಿಟ್ಟ ಪಾಂಡ್ಯ

    ಪಾಶ್ಚಿಮಾತ್ಯ ದೇಶಗಳು ಎಷ್ಟು ಒಳ್ಳೆಯ ಆತಿಥ್ಯ ನೀಡುತ್ತವೆ ಎಂದು ಭಾವಿಸುವ ದಿನಗಳು ಈಗ ಹೊರಟುಹೋಗಿವೆ. ಅತ್ಯುನ್ನತ ಗುಣಮಟ್ಟದ ಆತಿಥ್ಯ ನೀಡುವ ವಿಷಯದಲ್ಲಿ ಭಾರತ ಮಾತ್ರ ಪಾಶ್ಚಿಮಾತ್ಯ ದೇಶಗಳಿಗಿಂತ ಮುಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ಟೀಂ ಇಂಡಿಯಾ ಇಂದು ನೆದರ್‌ಲೆಂಡ್‌ನೊಂದಿಗೆ ಕಣಕ್ಕಿಳಿಯಲಿದೆ. ಮಧ್ಯಾಹ್ನ 12.30ರ ವೇಳೆ ಆಸ್ಟ್ರೇಲಿಯಾದ ಎಸ್‌ಸಿಜೆ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗಲಿದೆ.

    Live Tv
    [brid partner=56869869 player=32851 video=960834 autoplay=true]