Tag: ನೆಟ್ಟಿಗ

  • ಕನ್ನಡ ಸಿನಿಮಾ ಕಳಪೆ ಎಂದ ನೆಟ್ಟಿಗ – ಚೇತನ್ ಬೆಂಬಲ, ರಕ್ಷಿತ್ ಶೆಟ್ಟಿ ಕಿಡಿ

    ಕನ್ನಡ ಸಿನಿಮಾ ಕಳಪೆ ಎಂದ ನೆಟ್ಟಿಗ – ಚೇತನ್ ಬೆಂಬಲ, ರಕ್ಷಿತ್ ಶೆಟ್ಟಿ ಕಿಡಿ

    ಬೆಂಗಳೂರು: ಕನ್ನಡ ಚಿತ್ರರಂಗ ಕಳಪೆ ಎಂದು ಟ್ವೀಟ್ ಮಾಡಿದ್ದ ವ್ಯಕ್ತಿಯೊಬ್ಬನಿಗೆ ನಟ ಚೇತನ್‍ರವರು ಬೆಂಬಲ ನೀಡಿದ್ದರೆ, ನಟ ರಕ್ಷಿತ್ ಖಡಕ್ ಉತ್ತರ ನೀಡಿದ್ದಾರೆ.

     

    ದಕ್ಷಿಣ ಭಾರತದ ಕೆಟ್ಟ ಚಿತ್ರೋದ್ಯಮ ಕನ್ನಡ ಚಿತ್ರರಂಗದಲ್ಲಿ ಕೊನೆಗೂ ಭರವಸೆ ಮೂಡಿದೆ. ಮರುಭೂಮಿಯಂತಿರುವ ಕನ್ನಡ ಚಿತ್ರರಂಗದಲ್ಲಿ ಚೇತನ್ ಅಹಿಂಸಾರವರು ಮಳೆಯಂತಿದ್ದಾರೆ ಎಂದು ವ್ಯಕ್ತಿ ಟ್ವೀಟ್ ಮಾಡಿದ್ದರು.

    ಇದಕ್ಕೆ ನಟ ಚೇತನ್ ಅಹಿಂಸಾರವರು ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದ. ಬೇರೆ ಸಿನಿಮಾಗಳಂತೆ ಕೆಜಿಎಫ್ ತರಹದ ಅನೇಕ ಉತ್ತಮ ಸಿನಿಮಾಗಳನ್ನು ನಾವು ಮಾಡಿದ್ದೇವೆ. ನೀವು ಆಡಿದ ಮಾತು ಕಟುವಾಗಿದ್ದರೂ ಅದನ್ನು ರಚನಾತ್ಮಕ ಪ್ರತಿಕ್ರಿಯೆ ಎಂದು ಪರಿಗಣಿಸುತ್ತೇವೆ ಎಂದು ರೀ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ಜನ್ರಿಗೆ ಒಳ್ಳೆಯದು ಮಾಡೋಕೆ ಕಾರ್ ಮಾರಲು ತಯಾರಾಗಿದ್ರು ವಿಜಯ್: ಜಗ್ಗೇಶ್

    ಈ ಎರಡು ಟ್ವೀಟ್‍ಗಳನ್ನು ಗಮನಿಸಿದ ರಕ್ಷಿತ್ ಶೆಟ್ಟಿ, ಈ ಚಿತ್ರರಂಗ ನನಗೆ ಹಾಗೂ ಅನೇಕರಿಗೆ ಒಂದು ವೇದಿಕೆ ನೀಡಿದೆ. ಈ ವೇದಿಕೆಯನ್ನು ನನಗಿಂತ ಮುನ್ನ ಅನೇಕ ದಿಗ್ಗಜರು ಕಟ್ಟಿದ್ದಾರೆ. ನಿಮಗೆ ಅವರ ಬಗ್ಗೆ ತಿಳಿದಿಲ್ಲ ಎಂಬುವುದು ನನಗೆ ಗೊತ್ತಿದೆ. ಏನೂ ಇಲ್ಲವಾಗಿದ್ದಾಗ ನನಗೆ ಈ ಚಿತ್ರರಂಗ ಜೀವನ ನೀಡಿದೆ. ಇಲ್ಲಿ ಕೆಲಸ ಮಾಡುವ ಸಾವಿರಾರು ಜನಕ್ಕೆ ಜೀವನ ನೀಡಿದೆ ಎಂದು ಖಾರವಾಗಿ ಉತ್ತರಿಸಿದ್ದಾರೆ. ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ?

    ಚೇತನ್‍ರವರೇ ನಿಮ್ಮ ಕೆಲಸಗಳಿಂದ ನಾನು ನಿಮ್ಮನ್ನು ಗೌರವಿಸುತ್ತೇನೆ. ಆದರೆ ನೀವು ನಿಮ್ಮ ಆಲೋಚನೆಗಳನ್ನು ಸರಿಮಾಡಿಕೊಳ್ಳಬೇಕು. ಕೆಟ್ಟದ್ದನ್ನು ಬಿತ್ತಿದ ಕಡೆ ಕೆಡುಕು ಬೆಳೆಯುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿ ಹೇಳಿದ್ದಾರೆ.

  • ಆಂಟಿ ಎಂದು ಕರೆದವನಿಗೆ ತರಾಟೆಗೆ ತೆಗೆದುಕೊಂಡ ಭೂಪತಿ ನಟಿ

    ಆಂಟಿ ಎಂದು ಕರೆದವನಿಗೆ ತರಾಟೆಗೆ ತೆಗೆದುಕೊಂಡ ಭೂಪತಿ ನಟಿ

    ಹೈದರಾಬಾದ್: ಲಾಕ್‍ಡೌನ್ ಹಿನ್ನೆಲೆ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟೀವ್ ಆಗಿರುತ್ತಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಶೆರಿನ್ ಶೃಂಗಾರ್ ಗೆ ನೆಟ್ಟಿಗನೊಬ್ಬ ಆಂಟಿ ಎಂದು ಕರೆದಿದ್ದಕ್ಕೆ ಆತನಿಗೆ ನಟಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲಿರುವ ಶೆರಿನ್ ಇತ್ತೀಚಿಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಒಂದಿಷ್ಟು ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋಗಳಿಗೆ ನೆಟ್ಟಿಗನೊಬ್ಬ, “ನೀವು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಾಗ ನೀವು ಮಧ್ಯವಯಸ್ಕ ಆಂಟಿಯಂತೆ ಕಾಣುತ್ತಿದ್ದೀರಿ. ನನ್ನ ಹಾಗೆ ಅನೇಕರು ಹೀಗೆ ಹೇಳುತ್ತಿದ್ದಾರೆ” ಎಂದು ಕಮೆಂಟ್ ಮಾಡಿದ್ದನು.

    ಇದಕ್ಕೆ ಶೆರಿನ್ ರಿಪ್ಲೈ ಕೊಟ್ಟಿದ್ದು, ಜನರು ನಾವು ಹೇಗೆ ಕಾಣಿಸುತ್ತೇವೆ ಎನ್ನುವ ಆಧಾರದ ಮೇಲೆ ಬೇಗ ಜಡ್ಜ್ ಮಾಡುತ್ತಾರೆ. ನಾವು ನಿಜವಾಗಿಯು ಬಾಹ್ಯ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಇದು ಸ್ವಯಂ ಪ್ರೀತಿ ಮತ್ತು ಸ್ವಯಂ ಸ್ವೀಕಾರದ ಪರಿಕಲ್ಪನೆಯೊಂದಿಗೆ ಬದುಕಲು ಕಲಿಸುತ್ತೆ ಎಂದು ತಿರುಗೇಟು ನೀಡಿದ್ದಾರೆ.

    ನಟಿ ಪ್ರತಿಕ್ರಿಯೆ ನೋಡಿ ಕಮೆಂಟ್ ಮಾಡಿದ್ದ ನೆಟ್ಟಿಗ ಕ್ಷಮೆ ಕೇಳಿದ್ದಾನೆ. ಅಲ್ಲದೆ ಬಿಗ್‍ಬಾಸ್‍ನಲ್ಲಿ ಆಂಟಿ ರೀತಿ ಕಾಣಿಸುತ್ತಿದ್ರಿ. ಆದರೆ ಈ ಫೋಟೋದಲ್ಲಿ ಚೆನ್ನಾಗಿ ಕಾಣಿಸಿತ್ತಿದ್ದೀರಿ. ನಾನು ಮಾಡಿದ ಕಮೆಂಟ್‍ಗೆ ಕ್ಷಮೆ ಕೇಳುತ್ತಿದ್ದೇನೆ. ನಾನು ನಿಮ್ಮ ಅಭಿಮಾನಿ. ಯಾವಾಗಲು ಸಂತೋಷವಾಗಿರಿ’ ಎಂದು ಹೇಳಿದ್ದಾನೆ.

    ಕನ್ನಡದ ‘ಪೊಲೀಸ್ ಡಾಗ್’ ಸಿನಿಮಾ ಮೂಲಕ ಸಿನಿಮಾ ರಂಹಕ್ಕೆ ಎಂಟ್ರಿ ಕೊಟ್ಟ ಶೆರಿನ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾಗಳಿಗಿಂತ ಹೆಚ್ಚಾಗಿ ತಮಿಳು ಚಿತ್ರದಲ್ಲಿ ಶೆರಿನ್ ಖ್ಯಾತಿ ಗಳಿಸಿದ್ದಾರೆ. ದರ್ಶನ್ ಅಭಿನಯದ ಭೂಪತಿ ಸಿನಿಮಾ ಶೆರಿನ್ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಧ್ರುವ, ಭೂಪತಿ, ಸಿಹಿಗಾಳಿ ಸೇರಿದಂತೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಶೆರಿನ್ ಅಭಿನಯಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕಳೆದ ವರ್ಷ ತಮಿಳು ಬಿಗ್ ಬಾಸ್-3 ನಲ್ಲಿ ಶೆರಿನ್ ಭಾಗಿಯಾಗಿದ್ದರು. ಮೂರನೇ ರನ್ನರ್ ಅಪ್ ಆಗಿ ಬಿಗ್‍ಹೌಸ್‍ನಿಂದ ಹೊರಬಂದಿದ್ದರು.