Tag: ನೆಟ್

  • ಪರೀಕ್ಷಾ ಅಕ್ರಮ ತಡೆಗಟ್ಟಲು ಕೇಂದ್ರ ಸರ್ಕಾರದಿಂದ ಹೊಸ ಕಾನೂನು; 5-10 ವರ್ಷ ಜೈಲು, ಒಂದು ಕೋಟಿ ಕನಿಷ್ಠ ದಂಡ

    ಪರೀಕ್ಷಾ ಅಕ್ರಮ ತಡೆಗಟ್ಟಲು ಕೇಂದ್ರ ಸರ್ಕಾರದಿಂದ ಹೊಸ ಕಾನೂನು; 5-10 ವರ್ಷ ಜೈಲು, ಒಂದು ಕೋಟಿ ಕನಿಷ್ಠ ದಂಡ

    ನವದೆಹಲಿ: ನೀಟ್ ಮತ್ತು ಯುಜಿಸಿ ನೆಟ್ ಪರೀಕ್ಷೆಯಲ್ಲಿ (NEET, NET Row) ಅಕ್ರಮ ಶಂಕೆ ವ್ಯಕ್ತವಾದ ಬೆನ್ನಲ್ಲೇ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಬೆಳವಣಿಗೆಗಳನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಕಾಯಿದೆ-2024 ಕಾನೂನು ಜಾರಿಗೆ ಅಧಿಸೂಚನೆ ಹೊರಡಿಸಿದೆ‌. ಈ ಮಸೂದೆಯನ್ನು ಕಳೆದ ಫೆಬ್ರವರಿಯಲ್ಲಿ ಸಂಸತ್ ಅಂಗೀಕರಿಸಿತ್ತು, ಜೂ.21 ರಿಂದ ಈ ಹೊಸ ಕಾನೂನು ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ‌. ಇದನ್ನೂ ಓದಿ: CSIR-UGC-NET ಪರೀಕ್ಷೆ ಮಂದೂಡಿಕೆ

    ಹೊಸ ಕಾನೂನು ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ತಡೆಯಲು ಕನಿಷ್ಠ ಮೂರರಿಂದ ಐದು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಸ್ತಾಪಿಸುತ್ತದೆ. ಸಂಘಟಿತವಾಗಿ ನಿರಂತರವಾಗಿ ಅಪರಾಧಗಳಲ್ಲಿ ತೊಡಗಿರುವವರಿಗೆ ಐದರಿಂದ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 1 ಕೋಟಿ ರೂ. ದಂಡ ವಿಧಿಸಲಿದೆ. ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು, ಪರೀಕ್ಷಾ ಪ್ರಾಧಿಕಾರ, ಸೇವಾ ಪೂರೈಕೆದಾರರು ಅಥವಾ ಯಾವುದೇ ಇತರ ಸಂಸ್ಥೆ ಸೇರಿದಂತೆ ಪರೀಕ್ಷಾ ಅಕ್ರಮ ಅಪರಾಧವನ್ನು ಮಾಡಿದರೆ ಅವರಿಗೆ ಐದು ವರ್ಷಗಳಿಗಿಂತ ಕಡಿಮೆಯಿಲ್ಲದ ಅಥವಾ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. 1 ಕೋಟಿಗಿಂತ ಕಡಿಮೆಯಿಲ್ಲದ ದಂಡ ವಿಧಿಸಲಾಗುತ್ತದೆ ಎಂದು ಕಾನೂನು ಹೇಳುತ್ತದೆ.

    ಸಂಘಟಿತ ಪೇಪರ್ ಸೋರಿಕೆ ಅಪರಾಧದಲ್ಲಿ ಪರೀಕ್ಷಾ ಕೇಂದ್ರಗಳು ಭಾಗಿಯಾಗಿರುವುದು ಸಾಬೀತಾದರೆ ಸಂಸ್ಥೆಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶ ಕಲ್ಪಿಸಿದೆ. ಅಲ್ಲದೇ ಹೊಸ ಪರೀಕ್ಷೆಯ ಪ್ರಮಾಣಾನುಗುಣವಾದ ವೆಚ್ಚವನ್ನು ಸಹ ಅದರಿಂದ ವಸೂಲಿ ಮಾಡಲಾಗುತ್ತದೆ. ಪ್ರಶ್ನೆ ಪತ್ರಿಕೆಗಳು ಅಥವಾ ಉತ್ತರ ಕೀಗಳನ್ನು ಸೋರಿಕೆ ಮಾಡುವುದು, ಅನಧಿಕೃತ ಸಂವಹನದ ಮೂಲಕ ಅಭ್ಯರ್ಥಿಗಳಿಗೆ ಸಹಾಯ ಮಾಡುವುದು, ಕಂಪ್ಯೂಟರ್ ನೆಟ್‌ವರ್ಕ್‌ಗಳ ದುರ್ಬಳಕೆ, ನಕಲಿ ಪರೀಕ್ಷೆಗಳನ್ನು ನಡೆಸುವುದು ಅಥವಾ ನಕಲಿ ದಾಖಲೆಗಳನ್ನು ನೀಡುವುದು, ಅರ್ಹತೆಗಾಗಿ ದಾಖಲೆಗಳನ್ನು ತಿದ್ದುವುದನ್ನು ಅಕ್ರಮದ ವ್ಯಾಪ್ತಿಯಲ್ಲಿ ಸೇರಿಸಿದೆ. ಇದನ್ನೂ ಓದಿ: ಯುಜಿಸಿ ನೆಟ್ ಪರೀಕ್ಷೆಯಲ್ಲಿ ಅಕ್ರಮ ಆರೋಪ – ಸಿಬಿಐನಿಂದ ಎಫ್‍ಐಆರ್

    ಕಾನೂನಿನಡಿ ಬರುವ ಅಪರಾಧಗಳು ಜಾಮೀನು ರಹಿತವಾಗಿದ್ದು, ಉಪ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಸಹಾಯಕ ಪೊಲೀಸ್ ಆಯುಕ್ತರ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿಯಿಂದ ಅಪರಾಧವನ್ನು ತನಿಖೆ ನಡೆಸಲಾಗುವುದು. ಹೆಚ್ಚುವರಿಯಾಗಿ, ಯಾವುದೇ ತನಿಖೆಯನ್ನು ಕೇಂದ್ರ ಏಜೆನ್ಸಿಗಳಿಗೆ ವರ್ಗಾಯಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC), ಸ್ಟಾಫ್ ಸೆಲೆಕ್ಷನ್ ಕಮಿಷನ್, ರೈಲ್ವೇಸ್, ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳು ಮತ್ತು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸುವ ಎಲ್ಲಾ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಈ ಕಾನೂನು ವ್ಯಾಪ್ತಿಯಲ್ಲಿ ಒಳಗೊಂಡಿದೆ.

  • CSIR-UGC-NET ಪರೀಕ್ಷೆ ಮಂದೂಡಿಕೆ

    CSIR-UGC-NET ಪರೀಕ್ಷೆ ಮಂದೂಡಿಕೆ

    ನವದೆಹಲಿ: ನೀಟ್, ನೆಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಶಂಕೆ ಬೆನ್ನಲ್ಲೇ CSIR-UGC-NET ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಮುಂದೂಡಿದೆ.

    ಜೂನ್ 25 ಮತ್ತು ಜೂನ್ 27 ರಂದು ಪರೀಕ್ಷೆಗಳು ನಡೆಯಬೇಕಿತ್ತು. ಲಾಜಿಸ್ಟಿಕ್ ಸಮಸ್ಯೆಗಳಿಂದ ಪರೀಕ್ಷೆ (Exam) ಮುಂದೂಡಲಾಗುತ್ತಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಅಧಿಕೃತ ವೆಬ್‌ಸೈಟ್ ಮೂಲಕ ತಿಳಿಸಲಾಗುವುದು ಎಂದು ಎನ್‌ಟಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

     

    ಯುಜಿಸಿ ನಿಗದಿಪಡಿಸಿದ ಅರ್ಹತಾ ಮಾನದಂಡಗಳಿಗೆ ಅನುಗುಣವಾಗಿ ಜೂನಿಯರ್ ರಿಸರ್ಚ್ ಫೆಲೋಶಿಪ್ (JRF), ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳು ಮತ್ತು ಪಿಎಚ್‌ಡಿ ಪ್ರವೇಶಗಳಿಗೆ ಳ ಅರ್ಹತೆಯನ್ನು ನಿರ್ಧರಿಸಲು ಈ ಪರೀಕ್ಷೆ ನಡೆಸಲಾಗುತ್ತದೆ. ಇದನ್ನೂ ಓದಿ: 31 ತಿಂಗಳ ನಂತರ ಈಡೇರಿತು ಪ್ರತಿಜ್ಞೆ- ಮುಖ್ಯಮಂತ್ರಿಯಾಗಿ ವಿಧಾನಸಭೆಗೆ ಕಾಲಿಟ್ಟ ಚಂದ್ರಬಾಬು ನಾಯ್ಡು

    CSIR-UGC-NET ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ಜೂನ್ ಮತ್ತು ಡಿಸೆಂಬರ್‌ನಲ್ಲಿ ನಡೆಸಲಾಗುತ್ತದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ 1.75 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರೆ ಈ ವರ್ಷ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

     

  • ನನ್ನ ಗರ್ಲ್‍ಫ್ರೆಂಡ್‍ಗೆ ನ್ಯಾಯ ಕೊಡಿಸಿ – 6ನೇ ಮಹಡಿಯಿಂದ ಜಿಗಿದ ವ್ಯಕ್ತಿ

    ನನ್ನ ಗರ್ಲ್‍ಫ್ರೆಂಡ್‍ಗೆ ನ್ಯಾಯ ಕೊಡಿಸಿ – 6ನೇ ಮಹಡಿಯಿಂದ ಜಿಗಿದ ವ್ಯಕ್ತಿ

    ಮುಂಬೈ: ತನ್ನ ಗರ್ಲ್‍ಫ್ರೆಂಡ್‍ಗೆ ನ್ಯಾಯ ಕೊಡಿಸಲಾಗದೇ 43 ವರ್ಷದ ವ್ಯಕ್ತಿಯೋರ್ವ ದಕ್ಷಿಣ ಮುಂಬೈನಲ್ಲಿರುವ (South Mumbai) ಮಹಾರಾಷ್ಟ್ರ ಸರ್ಕಾರದ (Maharashtra Government) ಪ್ರಧಾನ ಕಚೇರಿಯಾದ ಮಂತ್ರಾಲಯದ (Mantralaya) 6 ನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾನೆ.

    ಮೇಲಿಂದ ಜಿಗಿದಾಗ ವ್ಯಕ್ತಿಯ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೂ, ನೆಟ್ ಇದ್ದಿದ್ದರಿಂದ ವ್ಯಕ್ತಿ ಬದುಕುಳಿದಿದ್ದಾನೆ. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ರಕ್ಷಿಸಿ, ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಶಬರಿಮಲೆಯಲ್ಲಿ ಪೊಲೀಸರಿಗೆ ನೀಡಿದ್ದ ಕೈಪಿಡಿ ಹಿಂಪಡೆದ ಕೇರಳ ಸರ್ಕಾರ

    ಗಾಯಗೊಂಡ ವ್ಯಕ್ತಿಯನ್ನು ಬೀಡ್ ಜಿಲ್ಲೆಯ ನಿವಾಸಿ ಬಾಪು ನಾರಾಯಣ ಮೊಕಾಶಿ ಎಂದು ಗುರುತಿಸಲಾಗಿದೆ. ತನ್ನ ಗೆಳತಿ ಮೇಲೆ ಅತ್ಯಾಚಾರವಾಗಿದ್ದು, ಆಕೆ 2018ರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಂದಿನಿಂದ ತನ್ನ ಗೆಳತಿಗೆ ಸಾವಿಗೆ ನ್ಯಾಯ ದೊರಕಿಸಿಕೊಡಲು ನಿರಂತರವಾಗಿ ಹೋರಾಡುತ್ತಿದ್ದೇನೆ. ಆದರೆ ಯಾವುದೇ ಪ್ರತಿಕ್ರಿಯೆಯನ್ನು ಪಡೆಯಲು ವಿಫಲನಾಗಿದ್ದಾನೆ ಮತ್ತು ಪ್ರಕರಣದ ಬಗ್ಗೆ ಪೊಲೀಸರು ಸೂಕ್ತವಾಗಿ ತನಿಖೆ ನಡೆಸುತ್ತಿಲ್ಲ ಎಂದು ನಾರಾಯಣ ಮೊಕಾಶಿ ಆರೋಪಿಸಿದ್ದಾನೆ.

    ಇದೇ ವಿಚಾರವಾಗಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಲು ಗುರುವಾರ ಮಧ್ಯಾಹ್ನ 3 ಗಂಟೆಗೆ ಮಂತ್ರಾಲಯಕ್ಕೆ ಆಗಮಿಸಿದ್ದರೂ, ಸಂಪುಟ ಸಭೆ ಹಿನ್ನೆಲೆ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ವ್ಯಕ್ತಿ 3ನೇ ಮಹಡಿಯಿಂದ ಜಿಗಿದಿದ್ದಾನೆ. ಅದೃಷ್ಟವಶಾತ್ ಕಟ್ಟದ ಮೇಲಿಂದ ವ್ಯಕ್ತಿ ಜಿಗಿದರು, ನೆಟ್‍ನಲ್ಲಿ ಸಿಲುಕಿಕೊಂಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಆತನ ಎಡ ಹಣೆಯ ಮೇಲೆ ಗಾಯಗಳಾಗಿದ್ದು, ಆತನನ್ನು ರಕ್ಷಿಸಿ ಚಿಕಿತ್ಸೆಗಾಗಿ ಜಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದನ್ನೂ ಓದಿ: ಅಮೆರಿಕ ಹೌಸ್ ಸ್ಪೀಕರ್ ಆಗಿ ಐತಿಹಾಸಿಕ ಅವಧಿ ಕೊನೆಗೊಳಿಸಿದ ನ್ಯಾನ್ಸಿ ಪೆಲೋಸಿ

    Live Tv
    [brid partner=56869869 player=32851 video=960834 autoplay=true]

  • ಪರೀಕ್ಷೆ ಬರೀಬೇಕಂದ್ರೆ ತಾಳಿ, ಕಾಲುಂಗುರ ತೆಗೀರಿ- ನೆಟ್ ಎಕ್ಸಾಂ ಬರೆಯೋಕೆ ಹೋದವರಿಗೆ ಶಾಕ್

    ಪರೀಕ್ಷೆ ಬರೀಬೇಕಂದ್ರೆ ತಾಳಿ, ಕಾಲುಂಗುರ ತೆಗೀರಿ- ನೆಟ್ ಎಕ್ಸಾಂ ಬರೆಯೋಕೆ ಹೋದವರಿಗೆ ಶಾಕ್

    ಬೆಂಗಳೂರು: ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್‍ಇಟಿ)ಯನ್ನು ತೆಗೆದುಕೊಂಡ ಮಹಿಳಾ ಅಭ್ಯರ್ಥಿಗಳಿಗೆ ಪರಿವೀಕ್ಷಕರು ತಾಳಿ ಮತ್ತು ಕಾಲುಂಗುರ ತೆಗೆಸಿ ಪರೀಕ್ಷೆ ಬರೆಸಿ ಕಿರಿಕಿರಿ ಮಾಡಿದ್ದಾರೆ.

    ಇಂದು ನೆಟ್ ಪರೀಕ್ಷೆ ಬೆಂಗಳೂರಿನ ಜೆಪಿನಗರದ ಬ್ರಿಗೇಡ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ನಿಗದಿಯಾಗಿತ್ತು. ಪರೀಕ್ಷೆಗೆ ತೆರಳಿದ ಮಹಿಳಾ ಅಭ್ಯರ್ಥಿಗಳಿಗೆ ತಾಳಿ ಮತ್ತು ಕಾಲುಂಗುರ ತೆಗೆದು ಕೊಠಡಿಯೊಳಗೆ ಬರಬೇಕು ಎಂದು ಪರೀಕ್ಷಾ ಪರಿವೀಕ್ಷಕರು ಕಿರಿಕಿರಿ ಉಂಟು ಮಾಡಿದ್ದಾರೆ.

    ಪರಿವೀಕ್ಷಕರು ಹೇಳಿದ ಮಾತಿನಿಂದ ಕೆಲ ಮಹಿಳಾ ಅಭ್ಯರ್ಥಿಗಳು ಪರೀಕ್ಷೆ ಬರೆಯದೆ ವಾಪಸ್ ಹೋಗಿದ್ದಾರೆ. ಇನ್ನು ಕೆಲವರು ಶಾಲಾ ಆಡಳಿತ ಮಂಡಳಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದರು ಅವರು ತಾಳಿ ತೆಗೆಯದೆ ಇದ್ದರೆ ಪರೀಕ್ಷೆ ಬರೆಯಲು ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಕೊನೆಗೆ ಪತಿಯ ಮುಂದೆಯೇ ಪತ್ನಿಯರ ತಾಳಿ ಕಾಲುಂಗುರ ತೆಗೆಸಿದ್ದಾರೆ.

    ಇದು ನಮ್ಮ ನಂಬಿಕೆ ಮತ್ತು ಧರ್ಮಕ್ಕೆ ವಿರುದ್ಧವಾದುದ್ದು. ಮೊಬೈಲ್, ಪರ್ಸ್ ಪರೀಕ್ಷಾ ಕೇಂದ್ರದೊಳಕ್ಕೆ ತೆಗೆದುಕೊಂಡು ಹೋಗುವಂತಿಲ್ಲ ಎನ್ನುವ ನಿಯಮವಿದೆ. ಆದರೆ ತಾಳಿ ಮತ್ತು ಕಾಲುಂಗುರ ತೆಗೆಯುವಂತೆ ಪರೀಕ್ಷಾ ನಿಯಮದಲ್ಲೂ ಇಲ್ಲ. ಅಷ್ಟೇ ಅಲ್ಲದೇ ಮುಸ್ಲಿಂ ಯುವತಿಯರ ಬುರ್ಖಾ ತೆಗೆಸಿ ಮಾನಸಿಕ ಹಿಂಸೆ ಕೊಟ್ಟಿದ್ದಾರೆ. ಎಲೆಕ್ಟ್ರಿಕ್ ವಸ್ತುಗಳಿಗೆ ಪ್ರವೇಶವಿಲ್ಲ ಎಂದು ಬೋರ್ಡ್ ಹಾಕಿದ್ದರೂ ಈ ರೀತಿ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ಅಭ್ಯರ್ಥಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಸೆಕ್ಯೂರಿಟಿ ಆಫೀಸರ್ ಸ್ಪಷ್ಟನೆ: ಸೆಕ್ಯುರಿಟಿ ಆಫೀಸರ್ ಗಳ ದೌರ್ಜನ್ಯ ವರದಿಯಾಗುತ್ತಿದ್ದಂತೆ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ. ಇದು ಸೆಕ್ಯುರಿಟಿ ಗಾರ್ಡ್ ಹಂತದಲ್ಲಿ ಆಗಿರುವ ತಪ್ಪು. ಕಚೇರಿಯ ಒಳಗಿಂದ ಯಾವುದೇ ಮೆಟಲ್ ವಸ್ತುಗಳನ್ನ ಬಿಡಬಾರದು ಅನ್ನೋ ಮಾಹಿತಿ ನೀಡಲಾಗಿತ್ತು. ಇದನ್ನ ಗಾರ್ಡ್ ಸರಿಯಾಗಿ ಅರ್ಥ ಮಾಡಿಕೊಳ್ಳದೆ ತಾಳಿ, ಕಾಲುಂಗುರ ಬಿಚ್ಚಿಸಿದ್ದಾರೆ. ಇದರ ಬಗ್ಗೆ ತಿಳಿಯುತ್ತಿದ್ದಂತೆ ಸರಿ ಪಡಿಸಿದ್ದೇವೆ. ತದನಂತರ ಯಾರಿಗೂ ತಾಳಿ, ಕಾಲುಂಗುರ ತೆಗೆಸೋ ಕೆಲಸ ಮಾಡಿಲ್ಲ. ನಮಗೂ ಮಾಂಗಲ್ಯ ಪ್ರಾಮುಖ್ಯತೆ ಗೊತ್ತು. ತಪ್ಪನ್ನ ಸರಿ ಪಡಿಸಿ ಪರೀಕ್ಷಾ ಕೇಂದ್ರದೊಳಕ್ಕೆ ಎಲ್ಲರನ್ನ ಕಳಿಸಿಕೊಟ್ಟಿದ್ದೇವೆ ಅನ್ನೋ ಉಡಾಫೆ ಸ್ಪಷ್ಟನೆಯನ್ನು ಸೆಕ್ಯುರಿಟಿ ಆಫೀಸರ್ ಮಂಜುನಾಥ್ ಹೇಳಿದ್ದಾರೆ.