Tag: ನೂರ್

  • ಕ್ರಿಶ್ಚಿಯನ್ ವರ, ಮುಸ್ಲಿಂ ವಧು ಹಿಂದೂ ಸಂಪ್ರದಾಯದಂತೆ ಮದುವೆ

    ಕ್ರಿಶ್ಚಿಯನ್ ವರ, ಮುಸ್ಲಿಂ ವಧು ಹಿಂದೂ ಸಂಪ್ರದಾಯದಂತೆ ಮದುವೆ

    ಲಕ್ನೋ: ಕ್ರೈಸ್ತ ಸಮುದಾಯದ ವರ, ಮುಸ್ಲಿಂ ಯುವತಿ ಇವರಿಬ್ಬರೂ ಹಿಂದೂ ಪದ್ಧತಿಯಂತೆ ವಿವಾಹವಾಗಿ ಹೊಸ ಜೀವನಕ್ಕೆ ಪ್ರವೇಶಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿಯಲ್ಲಿ ವಿಶಿಷ್ಟ ವಿವಾಹ ನಡೆದಿದೆ.

    2022 ಮಾರ್ಚ್ 30 ರಂದು ಉತ್ತರ ಪ್ರದೇಶದ ಬರೇಲಿಯಲ್ಲಿ ವಿಶಿಷ್ಟ ವಿವಾಹ ನಡೆದಿದೆ. ಕಾಲೇಜಿನಲ್ಲಿ ಓದುತ್ತಿರುವಾಗಲೇ ಸುಮಿತ್ ಮತ್ತು ನೂರ್ ಪರಿಚಯವಿದ್ದರು. ಪರಸ್ಪರ ಪ್ರೀತಿಸಿ ಮದುವೆಯಾಗುವ ನಿರ್ಧಾರಕ್ಕೆ ಬಂದಾಗ ಇಬ್ಬರ ಕಡೆಯಿಂದಲೂ ಧರ್ಮ ಅಡ್ಡಿಯಾಯಿತು. ಸನಾತನ ಪದ್ಧತಿಗಳ ಬಗ್ಗೆ ಅದಾಗಲೇ ಅರಿವು ಮತ್ತು ಪ್ರೀತಿ ಹೊಂದಿದ್ದ ಸುಮಿತ್ ತಾವಿಬ್ಬರೂ ಹಿಂದೂ ಧರ್ಮಕ್ಕೆ ಮರಳುವ ಪ್ರಸ್ತಾಪ ಇಟ್ಟಾಗ ಅದು ನೂರ್‌ಗೆ ಒಪ್ಪಿಗೆಯಾಯಿತು. ಆಕೆ ನಿಶಾ ಆಗಿ ಬದಲಾಗಿದ್ದಾಳೆ.

    ವಿವಾಹ ಸಂದರ್ಭದಲ್ಲಿ ತಾವಿಬ್ಬರೂ ಸನಾತನ ಧರ್ಮದ ಪದ್ಧತಿಗಳನ್ನು ಜೀವನಪೂರ್ತಿ ಅನುಸರಿಸುವುದಾಗಿ ಘೋಷಿಸಿಕೊಂಡಿರುವ ನಿಶಾ, ತಾನು ಈ ಹಿಂದಿನಿಂದಲೇ ದುರ್ಗೆಯ ಭಕ್ತೆ ಎಂದು ಹೇಳಿಕೊಂಡಿದ್ದಾರೆ. ಈ ವಿವಾಹದ ನಂತರ ಹುಡುಗಿಯ ಕುಟುಂಬವು ದೂರು ದಾಖಲಿಸಿದ್ದು, ಸುಮಿತ್ ತಮ್ಮ ಮಗಳನ್ನು ಅಪಹರಣ ಮಾಡಿಕೊಂಡು ಹೋಗಿ ಮದುವೆಯಾಗಿರುವುದಾಗಿ ವಧು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ರಾಜ್ಯದ ಹಕ್ಕುಗಳನ್ನು ದೋಚುತ್ತಿದ್ದಾರೆ: ಭಗವಂತ್ ಮಾನ್