ಬಾಲಿವುಡ್ (Bollywood) ಖ್ಯಾತ ನಟ ಆಮೀರ್ ಖಾನ್ (Aamir Khan) ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಆಮೀರ್ ಅವರ ಮುದ್ದಿನ ಮಗಳು ಇರಾ ಖಾನ್ (Ira Khan) ದಾಂಪತ್ಯ (Wedding) ಜೀವನಕ್ಕೆ ಇಂದು (ಜ.3) ಕಾಲಿಡುತ್ತಿದ್ದಾರೆ. ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದೆ.
ಜ.3ರಂದು ಸಂಜೆ 7 ಗಂಟೆಗೆ ಇರಾ- ನೂಪುರ್ ಶಿಖಾರೆ ಮದುವೆಯಾಗುತ್ತಿದ್ದಾರೆ. ಒಂದು ವಾರದ ಮುಂಚೆಯೇ ವಿವಾಹ ಪೂರ್ವ ಸಿದ್ಧತೆಗಳು ಅದ್ದೂರಿಯಾಗಿ ಜರುಗುತ್ತಿದೆ. ಮದುವೆ ಸಂಭ್ರಮದಲ್ಲಿ ಕುಟುಂಬದವರು ಮತ್ತು ಆಪ್ತರು ಅಷ್ಟೇ ಭಾಗಿಯಾಗಿದ್ದರು. ಮಗಳು ಮದುವೆಗೆಂದೇ ಆಮೀರ್ ಖಾನ್ ಅವರು ಸಿನಿಮಾದಿಂದ ಕೂಡ ಬ್ರೇಕ್ ತೆಗೆದುಕೊಂಡರು. ಇದನ್ನೂ ಓದಿ:ಹೊಸ ವರ್ಷದ ಆರಂಭದಲ್ಲೇ ಶ್ರೀಲೀಲಾ ಹೊಸ ಶಪಥ
ಆಮೀರ್ ಖಾನ್- ಮಾಜಿ ಮೊದಲ ಪತ್ನಿ ರೀನಾ ದತ್ತ ಅವರ ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕೋರ್ಟ್ ಮ್ಯಾರೇಜ್ ಜೊತೆಗೆ ಮಹಾರಾಷ್ಟ್ರದ ಸಂಪ್ರದಾಯಿಕ ಶೈಲಿಯಲ್ಲಿ ಇರಾ ಖಾನ್- ನೂಪುರ್ ಮದುವೆ ನಡೆಯುತ್ತಿದೆ. ಆಮಿರ್ ಖಾನ್ ಅವರ 2ನೇ ಮಾಜಿ ಪತ್ನಿ ಕಿರಣ್ ರಾವ್ ಕೂಡ ವಿವಾಹಪೂರ್ವ ಕಾರ್ಯಗಳಲ್ಲಿ ಹಾಜರಿ ಹಾಕಿದ್ದಾರೆ. ಮದುವೆಯ ಬಳಿಕ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಲು ಪ್ಲ್ಯಾನ್ ಮಾಡಲಾಗಿದೆ.
ಆಮೀರ್ ಪುತ್ರಿ ಇರಾ ಖಾನ್ ಅವರು ನೂಪುರ್ ಜೊತೆ ಹಲವು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.


ಇತ್ತೀಚೆಗಷ್ಟೇ ಇರಾ ತನ್ನ ಬಾಯ್‌ಫ್ರೆಂಡ್ ನೂಪುರ್ ಶಿಖಾರೆ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಸಖತ್ ಬೋಲ್ಡ್ ಆಗಿಯೂ ಕಾಣಿಸಿಕೊಂಡಿದ್ದರು. ಈ ವೇಳೆ ಆಮಿರ್ ಕೂಡ ಭಾಗಿಯಾಗಿದ್ದರು. ಇರಾ ಅವರ ಅಂದಿನ ಬಾಯ್‌ಫ್ರೆಂಡ್ ಜತೆಗಿನ ಹಾಟ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿತ್ತು. ಈಗ ಮತ್ತೆ ಬಾಯ್‌ಫ್ರೆಂಡ್ ಜೊತೆಗಿನ ಹೊಸ ಫೋಟೋವೊಂದು ಹಂಚಿಕೊಂಡಿದ್ದಾರೆ.ಇದನ್ನೂ ಓದಿ: