Tag: ನೂತನ

  • ನನ್ನ ಮುಂದಿನ ಜೀವನ ಏನು ಎಂದು ಗೊತ್ತಿಲ್ಲ: ಪ್ರವೀಣ್ ಪತ್ನಿ ನೂತನ ಕಣ್ಣೀರು

    ನನ್ನ ಮುಂದಿನ ಜೀವನ ಏನು ಎಂದು ಗೊತ್ತಿಲ್ಲ: ಪ್ರವೀಣ್ ಪತ್ನಿ ನೂತನ ಕಣ್ಣೀರು

    – ಪ್ರವೀಣ್ ಕನಸು ನನಸು ಮಾಡಲು ಸಾಧ್ಯವೋ ಗೊತ್ತಿಲ್ಲ

    ಮಂಗಳೂರು: ನನ್ನ ಮುಂದಿನ ಜೀವನ ಹೇಗೆ ಎಂಬುದು ನನಗೆ ಗೊತ್ತಿಲ್ಲ. ಪ್ರವೀಣ್ ಇಲ್ಲದ ಜೀವನ ಊಹಿಸಲು ಸಾಧ್ಯವಿಲ್ಲ ಎಂದು ಹತ್ಯೆಯಾದ ಪ್ರವೀಣ್ ಕುಮಾರ್ ನೆಟ್ಟಾರ್ ಪತ್ನಿ ನೂತನ ಕಣ್ಣೀರು ಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಪತಿಯನ್ನು ಹತ್ಯೆಗೈದ ಆರೋಪಿಗಳನ್ನು ಪತ್ತೆಹಚ್ಚಿ ಅವರಿಗೆ ಕಠಿಣ ಶಿಕ್ಷೆ ಕೊಡಬೇಕು. ಹಂತಕರಿಗೆ ಜಾಮೀನು ಕೊಡುವವರು ಮುಂದೆ ಬರಬಾರದು. ಕೋರ್ಟ್ ಕೂಡ ಅವರಿಗೆ ಜಾಮೀನು ನೀಡಬಾರದು. ಪ್ರವೀಣ್ ಇಲ್ಲದ ಜೀವನ ಊಹಿಸಲೂ ಸಾಧ್ಯವಿಲ್ಲ ಎಂದು ಗದ್ಗದಿತರಾದರು. ಇದನ್ನೂ ಓದಿ: ನೀವು ಊರಿಗೆ ಹಿರಿಯರು, ಕೋಳಿ ಅಂಗಡಿ ಉದ್ಘಾಟನೆಗೆ ತಂದೆಯನ್ನು ಆಹ್ವಾನಿಸಿದ್ದರು: ಪ್ರವೀಣ್ ಬಗ್ಗೆ ಆರೀಫ್ ಮಾತು

    ನನಗೆ ಉದ್ಯೋಗ ಇದ್ದರೆ ನಾನು ಕುಟುಂಬ ನಿಭಾಯಿಸಿಕೊಂಡು ಹೋಗುತ್ತಿದ್ದೆ. ನಾನು ಖಾಸಗಿ ಸಂಸ್ಥೆಯೊಂದರಲ್ಲಿ ದುಡಿಯುವ ಉದ್ಯೋಗಿ. ಚಿಕನ್ ಶಾಪ್ ಅನ್ನು ನಾನು ನೋಡಿಕೊಂಡಿದ್ದೆ ಇನ್ನು ನನಗೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಮನೆ ಕಟ್ಟಬೇಕು ಎಂಬುದು ಪ್ರವೀಣ್ ಕನಸಾಗಿತ್ತು. ಮನೆ ಕಟ್ಟಲು ತನ್ನಿಂದಾದ ಪ್ರಯತ್ನವನ್ನು ಮಾಡುತ್ತಿದ್ದರು. ಇನ್ನೂ ಹೊಸ ಮನೆ ಕಟ್ಟಲು ಸಾಧ್ಯವೇ ಇಲ್ಲವೇ ಗೊತ್ತಿಲ್ಲ. ಅಲ್ಲದೆ ಪ್ರವೀಣ್ ಕನಸನ್ನು ನನಗೆ ನನಸು ಮಾಡಲು ಸಾಧ್ಯವೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಮನೆಯ ಸದಸ್ಯನನ್ನ ಕಳೆದುಕೊಂಡಿದ್ದೇವೆ- ಪ್ರವೀಣ್ ಬಗ್ಗೆ ಮಾತನಾಡುತ್ತಾ ಗದ್ಗದಿತರಾದ ಆರಗ

    ನಾಯಕರನ್ನು ನಂಬಿ ನಿಂತರೆ ನಾವು ಕೆಟ್ಟ ಹಾಗೆ. ಪ್ರವೀಣ್ ಪಕ್ಷ ಸಂಘಟನೆಗಾಗಿ 24 ಗಂಟೆ ದುಡಿದವರು. ಪ್ರವೀಣ್ ಗೆ ವೈರಿ ಶತ್ರು ಅಂತ ಯಾರೂ ಇರಲಿಲ್ಲ. ಎಲ್ಲರನ್ನೂ ಒಂದೇ ರೀತಿ ನೋಡುತ್ತಿದ್ದರು. ಆರೋಪಿಗಳನ್ನು ಬಂಧನ ಮಾಡಿದರೆ ನನಗೆ, ನನ್ನ ಮನೆಯವರಿಗೆ ಸಮಾಧಾನವಾಗುತ್ತದೆ ಎಂದು ನೂತನ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಹೊಸ ಪಕ್ಷ ಆರಂಭಿಸುವ ದಿನಾಂಕ ಪ್ರಕಟಿಸಿದ ಜಗನ್ ಸಹೋದರಿ

    ಹೊಸ ಪಕ್ಷ ಆರಂಭಿಸುವ ದಿನಾಂಕ ಪ್ರಕಟಿಸಿದ ಜಗನ್ ಸಹೋದರಿ

    ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಸಹೋದರಿ ವೈ.ಎಸ್ ಶರ್ಮಿಳಾ ಅವರು ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಆರಂಭವನ್ನು ಘೋಷಣೆ ಮಾಡುವ ದಿನಾಂಕವನ್ನು ಹೇಳಿದ್ದಾರೆ.

    ಜುಲೈ 8 ರಂದು ಹೊಸ ಪಕ್ಷವನ್ನು ತೆಲಂಗಾಣದಲ್ಲಿ ಉದ್ಘಾಟಿಸಲಿದ್ದೇನೆ. ಜುಲೈ 8 ರಂದು ತಂದೆ ದಿ.ವೈ ಎಸ್ ರಾಜಶೇಖರ ರೆಡ್ಡಿಯವರ ಜನ್ಮದಿನದ ವಾರ್ಷಿಕೋತ್ಸವಿದೆ. ಇದೇ ದಿನದಂದು ನಮ್ಮ ಹೊಸ ಪಕ್ಷವನ್ನು ಉದ್ಘಾಟಿಸಲಿದ್ದೇನೆ ಎಂದು ಶರ್ಮಿಳಾ ಖಮ್ಮಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ.

    ಭರವಸೆ ನೀಡಿರುವ ಪ್ರಕಾರ, ಸರ್ಕಾರಿ ಉದ್ಯೋಗ ನೀಡುವುದಕ್ಕೆ ಅಧಿಸೂಚನೆ ಹೊರಡಿಸದಿದ್ದಲ್ಲಿ ಏಪ್ರಿಲ್ 15ರಿಂದ ಮೂರು ದಿನಗಳ ಕಾಲ ಹೈದರಾಬಾದ್‍ನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ. ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರದ ಭ್ರಷ್ಟಾಚಾರ ಆರೋಪಗಳನ್ನು ಪ್ರಶ್ನೆ ಮಾಡುವುದಕ್ಕಾಗಿ ನಮ್ಮ ಪಕ್ಷ ಅಗತ್ಯ ಇದೆ. ತೆಲಂಗಾಣ ರಾಜ್ಯ ಸ್ಥಾಪನೆಯಾಗಿ 7 ವರ್ಷ ಆಗಿರಬಹುದು. ಜನರ ಆಶೋತ್ತರಗಳನ್ನು ಈಡೇರಿಸಿಲ್ಲ ಎಂದು ಹೇಳಿದ್ದಾರೆ.

    ತೆಲಂಗಾಣ ರಾಜ್ಯ ಸ್ಥಾಪನೆಗಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ತೆಲಂಗಾಣ ಅಸ್ತಿತ್ವಕ್ಕೆ ಬಂದ ನಂತರವೂ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳನ್ನು ಎಮ್‍ಎಲ್‍ಎಗಳು ಅಥವಾ ಎಂಪಿಗಳು ಭೇಟಿಯಾಗುವ ಅವಕಾಶವೇ ಇಲ್ಲ. ಕಾಂಗ್ರೆಸ್ ಪಾರ್ಟಿ ಕೆಸಿಆರ್ ಜೊತೆಗೆ ಫೈಟ್ ಮಾಡಲು ತಯಾರಿಲ್ಲ. ಬಿಜೆಪಿ ನೀಡಿದ ಭರವಸೆಗಳು ಏನಾದವು? ಅವರು ರೈಲು, ಫ್ಯಾಕ್ಟರಿಯ ಭರವಸೆ ನೀಡಿದ್ದರು. ಅದಿನ್ನೂ ಜಾರಿಗೆ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.

  • ನೂತನ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಬಜಾಜ್ ಚೇತಕ್!

    ನೂತನ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಬಜಾಜ್ ಚೇತಕ್!

    ನವದೆಹಲಿ: ಬಜಾಜ್ ಆಟೋ ಸಂಸ್ಥೆಯು ದೇಶದ ಜನಪ್ರಿಯ ಸ್ಕೂಟರ್ ಬಜಾಜ್ ಚೇತಕ್ ಅನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸುವ ಯೋಜನೆ ರೂಪಿಸಿಕೊಂಡಿದೆ.

    ಮಧ್ಯಮ ವರ್ಗದ ಅಂಬಾರಿಯಾಗಿದ್ದ ಬಜಾಜ್ ಚೇತಕ್ ಮತ್ತೊಮ್ಮೆ ನೂತನ ಮಾದರಿಯಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಮಾಹಿತಿಗಳ ಪ್ರಕಾರ ಬಿಡುಗಡೆಗೊಳ್ಳುತ್ತಿರುವ ನೂತನ `ಬಜಾಜ್ ಚೇತಕ್’ ಪ್ರೀಮಿಯರ್ ಸ್ಕೂಟರ್ ಗಳ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಆ್ಯಕ್ಟೀವಾ, ಪಿಯಾಜಿಯೋ ವೆಸ್ಪಾ ಮತ್ತು ಎಪ್ರಿಲಿಯಾದ ಎಸ್ಆರ್ 150 ಸ್ಕೂಟರ್ ಗಳಿಗೆ ಪೈಪೋಟಿ ನೀಡಲಿದೆ. ಅಲ್ಲದೇ ನೂತನ ಬಜಾಜ್ ಚೇತಕ್ 2019ಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಬಜಾಜ್ ಸಂಸ್ಥೆ ತಿಳಿಸಿದೆ.

    ನೂತನ ಬಜಾಜ್ ಚೇತಕ್ ಬೆಲೆಯು ಅಂದಾಜು 70 ಸಾವಿರ ರೂಪಾಯಿಗಳಾಗಿರಲಿದ್ದು, ಹೊಸ ಸ್ಕೂಟರ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಸಂಸ್ಥೆ ಮಾಡಿದೆ. ನೂತನ ಬಜಾಜ್ ಚೇತಕ್ 125 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 9 ರಿಂದ 10 ಬಿಹೆಚ್ ಮತ್ತು 9 ಎನ್‍ಎಮ್ ಟಾರ್ಕ್ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ  ಹೊಂದಿದೆ.

    ಇಂಜಿನ್ ಅನ್ನು ಸಿವಿಟಿ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಆರಾಮದಾಯಕ ಪ್ರಯಾಣಕ್ಕಾಗಿ ಮುಂಭಾಗದಲ್ಲಿ ಸಿಂಗಲ್ ಆರ್ಮ್ ಸಸ್ಪೆಂಷನ್, ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ ಅಳವಡಿಸಲಾಗಿದೆ. ಅಲ್ಲದೇ ಸಿಬಿಎಸ್ ಬ್ರೇಕ್ಸ್, ದೊಡ್ಡದಾದ ಫ್ಯುಯಲ್ ಟ್ಯಾಂಕ್, ಒವಲ್ ಶೇಪ್ ಹೆಡ್ ಲ್ಯಾಂಪ್ ಒಳಗೊಂಡಿದ್ದು, ಪ್ರೀಮಿಯಂ ಲುಕ್ ಗಾಗಿ ಅಲ್ಯೂಮಿನಿಯಂ ಗ್ರ್ಯಾಬ್ ರೈಲ್ಸ್ ಅನ್ನು ಹೊಂದಿದೆ. ಅಲ್ಲದೇ ಡಿಜಿಟಲ್ ಮೀಟರ್, ಮೊಬೈಲ್ ಚಾರ್ಜಿಗ್, ಬ್ಲೂಟೂತ್ ಕನೇಕ್ಟಿವಿಟಿ ಹೊಂದಿದೆ.

    1972 ರಿಂದ 2006 ರವರೆಗೂ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೆ ಆದ ಕೀರ್ತಿಯನ್ನು ಎಲ್ಲೆಡೆ ಸಾರಿ, ಸ್ಕೂಟರ್ ವಿಭಾಗದಲ್ಲೇ ಹೆಚ್ಚು ಜನಪ್ರಿಯತೆಯನ್ನು ಬಜಾಜ್ ಚೇತಕ್ ಪಡೆದಿತ್ತು. ಭಾರತೀಯ ಯೋಧ ರಾಣಾ ಪ್ರತಾಪ್ ಸಿಂಗ್‍ರ ಪ್ರಸಿದ್ಧ ಕುದುರೆಯ ಹೆಸರನ್ನು ಬಜಾಜ್ ಕಂಪೆನಿ ಈ ಸ್ಕೂಟರ್ ಗೆ ಇಟ್ಟಿತ್ತು. ಅಲ್ಲದೇ ಕೈಗೆಟುಕುವ ಬೆಲೆಯ ಶ್ರೇಣಿಯ ಉನ್ನತ ಗುಣಮಟ್ಟದ ಸ್ಕೂಟರ್ ನಂತೆ ನೋಡಲಾಗುತ್ತಿತ್ತು. ಎಲ್ಲರೂ ಪ್ರೀತಿಯಿಂದ ಇದನ್ನು `ಹಮಾರಾ ಬಜಾಜ್’ ಎಂದು ಕರೆಯುತ್ತಿದ್ದರು.

     

  • ನೂತನ 100 ರೂಪಾಯಿ ನೋಟಿನ ವಿನ್ಯಾಸ ಬಿಡುಗಡೆಗೊಳಿಸಿದ ಆರ್ ಬಿಐ

    ನೂತನ 100 ರೂಪಾಯಿ ನೋಟಿನ ವಿನ್ಯಾಸ ಬಿಡುಗಡೆಗೊಳಿಸಿದ ಆರ್ ಬಿಐ

    ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ 100 ರೂ. ಮುಖಬೆಲೆಯ ನೂತನ ಹೊಸ ನೋಟುಗಳನ್ನು ಶೀಘ್ರದಲ್ಲೇ ಚಲಾವಣೆಗೆ ತರಲು ಯೋಜನೆ ರೂಪಿಸಿದ್ದು, ಹೊಸ ನೋಟಿನ ವಿನ್ಯಾಸವನ್ನು ತನ್ನ ವೆಬ್‍ಸೈಟ್ ನಲ್ಲಿ ಪ್ರಕಟಿಸಿದೆ.

    2016ರ ನವೆಂಬರ್ ನಲ್ಲಿ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ನಿರ್ಧಾರದಿಂದಾಗಿ, ಆರ್ ಬಿಐ ಮೊದಲನೇ ಬಾರಿಗೆ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು. ಅಲ್ಲದೇ ಚಿಲ್ಲರೆ ಅಭಾವದ ಸಮಸ್ಯೆಯಿಂದಾಗಿ 500ರೂ. ಹಾಗೂ 200ರೂ. ಮುಖಬೆಲೆಯ ನೂತನ ವಿನ್ಯಾಸದ ನೋಟುಗಳನ್ನು ಮುದ್ರಿಸಿತ್ತು. ಅಲ್ಲದೇ ಇತ್ತೀಚೆಗೆ 50 ರೂ. ಹಾಗೂ 10 ರೂಪಾಯಿಯ ನೋಟುಗಳನ್ನು ಸಹ ಚಲಾವಣೆಗೆ ತಂದಿತ್ತು.

    ಇದೀಗ ನೂತನ ವಿನ್ಯಾಸದಲ್ಲಿ 100 ರೂಪಾಯಿಯನ್ನು ಚಲಾವಣೆಗೆ ತರಲು ನಿರ್ಧರಿಸಿದೆ. ನೂತನ 100 ರೂಪಾಯಿಯ ಹೊಸ ನೋಟು ಲ್ಯಾವೆಂಡರ್(ನೀಲಿ) ಬಣ್ಣ ಹೊಂದಿದ್ದು, 66 ಮಿ.ಮೀ. ಘಿ 142 ಮಿ.ಮೀ. ಅಳತೆಯಲ್ಲಿದೆ. ನೋಟಿನ ಹಿಂಭಾಗದಲ್ಲಿ ಗುಜರಾತ್ ನ ಐತಿಹಾಸಿಕ `ರಾಣಿ ಕಿ ವಾವ್’ನ ಚಿತ್ರವನ್ನು ಮುದ್ರಿಸಿದೆ.

    ಈಗಾಗಲೇ ಚಾಲ್ತಿಯಲ್ಲಿರುವ 100 ರೂ. ಮುಖಬೆಲೆಯ ನೋಟುಗಳು ಚಾಲ್ತಿಯಲ್ಲಿರುತ್ತವೆ. ಮುಂದಿನ ದಿನಗಳಲ್ಲಿ ಹೊಸ ವಿನ್ಯಾಸದ ನೋಟುಗಳ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಆರ್ ಬಿಐ ತಿಳಿಸಿದೆ.