Tag: ನುಸ್ರತ್ ಜಹಾನ್

  • ಹಿರಿ ಜೀವಗಳಿಗೆ ಮೋಸ: ಇಡಿ ವಿಚಾರಣೆಗೆ ಹಾಜರಾದ ನಟಿ, ಸಂಸದೆ ನುಸ್ರತ್

    ಹಿರಿ ಜೀವಗಳಿಗೆ ಮೋಸ: ಇಡಿ ವಿಚಾರಣೆಗೆ ಹಾಜರಾದ ನಟಿ, ಸಂಸದೆ ನುಸ್ರತ್

    ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ (Nusrat Jahan) ಇಂದು ಇಡಿ (ED) ಅಧಿಕಾರಿಗಳ ಮುಂದೆ ಹಾಜರಾದರು. ಹಿರಿ ಜೀವಗಳಿಗೆ ಫ್ಲ್ಯಾಟ್ ಕೊಡಿಸುವುದಾಗಿ ಹೇಳಿ ಕೋಟ್ಯಾಂತರ ರೂಪಾಯಿಯನ್ನು ವಂಚಿಸಿದ್ದಾರೆ ಎಂದು ಅವರ ಮೇಲೆ ದೂರು ದಾಖಲಾಗಿತ್ತು. ಹಾಗಾಗಿ ಇಂದು ವಿಚಾರಣೆಗೆ ನುಸ್ರತ್ ಹಾಜರಾಗಿದ್ದಾರೆ.

    ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ನ ಪ್ರಭಾವಿ ರಾಜಕಾರಣಿ ಹಾಗೂ ಸಂಸೆಯೂ ಆಗಿರುವ ನುಸ್ರತ್ ಜಹಾನ್, ಫ್ಲ್ಯಾಟ್ ಕೊಡಿಸುವುದಾಗಿ ಹೇಳಿ ಅಕ್ರಮವಾಗಿ ಹಣ ಪಡೆದುಕೊಂಡಿದ್ದಾರೆ ಎನ್ನುವ ಆರೋಪವನ್ನು ಎದುರಿಸುತ್ತಿದ್ದಾರೆ.

    ಇಡಿಯಿಂದ ನೋಟಿಸ್ ಪಡೆದುಕೊಂಡಿದ್ದ ನುಸ್ರತ್ ಸಾಲ್ಟೆಲೇಕ್ ನಲ್ಲಿರುವ ಸಿಜಿಓ ಆಫೀಸಿಗೆ ಇಂದು ಹಾಜರಾಗಿದ್ದರು. ಇಡಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ರಿಯಲ್ ಎಸ್ಟೇಟ್ ಕಂಪನಿಯೊಂದರ ನಿರ್ದೇಶಕಿಯಾಗಿರುವ ನುಸ್ರತ್, ಆ ಕಂಪನಿಯು ಫ್ಲ್ಯಾಟ್ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಯಶ್ 19 ಚಿತ್ರಕ್ಕೆ ಸಂಯುಕ್ತಾ ಮೆನನ್ ನಾಯಕಿ: ಈ ತಿಂಗಳಲ್ಲೇ ಘೋಷಣೆ?

    ಪಶ್ಚಿಮ ಬಂಗಾಳದ (West Bengal) ಬಸಿರಹತ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಭಾರೀ ಅಂತರದಿಂದಲೇ ಗೆಲುವು ಸಾಧಿಸಿರುವ ನುಸ್ರತ್, ಈ ಹಿಂದೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.  ಹಲವಾರು ಜಾಹೀರಾತುಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ.

    ನುಸ್ರತ್ ಅವರನ್ನು ಇಡಿ ವಿಚಾರಣೆಗೆ ಕರೆಯುತ್ತಿದ್ದಂತೆಯೇ ವಿರೋಧ ಪಕ್ಷಗಳು ಭಾರೀ ಗಲಾಟೆ ಎಬ್ಬಿಸಿವೆ. ಕೂಡಲೇ ಅವರನ್ನು ಬಂಧಿಸುವಂತೆ ಒತ್ತಾಯ ಕೂಡ ಮಾಡಲಾಗುತ್ತಿದೆ. ಎಷ್ಟೇ ಪ್ರಭಾವಿ ಆಗಿದ್ದರೂ, ಅವರನ್ನು ಬಿಡಬೇಡಿ ಎಂದು ಹಲವರು ಒತ್ತಾಯ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇವರಿಗೆ ಮಹಿಳೆಯರು ಹಿಜಬ್, ಬಿಕಿನಿ ಏನೇ ಧರಿಸಿದ್ರು ಸಮಸ್ಯೆ: ಪಠಾಣ್ ಪರ ನಿಂತ ನುಸ್ರತ್

    ಇವರಿಗೆ ಮಹಿಳೆಯರು ಹಿಜಬ್, ಬಿಕಿನಿ ಏನೇ ಧರಿಸಿದ್ರು ಸಮಸ್ಯೆ: ಪಠಾಣ್ ಪರ ನಿಂತ ನುಸ್ರತ್

    ದೀಪಿಕಾ ಕೇಸರಿ ವಿವಾದ ದಿನಕ್ಕೊಂದು ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ(Deepika Padukone) ಪರ ರಮ್ಯಾ (Ramya)  ಬೆಂಬಲಕ್ಕೆ ನಿಂತಿದ್ದರು. ಇದೀಗ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ (Nusrat Jahan) ಕೂಡ ದೀಪಿಕಾ ಪರ ಬ್ಯಾಟಿಂಗ್ ಮಾಡಿದ್ದಾರೆ. ಇವರಿಗೆ ಹಿಜಬ್ ಧರಿಸಿದ್ರು ಸಮಸ್ಯೆ, ಬಿಕಿನಿ ಧರಿಸಿದ್ರು ಸಹಿಸಲ್ಲ ಎಂದು ಹೇಳುವ ಮೂಲಕ ಪಠಾಣ್‌ಗೆ (Pathan) ನುಸ್ರತ್ ಬೆಂಬಲ ಸೂಚಿಸಿದ್ದಾರೆ.

    ‌ʻಪಠಾಣ್ʼ ಸಿನಿಮಾದ ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ (Deepika Padukone) ಕೇಸರಿ ಬಣ್ಣ ಬಿಕಿನಿ ಧರಿಸಿ, ಕೊಂಚ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ಕುರಿತು ಕಳೆದ ನಾಲ್ಕೈದು ದಿನಗಳಿಂದ ನಟಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ದೀಪಿಕಾ ಕೇಸರಿ ಬಿಕಿನಿ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ಸಂಸದೆ ನುಸ್ರತ್ ಕೂಡ ಚಿತ್ರತಂಡದ ಪರ ನಿಂತಿದ್ದಾರೆ. ಇದನ್ನೂ ಓದಿ: ಐಶ್ವರ್ಯ ರೈ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಬಳಕೆ ಮಾಡಿದ ವಿದೇಶಿಗರು ಅಂದರ್

    ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಇದು ಯಾರ ಸಿದ್ಧಾಂತದ ಬಗ್ಗೆ ಅಲ್ಲ. ಇದು ಅಧಿಕಾರದಲ್ಲಿರುವ ಒಂದು ಪಕ್ಷದ ಜನರ ಗುಂಪಿನವರು ಮಾಡುತ್ತಿರುವ ಯೋಜಿತ ಪಿತ್ತೂರಿ. ಇಲ್ಲಿ ಅವರು ಏನು ಮಾಡಲು ಹೋರಟಿದ್ದಾರೆ, ಈ ವಿಚಾರದಲ್ಲಿ ಆಧ್ಯಾತ್ಮಿಕ, ಧಾರ್ಮಿಕವಾದ ವಿಚಾರಗಳನ್ನು ತರುತ್ತಿದ್ದಾರೆ. ಇದಕ್ಕೆ ಬಿಜೆಪಿ (Bjp) ಸರ್ಕಾರದ ಬೆಂಬಲ ಇದೆ. ಇಲ್ಲಿ ಮಹಿಳೆಯರು ಬಿಕಿನಿ ಧರಿಸಿದರು ಸಮಸ್ಯೆ, ಹಿಜಬ್ ಧರಿಸಿದರು ಸಮಸ್ಯೆ, ಅವರಿಗೆ ಎಲ್ಲದರಲ್ಲೂ ಸಮಸ್ಯೆ ಇದೆ ಎಂದು ಹೇಳಿದ್ದಾರೆ.

    ಭಾರತದ ಹೊಸ ಯುಗದ ಮಹಿಳೆಯರಿಗೆ ಏನು ಧರಿಸಬೇಕೆಂದು ಅವರೇ ಹೇಳುತ್ತಿದ್ದಾರೆ ಎಂದು ನುಸ್ರತ್ ಜಹಾನ್ ಹೇಳಿದರು. ಏನು ಧರಿಸಬೇಕು, ಏನು ತಿನ್ನಬೇಕು, ಹೇಗೆ ಮಾತನಾಡಬೇಕು, ಹೇಗೆ ನಡೆಯಬೇಕು, ಶಾಲೆಯಲ್ಲಿ ಏನನ್ನು ಕಲಿಯಬೇಕು, ಟಿವಿಯಲ್ಲಿ ಏನನ್ನು ನೋಡಬೇಕು ಎಂದು ಹೇಳುವ ಮೂಲಕ ಅವರು ಮಹಿಳೆಯರ ಜೀವನವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ವರ್ತನೆ ಎಲ್ಲಿಗೆ ಕೊಂಡೊಯ್ಯುತ್ತದೆ ಎಂದು ನನಗೆ ತಿಳಿದಿಲ್ಲ ಎಂದು ನುಸ್ರತ್ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಿರತೆ ಜೊತೆ ಸಂಸದೆ ನುಸ್ರತ್ ಜಹಾನ್ ಫೋಟೋಶೂಟ್

    ಚಿರತೆ ಜೊತೆ ಸಂಸದೆ ನುಸ್ರತ್ ಜಹಾನ್ ಫೋಟೋಶೂಟ್

    ಬೆಂಗಾಲಿ ಚೆಲುವೆ ನುಸ್ರತ್ ಜಹಾನ್ (Nusrat Jahan)  ಸದ್ಯ ವೆಕೇಷನ್ ಮೂಡ್‌ನಲ್ಲಿದ್ದಾರೆ. ಗೆಳೆಯ ಯಶ್ ಗುಪ್ತಾ (Yash gupta) ಜೊತೆ ಥೈಲ್ಯಾಂಡ್‌ಗೆ ಹಾರಿದ್ದಾರೆ. ಚಿರತೆ ಜೊತೆ ಸಂಸದೆ ನುಸ್ರತ್ ಜಹಾನ್ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ.

     

    View this post on Instagram

     

    A post shared by Nusrat J Ruhii (@nusratchirps)

    ಸಿನಿಮಾಗಳಲ್ಲಿ ಮೋಡಿ ಮಾಡಿದ್ದ ನಟಿ ನುಸ್ರತ್ ಜಹಾನ್ ಇದೀಗ ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ಕೆಲಸಕ್ಕೆ ಬ್ರೇಕ್ ಹಾಕಿ, ಥೈಲ್ಯಾಂಡ್‌ಗೆ ಹಾರಿದ್ದಾರೆ. ಗಳೆಯ ಯಶ್ ಗುಪ್ತಾ ಜತೆ ವೆಕೇಷನ್ ಏಂಜಾಯ್ ಮಾಡ್ತಿದ್ದಾರೆ. ಇಬ್ಬರು ಥೈಲ್ಯಾಂಡ್‌ನ (Thailand) ಪಾರ್ಕ್‌ಗೆ ತೆರಳಿ ಚಿರತೆ, ಹುಲಿ ಮತ್ತ ಆನೆಯೊಂದಿಗೆ ಫೋಟೋಗೆ ನಟಿ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ʻಬಿಗ್ ಬಾಸ್ʼ ಕನ್ನಡ ಸೀಸನ್ 9ಕ್ಕೆ ಕೌಂಟ್ ಡೌನ್ ಶುರು

     

    View this post on Instagram

     

    A post shared by Nusrat J Ruhii (@nusratchirps)

    ಸದ್ಯ ಚಿರತೆ, ಹುಲಿ, ಮತ್ತು ಆನೆ ಜೊತೆಗಿನ ನುಸ್ರತ್ ಫೋಟೋಗಳು ನೋಡುಗರ ಗಮನ ಸೆಳೆಯುತ್ತಿದೆ. ಯಶ್ ಗುಪ್ತಾ ಜೊತೆ ಫೋಟೋ ಪೋಸ್ ನೀಡಿ, ʻಸ್ನೇಹಪರ ಮುಖಾಮುಖಿʼ ಎಂದು ನುಸ್ರತ್‌ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಡ್ ರೂಂನಲ್ಲಿ ಹಸಿಬಿಸಿ ಚಿತ್ರಗಳಿಗೆ ಪೋಸ್ ಕೊಟ್ಟ ನಟಿ ನುಸ್ರತ್

    ಬೆಡ್ ರೂಂನಲ್ಲಿ ಹಸಿಬಿಸಿ ಚಿತ್ರಗಳಿಗೆ ಪೋಸ್ ಕೊಟ್ಟ ನಟಿ ನುಸ್ರತ್

    ಬೆಂಗಾಲಿ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ನಟಿ ನುಸ್ರತ್ ಜಹಾನ್ ಇದೀಗ ಬೋಲ್ಡ್ ಫೋಟೋಶೂಟ್‌ನಿಂದ ಹೈಪ್ ಕ್ರಿಯೇಟ್ ಮಾಡಿದ್ದಾರೆ.

     

    View this post on Instagram

     

    A post shared by Nusrat J Ruhii (@nusratchirps)

    ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಬೆಂಗಾಲಿ ಚಿತ್ರಗಳಿಂದ ಗುರುತಿಸಿಕೊಂಡಿದ್ದ ನಟಿ ನಂತರ ಇದೀಗ ರಾಜಕೀಯ ರಂಗದಲ್ಲೂ ಸಂಸದೆಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಆಗಾಗ ಬೋಲ್ಡ್ ಫೋಟೋಶೂಟ್ ಮೂಲಕ ಇಂಟರ್‌ನೆಟ್‌ನಲ್ಲಿ ಸೌಂಡ್ ಮಾಡುತ್ತಿದ್ದಾರೆ.

     

    View this post on Instagram

     

    A post shared by Nusrat J Ruhii (@nusratchirps)

    ಈಗ ಬೆಡ್‌ರೂಂನಲ್ಲಿ ಹಸಿಬಿಸಿ ಚಿತ್ರಗಳಿಗೆ ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ಟ್ ಕೊಟ್ಟಿದ್ದಾರೆ. ನಟಿಯ ನಯಾ ಲುಕ್ ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ನುಸ್ರತ್ ಹಾಟ್ ಲುಕ್ ಈಗ ಪಡ್ಡೆ ಹೈಕ್ಳ ನಿದ್ದೆಗೆಡಿಸಿದೆ. ಇದನ್ನೂ ಓದಿ:ಟ್ರೋಲ್ ಪೇಜ್ ಗಳಿಗೆ ನೀರಿಳಿಸಿದ ರಶ್ಮಿಕಾ ಮಂದಣ್ಣ: ರಾತ್ರೋರಾತ್ರಿ ಆದ ಸ್ಟಾರ್ ನಾನಲ್ಲ ಎಂದ ನಟಿ

     

    View this post on Instagram

     

    A post shared by Nusrat J Ruhii (@nusratchirps)

    ಸಿನಿಮಾ, ರಾಜಕೀಯ ವಿಚಾರದಲ್ಲಿ ಅಷ್ಟೇ ಸುದ್ದಿಯಾಗುತ್ತಿರೋದಲ್ಲ. ತಮ್ಮ ವೈಯಕ್ತಿಕ ವಿಷ್ಯದಿಂದ ಕೂಡ ನುಸ್ರತ್ ಸುದ್ದಿಯಲ್ಲಿದ್ದರು. ಯಶ್ ದಾಸ್ ಗುಪ್ತಾ ಸಂಬಂಧದ ವಿಚಾರವಾಗಿ ಸುದ್ದಿಯಲ್ಲಿದ್ದರು. ಈಗ ಹಾಟ್ ಲುಕ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಗನ ಕೈ ಹಿಡಿದಿರುವ ವೀಡಿಯೋ ಶೇರ್ ಮಾಡಿದ ನುಸ್ರತ್ ಜಹಾನ್

    ಮಗನ ಕೈ ಹಿಡಿದಿರುವ ವೀಡಿಯೋ ಶೇರ್ ಮಾಡಿದ ನುಸ್ರತ್ ಜಹಾನ್

    ಕೋಲ್ಕತ್ತಾ: ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ತಮ್ಮ ಪ್ರೀತಿಯ ಪುತ್ರನ ಕೈ ಹಿಡಿದಿರುವ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಸದಾ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಸುದ್ದಿ ಮೂಲಕ ಸದ್ದು ಮಾಡುವ ನುಸ್ರತ್ 2021ರ ಆಗಸ್ಟ್ 26ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯ 3 ತಿಂಗಳ ಬಳಿಕ ಮಗನ ಪುಟ್ಟ ಕೈ ಹಿಡಿದಿರುವ ಪೋಸ್ಟ್‌ವೊಂದನ್ನು ನುಸ್ರತ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಮಗನ ಕೈ ಫೋಟೋ ಅಷ್ಟೇ ಅಲ್ಲದೇ ಯಶ್ ಹಾಗೂ ತಮ್ಮ ಕೆಲವೊಂದು ಫೋಟೋಗಳನ್ನು ಕೋಲಾಜ್ ಮಾಡಿ ವೀಡಿಯೋವನ್ನು ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಹೆರಿಗೆ ಬಳಿಕ ಕ್ಯಾಮೆರಾ ಮುಂದೆ ನುಸ್ರತ್ ಜಹಾನ್ – ಮಗುವಿನ ತಂದೆ ಬಗ್ಗೆ ಹೇಳಿದ್ದೇನು?

     

    View this post on Instagram

     

    A post shared by Nusrat (@nusratchirps)

    ಈ ಮುನ್ನ ಸೆಪ್ಟೆಂಬರ್ 9 ರಂದು ಹೆರಿಗೆ ನಂತರ ಮೊದಲ ಬಾರಿಗೆ ಮಾಧ್ಯಮದವರ ಮುಂದೆ ಕಾಣಿಸಿಕೊಂಡಿದ್ದ ನುಸ್ರತ್‍ಗೆ ಮಗುವಿನ ಮುಖವನ್ನು ಯಾವಾಗ ತೋರಿಸುತ್ತೀರಾ ಎಂದು ಕೇಳಿದ್ದ ಪ್ರಶ್ನೆಗೆ ಅದನ್ನು ನೀವು ಅವನ ತಂದೆಯೊಂದಿಗೆ ಕೇಳಬೇಕು. ಸದ್ಯ ಅವರು ಯಾರನ್ನು ನೋಡಲು ಬಿಡುತ್ತಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ:  ಗಂಡು ಮಗುವಿಗೆ ಜನ್ಮ ನೀಡಿದ ಸಂಸದೆ ನುಸ್ರತ್ ಜಹಾನ್

    ಆಗಸ್ಟ್ 26ರಂದು ಕೋಲ್ಕತ್ತಾದ ನಿಯೀಟಿಯಾ ಆಸ್ಪತ್ರೆಯಲ್ಲಿ ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ನುಸ್ರತ್ ಮತ್ತು ಉದ್ಯಮಿ ನಿಖಿಲ್ ಜೈನ್ 2019ರಲ್ಲಿ ಟರ್ಕಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಬಳಿಕ ಕೆಲ ಕಾರಣಗಳಿಂದ ಇವರಿಬ್ಬರ ನಡುವೆ ಪರಸ್ಪರ ಬಿರುಕು ಮೂಡಿ ಬೇರೆ ಬೇರೆಯಾಗಿದ್ದರು ಎಂಬ ಸುದ್ದಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಕುರಿತಂತೆ ನುಸ್ರತ್ ನಿಖಿಲ್ ಜೈನ್ ಜೊತೆಗಿನ ಮದುವೆಗೆ ಯಾವುದೇ ಮಾನ್ಯತೆ ಇಲ್ಲ. ಟರ್ಕಿಯಲ್ಲಿ ಮದುವೆ ನಡೆದಿದ್ದು, ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್ ಶಿಪ್ ಅಷ್ಟೇ ಎಂದಿದ್ದರು.

  • ಕೇಕ್ ಮೇಲೆ ಗಂಡ ಎಂದು ಬರೆಸಿದ ನುಸ್ರತ್ – ಯಶ್ ಜೊತೆಗಿನ ವಿವಾಹದ ಬಗ್ಗೆ ಸುಳಿವು ಕೊಟ್ರಾ?

    ಕೇಕ್ ಮೇಲೆ ಗಂಡ ಎಂದು ಬರೆಸಿದ ನುಸ್ರತ್ – ಯಶ್ ಜೊತೆಗಿನ ವಿವಾಹದ ಬಗ್ಗೆ ಸುಳಿವು ಕೊಟ್ರಾ?

    ಕೋಲ್ಕತ್ತಾ: ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್, 36ನೇ ವಸಂತಕ್ಕೆ ಕಾಲಿಟ್ಟ ಯಶ್‍ದಾಸ್‍ಗುಪ್ತಾ ಅವರ ಹುಟ್ಟುಹಬ್ಬವನ್ನು ವಿಶೇಷವಾದ ಕೇಕ್ ಕತ್ತರಿಸುವ ಮೂಲಕ ಸೆಲಬ್ರೆಟ್ ಮಾಡಿದ್ದಾರೆ. ಬರ್ತ್‍ಡೇ ಸೆಲಬ್ರೆಟ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಈ ಕೇಕ್ ಮೇಲೆ ನುಸ್ರತ್ ಜಹಾನ್ ಗಂಡ ಎಂದು ಬರೆಸಿರುವ ಮೂಲಕ ನುಸ್ರತ್ ಹಾಗೂ ಯಶ್ ಮದುವೆಯಾಗಿರುವ ಬಗ್ಗೆ ಸುಳಿವು ನೀಡಿದ್ರಾ ಎಂಬ ಪ್ರಶ್ನೆ ಎದ್ದಿದೆ.

    nusrath jahan

    ಆಗಸ್ಟ್ 26ರಂದು ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದರು. ಅಲ್ಲದೇ ಮಗುವಿನ ಬರ್ತ್ ಸರ್ಟಿಫಿಕೇಟ್‍ನಲ್ಲಿ ಯಶ್ ದಾಸ್ ಗುಪ್ತಾ ಎಂದು ಉಲ್ಲೇಖಿಸಲಾಗಿತ್ತು. ಇದೀಗ ಯಶ್ ಬರ್ತ್‍ಡೇ ದಿನದಂದು ಇಬ್ಬರು ಒಟ್ಟಿಗೆ ಡಿನ್ನರ್ ಮಾಡುವುದರ ಮೂಲಕ ಸಖತ್ ಎಂಜಾಯ್ ಮಾಡಿದ್ದಾರೆ. ಬರ್ತ್‍ಡೇ ಕೇಕ್‍ನ ಒಂದು ಭಾಗದಲ್ಲಿ ಗಂಡ ಎಂದು ಬರೆಸಲಾಗಿದ್ದು, ಮತ್ತೊಂದು ಕಡೆ ಅಪ್ಪ ಎಂದು ಬರೆಸಲಾಗಿದೆ. ಜೊತೆಗೆ ಇಬ್ಬರು ಒಟ್ಟಿಗೆ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋಗಳನ್ನು ನುಸ್ರತ್ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹೆರಿಗೆ ಬಳಿಕ ಕ್ಯಾಮೆರಾ ಮುಂದೆ ನುಸ್ರತ್ ಜಹಾನ್ – ಮಗುವಿನ ತಂದೆ ಬಗ್ಗೆ ಹೇಳಿದ್ದೇನು?

    nusrath jahan

    ಈ ಮುನ್ನ 2019ರ ಜೂನ್ 19ರಂದು ನುಸ್ರತ್ ಜಹಾನ್ ಮತ್ತು ನಿಖಿಲ್ ಜೈನ್ ಟರ್ಕಿಯಲ್ಲಿ ವಿವಾಹವಾಗಿದ್ದರು. ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್ ಶಿಪ್ ಅಷ್ಟೇ ಎಂದಿದ್ದರು. ಇದನ್ನೂ ಓದಿ:  ಗಂಡು ಮಗುವಿಗೆ ಜನ್ಮ ನೀಡಿದ ಸಂಸದೆ ನುಸ್ರತ್ ಜಹಾನ್

    nusrath jahan

    ನಂತರ ನುಸ್ರತ್ ಹಾಗೂ ಯಶ್ ದಾಸ್‍ಗುಪ್ತಾ ರಿಲೇಶನ್ ಶಿಪ್‍ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಮಗುವಿನ ತಂದೆ ಹೆಸರನ್ನು ನುಸ್ರತ್ ಇಲ್ಲಿಯವರೆಗೂ ಬಹಿರಂಗ ಪಡಿಸಿಲ್ಲ. ಆದರೆ ಮಗುವಿನ ಜನನದ ಪ್ರಮಾಣ ಪತ್ರದಲ್ಲಿ ಮಗುವಿನ ಯಶ್ ದಾಸ್‍ಗುಪ್ತಾ ಎಂದು ಹೆಸರಿಸಲಾಗಿದೆ.

  • ಹೆರಿಗೆ ಬಳಿಕ ಕ್ಯಾಮೆರಾ ಮುಂದೆ ನುಸ್ರತ್ ಜಹಾನ್ – ಮಗುವಿನ ತಂದೆ ಬಗ್ಗೆ ಹೇಳಿದ್ದೇನು?

    ಹೆರಿಗೆ ಬಳಿಕ ಕ್ಯಾಮೆರಾ ಮುಂದೆ ನುಸ್ರತ್ ಜಹಾನ್ – ಮಗುವಿನ ತಂದೆ ಬಗ್ಗೆ ಹೇಳಿದ್ದೇನು?

    ಕೋಲ್ಕತ್ತಾ: ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ತಮ್ಮ ಚೊಚ್ಚಲ ಹೆರಿಗೆ ನಂತರ ಇದೇ ಪ್ರಥಮ ಬಾರಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ.

    ಆಗಸ್ಟ್ 8 ರಂದು ಗಂಡು ಮಗುವಿಗೆ ಜನ್ಮ ನೀಡಿದ ನುಸ್ರತ್ ಜಹಾನ್, ಒಂದು ತಿಂಗಳ ಒಳಗೆ ಇದೀಗ ಕೆಲಸವನ್ನು ಪುನರಾಂಭಿಸಿದ್ದಾರೆ. ಈ ಮಧ್ಯೆ ಶುಕ್ರವಾರ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರತ್ ಜಹಾನ್ ಮಗುವಿನ ತಂದೆ ಬಗ್ಗೆ ಮಾಧ್ಯಮದ ಎದುರಿಗೆ ಮಾತನಾಡಿದ್ದಾರೆ.  ಇದನ್ನೂ ಓದಿ:  ಗಂಡು ಮಗುವಿಗೆ ಜನ್ಮ ನೀಡಿದ ಸಂಸದೆ ನುಸ್ರತ್ ಜಹಾನ್

    Nusrat Jahan

    ಮಾಧ್ಯಮದವರು ಮಗುವಿನ ಮುಖವನ್ನು ಯಾವಾಗ ಮೊದಲ ಬಾರಿಗೆ ನೋಡಬಹುದು ಎಂದು ಪ್ರಶ್ನಿಸಿದಾಗ, ಅದನ್ನು ನೀವು ಅವನ ತಂದೆಯೊಂದಿಗೆ ಕೇಳಬೇಕು. ಸದ್ಯ ಅವರು ಯಾರನ್ನು ನೋಡಲು ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಕುಣಿದು ಕುಪ್ಪಳಿಸಿ ದುರ್ಗಾ ಪೂಜೆ ನೆರವೇರಿಸಿದ ಸಂಸದೆ ನುಸ್ರತ್ ಜಹಾನ್

    ಆಗಸ್ಟ್ 8ರಂದು ಕೋಲ್ಕತ್ತಾದ ನಿಯೀಟಿಯಾ ಆಸ್ಪತ್ರೆಯಲ್ಲಿ ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ನುಸ್ರತ್ ಮತ್ತು ಉದ್ಯಮಿ ನಿಖಿಲ್ ಜೈನ್ 2019ರಲ್ಲಿ ಟರ್ಕಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಬಳಿಕ ಕೆಲ ಕಾರಣಗಳಿಂದ ಇವರಿಬ್ಬರ ನಡುವೆ ಪರಸ್ಪರ ಬಿರುಕು ಮೂಡಿ ಬೇರೆ ಬೇರೆಯಾಗಿದ್ದರು ಎಂಬ ಸುದ್ದಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಕುರಿತಂತೆ ನುಸ್ರತ್ ನಿಖಿಲ್ ಜೈನ್ ಜೊತೆಗಿನ ಮದುವೆಗೆ ಯಾವುದೇ ಮಾನ್ಯತೆ ಇಲ್ಲ. ಟರ್ಕಿಯಲ್ಲಿ ಮದುವೆ ನಡೆದಿದ್ದು, ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್ ಶಿಪ್ ಅಷ್ಟೇ ಎಂದಿದ್ದರು.

  • ಗಂಡು ಮಗುವಿಗೆ ಜನ್ಮ ನೀಡಿದ ಸಂಸದೆ ನುಸ್ರತ್ ಜಹಾನ್

    ಗಂಡು ಮಗುವಿಗೆ ಜನ್ಮ ನೀಡಿದ ಸಂಸದೆ ನುಸ್ರತ್ ಜಹಾನ್

    ಕೋಲ್ಕತ್ತಾ: ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಆಗಸ್ಟ್ 25ರ ರಾತ್ರಿ ಕೋಲ್ಕತ್ತಾದ ನಿಯೀಟಿಯಾ ಆಸ್ಪತ್ರೆಗೆ ದಾಖಲಾಗಿದ್ದ ನುಸ್ರತ್ ಜಹಾನ್, ಗುರುವಾರ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಸದ್ಯದ ವರದಿ ಪ್ರಕಾರ ತಾಯಿ ಮತ್ತು ಮಗು ಇಬ್ಬರು ಕ್ಷೇಮವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ನಟ ಯ್ ದಾಸ್ ಗುಪ್ತಾ ನುಸ್ರತ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ನಿನ್ನೆ ನುಸ್ರಾತ್‍ರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ಮುನ್ನ ನುಸ್ರತ್ ಆಗಸ್ಟ್ 25ರಂದು ತಪಾಸಣೆಗಾಗಿ ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್ ಪ್ರದೇಶದ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದೀಗ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ನುಸ್ರತ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಲ್ಲದೇ ಇಂದು ಮುಂಜಾನೆ ನುಜ್ರತ್ ಜಹಾನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಭಯಕ್ಕಿಂತ ನಂಬಿಕೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದರು. ಇದನ್ನೂ ಓದಿ:ಖ್ಯಾತ ತಬಲ ವಾದ್ಯಕಾರ ಪಂಡಿತ್ ಸುಭಂಕರ್ ಬ್ಯಾನರ್ಜಿ ಕೊರೊನಾಗೆ ಬಲಿ

     

    View this post on Instagram

     

    A post shared by Nusrat (@nusratchirps)

    ನುಸ್ರತ್ ಮತ್ತು ಉದ್ಯಮಿ ನಿಖಿಲ್ ಜೈನ್ 2019ರಲ್ಲಿ ಟರ್ಕಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆ ಬಳಿಕ ಕೆಲ ಕಾರಣಗಳಿಂದ ಇವರಿಬ್ಬರ ನಡುವೆ ಪರಸ್ಪರ ಬಿರುಕು ಮೂಡಿ ಬೇರೆ ಬೇರೆಯಾಗಿದ್ದರು ಎಂಬ ಸುದ್ದಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಕುರಿತಂತೆ ನುಸ್ರತ್ ನಿಖಿಲ್ ಜೈನ್ ಜೊತೆಗಿನ ಮದುವೆಗೆ ಯಾವುದೇ ಮಾನ್ಯತೆ ಇಲ್ಲ. ಟರ್ಕಿಯಲ್ಲಿ ಮದುವೆ ನಡೆದಿದ್ದು, ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್ ಶಿಪ್ ಅಷ್ಟೇ ಎಂದಿದ್ದರು. ಇದನ್ನೂ ಓದಿ:ಶಸ್ತ್ರ ಚಿಕಿತ್ಸೆ ನಂತರ ಅಭಿಷೇಕ್ ಫೋಟೋ ಶೇರ್

  • ನುಸ್ರತ್ ಜಹಾನ್ 6 ತಿಂಗಳ ಗರ್ಭಿಣಿ, ಮಗು ನನ್ನದಲ್ಲ ಎಂದ ಗಂಡ – ಬಿರುಕಿಗೆ ಕಾರಣರಾದ್ರಾ ಯಶ್?

    ನುಸ್ರತ್ ಜಹಾನ್ 6 ತಿಂಗಳ ಗರ್ಭಿಣಿ, ಮಗು ನನ್ನದಲ್ಲ ಎಂದ ಗಂಡ – ಬಿರುಕಿಗೆ ಕಾರಣರಾದ್ರಾ ಯಶ್?

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದೆ, ಬೆಂಗಾಲಿ ನಟಿ ನುಸ್ರತ್ ಜಹಾನ್ ಸದಾ ಸುದ್ದಿಯಲ್ಲಿರುತ್ತಾರೆ. ಮೊದಲು ನಟಿಯಾಗಿ, ನಂತರ ಸಂಸದೆಯಾಗಿ ಬಳಿಕ ನಿಖಿಲ್ ಜೈನ್ ಜೊತೆ ವಿವಾಹದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದೀಗ ಅವರು ಆರು ತಿಂಗಳ ಗರ್ಭಿಣಿ ಎಂಬ ಸುದ್ದಿಹರಿದಾಡುತ್ತಿದೆ. ಅದರೆ ನಿಖಿಲ್ ಜೈನ್ ಮಾತ್ರ ಆ ಮಗು ನನ್ನದಲ್ಲ ಎನ್ನುವ ಮೂಲಕ ಇವರ ಕೌಟುಂಬಿಕ ಕಲಹ ಬೀದಿಗೆ ಬಂದಿದೆ.

    ನುಸ್ರತ್ ಜಹಾನ್ 2019 ಜೂನ್‍ನಲ್ಲಿ ಉದ್ಯಮಿ ನಿಖಿಲ್ ಜೈನ್ ಅವರನ್ನು ಟರ್ಕಿಯಲ್ಲಿ ವಿವಾಹವಾಗಿದ್ದರು. ಆ ಬಳಿಕ ಕೆಲ ಕಾರಣಗಳಿಂದ ಇವರಿಬ್ಬರ ನಡುವೆ ಪರಸ್ಪರ ಬಿರುಕು ಮೂಡಿ ಬೇರೆ ಬೇರೆಯಾಗಿದ್ದರು. ಇವರ ಕುಟುಂಬ ಕಲಹ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ಅವರಿಬ್ಬರಿಂದಲೂ ಯಾವುದೇ ಅಧಿಕೃತ ಹೇಳಿಕೆ ಹೊರ ಬಂದಿರಲಿಲ್ಲ. ಇದನ್ನೂ ಓದಿ:ನೂತನ ಸಂಸದೆಯ ಅದ್ಧೂರಿ ಆರತಕ್ಷತೆ – ಮಮತಾ ಬ್ಯಾನರ್ಜಿ ಆಗಮನ

    ನುಸ್ರತ್ ಈಗ ನಿಖಿಲ್ ಜೈನ್ ಜೊತೆಗಿನ ಮದುವೆಗೆ ಯಾವುದೇ ಮಾನ್ಯತೆ ಇಲ್ಲ. ಟರ್ಕಿಯಲ್ಲಿ ಮದುವೆ ನಡೆದಿದ್ದು, ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್‍ಶಿಪ್ ಅಷ್ಟೇ ಎಂದಿದ್ದಾರೆ. ಇದನ್ನೂ ಓದಿ:ದುರ್ಗಾ ಪೂಜೆ ಮಾಡಿದಕ್ಕೆ ಕಿಡಿಕಾರಿದ ಮೌಲ್ವಿಗಳಿಗೆ ನುಸ್ರತ್ ತಿರುಗೇಟು

    ಆದರೆ ಕೆಲ ಮಾಹಿತಿಗಳ ಪ್ರಕಾರ ನುಸ್ರತ್ ಅವರು 6 ತಿಂಗಳ ಗರ್ಭಿಣಿ ಎಂದು ಸುದ್ದಿ ಹರಿದಾಡುತ್ತಿದೆ ಆದರೆ ಇದನ್ನು ಅಧಿಕೃತವಾಗಿ ನುಸ್ರತ್ ಅವರು ಹೇಳಿಕೊಂಡಿಲ್ಲ. ಆದರೆ ನಿಖಿಲ್ ಮಾತ್ರ ಆ ಮಗು ನನ್ನದಲ್ಲ. ನಾವು 6 ತಿಂಗಳಿಂದ ಜೊತೆಯಾಗಿ ಸಂಸಾರ ನಡೆಸುತ್ತಿಲ್ಲ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ:ಜಗನ್ನಾಥ ಯಾತ್ರೆಯಲ್ಲಿ ನುಸ್ರತ್ ಜಹಾನ್- ನನ್ನ ಧರ್ಮ ಯಾವುದು ಅಂತ ನನಗೆ ಗೊತ್ತು

    ನುಸ್ರತ್ ಅವರ ಕುಟುಂಬ ಕಲಹಕ್ಕೆ ಬಿಜೆಪಿ ನಾಯಕ, ಬೆಂಗಾಲಿ ನಟ ಯಶ್ ದಾಸ್‍ಗುಪ್ತ ಅವರು ಕಾರಣ ಎಂಬ ಗುಸುಗುಸು ಕೂಡ ಕೇಳಿಬರುತ್ತಿದೆ. ಯಶ್ ದಾಸ್‍ಗುಪ್ತ ಮತ್ತು ನುಸ್ರತ್ ಬೆಂಗಾಲಿಯ ‘ಒನ್’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು ಆ ಬಳಿಕ ಇವರಿಬ್ಬರ ನಡುವೆ ಹೆಚ್ಚಿನ ಸ್ನೇಹ ಬೆಳೆದಿತ್ತು. ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಜೊತೆಯಾಗಿರುವ ಹಲವು ಫೋಟೋಗಳು ಹರಿದಾಡುತ್ತಿದೆ.

  • ಅಲ್ಪಸಂಖ್ಯಾತರು ಬಿಜೆಪಿ ಸರ್ಕಾರಕ್ಕೆ ಹೆದರುವಂತಾಗಿದೆ: ನುಸ್ರತ್ ಜಹಾನ್

    ಅಲ್ಪಸಂಖ್ಯಾತರು ಬಿಜೆಪಿ ಸರ್ಕಾರಕ್ಕೆ ಹೆದರುವಂತಾಗಿದೆ: ನುಸ್ರತ್ ಜಹಾನ್

    – ಭಯದ ವಾತಾವರಣದಲ್ಲಿದ್ದಾರೆ ಎಷ್ಟೋ ಜನ

    ನವದೆಹಲಿ: ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದು, ಬಿಜೆಪಿ ಸರ್ಕಾರಕ್ಕೆ ಹೆದರುವಂತಾಗಿದ ಎಂದು ಟಿಎಂಸಿ ಸಂಸದೆ ನುಸ್ರತ್ ಜಹಾನ್ ಹೇಳಿದ್ದಾರೆ.

    ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಮತನಾಡಿದ ನುಸ್ರತ್ ಜಹಾನ್, ಪಶ್ಚಿಮ ಬಂಗಳಾದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಗ್ನಿಮಿತ್ರಾ ಪೌಲ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಭಾಗಿಯಾಗಿದ್ದರು. ಈ ವೇಳೆ ಅಗ್ನಿಮಿತ್ರಾ ಮತ್ತು ನುಸ್ರತ್ ಜಹಾನ್ ನಡುವೆ ವಾಕ್ಸಮರವೇ ಏರ್ಪಟ್ಟಿತ್ತು.

    ಸಿಎಂ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ಮುಸ್ಲಿಮರಿಗೆ ಯಾವುದೇ ಸಹಾಯ ಮಾಡಿಲ್ಲ ಎಂದು ಅಗ್ನಿಮಿತ್ರಾ ಆರೋಪಿಸಿದರು. ಈ ಆರೋಪಕ್ಕೆ ಪ್ರತಿಕ್ರಿಯಿಸಿದ ನುಸ್ರತ್ ಜಹಾನ್, ಈ ಹೇಳಿಕೆಗಳಿಗೆ ನನ್ನ ಸಂಪೂರ್ಣ ವಿರೋಧವಿದೆ. ಬಿಜೆಪಿ ಸರ್ಕಾರ ಬಂದ್ರೆ ತಮ್ಮ ಅವನತಿ ಎಂಬ ಭಯ ಅಲ್ಪಸಂಖ್ಯಾತರಲ್ಲಿ ಮನೆ ಮಾಡಿದೆ ಎಂದು ತಿರುಗೇಟು ನೀಡಿದರು.

    ಇದೇ ವೇಳೆ ಜೈ ಶ್ರೀರಾಮ ಘೋಷಣೆಯ ವಿಚಾರವೂ ಮುನ್ನಲೆಗೆ ಬಂದಿತ್ತು. ಜೈ ಶ್ರೀರಾಮ ಅನ್ನೋ ಘೋಷಣೆ ಸಮೃದ್ಧಿಯ ಪ್ರತೀಕವಾಗಿದ್ದು, ರಾಜಕೀಯ ಜಯಘೋಷ ಅಲ್ಲ. ಜನರು ಜೈ ಶ್ರೀರಾಮ, ಸೀತಾರಾಮ, ರಾಮ ರಾಮ ಪಠಿಸೋದು ಸಾಮಾನ್ಯ. ಮಮತಾ ಬ್ಯಾನರ್ಜಿ ಹಿಂದೂ ಆಗಿದ್ರೆ ಅವರಿಗೆ ಜೈ ಶ್ರೀರಾಮ ಘೋಷಣೆಯಿಂದ ಮುಜುಗರಕ್ಕೊಳಗಾಗಬೇಕು ಎಂದು ಅಗ್ನಿಮಿತ್ರಾ ಪೌಲ್ ಪ್ರಶ್ನಿಸಿದರು. ಹೀಗೆ ಸುಮಾರು ಸಮಯ ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಇಬ್ಬರು ನಾಯಕಿಯರ ಮಧ್ಯೆ ಚರ್ಚೆ ನಡೆಯಿತು.