Tag: ನುಗ್ಗೆಕಾಯಿ

  • ಬಿಸಿ-ಬಿಸಿ ಅನ್ನದೊಂದಿಗೆ ಸವಿಯಿರಿ ನುಗ್ಗೆಕಾಯಿ ಸಾಂಬಾರ್

    ಬಿಸಿ-ಬಿಸಿ ಅನ್ನದೊಂದಿಗೆ ಸವಿಯಿರಿ ನುಗ್ಗೆಕಾಯಿ ಸಾಂಬಾರ್

    ಸಾಂಬಾರ್ ಪಾಕವಿಧಾನಗಳು ದಕ್ಷಿಣ ಭಾರತೀಯರಿಗೆ ಪ್ರಧಾನ ಮತ್ತು ಹೆಚ್ಚು ಆದ್ಯತೆಯ ಪಾಕವಿಧಾನವಾಗಿದೆ. ಸಾಂಬಾರ್ ಅನ್ನ, ಇಡ್ಲಿ ಜೊತೆ ತಿನ್ನುವುದರಿಂದ ಸವಿಯಲು ಸಖತ್ ಟೇಸ್ಟಿಯಾಗಿರುತ್ತೆ. ಅದರಲ್ಲಿಯೂ ಅನ್ನಕ್ಕೆ ನುಗ್ಗೆಕಾಯಿ ಸಾಂಬಾರ್ ಸಖತ್ ಕಾಂಬಿನೇಷನ್. ನುಗ್ಗೆಕಾಯಿಯಲ್ಲಿ ಮಾಡುವ ಸಾಂಬಾರ್ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಈ ಸಾಂಬಾರ್ ಮಾಡುವ ವಿಧಾನ ತುಂಬಾ ಸುಲಭವಾಗಿದ್ದು, ರೆಸಿಪಿ ಇಲ್ಲಿದೆ.

    ಬೇಕಾಗಿರುವ ಪದಾರ್ಥಗಳು
    * ನುಗ್ಗೆಕಾಯಿ – 20 ತುಂಡುಗಳು
    * ಸಾಂಬಾರ್ ಪೌಡರ್ – 2 ಟೀಸ್ಪೂನ್
    * ಎಣ್ಣೆ – 3 ಟೀಸ್ಪೂನ್
    * ಸಾಸಿವೆ – 1 ಟೀಸ್ಪೂನ್
    * ಒಣಗಿದ ಕೆಂಪು ಮೆಣಸಿನಕಾಯಿ – 3

    * ಚಿಕ್ಕ ಈರುಳ್ಳಿ – 1 ಕಪ್
    * ಕರಿಬೇವು – 10 ಎಲೆಗಳು
    * ಕಟ್ ಮಾಡಿದ ಟೊಮೆಟೊ – 1
    * ಅರಿಶಿನ – ಅರ್ಧ ಟೀಸ್ಪೂನ್
    * ಉಪ್ಪು – 1 ಟೀಸ್ಪೂನ್
    * ನೀರು – 2 ಕಪ್
    * ತೊಗರಿ ಬೇಳೆ – 2 ಕಪ್
    * ಹುಣಸೆಹಣ್ಣಿನ ಸಾರ – ಅರ್ಧ ಕಪ್
    * ಕೊತ್ತಂಬರಿ – 2 ಟೇಬಲ್ಸ್ಪೂನ್
    * ಬೆಳ್ಳುಳ್ಳಿ – 2

    ಮಾಡುವ ವಿಧಾನ
    * ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 3 ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ ಸಾಸಿವೆ, ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ.
    * ಈ ಮಿಶ್ರಣಕ್ಕೆ ಚಿಕ್ಕ ಈರುಳ್ಳಿಗಳನ್ನು ಸೇರಿಸಿ, 2 ನಿಮಿಷ ಬೇಯಿಸಿ. ನಂತರ ಅದಕ್ಕೆ ಟೊಮೆಟೊ ಸೇರಿಸಿ ಫ್ರೈ ಮಾಡಿ.
    * ಅದಕ್ಕೆ ಅರಿಶಿನ, ಸಾಂಬಾರ್ ಪೌಡರ್ ಮತ್ತು ಉಪ್ಪು ಸೇರಿಸಿ ಒಂದು ನಿಮಿಷ ಬೇಯಿಸಿ.
    * ಆ ಮಸಾಲೆಗೆ ನುಗ್ಗೆಕಾಯಿ ತುಂಡುಗಳನ್ನು ಸೇರಿಸಿ 1 ಕಪ್ ನೀರು ಸೇರಿಸಿ. 10 ನಿಮಿಷಗಳ ಕಾಲ ಮುಚ್ಚಿಡಿ. ಅದಕ್ಕೆ ತೊಗರಿ ಬೇಳೆ ಮತ್ತು ನೀರು ಸೇರಿಸಿ ಬೇಯಿಸಿ.
    * ಈ ಮಿಶ್ರಣಕ್ಕೆ ಹುಣಸೆಹಣ್ಣಿನ ಸಾರವನ್ನು ಸೇರಿಸಿ, ಚೆನ್ನಾಗಿ ಬೆರೆಸಿ ಪರಿಮಳ ಬರುವವರೆಗೂ ಕುದಿಸಿ.-

    – ಅಂತಿಮವಾಗಿ, ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತು ಬಿಸಿ ಬಿಸಿ ಅನ್ನದೊಂದಿಗೆ ನುಗ್ಗೆಕಾಯಿ ಸಾಂಬಾರ್ ಜೊತೆ ಆನಂದಿಸಿ.

    Live Tv

  • ಲಾಕ್‍ಡೌನ್ ಎಫೆಕ್ಟ್- ನುಗ್ಗೆಕಾಯಿ ಬೆಳೆದ ರೈತರು ಕಂಗಾಲು

    ಲಾಕ್‍ಡೌನ್ ಎಫೆಕ್ಟ್- ನುಗ್ಗೆಕಾಯಿ ಬೆಳೆದ ರೈತರು ಕಂಗಾಲು

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ನುಗ್ಗೆಕಾಯಿ ಬೆಳೆದ ರೈತರು ಕೊರೊನಾ ಲಾಕ್‍ಡೌನ್ ಎಫೆಕ್ಟ್ ನಿಂದ ಈ ವರ್ಷ ಭಾರೀ ನಷ್ಟಕ್ಕೆ ಒಳಗಾಗಿದ್ದಾರೆ. ಎಲ್ಲ ರೈತರಿಗೆ ಸರಿಯಾದ ಮಾರುಕಟ್ಟೆ ಸಿಗುತ್ತಿಲ್ಲ. ಅಲ್ಲದೆ ನುಗ್ಗೆಕಾಯಿ ಬೆಲೆ ಕೂಡ ಇಳಿಕೆಯಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.

    ಒಬ್ಬೊಬ್ಬ ರೈತರು ಎರಡು ಮೂರು ಎಕರೆ ಪ್ರದೇಶದಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ನುಗ್ಗೆಕಾಯಿ ಬೆಳೆದಿದ್ದಾರೆ. ಈ ಬಾರಿ ನುಗ್ಗೆಕಾಯಿ ಬೆಳೆಕೂಡ ಉತ್ತಮವಾಗೇ ಬಂದಿದೆ. ಆದರೆ ಕೊಳ್ಳುವವರೇ ಇಲ್ಲವಾಗಿದೆ. ಹೀಗಾಗಿ ರೈತನ ಕೈ ಹಿಡಿಯಬೇಕಿದ್ದ ನುಗ್ಗೆಕಾಯಿ ಈಗ ರೈತನ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

    ನುಗ್ಗೆಕಾಯಿ ಸರಿಯಾಗಿ ಮಾರಾಟವಾಗದೇ ಮನೆಯಲ್ಲೇ ಹಾಳಾಗುತ್ತಿವೆ. ಲಾಕ್‍ಡೌನ್‍ನಿಂದ ನುಗ್ಗೆಕಾಯಿ ಮಾರಾಟವಾಗದೇ ರೈತ ಸಾಲಗಾರನಾಗುತ್ತಿದ್ದಾನೆ. ಹೀಗಾಗಿ ಸರ್ಕಾರ ರೈತರಿಂದ ನೇರವಾಗಿ ಖರೀದಿಸಬೇಕು. ಇಲ್ಲವೇ ಮಾರುಕಟ್ಟೆ ಸೌಲಭ್ಯ ಹಾಗೂ ಉತ್ತಮ ಬೆಲೆಯನ್ನು ದೊರಕಿಸಿಕೊಡಬೇಕು ಎಂದು ನುಗ್ಗೆಕಾಯಿ ಬೆಳೆದಿರುವ ರೈತರು ಮನವಿ ಮಾಡಿದ್ದಾರೆ.

  • ಚಿಕನ್‍ಗೆ ಸ್ಪರ್ಧೆ ನೀಡುತ್ತಿದೆ ನುಗ್ಗೆಕಾಯಿ- 1 ಕೆಜಿಗೆ 349 ರೂ.

    ಚಿಕನ್‍ಗೆ ಸ್ಪರ್ಧೆ ನೀಡುತ್ತಿದೆ ನುಗ್ಗೆಕಾಯಿ- 1 ಕೆಜಿಗೆ 349 ರೂ.

    ಬೆಂಗಳೂರು: ಪ್ರವಾಹ, ಅತಿವೃಷ್ಟಿ ಪರಿಣಾಮ ನುಗ್ಗೆಕಾಯಿ ದರದಲ್ಲಿ ಭಾರೀ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆಜಿ ನುಗ್ಗೆಕಾಯಿ ಬೆಲೆ 300 ರೂ. ಗಡಿದಾಟಿದೆ.

    ನುಗ್ಗೆಕಾಯಿಯಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ. ಹೀಗಾಗಿ ಹೆಚ್ಚಿನ ಗ್ರಾಹಕರು ನುಗ್ಗೆಕಾಯಿ ಖರೀದಿಸುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ನುಗ್ಗೆಕಾಯಿ ಸೇರಿದಂತೆ ಸೊಪ್ಪು, ತರಕಾರಿ ಬೆಲೆ ನಾಶವಾಗಿವೆ. ಪರಿಣಾಮ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ತರಕಾರಿ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ನುಗ್ಗೆಕಾಯಿ, ತರಕಾರಿ ಹಾಗೂ ಸೊಪ್ಪಿನ ಬೆಲೆ ಏರಿಕೆಯಾಗುತ್ತಿದೆ.

    ಕಳೆದ 10 ದಿನಗಳಲ್ಲಿ ಕಡಿಮೆ ಇದ್ದ ನುಗ್ಗೆಕಾಯಿ ಬೆಲೆ ದರ 200 ರೂ. ಗಡಿದಾಟಿದೆ. ಶುಕ್ರವಾರ ಒಂದು ಕೆಜಿ ನುಗ್ಗೆಕಾಯಿ 312 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಇಂದು ಹಾಪ್ ಕಾಮ್ಸ್ ಗಳಲ್ಲಿ ಒಂದು ಕೆ.ಜಿ ನುಗ್ಗೆಕಾಯಿಯು 349 ರೂಪಾಯಿಗೆ ಮಾರಾಟವಾಗುತ್ತಿದೆ. ಈ ದರವು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತರಕಾರಿ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

    ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪು ಉತ್ತಮ ಔಷಧೀಯ ಹೊಂದಿದೆ. ಇದು ಆರೋಗ್ಯವರ್ಧಕ ತರಕಾರಿ. ನಿಂಬೆಕಾಯಿ ಉಪ್ಪಿನಕಾಯಿಗೆ ನುಗ್ಗೆಕಾಯಿ ತುಂಡು ಮಾಡಿ ಸೇರಿಸಬಹುದು. ಪಕ್ವವಾದ ನಂತರ ಈ ನುಗ್ಗೆಕಾಯಿ ತಿನ್ನಲು ರುಚಿ. ನುಗ್ಗೆಕಾಯಿಯನ್ನು ಯಾವ ರೀತಿಯಲ್ಲಿ ಸೇವಿಸಿದರೂ ಸರಿಯೇ ಅದು ದೇಹಾರೋಗ್ಯವನ್ನು ಉತ್ತಮಪಡಿಸುತ್ತದೆ.

    ನುಗ್ಗೆಕಾಯಿಯಿಂದ ಸಾರು, ಪಲ್ಯಗಳನ್ನು ಮಾಡಬಹುದು. 100 ಗ್ರಾಂ ನುಗ್ಗೆಯಲ್ಲಿ 9.4 ಗ್ರಾಂ ಪ್ರೋಟೀನ್, ಶೇ. 151 ವಿಟಮಿನ್ ಎ, ಶೇ.86 ವಿಟಮಿನ್ ಸಿ, ಶೇ. 18 ಕ್ಯಾಲ್ಸಿಯಮ್ ಹಾಗೂ ಶೇ.22 ರಷ್ಟು ಕಬ್ಬಿನ ಅಂಶ ಇರುತ್ತದೆ. ನುಗ್ಗೆಕಾಯಿ ರಫ್ತಿನಲ್ಲಿ ಭಾರತವು ವಿಶ್ವದಲ್ಲಿಯೇ ನಂಬರ್ 1 ಸ್ಥಾನದಲ್ಲಿದೆ. ಭಾರತವು ಶೇ.80ರಷ್ಟು ನುಗ್ಗೆ ರಫ್ತು ಮಾಡಿದರೆ, ಏಷಿಯಾ ಪೆಸಿಫಿಕ್ ಶೇ. 9ರಷ್ಟು ರಫ್ತು ಮಾಡುತ್ತದೆ. ಉಳಿದಂತೆ ಆಫ್ರಿಕಾ ಶೇ. 8 ಹಾಗೂ ಅಮೆರಿಕ ಶೇ.3 ರಷ್ಟು ರಫ್ತು ಮಾಡುತ್ತವೆ.