Tag: ನುಗು ಜಲಾಶಯ

  • ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರು ನೀರುಪಾಲು

    ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರು ನೀರುಪಾಲು

    ಮೈಸೂರು: ನಾಲೆಗೆ ಬಿದ್ದ ಪುತ್ರಿಯನ್ನು (Daughter) ರಕ್ಷಿಸಲು ಹೋಗಿ ಒಂದೇ ಕುಟುಂಬದ (Family) ಮೂವರು ನೀರುಪಾಲಾದ ಘಟನೆ ಮೈಸೂರು (Mysuru) ಜಿಲ್ಲೆಯ ಹೆಚ್.ಡಿ.ಕೋಟೆ (HD Kote) ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ನಡದಿದೆ.

    ಅಪ್ಪ ಮಹಮ್ಮದ್ ಕಪೀಲ್ (42), ಅಮ್ಮ ಶಾವರ ಭಾನು (35), ಪುತ್ರಿ ಶಾಹೀರಾ ಭಾನು (20) ಮೃತ ದುರ್ದೈವಿಗಳು. ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಮಗಳನ್ನು ಕಾಪಾಡಲು ಹೋಗಿ ಅಪ್ಪ, ಅಮ್ಮ ಹಾಗೂ ಪುತ್ರಿ ಮೂವರೂ ಸಾವನ್ನಪ್ಪಿದ್ದಾರೆ. ನುಗು ಜಲಾಶಯದ (Nugu Reservoir) ಬಲದಂಡೆ ನಾಲೆಯಲ್ಲಿ ಕೈ ಕಾಲು ತೊಳೆಯಲು ಹೋದಾಗ ಘಟನೆ ನಡೆದಿದೆ. ಶಾಹೀರಾ ಭಾನು ಮೊದಲಿಗೆ ಕಾಲು ಜಾರಿ ಬಿದ್ದಿದ್ದು, ರಕ್ಷಣೆಗೆ ಹೋದ ಅಪ್ಪ, ಅಮ್ಮ ಸೇರಿ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಯುವತಿಯನ್ನು ಹಿಂಬಾಲಿಸಿ ಮುತ್ತಿಟ್ಟು ಎಸ್ಕೇಪ್ – ಬೆಂಗಳೂರಿನ ಬೀದಿ ಕಾಮುಕ ಅರೆಸ್ಟ್

    ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ಮೂವರ ಮೃತ ದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ಸರಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅಪಮಾನ – ಮುಸ್ಲಿಂ ಯುವಕನ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೈಸೂರಿನಲ್ಲಿರುವ ನುಗು ಕಿರು ಜಲಾಶಯ ಭರ್ತಿ!

    ಮೈಸೂರಿನಲ್ಲಿರುವ ನುಗು ಕಿರು ಜಲಾಶಯ ಭರ್ತಿ!

    ಮೈಸೂರು: ನಗರದ ಎಚ್.ಡಿ. ಕೋಟೆಯಲ್ಲಿನ ನುಗು ಕಿರು ಜಲಾಶಯ ಭರ್ತಿಯಾಗಿದೆ. ಈ ಕಾರಣ ಜಲಾಶಯದಿಂದ ಹೊರ ಹರಿವು ಹೆಚ್ಚಿಸಲಾಗಿದೆ.

    ಈ ಜಲಾಶಯದ ಗರಿಷ್ಠ ಮಟ್ಟ 110 ಅಡಿಗಳು. ಜಲಾಶಯದ ಇಂದಿನ ನೀರಿನ ಮಟ್ಟ 109 ಅಡಿಯಾಗಿದೆ. ಜಲಾಶಯದ ಸುರಕ್ಷತಾ ದೃಷ್ಟಿಯಿಂದ ಹೊರಹರಿವು ಹೆಚ್ಚಿಸಲಾಗಿದ್ದು, ಜಲಾಶಯದ ಇಂದಿನ ಹೊರಹರಿವು 2204 ಕ್ಯೂಸೆಕ್ ಹಾಗೂ ಒಳಹರಿವು 1997 ಕ್ಯೂಸೆಕ್ ಆಗಿದೆ.

    ಹೊರ ಹರಿವು ಹೆಚ್ಚಿರುವ ಕಾರಣ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಬಿನಿ ನಾಲೆಗಳ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸೂಚಿಸಿದ್ದಾರೆ.