Tag: ನೀಲ್ ನಿತಿನ್ ಮುಖೇಶ್

  • ಬಾಲಿವುಡ್ ನಿರ್ದೇಶಕರಲ್ಲಿ ಸ್ವಂತ ಯೋಚನೆ ಇಲ್ಲ: ನೀಲ್ ನಿತಿನ್ ಮುಖೇಶ್

    ಬಾಲಿವುಡ್ ನಿರ್ದೇಶಕರಲ್ಲಿ ಸ್ವಂತ ಯೋಚನೆ ಇಲ್ಲ: ನೀಲ್ ನಿತಿನ್ ಮುಖೇಶ್

    ಭಾರತೀಯ ಚಿತ್ರರಂಗ ಅಂದರೆ ಬಾಲಿವುಡ್ ಅಂತಾ ಬಿಂಬಿಸುವ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಬಾಲಿವುಡ್‌ಗೆ ಸೆಡ್ಡು ಹೊಡೆದು ದಕ್ಷಿಣ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡುತ್ತಿದೆ. ಈ ಬೆನ್ನಲ್ಲೇ ಬಾಲಿವುಡ್ ಸಿನಿಮಾ ನಿರ್ದೇಶಕರನ್ನು ನಟ ನೀಲ್ ನಿತಿನ್ ಮುಖೇಶ್ ಟೀಕಿಸಿದ್ದಾರೆ. ಹಿಂದಿ ನಿರ್ದೇಶಕರಿಗೆ ಸ್ವಂತ ಯೋಚನೆ ಇಲ್ಲ ಅಂತಾ ಟಾಂಗ್ ಕೊಟ್ಟಿದ್ದಾರೆ.

    ಬಿಟೌನ್ ಸಾಕಷ್ಟು ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನೀಲ್ ನಿತಿನ್ ಮುಖೇಶ್ ಈಗ ಬಾಲಿವುಡ್ ನಿರ್ದೇಶಕರಿಗೆ ಟಾಂಗ್ ನೀಡಿದ್ದಾರೆ. ಬೇರೆ ಭಾಷೆಗಳ ಸಿನಿಮಾಗಳನ್ನ ರಿಮೇಕ್ ಮಾಡುವ ಬದಲು ಸ್ವಂತ ಐಡಿಯಾಯಿಂದ ಸಿನಿಮಾ ಮಾಡಿ ಅಂತಾ ಟೀಕಿಸಿದ್ದಾರೆ.ಇದನ್ನೂ ಓದಿ: ಮುಗ್ದ ಗಂಡದಿಂದರ ಪಾಲಿಗೆ ಉಡುಗೊರೆಯಾಗಲಿದೆಯಾ ಈ ವೆಡ್ಡಿಂಗ್ ಗಿಫ್ಟ್?

    ಬಾಲಿವುಡ್‌ನಲ್ಲಿ ಓರಿಜಿನಲ್ ಸಿನಿಮಾಗಿಂತ ರಿಮೇಕ್ ಸಿನಿಮಾಗಳನ್ನೇ ಮಾಡುವುದು ವಾಡಿಕೆಯಾಗಿದೆ. ಓರಿಜಿನಲ್ ಕಂಟೆಂಟ್ ಚಿತ್ರಗಳು ಬಾಲಿವುಡ್ ರಂಗದಲ್ಲಿ ಸೌಂಡ್ ಮಾಡಿರುವುದು ತೀರಾ ವಿರಳ. ನಮ್ಮಲ್ಲೂ ಪ್ರಯೋಗಾತ್ಮಕ ಚಿತ್ರಗಳು ಬರಬೇಕು ಆದರೆ ಬಾಲಿವುಡ್ ನಿರ್ದೇಶಕರಲ್ಲಿ ಸ್ವಂತ ಯೋಚನೆ ಇಲ್ಲ. ರಿಮೇಕ್ ಸಿನಿಮಾಗಳ ಹಿಂದೆ ಬೀಳುತ್ತಾರೆ ಇದು ಬದಲಾಗಬೇಕು ಎಂದು ನಟ ನೀಲ್ ನಿತಿನ್ ಮಾತನಾಡಿರುವುದು ಈಗ ಸಂಚಲನ ಮೂಡಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಫುಲ್ ಆ್ಯಕ್ಷನ್, ಎರಡೇ ಡೈಲಾಗ್‍ವುಳ್ಳ ಸಾಹೋ ಟೀಸರ್ ರಿಲೀಸ್

    ಫುಲ್ ಆ್ಯಕ್ಷನ್, ಎರಡೇ ಡೈಲಾಗ್‍ವುಳ್ಳ ಸಾಹೋ ಟೀಸರ್ ರಿಲೀಸ್

    ಹೈದರಾಬಾದ್: ಭಾರತೀಯ ಸಿನಿ ಲೋಕದ ಬಹುನಿರೀಕ್ಷಿತ ‘ಸಾಹೋ’ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ. ಹಿಂದಿ, ತೆಲಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಗೊಂಡಿದ್ದು ಪ್ರಭಾಸ್ ಆ್ಯಕ್ಷನ್ ಸೀನ್ ಮಾಸ್ ಆಡಿಯನ್ಸ್ ಮೆಚ್ಚುಗೆಗೆ ಪಾತ್ರವಾಗಿದೆ.

    ಸೋಮವಾರ ಪ್ರಭಾಸ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಚಿತ್ರದ ಪೋಸ್ಟರ್ ಹಾಕಿಕೊಂಡು ಜೂನ್ 13ರಂದು ಟೀಸರ್ ಬರಲಿದೆ ಎಂಬ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿದ್ದರು. ಇಂದು ಒಟ್ಟು ನಾಲ್ಕು ಭಾಷೆಗಳಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಎಂದಿನಂತೆ ಶ್ರದ್ಧಾ ಕಪೂರ್ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುವುದರ ಜೊತೆ ಆ್ಯಕ್ಷನ್ ದೃಶ್ಯಗಳಿಗೂ ಸೈ ಎನ್ನಿಸಿಕೊಂಡಿದ್ದಾರೆ.

    ಟೀಸರ್ ಆರಂಭದಲ್ಲಿ ಕಾಣಿಸಿಕೊಳ್ಳುವ ಶ್ರದ್ಧಾ, ಖುಷಿ ಮತ್ತು ದುಃಖವನ್ನು ಹಂಚಿಕೊಳ್ಳಲು ನನಗೆ ಯಾರು ಇಲ್ಲ ಅಂತಾ ಹೇಳುತ್ತಾರೆ. ಪ್ರಭಾಸ್ ನಾನಿದ್ದೇನೆ ಎಂದು ಹೇಳುವ ಮೂಲಕ ನಾಯಕಿಯನ್ನು ಅಪ್ಪಿಕೊಳ್ಳುತ್ತಾರೆ. ಟೀಸರ್ ಕೊನೆಗೆ ಗುಂಡಿನ ಚಕಮಕಿ ನಡೆಯುವ ವೇಳೆ ನಾಯಕಿ ಯಾರು ಇವರೆಲ್ಲ ಕೇಳಿದಾಗ, ಪ್ರಭಾಸ್ ನನ್ನ ಅಭಿಮಾನಿಗಳು. ಯಾಕಿಷ್ಟು ವೈಲೆಂಟ್ ಅಂದಾಗ ಇವರೆಲ್ಲಾ ಡೈ ಹಾರ್ಡ್ ಫ್ಯಾನ್ ಎಂದು ಹೇಳಿ ಪ್ರಭಾಸ್ ಮುಗುಳ್ನಗುತ್ತಾರೆ.

    ಈ ಬಾರಿಯ ಟೀಸರ್ ನಲ್ಲಿ ಚಿತ್ರದ ಪ್ರತಿಯೊಂದು ಪಾತ್ರವನ್ನು ತಂಡ ನೋಡುಗರಿಗೆ ಪರಿಚಯಿಸಿದೆ. ನೀಲ್ ನಿತಿನ್ ಮುಖೇಶ್, ಭೂಷನ್ ಕುಮಾರ್, ಜಾಕಿ ಶ್ರಾಫ್, ವೆನ್ನೆಲ್ಲಾ ಕಿಶೋರ್, ಮುರಳಿ ಶರ್ಮಾ, ಮಂದಿರಾ ಬೇಡಿ, ಮಹೇಶ್ ಮಂಜ್ರೇಕರ್ ಸೇರಿದಂತೆ ದೊಡ್ಡ ತಾರಾಗಣವನ್ನು ಸಾಹೋ ಹೊಂದಿದೆ.

    ಟೀಸರ್ ಬ್ಯಾಕ್ ಗ್ರೌಂಡ್ ಮ್ಯೂಸಿಕ್, ಪ್ರತಿ ದೃಶ್ಯಗಳ ಅಚ್ಚುಕಟ್ಟುತನ ನೋಡುಗರಲ್ಲಿ ಕುತೂಹಲವನ್ನು ಹುಟ್ಟುಹಾಕುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಚಿತ್ರ ಇದೇ ಆಗಸ್ಟ್ 15ರಂದು ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.