Tag: ನೀಲಿ ಹಕ್ಕಿ

  • ಟ್ವಿಟ್ಟರ್‌ನ ನೀಲಿ ಹಕ್ಕಿಗೆ ಗುಡ್‌ಬೈ? – ಮಸ್ಕ್ ಹೊಸ ಬಾಂಬ್

    ಟ್ವಿಟ್ಟರ್‌ನ ನೀಲಿ ಹಕ್ಕಿಗೆ ಗುಡ್‌ಬೈ? – ಮಸ್ಕ್ ಹೊಸ ಬಾಂಬ್

    ವಾಷಿಂಗ್ಟನ್: ವಿಶ್ವದ ಶ್ರೀಮಂತ ಎಲೋನ್ ಮಸ್ಕ್ (Elon Musk) ಕಳೆದ ವರ್ಷ ಸ್ವಾಧೀನಪಡಿಸಿಕೊಂಡ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಟ್ವಿಟ್ಟರ್ (Twitter) ಅನ್ನು ರೀಬ್ರ್ಯಾಂಡ್ ಮಾಡಲು ಹೊರಟಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಮಸ್ಕ್ ಹೊಸ ಬಾಂಬ್ ಸಿಡಿಸಿದ್ದಾರೆ.

    ಎಲೋನ್ ಮಸ್ಕ್ ಚೀನಾದ ವೀ ಚ್ಯಾಟ್ (WeChat) ರೀತಿಯ ಆ್ಯಪ್ ಅನ್ನು ಸೃಷ್ಟಿಸುವ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದರು. ಅದರಂತೆ ತಮ್ಮ ಕನಸಿನ ಎಕ್ಸ್ (X) ಆ್ಯಪ್ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿ ಟ್ವಿಟ್ಟರ್ ಅನ್ನು ಎಕ್ಸ್ ಅಪ್ಲಿಕೇಶನ್‌ನೊಂದಿಗೆ ಕಾನೂನುಬದ್ಧವಾಗಿ ವಿಲೀನಗೊಳಿಸಲಾಗಿದೆ. ಇದೀಗ ಟ್ವೀಟ್ ಮಾಡಿರುವ ಮಸ್ಕ್ ಶೀಘ್ರದಲ್ಲಿಯೇ ಟ್ವಿಟ್ಟರ್ ಬ್ರ್ಯಾಂಡ್‌ಗೆ ಹಾಗೂ ಎಲ್ಲಾ ಹಕ್ಕಿಗಳಿಗೆ ಕ್ರಮೇಣವಾಗಿ ನಾವು ವಿದಾಯ ಹೇಳಬೇಕಿದೆ ಎಂದು ಬರೆದಿದ್ದಾರೆ. ಈ ಮೂಲಕ ಟ್ವಿಟ್ಟರ್ ಅನ್ನು ರೀಬ್ರ್ಯಾಂಡ್ ಮಾಡಲು ಹೊರಟಿರುವುದಾಗಿ ತಿಳಿಸಿದ್ದಾರೆ.

    ಮಸ್ಕ್ ಟ್ವಿಟ್ಟರ್‌ನ ನೀಲಿ ಹಕ್ಕಿಗೆ (Blue Bird) ಗುಡ್‌ಬೈ ಹೇಳುವ ಬಗೆಗಿನ ಟ್ವೀಟ್ ಮಾಡುತ್ತಲೇ ಟ್ವಿಟ್ಟರ್ ಸ್ಥಗಿತಗೊಳ್ಳುತ್ತಿದೆಯೇ ಎಂಬ ಗೊಂದಲ ಬಳಕೆದಾರರಲ್ಲಿ ಮೂಡಿದೆ. ಆದರೆ ಮಸ್ಕ್ ಸರಳವಾಗಿ ಆ್ಯಪ್ ಅನ್ನು ರೀಬ್ರ್ಯಾಂಡ್ ಮಾಡುವ ಬಗ್ಗೆ ತಿಳಿಸಿದ್ದಾರೆ. ಇದರರ್ಥ ಮುಂದೆಯೂ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗಲಿದೆ. ಆದರೆ ಅದರ ಐಕಾನಿಕ್ ನೀಲಿ ಬಣ್ಣದ ಹಕ್ಕಿಯ ಲೋಗೋ ಮುಂದೆ ಕಾಣಿಸಿಕೊಳ್ಳುವುದಿಲ್ಲ.

    ಮಸ್ಕ್ ಇನ್ನೊಂದು ಟ್ವೀಟ್ ಮಾಡಿ ಎಕ್ಸ್ ಆ್ಯಪ್ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಅದರಲ್ಲಿ ಎಕ್ಸ್ನ ಲೋಗೋವನ್ನು ಶೀಘ್ರವೇ ಪೋಸ್ಟ್ ಮಾಡಿ ಅದನ್ನು ವಿಶ್ವದಾದ್ಯಂತ ಪ್ರಸಾರ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: Netflixː ಭಾರತದಲ್ಲಿ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರಿಂಗ್ ಬಂದ್

    ಏನಿದು ಎಕ್ಸ್ ಅಪ್ಲಿಕೇಶನ್?
    ಎಕ್ಸ್ ಅಪ್ಲಿಕೇಶನ್ ಬಳಕೆದಾರರಿಗೆ ತಮ್ಮ ಆಲೋಚನೆಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುವ ಪ್ಲಾಟ್‌ಪಾರ್ಮ್‌ಗಿಂತಲೂ ಹೆಚ್ಚಿನ ಕೆಲಸ ಮಾಡುವ ಸಾಧ್ಯತೆಯಿದೆ. ಈ ಅಪ್ಲಿಕೇಶನ್ ಬಗ್ಗೆ ಮಸ್ಕ್ ಹಲವು ಬಾರಿ ಚರ್ಚಿಸಿದ್ದಾರೆ. ಇದರಲ್ಲಿ ಜನರು ಸಂಪರ್ಕಿಸಬಹುದು, ಹಣಕಾಸಿನ ವ್ಯವಹಾರ ಮಾಡಿಕೊಳ್ಳಬಹುದು, ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವುದು ಸೇರಿದಂತೆ ಇನ್ನೂ ಅನೇಕ ಫೀಚರ್‌ಗಳಿರುವ ಸಾಧ್ಯತೆಯಿದೆ.

    ಈಗಾಗಲೇ Twitter Inc. ಅನ್ನು X Corp. ನೊಂದಿಗೆ ವಿಲೀನ ಮಾಡಲಾಗಿದೆ. ಮುಂದೆ ಟ್ವಿಟ್ಟರ್ ಎಕ್ಸ್ ಹೆಸರಿನಲ್ಲೇ ಮುಂದುವರಿಯಲಿದ್ದು, ಲೋಗೋ ಕೂಡಾ ಬದಲಾಗುವ ಸಾಧ್ಯತೆಯಿದೆ. ಇದು ಚೀನಾದಲ್ಲಿ ಅತ್ಯಂತ ಜನಪ್ರಿಯವಾಗಿರುವ ವೀಚ್ಯಾಟ್ ಅಪ್ಲಿಕೇಶನ್‌ನಂತೆ ಇರಲಿದೆ ಎನ್ನಲಾಗಿದೆ. ಇದನ್ನೂ ಓದಿ: Twitter Monetisation: ಕಂಟೆಂಟ್‌ ಕ್ರಿಯೇಟರ್ಸ್‌ಗಳಿಗೆ ಟ್ವಿಟ್ಟರ್‌ನಿಂದ ಸಿಗುತ್ತೆ ಹಣ – ಹೇಗೆ ಅಂತೀರಾ..?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]