Tag: ನೀಲಿತಾರೆ

  • ಖ್ಯಾತ ನೀಲಿತಾರೆ ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆಗೆ ಶರಣು

    ಖ್ಯಾತ ನೀಲಿತಾರೆ ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆಗೆ ಶರಣು

    ನೀಲಿ ಚಿತ್ರಗಳ ಲೋಕದ ಹೆಸರಾಂತ ನಟಿ, ಅಪಾರ ಅಭಿಮಾನಿ ಬಳಗ ಹೊಂದಿದ್ದ ಕೆನಿ ಲಿನ್ ಕಾರ್ಟರ್ (Kagney Linn Karter) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆನಿ ಅವರು  ಹಲವು ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆಗೆ (Suicide) ಇದೇ ಕಾರಣವೆಂದು ಊಹಿಸಲಾಗಿದೆ.

    36ರ ವಯಸ್ಸಿನ ಕೆನಿ ಲಿನ್ ಕಾರ್ಟರ್ ಯನೈಟೆಡ್ ಸ್ಟೇಟ್ಸ್ ನ ಪಾರ್ಮಾದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತ ವಲಯ ಖಚಿತ ಪಡಿಸಿದೆ. ಕೆನಿ ಲಿನ್ ಕಾರ್ಟರ್ ಕೇವಲ ನೀಲಿತಾರೆ ಮಾತ್ರ ಆಗಿರಲಿಲ್ಲ. ಓರ್ವ ನೃತ್ಯಗಾರ್ತಿ ಕೂಡ ಆಗಿದ್ದರು. ಗಾಯಕಿಯಾಗಿಯೂ ಹೆಸರು ಮಾಡಿದ್ದರು.

    2000 ಇಸವಿಯಲ್ಲಿ ವಯಸ್ಕರ ಸಿನಿಮಾಗಳ ಕ್ಷೇತ್ರಕ್ಕೆ ಎಂದು ಕೊಟ್ಟಿದ್ದ ಅವರು ಬರೋಬ್ಬರಿ 20 ವರ್ಷಗಳ ಕಾಲ ಅದೇ ರಂಗದಲ್ಲೇ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಆನಂತರ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ನಡುವೆ ತಮ್ಮದೇ ಸ್ಟುಡಿಯೋ ಶುರು ಮಾಡಿ, ಪೋಲ್ ಡಾನ್ಸಿಂಗ್ ನಲ್ಲೂ ಸಕ್ರೀಯರಾಗಿದ್ದರು.

    ಕೆನಿ ಲಿನ್ ಕಾರ್ಟರ್ ನಿಧನದಿಂದಾಗಿ ಅವರ ಕುಟುಂಬ ಸಂಕಷ್ಟದಲ್ಲಿದೆ. ಅವರ ತಾಯಿಯ ಬದುಕಿಗಾಗಿ ಕೆನಿ ಲಿನ್ ಕಾರ್ಟರ್ ಆಪ್ತ ಬಳಗ ಹಣ ಸಂಗ್ರಹಕ್ಕೂ ಮುಂದಾಗಿದೆ ಎಂದು ಮಾಧ್ಯಮಗಳ ವರದಿ ಮಾಡಿವೆ.

  • ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಮಾಜಿ ‘ನೀಲಿ’ತಾರೆ ಮಿಯಾ ಖಲೀಫಾ

    ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಮಾಜಿ ‘ನೀಲಿ’ತಾರೆ ಮಿಯಾ ಖಲೀಫಾ

    ನೀಲಿ ಸಿನಿಮಾಗಳ ಮಾಜಿ ತಾರೆ ಮಿಯಾ ಖಲೀಫಾ (Mia Khalifa) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಲ್ಮಾನ್ ಖಾನ್ ನಡೆಸಿಕೊಡಲಿರುವ ಬಿಗ್ ಬಾಸ್ ಓಟಿಟಿ ಸೀಸನ್ 2ರಲ್ಲಿ (Bigg Boss OTT 2) ಮಿಯಾ ಭಾಗಿಯಾಗಲಿದ್ದಾರೆ ಎಂದು ಬಿ ಟೌನ್ ಮಾತಾಡಿಕೊಳ್ಳುತ್ತಿದೆ. ಬಿಗ್ ಬಾಸ್ ಮನೆ ಪ್ರವೇಶ ಮಾಡಲು ಕ್ಷಣಗಣನೆ ಶುರುವಾಗಿದ್ದು, ಮಿಯಾ ಪ್ರವೇಶಿಸಿದರೆ ಮನೆಯ ವಾತಾವರಣ ಹೇಗೆಲ್ಲ ಇರಲಿದೆ ಎನ್ನುವ ಕುರಿತು ಕುತೂಹಲ ಮೂಡಿದೆ.

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Hindi)) ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಮೊದಲ ಬಿಗ್ ಬಾಸ್ ಒಟಿಟಿ ಯಶಸ್ವಿಯಾಗಿತ್ತು. ಈಗ 2ನೇ ಸೀಸನ್ ಬಿಗ್ ಬಾಸ್ ಒಟಿಟಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ:‘ದೇವರ ಆಟ ಬಲ್ಲವರಾರು’ ಎನ್ನುತ್ತಾ 3 ವರ್ಷಗಳ ನಂತರ ಬಣ್ಣ ಹಚ್ಚಿದ ಸಿಂಧೂ ಲೋಕನಾಥ

    ಸಲ್ಮಾನ್ ಖಾನ್ (Salman Khan) ನಿರೂಪಣೆಯ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮದ ಫಸ್ಟ್ ಪ್ರೋಮೋ ರಿವೀಲ್ ಆಗಿದೆ. ಸಲ್ಲು ಭಾಯ್ ಎಂಟ್ರಿಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ಇಂದಿನಿಂದ ಒಟಿಟಿ ಬಿಗ್ ಬಾಸ್ ಶುರುವಾಗಲಿದೆ. ಜಿಯೋ ಸಿನಿಮಾ ವೇದಿಕೆಯಲ್ಲಿ ಲೈವ್ ಸ್ಟ್ರೀಮ್ ಆಗಲಿದೆ.

    ಮೊದಲ ಸೀಸನ್ ಬಿಗ್ ಬಾಸ್ ಒಟಿಟಿಯನ್ನ ಕರಣ್ ಜೋಹರ್ ನಿರೂಪಣೆ ಮಾಡಿದ್ದರು. ಆದರೆ 2ನೇ ಸೀಸನ್‌ನ ಸಲ್ಮಾನ್ ಖಾನ್ ನಿರೂಪಣೆ ಮಾಡುವ ಬಗ್ಗೆ ಅಧಿಕೃತ ಅಪ್‌ಡೇಟ್ ಹೊರಬಿದ್ದಿದೆ. ಜೊತೆಗೆ ಸಲ್ಮಾನ್ ಈ ಸೀಸನ್ ಹೇಗಿರಲಿದೆ ಎನ್ನುವ ಕುರಿತು ಮಾತನಾಡಿದ್ದಾರೆ.

     

    ಕಳೆದ ಸೀಸನ್‌ನಲ್ಲಿ ದಿವ್ಯಾ ಅಗರ್‌ವಾಲ್ ವಿನ್ನರ್ ಆಗಿದ್ದರು. ಉರ್ಫಿ ಜಾವೇದ್, ನಿಶಾಂತ್ ಭಟ್, ಶಮಿತಾ, ಪ್ರತೀಕ್, ನೇಹಾ ಸೇರಿದಂತೆ ಹಲವು ಸ್ಪರ್ಧಿಗಳು ಭಾಗವಹಿಸಿದ್ದರು. ಬಿಗ್ ಬಾಸ್ 2ನೇ ಸೀಸನ್‌ನಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದಕ್ಕೆ ಕಾದುನೋಡಬೇಕಿದೆ.