Tag: ನೀಲಿಚಿತ್ರ ತಾರೆ

  • ಪೋರ್ನ್ ಸ್ಟಾರ್‌ಗೆ ಹಣ – ಟ್ರಂಪ್ ವಿರುದ್ಧ ದೋಷಾರೋಪಣೆ

    ಪೋರ್ನ್ ಸ್ಟಾರ್‌ಗೆ ಹಣ – ಟ್ರಂಪ್ ವಿರುದ್ಧ ದೋಷಾರೋಪಣೆ

    – ಬಂಧನದ ಭೀತಿ
    – ಕ್ರಿಮಿನಲ್ ಆರೋಪ ಹೊತ್ತಿರೋ ಮೊದಲ ಅಮೆರಿಕ ಮಾಜಿ ಅಧ್ಯಕ್ಷ

    ವಾಷಿಂಗ್ಟನ್: 2016ರ ಚುನಾವಣಾ ಪ್ರಚಾರದ ವೇಳೆ ನೀಲಿಚಿತ್ರ ತಾರೆಗೆ (Porn Star) ಡೊನಾಲ್ಡ್‌ ಟ್ರಂಪ್‌ (Donald Trump) ಹಣ ನೀಡಿರುವ ಕುರಿತು ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿ ಗುರುವಾರ ದೋಷಾರೋಪಣೆ ಮಾಡಿದೆ. ಇದೀಗ ಟ್ರಂಪ್ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಮೊದಲ ಅಮೆರಿಕದ ಮಾಜಿ ಅಧ್ಯಕ್ಷ (Former US President) ಎಂಬ ಅಪಖ್ಯಾತಿಗೆ ಒಳಗಾಗಿದ್ದಾರೆ.

    ತಮ್ಮ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿರುವ ಡೊನಾಲ್ಡ್ ಟ್ರಂಪ್, ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿಯ ತೀರ್ಪನ್ನು ತಮ್ಮ ಅಧ್ಯಕ್ಷೀಯ ಚುನಾವಣಾ ಪ್ರಚಾರದ ತಂತ್ರದ ಭಾಗವಾಗಿ ಬಳಸುತ್ತಿದೆ. ಅಲ್ಲದೇ ಈಗಿನ ಅಧ್ಯಕ್ಷ ಜೋ ಬೈಡನ್ ಈ ತಪ್ಪಿಗಾಗಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಏನಿದು ಪ್ರಕರಣ?
    ವರದಿಗಳ ಪ್ರಕಾರ ಟ್ರಂಪ್ ಅವರು ಈ ಹಿಂದೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ (ನಿಜವಾದ ಹೆಸರು ಸ್ಟೆಫನಿ ಕ್ಲಿಫರ್ಡ್) ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. 2016ರ ಚುನಾವಣೆ ವೇಳೆ ಈ ಸಂಬಂಧ ಬಹಿರಂಗಪಡಿಸುವುದನ್ನು ತಡೆಯಲು ಟ್ರಂಪ್ ಆಕೆಗೆ 1,30,000 ಡಾಲರ್ (ಸುಮಾರು 1,07,00,000 ರೂ.) ನೀಡಿದ್ದರು ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಗುಂಡಿಕ್ಕಿ ಹತ್ಯೆ – ತಿಂಗಳಲ್ಲಿ 2ನೇ ಘಟನೆ

    ಬಂಧನದ ಬಗ್ಗೆ ಭಾರೀ ಚರ್ಚೆ:
    ಇದೀಗ ಟ್ರಂಪ್ ಮುಂಬರುವ ಮಂಗಳವಾರ ಶರಣಾಗುವ ಸಾಧ್ಯತೆಯಿದೆ. ಆದರೆ ಅವರ ಬಂಧನ ಬಗೆಗಿನ ಚರ್ಚೆಯೇ ಹೆಚ್ಚು ಸದ್ದು ಮಾಡುತ್ತಿದೆ. ಏಕೆಂದರೆ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಇವರಾಗಿದ್ದಾರೆ. ಅಪರಾಧ ಪ್ರಕರಣಗಳ ಬಂಧನ ಪ್ರಕ್ರಿಯೆಯೇ ಟ್ರಂಪ್ ಅವರಿಗೂ ಅನ್ವಯಿಸಲಿದೆಯೇ ಎಂಬುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಒಂದುವೇಳೆ ಟ್ರಂಪ್ ಬಂಧನವಾದರೆ ಪೊಲೀಸರು ಅವರಿಗೆ ಮೊದಲು ಕೈಕೊಳ ತೊಡಿಸಲಿದ್ದಾರೆ. ನಂತರ ಅವರ ಬೆರಳಚ್ಚು ಪಡೆದು ಸಾಮಾನ್ಯ ಅಪರಾಧಿಯಂತೆಯೇ ಛಾಯಾಚಿತ್ರವನ್ನೂ ತೆಗೆಯಲಿದ್ದಾರೆ. ಅಪರಾಧ ಆರೋಪದ ಮೇಲೆ ಬಂಧಿತರಾಗುವವರಿಗೆ ಕೈಕೊಳ ಹಾಕುವುದು ಮಾನದಂಡ. ಮಾಜಿ ಅಧ್ಯಕ್ಷರಿಗೆ ಇದರ ವಿನಾಯಿತಿ ನೀಡಲಾಗುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ. ಇದನ್ನೂ ಓದಿ: ಇಂದೋರ್ ದೇವಾಲಯ ದುರಂತ – ಸಾವಿನ ಸಂಖ್ಯೆ 35ಕ್ಕೆ ಏರಿಕೆ

  • ಪೋರ್ನ್ ಸ್ಟಾರ್‌ಗೆ ಹಣ – ಶೀಘ್ರವೇ ಟ್ರಂಪ್ ಬಂಧನ?

    ಪೋರ್ನ್ ಸ್ಟಾರ್‌ಗೆ ಹಣ – ಶೀಘ್ರವೇ ಟ್ರಂಪ್ ಬಂಧನ?

    ವಾಷಿಂಗ್ಟನ್: 2016ರ ಚುನಾವಣೆಗೂ ಮುನ್ನ ಪೋರ್ನ್ ಸ್ಟಾರ್ (Porn Star) ಒಬ್ಬರಿಗೆ ಹಣ ನೀಡಿರುವ ಆರೋಪದ ಮೇಲೆ ಮಂಗಳವಾರ ಅಮೆರಿಕದ (America) ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಬಂಧಿಸುವ (Arrest) ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆ ಟ್ರಂಪ್ ತಮ್ಮ ಬೆಂಬಲಿಗರಿಗೆ ಬಂಧನದ ವಿರುದ್ಧ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದಾರೆ.

    ವರದಿಗಳ ಪ್ರಕಾರ ಟ್ರಂಪ್ ಅವರು ಈ ಹಿಂದೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ (ನಿಜವಾದ ಹೆಸರು ಸ್ಟೆಫನಿ ಕ್ಲಿಫರ್ಡ್) ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. 2016ರ ಚುನಾವಣೆ ವೇಳೆ ಈ ಸಂಬಂಧ ಬಹಿರಂಗಪಡಿಸುವುದನ್ನು ತಡೆಯಲು ಟ್ರಂಪ್ ಆಕೆಗೆ 1,30,000 ಡಾಲರ್ (ಸುಮಾರು 1,07,00,000 ರೂ.) ನೀಡಿದ್ದರು ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಈಕ್ವೆಡಾರ್‌ನಲ್ಲಿ 6.8 ತೀವ್ರತೆಯ ಭಾರೀ ಭೂಕಂಪ – 14 ಜನ ಬಲಿ

    ಈ ಪ್ರಕರಣದಲ್ಲಿ ಟ್ರಂಪ್ ವಿರುದ್ಧ ಆರೋಪ ಹೊರಿಸಬೇಕೆ ಎಂಬ ಬಗ್ಗೆ ಪ್ರಾಸಿಕ್ಯೂಟರ್‌ಗಳು ಚಿಂತನೆ ನಡೆಸುತ್ತಿದ್ದಾರೆ. ಒಂದು ವೇಳೆ ಮ್ಯಾನ್‌ಹ್ಯಾಟನ್ ಜಿಲ್ಲಾ ವಕೀಲರು ಟ್ರಂಪ್ ವಿರುದ್ಧ ದೋಷಾರೋಪಣೆ ಮಾಡಿದರೆ ಅಪರಾಧದ ಆರೋಪ ಹೊತ್ತ ಮೊದಲ ಅಮೆರಿಕದ ಮಾಜಿ ಅಧ್ಯಕ್ಷ ಎನಿಸಿಕೊಳ್ಳುತ್ತಾರೆ. ಆದರೆ ಟ್ರಂಪ್ ತಾವು ಡೇನಿಯಲ್ ಜೊತೆಗಿನ ಸಂಬಂಧವನ್ನು ನಿರಾಕರಿಸಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ ಪರಾರಿ – ಪಂಜಾಬ್‌ ಹಲವೆಡೆ ಇಂಟರ್‌ನೆಟ್‌ ಸ್ಥಗಿತ